ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಜನಾಬ ಸಲೀಂ ಅಹ್ಮದರು ಸರಕಾರದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿ ಪ್ರಥಮ ಬಾರಿ ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಜನಸಂಪರ್ಕ ಕಾರ್ಯಾಲಯದಲ್ಲಿ ಗದಗ ಶಹರ ಕಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಜ. ಮಹ್ಮಮದಹನ್ನಿಫ ಎನ್.ಶಾಲಗಾರ ನೇತೃತ್ವದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅನ್ವರ ಶಿರಹಟ್ಟಿ, ಶಾರೂಖ್ ಹುಯಿಲಗೋಳ, ಯೂಸೂಫ ಡಂಬಳ, ಸೈಯದಖಾಲೀದ ಕೊಪ್ಪಳ ಉಪಸ್ಥಿತರಿದ್ದರು.