ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶ್ರಾವಣ ಮಾಸ ದೇವರ ಆರಾಧನೆಗೆ ಪವಿತ್ರ ಮಾಸವಾಗಿದೆ. ಇದನ್ನು ಹಬ್ಬಗಳ ಹೆಬ್ಬಾಗಿಲು ಎಂದು ಸಹ ಕರೆಯಲಾಗುತ್ತದೆ. ಇಂದಿನ ಒತ್ತಡ ಜೀವನದ ಮಧ್ಯೆ ಇಂತಹ ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಬನ್ನಿಕೊಪ್ಪ ಬ್ರಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಬನ್ನಿಕೊಪ್ಪ ಗ್ರಾಮದ ಶ್ರೀ ದಾರುಕಾಚಾರ್ಯ ಬ್ರಹನ್ಮಠದಲ್ಲಿ ಕಸಾಪ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಲಿಂ.ಶ್ರೀ ಡಾ. ಎಸ್.ಎಫ್. ಹಿರೇಮಠ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಲಿಂ.ಡಾ. ಎಸ್.ಎಫ್. ಹಿರೇಮಠ ಅವರು ತಮ್ಮ ಜೀವನದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಜೀವನದಲ್ಲಿ ಏನನ್ನಾದರೂ ಸಾಧಿಸೇಕೆಂದರೆ ಉಪಕಾರ ಸ್ಮರಣೆ ಮಾಡಬೇಕೆಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಆರ್.ಆರ್. ಗಡ್ಡದ್ದೇವರಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಹಿಂಬಾಳಿಮಠ, ಸದಸ್ಯ ಬಸನಗೌಡ ಮಾಗಡಿ, ಕಸಾಪ ಅಧ್ಯಕ್ಷ ನವೀನ ಅಳವಂಡಿ, ಉಪನ್ಯಾಸಕಿ ಸುಧಾ ಹುಚ್ಚಣ್ಣವರ, ಎಂ.ಬಿ. ಹಾವೇರಿ, ಎಂ.ಸಿ. ಮರಡೂರಮಠ, ಸುರೇಶ ಕಬ್ಬಿನ ಮುಂತಾದವರು ಉಪಸ್ಥಿತರಿದ್ದರು.