Home Blog Page 2171

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದು ಯುವತಿ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯೊಬ್ಬಳು ಆಯ ತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅಮೆರಿಕದ ಟೆನ್ನಿಸ್ಸಿಯಲ್ಲಿ ಸೋಮವಾರ ನಡೆದಿದೆ.
ಆಂಧ್ರ ಮೂಲದ ಪೊಲವರಪು ಕಮಲಾ ದುರಂತಕ್ಕೀಡಾದ ಯುವತಿ ಆಗಿದ್ದು, ತನ್ನ ಮದುವೆಯಾಗಲಿರುವ ಯುವಕನೊಂದಿಗೆ ಬಾಲ್ಡ್ ನದಿ ಜಲಪಾತ ನೋಡಲು ಹೋದಾಗ ಘಟನೆ ಸಂಭವಿಸಿದೆ.

ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಜಲಪಾತದ ಅಡಿಗೆ ಬಿದ್ದಿದ್ದು, ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕಮಲಾ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡ್ಲವಲೇರು ಊರಿನವಳಾಗಿದ್ದು, ಇಂಜಿನಿಯರಿಂಗ್ ನಂತರ ಅಮೆರಿಕದ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು.

ಗದಗ ಜಿಲ್ಲೆಯಲ್ಲಿ ಸೋಮವಾರ 96 ಜನರಿಗೆ ಸೋಂಕು; 184 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 14 ರಂದು 96 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

96 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7653 ಕ್ಕೇರಿದೆ. ಸೋಮವಾರ 184 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6453 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1091 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 109 ಕ್ಕೇರಿದೆ.

ಗದಗ-35, ಮುಂಡರಗಿ-12, ನರಗುಂದ-13, ರೋಣ-08, ಶಿರಹಟ್ಟಿ-18, ಹೊರ ಜಿಲ್ಲೆಯ 10 ಪ್ರಕರಣ ಸೇರಿದಂತೆ ಒಟ್ಟು 96 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಜವಳ ಗಲ್ಲಿ, ವಾಟರ ಟ್ಯಾಂಕ್ ಹತ್ತಿರ, ಬಸವೇಶ್ವರ ನಗರ, ಹುಡ್ಕೋ ಕಾಲೋನಿ, ತಾಜ್ ನಗರ, ಜಿಮ್ಸ್, ಕಬಾಡಿ ಚಾಳ, ಮಹಾಂತೇಶ ನಗರ, ಬಾಪೂಜಿ ನಗರ, ಬ್ಯಾಂಕರ್ಸ್ ಕಾಲೋನಿ, ವಿವೇಕಾನಂದ ನಗರ,

ಶಿವಾನಂದ ನಗರ, ಗಂಗಿಮಡಿ, ರಾಜೀವಗಾಂಧಿ ನಗರ, ಸಾಯಿಬಾಬಾ ದೇವಸ್ಥಾನದ ಹತ್ತಿರ,

ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಕ್ಕುಂಡಿ, ನಾಗಸಮುದ್ರ, ಕುರ್ತಕೋಟಿ,

ಮುಂಡರಗಿ ಪಟ್ಟಣದ ಜೆ.ಟಿ.ಮಠ ರಸ್ತೆ, ಮುಂರಡಗಿ ತಾಲೂಕಿನ ಹಿರೇವಡ್ಡಟ್ಟಿ,  ನರಗುಂದ ಪಟ್ಟಣದ ದಂಡಾಪುರ ಓಣಿ,  ರಾಚಯ್ಯ ನಗರ, ನರಗುಂದ ತಾಲೂಕಿನ ಹದ್ಲಿ, ಸೋಮಾಪುರ, ಚಿಕ್ಕ ನರಗುಂದ ರೋಣ ತಾಲೂಕಿನ ಸೂಡಿ, ಜಕ್ಕಳಿ, 

ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ಪ್ಲಾಟ, ವಿದ್ಯಾನಗರ,  ಶಿರಹಟ್ಟಿ ಪಟ್ಟಣದ ಶಿವಲಿಂಗೇಶ್ವರ ನಗರ, ರಾಘವೇಂದ್ರ ಮಠ, ವಿಜಯನಗರ, ಸೇವಾನಗರ, ಶಿರಹಟ್ಟಿ ತಾಲೂಕಿನ ನಾರಾಯಣಪುರ, ಬೆಳ್ಳಟ್ಟಿ, ವಡವಿ, ಸುಗ್ನಳ್ಳಿ, ಶಿಗ್ಲಿ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಕೆರಿ,

ಅಗರಬತ್ತಿ ಮಾರುತ್ತಲೇ ಪಿಎಸ್‌ಐ ಆದ ಅತ್ತರವಾಲಾ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಓದಿನ ನಡುವೆ ಕುಟುಂಬ ನಿರ್ವಹಣೆಗಾಗಿ ಊರೂರು ಸುತ್ತಿ ಅಗರಬತ್ತಿ ಮಾರುತ್ತಿದ್ದ ಯುವಕ ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಪಟ್ಟಣದ ಸಾಗರ್ ಅತ್ತರವಾಲಾ ಶುಕ್ರವಾರ ಬಿಡುಗಡೆಯಾದ ಪಿಎಸ್‌ಐ ಫಲಿತಾಂಶದಲ್ಲಿ ರಾಜ್ಯಕ್ಕೆ 173ನೇ ರ‍್ಯಾಂಕ್ ಗಳಿಸುವ ಮೂಲಕ ಪೊಲೀಸ್ ಇಲಾಖೆ ಸೇರುತ್ತಿದ್ದಾನೆ.

ದಿನ ನಿತ್ಯದ ಕುಟುಂಬ ನಿರ್ವಹಣೆ ಮಾಡುವುದೇ ಇಂದಿನ ದಿನಮಾನಗಳಲ್ಲಿ ಕಷ್ಟವಾಗಿರುವಾಗ ಕಡುಬಡತನದಲ್ಲಿ ಬಂದ ಸಾಗರ್ ಅತ್ತರವಾಲಾ ರಾಜ್ಯಕ್ಕೆ 173ನೇ ರ‍್ಯಾಂಕ್ ಪಡೆದು ಪಿಎಸ್‌ಐ ನೇಮಕವಾಗಿ ಮುಂಡರಗಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ.

ಎರಡು ತಿಂಗಳು ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶಿಯರ್ ಆಗಿ ಸರ್ಕಾರಿ ಹುದ್ದೆಯಲ್ಲಿ ಸಾಗರ್ ಕೆಲಸ ಮಾಡಿದ್ದ. ಪಿಎಸೈ ಪರೀಕ್ಷೆಗಾಗಿ ಓದಲು ಸಮಯ ಸಿಗದ್ದರಿಂದ ನೌಕರಿಗೆ ರಾಜೀನಾಮೆ ಸಲ್ಲಿಸಿ ಅಬ್ಯಾಸ ಮಾಡಿ ಗೆದ್ದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೇ ಹಿಂದುಳಿದ ಮುಂಡರಗಿ ಪಟ್ಟಣದಲ್ಲಿ ಲಭ್ಯವಿರುವ ಪಠ್ಯ ಸಂಪನ್ಮೂಲಗಳನ್ನು ಅಭ್ಯಸಿಸಿ ಈ ಪರೀಕ್ಷೆಯಲ್ಲಿ 173ನೇ ರ‍್ಯಾಂಕ್ ಪಡೆದಿದ್ದಾನೆ. ಕೆಲವೊಮ್ಮೆ ತಂದೆಗೆ ನೆರವಾಗಲು ಅಗರಬತ್ತಿ ಮಾರುವ ಕೆಲಸವನ್ನೂ ನಿರ್ವಹಿಸುತ್ತಲೇ ಪಿಎಸ್‌ಐ ಆಗಿರುವುದು ಆತನ ಛಲಕ್ಕೆ ನಿದರ್ಶನವಾಗಿದೆ.

ಸಂಸಾರ ನೌಕೆ ಸಾಗಿಸಲು ಕಷ್ಟವಾದ ಸಂದರ್ಭದಲ್ಲೂ ಮಗನ ಓದಿಗೆ ತೊಂದರೆಯಾಗದಂತೆ ತಂದೆ-ತಾಯಿ ನೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸಾಗರ್, ಚಿಕ್ಕಂದಿನಿಂದಲೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಹಿಸುವ ಬಯಕೆಯಿತ್ತು. ಬಡತನದಲ್ಲೂ ತಂದೆ, ತಾಯಿ ನನ್ನ ಓದಿಗೆ ಬೆಂಬಲ ನೀಡಿದ್ದಾರೆ. ಈಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪ್ರಾಮಾಣಿಕ ಸೇವೆ ಸಲ್ಲಿಸುವ ಗುರಿ ಹೊಂದಿದ್ದಾನೆ ಎಂದಿದ್ದಾನೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಸಹನಾ ಪಾಟೀಲಳಂತೆ ಸಾಗರನೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಒಂದೂವರೆ ಲಕ್ಷ ರೂ. ಮೌಲ್ಯದ ಗಾಂಜಾ ವಶ: ಜಿಲ್ಲೆಯ ವಿವಿದೆಡೆ ರೇಡ್| ಸಿಕ್ಕಿಬಿದ್ದ ಗಾಂಜಾವಾಲಾಗಳು ಯಾರು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗಾಂಜಾ ಬೆಳೆದು, ಒಣಗಿಸಿ ಮಾರುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದು ಆತನಿಂದ ಒಂದೂವರೆ ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪ್ರವೀಣಗೌಡ ಭರಮಗೌಡ ಜಯನಗೌಡ್ರ ಬಂಧಿತ ಆರೋಪಿಯಾಗಿದ್ದು, ಮುಂಡರಗಿ ಸಿಪಿಐ ಎಸ್.ಎಂ ಬೆಂಕಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಆರೋಪಿತನಿಂದ 1 ಕೆಜಿ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ರೋಣದಲ್ಲಿಯೂ ರೇಡ್ ನಡೆದಿದ್ದು, ತಾಲೂಕಿನ ಸವಡಿ ಗ್ರಾಮದ ನಿಂಗನಗೌಡ ಸಂಗನಗೌಡ ಮುಗನೂರ(ಕರಮಡಿ) ಎಂಬಾತನನ್ನು ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದು, 5 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಜಾಲದ ಕುರಿತು ತನಿಖೆ ಆರಂಭವಾದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೆ ಗಾಂಜಾ ಮತ್ತು ಇತರ ಅಕ್ರಮ ಚಟುವಟಿಕೆಗಳಿಗೆ ತಡೆ ಹಾಕಲು ಸೂಚಿಸಿದ್ದಾರೆ ಎನ್ನಲಾಗಿದೆ. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಮದ್ಯದ ಅಕ್ರಮ ಮಾರಾಟ, ಗಾಂಜಾ ಮಾರಾಟದ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸೆಪ್ಟೆಂಬರ್ 21ರಂದು ನಡೆಯುವ ಅಧಿವೇಶನದಲ್ಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ದೊಣ್ಣಿ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೀಸಲಾತಿಗಾಗಿ ಸಮುದಾಯವು ಹಲವು ವರ್ಷಗಳಿಂದ ಹೋರಾಡುತ್ತಾ ಬಂದರೂ ಬೇಡಿಕೆ ಈಡೇರಿಲ್ಲ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಮೀಸಲಾತಿ ಕಲ್ಪಿಸಲು ಸಮ್ಮತಿಸಿ ವರದಿ ನೀಡಿ, 2-3 ತಿಂಗಳು ಗತಿಸಿದರೂ ಸರಕಾರ ಗಮನ ಹರಿಸುತ್ತಿಲ್ಲ. ಹಾಗಾಗಿ ಸೆಪ್ಟೆಂಬರ್ 21ರೊಳಗಾಗಿ ಮೀಸಲಾತಿ ಕಲ್ಪಿಸದಿದ್ದರೆ ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶರಣಪ್ಪ ನಾಯಕ್, ವಿಜಯೇಂದ್ರ ಬಿಸರಳ್ಳಿ, ರುಕ್ಕಣ್ಣ ಸ್ಯಾವಿ, ಮಲ್ಲಪ್ಪ ಬೇಲೇರಿ ಮತ್ತಿತರರು ಇದ್ದರು.

ಸಹನಾ ಸಾಧನೆ: ಮಾಚೇನಹಳ್ಳಿ ಗ್ರಾಪಂನಿಂದ ಸನ್ಮಾನ, ಹಿತ್ತಲು ಗಿಡದ ಸಾಮರ್ಥ್ಯ ಅರಿಯುವ ಸಂದರ್ಭ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ; ಪಿಎಸ್‌ಐ ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ 26ನೇ ರ‍್ಯಾಂಕ್ ಪಡೆದ ಹಳ್ಳಿ ಹುಡುಗಿಗೆ ಭಾನುವಾರ ಸ್ಥಳೀಯ ಗ್ರಾಮ ಪಂಚಾಯತಿ ಸನ್ಮಾನ ಮಾಡಿದೆ. ತಮ್ಮೂರ ಹುಡುಗಿಯ ಸಾಧನೆಯನ್ನು ಮಾಧ್ಯಮಗಳಿಗೆ ತಲುಪಿಸಿದ ತೆಗ್ಗಿನ ಭಾವನೂರಿನ ಫಾರೂಕ್ ಕೋಟೆಹಾಳ ಸೇರಿ ಹಲವಾರು ಯುವಕರು ಈ ಸನ್ಮಾನದಲ್ಲಿ ತಮ್ಮೂರೇ ಗೆದ್ದಂತೆ ಪಾಲ್ಗೊಂಡಿದ್ದಾರೆ.

ಮಾಚೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಗ್ಗಿನ ಭಾವನೂರ ಗ್ರಾಮದ ಸಹನಾ ಅವರ ಸಾಧನೆ ನಮ್ಮ ಗ್ರಾಮ ಪಂಚಾಯತಿಗೆ ಗೌರವ ಮತ್ತು ಖುಷಿ ತಂದಿದೆ. ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಇನ್ನಷ್ಟು ಸೌಲಭ್ಯ ಒದಗಿಸಲು ಈ ಸಾಧನೆ ನಮಗೆ ಪ್ರೇರಣೆ ಆಗಿದೆ ಎಂದಿರುವ ಮಾಚೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಿರಿಯರು, ಮಾಜಿ ಸದಸ್ಯರು ಮತ್ತು ಯುವ ಮುಖಂಡರಾದ ಶಂಕರ ಮರಾಠಿ, ಆನಂದ ಮಾಳೆಕೊಪ್ಪ, ವೀರಣ್ಣ ಕೆಲೂರ ಹಾಗೂ ಖಾದರ್ ಕೋಟಿಹಾಳ ಸೇರಿದಂತೆ ಹಲವಾರು ಜನ ಸೇರಿ ಸಹನಾ ಅವರಿಗೆ ಹೃದಯಪೂರ್ವಕ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ ಪಿಎಸ್‌ಐ ಆದ ಕುಗ್ರಾಮದ ಯುವತಿ; ರಾಜ್ಯಕ್ಕೆ 26ನೇ ರ‍್ಯಾಂಕ್| ಕೋಚಿಂಗ್ ಇಲ್ಲ| ತನಗೆ ತಾನೇ ರೋಲ್ ಮಾಡೆಲ್

ವಿಜಯಸಾಕ್ಷಿ ಮೂಲಕ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಯುವತಿ ಸಹನಾ ಪಾಟೀಲರ ಸಾಧನೆ ಈಗ ನಾಡಿನ ತುಂಬ ಸುದ್ದಿಯಾಗಿದೆ. ನಮ್ಮ ವಿಜಯಸಾಕ್ಷಿ ಸಂಸ್ಥೆಯ ಫೇಸ್‌ಬುಕ್, ಟ್ವಿಟರ್ ಮತ್ತು ಇ-ಮೇಲ್ ಖಾತೆಗಳಿಗೆ ಸಹಸ್ರಾರು ಜನ ಪ್ರತಿಕ್ರಿಯಿಸಿ ಸಹನಾರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಕೇವಲ ಸಹನಾ ಗೆಲುವಷ್ಟೇ ಅಲ್ಲ, ಮಾತೃಭಾಷೆಯಲ್ಲಿ ಆರಂಭಿಕ ಶಿಕ್ಷಣ ನೀಡಬೇಕು ಎಂಬ ನಿಲುವಿಗೆ ದೊರೆತ ಜಯ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೌಲಭ್ಯ ಸಿಕ್ಕರೆ ಇನ್ನಷ್ಟು ಮಿಂಚಲಿದ್ದಾರೆ ಎಂದು ಹೇಳಿದ್ದಾರೆ.

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತು ಅರ್ಥರಹಿತ ಎಂಬುದನ್ನು ವಿಜಯಸಾಕ್ಷಿ ನಿರೂಪಿಸುತ್ತಲೇ ಹೋಗಲಿದೆ. ಸಹನಾರವರಿಗೆ ಮತ್ತೊಮ್ಮೆ ಅಭಿನಂದನೆಗಳು.

ಅಳಿದುಳಿದ ಬೆಳೆಗೆ ಈಗ ಮಂಗಗಳಿಂದ ‘ಗಾಯ’: ಮನುಷ್ಯರ ಕೆಟಗರಿಯಲಿರುವ ಜನಪ್ರತಿನಿಧಿಗಳೇ ಮಾಯ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ರೋಣ: ವಿಪರೀತ ಮಳೆಯಿಂದಾಗಿ ಬೆಳೆಯೆಲ್ಲ ನಾಶವಾಯಿತು. ಹಿಂದಾಗಡೆ ಬಿತ್ತಿದ್ದ ಬೆಳೆ ಜೀವ ಉಳಿಸಿಕೊಂಡಿತ್ತು. ಆದರೆ ಅಳಿದುಳಿದ ಬೆಳೆಗೆ ಮಂಗಗಳು ಮುತ್ತಿಗೆ ಹಾಕಿ, ರೈತರ ಬದುಕಿಗೆ ಕೊಳ್ಳೆ ಇಡುತ್ತಿವೆ. ಮನುಷ್ಯನ ಪೂರ್ವಜನಾದ ಈ ಮಂಗನ ಕಾಟ ತಪ್ಪಿಸಬೇಕಾದ, ‘ಮನುಷ್ಯ’ ಎಂಬ ಕೆಟಗರಿಯಲ್ಲಿರುವ ಜನಪ್ರತಿನಿಧಿಗಳು ಮಾತ್ರ ಮಾಯವಾಗಿ ಬಿಟ್ಟಿದ್ದಾರೆ.

ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಂಗಾಲಾಗಿರುವ ರೈತರಿಗೆ ಈಗ ಮಂಗಗಳ ಕಾಟ ಶುರುವಾಗಿದ್ದು ಇದರಿಂದ ಗ್ರಾಮದ ರೈತರು ಬೆಚ್ಚಿ ಬಿದ್ದಿದ್ದಾರೆ.

ಕಳೆದ ವಾರದಿಂದ ಗ್ರಾಮದಲ್ಲಿ ಮಳೆರಾಯ ತನ್ನ ಆರ್ಭಟ ತೋರಿಸುತ್ತ ಸಾಗಿದ್ದು, ಇನ್ನೂ ಮಳೆಯು ಕಾಟ ತಪ್ಪಿಲ್ಲ. ಇದರ ಜೊತೆಗೆ ಈಗ ಮಂಗಗಳ ಕಾಟ ಆರಂಭಗೊಂಡಿದ್ದು ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಅತಿಯಾದ ಮಳೆಯಿಂದ ಜಮೀನುಗಳಲ್ಲಿರುವ ಬೆಳೆಗಳಿಗೆ ತಂಪು ಹೆಚ್ಚಾಗಿ ಕೊಳೆಯುವ ಸ್ಥಿತಿ ಬಂದಿದ್ದು, ಬೆಳೆಗಳಿಗೆ ರೋಗ ಸಹ ತಗುಲಿಕೊಂಡಿದೆ. ವಿಪರೀತ ಮಳೆಗೆ ತಾಲೂಕಿನ ಕೆಲ ಗ್ರಾಮಗಳು ಸಹ ತತ್ತರಿಸಿದ್ದು ಹೋಗಿವೆ.

ಈ ಬಾರಿಯೂ ಈರುಳ್ಳಿ, ಮೆಣಸಿನಕಾಯಿ ಬೆಳೆ ಸಂಪೂರ್ಣ ಕೈ ಕೊಡುವ ಲಕ್ಷಣಗಳನ್ನು ಹೊಂದಿವೆ. ಇನ್ನೊಂದು ಕಡೆ, ಮಂಗಗಳ ಹಾವಳಿಗೆ ಜಮೀನುಗಳಲ್ಲಿರುವ ಬೆಳೆಗಳು ಉಳಿಯುತ್ತಿಲ್ಲ. ಮನೆಗಳಲ್ಲಿರುವ ಸರಂಜಾಮುಗಳು ಉಳಿಯುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಡ್ಡಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಮಾಜಿ ಶಾಸಕ ಜಿಎಸ್ ಪಾಟೀಲರು, ರೈತರ ನೆರವಿಗೆ ಬರಬೇಕು ಎಂದು ಆಡಳಿತವನ್ನು ಎಚ್ಚರಿಸಿದ್ದಾರೆ. ರೋಣದ ತಹಸೀಲ್ದಾರ್ ಜಕ್ಕನಗೌಡ್ರ ಮಾತ್ರ ಬಹುತೇಕ ತಹಸೀಲ್ದಾರ್ ಸಾಹೇಬರು ಬಾಯಿಪಾಠ ಮಾಡಿಕೊಂಡೇ ಬಂದಿರುವ, ‘ಗಮನಕ್ಕೆ ಬಂದಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂಬ ತಥಾಗತಿಥ ಡೈಲಾಗ್ ಹೊಡೆದಿದ್ದಾರೆ.

‘ಮಂಗಗಳೇ ವಾಸಿ ಬಿಡಿ’ ಎಂದು ಗ್ರಾಮಸ್ಥರು ಅಂದುಕೊಂಡರೆ, ಅದಕ್ಕಿನ್ನ ಅಸಹ್ಯ ಈ ಡೆಮಾಕ್ರಸಿಗೆ ಇನ್ ಏನಿದೆ?

‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’: ಹಿಂದಿ ಹೇರಿಕೆ ವಿರುದ್ಧ ಜೋರಾಯ್ತು ಅಭಿಯಾನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು; ಬಾಲಿವುಡ್‌ನಲ್ಲಿ ಅಪಾರ ಅವಕಾಶ, ಸಂಭಾವನೆ ಇರುವ, ದೇಶದ ಬಹುಪಾಲು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಬಹಮುಖ ಪ್ರತಿಭೆ, ಕನ್ನಡಿಗ ಪ್ರಕಾಶ ರೈ, ‘ನಂಗೆ ಹಿಂದಿ ಬರಲ್ಲ’ ಎಂಬ ಕನ್ನಡ ಟೀ ಶರ್ಟ್ ಹಾಕುವ ಮೂಲಕ ಹಿಂದಿ ಹೇರಿಕೆ ವಿರೋಧಿಸಿದ್ದಾರೆ.
ಅಮೆರಿಕದಲ್ಲೇ ವಿದ್ಯಾಭ್ಯಾಸ ಮಾಡಿ ಬಂದ ನಟ ಚೇತನ್ ಕೂಡ ಇಂತಹ ಪ್ರತಿಭಟನೆಯನ್ನೇ ಮಾಡಿದ್ದಾರೆ. ಇದರರ್ಥ ಪ್ರಕಾಶ ರೈ ತಮಿಳು ಅಥವಾ ಹಿಂದಿ ವಿರೋಧಿ ಎಂದಾಗುವುದಿಲ್ಲ, ಚೇತನ್ ಸಂಪೂರ್ಣ ಹಿಂದಿ ಎಂದೂ ಆಗಲ್ಲ. ನಮ್ಮತನ ಉಳಿಯಬೇಕೆಂದರೆ, ನಾವು ಇಂತಹ ನಿರ್ಧಾರ ತೆಗೆದುಕೊಳ್ಳಲೇಬೇಕು.

ತಮಿಳುನಾಡಿನಲ್ಲಿ ತಮಿಳು ಪರ ನಿಂತ ನಟ, ನಿರ್ದೇಶಕರನ್ನು ರೈ, ಚೇತನ್ ಸ್ವಾಗತಿಸಿದ್ದಾರೆ, ಕನ್ನಡ ಪರ ನಿಂತ ರೈ, ಚೇತನ್ ಅವರನ್ನು ದಕ್ಷಿಣದ ಎಲ್ಲ ಭಾಷೆಗಳ ಚಿತ್ರರಂಗ ಮತ್ತು ಸಾಹಿತ್ಯ ವಲಯದ ಪ್ರಮುಖರು ಬೆಂಬಲಿಸಿದ್ದಾರೆ.

ಇಲ್ಲಿ ಯಾವುದೋ ಒಂದು ಪಾರ್ಟಿ, ಪಕ್ಷಕ್ಕೆ ತಮ್ಮ ಆತ್ಮಗೌರವ ಮಾರಿಕೊಂಡಿರುವ ಕೆಲವು ‘ಸುಶಿಕ್ಷಿತರು’ ಆ ಪಾರ್ಟಿಯನ್ನು, ಅದರ ನಾಯಕನನ್ನು ಕುರುಡರಂತೆ ಆರಾಧಿಸುತ್ತಿದ್ದಾರೆ. ಅವರ ಅಂಧಭಕ್ತಿ ಎಷ್ಟು ತಳಮಟ್ಟಕ್ಕೆ ಮುಟ್ಟಿದೆ ಎಂದರೆ, ಹಿಂದಿ ಹೇರಿಕೆಯನ್ನು ವಿರೋಧಿಸುತ್ತಿರುವ ಕೋಟ್ಯಂತರ ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು, ಭೋಜ್‌ಪುರಿಗಳು ಮತ್ತು ಈಶಾನ್ಯ ಭಾರತದ ಹತ್ತಾರು ಭಾಷಿಕರನ್ನೆಲ್ಲ ಅವರು ದೇಶದ್ರೋಹಿ ಎನ್ನುವ ಮಟ್ಟಕ್ಕೆ ಮುಟ್ಟಿದ್ದಾರೆ.

ತಮ್ಮ ಮಾತೃಭಾಷೆ, ಆಡುಭಾಷೆಗೆ ಗೌರವ ಕೊಡದ ಈ ಜನರು ಇಡೀ ದೇಶದಲ್ಲಿ ಏಕ ಸಂಸ್ಕೃತಿ, ಏಕ ಭಾಷೆ ಎಂಬ ಸಂವಿಧಾನ ವಿರೋಧಿ ಅಜೆಂಡಾದ ಪ್ರತಿಪಾದಕರೇ ಆಗಿದ್ದಾರೆ.

‘ನಮ್ಮ ಪ್ರಾದೇಶಿಕ ಭಾಷೆ ಪರ ನಾವು ಮಾತನಾಡುತ್ತೇವೆ. ಅದು ನಮ್ಮ ಹಕ್ಕು ಮತ್ತು ಕರ್ತವ್ಯ. ಹಿಂದಿಯೂ ಒಂದು ಗೌರವಯುತ ಭಾಷೆ. ಆದರೆ ಅದನ್ನು ಹೇರುವುದನ್ನು ನಾವು ಸಹಿಸಲ್ಲ’ –ಎಂದು ನಾವೆಲ್ಲ ಕನ್ನಡಿಗರಾಗಿ ಆತ್ಮವಿಶ್ವಾಸದಿಂದ ಹೇಳೋಣ.

ಇದನ್ನೂ ಸಹಿಸದ ಸ್ನೇಹಿತರನ್ನು ಕರೆದು ಕೂಡಿಸಿಕೊಂಡು ಮಾತಾಡೋಣ, ಮೊದಲು ನಿನ್ನ ‘ಏಕ ಸಂಸ್ಕೃತಿಯ ಪಕ್ಷದ ವಿಚಾರ ಬಿಡು ಮಾರಾಯ. ಆ ಪಕ್ಷದ ಪರ ಸಂದೇಶ ಹಾಕಿ ಪ್ರತಿ ಸಂದೇಶಕ್ಕೆ 2 ರೂ.ಗೆ ಮಾರಿಕೊಂಡವರ ಹುನ್ನಾರ ಇದು. ನೀನು ಆ ಸಾಲಿಗೆ ಸೇರಬೇಡ’ ಎಂದು ಹೇಳುವ ಮೂಲಕ ನಮ್ಮ ವಲಯದಲ್ಲೇ ಇರುವ ‘ಈ ಏಕ ಸಂಸ್ಕೃತಿಯ’ ಹುಂಬ ಆರಾಧಕರನ್ನು ಬದಲಿಸೋಣ ಅಲ್ಲವೆ?

‘ಬಂಡಾಯದ’ ಊರಲ್ಲಿ ಭೂಕುಸಿತ ನಿಲ್ಲಲಿಲ್ಲ: ಕಲ್ಲು-ಮಣ್ಣು ಒಯ್ದ ಭೂಗರ್ಭ ತಜ್ಞರ ಸುದ್ದಿನೇ ಇಲ್ಲ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನರಗುಂದ: ಪಟ್ಟಣದ ಅರ್ಬಾಣ, ಹಗೇದಕಟ್ಟಿ, ಕಸಬಾ, ಜಗದ ಓಣಿ, ಸಿದವಿನಬಾವಿ ಓಣಿ ಮತ್ತು ಟಿಎಂಸಿ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಳೆದ ಎರಡು ತಿಂಗಳಿನಿಂದ ಅಂರ್ತಜಲ ಕುಸಿತದಿಂದ ದೊಡ್ಡ ಕಂದಕಗಳು ಉಂಟಾಗಿ ಜನಜೀವನ ಭಯ ಪಡುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ.

ಕಳೆದ ಐದಾರು ವರ್ಷಗಳಿಂದ ಪದೇಪದೇ ಇಲ್ಲಿ ಭೂಕುಸಿತ ಸಂಭವಿಸುತ್ತಲೇ ಇದೆ. ಆ ಕಾಲದ ಬಂಡಾಯವೇ ಮಾಯವಾಗಿರುವ ಈ ಹೊತ್ತಿನಲ್ಲಿ ಜನರಿಗೂ ಇದು ದೊಡ್ಡ ಸಮಸ್ಯೆ ಎನಿಸಿಲ್ಲವೊ ಅಥವಾ ಇಲ್ಲಿನ ಶಾಸಕರ ಗೌಡಿಕಿ ಆ ಜನಧ್ವನಿಯನ್ನು ಹತ್ತಿಕ್ಕುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿ ಭೂಕುಸಿತ ಸಹಜ ಎಂಬಂತೆ ಜನಜೀವನ ಸಾಗಿದೆ, ಭಯದಲ್ಲಿ, ಆತಂಕದಲ್ಲಿ!

ಪಟ್ಟಣದ ಟಿಎಂಸಿ ರಸ್ತೆ ಬದುವಿನಲ್ಲಿರುವ ಶಿವಪ್ಪ ನೀಲವಾಣಿ ಅವರ ಮನೆ ಎದುರು ಸೆ. 12ರಂದು ಆಳವಾದ ಗುಂಡಿ ಬಿದ್ದಿದೆ. 2019ರಲ್ಲಿ ಕೆಲ ತಿಂಗಳು ಈ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಪುನ: 2020ರಲ್ಲಿ ಮತ್ತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಾರಣ ನಿಖರ ಮಾಹಿತಿ ಇನ್ನೂ ತಿಳಿದಿಲ್ಲ.

ಈ ಮಾಹಿತಿ ಅಗೆದು ಬಗೆದು ಶೋಧಿಸಲೆಂದೇ ಇಲ್ಲಿನ ಶಾಸಕರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಿ.ಸಿ. ಪಾಟೀಲರು ತಮ್ಮದೇ ಉಸ್ತುವಾರಿಯಲ್ಲಿರುವ ಗಣಿ ಇಲಾಖೆಯ ಭೂಗರ್ಭ ತಜ್ಞರ ಒಂದು ಪಡೆ ಕರೆಸಿದ್ದರು. ಅವರೊಂದಿಷ್ಟು ಮಣ್ಣು ಕಲೆ ಹಾಕಿಕೊಂಡು ಹೋದವರು ಪತ್ತೆನೇ ಇಲ್ಲ. ಅವರು ವರದಿ ಬರೆದರೋ ಇಲ್ಲವೋ ದೇವರೇ ಬಲ್ಲ.

ಈ ‘ಅಪೂರ್ವ’ ಅಧ್ಯಯನಕ್ಕೂ ಮೊದಲು ಹಿಂದಿನ ಶಾಸಕರ ಅವಧಿಯಲ್ಲೂ ಕೆಲವು ಅಧ್ಯಯನ ನಡೆದಿವೆ. 2019ರಿಂದ ಇದುವರೆಗೂ ನಾಲ್ಕಾರು ಭಾರಿ ಭೂಗರ್ಭ ಶಾಸ್ತ್ರಜ್ಞರು ಅಧ್ಯಯನ ಮಾಢಿ ಕೆಲ ‘ಉಪಯುಕ್ತ’ ಕಲ್ಲು, ಮಣ್ಣು ಮತ್ತು ಇತರ ಪರಿಕರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಎರಡು ತಿಂಗಳಿನಲ್ಲಿ ಈ ಮಾಹಿತಿ ಅಧ್ಯಯನ ಮಾಢಿ ವರದಿ ನೀಡುವುದಾಗಿ ಪುರಸಭೆಗೆ ತಿಳಿಸಿ ಹೋದ ಭೂಗರ್ಭ ತಜ್ಞರು ಮುಂದೆ ಸುದ್ದಿನೇ ಇಲ್ಲ. ಕೆಲವರು ಗುಡ್ಡದ ಬದಿಯಲ್ಲಿಯ ಕುಡಿಯುವ ನೀರಿನ ಕೆರೆ ನೀರು ತೆಗೆಸಲು ತಿಳಿಸಿದ್ದರು.
ಅದರಂತೆ ಪುರಸಭೆ ಆಡಳಿತ ಮಂಡಳಿ ನೀರು ತೆಗೆಸಿದ್ದು ಆಯಿತು. ಆದರೆ ಭೂಕುಸಿತ ನಿಲ್ಲುತಿಲ್ಲ. ಆಗಾಗ ಕಂದಕಗಳು ಉಂಟಾಗುತ್ತಲೇ ಇವೆ.

ಕಂದಕ ಉಂಟಾದ ಜಾಗೆಯಲ್ಲಿ ಅನೇಕ ಟ್ರ್ಯಾಕ್ಟರ್ ಗಳು ಮತ್ತು ಚಕ್ಕಡಿಗಳು ಸಿಲುಕಿದ್ದಲ್ಲದೇ ಜನತೆಯೂ ತೆಗ್ಗಿನಲ್ಲಿ ಬಿದ್ದು ಅಪಾಯದಿಂದ ಪಾರಾಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಕುರುಬಗೇರಿ ಓಣೆಯ ಶಾಲಾ ವಿದ್ಯಾರ್ಥಿನಿಯೊಬ್ಬಳು ಕಂದಕದಲ್ಲಿ ಬಿದ್ದು ಪ್ರಾಣಾಪಾಯದಿಂದ ಹೊರಬಂದಿದ್ದಾಳೆ.

ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಭೂಗರ್ಭ ಶಾಸ್ತ್ರಜ್ಞರು ಭೂ ಕುಸಿತದ ಪರಿಣಾವೇನು, ಏತಕ್ಕೆ ಹೀಗಾಗುತ್ತಿದೆ ಎಂಬುದರ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿ ಇದುವರೆಗೂ ನೀಡಿಲ್ಲವೆಂಧು ಪತ್ರಿಕೆಗೆ ತಿಳಿಸಿದ್ದಾರೆ.

ಸಾವು-ನೋವು ಸಂಭವಿಸಿದ ನಂತರವಷ್ಟೇ ಆಡಳಿತಕ್ಕೆ ಎಚ್ಚರವಾಗುತ್ತದೆ ಎಂದು ಕಾಣುತ್ತದೆ.

ಇಂದಿನಿಂದ ಅಧಿವೇಶನ:  ಕೊರೋನಾ ನೆಪದಲ್ಲೊಂದು ಕಾಟಾಚಾರ?

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇಂದಿನಿಂದ 18 ದಿನಗಳ ಅವಧಿಯ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ. ಮಾರ್ಚ್ 25ರಂದು ಲಾಕ್‌ಡೌನ್ ಘೋಷಣೆಗೂ ಮೊದಲು ಮಾರ್ಚ್ 22ರಂದು ಸಂಸತ್‌ನ ಕೊನೆ ಅಧಿವೇಶನ ನಡೆದಿತ್ತು. ಸುಮಾರು 6 ತಿಂಗಳು ನಂತರ ಈಗ ಮತ್ತೆ ಮುಂಗಾರು ಅಧಿವೇಶನ ಶುರುವಾಗುತ್ತಿದೆ.

ಕೊವಿಡ್ ಮಾರ್ಗಸೂಚಿಗಳ ಅನ್ವಯ ಕಲಾಪಕ್ಕೆ ಏರ್ಪಾಡು ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡ ಬೇಕಿರುವುದರಿಂದ  ಏಕಕಾಲಕ್ಕೆ ಎಲ್ಲ ಸಂಸದರು ಕೂಡಲು ಆಗುವುದಿಲ್ಲ. ಹೀಗಾಗಿ ಲೋಕಸಭೆ ಮತು ರಾಜ್ಯಸಭೆಗಳು ತಮ್ಮ ಅಧಿವೇಶನದ ಸಭಾಂಗಣವನ್ನು ಹಂಚಿಕೊಳ್ಳಬೇಕಿದೆ. ಹೀಗಾಗಿ ಶಿಫ್ಟ್ ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ನಡೆಯಲಿವೆ. ಕೆಲವು ನೂರು ಸಂಸದರು ಪಕ್ಕದ ಹಾಲ್‌ನಿಂದ ವರ್ಚುವಲ್ ಕಲಾಪದಲ್ಲಿ ಭಾಗಿಯಾಗಬೇಕಿದೆ.

ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 785 ಸದಸ್ಯರ ಪೈಕಿ 200ಕ್ಕೂ ಹೆಚ್ಚು ಜನ 65 ವಯಸ್ಸು  ದಾಟಿದವರಿದ್ದಾರೆ. ಸುಮಾರು 24 ಸಂಸದರು ಕೊವಿಡ್ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಪಕ್ಷ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದಾರೆ. ಅವರ ಜೊತೆ ಅವರ ಪುತ್ರ ಸಂಸದ ರಾಹುಲ್ ಗಾಂಧಿ ಕೂಡ ಹೋಗಿದ್ದಾರೆ.
ಗೃಹ ಸಚಿವ ಅಮಿತ್ ಶಾ ಏಮ್ಸ್ ನಲ್ಲಿದ್ದಾರೆ. ಇದೆಲ್ಲದರ ಜೊತೆಗೆ ಖಾಯಂ ಚಕ್ಕರ್ ಹೊಡೆಯುವ ಸಂಸದರ ಲಿಸ್ಟೂ ದೊಡ್ಡದೇ ಇದೆಯೆನ್ನಿ.

ಜೂನ್‌ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಯತ್ನಿಸಲಿದೆ. ಕುಸಿದ ಆರ್ಥಿಕತೆ, ಕೊವಿಡ್ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆ ಕುರಿತು ವಿಪಕ್ಷಗಳು ಯುದ್ಧ ಸಾರಲಿವೆ. ಬಹುಮುಖ್ಯವಾದ ಪ್ರಶ್ನೋತ್ತರ ಅವಧಿಯೇ ಇಲ್ಲವಾದ್ದರಿಂದ ಇದು ಆಡಳಿತ ಪಕ್ಷಕ್ಕೆ ಅನುಕೂಲವಾಗವ ಅಧಿವೇಶನವೇ ಆಗಲಿದೆ.

error: Content is protected !!