ನೇಹಾ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ

0
protest
Spread the love

ವಿಜಯಸಾಕ್ಷಿ ಸುದ್ದಿ, ರೋಣ : ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಶನಿವಾರ ರೋಣ ಪಟ್ಟಣದಲ್ಲಿ ಎಬಿವಿಪಿ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

Advertisement

ಪಟ್ಟಣದ ವಿವಿದ ಶಾಲಾ-ಕಾಲೇಜುಗಳಿಂದ ಆಗಮಿಸಿದ ನೂರಾರು ವಿದ್ಯಾರ್ಥಿಗಳು ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ನೇಹಾ ಹತ್ಯೆಗೈದ ಅಪರಾಧಿಗೆ ಗಲ್ಲು ಶಿಕ್ಷೆ ನಿಡಬೇಕು ಎಂದು ಆಗ್ರಹಿಸಿದರು.

ಮುಖಂಡ ವಿರೇಶ ದೊಡ್ಡಣ್ಣವರ ಮಾತನಾಡಿ, ನಮ್ಮದು ಸ್ತ್ರೀಯರನ್ನು ಪೂಜಿಸುವ ಸಂಸ್ಕೃತಿಯಾಗಿದೆ.

ಯಾವುದೇ ಮಹಿಳೆ ಅಥವಾ ವಿದ್ಯಾರ್ಥಿನಿ ಮೆಲೆ ಇಂತಹ ಘಟನೆಗಳು ನಡೆಯಬಾರದು. ಎಲ್ಲರ ಮನೆಯಲ್ಲಿಯೂ ತಾಯಿ, ಸಹೋದರಿ ಇರುತ್ತಾರೆ ಎನ್ನುವುದನ್ನು ಅರಿತಾಗ ಮಾತ್ರ ಇಂತಹ ಘಟನೆಗಳು ನಿಲ್ಲಲು ಸಾಧ್ಯ ಎಂದ ಅವರು, ನೇಹಾ ಹತ್ಯೆಗೈದ ವ್ಯಕ್ತಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಆಗ್ರಹಿಸಿದರು.

ಸಿದ್ದಾರೂಡ ಮಠದಿಂದ ಆರಂಭಗೊಂಡು ಸೂಡಿ ವೃತ್ತ, ಮುಲ್ಲಾನ ಭಾವಿ, ಪೋತರಾಜನ ಕಟ್ಟೆಯ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸೂಡಿ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಸರ್ಕಾರದ ವಿರುದ್ಧ ಅಸಮದಾನವನ್ನು ಹೊರಹಾಕಿದರು. ಈ ಸಂಧರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

 


Spread the love

LEAVE A REPLY

Please enter your comment!
Please enter your name here