ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿ ಕೇಬಲ್ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಎಕ್ಸ್ ಮೂಲಕವೂ ಮಾಹಿತಿ ಹಂಚಿಕೊಳ್ಳಲಾಗಿದೆ.
ಬೆಸ್ಕಾಂ ನೀಡಿರುವ ಮಾಹಿತಿಯಂತೆ, ಡಿಸೆಂಬರ್ 26ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನ 9–7 ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳು ಹೀಗಿವೆ: ನಾರ್ಥ್ ಗೇಟ್ 1, 2, 3, ಎಂಬಾಸಿ, ಫೀಲಿಪ್ಸ್ ಕಂಪನಿ, ದ್ವಾರಕನಗರ, ಬಾಬಾನಗರ, ಕಗ್ಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳು, ಬಾಗಲೂರು ಕ್ರಾಸ್, ಮಟ್ಟು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ ಸೇರಿದಂತೆ ಸಮೀಪದ ಇತರ ಪ್ರದೇಶಗಳು.
ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



