Home Blog Page 2178

ಮಂಗಳವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ದೆಹಲಿಯಲ್ಲಿ ಗರಿಷ್ಠ 54,760, ಮುಂಬೈಯಲ್ಲಿ ಕನಿಷ್ಠ 51,300 ರೂ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,760 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,950 ರೂ., 24 ಕ್ಯಾರಟ್: 53,400 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,831 ರೂ., 24 ಕ್ಯಾರಟ್:53,270 ರೂ.

ಹೆಲ್ಮೆಟ್ ಹಾಕದಿದ್ದರೆ ದಂಡ: ತಪ್ಪಿಸಿಕೊಳ್ಳಿ ತಲೆದಂಡ! ಜಿಲ್ಲಾ ಪೊಲೀಸರ ಕಟ್ಟುನಿಟ್ಟಿನ ಕ್ರಮ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಸೋಮವಾರದಿಂದ ಪೊಲೀಸರು ದ್ವಿಚಕ್ರ ವಾಹನ ಸವಾರರ ತಲೆ ಮೇಲೆ ಕಣ್ಣಿಟ್ಟಿದ್ದಾರೆ. ಅವರ ಉದ್ದೇಶ ಸವಾರರನ್ನು ಟಾರ್ಗೆಟ್ ಮಾಡುವುದಲ್ಲ, ಬದಲಿಗೆ ನಿಮ್ಮ ತಲೆ ಕಾಯ್ದು ನಿಮ್ಮ ಜೀವ ರಕ್ಷಣೆ ಮಾಡುವುದೇ ಆಗಿದೆ.

ಲಾಕ್‌ಡೌನ್ ನಂತರ ಹೆಚ್ಚುತ್ತಿರುವ ಬೈಕ್ ಅಪಘಾತಗಳು ಮತ್ತು ಸಾವುಗಳ ಪ್ರಮಾಣವನ್ನು ಅಧ್ಯಯನ ಮಾಡಿಯೇ ಜಿಲ್ಲಾ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಕಳವಳದ ವಿಷಯ ಏನೆಂದರೆ, ಹೆಲ್ಮೆಟ್ ವಿಷಯದಲ್ಲಿ ಯುವಕರ ಉಡಾಫೆ, ನಿರ್ಲಕ್ಷ್ಯತನ ಮತ್ತು ಮೊಂಡಾಟ ಎಂದಿನಿಂದಲೂ ಹಾಗೇ ಇದೆ. ಇದಕ್ಕೆ ಸೋಮವಾರ ಹೆಲ್ಮೆಟ್ ಧರಿಸದೇ ಸಿಕ್ಕಿಬಿದ್ದವರ ಸಂಖ್ಯೆಯನ್ನೇ ನೀಡಬಹುದು.

ಸೆಪ್ಟೆಂಬರ್ 17ರಿಂದಲೇ ಪೊಲೀಸರು ಜಾಗೃತಿ ಮೂಡಿಸುತ್ತ ಬಂದಿದ್ದರು. ಸೆ. 21ರಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯ, ಇಲ್ಲದಿದ್ದರೆ ದಂಡ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಆದರೆ, ಸೋಮವಾರ ಆಗಿದ್ದೇನು? ನಗರದಲ್ಲಿ 207 ಹೆಲ್ಮೆಟ್ ಧರಿಸದ ಪ್ರಕರಣ ದಾಖಲಾಗಿದ್ದು, 1 ಲಕ್ಷ 3 ಸಾವಿರದ 500 ರೂ. ದಂಡ ವಸೂಲಿ ಮಾಡಲಾಗಿದೆ. ಪೊಲೀಸರು ಇರುವ ವೃತ್ತಗಳನ್ನು ತಪ್ಪಿಸಿ ಸವಾರಿ ಮಾಡಿದವರ ಸಂಖ್ಯೆ ಇನ್ನೂ ಹೆಚ್ಚಿದೆ.

    ಯಾಕಿಷ್ಟು ಬೇಜವಾಬ್ದಾರಿತನ?

ಬೈಕ್ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದರೆ ಉಳಿಯುವುದೇ ಅಪರೂಪ. ದೇಹದ ಇತರ ಭಾಗಗಳಿಗೆ ಪೆಟ್ಟು ಬಿದ್ದರೆ ವೈದ್ಯರು ಸರಿಪಡಿಸಬಹುದು. ಕೆಲವೊಮ್ಮೆ ಸಣ್ಣಪುಟ್ಟ ನೋವು ಹಾಗೇ ಉಳಿಯಬಹುದು. ಆದರೆ ತಲೆ ಹಾಗಲ್ಲ, ಅದು ತುಂಬ ಸೂಕ್ಷ್ಮ ಭಾಗ. ಮನುಷ್ಯನ ಅಸ್ತಿತ್ವದ ಪ್ರಧಾನ ಕುರುಹು ಆಗಿರುವ ಮೆದುಳನ್ನು ಸಂರಕ್ಷಿಸಿರುವ ಜಾಗ ತಲೆ. ಆ ತಲೆಯನ್ನೇ ನಾವು ಸಂರಕ್ಷಿಸಿಕೊಳ್ಳದಿದ್ದರೆ ಹೇಗೆ?

ಬೈಕ್ ಅಪಘಾತದಲ್ಲಿ ಬಿದ್ದಾಗ, ಗಟ್ಟಿಯಾದ ಭೌತಿಕ ವಸ್ತು ಅಂದರೆ ಕಲ್ಲು, ಟಾರ್ ರಸ್ತೆ, ರಸ್ತೆ ವಿಭಜಕ, ಎದುರಿನ ವಾಹನದ ಭಾಗ, ವಿದ್ಯುತ್ ಕಂಬಗಳಿಗೆ ತಲೆ ಬಡಿದಾಗ ಅದು ನೇರವಾಗಿ ಮೆದುಳಿಗೇ ಹೊಡೆತ ಕೊಡುತ್ತದೆ. ಬಿದ್ದ ವ್ಯಕ್ತಿಯ ತಲೆಯ ಚಲನೆ ನಿಂತರೂ, ಒಳಗೆ ಮೆದುಳು ಚಲಿಸುತ್ತ ಬುರುಡೆಗೆ ಡಿಕ್ಕಿ ಹೊಡೆಯುತ್ತದೆ, ತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ ಇನ್ನೊಂದು ಬದಿಯ ಬುರುಡೆಗೆ ಬಡಿಯುತ್ತದೆ.

ಮೆದುಳು ಮೆತ್ತಗಿರಹುದು, ಆದರೆ ಬುರುಡೆ ಕಲ್ಲಿನಂತಿರುತ್ತದೆ. ಈ ಎರಡು ಹೊಡೆತಗಳನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಮೆದುಳಿಗೆ ಇಲ್ಲ. ಮೆದುಳು ನಿಷ್ಕ್ರಿಯವಾದರೆ ಅಲ್ಲಿಗೆ ಮನುಷ್ಯನ ಅಸ್ತಿತ್ವವೂ ಕೊನೆಯಾದಂತೆಯೇ.

ಹಾಗಾಗಿ ಅಪಘಾತದಲ್ಲಿ ತಲೆ ರಕ್ಷಿಸಿಕೊಳ್ಳುವುದು ಎಂದರೆ ಅದು ಜೀವ-ಪ್ರಾಣವನ್ನು ಕಾಪಾಡಿಕೊಂಡಂತೆ, ನಿಮ್ಮ ಭೌತಿಕ ಅಸ್ತಿತ್ವವನ್ನು ಜೋಪಾನವಾಗಿ ಕಾಯ್ದುಕೊಂಡಂತೆ. ಇದಕ್ಕಿರುವ ಒಂದೇ ಮಾರ್ಗ ನಿಮ್ಮ ತಲೆ ಕಾಯ್ದುಕೊಳ್ಳಿ. ಅದಕ್ಕಿರುವ ಒಂದೇ ಮಾರ್ಗ ಹೆಲ್ಮೆಟ್ ಧರಿಸುವುದೊಂದೇ ಆಗಿದೆ. ಹೆಲ್ಮೆಟ್ ಧರಿಸಿ, ನಿಮ್ಮ ತಲೆಯೊಂದಿಗೆ ಜೀವವನ್ನೂ ಕಾಪಾಡಿಕೊಳ್ಳಿ.

ಇಲಾಖೆ ನಡೆಸಿದ ಅಧ್ಯಯನ ಮತ್ತು ವಿಶ್ಲೇಷಣೆ ಪ್ರಕಾರ, ಜಿಲ್ಲೆಯಲ್ಲಿ ಲಾಕ್‌ಡೌನ್ ನಂತರ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಿದೆ. ದಿನಕ್ಕೆ ಸರಾಸರಿ ಎರಡು ಸಾವು ಸಂಭವಿಸುತ್ತವೆ. ಹೀಗಾಗಿ ಈಗ ಕಟ್ಟುನಿಟ್ಟಾಗಿ ಹೆಲ್ಮೆಟ್ ಕಡ್ಡಾಯ ಮಾಡುತ್ತಿದ್ದೇವೆ. ಸದ್ಯ ಅವಳಿ ನಗರದಲ್ಲಿ ಮಾತ್ರ ಜಾರಿ ಮಾಡಿದ್ದು, ಜಿಲ್ಲೆಯಾದ್ಯಂತ ವಿಸ್ತರಿಸುತ್ತೇವೆ. ಬರುವ ದಿನಗಳಲ್ಲಿ ಡಿಎಲ್, ವಾಹನ ವಿಮೆ ಇತ್ಯಾದಿ ಎಲ್ಲ ನಿಯಮಗಳನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಯುವಕರು ಹೆಲ್ಮೆಟ್ ಧರಿಸುವುದರ ಮೂಲಕ ತಮ್ಮ ಜೀವದ ಬಗ್ಗೆ ಕಾಳಜಿ ವಹಿಸಲಿ.

-ಎನ್. ಯತೀಶ್, ಎಸ್ಪಿ

    ಖಡಕ್ ಕಮಲಮ್ಮ ಆನ್ ಡ್ಯೂಟಿ

ಸಂಚಾರ ಪೊಲೀಸ್ ವಿಭಾಗದ ಪಿಎಸ್‌ಐ ಕಮಲಮ್ಮ ದೊಡ್ಡಮನಿಯವರಿಗೆ ಬೈಕ್ ಸವಾರರ ಹೇರ್‌ ಸ್ಟೈಲ್ ಕಾಣಬಾರದು. ಅವರಿಗೇನೂ ನಿಮ್ಮ ಮೇಲೆ ಹೊಟ್ಟೆಕಿಚ್ಚಿಲ್ಲ. ಗಂಡನಿಗೇ ದಂಡ ಹಾಕಿದ ಖಡಕ್ ಅಧಿಕಾರಿ ಕಮಲಮ್ಮ. ನಿಮ್ಮ ಜೀವ ಉಳಿಸಲು ಅವರು ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ದಂಡದ ಜೊತೆ ಬುದ್ಧಿವಾದವೂ ಪಕ್ಕಾ. ಕಮಲಮ್ಮ ದಂಡ ಹಾಕ್ತಾರಂತ ಸ್ಪೀಡ್ ಆಗಿ ತಪ್ಪಿಸಿಕೊಳ್ಳಲು ಮುಂದಾಗಬೇಡಿ. ಇದೆಲ್ಲ ಏಕೆ, ಸುಮ್ನೆ ಹೆಲ್ಮೆಟ್ ಹಾಕಿ. ಇದು ನಿಮ್ಮ ವಿಜಯಸಾಕ್ಷಿ ಕಳಕಳಿ.

ಜಿಲ್ಲೆಯಲ್ಲಿ 81 ಜನರಿಗೆ ಸೋಂಕು; 112 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 21 ರಂದು 81 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

81 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8447 ಕ್ಕೇರಿದೆ. ಇಂದು 112 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7478 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 846 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 123 ಜನರು ಮೃತಪಟ್ಟಿದ್ದಾರೆ.

ಗದಗ-51, ಮುಂಡರಗಿ-11, ನರಗುಂದ-02, ರೋಣ-14, ಶಿರಹಟ್ಟಿ-03 ಸೇರಿದಂತೆ 81 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ವೆಂಕಟೇಶ ಟಾಕೀಸ್ ಹತ್ತಿರ, ಅಬ್ಬಿಗೇರಿ ಕಾಂಪೌಂಡ್, ಬಸಪ್ಪ ನಗರ, ಗಂಜಿ ಬಸವೇಶ್ವರ ವೃತ್ತ, ಕಳಸಾಪುರ ರಸ್ತೆ, ಹನುಮಾನ ನಗರ, ಡಿ.ಸಿ.ಆಫೀಸ ಹಿಂದುಗಡೆ, ಭರಮಗೌಡ ದೇವಸ್ಥಾನದ ಹತ್ತಿರ, ವಿಶ್ವೇಶ್ವರಯ್ಯ ನಗರ, ಜರ್ಮನ ಆಸ್ಪತ್ರೆ ಹತ್ತಿರ, ಹೊಸಮಠ ಆಸ್ಪತ್ರೆ ಹತ್ತಿರ, ಮುಳಗುಂದನಾಕಾ, ಅಂಬೇಡ್ಕರ ನಗರ, ಗಾಂಧಿ ನಗರ, ಜೆ.ಟಿ.ಮಠ ರಸ್ತೆ, ವೀರಭದ್ರೇಶ್ವರ ದೇವಸ್ಥಾನ ಹತ್ತಿರ, ಹೆಲ್ತ್ ಕ್ಯಾಂಪ್, ಹುಡ್ಕೋ ಕಾಲೋನಿ, ಕೆ.ಸಿ.ರಾಣಿ ರಸ್ತೆ,

ಗದಗ ತಾಲೂಕಿನ ನರಸಾಪುರ, ಮುಳಗುಂದ, ಯಲಿಶಿರುಂಜ, ಹೊಂಬಳ, ಹುಲಕೋಟಿ, ಬಿಂಕದಕಟ್ಟಿ, ಹರ್ಲಾಪುರ, ಶ್ಯಾಗೋಟಿ, ಹಾತಲಗೇರಿ, ಎಲ್.ಆಯಿ.ಸಿ ಆಫೀಸ ಹತ್ತಿರ, ಶಿರುಂಜ,

ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರ, ಮುಂಡರಗಿ ತಾಲೂಕಿನ ಚುರ್ಚಿಹಾಳ, ಕಲಕೇರಿ, ಬೂದಿಹಾಳ, ಬಾಗೇವಾಡಿ, ಡಂಬಳ

ನರಗುಂದ ಪಟ್ಟಣದ ಟಿ.ಎಲ್.ಎಚ್. ನರಗುಂದ ತಾಲೂಕಿನ ತಡಹಾಳ,

ರೋಣ ತಾಲೂಕಿನ ಸವಡಿ, ಬಿದರಳ್ಳಿ, ಇಟಗಿ, ಮಲ್ಲಾಪುರ, ಮಾಡಲಗೇರಿ, ಹೊಳೆಆಲೂರ, ನರೇಗಲ್,

ಗಜೇಂದ್ರಗಡ ಪಟ್ಟಣದ ಕೆ.ವಿ.ಜಿ.ಬ್ಯಾಂಕ್ ಹತ್ತಿರ, ಕೆಳಗಲ್ ಪೇಟ, ಪೊಲೀಸ್ ಠಾಣೆ,

ಶಿರಹಟ್ಟಿ ತಾಲೂಕಿನ ಹೆಬ್ಬಾಳ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣ,

ಶಕ್ತಿಕೇಂದ್ರದಲ್ಲಿ ಅಧಿವೇಶನ ಶುರು: ಬೀದಿಯಲ್ಲಿ ಜನಶಕ್ತಿಯ ಪ್ರತಿರೋಧ ಚಾಲೂ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಎನಿಸಿರುವ ವಿಧಾನಸೌಧದಲ್ಲಿ ಅಧಿವೇಶನ ಶುರುವಾಗಿದೆ. ಇತ್ತ ಬೆಂಗಳೂರಿನ ಬೀದಿಯಲ್ಲಿ ಜನಶಕ್ತಿ ಪ್ರತಿಬಿಂಬಿಸುವ ಜನತಾ ಅಧಿವೇಶನವೂ ಚಾಲೂ ಆಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ರೈತರು, ಕಾರ್ಮಿಕರು, ದಲಿತರು ಮತ್ತು ಭೂ-ವಸತಿ ವಂಚಿತರು-ಹೀಗೆ ಅನ್ಯಾಯಕ್ಕೆ ಒಳಗಾದ ಎಲ್ಲ ಸಮುದಾಯಗಳ ಜನತೆ ರಾಜಧಾನಿಯಲ್ಲಿ ಇಂದಿನಿಂದ ಜನತಾ ಅಧಿವೇಶನ ಆರಂಭಿಸಿದ್ದಾರೆ.

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಜ್ಯದ ಹಲವು ಸಂಘಟನೆಗಳು ಸೋಮವಾರ ಬೆಂಗಳೂರಿನಲ್ಲಿ ಐಕ್ಯ ಹೋರಾಟವನ್ನು ಹಮ್ಮಿಕೊಂಡಿವೆ.

ರಾಜ್ಯ ಸರ್ಕಾರ ಈ ಕೂಡಲೇ ರೈತವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯದಿದ್ದರೆ, ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಉಳಿಯುವುದಿಲ್ಲ ಎಂದು ಈ ಸಂಘಟನೆಗಳ ನಾಯಕರು ಎಚ್ಚರಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಈಗಾಗಲೇ ಸುಗ್ರೀವಾಜ್ಞೆ ಮೂಲಕ ತಂದಿರುವ ಕೆಲವು ಮಸೂದೆಗಳಿಗೆ ಅಧಿಕೃತವಾಗಿ ಅಂಗೀಕಾರ ಪಡೆಯುವ ಸಾಧ್ಯತೆಯಿದೆ. ಇದರಲ್ಲಿ ಕೃಷಿ ಸಂಬಂಧಿತ ಮಸೂದೆಗಳೂ ಸೇರಿದ್ದು, ಅವುಗಳು ರೈತವಿರೋಧಿಯಾಗಿವೆ ಎಂದು ರಾಜ್ಯದಾದ್ಯಂತ ಇರುವ ರೈತ, ದಲಿತ, ಕಾರ್ಮಿಕ ಮತ್ತು ಇತರ ಸಂಘಟನೆಗಳು ಒಟ್ಟಾಗಿ ಸೋಮವಾರದಿಂದ ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಂಡಿವೆ.

ಈ ಅನಿರ್ದಿಷ್ಟಾವಧಿ ಧರಣಿಯಲ್ಲಿ ಜನತಾ ಅಧಿವೇಶನ ನಡೆಸಿ, ಚರ್ಚೆ, ಸಂವಾದಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 39 ಸಂಘಟನೆಗಳ ಹೋರಾಟಗಾರರು ಸೇರಿದಂತೆ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಯೋಗೇಂದ್ರ ಯಾದವ್, ಸಾಹಿತಿ ದೇವನೂರು ಮಹಾದೇವ, ವಿಶ್ರಾಂತ ನ್ಯಾ. ಎಚ್.ಎನ್.ನಾಗಮೋಹನದಾಸ್, ಅಖಿಲಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ ಡಾ.ಅಶೋಕ್ ದಾವಲೆ, ನೂರ್ ಶ್ರೀಧರ್, ಎಸ್.ಆರ್.ಹಿರೇಮಠ್, ಶಿವಕುಮಾರ್ ಕಕ್ಕಾಚಿ, ಮೈಕೆಲ್ ಬಿ.ಫರ್ನಾಂಡೀಸ್ ಸೇರಿಂದಂತೆ ಹಲವಾರು ಚಿಂತಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾನವೀಯತೆ ಮರೆತ ಆರೋಗ್ಯ ಇಲಾಖೆ

0

-ಕೊರೊನಾ ಸೋಂಕಿತನ ಶವವನ್ನ ಹಗ್ಗದಿಂದ ಎಳೆಯುವ ಪ್ರಯತ್ನದ ಆರೋಪ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಇದುವರೆಗೂ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನ ಗಮನಿಸಿದ್ದೇವೆ. ಈಗ ಸೋಂಕಿನ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹಾಗೆಯೇ ಸೋಂಕಿತರ ಶವಗಳ ಅಮಾನವೀಯ ಸಂಸ್ಕಾರ ಪ್ರಕರಣಗಳು ಕಂಡು ಬರುತ್ತಿವೆ.
ಇಂಥದೊಂದು ಪ್ರಕರಣ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಳ್ಳಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟು ಕಳೆದ ಮೂರ್ನಾಲ್ಕು ದಿನಗಳಿಂದ ಹೋಮ್ ಐಸೋಲೇಷನ್‌ನಲ್ಲಿ ಇದ್ದರು. ಆದರೆ ನಿನ್ನೆ ರಾತ್ರಿ ಸಾವನ್ನಪ್ಪಿರುವ ಅವರ ಶವಸಂಸ್ಕಾರ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿದ್ದು, ಹಗ್ಗ ತಂದಿದ್ದಾರೆ. ಗ್ರಾಮಸ್ಥರು ಹಗ್ಗ ಯಾಕೆ? ಇಬ್ಬರು ಸಿಬ್ಬಂದಿಯಿಂದ ಶವ ಒಯ್ಯಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ನಾವೆಲ್ಲ ಆ ಕೆಲಸ ಮಾಡ್ತಿವಿ.. ನಿಮಗ್ಯಾಕೆ ಅದೆಲ್ಲ? ಎಂದಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಮಾತಿಗೆ ಮಾತು ಬೆಳೆದಿದ್ದರಿಂದ ಸಿಬ್ಬಂದಿ ಹೊರಟು ಹೋಗಿದ್ದಾರೆ.
ಸೋಮವಾರ ಮಧ್ಯಾಹ್ನವಾದರೂ ಆರೋಗ್ಯ ಇಲಾಖೆಯ ಯೊವೊಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಕುಟುಂಬಸ್ಥರನ್ನು ಮನೆಯೊಳಗೆ ಪ್ರವೇಶಿಸದಂತೆ ಎಚ್ಚರಿಸಿದ್ದರಿಂದ ಶವವೂ ಅನಾಥವಾಗಿ ಬಿದ್ದಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ..

ಮೂರೇ ದಿನಕ್ಕೆ ಅಧಿವೇಶನ ಮೊಟಕು? ಕೊರೋನಾ ನೆಪದಲ್ಲಿ ವೈಫಲ್ಯ ಮರೆಮಾಚುವ ಯತ್ನ!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಇಂದಿನಿಂದ ಆರಂಭವಾಗಿರುವ ವಿಧಾನಸಭಾ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.10 ದಿನಗಳಿಗೆ ನಿಗದಿಯಾಗಿದ್ದ ಅಧಿವೇಶನವನ್ನು ಕೊರೋನಾ ಸಾಂಕ್ರಾಮಿಕದ ಆತಂಕದ ಕಾರಣಕ್ಕೆ ಮೂರೇ ದಿನಗಳಿಗೆ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ಸಾಮಾಜಿಕ ಅಂತರ ಸೇರಿ ಎಲ್ಲ ಮುಂಜಾಗ್ರತೆ ಅನುಸರಿಸಿದ್ದರೂ ಅಧಿವೇಶನ ಮೊಟಕುಗೊಳಿಸುವುದನ್ನು ವಿಪಕ್ಷಗಳ ಹಲವರು ವಿರೋಧಿಸಿದ್ದಾರೆ.
ಉಭಯ ಸನದನಗಳಲ್ಲಿ ಪ್ರತಿಭಟನೆಗೆ ಇಳಿಯದೇ ವಿಧೇಯಕಗಳ ಮೇಲೆ ಚರ್ಚೆ ಮಾಡಲು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತೀರ್ಮಾನ ಮಾಡಿದೆ.

ಬೆಂಗಳೂರು ಗಲಭೆ, ಡ್ರಗ್ಸ್ ವಿಚಾರ ಹಾಗೂ ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣದ ಆರೋಪದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆ ಮಾಡಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ಇದರಿಂದ ನಿರಾಸೆಯಾಗಿದೆ.

ವಿರೋಧ ಪಕ್ಷಗಳು ಪ್ರತಿಭಟನೆಗೆ ಇಳಿದಷ್ಟು ಸರ್ಕಾರಕ್ಕೆ ಲಾಭವಾಗುತ್ತಿತ್ತು. ಆದರೆ ಇದೀಗ ವಿರೋಧ ಪಕ್ಷ ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಸರ್ಕಾರ ಪ್ರತಿತಂತ್ರ ರೂಪಿಸಿದೆ.
 
ಕೊವಿಡ್ ನೆಪದಲ್ಲಿ 10 ದಿನಗಳ ಕಾಲ ಕರೆದಿರುವ ಅಧಿವೇಶನವನ್ನು ಮೂರೇ ದಿನಕ್ಕೆ ಮೊಟಕುಗೊಳಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವತ್ತು ವಿಧಾನಸೌಧದಲ್ಲಿ ನಡೆಯುವ ಕಲಾಪ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೊಂದಿಗೆ ಇದೇ ವಿಚಾರವನ್ನು ಸಿಎಂ ಪ್ರಸ್ತಾಪ ಮಾಡಲಿದ್ದಾರೆ ಎನ್ನಲಾಗಿದೆ.

ಕೊರೋನಾ ವೈರಸ್ ಹರಡುವ ಆತಂಕವಿರುವುದರಿಂದ ಪ್ರತಿಪಕ್ಷಗಳು ಸದನ ಮೊಟಕುಗೊಳಿಸಲು ಸಹಕಾರ ಕೊಡಬೇಕು ಎಂದು ಸಿಎಂ ಯಡಿಯೂರಪ್ಪ ಕೇಳಲಿದ್ದಾರೆ ಎನ್ನಲಾಗಿದೆ. ಆ ಮೂಲಕ ಚರ್ಚೆ ನಡೆಸದೇ ಹಣಕಾಸು ಸೇರಿದಂತೆ ಎಲ್ಲ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಸರ್ಕಾರದ ತಂತ್ರ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಪಕ್ಷದ ಸದಸ್ಯರು ಸರ್ಕಾರಕ್ಕೆ ಈಗಾಗಲೇ 1200 ಪ್ರಶ್ನೆಗಳನ್ನು ಕೇಳಿದ್ದಾರೆ. ಅವುಗಳಲ್ಲಿ ಚುಕ್ಕೆ ಗುರುತಿನ 100 ಪ್ರಶ್ನೆಗಳಿಗೆ ಸರ್ಕಾರ ಸದನದಲ್ಲಿ ಉತ್ತರಿಸಬೇಕಿದೆ. ಉಳಿದವುಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸಬೇಕಿದೆ.

19 ಸುಗ್ರೀವಾಜ್ಞೆಗಳು, 10 ತಿದ್ದುಪಡಿ ವಿಧೇಯಕಗಳು ಹಾಗೂ ಹಿಂದಿನ ಅಧಿವೇಶನದಲ್ಲಿ ಮಂಡನೆಯಾಗಿರುವ 2 ವಿಧೇಯಕಗಳಿಗೆ ಸರ್ಕಾರ ಅಂಗೀಕಾರ ಪಡೆದುಕೊಳ್ಳಬೇಕಿದೆ. ಅವುಗಳಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ, ಭೂಸುಧಾರಣಾ ತಿದ್ದುಪಡಿ ವಿಧೇಯಕ, ಕಾರ್ಮಿಕ ತಿದ್ದುಪಡಿ ಕಾಯಿದೆ, ಸೇರಿದಂತೆ ಹಲವು ಸುಗ್ರೀವಾಜ್ಞೆಗಳು ಸೇರಿವೆ. ಹೀಗಾಗಿ ಕಲಾಪ  ಮೊಟಕುಗೊಳಿಸುವ ಸರ್ಕಾರದ ಸಲಹೆಯನ್ನು ಒಪ್ಪದಿರಲು ಕಾಂಗ್ರೆಸ್ ತೀರ್ಮಾನ ಮಾಡಿದೆ.

ಉಭಯ ಸದನಗಳಲ್ಲಿ ಚರ್ಚೆಯ ಮೂಲಕ 41 ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳುವುದು ಅಸಾಧ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ಸರ್ಕಾರ ಬಂದಿದ್ದು, ಹೀಗಾಗಿ ಚರ್ಚೆಯಿಲ್ಲದೆ ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಂಡು ಅಧಿವೇಶನ ಮುಂದಕ್ಕೆ ಹಾಕಲು ತೀರ್ಮಾನ ಮಾಡಲಾಗಿದೆ. ಹಾಗೆ ಮಾಡಲು ಸರ್ಕಾರ ಮುಂದಾದಲ್ಲಿ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗಲಿದೆ.

     ಸೋಂಕು ಬಾಧಿತ 18 ಶಾಸಕರು

ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಹಾಗೂ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಕೊರೋನಾ ವೈರಸ್ ಪಾಸಿಟಿವ್ ಆಗಿದೆ. ಜೊತೆಗೆ 13 ಶಾಸಕರಿಗೂ ಕೊರೊನಾ ವೈರಸ್ ದೃಢಪಟ್ಟಿದೆ.

ಶಾಸಕರಾದ ಎನ್.ಎ. ಹ್ಯಾರಿಸ್, ಎಚ್.ಪಿ. ಮಂಜುನಾಥ, ಕೆ. ಮಹಾದೇವ, ಬಿ. ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಉಮಾನಾಥ್ ಕೊಟ್ಯಾನ್, ಡಿ.ಸಿ. ಗೌರಿಶಂಕರ, ಎಂ.ಪಿ. ಕುಮಾರಸ್ವಾಮಿ, ಕುಸುಮಾ ಶಿವಳ್ಳಿ ಹಾಗೂ ಬಿ.ಕೆ. ಸಂಗಮೇಶ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಗೈರು ಹಾಜರಾಗುತ್ತಿದ್ದಾರೆ.

ಕೃಷಿ ಮಸೂದೆ ಅಂಗೀಕಾರ ‘ಗದ್ದಲ’: 8 ಸಂಸದರ ಸಸ್ಪೆಂಡ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಭಾನುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ ಸಂದರ್ಭದಲ್ಲಿ ಉಂಟಾದ ಗೊಂದಲ, ಗದ್ದಲದ ಘಟನೆಗೆ ಸಂಬಧಿಸಿದಂತೆ ಎಂಟು ರಾಜ್ಯಸಭಾ ವಿಪಕ್ಷ ಸಂಸದರನ್ನು ಸೋಮವಾರ ಕಲಾಪದಿಂದ ಅಮಾನತು ಮಾಡಲಾಗಿದೆ.

ಸೋಮವಾರ ಈ ವಿಷಯ ಪ್ರಕಟಿಸಿದ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು, ಈ ಎಂಟು ಸದಸ್ಯರು ತುಂಬ ಅಗೌರವಯುತ ನಡವಳಿಕೆ ತೋರಿಸಿದ್ದಾರೆ. ಪೀಠದಲ್ಲಿದ್ದ ಉಪ ಸಭಾಪತಿಯವರನ್ನು ಅವಮಾನಿಸಿದ್ದಾರೆ, ದಾಂಧಲೆಯ ಸ್ವರೂಪದ ಗದ್ದಲ ಮಾಡುವ ಮೂಲಕ ರಾಜ್ಯಸಭೆಯ ಘನತೆಗೆ ಕುತ್ತು ತಂದಿದ್ದಾರೆ. ಇದು ನೋವಿನ ಸಂಗತಿ ಎಂದರು.

ಟಿಎಂಸಿಯ ಡೆರೆಕ್ ಒ ಬ್ರೇನ್, ಆಪ್‌ನ ಸಂಜಯಸಿಂಗ್, ಕಾಂಗ್ರೆಸ್‌ನ ರಾಜೀವ್ ತರಾವ್, ಸಿಪಿಎಂನ ಕೆ.ಕೆ ರಾಗೇಶ್ ಅಮಾನತ್ತಾದ ಪ್ರಮುಖರು.ಕೆಲವರು ಸೆಕ್ರೆಟರಿ ಬೆಂಚ್ ಮೇಲೆ ಹತ್ತಿದ್ದರು, ಕೆಲವರು ಉಪ ಸಭಾಪತಿ ಮೈಕ್ ಕಿತ್ತುಕೊಳ್ಳಲು ಹೋದರು, ನಿಯಮ-ಆದೇಶ ಪ್ರತಿ ಹರಿದು ಹಾಕಿದರು ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಭಾನುವಾರ ಎರಡು ಕೃಷಿ ಮಸೂದೆಗಳನ್ನು ಧ್ವನಿಮತದ ಮೂಲಕ ಅಂಗೀಕರಿಸುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಈ ಘಟನೆ ನಡೆದಿತ್ತು.

ಸಾಲ ಕೊಡುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ:
ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಘಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸಾಲ ಕೊಡುವ ನೆಪದಲ್ಲಿ ಟೂರಿಸ್ಟ್ ಗೈಡ್ ಮತ್ತು ಟ್ರಾವೆಲ್ ಏಜೆಂಟ್ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ದೆಹಲಿಯ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ನಡೆದಿದೆ. ಭಾನುವಾರ ಪ್ರಮುಖ ಆರೋಪಿಯನ್ನು ಬಂಧಿಸಿರುವ ದೆಹಲಿ ಪೊಲೀಸರು, ಒಟ್ಟು 6 ಆರೋಪಿಗಳು ಭಾಗಿಯಾಗಿದ್ದು, ಇದರಲ್ಲಿ ಒಬ್ಬ ಮಹಿಳೆಯೂ ಇದ್ದಾಳೆ ಎಂದಿದ್ದಾರೆ.

ಬಂಧಿತನನ್ನು ದೆಹಲಿಯ ಶೇಖ್ ಸರೈ ಪ್ರದೇಶದ ನಿವಾಸಿ ಮನೋಜ್ ಶರ್ಮಾ ಎಂದು ಗುರುತಿಸಲಾಗಿದೆ.
ದೆಹಲಿಯ ಇಂಡಿಯನ್ ಗೇಟ್ ಬಳಿ ಇರುವ ಫೈವ್ ಸ್ಟಾರ್ ಹೋಟೆಲ್ ಒಂದರ ರೂಮಿನಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಭವಿಸಿದ್ದು ಹೇಗೆ?

ಮನೋಜ್ ಶರ್ಮಾ ಮತ್ತು ಇನ್ನೋರ್ವ ಆರೋಪಿ ಆ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದರು. ಸಂತ್ರಸ್ತೆ ಟೂರಿಸ್ಟ್ ಗೈಡ್‌ಗೆ ಹಣದ ಅಗತ್ಯವಿತ್ತು. ಈ ಇಬ್ಬರು ಆರೋಪಿಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ಮೊದಲೇ ಹೇಳಿದ್ದರು. ಸಾಲದ ವ್ಯವಸ್ಥೆಯಾಗಿದೆ ಎಂದು ಯುವತಿಯನ್ನು ರೂಮಿಗೆ ಕಡೆಸಿಕೊಂಡು ಅತ್ಯಾಚಾರ ಮಾಡಲಾಗಿದೆ. ಯುವತಿ ಆರು ಆರೋಪಿಗಳಿದ್ದರು ಎಂದು ಹೇಳಿದ್ದು, ಇದರಲ್ಲಿ ಮಹಿಳೆಯೂ ಒಬ್ಬರು ಭಾಗಿಯಾಗಿದ್ದಾರೆ. ಪೊಲೀಸರು ಉಳಿದ ಆರೋಪಿಗಳ ತಲಾಶ್‌ನಲ್ಲಿದ್ದಾರೆ.

‘ಆ’ 190 ಸೆಕೆಂಡ್ ಫೋನ್ ಸಂಭಾಷಣೆಯ ಕ್ಲೂ: ಗೌರಿ ಹತ್ಯೆ ಆರೋಪಿಗಳಿಗೂ ಕಲಬುರ್ಗಿ ಹತ್ಯೆಗೂ ಲಿಂಕ್!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಗೌರಿ ಹತ್ಯೆ ಕೇಸಿನಲ್ಲಿ ಆರೋಪಿಯಾಗಿರುವ ಗಣೇಶ್ ಮಿಸ್ಕಿನ್ ಸಂಬಂಧಿಗಳಿಬ್ಬರ ನಡುವಿನ 190 ಸೆಕೆಂಡ್‌ಗಳ ಫೋನ್ ಸಂಭಾಷಣೆಯು, ಗೌರಿ ಹತ್ಯೆ ಆರೋಪಿಗಳಲ್ಲಿ ಕೆಲವರು ಕಲಬುರ್ಗಿ ಹತ್ಯೆಯಲ್ಲೂ ಭಾಗಿ ಎಂಬ ಲಿಂಕ್ ಕೂಡಿಸಲು ನೆರವಾಗಿತು!
ಕೋರ್ಟ್ ಗೆ ಸಲ್ಲಿಸಿರುವ ದಾಖಲೆ ಆಧಾರದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಇದನ್ನು ವರದಿ ಮಾಡಿದೆ.

ಗೌರಿ ಹತ್ಯೆ ಆರೋಪದಲ್ಲಿ 2018ರ ಜುಲೈನಲ್ಲಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ ಬಂಧನದ ನಂತರ ಈ ಫೋನ್ ಸಂಭಾಷಣೆ ನಡೆದಿದೆ.

ಜುಲೈ 22, 2018ರಂದು ಗಣೇಶ್ ಸಂಬಂಧಿ ರವಿ ಮಿಸ್ಕಿನ್ ಮತ್ತು ಆತನ ‘ಅಂಕಲ್’ ನಡುವೆ ನಡೆಯುವ ಫೋನ್ ಸಂಭಾಷನೆಯಲ್ಲಿ, ರವಿ ಮಿಸ್ಕಿನ, ’ಅಂಕಲ್, ಗಣೇಶ್ ಈಗ ಎರಡು ಕೊಲೆ ಕೇಸಿನಲ್ಲಿ ಭಾಗಿಯಾದಂತಾಗಿದೆ’ ಎಂಬರ್ಥದ ಮಾತು ಹೇಳುತ್ತಾನೆ.

ಆಗಲೇ ಎರಡೂ ಹತ್ಯೆಗೆ ಬಳಸಿದ ಪಿಸ್ತೂಲ್ ಒಂದೇ ಎಂದು ಸಾಧಿಸಿದ್ದ ಎಸ್‌ಐಟಿ ಈ ಫೋನ್ ಸಂಭಾಷಣೆ ಎಳೆ ಹಿಡಿದು ಇನ್ನಷ್ಟು ತನಿಖೆ ಮಾಡಿತ್ತು ಮತ್ತು ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ಮಾಡಿತ್ತು. ಈಗ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ ಪ್ರಕಾರ, ಕಲಬುರ್ಗಿ ಅವರನ್ನು ಶೂಟ್ ಮಾಡಿದ್ದು ಗಣೇಶ್ ಮಿಸ್ಕಿನ್, ಆಗ ಬೈಕ್ ಚಲಾಯಿಸಿದ್ದು ಬೆಳಗಾವಿಯ ಪ್ರವೀಣ್ ಪ್ರಕಾಶ ಚಾಟೂರ್.

ಗೌರಿ ಹತ್ಯೆ ಸಂದರ್ಭದಲ್ಲಿ ಗಣೇಶ್ ಮಿಸ್ಕಿನ್ ಬೈಕ್ ಓಡಿಸಿದರೆ, ಸಿಂದಗಿಯ ಪರಶುರಾಮ್ ಶೂಟ್ ಮಾಡಿದ್ದ.

ಸದ್ಯ ಕೊವಿಡ್ ಕಾರಣದಿಂದ ಇವೆರಡೂ ಹತ್ಯೆಗಳ ವಿಚಾರಣೆ ಆರಂಭವಾಗಿಲ್ಲ. ಈ ನಡುವೆ ಪ್ರಮುಖ ಆರೋಪಿ ಅಮೋಲ್ ಕಾಳೆ ಕೋರ್ಟಿಗೆ ಅರ್ಜಿ ಸಲ್ಲಿಸಿ, ‘ಜೈಲಿನಲ್ಲಿ ಈಗ ಕೈದಿಗಳ ಸಂಖ್ಯೆ ಹೆಚ್ಚಿದೆ. ಕೊವಿಡ್ ಸಾಂಕ್ರಾಮಿಕ ಹರಡುವ ಆತಂಕವಿದೆ. ಹೀಗಾಗಿ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು’ ಎಂದು ಕೇಳಿದ್ದಾನೆ. ಕೋರ್ಟ್ ಜೈಲಲ್ಲಿರುವ ಕೈದಿಗಳ ಸಂಖ್ಯೆ, ಸೆಲ್‌ಗಳ ವಿವರ ಸಲ್ಲಿಸಲು ಪೊಲೀಸರಿಗೆ ಸೂಚಿಸಿದೆ.

3 ಅಂತಸ್ತಿನ ಕಟ್ಟಡ ಕುಸಿತ: 8 ಸಾವು,20 ಜನ ಸಿಕ್ಕಿಕೊಂಡಿರುವ ಶಂಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಬೈ: ಮುಂಬೈ ಸಮೀಪದ ಬಿವಂಡಿ ಪ್ರದೇಶದಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 8 ಜನ ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ನಡೆದಿದೆ.
ಸುಮಾರು 20 ಜನ ಕಟ್ಟಡದ ಅವಶೇಷಗಳ ನಡುವೆ ಸಿಕ್ಕಿ ಹಾಕಿಕೊಂಡಿರಬಹುದು ಎನ್ನಲಾಗಿದೆ. ಇಲ್ಲಿವರೆಗೆ 25 ಜನರು ರಕ್ಷಣೆ ಮಾಡಲಾಗಿದೆ ಎನ್ನಲಾಗಿದ್ದು, ಎನ್‌ಡಿಆರ್‌ಎಫ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.

ಬೆಳಿಗ್ಗೆ 3.40ಕ್ಕೆ ಪಟೇಲ್ ಕಂಪೌಂಡ್ ಏರಿಯಾದಲ್ಲಿನ ಈ ಕಟ್ಟಡ ಕುಸಿತವಾಗಿದ್ದು, ಸ್ಥಳಿಯರು 20 ಜನರನ್ನು ಕೂಡಲೇ ರಕ್ಷಿಸಿದ್ದರು. ನಂತರ ಕಾರ್ಯಾಚರಣೆಗೆ ಇಳಿದ ಎನ್‌ಡಿಆರ್‌ಎಫ್ ಒಂದು ಮಗುವಿನ ಸಹಿತ ಐವರನ್ನು ರಕ್ಷಿಸಿದೆ.

error: Content is protected !!