Home Blog Page 295

ಬಿಗ್‌ಬಾಸ್ ಮನೆಗೆ ಅತಿಥಿಗಳಾಗಿ ಎಂಟ್ರಿಕೊಟ್ಟಿದ್ದ ರಜತ್–ಚೈತ್ರಾ ಔಟ್

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮುಂದುವರಿದಿದೆ. ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳಾಗಿ ಮನೆಗೆ ಬಂದಿದ್ದ ರಜತ್ ಮತ್ತು ಚೈತ್ರಾ ವಾಸ್ತವದಲ್ಲಿ ಅತಿಥಿಗಳಾಗಿಯೇ ಎಂಟ್ರಿ ಕೊಟ್ಟಿದ್ದರು ಎಂದು ಬಿಗ್‌ಬಾಸ್ ಸ್ಪಷ್ಟಪಡಿಸಿದ್ದಾರೆ.

ಸೀಸನ್ ಆರಂಭದಿಂದಲೂ ಬಿಗ್‌ಬಾಸ್ ಹೊಸ ಹೊಸ ತಿರುವುಗಳನ್ನು ನೀಡುತ್ತಲೇ ಬಂದಿದ್ದಾರೆ. ರಕ್ಷಿತಾಳನ್ನು ಮೊದಲಿಗೆ ಮನೆಗೆ ಕಳುಹಿಸಿ, ಒಂದು ವಾರದಲ್ಲೇ ವಾಪಸ್ ಕರೆಸಿದ್ದು, ಬಳಿಕ ಮೂವರು ವೈಲ್ಡ್ ಕಾರ್ಡ್ ಎಂಟ್ರಿಗಳು, ಹಳೆಯ ಗೆಸ್ಟ್‌ಗಳನ್ನು ಮತ್ತೆ ಮನೆಗೆ ಕರೆಸಿ, ಅದರಲ್ಲಿ ಇಬ್ಬರನ್ನು ವೈಲ್ಡ್ ಕಾರ್ಡ್ ಎಂದು ಘೋಷಿಸಿದ್ದ ಘಟನೆಗಳು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದವು. ಇದೀಗ ಆ ಇಬ್ಬರೂ ಕಂಟೆಸ್ಟೆಂಟ್‌ಗಳಲ್ಲ, ಅತಿಥಿಗಳು ಎಂದು ಹೇಳುವ ಮೂಲಕ ಆಟವನ್ನೇ ಬದಲಿಸಲಾಗಿದೆ.

ರಜತ್ ಮತ್ತು ಚೈತ್ರಾ ಮನೆ ಒಳಗೆ ಇದ್ದ ಅವಧಿಯಲ್ಲಿ ಎಲ್ಲರ ಜೊತೆಗೆ ತೀವ್ರ ಸ್ಪರ್ಧೆ ನಡೆಸಿದ್ದರು. ಆದರೆ ಮೊದಲೇ ಮಾಡಿಕೊಂಡಿದ್ದ ಒಪ್ಪಂದದಂತೆ ಅವರು ಮನೆಯಿಂದ ಹೊರಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ವೋಟಿಂಗ್ ಪ್ರಕ್ರಿಯೆ ನಡೆಯಲಿಲ್ಲ.

ಗದಗ| ಭೀಕರ ಅಗ್ನಿ ಅವಘಡ; ಶಾಂತಿ ಚಿತ್ರಮಂದಿರ ಸುಟ್ಟು ಭಸ್ಮ!

0

ಗದಗ:- ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಶಾಂತಿ ಚಿತ್ರಮಂದಿರ ಸುಟ್ಟು ಭಸ್ಮವಾಗಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.

ಬೆಂಕಿ ಕೆನ್ನಾಲಿಗೆಗೆ ಚಿತ್ರಮಂದಿರದ ಎಲ್ಲ ಕಟ್ಟಡ, ಕುರ್ಚಿ, ಫ್ಯಾನ್, ಸ್ಪೀಕರ್, ಪಿಓಪಿ ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಹೋಗಿವೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಬೆಟಗೇರಿ ಬಡಾವಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಬೆಂಕಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರ ತನಿಖೆಯ ನಂತರವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ. ಬೆಟಗೇರಿ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಹೈದರಾಬಾದ್‌ನಲ್ಲಿ ಸ್ಟಾರ್ ನಟಿಯರಿಗೆ ಸುರಕ್ಷತೆಯೇ ಪ್ರಶ್ನಾರ್ಥಕ: ನಿಧಿ ಅಗರ್ವಾಲ್ ಬಳಿಕ ಸಮಂತಾಗೂ ಸಮಸ್ಯೆ

ಹೈದರಾಬಾದ್‌ನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ಚಿತ್ರರಂಗದ ಮಹಿಳಾ ನಟಿಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿವೆ. ಡಿಸೆಂಬರ್ 17ರಂದು ದಿ ರಾಜಾ ಸಾಬ್ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮಕ್ಕಾಗಿ ಲುಲು ಮಾಲ್‌ಗೆ ಆಗಮಿಸಿದ್ದ ನಿಧಿ ಅಗರ್ವಾಲ್, ಕಾರ್ಯಕ್ರಮ ಮುಗಿಸಿ ಹೊರಡುವ ವೇಳೆ ಜನಸಮೂಹದಿಂದ ಅಸಭ್ಯ ವರ್ತನೆಗೆ ಒಳಗಾಗಿದ್ದರು.

ಆ ಸಂದರ್ಭದಲ್ಲಿ ಅಭಿಮಾನಿಗಳಂತೆ ನಟಿಸಿದ ಕೆಲವರು ನಿಧಿ ಅಗರ್ವಾಲ್ ಅವರನ್ನು ಸುತ್ತುವರಿದು, ಕೈ ಹಿಡಿದು, ದೇಹ ಸ್ಪರ್ಶಿಸಲು ಯತ್ನಿಸಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ನಟಿಯನ್ನು ತಳ್ಳಾಡಿದ ದೃಶ್ಯಗಳು ಕೂಡ ವಿಡಿಯೋಗಳಲ್ಲಿ ಕಂಡುಬಂದಿದ್ದವು.

ಈ ಘಟನೆಗೆ ಕೆಲವೇ ದಿನಗಳ ಬಳಿಕ, ಸಮಂತಾ ರುತ್ ಪ್ರಭು ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ತಮ್ಮ ಕಾರಿನತ್ತ ಸಾಗುವ ವೇಳೆ ಜನರು ಮುಗಿಬಿದ್ದ ಪರಿಣಾಮ ಗೊಂದಲ ಉಂಟಾಗಿದ್ದು, ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಘಟನೆ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವರ್ತನೆ ಕುರಿತು ತೀವ್ರ ಟೀಕೆ ವ್ಯಕ್ತವಾಗಿದ್ದು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರ ಸುರಕ್ಷತೆಗೆ ಕಠಿಣ ಕ್ರಮ ಅಗತ್ಯ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ; ಅನ್ಯಜಾತಿ ಯುವಕನನ್ನು ಮದುವೆ ಆಗಿದ್ದ ಗರ್ಭಿಣಿ ಮಗಳನ್ನೆ ಕೊಲೆಗೈದ ತಂದೆ!

0

ಹುಬ್ಬಳ್ಳಿ:- ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಜರುಗಿದೆ.

ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಏಳು ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

19 ವರ್ಷದ ಮಾನ್ಯಾ ಹತ್ಯೆಯಾದ ಯುವತಿ. ಈಕೆ ಅದೇ ಗ್ರಾಮದ ವಿವೇಕಾನಂದ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಯುವಕ ಅನ್ಯಜಾತಿಯವನು ಎಂಬ ಕಾರಣಕ್ಕೆ ಆಕೆಯ ತಂದೆ ಪ್ರಕಾಶಗೌಡ ಮನೆಗೆ ನುಗ್ಗಿ, ಗರ್ಭಿಣಿ ಎಂಬುದನ್ನೂ ನೋಡದೇ ಪೈಪ್ ಮತ್ತು ಗುದ್ದಲಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಮತ್ತಿಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮಾನ್ಯಾಳ ಕೊಲೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಧಾರವಾಡ ಎಸ್ಪಿ ಗುಂಜನ್ ಆರ್ಯ, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದೀಪ್ ಹೇಳಿಕೆಗೆ ಪ್ರತಿಕ್ರಿಯೆಗಳ ಸರಣಿ: ವಿಜಯಲಕ್ಷ್ಮಿ ಮಾತು, ಧನ್ವೀರ್ ಇನ್‌ಸ್ಟಾ ಪೋಸ್ಟ್ ವೈರಲ್

ಮಾರ್ಕ್ ಚಿತ್ರದ ಪ್ರೀ–ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಇದೀಗ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ. ವೇದಿಕೆಯಿಂದ ಸುದೀಪ್ ಆಡಿದ ಮಾತುಗಳು ದರ್ಶನ್ ವಿರುದ್ಧದ ಟಾಂಗ್ ಎಂದು ಫ್ಯಾನ್ಸ್ ವಲಯದಲ್ಲಿ ವ್ಯಾಖ್ಯಾನವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

ಈ ಬೆಳವಣಿಗೆಯ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅಭಿಮಾನಿಗಳ ಜೊತೆ ಮಾತನಾಡುತ್ತಾ, “ದರ್ಶನ್ ಇಲ್ಲದಾಗ ಕೆಲವರು ವೇದಿಕೆಗಳ ಮೇಲೆ ಹಾಗೂ ಚಾನಲ್‌ಗಳಲ್ಲಿ ಕುಳಿತು ಏನೇನೋ ಮಾತಾಡುತ್ತಾರೆ. ಆದರೆ ಅವರು ಬಂದಾಗ ಎಲ್ಲಿರುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ” ಎಂದು ಪರೋಕ್ಷವಾಗಿ ಟೀಕಿಸಿದ್ದರು. ಜೊತೆಗೆ, “ಯಾರು ಏನೇ ಹೇಳಿದರೂ ಕೋಪ ಮಾಡಿಕೊಳ್ಳಬೇಡಿ” ಎಂಬ ಸಂದೇಶವನ್ನೂ ನೀಡಿದ್ದರು.

ಇದರ ನಂತರ ದರ್ಶನ್ ಆಪ್ತ ಧನ್ವೀರ್ ಗೌಡ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡು, ಡೈಲಾಗ್ ಮೂಲಕ ಟಾಂಗ್ ನೀಡಿದ್ದಾರೆ. ದರ್ಶನ್ ಜೈಲು ಸೇರುವ ಅವಧಿಯಿಂದಲೂ ಧನ್ವೀರ್, ವಿಜಯಲಕ್ಷ್ಮಿ ಜೊತೆ ಜೈಲಿಗೆ ಭೇಟಿ ನೀಡುತ್ತಿದ್ದವರಾಗಿದ್ದು, ಅವರು ದರ್ಶನ್ ಕುಟುಂಬದ ಆಪ್ತ ವಲಯದಲ್ಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಒಟ್ಟಿನಲ್ಲಿ, ಮಾರ್ಕ್ ಸಿನಿಮಾ ರಿಲೀಸ್‌ಗೂ ಮುನ್ನವೇ ಸ್ಟಾರ್‌ಗಳ ಹೇಳಿಕೆಗಳು ಮತ್ತು ಪ್ರತಿಕ್ರಿಯೆಗಳು ಅಭಿಮಾನಿ ವಲಯದಲ್ಲಿ ಕಿಚ್ಚು ಹಚ್ಚಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

ಬಂಟ್ವಾಳ ಜಾತ್ರೆಯಲ್ಲಿ ಅಕ್ರಮ ಕೋಳಿ ಅಂಕ: ಬಿಜೆಪಿ ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸೇರಿ 27 ಜನರ ವಿರುದ್ಧ ಕೇಸ್ ದಾಖಲು!

0

ಮಂಗಳೂರು: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೆಯ ಹಿನ್ನೆಲೆ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪುತ್ತೂರಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಒಟ್ಟು 27 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ನೇತೃತ್ವದ ಪೊಲೀಸ್ ತಂಡ ಭಾನುವಾರ ದಾಳಿ ನಡೆಸಿದ್ದು, ಸುಮಾರು 20 ಕೋಳಿಗಳನ್ನು ವಶಪಡಿಸಿಕೊಂಡಿದೆ. ಕೋಳಿ ಅಂಕ ನಿಷೇಧದ ಬಗ್ಗೆ ತಿಳಿಸಿದ್ದರೂ ಸ್ಥಳದಲ್ಲಿದ್ದವರು ತೆರಳಲು ನಿರಾಕರಿಸಿದ್ದು, ಮಾಜಿ ಶಾಸಕ ಸೇರಿದಂತೆ ಕೆಲವರು ಕೋಳಿ ಅಂಕ ಮುಂದುವರಿಸಲು ಜನರನ್ನು ಪ್ರಚೋದಿಸಿದ್ದಾರೆ ಎಂಬ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಕಲಂಗಳು ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಬೆದರಿಕೆ: ಸೊಸೆ ಆತ್ಮಹತ್ಯೆ! ಅತ್ತೆಗೆ 7 ವರ್ಷ ಜೈಲು ಶಿಕ್ಷೆ

0

ಮೈಸೂರು: ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸೊಸೆ ಆತ್ಮಹತ್ಯೆಗೆ ಕಾರಣರಾದ ಪ್ರಕರಣದಲ್ಲಿ ಅತ್ತೆಗೆ 7 ವರ್ಷ ಹಾಗೂ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರು ನ್ಯಾಯಾಲಯ ಆದೇಶ ನೀಡಿದೆ.

ಪತ್ನಿ ತೇಜಮಣಿ ಆತ್ಮಹತ್ಯೆಗೆ ಕಾರಣರಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಪತಿ ಎನ್. ನವೀನ್ ಕುಮಾರ್ ಹಾಗೂ ಅತ್ತೆ ರಾಣಿ ಅವರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಪ್ರಕರಣದ ವಿವರಗಳ ಪ್ರಕಾರ, 2018ರ ಆಗಸ್ಟ್ 7ರಂದು ತೇಜಮಣಿ ಅವರು ಅಧಿಕ ಪ್ರಮಾಣದಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವರದಕ್ಷಿಣೆಗಾಗಿ ಪತಿ ಹಾಗೂ ಅತ್ತೆ ತೇಜಮಣಿಯನ್ನು ನಿರಂತರವಾಗಿ ಪೀಡಿಸುತ್ತಿದ್ದರು ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ತೇಜಮಣಿ ಅವರು ತವರು ಮನೆಯಲ್ಲಿದ್ದ ಸಂದರ್ಭದಲ್ಲಿ ಪತಿ ಹಾಗೂ ಅತ್ತೆ ಅಲ್ಲಿಗೆ ತೆರಳಿ, ವರದಕ್ಷಿಣೆ ನೀಡದಿದ್ದರೆ ಎರಡು ದಿನಗಳಲ್ಲಿ ಮಗನಿಗೆ ಬೇರೆ ಹುಡುಗಿ ನೋಡಿ ಮದುವೆ ಮಾಡುತ್ತೇವೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಘಟನೆ ನಡೆದ ಅದೇ ದಿನ ತೇಜಮಣಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣದ ತನಿಖೆಯನ್ನು ಎನ್.ಆರ್ ವಿಭಾಗದ ಆಗಿನ ಎಸಿಪಿ ಸಿ. ಗೋಪಾಲ್ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಎನ್. ರೂಪಾ ಅವರು ಆರೋಪ ಸಾಬೀತಾಗಿದೆ ಎಂದು ತೀರ್ಪು ನೀಡಿ, ಪತಿ ಎನ್. ನವೀನ್ ಕುಮಾರ್‌ಗೆ 10 ವರ್ಷ ಜೈಲು ಹಾಗೂ 1.50 ಲಕ್ಷ ರೂ. ದಂಡ, ಅತ್ತೆ ರಾಣಿಗೆ 7 ವರ್ಷ ಜೈಲು ಹಾಗೂ 1 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಆದಿಚುಂಚನಗಿರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

0

ಮಂಡ್ಯ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಭೇಟಿ ನೀಡಿದರು.

ಈ ವೇಳೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಶ್ರೀ ಕಾಲಭೈರವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಬಳಿಕ, ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಗೆ ನಮನ ಸಲ್ಲಿಸಿದ ಕುಮಾರಸ್ವಾಮಿ, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು.

ಸಕಲೇಶಪುರದಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ ಇನ್ಫೋಸಿಸ್ ಸುಧಾಮೂರ್ತಿ

0

ಹಾಸನ: ಇನ್ಫೋಸಿಸ್ ಸಂಸ್ಥೆಯ ಸಹ-ಸ್ಥಾಪಕಿ ಸುಧಾಮೂರ್ತಿ ಅವರು ಸಕಲೇಶಪುರದ ಸಕಲೇಶಪುರಸ್ವಾಮಿ ದೇವಾಲಯ ಹಾಗೂ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬೆಂಗಳೂರಿನಿಂದ ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಅವರು ಈ ದೇವಾಲಯಗಳಿಗೆ ಭೇಟಿ ನೀಡಿದರು. ದೇವಾಲಯದಲ್ಲಿ ನೆಲದ ಮೇಲೆ ಕುಳಿತು ಸಂಕಲ್ಪ ಹಾಗೂ ಅರ್ಚನೆ ನೆರವೇರಿಸಿದರು. ಈ ವೇಳೆ ಮಹಿಳೆಯರು ಸುಧಾಮೂರ್ತಿಗೆ ಬಾಗಿನ ನೀಡಿದರು.

ಪೂಜೆ ನೆರವೇರಿಸಿದ ಬಳಿಕ ಸುಧಾಮೂರ್ತಿ ಧರ್ಮಸ್ಥಳಕ್ಕೆ ತೆರಳಿದರು.ಈ  ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಸುಧಾಮೂರ್ತಿಗೆ ಭಗವದ್ಗೀತೆ ನೀಡಿ ಗೌರವಿಸಿದರು.

ಜೊತೆಗೆ ಸಕಲೇಶಪುರದ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಗೆ ಸಿಎಸ್‌ಆರ್ ನಿಧಿ ಅಥವಾ ರಾಜ್ಯಸಭಾ ಸದಸ್ಯರ ಅನುದಾನ ನೀಡುವಂತೆ ಮನವಿ ಮಾಡಿದರು.

ನನಗೆ ಕಾಂಗ್ರೆಸ್ ನ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯ ಇಲ್ಲ: ಡಿ.ಕೆ. ಶಿವಕುಮಾರ್

0

ಬೆಂಗಳೂರು: ನನಗೆ ಕಾಂಗ್ರೆಸ್ನ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯಗಳಿಲ್ಲ. ನಾನು, ಸಿಎಂ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು. ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿದ್ದೀರಿ ಎಂದು ಕೇಳಿದಾಗ, “ಅವರಿಗೆ ಸಿಎಂ ಆಪ್ತರೇನು? ಅವರು ನನಗೂ ಆಪ್ತರೇ. ಅವರು ಯಾರಿಗೆ ಆಪ್ತರಿಲ್ಲ ಹೇಳಿ.

ನಾನು ಸಿಎಂ ಆಪ್ತರಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ನಾನು ಕಾಂಗ್ರೆಸ್ ನವನು. ಅಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಹೋಗಿ ಬೇಕಾದರೆ ಅವರನ್ನೇ ಕೇಳಿ. ಸಿಎಂಗೂ ಇದಕ್ಕೂ ಸಂಬಂಧವೇ ಇಲ್ಲ” ಎಂದರು.

ರಾಜಕೀಯ ಬೆಂಬಲಕ್ಕೆ ಕೆ.ಎನ್. ರಾಜಣ್ಣ ಹಾಗೂ ನೀವು ಭೇಟಿ ಮಾಡಿದ್ದೀರಿ ಎಂದಾಗ, “ನಾವು ಸಹೋದ್ಯೋಗಿಗಳು. ಅವರು ನಮ್ಮ ಜತೆ ಕೆಲಸ ಮಾಡಿರುವವರು. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ.

ಕಳೆದ 16 ವರ್ಷಗಳಿಂದ, ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಮುಖ್ಯಮಂತ್ರಿಯವರಿಗೂ ಬಿನ್ನಾಭಿಪ್ರಾಯಗಳು ಏನಾದರೂ ಇದೆಯಾ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು, ವಿರೋಧ ಪಕ್ಷಗಳು ಸೃಷ್ಟಿ ಮಾಡುತ್ತಿವೆ. ತಮಗೆ ಬೇಕಾದ ಆಹಾರ ಸೃಷ್ಟಿಸುತ್ತಿದ್ದಾರೆ

ಕೆಲವು ಸಂದರ್ಭಗಳಲ್ಲಿ ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ. ಇದಕ್ಕೆ ಬೇಸರ ಮಾಡಿಕೊಳ್ಳಲು ಆಗುತ್ತದೆಯೇ? ಅಣ್ಣ ತಮ್ಮಂದಿರೇ ಜಗಳ ಮಾಡುತ್ತಾರಂತೆ, ಇನ್ನು ನಮ್ಮದು ಯಾವ ಜಗಳ” ಎಂದರು.

error: Content is protected !!