Home Blog Page 218

ದಿ. ಸಿ.ಬಿ. ಬಡ್ನಿಯವರದು ಸಾರ್ಥಕ ಬದುಕು: ಆರ್.ಎಂ. ಕಲ್ಲನಗೌಡರ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿಜಾಪೂರದ ಸಿದ್ದೇಶ್ವರ ಸ್ವಾಮೀಜಿ ಆಚಾರ-ವಿಚಾರಗಳಿಂದ ಶ್ರೀಮಂತರಾದವರು. ಆದರ್ಶ ಮೌಲ್ಯಗಳು, ಪರಂಪರೆಗಳನ್ನು ಅಲ್ಲಮ ಪ್ರಭುವಿನ ವಚನ ಸಾಹಿತ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದವರು. ಇಂದ್ರಿಯ ನಿಗ್ರಹ, ಮನಸ್ಸಿನ ನಿಯಂತ್ರಣ, ಮಾತುಗಳು, ಕಾಯಕ ತತ್ವಗಳ ಮೂಲಕ ಸಾರ್ಥಕವಾಗಿ ಬದುಕಿ ಬಾಳಿ ನಮಗೆಲ್ಲಾ ಮಾರ್ಗದರ್ಶನ ನೀಡಿದವರು. ಇಂತಹ ಮಹನೀಯರ ಹಾದಿಯಲ್ಲಿ ದಿ. ಸಿ.ಬಿ. ಬಡ್ನಿ ಅವರು ಸೇರುತ್ತಾರೆ ಎಂದು ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಹೇಳಿದರು.

ಅವರು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ ಮತ್ತು ದಿ. ಸಿ.ಬಿ. ಬಡ್ನಿ ಪ್ರತಿಷ್ಠಾನದಿಂದ ಮನೆ ಮನದಲ್ಲಿ ಶರಣ ಸಂಸ್ಕೃತಿ ಹಾಗೂ ದಿ. ಸಿ.ಬಿ. ಬಡ್ನಿ ಅವರ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ದಿ. ಸಿ.ಬಿ. ಬಡ್ನಿ ಅವರ ಪ್ರತಿಷ್ಠಾನದಿಂದ ಕೊಡಮಾಡಲಾದ ಸಮಾಜಮುಖಿ ಕಾಯಕಯೋಗಿ ಪ್ರಶಸ್ತಿ ಸ್ವೀಕರಿಸಿದ ಗುರುಸಿದ್ದಪ್ಪ ಕೊರವಣ್ಣವರ ಮಾತನಾಡಿ, ಸಾವಯವ ಕೃಷಿಯಲ್ಲಿ ಲಾಭವಿಲ್ಲ ಎಂದು ಸಾಕಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ, ಸಾವಯವ ಕೃಷಿಯಿಂದ ಉತ್ತಮ ಇಳುವರಿ ಜೊತೆಯಲ್ಲಿ ಸಾಕಷ್ಟು ಲಾಭದಾಯಕ ಉದ್ಯೋಗಗಳನ್ನು ಮಾಡಲು ಸಾಧ್ಯವಾಗುತ್ತದೆ. ಸಾವಯವ ಕೃಷಿಯಲ್ಲಿ ಆರೋಗ್ಯ ಅಡಗಿದೆ. ಪ್ರತಿಯೊಬ್ಬರೂ ಸಾವಯವ ಕೃಷಿ ಮಾಡಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.

ಎಸ್.ಎಂ. ನೀಲಗುಂದ ಮಾತನಾಡಿ, ದಿ. ಸಿ.ಬಿ. ಬಡ್ನಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಮಾಡಿ ಸಮಾಜಮುಖಿ ಕಾಯಕಯೋಗಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನಿಯವಾಗಿದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.

ಡಾ. ಎಸ್.ಸಿ. ಚವಡಿ, ಡಾ. ಆರ್.ಎಂ. ಕಲ್ಲನಗೌಡರ, ಎಸ್.ಎಂ. ನೀಲಗುಂದ, ಎಸ್.ಸಿ. ಬಡ್ನಿ, ಗುರುಸಿದ್ದಪ್ಪ ಕೊರವಣ್ಣವರ, ಗೌರಮ್ಮಾ ಬಡ್ನಿ, ಜನ್ನತಬಿ ದಂಡಿನ, ರಾಜೇಶ್ವರಿ ಬಡ್ನಿ ಇದ್ದರು.

ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಂಜುನಾಥ ಮಟ್ಟ ಮಾತನಾಡಿ, ಸಮಾಜಮುಖಿ ಕಾಯಕ ಯೋಗಿ ಪ್ರಶಸ್ತಿ ಪಡೆದ ಜನ್ನತಬಿ ದಂಡಿನ ಅವರು ನಿಸ್ವಾರ್ಥ ಸೇವೆಯಿಂದ ಮುಳಗುಂದ ಪಟ್ಟಣದ ಮಹಾ ತಾಯಿಯಾಗಿದ್ದಾರೆ. ಇಂದಿನ ತಲೆಮಾರಿನವರು ತಂದೆ-ತಾಯಿಗಳನ್ನು ಮರೆಯುತ್ತಿದ್ದಾರೆ. ತಂದೆ-ತಾಯಿಗಳು ನಮಗೆಲ್ಲರಿಗೂ ಸಾಕ್ಷಾತ್ ದೇವರು. ಅವರ ಸೇವೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಬೆಂಗಳೂರು| ಮೆಜೆಸ್ಟಿಕ್-ಮಲ್ಲೇಶ್ವರಂ ರಸ್ತೆ ಮೂರು ತಿಂಗಳು ಬಂದ್!

0

ಬೆಂಗಳೂರು: ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ಮಂತ್ರಿಮಾಲ್‌ವರೆಗೆ ಸಾಗುವ ರಸ್ತೆ ಮೂರು ತಿಂಗಳು ಬ್ಲಾಕ್ ಆಗಲಿದೆ. ಇದು B Smile ಕಂಪನಿಯ ವೈಟ್ ಟಾಪಿಂಗ್ ಕಾಮಗಾರಿ ಕಾರಣವಾಗಿದೆ.

ಪರ್ಯಾಯ ಮಾರ್ಗ:

ಮೆಜೆಸ್ಟಿಕ್‌ನಿಂದ ಬರುವ ವಾಹನಗಳು ಈಗ ಓಕುಳಿಪುರಂ ಅಂಡರ್ ಪಾಸ್ → ಸುಜಾತ್ ಸರ್ಕಲ್ ಮಾರ್ಗದಿಂದ ಮಲ್ಲೇಶ್ವರಂ ಪ್ರವೇಶಿಸಬೇಕು. ಇದರಿಂದ ಮೆಜೆಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಹೆಚ್ಚಾಗಲಿದೆ.

ಮೊದಲು ಮೆಜೆಸ್ಟಿಕ್‌ನಿಂದ ಮಂತ್ರಿಮಾಲ್ ಮಾರ್ಗವಾಗಿ ಕೇವಲ 10 ನಿಮಿಷದಲ್ಲಿ ಮಲ್ಲೇಶ್ವರಂ ಪ್ರವೇಶ ಮಾಡಬಹುದಿತ್ತು. ಆದರೆ ರಸ್ತೆ ಬಂದ್‌ ಆಗಿರುವ ಕಾರಣ ಪೀಕ್‌ ಅವಧಿಯಲ್ಲಿ ಮಲ್ಲೇಶ್ವರಗೆ ಬರಲು ಕನಿಷ್ಠ 30 ರಿಂದ 1 ಗಂಟೆ ಬೇಕಾಗಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ.

ಭಟ್ಟರ `ಅಮಲಿ’ನ ಹಾಡಿಗೆ ದನಿಯಾದ ನಟ ಶರಣ್

ಯೋಗರಾಜ್ ಭಟ್ ಅಂದ್ರೆ ನಿರ್ದೇಶನ ಮಾತ್ರವಲ್ಲ, ಹಾಡುಗಳಲ್ಲೂ ಲೈಫ್ ಪಾಠ ಹೇಳೋ ಮಾಯಾಜಾಲ. ಹೊಸ ವರ್ಷದ ಆರಂಭದಲ್ಲೇ ‘ಅಮಲು’ ಎಂಬ ಆಲ್ಬಂ ಹಾಡಿನ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ ಭಟ್.

ಪಂಚರಂಗಿ ಆಡಿಯೋ ಮೂಲಕ ಬಿಡುಗಡೆಯಾಗಿರುವ ‘ಅಮಲು’ ಹಾಡಿಗೆ ನಟ ಶರಣ್ ಧ್ವನಿ ನೀಡಿದ್ದಾರೆ. ಚೇತನ್–ಡ್ಯಾವಿ ಸಂಗೀತ ಸಂಯೋಜಿಸಿರುವ ಈ ಹಾಡು, ಬಿಡುಗಡೆಯಾದ ಕ್ಷಣದಿಂದಲೇ ಭಾರೀ ವೀಕ್ಷಣೆ ಪಡೆದುಕೊಂಡು ಅಭಿಮಾನಿಗಳನ್ನು ಫಿದಾ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೋಗರಾಜ್ ಭಟ್, “ಒಬ್ಬ ಕುಡುಕ ಎಷ್ಟು ಕುಡಿದರೂ ‘ನಾನು ಕುಡಿದು ಮಾತನಾಡುತ್ತಿಲ್ಲ’ ಅಂತ ಹೇಳುತ್ತಿದ್ದ. ಆ ಮಾತೇ ಈ ಹಾಡಿನ ಜೀವ. ಎಲ್ಲ ಕುಡುಕರಲ್ಲೂ ಇರುವ ಮನಸ್ಥಿತಿಯೇ ‘ಅಮಲು’” ಎಂದು ಹಾಡಿನ ಹುಟ್ಟಿನ ಕಥೆ ಬಿಚ್ಚಿಟ್ಟರು.

“ಈ ಹಾಡಿಗೆ ಶರಣ್ ಅವರ ಧ್ವನಿಯೇ ಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ಫೋನ್ ಮಾಡಿ ಕೇಳಿದಾಗ ಅವರು ಒಪ್ಪಲಿಲ್ಲ. ಆದರೆ ಬಿಡಲೇ ಇಲ್ಲ. ಕೊನೆಗೂ ಅವರ ಧ್ವನಿಯಲ್ಲೇ ಹಾಡು ಮೂಡಿಬಂದಿದೆ. ನಮ್ಮ ಕಾಂಬಿನೇಶನ್‌ಗೆ ಈಗಾಗಲೇ ಸಾಕಷ್ಟು ಹಿಟ್ ಹಾಡುಗಳಿವೆ” ಎಂದು ಭಟ್ ಹೇಳಿದರು.

ಶರಣ್ ಮಾತನಾಡಿ, “ನಾನು ಹಾಡುಗಾರನಲ್ಲ. ರಂಗಭೂಮಿ ಕಲಿಸಿದಷ್ಟು ಮಾತ್ರ ಹಾಡುತ್ತೇನೆ. ಆದರೂ ಭಟ್ ಅವರು ಬಿಡದೇ ಒತ್ತಾಯಿಸಿದರು. ‘ಅಮಲು’ ಬರೀ ಕುಡುಕರ ಹಾಡಲ್ಲ. ಇದರಲ್ಲಿ ಜೀವನದ ಅರ್ಥ ಇದೆ. ಜನರು ಹಾಡನ್ನು ಸ್ವೀಕರಿಸಿರುವುದು ಖುಷಿ ತಂದಿದೆ” ಎಂದರು.

ನಿರ್ಮಾಪಕ ಮಹದೇವಪ್ಪ ಆರ್ ಕನಕಪುರ, ಸಂಗೀತ ನಿರ್ದೇಶಕ ಚೇತನ್, ಹುಲಿ ಕಾರ್ತಿಕ್, ಗಡ್ಡ ವಿಜಿ ಸೇರಿದಂತೆ ಇಡೀ ತಂಡಕ್ಕೆ ಅಭಿನಂದನೆಗಳು ಸುರಿದವು. ನಟರಾದ ಸುಮುಖ ಹಾಗೂ ಪೃಥ್ವಿ ಶಾಮನೂರು ‘ಅಮಲು’ ಹಾಡು ಯಶಸ್ವಿಯಾಗಲಿ ಎಂದು ಶುಭಾಶಯ ಕೋರಿದರು.

ನ್ಯಾಯಾಲಯದ ಆದೇಶವಿದ್ರೂ ಪವಿತ್ರಾ ಗೌಡಗೆ ಮನೆಯೂಟ ಇಲ್ಲ!

0

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಪವಿತ್ರಗೌಡಗೆ ಮನೆ ಊಟ ನೀಡದಂತೆ ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ.

ವಿಚಾರಣಾಧೀನ ಕೈದಿಗಳಿಗೆ ಮನೆ ಊಟಕ್ಕೆ ಅವಕಾಶ ನೀಡಿದರೆ, ಮುಂದಿನ ದಿನಗಳಲ್ಲಿ ಇತರೆ ಆರೋಪಿಗಳೂ ಇದೇ ಬೇಡಿಕೆ ಇಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೈಲಿನೊಳಗೆ ಮನೆ ಊಟ ನೀಡಬೇಕಾದರೆ ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಳಗೆ ಕಳುಹಿಸಬೇಕಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ಮತ್ತು ತಂಡ ಅಗತ್ಯವಾಗುತ್ತದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕೈದಿಗಳಿದ್ದು, ಎಲ್ಲರೂ ಇದೇ ಆದೇಶದ ಆಧಾರದ ಮೇಲೆ ಅರ್ಜಿ ಸಲ್ಲಿಸಿದರೆ ನಿರ್ವಹಣೆ ಕಷ್ಟಕರವಾಗಲಿದೆ ಎಂದು ಕಾರಾಗೃಹ ಇಲಾಖೆ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲು ಕಾರಾಗೃಹ ಇಲಾಖೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದೆ. ಇದಕ್ಕೂ ಮೊದಲು ಜೈಲಿನ ಆಹಾರ ಗುಣಮಟ್ಟ ಸರಿಯಿಲ್ಲ, ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಪವಿತ್ರಗೌಡ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಗೆ ನಾಗರಾಜು ಹಾಗೂ ಲಕ್ಷ್ಮಣ್ ಕೂಡ ಸೇರಿಕೊಂಡಿದ್ದರು. ಮನವಿಯನ್ನು ಪರಿಗಣಿಸಿದ್ದ ನ್ಯಾಯಾಲಯ ಮೂವರು ಆರೋಪಿಗಳಿಗೆ ದಿನಕ್ಕೆ ಒಮ್ಮೆ ಮನೆ ಊಟ ನೀಡಲು ಅನುಮತಿ ನೀಡಿತ್ತು.

ಚಾಮರಾಜನಗರ: ಇಂದಿನಿಂದ ರಾಜ್ಯದಲ್ಲಿ ಹುಲಿ ಗಣತಿ ಆರಂಭ!

0

ಬೆಂಗಳೂರು:- ರಾಜ್ಯದಲ್ಲಿ ಅತಿ ಹೆಚ್ಚು ಹುಲಿಗಳಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳಲ್ಲಿ ಸೋಮವಾರದಿಂದ ಹುಲಿ ಗಣತಿ ಆರಂಭವಾಗಿದೆ.

ಮಾರ್ಚ್ 26ರವರೆಗೆ ನಡೆಯಲಿರುವ ಈ ಹುಲಿ ಗಣತಿ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮಾಂಸಾಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಕುರುಹು ಸಮೀಕ್ಷೆ, ಎರಡನೇ ಹಂತದಲ್ಲಿ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆ ಹಾಗೂ ಮೂರನೇ ಹಂತದಲ್ಲಿ ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆ ನಡೆಸಲಾಗುತ್ತದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಣತಿಗಾಗಿ 400ಕ್ಕೂ ಹೆಚ್ಚು ಸಿಬ್ಬಂದಿ, 500 ಟ್ರ್ಯಾಪ್ ಕ್ಯಾಮೆರಾಗಳು, 70ಕ್ಕೂ ಹೆಚ್ಚು ರೇಂಜ್ ಫೈಂಡರ್‌ಗಳು, 90 ಮೊಬೈಲ್ ಉಪಕರಣಗಳು ಮತ್ತು 50ಕ್ಕೂ ಹೆಚ್ಚು ಕಾಂಪಾಸ್‌ಗಳನ್ನು ಬಳಸಲಾಗುತ್ತಿದೆ.

ಗಣತಿ ಪೂರ್ಣಗೊಂಡ ಬಳಿಕ ವರದಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ನಂತರ ಅಧಿಕೃತವಾಗಿ ಹುಲಿ ಸಂಖ್ಯೆಯ ಅಂಕಿ-ಅಂಶಗಳನ್ನು ಪ್ರಕಟಿಸಲಾಗುತ್ತದೆ. ರಾಷ್ಟ್ರವ್ಯಾಪಿ ಹುಲಿ ಗಣತಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತಿದ್ದು, ಇದು ಆರನೇ ಗಣತಿಯಾಗಿರುತ್ತದೆ. ಈ ಹಿಂದೆ 2006, 2010, 2014, 2018 ಮತ್ತು 2022ರಲ್ಲಿ ಹುಲಿ ಗಣತಿ ನಡೆಸಲಾಗಿತ್ತು. 2022ರ ಗಣತಿ ಪ್ರಕಾರ ಕರ್ನಾಟಕದಲ್ಲಿ ಸುಮಾರು 563 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು, ಹುಲಿ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲೇ ಎರಡನೇ ಸ್ಥಾನ ಪಡೆದಿತ್ತು.

ಈ ಬಾರಿ ರಾಜ್ಯದ ಪ್ರತಿಯೊಂದು ಅರಣ್ಯ ವ್ಯಾಪ್ತಿಯ 38 ಅರಣ್ಯ ವಿಭಾಗಗಳ ಗಸ್ತು ಪ್ರದೇಶಗಳಲ್ಲಿ ಗಣತಿ ನಡೆಯಲಿದೆ. ಈ ಉದ್ದೇಶಕ್ಕಾಗಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಐದು ಹುಲಿ ಮೀಸಲು ಪ್ರದೇಶಗಳ ಮುಂಚೂಣಿ ಸಿಬ್ಬಂದಿಗೆ ಹಾಗೂ ರಾಜ್ಯದ ಎಲ್ಲಾ 13 ಅರಣ್ಯ ವೃತ್ತಗಳ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.

ಜನವರಿ 5ರಿಂದ ಮೂರು ದಿನಗಳ ಕಾಲ ತಲಾ ಮೂವರು ಸದಸ್ಯರನ್ನೊಳಗೊಂಡ ತಂಡಗಳು ಪ್ರತಿದಿನ ಸುಮಾರು 5 ಕಿಲೋಮೀಟರ್‌ಗಳಷ್ಟು ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗಲಿದ್ದು, ಹುಲಿ, ಚಿರತೆ ಸೇರಿದಂತೆ ಇತರ ಮಾಂಸಾಹಾರಿ ಪ್ರಾಣಿಗಳು ಹಾಗೂ ಆನೆಗಳ ಪಗ್‌ಮಾರ್ಕ್‌ಗಳು, ಸ್ಕ್ಯಾಟ್ ಮತ್ತು ನೇರ ವೀಕ್ಷಣೆಗಳ ಮಾಹಿತಿಯನ್ನು ಸಂಗ್ರಹಿಸಲಿವೆ.

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪಾದಯಾತ್ರೆ

0

ವಿಜಯಸಾಕ್ಷಿ ಸುದ್ದಿ, ಅಜ್ಜಂಪುರ: ಬುಕ್ಕಾಂಬುಧಿ ಗ್ರಾಮದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಬೆಟ್ಟದವರೆಗೆ ಜನವರಿ 6ರಂದು ಸಂಜೆ 5 ಗಂಟೆಗೆ ಯುಗಪುರುಷ, ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಬೆಳ್ಳಿ ಮಂಗಲ ಮೂರ್ತಿ ಹಾಗೂ ಭಾವಚಿತ್ರದ ಮೆರವಣಿಗೆಯನ್ನು ಸಂಯೋಜಿಸಲಾಗಿದೆ ಎಂದು ಶ್ರೀಮದ್ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷ ಜನವರಿ 7ರಂದು ಪರಮ ತಪಸ್ವಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಲಿಂಗಾಂಗ ಸಾಮರಸ್ಯದ 90ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 70ನೇ ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನರಲ್ಲಿ ಜಾಗೃತಿ ಮತ್ತು ಧರ್ಮ ಪ್ರಜ್ಞೆ ಮೂಡಿಸಬೇಕೆಂಬ ಸತ್ಯ ಸಂಕಲ್ಪದಿಂದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ ಮತ್ತು ಶ್ರೀ ಕಾಶೀ ಜಗದ್ಗುರುಗಳವರು ಮೆರವಣಿಗೆಯೊಂದಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಮಾಹಿತಿ ನೀಡಿದ್ದಾರೆ. ಜಗದ್ಗುರುಗಳೊಂದಿಗೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮನಿ ಶಿವಾಚಾರ್ಯರನ್ನು ಮೊದಲ್ಗೊಂಡು ಸುಮಾರು 50ಕ್ಕೂ ಹೆಚ್ಚು ಶಿವಾಚಾರ್ಯರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.

ಈ ಅರ್ಥಪೂರ್ಣ ಅಪೂರ್ವ ಸಮಾರಂಭದಲ್ಲಿ ಎಲ್ಲೆಡೆಯಿಂದ ಧರ್ಮಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಆಗಮಿಸಿದ ಎಲ್ಲಾ ಸದ್ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಟ್ರಸ್ಟಿನ ಉಪಾಧ್ಯಕ್ಷ ಎಸ್.ಎಂ. ವೀರಭದ್ರಪ್ಪ ಮತ್ತು ಕಾರ್ಯದರ್ಶಿ ಹೆಚ್.ಪಿ. ಸುರೇಶ ತಿಳಿಸಿದ್ದಾರೆ.

ಬಾಕ್ಸ್
5 ದಿನಗಳ ಕಾಲ ಬುಕ್ಕಾಂಬುಧಿಯಲ್ಲಿ ಜನ ಜಾಗೃತಿ ಧರ್ಮ ಸಮಾರಂಭ ನಡೆಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಹೇಳಿಕೆಯಲ್ಲಿ, ಪರಮ ತಪಸ್ವಿ ಲಿಂ.ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ 90ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಜನವರಿ 7ರಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು 70ನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ತಿಳಿಸಿದ್ದಾರೆ.

KSRTC ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್; ಬಸ್ ಟಿಕೆಟ್ ದರಗಳಲ್ಲಿ 15% ವರೆಗೆ ಕಡಿತ!?

0

ಬೆಂಗಳೂರು: ಹೊಸ ವರ್ಷಕ್ಕೆ ಬಸ್‌ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ.

KSRTC ಬಸ್‌ ನಲ್ಲಿ ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಬುಕ್ಕಿಂಗ್ ಮಾಡಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ಹಾಗೂ ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದರೆ, ಪ್ರಯಾಣ ದರಕ್ಕೆ ಶೇಕಡ 10ರಷ್ಟು ರಿಯಾಯಿತಿ ನೀಡಲಾಗಿದೆ.​​ ಇನ್ನೂ ಎಲ್ಲಾ ರೀತಿಯ KSRTC ಬಸ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶೇ.10 ರಿಂದ ಶೇ. 15ರ ವರೆಗೆ ಪ್ರಯಾಣದರಗಳನ್ನು ಇಳಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಇದು ಇಂದಿನಿಂದ ಜಾರಿಗೆ ಬಂದಿದೆ.

ಇನ್ನೂ ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಸಾರಿಗೆಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್, ಮಲ್ಟಿ ಆಕ್ಸೆಲ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರಗಳಲ್ಲಿ ಶೇಕಡ 5 ರಿಂದ 15% ರವರೆಗೆ ರಿಯಾಯಿತಿ ನೀಡಲಾಗಿದೆ.

ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ, ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪೂನಾ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು.

ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್/ಸಿಕಂದರಾಬಾದ್, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪುಣೆ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಸಿ ಸ್ಲೀಪರ್ ಮಾದರಿಯ ಬಸ್‌ಗಳ ಟಿಕೆಟ್ ದರದಲ್ಲಿ (ಶೇಕಡ 5 ರಿಂದ 15 ರಿಯಾಯಿತಿ) ಭರ್ಜರಿ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ksrtc.in ಪಡೆಯಬಹುದಾಗಿದೆ

ಟಿಕೆಟ್ ದರ ಎಷ್ಟು ರಿಯಾಯಿತಿ?
ಬೆಂಗಳೂರು-ಮುಂಬೈ ಬಸ್ ಟಿಕೆಟ್ ದರ: ಮೊದಲು 2500ರೂ., ಈಗ 2000 ರೂಪಾಯಿ.
ಬೆಂಗಳೂರು- ಪುಣೆ ಬಸ್ ಟಿಕೆಟ್ ದರ: ಮೊದಲು 2300 ರೂ., ಈಗ 1700 ರೂಪಾಯಿ.
ಬೆಂಗಳೂರು-ಮುರಡೇಶ್ವರ ಟಿಕೆಟ್ ದರ: ಅಂಬಾರಿ ಉತ್ಸವ ಕ್ರಮವಾಗಿ 1900 ರೂ. ಸದ್ಯ 1700 ರೂಪಾಯಿ, ಅಂಬಾರಿ ಡ್ರೀಮ್ ಬಸ್ 1800 ರೂ. ಈಗ 1500 ರೂಪಾಯಿ.

ಬೆಂಗಳೂರು-ಉಡುಪಿ/ಮಣಿಪಾಲ: ಅಂಬಾರಿ ಉತ್ಸವ ಬಸ್‌- ಮೊದಲು 1620 ರೂ, ಈಗ 1450ರೂ, ಅಂಬಾರಿ ಡ್ರೀಮ್ ಬಸ್ ಕ್ರಮವಾಗಿ 1560 ರೂ. 1300 ರೂ, ಐರಾವತ 2.0 ಬಸ್ 1440 ರೂ. ಈಗ 1260, ಐರಾವರ ಕ್ಲಬ್ ಕ್ಲಾಸ್ 1270 ರೂ. ಇದೀಗ 1060 ರೂಪಾಯಿ ಆಗಿದೆ.
ಬೆಂಗಳೂರು-ದಾವಣಗೆರೆ ಬಸ್ ಐರಾವತ ಬಸ್ ಟಿಕೆಟ್ ಬೆಲೆ ಮೊದಲು 740 ರೂ. ಈಗ 700 ರೂಪಾಯಿ. ಬೆಂಗಳೂರು ಏರ್‌ಪೋರ್ಟ್‌- ದಾವಣಗೆರೆ ಫ್ಲೈ ಬಸ್ ಪ್ರಯಾಣದ ದರ 1250 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂಸಾಚಾರ; ಮತ್ತೋರ್ವ ಹಿಂದೂ ವ್ಯಕ್ತಿಯ ಕೊಲೆ!

0

ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿ ಮುಂದುವರಿದಿದ್ದು, ಇಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ.

ರಾಣಾ ಪ್ರತಾಪ್ ಬೈರಾಗಿ ಕೊಲೆಯಾದ ಹಿಂದೂ ಶಿಕ್ಷಕ. ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಉಂಟಾದ ಅಶಾಂತಿಯ ನಂತರ ನಡೆದ ಇದು ಐದನೇ ಘಟನೆ ಆಗಿದೆ. ಅರುವಾ ಗ್ರಾಮದ ನಿವಾಸಿಯಾಗಿದ್ದ ಬೈರಾಗಿ ಮಾರುಕಟ್ಟೆಯಲ್ಲಿದ್ದಾಗ ದಾಳಿ ನಡೆದಿದ್ದು, ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಕಳೆದ ಡಿಸೆಂಬರ್‌ನಿಂದಲೂ ಮೈಮೆನ್ಸಿಂಗ್ ಮತ್ತು ಇತರೆ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹಲ್ಲೆ ಹಾಗೂ ಗುಂಡಿನ ದಾಳಿಗಳು ನಡೆದಿದ್ದು, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಭಾರತ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಮಧ್ಯಂತರ ಸರ್ಕಾರದ ಅವಧಿಯಲ್ಲಿ 2,900ಕ್ಕೂ ಹೆಚ್ಚು ದಾಳಿ ಪ್ರಕರಣಗಳು ವರದಿಯಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಫೆಬ್ರವರಿ ಮೊದಲ ವಾರದಲ್ಲಿ ಕ್ರೀಡಾ ಮಹೋತ್ಸವ: ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶಗಳ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಕ್ರೀಡಾ ಮಹೋತ್ಸವ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದರ ಕ್ರೀಡಾ ಮಹೋತ್ಸವದ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರ ಕ್ರೀಡೆಗೆ ಮಹತ್ವ ನೀಡಿದೆ. ಕಳೆದ ಹತ್ತು ವರ್ಷದಿಂದ ಫಿಟ್ ಇಂಡಿಯಾ ಕಾರ್ಯಕ್ರಮ ಮಾಡಿದ್ದೆವು. ನಂತರ ಖೇಲೊ ಇಂಡಿಯಾ, ಜೀತೊ ಇಂಡಿಯಾ ಮಾಡಿದೆವು. ಅದರಿಂದ ಒಲಂಪಿಕ್‌ನಲ್ಲಿ ಭಾರತ ಹೆಚ್ಚು ಮೆಡಲ್ ಪಡೆಯಲು ಸಾಧ್ಯವಾಯಿತು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಸಂಸದರ ಕ್ರೀಡೋತ್ಸವ ಮಾಡಿದ್ದಾರೆ. ಈ ಕ್ರೀಡೆ ಹೋಬಳಿಯಿಂದ ತಾಲೂಕು ಮಟ್ಟ, ಅಲ್ಲಿಂದ ಜಿಲ್ಲಾ ಮಟ್ಟದಲ್ಲಿರುತ್ತದೆ. ಇದಕ್ಕೆ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಸಹಕಾರ ಬೇಕು. ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಮಂಗಳವಾರದಿಂದಲೇ ನೋಂದಣಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಡಾ. ಚಂದ್ರು ಲಮಾಣಿ, ವಿ.ಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಜಿಲ್ಲಾ ಯುವಜನ, ಕ್ರೀಡಾ ಮತ್ತು ಸೇವಾ ಇಲಾಖೆಯ ಅಧಿಕಾರಿ ಶರಣು ಗೊಗೇರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಒಳ್ಳೆಯ ತಂಡಗಳನ್ನು ಆಹ್ವಾನಿಸಿ, ಹೆಚ್ಚು ಯುವಕ-ಯುವತಿಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಎಲ್ಲ ತಂಡಗಳಿಗೂ ಟಿಶರ್ಟ್ ನೀಡಬೇಕು. ವಿಜೇತರಾದ ತಂಡಗಳಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಬೇಕು. ಕೊನೆಯ ದಿನ ಸರ್ಕಾರಿ ನೌಕರರಿಗೆ ಒಂದು ದಿನ ಪ್ರದರ್ಶನ ಮ್ಯಾಚ್ ಆಡಿಸಿ ಅವರಿಗೂ ಬಹುಮಾನ ವಿತರಿಸುವ ಸಿದ್ಧತೆಯಾಗಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

KPCL 622 ಹುದ್ದೆಗಳ ಮರುಪರೀಕ್ಷೆ: ತಾತ್ಕಾಲಿಕ ಫಲಿತಾಂಶ ಪ್ರಕಟ!

0

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದ ಒಟ್ಟು 622 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ಮತ್ತು 28ರಂದು ನಡೆದ ಮರುಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಪ್ರಕಟಿಸಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಮರುಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ನಡೆದ ಎಂಟು ದಿನಗಳಲ್ಲೇ ಫಲಿತಾಂಶ ಪ್ರಕಟಿಸಲಾಗಿದೆ. ಫಲಿತಾಂಶ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಜನವರಿ 7ರೊಳಗೆ ಸಲ್ಲಿಸಬಹುದು ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಜೊತೆಗೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಕನ್ನಡ ಕಡ್ಡಾಯ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನೂ ಪ್ರಕಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

error: Content is protected !!