ಮಂಡ್ಯ: ಶ್ರೀರಂಗಪಟ್ಟಣ ಟೌನ್ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆಯ ಮುಂದೆ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುರೇಶ್ ಬಂಧಿತ ಆರೋಪಿಯಾಗಿದ್ದು,
ಮನೆಯ ಮುಂದೆ ಅಲಂಕಾರಿಕ ಗಿಡ ಎಂದು ಜನರಿಗೆ ನಂಬಿಸಿ 5 ಗಾಂಜಾ ಗಿಡ ಬೆಳೆದಿದ್ದನು. ಈ ಗಿಡಿದ ಸುತ್ತಲೂ ಸೀರೇ ಕಟ್ಟಿ ಮರೆಮಾಚಿದ್ದ ವ್ಯಕ್ತಿ ವಿರುದ್ದ ಸ್ಥಳೀಯರಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಸ್ಥಳೀಯರ ದೂರು ಆಧರಿಸಿ ಶ್ರೀರಂಗಪಟ್ಟಣ ಟೌನ್ ಪೊಲೀಸರ ದಾಳಿ ನಡೆಸಿದ್ದು,
ಕಾರ್ಯಾಚರಣೆ ವೇಳೆ ವ್ಯಕ್ತಿ ಮನೆಯ ಮುಂದೆ ಬೆಳೆದಿದ್ದ 9 kg ತೂಕ 3 ಲಕ್ಷ ರೂ ಮೌಲ್ಯ ಗಾಂಜಾ ಗಿಡ ಜಪ್ತಿ ಮಾಡಲಾಗಿದ್ದು, ಆರೋಪಿ ಸುರೇಶ್ ಎಂಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ಡಿವೈಎಸ್ಪಿ ಶಾಂತ ಮಲ್ಲಪ್ಪ ಹಾಗು ಇನ್ಸ್ಪೆಕ್ಟರ್ ಬಿಜಿ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.



