Home Blog Page 2181

ಗಂಡನಿಗೆ ಫೋನ್ ಮಾಡಿ ತಗಲ್ಹಾಕೊಂಡ ಭೂಪ! ಕಾಮುಕ ಕ್ಲರ್ಕ್ ಗೆ ಥಳಿತ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಆಕೆ ನರ್ಸ್. ಅವನು ಆಸ್ಪತ್ರೆಯ ಕ್ಲರ್ಕ್. ಆಕೆಯದ್ದು ತಳಕಲ್ ಆಸ್ಪತ್ರೆಯಲ್ಲಿ ಕೆಲಸ. ಇವನದ್ದು ಕುಕನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ. ಆದರೆ ಇವನು ತಳಕಲ್‌ನಲ್ಲೇ ಮನೆ ಮಾಡಿದ್ದ. ಆಕೆಯ ಮನೆಗೆ ಹತ್ತಿರದಲ್ಲೇ ವಾಸವಾಗಿದ್ದ. ಆಕೆ ಗಂಡ ಮಿಲ್ಟ್ರಿಮ್ಯಾನ್. ಇವನು ಮದುವೆ ಆಗದ ಗುಂಡರಗೋವಿ. ಇಬ್ಬರಿಗೂ ಅದು ಹೇಗೋ ಲವ್ವಿ-ಡವ್ವಿ ಶುರುವಾಗಿದೆಯಂತೆ!

ಸೋಮವಾರ ನರ್ಸ್ ಗಂಡ ಬಹಳ ದಿನಗಳ ನಂತರ ಮನೆಗೆ ಬಂದಿದ್ದಾನೆ. ಆಕೆ ಅವನಿಗೆ ಮನೆಯ ಕಡೆ ಸುಳಿಯಬೇಡ ಎಂದರೂ ಕೇಳದೇ ಎಣ್ಣೆ ಗುಂಗಲ್ಲಿ ರಾತ್ರಿ‌ ಮನೆಗೆ ನುಗ್ಗಿದ್ದಾನೆ. ಆಕೆಯನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಅಷ್ಟೇ ಅಲ್ಲ, ನೇರವಾಗಿ ಗಂಡನಿಗೆ‌ ಫೋನ್ ಮಾಡಿ ತಗಲ್ಹಾಕೊಂಡಿದ್ದಾನೆ.

ವಿಜಯಪುರದಲ್ಲಿದ್ದ ಗಂಡ ರಾತ್ರಿ ಮನೆಗೇ ಬಂದವನೇ ಇವನ ರಾದ್ಧಾಂತ ಕಂಡು ಕೈ-ಕಾಲು ಕಟ್ಟಿ ಬೆಳಗಿನವರೆಗೆ ಥಳಿಸಿದ್ದಾನೆ. ಆನಂತರ ಕುಕನೂರು ಪೊಲೀಸರಿಗೆ ಒಪ್ಪಿಸಿದ್ದಾನೆ. ಈ ಕುರಿತು ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಆರೋಪಿಯನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಡ್ರಗ್ಸ್ ದಗಲ್ಬಾಜಿ: ಮಾಜಿ ಸಚಿವನ ಮಗನ ಬಂಗ್ಲೆ ಮೇಲೆ ರೇಡ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರ: ಡ್ರಗ್ಸ್ ದಂಧೆ ಮತ್ತು ದಗಲ್ಬಾಜಿಯ ಮೇಲೆ ಮುಗಿ ಬಿದ್ದಂತಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಮಂಗಳವಾರ ಮಾಜಿ ಸಚಿವರ ಪುತ್ರನೊಬ್ಬನ ಬಂಗ್ಲೆ ಮೇಲೆ ದಾಳಿ ನಡೆಸಿದ್ದಾರೆ.

ಮಾಜಿ ಸಚಿವ, ಜನತಾ ಪರಿವಾರದ ನಾಯಕ ದಿ. ಜೀವರಾಜ್ ಆಳ್ವಾರ ಪುತ್ರ ಆದಿತ್ಯ ಆಳ್ವಾರ ಖಾಸಗಿ ಬಂಗ್ಲೆ ಮೇಲೆ ಮಂಗಳವಾರ ಡ್ರಗ್ಸ್ ರೇಡ್ ನಡೆದಿದೆ.

ಕರ್ನಾಟಕ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾದ ಮೇಲೆ ಸಮರ ಸಾರಿದ ನಂತರ, ಆರೋಪಿತರ ಪಟ್ಟಿಯಲ್ಲಿರುವ ಆದಿತ್ಯ ಆಳ್ವಾ ಪರಾರಿಯಾಗಿದ್ದಾರೆ.

ಇಲ್ಲಿವರೆಗೂ ಸಿಸಿಬಿ ಈ ಪ್ರಕರಣದಲ್ಲಿ 15 ಜನರ ಮೇಲೆ ಕೇಸು ದಾಖಲಿಸಿದ್ದು, ಅದರಲ್ಲಿ 9 ಜನರ ಬಂಧನವಾಗಿದೆ. ಸಿಗದೇ ಇರುವ 6 ಜನರಲ್ಲಿ ಆದಿತ್ಯ ಆಳ್ವಾ ಕೂಡ ಒಬ್ಬ. 4 ಎಕರೆ ವಿಸ್ತೀರ್ಣದ ಈ ಬಂಗ್ಲೆ ಆವರಣದಲ್ಲೇ ಆದಿತ್ಯ ರೇವ್ ಪಾರ್ಟಿ ಆಯೋಜಿಸುತ್ತಿದ್ದ ಎಂಬ ಅಪಾದನೆಗಳಿವೆ. ಸಿಸಿಬಿ ಪೊಲೀಸರು ಈ ದಾಳಿಯಲ್ಲಿ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಐವರು ಅಂದರ್-ಬಾಹರ್ ಗಿರಾಕಿಗಳು ಅಂದರ್; ಇದರಲ್ಲೊಬ್ಬ ಪುಣ್ಯಾತ್ಮ ಕಂಪ್ಯೂಟರ್ ಪ್ರೊಫೆಸನಲ್!

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಚಾದಂಗಡಿ ಸಮೀಪಾನೇ ಅಡ್ಡೆ ಹಾಕಿ, ಚಾ ಕುಡಿಯುತ್ತ, ಚೂಡಾ ಮೆಲ್ಲುತ್ತ ಪದ್ದತ್‌ಸರಿ ಅಂದರ್-ಬಾಹರ್ ಆಡುತ್ತಿದ್ದ ಐವರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸಿ, ಸ್ಟೇಷನ್‌ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಿಂಗಜ್ಜ ಸುಲ್ತಾನಿಯವರ ಚಾದಂಗಡಿ ಸಮೀಪ ಇಸ್ಪೀಟು ಆಡುತ್ತಿದ್ದ ಐವರಲ್ಲಿ 2ನೇ ಆರೋಪಿ ಮಲ್ಲಿಕಾರ್ಜುನ ಗೌಡ ಪಾಟೀಲ್ ಒಬ್ಬನೇ ಅಮರಾಪುರ ಗ್ರಾಮದವನಾಗಿದ್ದು, ಉಳಿದವರು ಹುಲ್ಲೂರು ಗ್ರಾಮದವರು. ಇವರಿಂದ 2,300 ರೂಪಾಯಿ ವಶಪಡಿಸಿಕೊಂಡು ಕೆಪಿ ಆ್ಯಕ್ಟ್ ಅಡಿ ಕೇಸು ದಾಖಲಿಸಲಾಗಿದೆ.

ಐವರಲ್ಲಿ ಮೂವರು ಚಾಲಕರಾಗಿದ್ದರೆ, ಒಂದನೇ ಆರೋಪಿ ಮತ್ತು ತಂಡದ ಲೀಡರ್ ವೀರಭದ್ರಗೌಡ ಪಾಟೀಲ್ ಕಂಪ್ಯೂಟರ್ ಪ್ರೊಫೆಸನಲ್ ಎಂಬುದು ಕುತೂಹಲದ ವಿಷಯವಾಗಿದೆ.
ವೀರಭದ್ರಗೌಡ ಮಲ್ಲಿಕಾರ್ಜುನಗೌಡ ಪಾಟೀಲ್, ಮಲ್ಲಿಕಾರ್ಜುನಗೌಡ ಮೌನೇಶಗೌಡ ಪಾಟೀಲ್, ಮೊಹಮ್ಮದಲಿ ಮೌಲಾಸಾಬ್ ಪಾಟೀಲ್, ಷಣ್ಮುಖರೆಡ್ಡಿ ಕಲ್ಲಪ್ಪ ಕೋಳಿವಾಡ, ರಮೇಶ ಶಂಕ್ರಪ್ಪ ಮೂಕಿ ಎಂಬುವವರೇ ಸಿಕ್ಕಿಬಿದ್ದ ಆರೋಪಿಗಳು.

11 ಜನರ ಮತ್ತೊಂದು ‘ಐಪಿಎಲ್’ ತಂಡ ಬಲೆಗೆ! ಗುಡಿ ಮುಂದನ ಇಸ್ಪೀಟು: ಗೋಣಿ ಬಸವೇಶ್ವರನ ಶಾಪ?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗೋಣಿ ಬಸಪ್ಪನ ಗುಡಿ ಮುಂದ ಕುಂತು ಚಕಾಚಕಾ ಎಲೆ ಒಗೆಯುತ್ತಿದ್ದ ಮತ್ತೊಂದು ಐಪಿಎಲ್( ಇಸ್ಪೀಟ್ ಪ್ಲೇಯಿಂಗ್ ಲೋಕಲ್ಸ್) ತಂಡವನ್ನು ಗದಗ ಗ್ರಾಮೀಣ ಪೊಲೀಸರು ಬಂಧಿಸಿ, ಆಟಗಾರ ಮಹಾಶಯರನ್ನು ಸ್ಟೇಷನ್‌ಬೇಲ್ ಬಿಡುಗಡೆ ಮಾಡಿದ್ದಾರೆ.

ಹೊತ್ತುಗೊತ್ತು, ನಿದ್ದಿ-ನೀರಡಿಕೆ ಯಾವುದರ ಪರಿವೆಯೇ ಇಲ್ಲದೆ ಎಲಿ ಎಳೆಯೋದು, ರೊಕ್ಕ ಹಚ್ಚೋದು, ಹಂಗನ ಬೀಡಿನೂ ಹಚ್ಚೋದು. ಆಡಬೇಕಂದ್ರ ಆಡಾಬೇಕು ಅಂತಿದ್ದ ಗದಗ ತಾಲೂಕಿನ ನೀರಲಗಿಯ 11 ಫೇಮಸ್ ಪ್ಲೇಯರ್‌ಗಳ ಅಡ್ಡಾದ ಮೇಲೆ ಪಿಎಸ್‌ಐ ಎಂ.ಜಿ. ಕುಲಕರ್ಣಿಯವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದರು.

‘ಆಟಗಾರರಿಂದ’ 4,450 ರೂ. ವಶಪಡಿಸಿಕೊಂಡು, ಕೆಪಿ ಆ್ಯಕ್ಟ್ 87ರ ಅಡಿ ಕೇಸು ಜಜ್ಜಲಾಗಿದೆ. ಗೋಣಿ ಬಸಪ್ಪನ ಮುಂದನ ಕುಂತ ಆಡಿದ್ರ ಅಂವಾ ಸುಮ್ನ ಬಿಟ್ಟಾನನು? ಶಾಪ ಹಾಕೇ ಬಿಟ್ಟಾನ ಎಂದು ಜನ ಮಾತಾಡುತ್ತಿದ್ದಾರೆ.

ಸಿಕ್ಕಿ ಬಿದ್ದವರ ಪೈಕಿ ಒಬ್ಬಾತ ಪ್ರೈವೇಟ್ ಕಂಪನಿ ನೌಕರನಂತೆ. ಎಲ್ಲ ಆಟಗಾರರು ನೀರಲಗಿಯವರೇ.
‘ಐಪಿಎಲ್’ ಆಟಗಾರರ ಪಟ್ಟಿ
1. ಶಿವನಗೌಡ ನಾಗನಗೌಡ ಹಿರೇಗೌಡ್ರ, 2. ಕಾಶಯ್ಯ ತೋಟಯ್ಯ ಹಿರೇಮಠ, 3. ವೀರನಗೌಡ ಬಸನಗೌಡ ಗೌಡರ್, 4. ಬಸಲಿಂಗಪ್ಪ ಪರಪ್ಪ ಹಾದಿಮನಿ, 5. ಷಣ್ಮುಖಪ್ಪ ಪರಪ್ಪ ಇಬ್ರಾಹಿಂಪುರ, 6. ವಿರುಪಾಕ್ಷಪ್ಪ ಫಕ್ಕೀರಪ್ಪ ನರಗುಂದ, 7. ಬಸವರಾಜ ಶಿವಪ್ಪ ಅಣ್ಣಿಗೇರಿ, 8. ಶಿವಾನಂದಪ್ಪ ಲಕ್ಕಪ್ಪ ವಾಲ್ಮೀಕಿ, 9. ಅಶೋಕ್ ಬಸವಂತಪ್ಪ ಭಾವಿ, 10. ಚಂದ್ರಶೇಖರ್ ನಾಗಪ್ಪ ಮಡಿವಾಳರ್, 11. ಬಸವರಾಜ ಸೋಮಲಿಂಗಪ್ಪ ಬಸಾಪುರ

ಮಂಗಳವಾರ ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನದ ದರ:ಮುಂಬೈಗಿಂತ 2 ಸಾವಿರ ರೂ. ದುಬಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ರಾಜ್ಯದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಲ್ಲಿ ಏಕರೂಪದ ದರವಿದೆ. ದೆಹಲಿ, ಜೈಪುರ, ಲಕ್ನೋಗಳಲ್ಲಿ ಗರಿಷ್ಠ 54,540 ರೂ. ಇದೆ. ಮುಂಬೈನಲ್ಲಿ ಕನಿಷ್ಠ 50,910 ರೂ. ಇದೆ.

ಬೆಂಗಳೂರು, ಮೈಸೂರು, ಮಂಗಳೂರು: 22 ಕ್ಯಾರಟ್: 48,500 ರೂ., 24 ಕ್ಯಾರಟ್: 52,900 ರೂ.
ಹುಬ್ಬಳ್ಳಿ: 22 ಕ್ಯಾರಟ್: 48,547 ರೂ.,24 ಕ್ಯಾರಟ್: 52,960 ರೂ.

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದು ಯುವತಿ ಸಾವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವತಿಯೊಬ್ಬಳು ಆಯ ತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಅಮೆರಿಕದ ಟೆನ್ನಿಸ್ಸಿಯಲ್ಲಿ ಸೋಮವಾರ ನಡೆದಿದೆ.
ಆಂಧ್ರ ಮೂಲದ ಪೊಲವರಪು ಕಮಲಾ ದುರಂತಕ್ಕೀಡಾದ ಯುವತಿ ಆಗಿದ್ದು, ತನ್ನ ಮದುವೆಯಾಗಲಿರುವ ಯುವಕನೊಂದಿಗೆ ಬಾಲ್ಡ್ ನದಿ ಜಲಪಾತ ನೋಡಲು ಹೋದಾಗ ಘಟನೆ ಸಂಭವಿಸಿದೆ.

ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಜಲಪಾತದ ಅಡಿಗೆ ಬಿದ್ದಿದ್ದು, ಯುವಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕಮಲಾ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಗುಡ್ಲವಲೇರು ಊರಿನವಳಾಗಿದ್ದು, ಇಂಜಿನಿಯರಿಂಗ್ ನಂತರ ಅಮೆರಿಕದ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು.

ಗದಗ ಜಿಲ್ಲೆಯಲ್ಲಿ ಸೋಮವಾರ 96 ಜನರಿಗೆ ಸೋಂಕು; 184 ಜನರು ಗುಣಮುಖ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಸೋಮವಾರ ದಿ 14 ರಂದು 96 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

96 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7653 ಕ್ಕೇರಿದೆ. ಸೋಮವಾರ 184 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6453 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1091 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಮವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 109 ಕ್ಕೇರಿದೆ.

ಗದಗ-35, ಮುಂಡರಗಿ-12, ನರಗುಂದ-13, ರೋಣ-08, ಶಿರಹಟ್ಟಿ-18, ಹೊರ ಜಿಲ್ಲೆಯ 10 ಪ್ರಕರಣ ಸೇರಿದಂತೆ ಒಟ್ಟು 96 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಜವಳ ಗಲ್ಲಿ, ವಾಟರ ಟ್ಯಾಂಕ್ ಹತ್ತಿರ, ಬಸವೇಶ್ವರ ನಗರ, ಹುಡ್ಕೋ ಕಾಲೋನಿ, ತಾಜ್ ನಗರ, ಜಿಮ್ಸ್, ಕಬಾಡಿ ಚಾಳ, ಮಹಾಂತೇಶ ನಗರ, ಬಾಪೂಜಿ ನಗರ, ಬ್ಯಾಂಕರ್ಸ್ ಕಾಲೋನಿ, ವಿವೇಕಾನಂದ ನಗರ,

ಶಿವಾನಂದ ನಗರ, ಗಂಗಿಮಡಿ, ರಾಜೀವಗಾಂಧಿ ನಗರ, ಸಾಯಿಬಾಬಾ ದೇವಸ್ಥಾನದ ಹತ್ತಿರ,

ಗದಗ ತಾಲೂಕಿನ ಮುಳಗುಂದ, ಹುಲಕೋಟಿ, ಲಕ್ಕುಂಡಿ, ನಾಗಸಮುದ್ರ, ಕುರ್ತಕೋಟಿ,

ಮುಂಡರಗಿ ಪಟ್ಟಣದ ಜೆ.ಟಿ.ಮಠ ರಸ್ತೆ, ಮುಂರಡಗಿ ತಾಲೂಕಿನ ಹಿರೇವಡ್ಡಟ್ಟಿ,  ನರಗುಂದ ಪಟ್ಟಣದ ದಂಡಾಪುರ ಓಣಿ,  ರಾಚಯ್ಯ ನಗರ, ನರಗುಂದ ತಾಲೂಕಿನ ಹದ್ಲಿ, ಸೋಮಾಪುರ, ಚಿಕ್ಕ ನರಗುಂದ ರೋಣ ತಾಲೂಕಿನ ಸೂಡಿ, ಜಕ್ಕಳಿ, 

ಗಜೇಂದ್ರಗಡ ಪಟ್ಟಣದ ಭೂಮರೆಡ್ಡಿ ಪ್ಲಾಟ, ವಿದ್ಯಾನಗರ,  ಶಿರಹಟ್ಟಿ ಪಟ್ಟಣದ ಶಿವಲಿಂಗೇಶ್ವರ ನಗರ, ರಾಘವೇಂದ್ರ ಮಠ, ವಿಜಯನಗರ, ಸೇವಾನಗರ, ಶಿರಹಟ್ಟಿ ತಾಲೂಕಿನ ನಾರಾಯಣಪುರ, ಬೆಳ್ಳಟ್ಟಿ, ವಡವಿ, ಸುಗ್ನಳ್ಳಿ, ಶಿಗ್ಲಿ, ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಕೆರಿ,

ಅಗರಬತ್ತಿ ಮಾರುತ್ತಲೇ ಪಿಎಸ್‌ಐ ಆದ ಅತ್ತರವಾಲಾ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮುಂಡರಗಿ: ಓದಿನ ನಡುವೆ ಕುಟುಂಬ ನಿರ್ವಹಣೆಗಾಗಿ ಊರೂರು ಸುತ್ತಿ ಅಗರಬತ್ತಿ ಮಾರುತ್ತಿದ್ದ ಯುವಕ ಈಗ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಪಟ್ಟಣದ ಸಾಗರ್ ಅತ್ತರವಾಲಾ ಶುಕ್ರವಾರ ಬಿಡುಗಡೆಯಾದ ಪಿಎಸ್‌ಐ ಫಲಿತಾಂಶದಲ್ಲಿ ರಾಜ್ಯಕ್ಕೆ 173ನೇ ರ‍್ಯಾಂಕ್ ಗಳಿಸುವ ಮೂಲಕ ಪೊಲೀಸ್ ಇಲಾಖೆ ಸೇರುತ್ತಿದ್ದಾನೆ.

ದಿನ ನಿತ್ಯದ ಕುಟುಂಬ ನಿರ್ವಹಣೆ ಮಾಡುವುದೇ ಇಂದಿನ ದಿನಮಾನಗಳಲ್ಲಿ ಕಷ್ಟವಾಗಿರುವಾಗ ಕಡುಬಡತನದಲ್ಲಿ ಬಂದ ಸಾಗರ್ ಅತ್ತರವಾಲಾ ರಾಜ್ಯಕ್ಕೆ 173ನೇ ರ‍್ಯಾಂಕ್ ಪಡೆದು ಪಿಎಸ್‌ಐ ನೇಮಕವಾಗಿ ಮುಂಡರಗಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ.

ಎರಡು ತಿಂಗಳು ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶಿಯರ್ ಆಗಿ ಸರ್ಕಾರಿ ಹುದ್ದೆಯಲ್ಲಿ ಸಾಗರ್ ಕೆಲಸ ಮಾಡಿದ್ದ. ಪಿಎಸೈ ಪರೀಕ್ಷೆಗಾಗಿ ಓದಲು ಸಮಯ ಸಿಗದ್ದರಿಂದ ನೌಕರಿಗೆ ರಾಜೀನಾಮೆ ಸಲ್ಲಿಸಿ ಅಬ್ಯಾಸ ಮಾಡಿ ಗೆದ್ದಿದ್ದಾನೆ. ಯಾವುದೇ ಕೋಚಿಂಗ್ ಇಲ್ಲದೇ ಹಿಂದುಳಿದ ಮುಂಡರಗಿ ಪಟ್ಟಣದಲ್ಲಿ ಲಭ್ಯವಿರುವ ಪಠ್ಯ ಸಂಪನ್ಮೂಲಗಳನ್ನು ಅಭ್ಯಸಿಸಿ ಈ ಪರೀಕ್ಷೆಯಲ್ಲಿ 173ನೇ ರ‍್ಯಾಂಕ್ ಪಡೆದಿದ್ದಾನೆ. ಕೆಲವೊಮ್ಮೆ ತಂದೆಗೆ ನೆರವಾಗಲು ಅಗರಬತ್ತಿ ಮಾರುವ ಕೆಲಸವನ್ನೂ ನಿರ್ವಹಿಸುತ್ತಲೇ ಪಿಎಸ್‌ಐ ಆಗಿರುವುದು ಆತನ ಛಲಕ್ಕೆ ನಿದರ್ಶನವಾಗಿದೆ.

ಸಂಸಾರ ನೌಕೆ ಸಾಗಿಸಲು ಕಷ್ಟವಾದ ಸಂದರ್ಭದಲ್ಲೂ ಮಗನ ಓದಿಗೆ ತೊಂದರೆಯಾಗದಂತೆ ತಂದೆ-ತಾಯಿ ನೋಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಸಾಗರ್, ಚಿಕ್ಕಂದಿನಿಂದಲೂ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಹಿಸುವ ಬಯಕೆಯಿತ್ತು. ಬಡತನದಲ್ಲೂ ತಂದೆ, ತಾಯಿ ನನ್ನ ಓದಿಗೆ ಬೆಂಬಲ ನೀಡಿದ್ದಾರೆ. ಈಗ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಪ್ರಾಮಾಣಿಕ ಸೇವೆ ಸಲ್ಲಿಸುವ ಗುರಿ ಹೊಂದಿದ್ದಾನೆ ಎಂದಿದ್ದಾನೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನ ಭಾವನೂರಿನ ಸಹನಾ ಪಾಟೀಲಳಂತೆ ಸಾಗರನೂ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಒಂದೂವರೆ ಲಕ್ಷ ರೂ. ಮೌಲ್ಯದ ಗಾಂಜಾ ವಶ: ಜಿಲ್ಲೆಯ ವಿವಿದೆಡೆ ರೇಡ್| ಸಿಕ್ಕಿಬಿದ್ದ ಗಾಂಜಾವಾಲಾಗಳು ಯಾರು?

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗಾಂಜಾ ಬೆಳೆದು, ಒಣಗಿಸಿ ಮಾರುತ್ತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದು ಆತನಿಂದ ಒಂದೂವರೆ ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪ್ರವೀಣಗೌಡ ಭರಮಗೌಡ ಜಯನಗೌಡ್ರ ಬಂಧಿತ ಆರೋಪಿಯಾಗಿದ್ದು, ಮುಂಡರಗಿ ಸಿಪಿಐ ಎಸ್.ಎಂ ಬೆಂಕಿ ನೇತೃತ್ವದ ತಂಡ ದಾಳಿ ನಡೆಸಿತ್ತು. ಆರೋಪಿತನಿಂದ 1 ಕೆಜಿ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ರೋಣದಲ್ಲಿಯೂ ರೇಡ್ ನಡೆದಿದ್ದು, ತಾಲೂಕಿನ ಸವಡಿ ಗ್ರಾಮದ ನಿಂಗನಗೌಡ ಸಂಗನಗೌಡ ಮುಗನೂರ(ಕರಮಡಿ) ಎಂಬಾತನನ್ನು ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ಪೊಲೀಸರು ಬಂಧಿಸಿದ್ದು, 5 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಜಾಲದ ಕುರಿತು ತನಿಖೆ ಆರಂಭವಾದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಲ್ಲ ಜಿಲ್ಲೆಗಳ ಎಸ್‌ಪಿಗಳಿಗೆ ಗಾಂಜಾ ಮತ್ತು ಇತರ ಅಕ್ರಮ ಚಟುವಟಿಕೆಗಳಿಗೆ ತಡೆ ಹಾಕಲು ಸೂಚಿಸಿದ್ದಾರೆ ಎನ್ನಲಾಗಿದೆ. ಅದರ ಪರಿಣಾಮವಾಗಿ ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಮದ್ಯದ ಅಕ್ರಮ ಮಾರಾಟ, ಗಾಂಜಾ ಮಾರಾಟದ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ವಾಲ್ಮೀಕಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಸೆಪ್ಟೆಂಬರ್ 21ರಂದು ನಡೆಯುವ ಅಧಿವೇಶನದಲ್ಲಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ್ ದೊಣ್ಣಿ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮೀಸಲಾತಿಗಾಗಿ ಸಮುದಾಯವು ಹಲವು ವರ್ಷಗಳಿಂದ ಹೋರಾಡುತ್ತಾ ಬಂದರೂ ಬೇಡಿಕೆ ಈಡೇರಿಲ್ಲ. ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರು ಮೀಸಲಾತಿ ಕಲ್ಪಿಸಲು ಸಮ್ಮತಿಸಿ ವರದಿ ನೀಡಿ, 2-3 ತಿಂಗಳು ಗತಿಸಿದರೂ ಸರಕಾರ ಗಮನ ಹರಿಸುತ್ತಿಲ್ಲ. ಹಾಗಾಗಿ ಸೆಪ್ಟೆಂಬರ್ 21ರೊಳಗಾಗಿ ಮೀಸಲಾತಿ ಕಲ್ಪಿಸದಿದ್ದರೆ ರಾಜನಹಳ್ಳಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಶರಣಪ್ಪ ನಾಯಕ್, ವಿಜಯೇಂದ್ರ ಬಿಸರಳ್ಳಿ, ರುಕ್ಕಣ್ಣ ಸ್ಯಾವಿ, ಮಲ್ಲಪ್ಪ ಬೇಲೇರಿ ಮತ್ತಿತರರು ಇದ್ದರು.

error: Content is protected !!