ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇಂಧನ ಮಿತವ್ಯಯದ ವಿಚಾರದಲ್ಲಿ ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ. ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ,
ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರೊ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೆಟ್ರೊಲ್, ಡಿಸೆಲ್ , ಅಡುಗೆ ಎಣ್ಣೆ ಮಿತವ್ಯಯದಿಂದ ಬಳಸುವಂತೆ ಮಾಡಿರುವ ಮನವಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಧನ ಮಿತವ್ಯಯದ ಬಗ್ಗೆ ನಾನು ಭಾರತೀಯ ನಾಗರಿಕನಾಗಿ ಅಷ್ಟಾದರೂ ಮಾಡಬೇಕಲ್ಲ.
ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರದ ಕೊರತೆ ಉಂಟಾಗಿದ್ದರಿಂದ ಒಂದು ದಿನ ಉಪವಾಸ ಮಾಡಲು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಶ್ರೀಮಂತರಿಗೆ ಗ್ಯಾಸ್ ಸಬ್ಸಿಡಿ ಬಿಡಲು ಹೇಳಿದ್ದರು 6 ಕೋಟಿ ಜನರು ಬಿಟ್ಟಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಾಕಷ್ಡು ಸಲಹೆಗಳನ್ನು ಕೊಟ್ಟಿದ್ದರು. ದೇಶದ ಜನರು ಅದನ್ನು ಪಾಲಿಸಿದ್ದರಿಂದ ದೇಶದಲ್ಲಿ ಕೊವಿಡ್ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.
ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಬಂಗಾರದ ಬಗ್ಗೆ ವ್ಯಾಮೊಹ ಬೇಡ ಅಂತ ಹೇಳಿದ್ದರು
ಹಿಂದೆ ಇರಾನ್ ಇರಾಕ್ ಯುದ್ದ ಆದಾಗ ಎರಡೇ ದಿನದಲ್ಲಿ ಪೆಟ್ರೊಲ್ ಬಂಕ್ ಗಳ ಮುಂದೆ ಕಿಲೋ ಮೀಟರ್ ಗಟ್ಟಲೆ ಕ್ಯು ಇತ್ತು. ಯುದ್ದ ಶುರುವಾಗಿ ಎರಡು ತಿಂಗಳು ಕಳೆದರೂ ಅಂತ ಪರಿಸ್ಥಿತಿ ಇಲ್ಲ. ಈಗ ಪ್ರಧಾನಿಯವರು ಯಾವುದಕ್ಕೂ ಕಡಿವಾಣ ಹಾಕಿಲ್ಲ ಸ್ವಯಂ ಪ್ರೇರಿತವಾಗಿ ಬಿಡಲು ಹೇಳಿದ್ದಾರೆ.
ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ. ಇದರ ಬಗ್ಗೆ ಬೇರೆ ಬೇರೆ ವ್ಯಾಖ್ಯಾನ ಮಾಡಿದರೆ ಕಾಂಗ್ರೆಸ್ ಗೆ ದೇಶ ಭಕ್ತಿಯೂ ಇಲ್ಲ, ತ್ಯಾಗವೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗಳಿವೆ. ಇದು ಜವಾಬ್ದಾರಿಯುತ ಪಕ್ಷದ ಹೇಳಿಕೆಯಲ್ಲ ಅವರಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.



