ಚೆನ್ನೈ: ವರನಟ ಡಾ. ರಾಜ್ಕುಮಾರ್ ಅವರ ದೂರದ ಸಂಬಂಧಿಯೊಬ್ಬರ ಮನೆ ಮುಂದೆ ನಿಗೂಢ ಸ್ಫೋಟ ಸಂಭವಿಸಿರುವ ಘಟನೆ ತಮಿಳುನಾಡಿನ ದೊಡ್ಡ ಗಾಜನೂರಿನಲ್ಲಿ ನಡೆದಿದೆ.

ಮಂಗಳಮ್ಮ ಎಂಬುವವರ ಮನೆಯ ಮುಂದೆ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಕಿಡಿಗೇಡಿಗಳು ಕಚ್ಚಾ ಬಾಂಬ್ ಅಥವಾ ಪಟಾಕಿ ಆಟಂ ಬಾಂಬ್ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ತಾಳವಾಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಸ್ಫೋಟದ ಸ್ಥಳದಲ್ಲಿ ಪತ್ತೆಯಾದ ಅವಶೇಷಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದು ಕಚ್ಚಾ ಬಾಂಬ್ ಸ್ಫೋಟವೇ ಅಥವಾ ಪಟಾಕಿಯಿಂದ ಸಂಭವಿಸಿದ ಅವಘಡವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.










