Home Blog Page 2053

ರೇಲ್ವೆ ನೌಕರರ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಶ್ರೀ ಭಕ್ತ ಕನಕದಾಸ ರೇಲ್ವೆ ನೌಕರರ ಸಂಘದ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮವು ನಗರದ ರೇಲ್ವೆ ಗಣೇಶ ಹಾಲ್‌ನಲ್ಲಿ ಜರುಗಿತು.

ಭಾಜನರಾದ ಜಿ.ಬಿ. ಬಿಡಿನಹಾಳ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ರೇಲ್ವೆ ನೌಕರರ ಮಕ್ಕಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಈ ಕಾರ್ಯಕ್ರಮದ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಡಾ. ಬಸವರಾಜ ದೇವರು, ಅಧ್ಯಕ್ಷತೆಯನ್ನು ಫಕೀರಪ್ಪ ಹೆಬಸೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರುದ್ರಣ್ಣ ಗುಳಗುಳಿ, ಎನ್.ಎಮ್. ಅಂಬಲಿಯವರ, ವಾಸಣ್ಣ ಕುರುಡಗಿ, ರವಿ ದಂಡಿನ, ಪ್ರಕಾಶ ಕರಿ, ಜಯದೇವ ಮೆಣಸಗಿ, ರಾಮಕೃಷ್ಣ ರೊಳ್ಳಿ, ಲಕ್ಷö್ಮಣ ಅರಿ, ಜಿ.ಬಿ. ಕಟಗಿ, ಎಸ್.ಬಿ. ದೊಡ್ಡಣ್ಣವರ, ಚಂದ್ರು ಹುಲ್ಲಿಕೇರಿ, ಅತಿಥಿಗಳಾಗಿ ರಮೇಶ ಕಂಬಳಿ, ಎಮ್.ಕೆ. ರಘು ಪ್ರಸನ್ನ, ವಿಶ್ವನಾಥ ಎಮ್. ಕೆಳಗಿನಮಠ, ಸಂಥಿಲ್‌ಕುಮಾರ, ಅರವಿಂದಕುಮಾರ, ಮನೋಜ ಬಾಗಡೆ, ಸಿದ್ದಪ್ಪ ಅಳವಂಡಿ, ಎಸ್.ಎಸ್. ಖಾದ್ರಿ, ರಘುವಿರನ್, ಶಿವರಾಮ, ಕೆ. ವೆಂಕಟಸುಬ್ಬರಾವ್, ರಿತೇಶಕುಮಾರ, ಸಿರಿಲ್ ಮೈಕಲ್ ಪಾಲ್ಗೊಂಡಿದ್ದರು.

ಸುರೇಶ ಮುಧೋಳ, ಹನುಮಂತಪ್ಪ ಶಿವಪೂರ ಕಾರ್ಯಕ್ರಮ ನಿರೂಪಿಸಿದರು. ಎಚ್.ಕೆ. ಜೋಗಿನ, ಉಮೇಶ ಕುರಿ ಸೇರಿದಂತೆ ಸಮಸ್ತ ರೇಲ್ವೆ ನೌಕರರು ಗದಗ, ಹುಬ್ಬಳ್ಳಿ, ಬಾಗಲಕೋಟ, ಕೊಪ್ಪಳ, ಬದಾಮಿ, ಗಂಗಾವತಿ ಹಾಗೂ ಸಮಸ್ತ ಕನಕದಾಸರ ಭಕ್ತರು ಪಾಲ್ಗೊಂಡಿದ್ದರು.

ಚಿತ್ರದುರ್ಗ: ಜನವಸತಿ ಪ್ರದೇಶಕ್ಕೆ ಕರಡಿ ಎಂಟ್ರಿ, ಗ್ರಾಮಸ್ಥರಲ್ಲಿ ಆತಂಕ!

0

ಚಿತ್ರದುರ್ಗ:- ಇಲ್ಲಿನ ಶಾಂತಿನಗರದ ಜನವಸತಿ ಪ್ರದೇಶಕ್ಕೆ ಕರಡಿ ನಿತ್ಯ ಬರುತ್ತಿದ್ದು, ಕೋಟೆನಾಡಿನ ನಾಗರಿಕರಲ್ಲಿ ಆತಂಕ ಶುರುವಾಗಿದೆ.

ಇಲ್ಲಿನ ಜನರು ಬೆಳಗ್ಗೆ ಹಾಗೂ ಸಂಜೆ ಇದೇ ರಸ್ತೆಯಲ್ಲಿ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಇಲ್ಲಿಯೇ ಒಡಾಡುತ್ತಾರೆ. ನಿತ್ಯ ಮನೆ ಪಾಠಕ್ಕೆ ತೆರಳುತ್ತಾರೆ. ಆದರೆ ಕಳೆದ ಒಂದು ವಾರದಿಂದ ಈ ಬಡಾವಣೆ ಪಕ್ಕದಲ್ಲಿರುವ ಬನ್ನಿಮರದ ಬಳಿಗೆ ಕರಡಿಯೊಂದು ಬರುತ್ತಿದೆ. ಅಲ್ಲಿ ಕೈಗೆ ಸಿಗುವ ಆಹಾರ ಸೇವಿಸಿ ಪರಾರಿಯಾಗುತ್ತದೆ.

ಇನ್ನೂ ಕರಡಿಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಕರಡಿ ಓಡಾಟದ ವೀಡಿಯೋ ವೀಕ್ಷಿಸಿರುವ ಬಡಾವಣೆಯ ಜನರಲ್ಲಿ ಭೀತಿ ಸೃಷ್ಠಿಯಾಗಿದೆ. ಹೀಗಾಗಿ ಮನೆಯಿಂದ ಹೊರಬರಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ.

ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು: ನ್ಯಾಯಾಧೀಶ ಆದಿತ್ಯ ಬಿ.ಕಲಾಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಭಾರತ ಸಂವಿಧಾನ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ಪ್ರಜಾಪ್ರಭುತ್ವ ಆಧಾರದ ಮೇಲೆ ಲಿಖಿತ ರೂಪದಲ್ಲಿ ರಚನೆಗೊಂಡು, ಭಾರತೀಯರ ಬದುಕಿಗೆ ಹತ್ತಿರವಾಗಿರುವ ಭಾರತದ ಸಂವಿಧಾನ ಸೃಜನಶೀಲ ಮತ್ತು ಚಲನಶೀಲವಾಗಿದೆ ಎಂದು ರೋಣ-ಗಜೇಂದ್ರಗಡ ತಾಲೂಕು ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯ ಬಿ.ಕಲಾಲ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘದಿಂದ ಸಂವಿಧಾನ ದಿನಾಚರಣೆಯ ಅಂಗವಾಗಿ ನಗರದ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ಜರುಗಿದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ಸಂವಿಧಾನ ವಿಶ್ವದಲ್ಲಿಯೇ ಅತ್ಯುನ್ನತವಾಗಿದೆ. ದೇಶದ ಸಾರ್ವಭೌಮತೆ, ಪ್ರಜೆಗಳ ಹಕ್ಕುಗಳ ರಕ್ಷಣೆ ಸಂವಿಧಾನದಿಂದ ಮಾತ್ರ ಸಾಧ್ಯ. ಸಂವಿಧಾನ ಜನರ ಜೀವನಾಡಿಯಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಸಂವಿಧಾನವನ್ನು ಗೌರವಿಸಬೇಕು.

ಅಮಾಯಕರಿಗೆ ಶಿಕ್ಷೆಗೆ ಆಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೊಂದವರಿಗೆ, ಅಬಲೆಯರಿಗೆ, ದೀನ-ದಲಿತರಿಗೆ, ಅಮಾಯಕರಿಗೆ ಪರಿಹಾರ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶವಾಗಿದೆ. ಕಾನೂನು ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ಮಹತ್ತರ ಉದ್ದೇಶವಾಗಿದ್ದು, ಒಂದು ರಾಷ್ಟ್ರಅಭಿವೃದ್ಧಿ ಹೊಂದಬೇಕಾದರೆ ಆ ರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನು ಸಾಕ್ಷರತೆಯು ಬರೀ ಸಾಕ್ಷರತೆಯಾಗದೇ ಸಾರ್ವಜನಿಕರು ಯಾವುದು ತಪ್ಪು ಯಾವುದು ಸರಿ ಎಂದು ತಿಳುವಳಿಕೆ ಹೊಂದುವಂತಾಗಬೇಕು ಎಂದರು.

ಪಿಯು ಕಾಲೇಜಿನ ಪ್ರಾಂಶುಪಾಲ ವಸಂತರಾವ್ ಗಾರಗಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ೧೯೪೯ರ ನ.೨೬ರಂದು ದೇಶಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುವ ಮೂಲಕ ಸಮಗ್ರ ಅಭಿವೃದ್ದಿಗೆ ಕಾರಣೀಭೂತರಾದರು. ಈ ದಿನವನ್ನು ನಾವೆಲ್ಲರೂ ಹಬ್ಬದ ರೀತಿಯಲ್ಲಿ ಆಚರಿಸಬೇಕು. ಸಾರ್ವಭೌಮತ್ವದಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬ ಸಾಮಾನ್ಯ ಮನುಷ್ಯ ದೇಶದ ಅತ್ಯುನ್ನುತ ಹುದ್ದೆ ಪಡೆಯಲು ಅವಕಾಶ ಕಲ್ಪಿಸಿರುವ ಭಾರತದ ಸಂವಿಧಾನದ ಆಸೆ ಮತ್ತು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯ ಬಿ.ಕಲಾಲ ಸಂವಿಧಾನದ ಪೀಠಿಕೆಯನ್ನು ಓದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಪ್ಪ ಕೆ.ರೇವಡಿ ವಹಿಸಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ವಕೀಲರಾದ ಬಿ.ಎಂ. ಸಜ್ಜನ, ಎ.ಎಸ್. ಅರಹುಣಸಿ, ರಾಜೇಶ್ವರಿ, ಬಾಲು ವಿ.ರಾಠೋಡ, ಸುನಿಲ ಪವಾರ, ಎಸ್.ಬಿ. ಹಿಡಿಮಠ, ಎನ್.ಎಸ್. ಬಸವರೆಡ್ಡಿ ಹಾಗೂ ಕಾಲೇಜಿನ ಸಿಬ್ಬಂದಿಗಳು ಇದ್ದರು.

ಜಗತ್ತನ್ನು ನಡೆಸುವ ಅದೃಶ್ಯ ಶಕ್ತಿಗೆ ಶರಣಾಗಿ: ಡಾ. ಪಾವಗಡ ಪ್ರಕಾಶ್ ರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಜ್ಞಾನಕ್ಕೆ ನಿಲುಕದ, ನಮ್ಮ ತರ್ಕಕ್ಕೆ ಸಿಗದ ಅದೃಶ್ಯ ಶಕ್ತಿಯೊಂದು ನಮ್ಮನ್ನೂ ಸೇರಿದಂತೆ ಈ ಜಗತ್ತನ್ನು ನಡೆಸುತ್ತಿರುತ್ತದೆ. ಅದರ ಕುರಿತು ನಾವೆಲ್ಲ ವಿನಮ್ರರಾಗಿರಬೇಕು ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ನುಡಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ೧೩ನೇ ದಿನದ ಪ್ರವಚನ ನೀಡಿ ಮಾತನಾಡುತ್ತಿದ್ದರು.

ಸಾತ್ವಿಕ ತಪಸ್ಸಿನಿಂದ ದೇವರ ದಿವ್ಯ ಆಶೀರ್ವಾದಕ್ಕೆ ಪಾತ್ರರಾಗಬಹುದೇ ವಿನಃ ನಾವೇ ದೇವರಾಗಲು ಸಾಧ್ಯವಿಲ್ಲ. ಮೈಮೇಲೆ ದೇವರು ಬರುವುದು ಇಂಥ ಎಲ್ಲ ಕುರುಡು ನಂಬಿಕೆಗಳನ್ನು ನಂಬುವ ಮುನ್ನ ಪ್ರಜ್ಞಾವಂತರಾಗಿ ಯೋಚಿಸಬೇಕು. ಭಗವದ್ಗೀತೆಯ ಪ್ರವಚನಗಳು ತಾತ್ವಿಕ ನೆಲೆಗಟ್ಟಿನಲ್ಲಿ ನಡೆಯುವ ಕಾರಣ, ಇದು ಕೆಲವರಿಗೆ ಕುತೂಹಲಕಾರಿ ಎನಿಸದೇ ಇರಬಹುದು. ಆದಾಗ್ಯೂ ಗದುಗಿನಲ್ಲಿ ಭಗವದ್ಗೀತಾ ಪ್ರವಚನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿರುವದು ಶ್ಲಾಘನೀಯ ಎಂದರು.

ಡಾ.ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಎಸ್.ಎಸ್. ಶೆಟ್ಟರ್, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಪ್ರಜಾ ಪ್ರಭುತ್ವ ದಿನಾಚರಣೆ: ಮಾನವ ಸರಪಳಿ ನಿರ್ಮಾಣದಲ್ಲಿ ಪಾಲ್ಗೊಂಡ 3.57.555 ಜನ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಸರ್ಕಾರವು ಕಳೆದ ಸೆಪ್ಟಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸಲು ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಾಣ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಧಾರವಾಡ ಜಿಲ್ಲೆಯಿಂದ ಅತೀ ಹೆಚ್ಚು ಜನರು ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸಿದ್ದರಿಂದ ಮತ್ತು ವಿಭಿನ್ನ ಕಾರ್ಯಕ್ರಮಗಳ ಮೂಲಕ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಗೊಳಿಸಿದ್ದರಿಂದ ಧಾರವಾಡ ಜಿಲ್ಲೆಗೆ ರಾಜ್ಯ ಸರ್ಕಾರವು ಪ್ರಥಮ ಸ್ಥಾನದ ಪ್ರಶಸ್ತಿ ಪ್ರಕಟಿಸಿತ್ತು.

ಮಂಗಳವಾರ ಬೆಳಿಗ್ಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯ ಸರಕಾರದ ನಿರ್ದೇಶನದಂತೆ ಅಚಿತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಸೆ.15ರಂದು ಬೆಳಿಗ್ಗೆ 9.30ರಿಂದ 10.30ರವರೆಗೆ ಜಿಲ್ಲೆಯ ತೇಗೂರ ಗ್ರಾಮ ಹದ್ದೆಯಿಂದ ಮಾವಿನಕೊಪ್ಪ ಗ್ರಾಮ ಹದ್ದೆಯವರೆಗೆ ಸುಮಾರು 51 ಕೀ.ಮಿ.ಉದ್ದದ ಮಾನವ ಸರಪಳಿ ರಚಿಸಲಾಗಿತ್ತು. 9.55ರಿಂದ 10.05ರವರೆಗೆ ಮಾನವ ಸರಪಳಿಯನ್ನು ದಾಖಲೆಗೆ ಪರಿಗಣಿಸಲಾಗಿತ್ತು.

ಮಾನವ ಸರಪಳಿಯಲ್ಲಿ ಒಟ್ಟು 3,57,555  ಜನ ಭಾಗವಹಿಸಿದ್ದರು. ವ್ಯಕ್ತಿಗತವಾಗಿ 47,965 ಮತ್ತು 1914 ಎನ್ ಜಿಓ ಹಾಗೂ ಸಂಘಟನೆಗಳು, ಈ ಸಂಘಟನೆಗಳ 3,07,717 ಜನರು, 129 ವಲಸಿಗರ ಕುಟುಂಗಳು ಮತ್ತು ಈ ಕುಟುಂಬಗಳ ಪೈಕಿ ೧,೮೭೩ ಜನರು ಪಾಲ್ಗೊಂಡಿದ್ದರು. ಒಟ್ಟಾರೆ ಜಿಲ್ಲೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಸರಕಾರಿ ನೌಕರರು, ಕುಟುಂಬಗಳು, ಗ್ರಾಮಗಳ ಜನರು ಸೇರಿದಂತೆ ಸುಮಾರು 3,57,555 ಜನರು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು.

ಈ ಎಲ್ಲ ವಿಶೇಷತೆ ಹಾಗೂ ಹೆಚ್ಚು ಜನ ಆನ್‌ಲೈನ್ ನೋಂದಣಿ ಆಗಿರುವದನ್ನು ಗಮನಿಸಿರುವ ರಾಜ್ಯ ಸರಕಾರ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನದ ಬಹುಮಾನ ನೀಡಿ, ಗೌರವಿಸಿ ಪ್ರೋತ್ಸಾಹಿಸಿದೆ. ಕಂದಾಯ ಇಲಾಖೆಯ ಸೇವೆಗಳ ಗುಣಮಟ್ಟದ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಉತ್ತಮ ಜಿಲ್ಲಾಧಿಕಾರಿ, ಗ್ರಾಮ ಆಡಳಿತ ಅಧಿಕಾರಿ ಮತ್ತು ಉತ್ತಮ ಸಮಾಲೋಚಕ ಪ್ರಶಸ್ತಿ ಗಳಿಸಿದ್ದ ಧಾರವಾಡ ಜಿಲ್ಲೆಗೆ ಈಗ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ರಾಜ್ಯಕ್ಕೆ ಪ್ರಥಮ ಪ್ರಶಸ್ತಿ ಬಂದಿರುವುದು ಜಿಲ್ಲಾಡಳಿತ ಮತ್ತು ಜಿಲ್ಲೆಯ ನೌಕರರಿಗೆ ಹೆಮ್ಮೆ, ಪ್ರೋತ್ಸಾಹ ಹೆಚ್ಚಿಸಿದೆ.

ನಾಗಾರ್ಜುನ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ: ಅಖಿಲ್ ಅಕ್ಕಿನೇನಿಗೆ ಕೂಡಿ ಬಂತು ಕಂಕಣ ಭಾಗ್ಯ!

0

ಅಕ್ಕಿನೇನಿ ಕುಟುಂಬದ ಮತ್ತೊಂದು ಕುಡಿ ಅಖಿಲ್ ಶೀಘ್ರದಲ್ಲೇ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲಿದ್ದಾರೆ. ಇಲ್ಲಿಯವರೆಗೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಅಖಿಲ್ ಜೈನಾಬ್ ರಾವಡ್ಜಿ ಎಂಬ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿರುವ ನಾಗಾರ್ಜುನ ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸಮಾರಂಭ ನಡೆಯಿತು.

ನಾಗಾರ್ಜುನಾ ಪುತ್ರ ನಾಗಚೈತನ್ಯ ಡಿಸೆಂಬರ್ ತಿಂಗಳಿನಲ್ಲಿ ಎರಡನೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ಬಳಿಕ ನಾಗಚೈತನ್ಯ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದರು. ಬಹುಭಾಷಾ ನಟಿ ಶೋಭಿಯಾ ಜೊತೆ ಸುತ್ತಾಡುತ್ತಿದ್ದ ನಾಗಚೈತನ್ಯ ಇಬ್ಬರ ಬಗ್ಗೆ ಗುಲ್ಲೆದಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ. ಕುಟುಂಬಸ್ಥರ ಎದುರು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು.

ಸದ್ಯ ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಅದ್ಧೂರಿಯಾ ಮಾಡುವುದಕ್ಕೆ ನಾಗಾರ್ಜುನ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇನ್ನೊಂದು ತಮ್ಮ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಯ ನಿಶ್ಚಿತಾರ್ಥವನ್ನು ಮಾಡಿದ್ದಾರೆ. ಈ ಗ್ಯಾಪ್‌ನಲ್ಲಿ ಎರಡನೇ ಮಗನ ನಿಶ್ಚಿತಾರ್ಥದ ಖುಷಿಯನ್ನು ಹಂಚಿಕೊಂಡಿದ್ದಾರೆ.

ಒಂದ್ಕಡೆ ಮೊದಲನೇ ಮಗನ ಎರಡನೇ ಮದುವೆಗೆ ಸಿದ್ಧತೆಗಳು ನಡೆದಿವೆ. ಇನ್ನೊಂದು ಕಡೆ ಎರಡನೇ ಪುತ್ರನಿಗೆ ಎರಡನೇ ಬಾರಿ ನಿಶ್ಚಿತಾರ್ಥವನ್ನು ಮಾಡಲಾಗಿದೆ. ಈ ಮೂಲಕ ಅಕ್ಕಿನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮಗಳು ಮನೆ ಮಾಡಿವೆ. ಒಂದ್ಕಡೆ ಮದುವೆ ಆಗಿದ್ದರೆ, ಇನ್ನೊಂದು ಕಡೆ ನಿಶ್ಚಿತಾರ್ಥ ನಡೆದಿದೆ.

 

ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿ: ಶ್ರೀ ರಂಭಾಪುರಿ ಜಗದ್ಗುರುಗಳು

ವಿಜಯಸಾಕ್ಷಿ ಸುದ್ದಿ, ಶಿಗ್ಗಾಂವಿ: ಬಹು ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಮಾನವ ಜೀವನ ಸಾರ್ಥಕಗೊಳ್ಳಲು ಧರ್ಮಾಚರಣೆ ಅವಶ್ಯಕ. ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಮೂರ್ತಿ ಪ್ರತಿಷ್ಠಾಪನಾ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನ ಬುದ್ಧಿಶಕ್ತಿಗೆ ತಕ್ಕಂತೆ ಭಾವನೆಗಳು ಬೆಳೆಯುತ್ತಿಲ್ಲ. ಉದಾತ್ತವಾದ ಧರ್ಮದ ಅರ್ಥ ವ್ಯಾಪ್ತಿಯನ್ನು ಅರಿಯದೇ ಜಾತಿಗೆ ಜೋಡಿಸಿ ಧರ್ಮಕ್ಕೆ ಚ್ಯುತಿ ತರುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಸತ್ಯ ಧರ್ಮಕ್ಕೆ ಯಾವಾಗಲೂ ಜಯ ಇದ್ದೇ ಇರುತ್ತದೆ. ಆದರ್ಶ ಗುರಿಯೊಂದಿಗೆ ಸಮರ್ಥ ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಮಾನವೀಯ ಮೌಲ್ಯಗಳನ್ನು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಬೋಧಿಸಿ ಜನಸಮುದಾಯವನ್ನು ಸನ್ಮಾರ್ಗಕ್ಕೆ ಕರೆ ತಂದಿರುವ ಪ್ರಾಮಾಣಿಕ ಪ್ರಯತ್ನ ಮರೆಯಲಾಗದು ಎಂದರು.

ಭಾರತ ಸೇವಾ ಸಂಸ್ಥೆ ಬನ್ನೂರ ಇದರ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, 5 ಸಾವಿರ ವರ್ಷಗಳ ಇತಿಹಾಸ ಹೊಂದಿದ ವೀರಶೈವ ಧರ್ಮ ಸಕಲರಿಗೂ ಒಳಿತನ್ನು ಬಯಸುತ್ತ ಬಂದಿದೆ. ಈ ಧರ್ಮದ ತತ್ವಗಳನ್ನು ಅರಿತು ಆಚರಿಸಿ ಬಾಳಿದರೆ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವೆಂದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಗಂಜಿಗಟ್ಟಿ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯರು, ಹಿರೆಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು.

ತಿಪ್ಪಣ್ಣ ಸಾತಣ್ಣನವರ, ನಾಗೇಶ ಶರ್ಮಾ, ಶಿವಾನಂದ ಮ್ಯಾಗೇರಿ, ಟಿ.ವಿ. ಸುರಗಿಮಠ, ಹಿರೇಮಣಕಟ್ಟಿ ಮತ್ತು ಕಬನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ಸಮಾರಂಭವನ್ನು ಸಂಘಟಿಸಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶ್ರೀ ಕಲ್ಮೇಶ್ವರ ಕಲಾ ತಂಡ ಮುಗಳಿ ಇವರಿಂದ ಭಕ್ತಿಗೀತೆ ಜರುಗಿತು. ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ಸ್ವಾಗತಿಸಿ ನಿರೂಪಿಸಿದರು.

ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 8ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಗದುಗಿನ ಅಮರೇಶ್ವರ ನಗರದಲ್ಲಿರುವ ರಾಯಲ್ ಯುಥ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಶನ್ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ವಿದ್ಯಾರ್ಥಿಗಳಾದ ಕಾರ್ತಿಕ ದ್ವಿತೀಯ, ಸಂಜನಾ ಸಂಗನಾಳ ದ್ವಿತೀಯ, ಮಹಮ್ಮದಹಾಜಿದ ಕಾಗದಗಾರ ದ್ವಿತೀಯ, ಶಿಫಾ ದೊಡ್ಡಮನಿ ತೃತೀಯ, ಭೂಮಿಕಾ ನಿಂಬನಾಯ್ಕರ ಪ್ರಥಮ, ಗಗನ ನಿಂಬನಾಯ್ಕರ ದ್ವಿತೀಯ, ಸಂಪ್ರೀತ ಹೂಗಾರ ಪ್ರಥಮ, ರುಕ್ಕಯ್ಯ ಬೇಪಾರಿ ಪ್ರಥಮ, ತಹನಾಜ ಬಳ್ಳಾರಿ ಪ್ರಥಮ, ಚಂದನಾ ದ್ವಿತೀಯ, ಮಹಮ್ಮದಸೋಹೇಬ್ ಮನಿಯಾರ ಪ್ರಥಮ, ಪ್ರವೀಣ ಪ್ರಥಮ, ಹನಮಂತಗೌಡ ಪಾಟೀಲ ಪ್ರಥಮ, ಮಹಮ್ಮದ ಆದಿಲ್ ಹುಬ್ಬಳ್ಳಿ ಪ್ರಥಮ, ಧರೇಂದ್ರ ರಾಯ್ಕರ ಪ್ರಥಮ, ಹರ್ಷಾ ಪ್ರಥಮ, ರುಹಿನಾಜ ತೃತೀಯ, ಸೈಫ ದೊಡ್ಡಮನಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳನ್ನು ಅಸೋಸಿಯೇಶನ್‌ನ ಮುಖ್ಯ ತರಬೇತುದಾರ ಮೆಹಬೂಬ ದೊಡ್ಡಮನಿ, ರಾಯಸಾಬ ಹುಯಿಲಗೋಳ ಮತ್ತು ಪಾಲಕರು ಅಭಿನಂದಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತಪ್ಪದ ದುರಂತ: ಸಿಸೇರಿಯನ್‌ ಮಾಡಿಸಿಕೊಂಡ ಬಾಣಂತಿ ಸಾವು!

0

ಬಳ್ಳಾರಿ:- ಸಿಸೇರಿಯನ್‌ ಮಾಡಿಸಿಕೊಂಡ ಬಾಣಂತಿ ಸಾವನ್ನಪ್ಪಿದ ಘಟನೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಜರುಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ ಮಾಡಿಸಿಕೊಂಡ ಬಳಿಕ ಮೂವರು ಬಾಣಂತಿಯರ ಸಾವು ಪ್ರಕರಣ ಮಾಸುವ ಮುನ್ನವೇ ಈ ಘಟನೆ ಜರುಗಿದೆ.

22 ವರ್ಷದ ಮುಸ್ಕಾನ್ ಸಾವನ್ನಪ್ಪಿದ ಬಾಣಂತಿ ಎನ್ನಲಾಗಿದೆ. ಈ ಮೂಲಕ 15 ದಿನಗಳ ಅಂತರದಲ್ಲಿ ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಮುಸ್ಕಾನ್ ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ ಬಟಾ ಬಯಲಾಗಿದೆ.

ಸಿಹಿ ಗೆಣಸಿನ ಸೇವನೆಯಿಂದ ಇದೆ ಸಾಕಷ್ಟು ಬೆನಿಫಿಟ್! ಇದರ ಬಗ್ಗೆ ತಿಳಿದರೆ ಅಚ್ಚರಿ ಪಡ್ತೀರಾ!

0

ಸಾಮಾನ್ಯವಾಗಿ ಜನರು, ವರ್ಷವಿಡೀ ಎದುರುನೋಡುವ ಕೆಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳು ಈ ಚಳಿಗಾಲದಲ್ಲಿ ಹೆಚ್ಚು ಲಭ್ಯವಿವೆ. ಅವುಗಳಲ್ಲಿ ಸಿಹಿಗೆಣಸು, ಹಲಸಿನಕಾಯಿ, ಪ್ಲಮ್, ಸಿಹಿ ಗೆಣಸು ಪ್ರಮುಖವಾಗಿವೆ. ಸಿಹಿ ಗೆಣಸು ಫೈಬರ್ ಮತ್ತು ಪ್ರೊಟೀನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಒಳಗೊಂಡಿದೆ. ಪೊಟ್ಯಾಶಿಯಂ, ಕಬ್ಬಿಣದಂತಹ ವಿಟಮಿನ್ ಗಳು ಅನೇಕ ರೋಗಗಳನ್ನು ತಡೆಯುತ್ತದೆ.

ಸಿಹಿ ಗೆಣಸು ಉತ್ತಮ ಡಯಟ್ ಫುಡ್ ಎಂದೇ ಹೇಳಬಹುದು. ಇದಕ್ಕೆ ಹಲವು ಅಂಶಗಳು ಸಾಕ್ಷಿಗಳಾಗುತ್ತವೆ.

ವಿಟಮಿನ್ ಎ, ಸಿ, ಬಿ6, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳ ಆಗರವೇ ಸಿಹಿಗೆಣಸು. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಫೈಬರ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಇರುವ ಸಿಹಿಗೆಣಸು ತೂಕ ಇಳಿಸಲು ಸಹಕಾರಿ. ನಾರಿನಂಶದಿಂದ ಸಮೃದ್ಧವಾಗಿರುವ ಸಿಹಿಗೆಣಸು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಸಿಹಿ ಗೆಣಸು ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದೇ ಹೇಳಬಹುದು.

ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ಕಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

error: Content is protected !!