ಖಿದ್ಮತ್-ಎ-ಮಿಲ್ಲತ್ ಗ್ರೂಪ್‌ನಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0
Meritorious students felicitated by Khidmat-e-Millat Group
Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಳಗುಂದ ಪಟ್ಟಣದ ಖಿದ್ಮತ್-ಎ-ಮಿಲ್ಲತ್ ಗ್ರೂಪ್ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Advertisement

2023-24ನೇ ಸಾಲಿನಲ್ಲಿ ಮುಳಗುಂದದ ಅಂಜುಮನ್-ಎ-ಇಸ್ಲಾಂ ಸರಕಾರಿ ಪ್ರೌಢಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ 76.47 ಹಾಗೂ ಪದವಿಪೂರ್ವ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಶೇ 96, ಕಲಾ ವಿಭಾಗದಲ್ಲಿ ಶೇ 68ರಷ್ಟು ಸಾಧನೆ ಮಾಡಿದೆ.

ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ತಾಜುದ್ದೀನ ಕಿನ್ರಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದಿಸಿ, ಮುಂದಿನ ಶಿಕ್ಷಣವನ್ನು ಚೆನ್ನಾಗಿ ಕಲಿತು, ಕಲಿತ ಶಾಲೆಗೆ ಹಾಗೂ ತಂದೆ-ತಾಯಿಗಳಿಗೆ ಕೀರ್ತಿ ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ ಮುಜಾವರ, ಸೈಯದಲಿ ಶೇಖ, ಅಜರುದ್ದೀನ ಲಾಡಸಾಬನವರ, ರಫೀಕ ಅಹ್ಮದ ದಲೀಲ, ಚಮನಸಾಬ ಹಾದಿಮನಿ, ಹೈದರಲಿ ಖವಾಸ, ಮುನ್ನಾ ಢಾಲಾಯತ, ಮಾಬುಲಿ ದುರ್ಗಿಗುಡಿ, ಹುಸೇನ ಅಕ್ಕಿ, ದಾವೂದ ಜಮಾಲ್, ಪ್ರಾಚಾರ್ಯ ಜಿ.ಎಸ್. ಶಿರ್ಶಿ, ಪ್ರದಾನ ಗುರುಗಳಾದ ಎಸ್.ಎಂ. ಉಮರ್ಜಿ, ಗ್ರೂಪ್‌ನ ಸರ್ವ ಸದಸ್ಯರು, ಎಸ್‌ಡಿಎಂಸಿ
ಪದಾಧಿಕಾರಿಗಳು, ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here