HomeDharwadಅಪ್ರಾಪ್ತೆಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಯ ಮರಣದಂಡನೆ ರದ್ದು ಮಾಡಿ ಜೀವಾವಧಿಗೆ ಇಳಿಸಿದ ಧಾರವಾಡ ಹೈಕೋರ್ಟ್

ಅಪ್ರಾಪ್ತೆಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಯ ಮರಣದಂಡನೆ ರದ್ದು ಮಾಡಿ ಜೀವಾವಧಿಗೆ ಇಳಿಸಿದ ಧಾರವಾಡ ಹೈಕೋರ್ಟ್

For Dai;y Updates Join Our whatsapp Group

ಧಾರವಾಡ: ನಗರದ ಹೈಕೋರ್ಟ್ ಪೀಠವು ಪೋಕ್ಸೋ ಹಾಗೂ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ಮರಣದಂಡನೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿದೆ.

ಕರ್ನಾಟಕರಾಯಬಾಗ ತಾಲೂಕಿನ ಉದ್ದಪ್ಪ ಗಾಣಗೇರ (39) 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಬೆಳಗಾವಿ ಸೆಷನ್ ಕೋರ್ಟ್ 2024ರಲ್ಲಿ ಮರಣದಂಡನೆ ವಿಧಿಸಿತ್ತು.

ಆದರೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಆರೋಪಿಯ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಸಾಕ್ಷ್ಯಾಧಾರಗಳನ್ನು ಮರುಪರಿಶೀಲಿಸಿ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದೆ.

ಇದೇ ವೇಳೆ ಪೀಡಿತೆಯ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರ ಮೂಲಕ ₹5 ಲಕ್ಷ ಪರಿಹಾರ ನೀಡಲು ನಿರ್ದೇಶಿಸಲಾಗಿದೆ.

ಈ ತೀರ್ಪು ನ್ಯಾಯಾಂಗದ ಸಮತೋಲನ ದೃಷ್ಟಿಕೋನವನ್ನು ತೋರಿಸುವುದರ ಜೊತೆಗೆ, ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡೇ ಶಿಕ್ಷೆಯಲ್ಲಿ ಬದಲಾವಣೆ ಮಾಡುವ ಸಂದೇಶವನ್ನು ನೀಡಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img