ವಿಜಯಪುರ:- ನಕ್ಸಲರಿಗೆ ಪ್ಯಾಕೇಜ್ ಘೋಷಣೆ ಸರಿಯಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಆರು ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ‘X’ ಮಾಡಿರುವ ಯತ್ನಾಳ್, ನಕ್ಸಲರ ಬೇಡಿಕೆಗಳನ್ನು ಆಲಿಸಿ ಅವರನ್ನು ಮುಖ್ಯವಾಹಿನಿಗೆ ತಂದು ಅವರು ಕೂಡ ಸಾಮಾನ್ಯರಂತೆ ಬದುಕುವುದಕ್ಕೆ ಹಕ್ಕಿದೆ. ಆದರೆ, ಶರಣಾಗಲು ಪ್ಯಾಕೇಜ್ ಕೊಡುವುದು ಸರಿಯಾದ ಕ್ರಮವಲ್ಲ.
ನಕ್ಸಲರು ಕೈಗೊಂಡ ಹಿಂಸೆಗಳಿಂದ ಅನೇಕ ಪೊಲೀಸ್ ಅಧಿಕಾರಿಗಳು, ಕಾರ್ಯಾಚರಣಾ ತಂಡದ ಸದಸ್ಯರು ಜೀವ ಕಳೆದುಕೊಂಡಿದ್ದಾರೆ. ಯಾರದ್ದೋ ಮೇಲೆ ಕೋಪಕ್ಕೆ ಬಡ ಗ್ರಾಮಸ್ಥರ ಮೇಲೆ, ಪೊಲೀಸರನ್ನು ಬಲಿ ತೆಗೆದುಕೊಂಡವರಿಗೆ ವಿಶೇಷ ಆತಿಥ್ಯ ಕೊಡುವುದು ಖಂಡಿತ ಸರಿಯಾದ ಕ್ರಮವಲ್ಲ. ಅವರು ಮಾಡಿರುವ ಅಪರಾಧಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸಿ ನಂತರ ಮುಖ್ಯವಾಹಿನಿಗೆ ಬರಲಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.



