ಚೆನ್ನೈ: ದಳಪತಿ ವಿಜಯ್ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಸಾಧಿಸಿ ಮುಖ್ಯಮಂತ್ರಿ ಆದ ಬಳಿಕ ಅವರ ನಟನೆಯ ‘ಜನ ನಾಯಗನ್’ ಸಿನಿಮಾದ ಮಾರುಕಟ್ಟೆ ಮೌಲ್ಯ ಏಕಾಏಕಿ ಗಗನಕ್ಕೇರಿದೆ. ಈಗ ಚಿತ್ರದ ಓಟಿಟಿ ಹಕ್ಕುಗಳಿಗಾಗಿ ಪ್ರಮುಖ ಡಿಜಿಟಲ್ ವೇದಿಕೆಗಳು ಭಾರೀ ಪೈಪೋಟಿ ನಡೆಸುತ್ತಿವೆ.
ಈ ಹಿಂದೆ ಅಮೇಜಾನ್ ಪ್ರೈಮ್ ವಿಡಿಯೋ ಸಂಸ್ಥೆ ಸುಮಾರು 120 ಕೋಟಿ ರೂ.ಗೆ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಸೆನ್ಸಾರ್ ಸಮಸ್ಯೆ ಹಾಗೂ ಬಿಡುಗಡೆ ವಿಳಂಬದ ಕಾರಣ ಆ ಡೀಲ್ ಮುರಿದುಬಿದ್ದಿತ್ತು.
ಆದರೆ ವಿಜಯ್ ಸಿಎಂ ಆದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇದೀಗ ಹೊಸ ಓಟಿಟಿ ಕಂಪನಿಯೊಂದು ಚಿತ್ರದ ಹಕ್ಕುಗಳಿಗೆ ದಾಖಲೆ ಮಟ್ಟದ ಮೊತ್ತ ಆಫರ್ ಮಾಡಿದೆ ಎಂದು ವರದಿಯಾಗಿದೆ. ಈ ಡೀಲ್ 150 ಕೋಟಿ ರೂ. ಸಮೀಪ ಇರಬಹುದು ಎಂಬ ಚರ್ಚೆ ಜೋರಾಗಿದೆ.
‘ಜನ ನಾಯಗನ್’ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ವಿಜಯ್ ಅವರ ರಾಜಕೀಯ ಇಮೇಜ್ ಸಿನಿಮಾ ಮೇಲಿನ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸಿದೆ. ಟ್ರೇಡ್ ವಲಯದ ಪ್ರಕಾರ, ಚಿತ್ರ ಬಿಡುಗಡೆಯಾಗುವ ಮುನ್ನವೇ ಹೊಸ ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ ಇದೆ.



