ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ದೇಶದ ಸರ್ವತೋಮುಖ ಪ್ರಗತಿಗಾಗಿ ಹಗಲಿರುಳು ನಿಸ್ವಾರ್ಥ ಸೇವೆ ಮಾಡುತ್ತಾ, ದೇಶವನ್ನು ಬಲಿಷ್ಠ, ಸ್ವಾವಲಂಬಿಯಾಗಿಸಲು ಸಮರ್ಪಿಸಿಕೊಂಡಿರುವ ನರೇಂದ್ರ ಮೋದಿ ಅವರಂತಹ ಶ್ರೇಷ್ಠ ಪ್ರಧಾನಿ ದೊರೆತಿರುವುದು ನಮ್ಮ ದೇಶದ ಜನರ ಸೌಭಾಗ್ಯ ಮತ್ತು ಹೆಮ್ಮೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಬುಧವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ಶಿರಹಟ್ಟಿ ಮಂಡಳದಿಂದ ನರೇಂದ್ರ ಮೋದಿ ಅವರ 75ನೇ ಜನ್ಮದಿನಾಚರಣೆಗೆ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮದಡಿ ರಕ್ತದಾನ ಮತ್ತು ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮೋದಿ ಅವರು ಅಖಂಡ ಭಾರತದ ಕಲ್ಪನೆ ಸಾಕಾರಗೊಳಿಸಿ, ಬಿ.ಆರ್. ಅಂಬೇಡ್ಕರ್ ಕಂಡ ಸಂವಿಧಾನವನ್ನು ಪಾಲನೆ ಮಾಡುತ್ತಿದ್ದಾರೆ. ಜಗತ್ತು ಕಂಡ ಅಪ್ರತಿಮ, ದಕ್ಷ, ಪ್ರಾಮಾಣಿಕ ಆಡಳಿತಗಾರರಾಗಿದ್ದಾರೆ. ದೇವರು ಮೋದಿಜಿಗೆ ಆಯುರಾರೋಗ್ಯ ಕರುಣಿಸಲೆಂದು, ಅವರಿಂದ ದೇಶಸೇವೆ ಮುಂದುವರಿಯಲೆಂದು ಪ್ರಾರ್ಥಿಸೋಣ. ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ಆರೋಗ್ಯಕರ ಜೀವನಕ್ಕೆ ಸಹಾಯಕವಾಗಲಿದೆ. ಎಲ್ಲರೂ ರಕ್ತದಾನ ಮಾಡುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ನಿಂಗಪ್ಪ ಬನ್ನಿ, ಮಾದೇವಪ್ಪ ಅಣ್ಣಿಗೇರಿ, ಅಶ್ವಿನಿ ಅಂಕಲಕೋಟಿ, ಪಿ.ಬಿ. ಖರಾಟೆ, ವಿಜಯ ಹತ್ತಿಕಾಳ, ವಿಜಯ ಮೆಕ್ಕಿ, ಅಶೋಕ ಶಿರಹಟ್ಟಿ, ಜಿಮ್ಸ್‌ನ ಡಾ. ಶ್ವೇತಾ ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ. ಸುಭಾಸ್ ದಾಯಗೊಂಡ, ಡಾ. ಶ್ರೀಕಾಂತ ಕಾಟೇವಾಲೆ, ಪರಶುರಾಮ ಇಮ್ಮಡಿ, ಜಗದೀಶಗೌಡ ಪಾಟೀಲ, ಎಂ.ಆರ್. ಪಾಟೀಲ, ರಮೇಶ ದನದಮನಿ, ವಿಜಯ ಕುಂಬಾರ, ಈರಣ್ಣ ಅಕ್ಕೂರ, ಪ್ರವೀಣ ಬೋಮಲೆ, ನೀಲಪ್ಪ ಹತ್ತಿ, ಮಂಜನಗೌಡ ಕೆಂಚನಗೌಡ, ಸಂತೋಷ ಜಾವೂರ, ಶಿವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಪ್ರಕಾರ್ಯದರ್ಶಿ ಅನಿಲ ಮುಳಗುಂದ, ನವೀನ್ ಹಿರೇಮಠ, ಗಂಗಾಧರ ಮೆಣಸಿನಕಾಯಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.