Home Blog Page 2177

ಬಂದ್ರು ಸಾರ್ ಶಶಿಕಲಾ, ಬಂದ್ವು ಸಾರ್ ತಮಿಳ್ನಾಡು ಎಲೆಕ್ಷನ್!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಚೆನ್ನೈ/ಬೆಂಗಳೂರು/ನವದೆಹಲಿ: ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಲ್ಲಿರುವ ದಿ. ಜಯಲಲಿತಾರ ಆಪ್ತ ಗೆಳತಿ ಶಶಿಕಲಾರನ್ನು ಸನ್ನಡತೆಯ ಆಧಾರದ ಮೇಲೆ ನಾಲ್ಕು ತಿಂಗಳು ಮೊದಲೇ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ವಾರೊಪ್ಪತ್ತಿನಲ್ಲಿ ಅವರು ಹೊರಗೆ ಬರುತ್ತಿದ್ದಾರೆ.

ಎಐಡಿಎಂಕೆಯಿಂದ ಒಡೆದು ಹೋಗಿರುವ ಎಎಂಎಂಕೆ ಬಣ (ಶಶಿಕಲಾ ಬೆಂಬಲಿಗರ ಬಣ)ವನ್ನು ಮರಳಿ ಎಐಡಿಎಂಕೆಯಲ್ಲಿ ವಿಲೀನಗೊಳಿಸುವ ಮೀಡಿಯೇಟರ್ ಕೆಲಸಕ್ಕೆ ರಾಷ್ಟ್ರೀಯ ಬಿಜೆಪಿ ಅದಾಗಲೇ ಇಳಿದಾಗಿದೆ. ಎಎಂಎಂಕೆ ನಡೆಸುತ್ತಿರುವ ಟಿಟಿಕೆ ದಿನಕರನ್ ಎರಡು ದಿನದ ಹಿಂದಷ್ಟೇ ದೆಹಲಿಗೆ ಹೋಗಿ ಬಂದಿದ್ದು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿದ್ದಾಗಿ, ಮುಂದಿನ ರಾಜಕೀಯದ ಬಗ್ಗೆ ಚರ್ಚಿಸಿದ್ದಾಗಿ ಅವರೇ ಹೇಳಿದ್ದಾರೆ.

ಮೇ 2021ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದ್ದು, ಸತತ ಎರಡನೇ ಬಾರಿ ಅಧಿಕಾರ ನಡೆಸುತ್ತಿರುವ ಎಐಡಿಎಂಕೆ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ. ಅದೂ ಅಲ್ಲದೇ ಜಯಲಲಿತಾ ಇಲ್ಲದೇ ಅದು ಮೊದಲ ಸಲ ಚುನಾವಣೆ ಎದುರಿಸಲಿದೆ.

ದಕ್ಷಿಣದಲ್ಲಿ ಕರ್ನಾಟಕ ಬಿಟ್ಟರೆ ಬೇರೆಲ್ಲೂ ಹೇಳಿಕೊಳ್ಳುವ ಅಸ್ತಿತ್ವವೇ ಇಲ್ಲದ ಬಿಜೆಪಿ ಈಗ ಒಡೆದು ಹೋದ ಎಐಎಡಿಎಂಕೆಯ ಬಣವನ್ನು ಮರಳಿ ಮೂಲ ಪಕ್ಷಕ್ಕೆ ಸೇರಿಸುವ ಮಧ್ಯಸ್ಥಿಕೆ ಕೆಲಸ ಶುರು ಮಾಡಿದೆ. ಎಐಡಿಎಂಕೆ ಮತ್ತು ಬಿಜೆಪಿ ಪರಸ್ಪರ ಹೊಂದಾಣಿಕೆ ಹೊಂದಿವೆ.

ಅಂದಂತೆ ಜಯಲಲಿತಾ ಸಾವಿನ ನಂತರ ಎಐಡಿಎಂಕೆ  ಹೋಳಾಗಲು ಬಿಜೆಪಿಯೇ ಕಾರಣ ಎಂಬುದನ್ನು ಜನ ಮರೆತಿರಲಾರರು. ಕಾದು ನೋಡಬೇಕು.

65 ಕೋಟಿ ರೂ. ಭ್ರಷ್ಟಾಚಾರ ಹಗರಣದಲ್ಲಿ 4 ವರ್ಷ ಜೈಲುಶಿಕ್ಷೆ ಅನುಭವಿಸಿದ ಶಶಿಕಲಾ ಶಿಕ್ಷೆಯ ಅವಧಿ ಜನವರಿಗೆ ಮುಗಿಯುತ್ತದಾದರೂ, ಸನ್ನಡತೆಯ ಆಧಾರದ ಮೇಲೆ ಈ ವಾರ ಅಥವಾ ಮುಂದಿನ ವಾರ ಅವರ ಬಿಡುಗಡೆ ಆಗಲಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಆಗ ಬಂದ್ರು ಸಾರ್ ಶಕುಂತಲಾ ಶುರು. ತಮಿಳರು ಶಶಿಕಲಾರಲ್ಲಿ ಜಯಲಲಿತಾರನ್ನು ಕಂಡರೆ ಪೊಲಿಟಿಕಲ್ ಪಿಚ್ಚರೇ ಬದಲಾಗಿದೆ.

ಸದ್ಯಕ್ಕೆ ಅಂತಹ ವಾತಾವರಣವಂತೂ ಇಲ್ಲ. ಈ ನಡುವೆ ವಿರೋಧ ಪಕ್ಷ ಡಿಎಂಕೆ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಹಿಂದಿ ಹೇರಿಕೆಯ ವಿರುದ್ಧದ ಅಲೆ ಜೋರಾಗಿಯೇ ಇದ್ದು, ಇದು ಡಿಎಂಕೆಗೆ ವರದಾನವೂ, ಬಿಜೆಪಿ ಸಖ್ಯ ಮಾಡಿದರೆ ಎಐಡಿಎಂಕೆಗೆ ಶಾಪವೂ ಆಗಬಹುದು.

1 ಕೋಟಿ ವಲಸೆ ಕಾರ್ಮಿಕರು ನಡೆದೇ ಹೋದರು: ಕೇಂದ್ರ ಸರ್ಕಾರ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಕೊವಿಡ್ ಲಾಕ್‌ಡೌನ್ ಕಾರಣಕ್ಕೆ ಮಾರ್ಚ್-ಜೂನ್ ಅವಧಿಯಲ್ಲಿ 1 ಕೋಟಿ 6 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಪ್ರದೇಶದಿಂದ ತಮ್ಮೂರಿಗೆ ನಡೆದುಕೊಂಡೇ ಹೋಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಸ್ತೆ ಮತ್ತು ಹೆದ್ದಾರಿ ರಾಜ್ಯ ಸಚಿವ ವಿ.ಕೆ.ಸಿಂಗ್ ಮಂಗಳವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ಮಾರ್ಚ್-ಜೂನ್ ಅವಧಿಯಲ್ಲಿ ಹೆದ್ದಾರಿ ಸೇರಿ ಒಟ್ಟು 81,385 ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ 29,415 ಜನರು ಮೃತರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆದರೆ, ವಲಸೆ ಕಾರ್ಮಿಕರ ಕುರಿತಂತೆ ಪ್ರತ್ಯೇಕ ವರದಿಯನ್ನು ತಮ್ಮ ಸಚಿವಾಲಯ ಸಿದ್ಧಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಬುಧವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ: ಮುಂಬೈಯಲ್ಲಿ ಕನಿಷ್ಠ 50,630, ದೆಹಲಿಯಲ್ಲಿ ಗರಿಷ್ಠ 54,000 ರೂ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,000 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್:48,050 ರೂ.,24 ಕ್ಯಾರಟ್: 52,420 ರೂ.
ಹುಬ್ಬಳ್ಳಿ: 22 ಕ್ಯಾರಟ್: 47,713 ರೂ., 24 ಕ್ಯಾರಟ್: 52,050 ರೂ.

5 ವರ್ಷ, 58 ದೇಶ, 517 ಕೋಟಿ ರೂ!: ಪ್ರಧಾನಿ ವಿದೇಶ ಪ್ರವಾಸ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: 2015 ರಿಂದ ಇಲ್ಲಿವರೆಗೆ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ ನೀಡಿದ್ದು, ಅದಕ್ಕಾಗಿ ಸರ್ಕಾರದಿಂದ ತಗುಲಿದ ಖರ್ಚು 157.82 ಕೋಟಿ ರೂ. ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ವಿದೇಶಂಗ ಖಾತೆಯ ರಾಜ್ಯ ಸಚಿವ ವಿ ಮುರಳಿಧರನ್, ಪ್ರಧಾನಿಯ ವಿದೇಶ ಪ್ರವಾಸ ಮತ್ತು ಅದರಿಂದಾದ ಫಲಶೃತಿಗಳ ಕುರಿತು ರಾಜ್ಯಸಭೆಗೆ ವಿವರ ನೀಡುವಾಗ ಮೇಲಿನ ಮಾಹಿತಿಯನ್ನು ನೀಡಿದ್ದಾರೆ.

ಪ್ರಧಾನಿ ಅಮೆರಿಕ, ಚೀನಾ ಮತ್ತು ರಷ್ಯಾಗಳಿಗೆ ತಲಾ 5 ಸಲ ಭೇಟಿ ನೀಡಿದ್ದಾರೆ. ಇನ್ನು ಹಲವು ದೇಶಗಳಿಗೆ ಹಲವಾರು ಸಲ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಏಕಕಾಲಕ್ಕೆ ಹಲವು ದೇಶಗಳನ್ನು ಸುತ್ತಿ ಬಂದಿದ್ದರೆ, ಇನ್ನು ಕೆಲವು ಸಲ ದ್ವಿಪಕ್ಷಿಯ ಮಾತುಕತೆಗಾಗಿ ಒಂದೇ ದೇಶಕ್ಕೆ ಹೋಗಿ ಬಂದಿದ್ದಾರೆ.

ಅಂದಂತೆ, ಅವರ ಕೊನೆಯ ಭೇಟಿ 2019 ರ ನವಂಬರ್ 13-14ರಂದು ಬ್ರೆಜಿಲ್‌ಗೆ ಭೇಟಿ ನೀಡಿದ್ದು. ಅಂದರೆ 5 ವರ್ಷದಲ್ಲಿ ಅವರು 58 ದೇಶ ಸಂದರ್ಶಿಸಿ,517.82 ಕೋಟಿ. ರೂ ಖರ್ಚು ಮಾಡಿದ್ದಾರೆ!
ಅದರಿಂದ ಸಾಕಷ್ಟು ಲಾಭವಾಗಿವೆ ಎಂದು ಸರ್ಕಾರ ಹೇಳಿದೆಯಾದರೂ, ವಾಸ್ತವದಲ್ಲಿ ಎಷ್ಟು ಪ್ರಾಜೆಕ್ಟ್ ಗಳು ಕಾರ್ಯಾರಂಭ ಮಾಡಿವೆ ಎಂಬ ವಿವರವಿಲ್ಲ.

ಚೀನಾಕ್ಕೆ ಅವರು 5 ಸಲ ಭೇಟಿ ನೀಡಿದ್ದು, ಚೀನಾ ಪ್ರಧಾನಿ ಇಲ್ಲಿಗೆ 2 ಸಲ ಬಂದಿದ್ದು ನೋಡಿದ ಮೇಲೆ ಅದರ ಫಲಶೃತಿ ಇಷ್ಟೇನಾ ಎಂಬ ಪ್ರಶ್ನೆ ಕಾಡದೇ ಇರದು!

ಉದ್ಯೋಗವಷ್ಟೇ ಖಾತ್ರಿ, ಕೂಲಿಗೆ ಮಾತ್ರ ಕತ್ರಿ!ನರೇಗಾ ಮೆಂ ಮರೇಗಾ: 3 ತಿಂಗಳಾದ್ರೂ ಕೂಲಿಯಿಲ್ಲ!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನರೇಗಾ ಯಾ ಮರೇಗಾ ಎಂದರೆ ಈಗ ಎರಡನೆಯದ್ದೆ ಬೆಟರ್ ಎನಿಸುವಂತಹ ಸ್ಥಿತಿ ಜಿಲ್ಲೆಯಲ್ಲಿ ಉದ್ಭವಿಸಿದೆ. 3 ತಿಂಗಳುಗಟ್ಟಲೇ ಉದ್ಯೋಗ ಮಾಡಿದ್ದು ಮಾತ್ರ ಖಾತ್ರಿ, ಕೂಲಿಗೆ ಮಾತ್ರ ಕತ್ರಿ. ಜಿಲ್ಲೆಯ ಕುಕನೂರು ತಾಲೂಕು ಮಂಗಳೂರು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸಿದ ಜನರಿಗೆ 3 ತಿಂಗಳಾದರೂ ಕೂಡ ಹಣ ಬಂದಿಲ್ಲ. ಜೊತೆಗೆ ಮೇಟಿಗಳಿಗೆ ಕೂಡ ನಯಾಪೈಸೆ ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೂಡ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಮಂಗಳೂರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ಕೂಡ ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೆ ಜನರು ಪಂಚಾಯತಿಗೆ ಅಲೆದಾಡುವ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ‘ಆಗ ಉದ್ಯೋಗ ಖಾತ್ರಿ, ಈಗ ಪಂಚಾಯತಿ ಸುತ್ರಿ’ ಎನ್ನುವಂತಹ ಪರಿಸ್ಥಿತಿ ಏರ್ಪಟ್ಟಿದೆ.

ನೂರು ದಿನಗಳ ಕಾಲದ ಉದ್ಯೋಗ ಖಾತ್ರಿ ಕೆಲಸವನ್ನು ಕೇವಲ ಹದಿನೈದು ದಿನಗಳ ಮಾತ್ರ ಒದಗಿಸಿದ್ದಾರೆ. ಇನ್ನೂ ಅನೇಕ ಜನರ ಖಾತೆಗೆ ಹಣ ಬಂದಿಲ್ಲ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ದುಡಿದ ಹಣದ ಕೂಲಿ ಒದಗಿಸಬೇಕು, ಇಲ್ಲದಿದ್ದರೆ ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲೆಯಲ್ಲಿ 120 ಜನರಿಗೆ ಸೋಂಕು; 92 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಮಂಗಳವಾರ ದಿ. 22 ರಂದು 120 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

120 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 8567 ಕ್ಕೇರಿದೆ. ಇಂದು 92 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 7570 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 872 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿಗೆ ಒಳಗಾಗಿ ಇದುವರೆಗೆ 125 ಜನರು ಮೃತಪಟ್ಟಿದ್ದಾರೆ.

ಗದಗ-65, ಮುಂಡರಗಿ-14, ನರಗುಂದ-06, ರೋಣ-19, ಶಿರಹಟ್ಟಿ-03, ಹೊರ ಜಿಲ್ಲೆಯ 13 ಸೇರಿದಂತೆ 120 ಜನರಿಗೆ ಸೋಂಕು ತಗುಲಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು:

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಮಸಾರಿ, ಮಾರುತಿ ದೇವಸ್ಥಾನದ ಹತ್ತಿರ, ಗಂಗಾಪುರ ಪೇಟ, ವಿವೇಕಾನಂದ ನಗರ, ಗಾಂಧಿನಗರ, ಅಮರೇಶ್ವರ ನಗರ, ಜನತಾ ಕಾಲೋನಿ, ಅಕ್ಕಮಹಾದೇವಿ ದೇವಸ್ಥಾನದ ಹತ್ತಿರ, ಟ್ಯಾಗೋರ ರಸ್ತೆ, ಸರ್ವೋದಯ ಕಾಲೋನಿ, ಹುಡ್ಕೋ ಕಾಲೋನಿ, ಹಾತಲಗೇರಿ ನಾಕಾ, ಆರ.ಕೆ.ನಗರ, ಕಳಸಾಪುರ ರಸ್ತೆ, ಜಿಮ್ಸ್ , ಭುಳ್ಳಾ ಗಲ್ಲಿ, ಎಲ್.ಆಯ್.ಸಿ. ಕಚೇರಿ ಹತ್ತಿರ,

ಗದಗ ತಾಲೂಕಿನ ಲಕ್ಕುಂಡಿ, ಹುಲಕೋಟಿ, ನೀಲಗುಂದ, ಯಲಿಶಿರೂರ, ಹಾಳಕೇರಿ, ಕುರ್ತಕೋಟಿ, ಚಿಕ್ಕ ಹಂದಿಗೋಳ, ಮುಳಗುಂದ, ಕಣಗಿನಹಾಳ, ಮಲ್ಲಸಮುದ್ರ, ಸಂಭಾಪುರ,

ಮುಂಡರಗಿ ಪಟ್ಟಣದ ಮಾಬುಸಾಬನಿ ನಗರ, ಮುಂಡರಗಿ ತಾಲೂಕಿನ ಬರದೂರ, ಕದಾಂಪುರ, ಶೀರನಹಳ್ಳಿ,

ನರಗುಂದ ಪಟ್ಟಣದ ಅಧ್ಯಾಪಕ ನಗರ,

ರೋಣ ಪಟ್ಟಣದ ತಳವಾರ ಓಣಿ, ಶಿವಪೇಟ, ಬದಾಮಿ ರಸ್ತೆ, ಗುಲಗುಂಜಿಮಠ,

ರೋಣ ತಾಲೂಕಿನ ಇಟಗಿ, ಅಬ್ಬಿಗೇರಿ, ನಿಡಗುಂದಿ, ಮುಶಿಗೇರಿ, ಸೂಡಿ, ಮಲ್ಲಾಪುರ, ಗಜೇಂದ್ರಗಡ ಪಟ್ಟಣದ ಬಸವನಗರ,

ಶಿರಹಟ್ಟಿ ಪಟ್ಟಣದ ಈಶ್ವರ ನಗರ, ತಾಲೂಕಿನ ಬಾಳೆಹೊಸೂರ, ಬನ್ನಿಕೊಪ್ಪ

ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಯ್ಕೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ:ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಇಕ್ಬಾಲ್ ಅನ್ಸಾರಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ಹುದ್ದೆಗೆ ಆಯ್ಕೆ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಮಾಧ್ಯಮ ಕ್ಷೇತ್ರದೊಂದಿಗಿನ ಉತ್ತಮ ನಂಟು, ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಆಧರಿಸಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಉದ್ದೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ವಕ್ತಾರ ಹುದ್ದೆಗೆ ನೇಮಿಸಿರುವುದಾಗಿ ಡಿ.ಕೆ. ಶಿವಕುಮಾರ್​ ಪತ್ರದಲ್ಲಿ ತಿಳಿಸಿದ್ದಾರೆ.

ಎರಡು ಬಾರಿ ಸಚಿವರಾಗಿದ್ದ ಅನ್ಸಾರಿ ಅವರು, ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿನ್ನೆಲೆ ಅವರಿಗೆ ಕೆಪಿಸಿಸಿ ಮಣೆ ಹಾಕಿದ್ದು, ಅನ್ಸಾರಿಯವರ ಆಯ್ಕೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುವಂತೆ ಮಾಡಿದೆ.

ಚಕ್ಕಡಿಗೆ ಬೈಕ್ ಡಿಕ್ಕಿ; ಸವಾರರಿಬ್ಬರ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಎತ್ತಿನ ಚಕ್ಕಡಿಯ ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವರವಿ ಕ್ರಾಸ್ ಬಳಿ ನಡೆದಿದೆ.

ಪರಶುರಾಮ ಉಪ್ಪಾರ್(25), ಆಸೀಮ್ ಸಾಬ್ ಸುಂಕದ್(26) ಮೃತ ದುರ್ದೈವಿಗಳಾಗಿದ್ದು, ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮದ ನಿವಾಸಿಗಳೆಂದು ತಿಳಿದುಬಂದಿದೆ.

ಮೃತರಲ್ಲಿ ಪರಶುರಾಮ್ ಉಪ್ಪಾರ್ ಸ್ಥಳದಲ್ಲೇ ಮೃತಪಟ್ಟರೆ, ಆಸೀಮ್ ಸಾಬ್ ಸುಂಕದ್ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಶಿರಹಟ್ಟಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ವೀರಶೈವ-ಲಿಂಗಾಯತ’ ಪ್ರಮಾಣಪತ್ರಕ್ಕೆ ತೀವ್ರ ವಿರೋಧ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ನಗರದ ಬಸವಪರ ಸಂಘಟನೆಗಳು `ವೀರಶೈವ ಲಿಂಗಾಯತ’ ದ ಬದಲು ಹಿಂದಿದ್ದಂತೆ`ಲಿಂಗಾಯತ’ ಎಂದು ಜಾತಿ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿವೆ.

2002ಕ್ಕಿಂತ ಪೂರ್ವದಲ್ಲಿ`ಲಿಂಗಾಯತ’ ಎಂದಿತ್ತು. ಆದರೆ ಹಲವು ಮನುವಾದಿ ಕುತಂತ್ರಿಗಳ ಸಂಚಿನ ಫಲವಾಗಿ ಏಕಾಏಕಿ, ಯಾರ ಒತ್ತಾಯವಿರದಿದ್ದರೂ, ಯಾರನ್ನು ಕೇಳದೇ `ವೀರಶೈವ-ಲಿಂಗಾಯತ’ ಎಂದು ಬದಲಾವಣೆ ಮಾಡಲಾಯಿತು. ಇದು ಸಂವಿಧಾನಬಾಹಿರ ಕೃತ್ಯವಾಗಿದೆ. ಈ ದೇಶದ ಸಂವಿಧಾನದ ಪ್ರಕಾರ ಜಾತಿ, ಧರ್ಮಗಳ ಆಚರಣೆಯು ಆಯಾ ವ್ಯಕ್ತಿಯ ವೈಯಕ್ತಿಕ  ಹಕ್ಕಾಗಿರುತ್ತದೆ. ಈ ಜಾತಿ ತಿದ್ದುಪಡಿಯನ್ನು ವಿಧಾನಸಭೆಯಲ್ಲಾಗಲಿ, ವಿಧಾನ ಪರಿಷತ್ತಿನಲ್ಲಾಗಲಿ ಚರ್ಚಿಸದೇ ಬದಲಾಯಿಸಿದ್ದು ಕೂಡಾ ಅಸಂವಿಧಾನಿಕವಾದುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

2002ರಲ್ಲಿ ಹಠಾತ್ತನೇ ತಂತ್ರಾಂಶದಲ್ಲಿ ಬದಲಾವಣೆ ಮಾಡಿ`ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ. ಇದು ಲಿಂಗಾಯತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಎಲ್ಲ ಜಾತಿಯವರು ಅವರವರ ಜಾತಿ ಪ್ರಮಾಣಪತ್ರ ಪಡೆಯುತ್ತಿರುವಾಗ ಲಿಂಗಾಯತರು ಮಾತ್ರ ತಮ್ಮದಲ್ಲದ, ತಮ್ಮ ಇಚ್ಛೆಗೆ ವಿರೋಧವಾದ ‘ವೀರಶೈವ ಲಿಂಗಾಯತ’ ಪ್ರಮಾಣಪತ್ರ ಪಡೆಯುವ ದುರ್ದೈವ ಒದಗಿ ಬಂದಿದೆ ಎಂದು ಮನವಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಈ ಪರಿಣಾಮವಾಗಿ `ಲಿಂಗಾಯತ’ರಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. `ವೀರಶೈವ-ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರವನ್ನು ಪಡೆಯುವುದರಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗದಲ್ಲಿ ಪ್ರವೇಶ ದೊರಕಲಾರದ ಸ್ಥಿತಿ ಬಂದಿದೆ. ಇತ್ತೀಚೆಗೆ ನವೋದಯ ಪ್ರವೇಶ ಪರೀಕ್ಷಾ ಸಂದರ್ಭದಲ್ಲೂ ಇದರ ಪರಿಣಾಮ ಕಂಡಿದೆ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅರ್ಹತೆ ಇದ್ದರೂ ಕೂಡಾ `ವೀರಶೈವ-ಲಿಂಗಾಯತ’ ಜಾತಿ ಪ್ರಮಾಣಪತ್ರದಿಂದಾಗಿ ನವೋದಯ ಶಾಲೆಗಳಲ್ಲಿ ಪ್ರವೇಶ ದೊರಕದೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟ ಪ್ರಸಂಗ ಜರುಗಿದೆ.

ಇಂಥಹ ದುರ್ದೆಸೆ, ಅನ್ಯಾಯ ತಪ್ಪಿಸಲು ಲಿಂಗಾಯತರಿಗೆ ಅವರದೇ ಜಾತಿಯಾದ `ಲಿಂಗಾಯತ’ ಎಂದು ಜಾತಿ ಪ್ರಮಾಣಪತ್ರ ನೀಡುವುದು ಅವಶ್ಯವಾಗಿದೆ ಎಂದು  ಗದುಗಿನ ಬಸವಪರ ಸಂಘಟನೆಗಳಾದ ಲಿಂಗಾಯತ ಪ್ರಗತಿಶೀಲ ಸಂಘ, ಬಸವ ದಳ, ಬಸವ ಕೇಂದ್ರ, ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಘಟನೆಗಳು ಮೊದಲಿನಂತೆ ಜಾತಿ ಪ್ರಮಾಣಪತ್ರ ವಿತರಿಸಲು ಆಗ್ರಹಿಸಿವೆ.

ಈ ಸಂದರ್ಭದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ, ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ, ಬಸವಕೇಂದ್ರದ ಕಾರ್ಯದರ್ಶಿ ಶೇಕಣ್ಣ ಕವಳಿಕಾಯಿ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಹಾಗೂ ಬಿ.ವಿ.ಕಾಮಣ್ಣನವರ, ಕೆ.ವಿ.ಗೋಣಿ, ಮಲ್ಲಿಕಾರ್ಜುನ ಖಂಡೆಮ್ಮನವರ, ವೀರಣ್ಣ ಮುದಗಲ್ಲ, ಸಿದ್ಧಣ್ಣ ಅಂಗಡಿ, ರಾಮಣ್ಣ ಕಳ್ಳಿಮನಿ, ಎಂ.ಬಿ. ಲಿಂಗದಾಳ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

‘ಪರರಾಜ್ಯಕ್ಕೆ ಪೂರೈಸುತ್ತೀರಿ, ಇಲ್ಲಿ ಆಮ್ಲಜನಕವಿಲ್ಲದೇ ಜನ ಸಾಯ್ತಿದ್ದಾರೆ’: ಸದನದಲ್ಲಿ ಸರ್ಕಾರಕ್ಕೆ ಎಚ್ ಕೆ ಪಾಟೀಲ್ ತರಾಟೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು: ಇಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೇರಿಗಳಿಗೆ ಪೂರೈಕೆ ಮಾಡ್ತೀರಿ. ಇಲ್ಲಿ ಆಮ್ಲಜನಕ ಕೊರತೆಯಿಂದ ಕೊವಿಡ್ ರೋಗಿಗಳು ಸಾಯುತ್ತಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಗದಗ ಶಾಸಕ ಎಚ್.ಕೆ. ಪಾಟೀಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅವರು ಮಂಗಳವಾರ ಸದನದಲ್ಲಿ ವೈದ್ಯಕೀಯ ಕಿಟ್ ಖರೀದಿ ಹಗರಣದ ಕುರಿತು ಮಾತನಾಡುತ್ತ,  ಕೊವಿಡ್ ಸೋಂಕಿತರಿಗೆ ಲಿಕ್ವಿಡ್ ಆಕ್ಸಿಜನ್ ಕೊರತೆಯಾಗಿದೆ. ಆಮ್ಲಜನಕ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಆಮ್ಲಜನಕ ಪೂರೈಕೆ ಮಾಡಲು ನಿಮಗೆ ತೊಂದರೆಯೇನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನ ಸತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಮ್ಲಜನಕ ಸಿಗದೆ ಬೀದರ್, ಬೆಳಗಾವಿ, ಬೆಂಗಳೂರಿನಲ್ಲಿ ಕೊವಿಡ್ ರೋಗಿಗಳು ಸತ್ತಿದ್ದಾರೆ. ಇದರ ಬಗ್ಗೆ ಸರಕಾರ ಗಮನ ಹರಿಸಬೇಕು ಎಂದು ಎಚ್‌ಕೆ ಪಾಟೀಲ್ ಆಗ್ರಹಿಸಿದರು. 

error: Content is protected !!