Home Blog Page 22

ಪೋಕ್ಸೋ ಕೇಸ್: ಮಾಜಿ ಸಿಎಂ ಯಡಿಯೂರಪ್ಪಗೆ ಸಂಕಷ್ಟ, ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು ನಾಲ್ವರಿಗೆ ಸಮನ್ಸ್ ಜಾರಿ!

0

ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಹೊಸ ಸಂಕಷ್ಟ ಎದುರಾಗಿದೆ. ಡಿಸೆಂಬರ್ 2ರಂದು ಖುದ್ದು ಹಾಜರಾಗುವಂತೆ BSY ಸೇರಿ ನಾಲ್ವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಹೈಕೋರ್ಟ್​​ನ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಎಸ್​ಪಿಪಿ ಅಶೋಕ್ ನಾಯ್ಕ್ ಅವರು ಅರ್ಜಿ ಸಲ್ಲಿಸಿದ್ದರು. ಅದರಂತೆ ಬಿಎಸ್ ಯಡಿಯೂರಪ್ಪನವರ ಜೊತೆಗೆ ಇತರೆ ಮೂವರು ಆರೋಪಿಗಳಾದ ವೈ.ಎಂ. ಅರುಣ, ರುದ್ರೇಶ್ ಮರುಳಸಿದ್ದಯ್ಯ, ಜಿ. ಮರಿಸ್ವಾಮಿ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಪ್ರಕರಣ ಸಂಬಂಧ ಹೈಕೋರ್ಟ್ ಟ್ರಯಲ್‌ಗೆ ಅನುಮತಿ ನೀಡಿತ್ತು. ಇದೀಗ 1ನೇ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್ ಬಿ.ಎಸ್ ಯಡಿಯೂರಪ್ಪ ಸೇರಿದಂತೆ 4 ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಗೆ ಸಮನ್ಸ್ ಜಾರಿ ಮಾಡಿದ್ದು, ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗುವಂತೆ ತಿಳಿಸಿದೆ.

ಇದಕ್ಕೂ ಮುನ್ನ ಕೆಳಹಂತದ ನ್ಯಾಯಾಲಯ ಆರೋಪ ನಿಗದಿಗೆ ಸಂಬಂಧಿಸಿದಂತೆ ಯಡಿಯೂರಪ್ಪನವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ಬಿಎಸ್‌ವೈ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಯಡಿಯೂರಪ್ಪನವರ ಅರ್ಜಿಯನ್ನು ವಜಾಗೊಳಿಸಿ ಟ್ರಯಲ್‌ಗೆ ಅನುಮತಿ ನೀಡಿತ್ತು.

ಕಲಿತ ವಿದ್ಯೆಯನ್ನು ಇತರರಿಗೂ ತಲುಪಿಸಿ: ಶ್ರೀ ಕಾಶಿ ಜಗದ್ಗುರುಗಳು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವಿದ್ಯೆಯನ್ನು ಕಲಿಯುವುದು ಮುಖ್ಯವಲ್ಲ. ಕಲಿತ ವಿದ್ಯೆಯನ್ನು ಸರ್ವರಿಗೂ ತಲುಪಿಸಿ, ಅವರನ್ನು ಜಾಗೃತರಾಗುವಂತೆ ಮಾಡುವುದು ಒಂದು ತಪಸ್ಸಿದ್ದಂತೆ. ಅದನ್ನು ನರೇಗಲ್ಲ ಹಿರೇಮಠದ ಷ.ಬ್ರ.ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಕಾಶಿ ಪೀಠದ ಜ್ಞಾನ ಸಿಂಹಾಸನಾಧೀಶ್ವರ ಜ. ಚಂದ್ರಶೇಕರ ಭಗವತ್ಪಾದಂಗಳವರು ನುಡಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಹಿರೇಮಠದ ಜಾತ್ರಾ ಮಹೋತ್ಸವದಲ್ಲಿ ಪುರಾಣ ಪ್ರವಚನದ ಕೊನೆಯ ದಿನ ಮಂಗಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಹಿಂದೆ ನಾಲ್ಕು ವೇದಗಳನ್ನು ಓದುವ, 28 ಆಗಮಗಳನ್ನು ತಿಳಿಯುವ ಜನರಿದ್ದರು. ಆದರೆ ಈಗ ಅವುಗಳನ್ನು ಓದುವವರೂ ಇಲ್ಲ, ಓದಲು ಸಮಯವೂ ಇಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಸಿದ್ಧಾಂತ ಶಿಖಾಮಣಿಯು ಸರಿಯಾದ ಉತ್ತರವನ್ನು ಕೊಡುತ್ತದೆ. ಆದ್ದರಿಂದ ಸಿದ್ಧಾಂತ ಶಿಖಾಮಣಿಯನ್ನು ಓದುವ ಕಾರ್ಯವನ್ನು ರೂಢಿಸಿಕೊಳ್ಳಬೇಕು. ಸಿದ್ಧಾಂತ ಶಿಖಾಮಣಿಯನ್ನು ಓದಲು ಸಾಧ್ಯವಾಗದಿದ್ದರೆ ಅದರ ಸೇವೆಯನ್ನು ಮಾಡಿದರೂ ಸಾಕು, ಅದು ನಿಮಗೆ ಸದ್ಗತಿ ಕೊಡುವಂತಹ ಪ್ರಸಾದಿತ ಗ್ರಂಥವಾಗಿದೆ ಎಂದು ಜಗದ್ಗುರುಗಳು ತಿಳಿಸಿದರು.

ಸಿದ್ಧಾಂತ ಶಿಖಾಮಣಿ ನಿಮ್ಮದೇ ಪುರಾಣ. ಅದನ್ನು ಕಳೆದ ಎರಡು ದಶಕಗಳಿಂದ ಕೇಳುತ್ತ ಬಂದಿರುವ ನೀವೇ ಭಾಗ್ಯವಂತರು. ಮನುಷ್ಯ ಜನ್ಮ ದೊರಕುವುದೇ ದುರ್ಲಭ. ಅದನ್ನು ಸುಖಾ ಸುಮ್ಮನೆ ಕಳೆಯಬಾರದು. ಮಾನವ ಜನ್ಮವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳದೆ, ದಾನ-ಧರ್ಮ, ಸತ್ಸಂಗದಲ್ಲಿ ಕಾಲ ಕಳೆಯುತ್ತ ಸಾರ್ಥಕಪಡಿಸಿಕೊಳ್ಳಬೇಕು. ಅದನ್ನು ಇಲ್ಲಿನ ಹಿರೇಮಠ ಮಾಡುತ್ತ ಬಂದಿರುವುದು ನಮಗೆ ವಿಶೇಷವಾದ ಆನಂದವನ್ನುಂಟುಮಾಡಿದೆ ಎಂದು ಜಗದ್ಗುರುಗಳು ತಿಳಿಸಿದರು.

ಷ.ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿ, ಶ್ರೀಮಠದ ಬೆಳವಣಿಗೆಯ ಬಗ್ಗೆ ಜಗದ್ಗುರುಗಳಿಗೆ ಪರಿಚಯಿಸಿದರು. ಇಲ್ಲಿ ಜಾತ್ರೆಯನ್ನು ಪ್ರಾರಂಭಿಸಿ ಮುಂದಿನ ವರ್ಷಕ್ಕೆ ಹತ್ತು ವರ್ಷಗಳಾಗುತ್ತವೆ. ಈ ದಶಮಾನೋತ್ಸವದ ಸಂದರ್ಭದಲ್ಲಿ ಜಗದ್ಗುರುಗಳು ಇಲ್ಲಿಯೇ ಐದು ದಿನಗಳ ಕಾಲ ವಾಸ್ತವ್ಯ ಮಾಡಿ ನಮಗೆಲ್ಲ ಮಾರ್ಗದರ್ಶನ ಮಾಡಬೇಕೆಂದು ವಿನಂತಿಸಿದರು.

ವೇದಿಕೆಯ ಮೇಲೆ ಡಾ. ಕೆ.ಬಿ. ಧನ್ನೂರ, ಎಸ್.ಎಸ್. ಮೇಟಿ, ವೀರೇಶ ಕೂಗುಮಠ, ವಿ.ಕೆ. ಗುರುಮಠ ಮುಂತಾದ ಗಣ್ಯರಿದ್ದರು. ನಿವೃತ್ತ ಶಿಕ್ಷಕ ಎಂ.ಎಸ್ ದಢೇಸೂರಮಠ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಜಗದ್ಗುರುಗಳು ಕಾಶಿನಾಥನ ಕಾಶಿ ಯಾತ್ರೆ ಮತ್ತು ವೈದ್ಯ ಪಂ. ಕಾಶಿನಾಥ ಶಾಸ್ತಿçಗಳು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು.

ಸಾನ್ನಿಧ್ಯ ವಹಿಸಿದ್ದ ಅಬ್ಬಿಗೇರಿ-ಸಿದ್ದರಬೆಟ್ಟದ ಷ.ಬ್ರ. ಶ್ರೀ ವೀರಭದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಭಗವಂತನ ಪ್ರತಿ ಅವತಾರದ ಹಿಂದೆಯೂ ಒಂದು ಸಂದೇಶವಿದೆ. ದುಷ್ಟರನ್ನು ಸದೆಬಡಿದು ಶಿಷ್ಟರನ್ನು ಪಾಲಿಸುವುದಕ್ಕಾಗಿ ಭಗವಂತ ಕಾಲಕಾಲಕ್ಕೆ ಅವತಾರವೆತ್ತಿ ಬರುತ್ತಾನೆ. ಶ್ರೀ ವೀರಭದ್ರೇಶ್ವರನನ್ನು ಸರ್ವರೂ ಪೂಜಿಸುತ್ತಾರೆ. ಅವನು ಸಕಲರನ್ನೂ ಕಾಯುತ್ತಾನೆ. ಅವನ ಪುರಾಣ ಕೇಳಿದ ನೀವೇ ಧನ್ಯರು ಎಂದರು.

ಹೇಮರಡ್ಡಿ ಮಲ್ಲಮ್ಮ ಮಹಿಳಾಕುಲಕ್ಕೆ ಮಾದರಿ: ಕೃಷ್ಣಗೌಡ ಎಚ್.ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅದೆಷ್ಟೇ ಕಷ್ಟ ಬಂದರೂ ಧೃತಿಗೆಡದೇ ಕಠೋರ ತಪಸ್ಸು ಮಾಡುವ ಮೂಲಕ ಶಿವನೊಲುಮೆಯನ್ನು ಪಡೆದು ಸಮಾಜದ ಉದ್ಧಾರಕ್ಕಾಗಿ ಬಾಳಿ ಬದುಕಿ ಇಡೀ ಮಾನವ ಕುಲಕ್ಕೆ ಮತ್ತು ಸರ್ವ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದಾಳೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಅಭಿಪ್ರಾಯಪಟ್ಟರು.

ಅವರು ಸೋಮವಾರ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ-ಶ್ರೀ ಮಹಾಯೋಗಿ ವೇಮನ ರಡ್ಡಿ ಸಮಾಜ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ತಿಕ ಮಾಸದ ದೀಪೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಮಹಾಯೋಗಿ ವೇಮನ ಅವರು ತ್ಯಾಗ ಜೀವನ ನಡೆಸುವ ಮೂಲಕ ಹಾಗೂ ವಚನ ಸಾಹಿತ್ಯಕ್ಕೆ ಬಹು ದೊಡ್ಡ ಆದರ್ಶದ ಕೊಡುಗೆಯನ್ನು ನೀಡುವ ಮೂಲಕ ಸಮಾಜದ ಸನ್ಮಾರ್ಗಕ್ಕೆ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.

ಗದಗ ಜಿಲ್ಲಾ ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಶ್ರೀ ಮಹಾಯೋಗಿ ವೇಮನ ರಡ್ಡಿ ಸಂಘ ಸಮಾಜಮುಖಿ, ಜನಮುಖಿಯಾಗಿ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದರಲ್ಲದೆ, ಸಮಾಜದ ಮುಂಚೂಣಿಯಲ್ಲಿರುವ ಹಿರಿಯರು, ಮಹಿಳೆಯರು, ಯುವಕರು ಸಮಾಜದ ಬಲವರ್ಧನೆಗೆ ಶ್ರಮಿಸುತ್ತಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ರವೀಂದ್ರನಾಥ ಮೂಲಿಮನಿ, ಎಸ್.ಆರ್. ಹಳ್ಳೂರ, ಎಸ್.ಪಿ. ಪಾಟೀಲ, ಶಂಕರ ಮುದರಡ್ಡಿ, ಬಿ.ಎಚ್. ಮಂಕಣಿ, ವ್ಹಿ.ಕೆ. ಚೂರಿ, ರವೀಂದ್ರನಾಥ ಕುಲಕರ್ಣಿ, ಎಸ್.ಡಿ. ಗಡಾದ, ಬಿ.ಎಸ್. ಗಿರಡ್ಡಿ, ಬಿ.ಎಂ. ಅವರಡ್ಡಿ, ಮಲ್ಲನಗೌಡ ಕಲಾದಗಿ, ವ್ಹಿ.ವ್ಹಿ. ಚೇಗರಡ್ಡಿ, ಬಾಬು ಮಲ್ಲನಗೌಡರ, ರಾಘು ಹೊಸಮನಿ, ಎಸ್.ಎಸ್. ರಡ್ಡೇರ, ಪ್ರಕಾಶ ಬಸರಿಗಿಡದ, ವ್ಹಿ.ಆರ್. ಬಾಣಾಪೂರ, ಎ.ಎಸ್. ರಡ್ಡೇರ, ದೇವರಡ್ಡಿ ತಿರ್ಲಾಪೂರ, ಜಗದೀಶ ಪ್ಯಾಟಿ, ಎಂ.ಎಸ್. ಕಲಾದಗಿ, ಕೆ.ಬಿ. ಕೊಣ್ಣೂರ, ಪ್ರೇಮಾ ಮೇಟಿ,  ಲಕ್ಷ್ಮೀ ಹಳ್ಳೂರ, ಭಾಗ್ಯ ಶಿರೋಳ, ಸರೋಜಾ ಪೈಲ್, ಪುಷ್ಪಾ ಅಬ್ಬಿಗೇರಿ, ಲೀಲಾ ಮುದರಡ್ಡಿ, ಮಂಜುಳಾ ಚಿಂಚಲಿ, ಮಧು ಪಾಟೀಲ, ಶೋಭಾ ಮೇಟಿ, ರಾಜೇಶ್ವರಿ ಶಿರೋಳ ಮುಂತಾದವರು ಪಾಲ್ಗೊಂಡಿದ್ದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವಾದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಲ್ಲಮ್ಮನವರು ತಾಳ್ಮೆಯ ಪ್ರತಿರೂಪ. ಸ್ತ್ರೀಯರು ತಾಳ್ಮೆಯಿಂದ ಇದ್ದರೆ ಸಾಧನೆ ಮಾಡಬಹದು ಎನ್ನುವುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಸಾಕ್ಷಿ ಎಂದು ಕೃಷ್ಣಗೌಡ ಪಾಟೀಲ ತಿಳಿಸಿದರು.

ಹೈವೇಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ: ಪ್ರಶ್ನಿಸಿದ ಯುವಕನಿಗೆ ಚಾಕು ಇರಿದ ಮಹಿಳಾ ಟೆಕ್ಕಿ!

0

ಚಿಕ್ಕಬಳ್ಳಾಪುರ:- ನಗರದ ವಾಪಸಂದ್ರ ಬ್ರಿಡ್ಜ್ ಬಳಿ ಹೈವೇಯಲ್ಲಿ ಅಡ್ಡಾದಿಡ್ಡಿ ಸ್ಕೂಟಿ ಚಾಲನೆ ಮಾಡುತ್ತಿದ್ದದ್ದನ್ನು ಪ್ರಶ್ನೆ ಮಾಡಿದಕ್ಕೆ ಬೈಕ್‌ ಸವಾರನಿಗೆ ಮಹಿಳಾ ಟೆಕ್ಕಿ ಚಾಕುವಿನಿಂದ ಇರಿದಿರುವಂತಹ ಘಟನೆ ಜರುಗಿದೆ.

ರಿಂಬಿಕಾ ಎಂಬ ಮಹಿಳಾ ಟೆಕ್ಕಿಯಿಂದ ಕೃತ್ಯವೆಸಗಲಾಗಿದೆ. ಬೈಕ್ ಸವಾರ ನರಸಿಂಹ ಮೂರ್ತಿ ಕೈಗೆ ಗಾಯವಾಗಿದೆ. ಗಾಯಾಳುವನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಮಿಳುನಾಡಿನವರಾದ ರಿಂಬಿಕಾ, ಬೆಂಗಳೂರಿನಲ್ಲಿ ಟಿಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಂದು ತಮ್ಮ ತಮಿಳುನಾಡು ನೊಂದಣಿಯ ಸ್ಕೂಟಿ ಏರಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಕಡೆಗೆ ಬಂದು ವಾಪಾಸ್ ಬೆಂಗಳೂರಿನತ್ತ ತೆರಳುತ್ತಿದ್ದರು. ಆದರೆ ಅದ್ಯಾಕೋ ಏನೋ ಬೆಂಗಳೂರು-ಹೈದರಾಬಾದ್ ಹೈವೇಯಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟಿ ಓಡಿಸುತ್ತಾ ಹಿಂದೆ ಬರ್ತಿದ್ದ ಸವಾರರಿಗೆ ಇರುಸು ಮುರುಸು ಉಂಟು ಮಾಡಿದ್ದಾರೆ.

ಚಿಕ್ಕಬಳ್ಳಾಪುರದ ಸೇತುವೆ ಕೆಳಗಡೆ ಸ್ಕೂಟಿ ನಿಲ್ಲಿಸಿ ನಿಂತಿದ್ದ ರಿಂಬಿಕಾರನ್ನು ಹಿಂದೆ ಬರ್ತಿದ್ದ ಬೈಕ್ ಸವಾರ ನಿಖಿಲ್ ಹಾಗೂ ನರಸಿಂಹಮೂರ್ತಿ ಅವರು ಪ್ರಶ್ನೆ ಮಾಡಿದ್ದಾರೆ. ಯಾಕಮ್ಮ ಗಾಡಿ ಅಡ್ಡಾದಿಡ್ಡಿ ಓಡಿಸ್ತಿದ್ದೀಯಾ? ಅಂದಿದ್ದೇ ತಡ ಆಕೆ ಬಳಿ ಇದ್ದ ಫೋಲ್ಡೆಡ್ ಚಾಕುವಿನಿಂದ ಅಟ್ಯಾಕ್ ಮಾಡಿದ್ದಾರೆ. ಇದ್ರಿಂದ ಬೈಕ್ ಸವಾರ ನಿಖಿಲ್ ಕೈಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಹಿಂಬದಿ ಸವಾರ ನರಸಿಂಹಮೂರ್ತಿಗೂ ಗಾಯವಾಗಿದೆ. ರಿಂಬಿಕಾ ಚಾಕುವಿನಿಂದ ಅಟ್ಯಾಕ್ ಮಾಡ್ತಿದ್ದಂತೆ ನಿಖಿಲ್ ಸಹ ವಾಪಸ್​​ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಹೋಟೆಲ್​ವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿದ್ಯುತ್ ಸಂಪರ್ಕ ಕಲ್ಪಿಸಲು ಲಂಚ: ಲೋಕಾ ಬಲೆಗೆ ಬಿದ್ದ ಕಂಪ್ಯೂಟರ್ ಆಪರೇಟರ್‌

0

ಗದಗ: ವಿದ್ಯುತ್ ಸಂಪರ್ಕ ಪಡೆಯಲು ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ಲಂಚ ಕೇಳಿದ ಆರೋಪ ಕೇಳಿಬಂದಿದೆ. ಈ ಸಂಬಂಧ  ಕೊಳಚೆ ನಿರ್ಮೂಲನಾ ಮಂಡಳಿಯ ಹೊರಗುತ್ತಿಗೆ ಕಂಪ್ಯೂಟರ್ ಆಪರೇಟರ್‌ ಗುರುನಾಥ ಕಮ್ಮಾರನ್ನು ಬಂಧಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿದ ಮನೆಗೆ ವಸತಿ ವಿದ್ಯುತ್ ಸಂಪರ್ಕ ಪಡೆಯಲು ಕ್ಲಿಯರೆನ್ಸ್ ಪ್ರಮಾಣಪತ್ರಕ್ಕಾಗಿ ₹1,000 ಲಂಚ ಕೇಳಿದ ಆರೋಪದ ಮೇಲೆ ಬಂಧಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಮೆಹಬೂಬ್‌ನಗರದ ಖಾಜಾಪಾಷಾ ಪತ್ನಿ ಶಕೀಲಾ ಬೇಗಂ ಅವರ ಹೆಸರಿನ 20×30 ಅಳತೆಯ ನಿವೇಶನ ಸಂಖ್ಯೆ 52ರಲ್ಲಿ ಪಿಎಂಎ ಯೋಜನೆಯಡಿ ಮನೆ ನಿರ್ಮಾಣವಾಗಿತ್ತು. ಮನೆ ಪೂರ್ಣಗೊಂಡ ನಂತರ, ವಾಣಿಜ್ಯ ವಿದ್ಯುತ್ ಸಂಪರ್ಕವನ್ನು ವಸತಿ ಸಂಪರ್ಕಕ್ಕೆ ಬದಲಾಯಿಸಲು ಕೊಳಗೇರಿ/ಕೊಳಚೆ ನಿರ್ಮೂಲನಾ ಮಂಡಳಿಯ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿತ್ತು.

ನವೆಂಬರ್ 10, 2025ರಂದು ಖಾಜಾಪಾಷಾ ಕೊಪ್ಪಳದ ಕೊಳಗೇರಿ ಮಂಡಳಿ ಕಚೇರಿಗೆ ತೆರಳಿದಾಗ,  “ಗದಗ–ಮುಳಗುಂದ ರಸ್ತೆಯಲ್ಲಿರುವ ಕಚೇರಿಗೆ ಹೋಗಿ” ಎಂದು ಸಿಬ್ಬಂದಿ ಸಲಹೆ ನೀಡಿದ್ದರು. ನವೆಂಬರ್ 11ರಂದು ಗದಗದ ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗೆ ತೆರಳಿ ಹೊರಗುತ್ತಿಗೆ ಸಿಬ್ಬಂದಿ ಕಂಪ್ಯೂಟರ್ ಆಪರೇಟರ್ ಗುರುನಾಥ ಕಮ್ಮಾರರನ್ನು ಭೇಟಿ ಮಾಡಿದಾಗ,  ನೇರವಾಗಿ ₹1,000 ಲಂಚ ಕೇಳಿದ್ದರೆಂದು ದೂರು ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಖಾಜಾಪಾಷಾ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದು, ಇಂದು ಬೆಳಗ್ಗೆ ಲೋಕಾಯುಕ್ತ ಎಸ್‌ಪಿ ಎಸ್.ಟಿ. ಸಿದ್ಧಲಿಂಗಪ್ಪ  ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ವಿಜಯ ಬಿರಾದಾರ ನೇತೃತ್ವದ ತಂಡವು ಗದಗದ ಕಚೇರಿಯಲ್ಲಿ ಬಲೆ ಬೀಸಿದ್ದರು. ಈ ವೇಳೆ ಗುರುನಾಥ ಕಮ್ಮಾರ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಾರೆ.

ಇನ್ನೂ ಈ ಕಾರ್ಯಾಚರಣೆಯಲ್ಲಿ ಪಿಐ ಪರಮೇಶ್ವರ, ಜಿ. ಕವಟಗಿ, ಹೆಡ್ ಕಾನ್‌ಸ್ಟೇಬಲ್‌ಗಳು ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಎನ್.ಪಿ. ಅಂಬಿಗೇರ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು. ಈ ಸಂಬಂಧ ಗದಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸನ್ಮಾರ್ಗ ಕಾಲೇಜಿನ ವಿಜಯೋತ್ಸವ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ನಗರದ ಜ.ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜರುಗಿದ ‘ಉತ್ಸವ-2025’ರಲ್ಲಿ ಸನ್ಮಾರ್ಗ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆಗೈದಿದ್ದಾರೆ.

ಚರ್ಚಾ ಸ್ಪರ್ಧೆಯಲ್ಲಿ ಸಂದೀಪ ಹಾಗೂ ತಂಡ ದ್ವಿತೀಯ ಸ್ಥಾನ, ಗೀತಗಾಯನ ಸ್ಪರ್ಧೆಯಲ್ಲಿ ಆದಿತ್ಯ ಜೆ ಪ್ರಥಮ, ಪಿಕ್ & ಸ್ಪೀಚ್‌ನಲ್ಲಿ ಜಸ್ಟಿನ್ ಪ್ರಥಮ, ಬಾಲಕಿಯರ ಬ್ಯಾಡ್‌ಮಿಂಟನ್‌ನಲ್ಲಿ ಜೀಬಾ ಹಾಗೂ ಕಲ್ಯಾಣಿ ಪ್ರಥಮ, ಸಂಗೀತವಾದ್ಯ ಸ್ಪರ್ಧೆಯಲ್ಲಿ ವಿರೇಶ ಬಿ ಪ್ರಥಮ, ಫ್ಯಾಶನ್ ಶೋದಲ್ಲಿ ಸುಮೀತ್ ಮತ್ತು ತಂಡ ದ್ವಿತೀಯ, ಮೆಹಂದಿ ಸ್ಪರ್ಧೆಯಲ್ಲಿ ಇಮಾನ್ ತೃತೀಯ, ಬಾಲಕರ ಬ್ಯಾಡ್‌ಮಿಂಟನ್‌ನಲ್ಲಿ ರಾಹುಲ್ ಮತ್ತು ಸುಮಿತ್ ದ್ವಿತೀಯ, ಬಾಲಕಿಯರ ಬ್ಯಾಡ್‌ಮಿಂಟನ್‌ನಲ್ಲಿ ಅವನಿ ಪ್ರಥಮ, ಗ್ರೀಟಿಂಗ್ ಕಾರ್ಡ್ ಮೇಕಿಂಗ್‌ನಲ್ಲಿ ಮಾನಸಾ ಎ.ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಸ್ಟುಡೆಂಟ್‌ಸ್ ಎಜ್ಯುಕೇಶನ್ ಸೊಸೈಟಿಯ ಚೇರ್ಮನ್ ಪ್ರೊ. ರಾಜೇಶ ಕುಲಕರ್ಣಿ, ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ಸಂಸ್ಥೆಯ ನಿರ್ದೇಶಕರಾದ ಪ್ರೊ. ರಾಹುಲ್ ಒಡೆಯರ್, ಪ್ರೊ. ಸೈಯದ ಮತೀನ್ ಮುಲ್ಲಾ, ಪ್ರೊ. ರೋಹಿತ ಒಡೆಯರ್, ಪ್ರೊ. ಪುನೀತ ದೇಶಪಾಂಡೆ ಅಭಿನಂದಿಸಿದ್ದಾರೆ.

ಶ್ರೀ ವೀರಭದ್ರೇಶ್ವರ ಸರ್ವ ವಂದಿತ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶ್ರೀ ವೀರಭದ್ರೇಶ್ವರ ದೇವರ ದೇವಸ್ಥಾನಗಳು ಹೊರರಾಜ್ಯ ಸೇರಿ ರಾಜ್ಯಾದ್ಯಂತ ಇದ್ದು, ದೇವರನ್ನು ಸರ್ವ ಜಾತಿ, ಜನಾಂದವರು ಆರಾಧಿಸುತ್ತಾರೆ ಎಂದು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹಿರೇಮಠ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಶ್ರೀ ವೀರಭದ್ರೇಶ್ವರ ಪುರಾಣ 7ನೇ ದಿನದ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿ, ಕರ್ನಾಟಕದಲ್ಲಿ ಸರ್ವರೂ ಆರಾಧಿಸುವ ವೀರಭದ್ರ ದೇವರಿಂದಲೇ ಕನ್ನಡಿಗ ಎಂಬ ನಾಮ ಬಂದಿದೆ. ಯಡೂರು, ಗೊಡಚಿ, ರಾಚೋಟಿ, ಕಾರಡಗಿ, ಸಿಂಗಟಾಲೂರು, ತಲಕಾಡು, ಹುಮನಾಬಾದ ವೀರಭದ್ರನ ಪ್ರಮುಖ ಕ್ಷೇತ್ರಗಳಾಗಿದ್ದು, ಅಲ್ಲಿಗೆ ಹೋಗಿ ದರ್ಶನ ಪಡೆದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಿವರಿಸಿದರು.

ರೋಣ ಮಂಡಳ ಬಿಜೆಪಿ ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ ಜಕ್ಕಲಿ ಮಾತನಾಡಿ, ನರೇಗಲ್ಲ ಸೇರಿದಂತೆ ನಮ್ಮ ಸುತ್ತಮುತ್ತಲಿನ ಹಳ್ಳಿಗೆ ಹಿರೇಮಠದ ಪೂಜ್ಯರಂಥ ಅತ್ಯುತ್ತಮ ಗುರುಗಳು ದೊರೆತಿದ್ದು, ಅವರ ಮಾರ್ಗದರ್ಶನದಲ್ಲಿ ಜನರು ಮುನ್ನಡೆದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಬಿಜೆಪಿ ಮುಖಂಡರಾದ ಶಶಿಧರ ಸಂಕನಗೌಡ್ರ ಹಾಗೂ ನ್ಯಾಯವಾದಿ ಉಮೇಶ ಸಂಗನಾಳಮಠ ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಬಸವರಾಜ ವಂಕಲಕುಟಿ, ಗಣ್ಯರಾದ ನಿಂಗಪ್ಪ ಕಣವಿ, ಕಲ್ಮೇಶ ತೊಂಡಿಹಾಳ ಉಪಸ್ಥಿತರಿದ್ದರು. ರುದ್ರಯ್ಯ ಸೊಬರದಮಠ ನಿರೂಪಿಸಿದರು. ಹಿರೇಮಠ ಶಾಲೆಯ ವಿದ್ಯಾರ್ಥಿಗಳು ವೀರಭದ್ರೇಶ್ವರನ ವಡಪು ಹೇಳಿದರು. ಕೋಡಿಕೊಪ್ಪದ ಸದ್ಭಕ್ತರು ಗುರುಗಳನ್ನು ಸನ್ಮಾನಿಸಿದರು.

ಬೆಂಗಳೂರಿನ ಕಸ ಗುಡಿಸಲು ದಿನಕ್ಕೆ 24,00,000 ರೂಪಾಯಿ ಖರ್ಚು: ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು..?

0

ಬೆಂಗಳೂರು: ನಗರದಲ್ಲಿ ಕಸ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬಾಡಿಗೆ ಯಂತ್ರಗಳನ್ನು ತರಲು ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ.  ‘ಎಕ್ಸ್’ನಲ್ಲಿ ಸರ್ಕಾರದ ನಡೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಿಬಿಎಂಪಿಯಲ್ಲಿರುವ 26 ಕಸ ಗುಡಿಸುವ ಯಂತ್ರಗಳು ಬಳಕೆಯಾಗದೆ ಧೂಳು ಹಿಡಿಯುತ್ತಿರುವ ಸಂದರ್ಭದಲ್ಲಿ, ಡಿಸಿಎಂ ನೇತೃತ್ವದ ಕಾಂಗ್ರೆಸ್ ಸರ್ಕಾರವು 7 ವರ್ಷಗಳಿಗೆ 613 ಕೋಟಿ ರೂಪಾಯಿ ವೆಚ್ಚದಲ್ಲಿ 46 ಯಂತ್ರಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಸಂಪುಟದಲ್ಲಿ ಒಪ್ಪಿಗೆ ನೀಡಿರುವುದನ್ನು ನಿಖಿಲ್ ಪ್ರಶ್ನಿಸಿದ್ದಾರೆ.

ಬಾಡಿಗೆಗೆ ತೆಗೆದುಕೊಳ್ಳಲಿರುವ ಪ್ರತಿಯೊಂದು ಯಂತ್ರಕ್ಕೂ 1.9 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಅದೇ ಯಂತ್ರವನ್ನು ನೇರವಾಗಿ ಖರೀದಿಸಿದರೆ 1.33 ಕೋಟಿ ರೂ. ಸಾಕು ಎಂದು ಅವರು ತಿಳಿಸಿದ್ದಾರೆ.

“ಇದು ಕೆಟ್ಟ ಗಣಿತವಲ್ಲ, ಇದು ಗಣಿತದ ಕೊಲೆ ಮತ್ತು ಸಮಾಧಿ,” ಎಂದು ತೀವ್ರ ವಾಗ್ದಾಳಿ ನಡೆಸಿದ ನಿಖಿಲ್, ತಜ್ಞರ ಸಮಿತಿ ಯಂತ್ರಗಳನ್ನು ಖರೀದಿಸಲು ಶಿಫಾರಸು ಮಾಡಿದ್ದರೂ, ಸರ್ಕಾರ ಅತ್ಯಂತ ದುಬಾರಿ ಆಯ್ಕೆಯನ್ನು ಆರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

ಬಿಸಿಜಿ ಸಂಸ್ಥೆಯು ಕಾರ್ಯಕ್ಷಮತೆಯನ್ನು ಆಧರಿಸಿದ ಪಾವತಿ ಮಾದರಿಯನ್ನು ಸಲಹೆ ನೀಡಿದ್ದರೂ, ಸರ್ಕಾರ ಹೊಸ ಆರ್ಥಿಕ ಸಿದ್ಧಾಂತವನ್ನು ರೂಪಿಸಿಕೊಂಡು ಅದಕ್ಕೆ ‘ಆಡಳಿತ’ ಎಂಬ ಲೇಬಲ್ ಅಂಟಿಸಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿಗಳಿಗೆ ಕರವೇ ಮನವಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳ ಚುನಾಯಿತ ಕೌನ್ಸಿಲ್ ಅವಧಿಯು 5 ವರ್ಷ ಮುಗಿದ ನಂತರ ಯಾವುದೇ ಕಾರಣಕ್ಕೂ ನಾಮ ನಿರ್ದೇಶನ ಮಾಡಲ್ಪಟ್ಟ ಸದಸ್ಯರು ಆಯಾ ಸಂಸ್ಥೆಯಲ್ಲಿ ಸದಸ್ಯರಾಗಿ ಮುಂದುವರೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.

ಪಟ್ಟಣದ ಪುರಸಭೆಯ ಆಡಳಿತ ಮಂಡಳಿ ಸದಸ್ಯರ ಅವಧಿ ಮುಕ್ತಾಯಗೊಂಡಿದ್ದು, ನಾಮನಿರ್ದೇಶಿತ ಸದಸ್ಯರ ಅವಧಿ ಅಬಾಧಿತ ಎನ್ನುವ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆ­ನಲ್ಲಿ ಅವರು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ನ. 4ರಂದು ಪುರಸಭೆಯ ಸದಸ್ಯರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಆಡಳಿತಾಧಿಕಾರಿಯನ್ನಾಗಿ ಸರಕಾರ ನೇಮಕ ಮಾಡಿರುವುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ. ಸರಕಾರವು ಕರ್ನಾಟಕ ಪುರಸಭೆ ಕಾಯ್ದೆ 1964ರ ನಿಯಮ 11 ಉಪನಿಯಮ (1)(ಡಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆಯಾ ಸ್ಥಳೀಯ ನಾಗರೀಕನ್ನು ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿ ನೇಮಕ ಮಾಡಲಾಗುತ್ತದೆ.

ಈ ರೀತಿ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಿಸಲ್ಪಟ್ಟ ಸದಸ್ಯರ ಅಧಿಕಾರ ಅವಧಿಯು ಕರ್ನಾಟಕ ಪುರಸಭೆಯ ಕಾಯ್ದೆ 1964ರ ನಿಯಮ 18ರಲ್ಲಿ ತಿಳಿಸಿರುವಂತೆ ಚುನಾವಣಿತ ಸದಸ್ಯರ ಅವಧಿಯು ಹಾಗೂ ನಾಮ ನಿರ್ದೇಶಿಸಲ್ಪಟ್ಟ ಸದಸ್ಯರ ಅವಧಿಯು ಆಯಾ ಸ್ಥಳೀಯ ಸಂಸ್ಥೆಯ ಪ್ರಥಮ ಸಭೆಯ ದಿನಾಂಕದಿಂದ 5 ವರ್ಷದ ಅವಧಿಗೆ ಒಳಪಟ್ಟಿರುತ್ತದೆ. ಅಲ್ಲಿಗೆ ನಾಮನಿರ್ದೇಶಿತ ಸದಸ್ಯರ ಅವಧಿಯು ಮುಕ್ತಾಯವಾಗಿರುತ್ತದೆ. ಇದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಪ್ರಕಾಶ ಉದ್ದನಗೌಡ್ರು, ಮಲ್ಲನಗೌಡ ಪಾಟೀಲ, ಪ್ರವೀಣ್ ದಶಮನಿ, ಶ್ರೇಯಾಂಕ ಹಿರೇಮಠ, ಚಂದ್ರು ಮುಳುಗುಂದ, ಅರ್ಜುನ ಭಾಂಡಗೆ ಮುಂತಾದವರಿದ್ದರು.

Gruha Lakshmi: ಗೃಹ ಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಈ ದಿನದಂದು ನಿಮ್ಮ ಖಾತೆ ಸೇರಲಿದೆ ರೂ.4000 ಹಣ?

0

ತುಮಕೂರು: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ.

ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು

ನ.28ಕ್ಕೆ ನಾವು ಅಂಗನವಾಡಿ ಆರಂಭಿಸಿ 50 ವರ್ಷ ಆಯಿತು. ಕರ್ನಾಟಕದಿಂದಲೇ ಅಂಗನವಾಡಿ ಶುರುವಾಗಿದ್ದು. 1975ರಲ್ಲಿ ಇಂದಿರಾಗಾಂಧಿ ಅವರು ಮೈಸೂರಿನ ಟಿ.ನರಸೀಪುರದಲ್ಲಿ ಪ್ರಾರಂಭ ಮಾಡಿದರು. ಐವತ್ತು ವರ್ಷದ ಹಿನ್ನೆಲೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ.

ಇಲಾಖೆಯಿಂದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕಾಗಿ 10 ಜಿಲ್ಲೆಗಳಲ್ಲಿ ಪೂರ್ವಭಾವಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ಕೇವಲ ಸಂಭ್ರಮವಲ್ಲ ಇಂದಿರಾಗಾಂಧಿ ಅವರ ಕನಸನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಘೋಷಣೆ ಮಾಡುತ್ತೇವೆ ಎಂದರು

error: Content is protected !!