ಗದಗ:– ಗುರು ಬ್ರಹ್ಮ ಗುರು ವಿಷ್ಣು ..! ಗುರು ದೇವೋ ಮಹೇಶ್ವರ ..! ಗುರುವಿಗೆ ದೇವರೆಂದು ಕರೆಯುತ್ತಾರೆ. ಶಿಕ್ಷಕರು ತಮ್ಮಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಾರೆ. ಇಂತಹ ಶಿಕ್ಷಕರು ನಿವೃತ್ತಿ ಆದ್ರೆ ಮಕ್ಕಳ ಗೋಳಾಟವಂತೂ ಹೇಳತ್ತೀರದು. ಅಂತದ್ದೇ ಒಂದು ದೃಶ್ಯ ಗದಗದ ಸರ್ಕಾರಿ ಶಾಲೆಯೊಂದರಲ್ಲಿ ಜರುಗಿದೆ.
ಹೌದು, ಜಿಲ್ಲೆಯ ಪಾಪನಾಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿಯನ್ನ ಶಾಲೆಯಿಂದ ಆಚೆ ಬಿಡದೇ ಸುತ್ತಿವರಿದ ಮಕ್ಕಳು ಕಣ್ಣೀರಿಟ್ಟ ಘಟನೆ ನಡೆದಿದೆ.
ನೆಚ್ಚಿನ ಟೀಚರ್ ಸುನಂದಾ ಕುಲಕರ್ಣಿ ಅವರ ನಿವೃತ್ತಿಯ ವಿಷಯ ತಿಳಿದು ಮಕ್ಕಳು ಭಾವುಕರಾಗಿದರು. ಟೀಚರ್ ಕ್ಲಾಸ್ ನಿಂದ ಆಚೆ ಬರ್ತಿದ್ದಂತೆ ಅವರನ್ನು ಸುತ್ತುವರಿದ ಮಕ್ಕಳು ಆಚೆ ಬಿಡದೆ ಅಳುತ್ತ ನಿಂತ ದೃಶ್ಯ ನೋಡಿದವರಿಗೂ ಕಣ್ಣೀರು ತರಿಸುವಂತಿತ್ತು.
ಮಕ್ಕಳು ಅಳುತ್ತಿರುವುದನ್ನ ನೋಡಿದ ಶಿಕ್ಷಕಿ ಸುನಂದಾ ಅವರೂ ಕೆಲ ಕಾಲ ಭಾವುಕರಾದರು.
ಮಕ್ಕಳನ್ನ ಸಮಾಧಾನ ಮಾಡಿದ ಶಿಕ್ಷಕಿ ಸುನಂದಾ ಅವರು ಮಕ್ಕಳೊಂದಿಗೆ ಕೆಲ ಹೊತ್ತು ಗ್ರೌಂಡ್ ನಲ್ಲೇ ಕಾಲ ಕಳೆದ್ರು.