HomeGadag Newsಕರ್ನಾಟಕ `ಅಪರಾಧಗಳ ರಾಜ್ಯ'ವಾಗುತ್ತಿದೆ

ಕರ್ನಾಟಕ `ಅಪರಾಧಗಳ ರಾಜ್ಯ’ವಾಗುತ್ತಿದೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾ ಗದಗ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯವು ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಹಾಗು ಉತ್ತಮ ಹೆಸರು ಪಡೆದಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ. ಇದೀಗ, ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು, ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕರ್ನಾಟಕವು ಈ ಮೂಲಕ `ಅಪರಾಧಗಳ ರಾಜ್ಯ’ ಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ರಾಮಯ್ಯನವರು, ಗೃಹ ಸಚಿವ ಜಿ. ಪರಮೇಶ್ವರ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿ ರಾಜ್ಯದಲ್ಲಿ ಅಪರಾಧಗಳು ಹೆಚ್ಚುವಂತಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು, ರಾಜ್ಯದಲ್ಲಿ ಜನರಿಗೆ ಶಾಂತಿ, ನೆಮ್ಮದಿಯ ಆಡಳಿತ ನೀಡುವ ಕಠಿಣ ಕಾನೂನು ಜಾರಿಗೆ ತರಬೇಕೆಂದರು.

ಪ್ರತಿಭಟನೆಯಲ್ಲಿ ರತ್ನಾ ಕುರಗೋಡ, ರೇವತಿ ಉಪನಾಳ, ಕಸ್ತೂರಿ ಕಮ್ಮಾರ, ಜ್ಯೋತಿ ಹಾನಗಲ್, ಪವಿತ್ರಾ ಕಲ್ಕುಟಗರ್, ನಂದಾ ಪಲ್ಲೇದ, ಶಾರದಾ ದಳವಾಯಿ, ಜ್ಯೋತಿ ಪಾಯಪ್ಪಗೌಡ್ರ, ಸುಮಂಗಲಾ ಕಲ್ಲಾಪೂರ, ಪುಷ್ಪಾ ಉಕ್ಕಲಿ, ಲಕ್ಷ್ಮಿ ಕಾಕಿ, ರೇಖಾ ಬಂಗಾರಶೆಟ್ಟರ, ಶಾಂತಾ ತಿಮ್ಮಾಪೂರ, ಚನ್ನಮ್ಮ ಹುಳಕಣ್ಣವರ, ಶೇಖವ್ವ ಮಾಸರಡ್ಡಿ, ಕಮಲಾಕ್ಷಿ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ರಾಜೇಶ್ವರಿ ಹಾದಿಮನಿ, ಶಿವಲೀಲಾ ಉಮಚಗಿ, ರಾಧಾ ಬಾರಕೇರ, ವೀಣಾ ಬೂದಿಹಾಳ, ಮಂಜುಳಾ ಹೆಬ್ಬಳಮಠ, ಪ್ರಭಾವತಿ ಬೆಳವಣಿಕಿಮಠ, ಕೌಶಲ್ಯ ಬದಿ, ಆರ್.ಕೆ. ಚವ್ಹಾನ, ಪಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್. ಕರೀಗೌಡ್ರ, ಅಶೋಕ ಸಂಕಣ್ಣವರ, ಕೆ.ಪಿ. ಕೋಟಿಗೌಡ್ರ, ಸುರೇಶ ಚಿತ್ತರಗಿ, ಸುಧೀರ ಕಾಟಿಗರ, ವಿಜಯ ಹಿರೇಮಠ, ಗೈಬುಸಾಬ ಕಲೆಬಾಯಿ, ಲಕ್ಷ್ಮಣ ದೊಡ್ಮನಿ, ಮಾಂತೇಶ ನಲವಡಿ, ಶಂಕರ ಕಾಕಿ, ಮಂಜು ಮುಳಗುಂದ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ್, ದೇವಪ್ಪ ಗೊಟೂರ, ಅಪ್ಪಣ್ಣ ಟೆಂಗಿನಕಾಯಿ, ಸೊಮೆಶ ಉಪನಾಳ, ರಮೇಶ ಹತ್ತಿಕಾಳ, ಮಾಂತೇಶ ಬಾತಾಖಾನಿ, ಗಣೇಶ, ವಿನಾಯಕ ಪರಾಪೂರ, ಅಯ್ಯಪ್ಪ ಅಂಗಡಿ, ರಾಜೇಶ ಕಟ್ಟಿಮನಿ, ವಿಶ್ವನಾಥ ಶಿರಿಗಣ್ಣವರ, ವಿನೋದ ಹಂಸನೂರ ಸೇರಿದಂತೆ ಹಲವಾರು ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ನಂತರ ಒಂದು ಕೋಮಿನವರ ಮನವೊಲಿಸಿ ಅಪರಾಧ ಪ್ರಕರಣಗಳು ಹೆಚ್ಚಾಗುವಂತೆ ಅಪರಾಧಿಗಳಿಗೆ ರಕ್ಷಣೆ ಸಿಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆಗಳಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಕು.ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠರ ಹತ್ಯೆಗಳು ನಮ್ಮ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದೆಗೆಟ್ಟಿರುವದನ್ನು ಸಾಬೀತುಪಡಿಸುತ್ತಿವೆ ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img