ರಿಪೇರಿ ವೇಳೆ ಬ್ಲಾಸ್ಟ್ ಆದ ಮೊಬೈಲ್: ಸ್ವಲ್ಪದರಲ್ಲೇ ಯುವಕರು ಪಾರು!

0
Spread the love

ಹಾವೇರಿ:- ಮೊಬೈಲ್ ರಿಪೇರಿ ವೇಳೆ ಮೊಬೈಲ್ ಬ್ಲಾಸ್ಟ್ ಆಗಿದ್ದು, ಸ್ವಲ್ಪದರಲ್ಲೇ ಯುವಕರು ಪಾರಾದ ಘಟನೆ ಜರುಗಿದೆ.

Advertisement

ತಾಲೂಕಿನ ಹೊಸರಿತ್ತಿ ಗ್ರಾಮದ ಗಾಯತ್ರಿ ಮೊಬೈಲ್ ಶಾಪ್ ಮುಂದೆ ಈ ಘಟನೆ ನಡೆದಿದೆ. ಇಬ್ಬರು ಯುವಕರು ಮೊಬೈಲ್​ ಹಿಡಿದುಕೊಂಡು ನೋಡುತ್ತಿದ್ದಾಗ ಕೈಯಲ್ಲಿಯೇ ಬ್ಲಾಸ್ಟ್ ಆಗಿದ್ದು, ಸ್ವಲ್ಪದರಲ್ಲೇ ಯುವಕರು ಅಪಾಯದಿಂದ ಪಾರಾಗಿದ್ದಾರೆ. ಮೊಬೈಲ್ ರಿಪೇರಿ ಸಂದರ್ಭದಲ್ಲಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಇಬ್ಬರು ಯುವಕರು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕೈಯಲ್ಲೇ ಪಟಾಕಿಯಂತೆ ಮೊಬೈಲ್ ಸಿಡಿದಿದೆ. ಇನ್ನು ಬ್ಲಾಸ್ಟ್ ಆದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


Spread the love

LEAVE A REPLY

Please enter your comment!
Please enter your name here