HomeAgricultureವಿನಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಿ : ಸೋಮೇಶ ಉಪನಾಳ

ವಿನಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸಿ : ಸೋಮೇಶ ಉಪನಾಳ

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಬರಗಾಲದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮಾಡಿರುವ ರೈತ ವಿರೋಧಿ ರಾಜ್ಯ ಸರ್ಕಾರದ ನಡೆಯನ್ನು ಶಿರಹಟ್ಟಿ ಮಂಡಲ ಬಿಜೆಪಿ ಸಹಕಾರ ಪ್ರಕೋಷ್ಠದ ಸಂಚಾಲಕ ಸೋಮೇಶ ಉಪನಾಳ ಖಂಡಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ನೀಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರೀ ಕನಿಷ್ಠ ಒಂದೂವರೆ ಪಟ್ಟು ಬಿತ್ತನೆ ಬೀಜಗಳ ಬೆಲೆಯನ್ನು ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರದ ಮತ್ತೊಂದು ಗ್ಯಾರಂಟಿ. ಸತತ ಮೂರು ವರ್ಷಗಳಿಂದ ಅಕಾಲಿಕ ಮಳೆ, ಪ್ರವಾಹ, ಭೀಕರ ಬರದಿಂದ ರೈತ ತತ್ತರಿಸಿ ಹೋಗಿದ್ದಾನೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಬೀಜಗಳ ದರಗಳನ್ನು ಹೆಚ್ಚಿಸಿರುವುದು ನಿಜಕ್ಕೂ ಖೇದಕರ ಸಂಗತಿ.

ಸರ್ಕಾರ ನಿಗದಿಪಡಿಸಿದ ಈಗಿನ ದರದಲ್ಲಿ ಕನಿಷ್ಠ ಶೇ 50ರಷ್ಟು ರಿಯಾಯತಿ ಅಥವಾ ವಿನಾಯಿತಿಯನ್ನು ನೀಡಿ ಬೀಜಗಳನ್ನು ಪೂರೈಸುವುದರಿಂದ ರೈತ ಕೊಂಡುಕೊಳ್ಳಲು ಸಹಾಯವಾಗುತ್ತದೆ. ಅಲ್ಲದೆ, ಕೇಂದ್ರ ಸರ್ಕಾರ/ರಾಜ್ಯ ಸರ್ಕಾರಗಳು ನೀಡುವ ಬೆಳೆವಿಮೆ/ಬೆಳೆಹಾನಿ/ಪ್ರೋತ್ಸಾಹ ಧನಗಳನ್ನು ಬ್ಯಾಂಕಿನವರು ರೈತರ ಖಾತೆಗೆ ಜಮಾ ಮಾಡುವುದು ಅಲ್ಲಲ್ಲಿ ಕಂಡುಬಂದಿದ್ದು, ಅದನ್ನು ಕೂಡಲೇ ತಡೆಯಿರಿ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶೀಘ್ರವಾಗಿ ನಿರ್ದೇಶವನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!