Home Blog Page 2998

ಕೊರೊನಾದಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು! ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಸರ್ಕಾರ ಮಾಡಿರುವ ಕೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ರೂ. 10 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ, ಇಲ್ಲಿ ರೂ. ಎರಡು ಲಕ್ಷ ಕೊಟ್ಟು, ಕೇಂದ್ರ ಸರ್ಕಾರದ ರೂ. ನಾಲ್ಕು ಲಕ್ಷ ವಾಪಾಸ್ ಪಡೆದಿದೆ.
ಇಲ್ಲಿಯವರೆಗೂ ಈ ದುರಂತದ ಬಗ್ಗೆ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ. ಇಲ್ಲಿ ಯಾವ ರಾಜಕಾರಣಿ, ಮಂತ್ರಿ ಕೂಡ ಲೆಕ್ಕಕ್ಕೆ ಇಲ್ಲದಾಗಿದೆ. ಈ ಘಟನೆಗೆ ತಪ್ಪಿತಸ್ಥರ ಮೇಲೆ ಕ್ರಮವಾಗಿಲ್ಲ. ಬದಲಿಗೆ ಜನಸಾಮಾನ್ಯರ ತಲೆ ದಂಡವಾಗಿದೆ. ಇಲ್ಲಿಯವರೆಗೂ ಮೃತರ ಮನೆಗೆ ಸಿಎಂ, ಮಂತ್ರಿಗಳು ಸೇರಿದಂತೆ ಯಾವೊಬ್ಬ ಬಿಜೆಪಿ ಮುಖಂಡರು ಕೂಡ ಭೇಟಿ ನೀಡಿ ಕಷ್ಟ ಆಲಿಸುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

ಎಲ್ಲರೂ ಬೆಂಗಳೂರಿನಲ್ಲಿ ಕುಳಿತು ಪಾಲು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾರೂ ಇಲ್ಲಿಗೆ ಬಂದು ನೋಡುವ ಕೆಲಸ ಮಾಡಿಲ್ಲ. ನಾವು ನೋಡಿ ನೋಡಿ ಕಾದು ನಂತರ ಈಗ ಕೊವೀಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮೂವತ್ತು ಸಾವಿರ ಮಂದಿ ಕೊವೀಡ್ ಗೆ ತುತ್ತಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಮಾಹಿತಿಯಂತೆ 3 ಲಕ್ಷ ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ್ಯಂತ ನಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆದು ಆಯಾ ಜಿಲ್ಲಾಧಿಕಾರಿ, ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಸಿಎಂಗೆ ಕುರ್ಚಿ ಬಹಳ ಮುಖ್ಯ. ಹೀಗಾಗಿ ಚಾಮರಾಜನಗರಕ್ಕೆ ಅವರು ಬಂದಿಲ್ಲ. ಈ ವೇಳೆ ಜನರ ಬಳಿ ಹೋದರೆ ರೊಚ್ಚಗೆದ್ದು, ಹೊಡೆಯುತ್ತಾರೆ ಎನ್ನುವ ಭಯವಿದೆ. ಇಂಟೆಲಿಜೆನ್ಸ್ ನವರಿಂದ ಮಾಹಿತಿ ಪಡೆದು ಭಯದಿಂದ ಅವರು ಜನರ ಬಳಿ ಹೋಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಧ್ಯಮ ಸೃಷ್ಟಿ ಜೋಶಿ

ವಿಜಯಸಾಕ್ಷಿ ಸುದ್ದಿ, ಧಾರವಾಡ

ಕೇಂದ್ರದ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂಬ ವಿಚಾರವನ್ನು ಮಾಧ್ಯಮಗಳು ಸೃಷ್ಟಿ ಮಾಡಿವೆ. ಆ ಬಗ್ಗೆ ಪ್ರಧಾನಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಯಾರನ್ನು ಬಿಡಬೇಕು ಎನ್ನುವ ವಿಚಾರ ತಿಳಿಯುವುದಿಲ್ಲ, ಇದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದರು.

ಸಿ.ಪಿ.ಯೋಗೀಶ್ವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯೋಗೀಶ್ವರ ಅವರು ಯಾವ ಯುನಿವರ್ಸಿಟಿಯಲ್ಲಿ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಮುಗಿದಿದೆ. ಎಲ್ಲವೂ ಸರಿ ಹೋಗಿದೆ. ದೆಹಲಿಗ ಹೋಗೋದು, ಸುತ್ತೂರು ಮಠಕ್ಕೆ ಹೋಗೋದು ರಾಜ್ಯ ರಾಜಕೀಯದಲ್ಲಿ ಬದಲಾವಣೆ ಎಂದು ಮಾಧ್ಯಮಗಳು ಸೃಷ್ಟಿ ಮಾಡಿದರೆ ಏನು ಮಾಡೋದು? ಎಂದು ಜೋಶಿ ತಿಳಿಸಿದರು.

ಕಾಂಗ್ರೆಸ್ ಬಿಡಲ್ಲ, ಗಾಳಿಸುದ್ದಿ ನಂಬಬೇಡಿ: ಅನ್ಸಾರಿ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಯಾವುದೇ ಸಂದರ್ಭದಲ್ಲೂ ತಾವು ಕಾಂಗ್ರೆಸ್ ಬಿಡಲ್ಲ, ಬೇರೆ ಪಕ್ಷ ಸೇರಲ್ಲ. ಇದೆಲ್ಲ ತಮ್ಮ ಪ್ರಗತಿ ಸಹಿಸದವರು ಹಬ್ಬಿಸುತ್ತಿರುವ ಗಾಳಿ ಸುದ್ದಿ. ಇದನ್ನ ಯಾರು ನಂಬಬೇಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ಸಂದೇಶದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ಆಡಿಯೊ ಮೂಲಕ ಮೂರೂವರೆ ನಿಮಿಷ ಮಾತನಾಡಿರುವ ಅವರು, ಆರೋಗ್ಯದ ದೃಷ್ಟಿಯಿಂದ ಹೊರಗಡೆ ಬರಲಾಗುತ್ತಿಲ್ಲ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಶೀಘ್ರವೇ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ.

ಕೋವಿಡ್-19 ಸಂಕಷ್ಟದ ಈ ದಿನಗಳಲ್ಲಿ ಜನಹಿತದ ನಿಟ್ಟಿನಲ್ಲಿ ಅನೇಕ ಸಹಾಯ ಕಾರ್ಯ ಮಾಡಲಾಗಿದೆ. ಲೋಕಸಭಾ ಚುನಾವಣೆ, ಗ್ರಾಪಂ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಮತಯಾಚನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಗಂಗಾವತಿ ಸೇರಿದಂತೆ ರಾಜ್ಯದಲ್ಲಿ ‌ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೊಳಗಾಗದೇ, ವದಂತಿಗಳಿಗೆ ಕಿವಿಗೊಡದೇ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಮೂಲಕ ಮತ್ತಷ್ಟೂ ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.

ಕಾಂಗ್ರೆಸ್ ಬಿಡಲ್ಲ, ಗಾಳಿಸುದ್ದಿ ನಂಬಬೇಡಿ: ಇಕ್ಬಾಲ್ ಅನ್ಸಾರಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳಯಾವುದೇ ಸಂದರ್ಭದಲ್ಲೂ ತಾವು ಕಾಂಗ್ರೆಸ್ ಬಿಡಲ್ಲ, ಬೇರೆ ಪಕ್ಷ ಸೇರಲ್ಲ. ಇದೆಲ್ಲ ತಮ್ಮ ಪ್ರಗತಿ ಸಹಿಸದವರು ಹಬ್ಬಿಸುತ್ತಿರುವ ಗಾಳಿ ಸುದ್ದಿ. ಇದನ್ನ ಯಾರು ನಂಬಬೇಡಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಡಿಯೋ ಸಂದೇಶದ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.ಆಡಿಯೊ ಮೂಲಕ ಮೂರೂವರೆ ನಿಮಿಷ ಮಾತನಾಡಿರುವ ಅವರು, ಆರೋಗ್ಯದ ದೃಷ್ಟಿಯಿಂದ ಹೊರಗಡೆ ಬರಲಾಗುತ್ತಿಲ್ಲ. ಸದ್ಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಶೀಘ್ರವೇ ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಆರಂಭಿಸುವುದಾಗಿ ತಿಳಿಸಿದ್ದಾರೆ.ಕೋವಿಡ್-19 ಸಂಕಷ್ಟದ ಈ ದಿನಗಳಲ್ಲಿ ಜನಹಿತದ ನಿಟ್ಟಿನಲ್ಲಿ ಅನೇಕ ಸಹಾಯ ಕಾರ್ಯ ಮಾಡಲಾಗಿದೆ. ಲೋಕಸಭಾ ಚುನಾವಣೆ, ಗ್ರಾಪಂ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣದ ಮೂಲಕ ಮತಯಾಚನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಗಂಗಾವತಿ ಸೇರಿದಂತೆ ರಾಜ್ಯದಲ್ಲಿ ‌ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೊಳಗಾಗದೇ, ವದಂತಿಗಳಿಗೆ ಕಿವಿಗೊಡದೇ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಮೂಲಕ ಮತ್ತಷ್ಟೂ ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ.

ಒಂದೇ ಕುಟುಂಬದ ಮೂವರು ವಾರದಲ್ಲಿಯೇ ಸಾವು!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಒಂದೇ ವಾರದ ಅಂತರದಲ್ಲಿ ಅಣ್ಣ, ತಂಗಿ ಹಾಗೂ ಅಳಿಯ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಶಿವಸ್ವಾಮಿ ಮೆದುಳಿನ ರಕ್ತ ಸ್ರಾವದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.

ಮೃತ ಶಿವಸ್ವಾಮಿಯ ತಂಗಿಯ ಮಗ ರಾಜಶೇಖರ್ ಕಾಂತ್ ಕೂಡ ಅನಾರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಒಡ ಹುಟ್ಟಿದ ಅಣ್ಣ ಮತ್ತು ಕರುಳ ಕುಡಿ ಸಾವನ್ನಪ್ಪಿದ ದುಃಖದಲ್ಲಿ ಇದ್ದ ಶಿವಸ್ವಾಮಿಯ ತಂಗಿಯೂ ಶನಿವಾರ ಸಾವನ್ನಪ್ಪಿದ್ದು, ಸಂಬಂಧಿಕರು ದುಃಖದಲ್ಲಿದ್ದಾರೆ. ಸಹ ಕುಟುಂಬದ ಮೂಲದ ಪ್ರಕಾರ ಅಣ್ಣ, ತಂಗಿ ಹಾಗೂ ಅಳಿಯ ಮೂವರು ಪರಸ್ಪರ ಬಿಟ್ಟು ಇರುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಮಾವ ಸಾವನ್ನಪ್ಪಿದ ಬೆಳಿಗ್ಗೆ ಅಳಿಯನೂ ಸಾವನ್ನಪ್ಪಿದ್ದು, ಇದಾದ ಒಂದೆರಡು ದಿನಗಳ ಅಂತರದಲ್ಲಿ ತಂಗಿಯೂ ಸಾವನ್ನಪ್ಪಿದ್ದು, ಇಡೀ ಕುಟುಂಬವು ಸದ್ಯ ಶೋಕ ಸಾಗರದಲ್ಲಿ ಮುಳುಗಿದೆ.

ರಾಜ್ಯದಲ್ಲಿ ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಂದು ಮತ್ತೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 4,272 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 115 ಜನ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 34,654ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಬೆಂಗಳೂರಿನಲ್ಲಿ ಇಂದು 955 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ನಗರದಲ್ಲಿ ಸೋಂಕಿತರ ಸಂಖ್ಯೆ 12,10,642ಕ್ಕೆ ಏರಿಕೆಯಾಗಿದೆ. ಸೋಂಕಿಗೆ 16 ಜನ ಬಲಿಯಾಗಿದ್ದಾರೆ.

ರಾಜ್ಯಾದ್ಯಂತ ಇಂದು 1,65,010 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 4,272 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 2.58ಕ್ಕೆ ಇಳಿದಿದೆ.

ಕೊರೊನಾ; ಶನಿವಾರ ಏರಿಕೆ ಕಂಡ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಶನಿವಾರ 30 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಇಂದು 30 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25735 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -18, ಮುಂಡರಗಿ-01, ನರಗುಂದ-00, ರೋಣ-05, ಶಿರಹಟ್ಟಿ-06, ಹೊರಜಿಲ್ಲೆಯ-00 ಸೇರಿದಂತೆ 30 ಪ್ರಕರಣಗಳು ದೃಢಪಟ್ಟಿವೆ.

ಶನಿವಾರ ಕೋವಿಡ್ ನಿಂದ ಇಬ್ಬರು ಮೃತಪಟ್ಟ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ವರದಿಯಲ್ಲಿ ಮಾಹಿತಿ ಇದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 296 ಜನರು ಮೃತಪಟ್ಟಂತಾಗಿದೆ.

ಜಿಲ್ಲೆಯ ರೋಣ ತಾಲೂಕಿನ ಕೋಡಿಕೊಪ್ಪ ನಿವಾಸಿ 84 ವರ್ಷದ ಮಹಿಳೆ ಜೂನ್ 5 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಜೂನ್ 25 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನರೇಗಲ್ ನಿವಾಸಿ 89 ವರ್ಷದ ವ್ಯಕ್ತಿ ಜೂನ್ 16 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 23 ರಂದು ಮೃತಪಟ್ಟಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನೆರವೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 35 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25198 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 241 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 70 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು; ಹಿಟ್ನಾಳ

ವಿಜಯಸಾಕ್ಷಿ ಸುದ್ದಿ,ಕೊಪ್ಪಳ

ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕೆ ಸರಕಾರ ಟ್ಯಾಬ್‌ಗಳನ್ನು ವಿತರಿಸುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಹಿಟ್ನಾಳ ಮತ್ತು ಬಂಡಿಹರ್ಲಾಪುರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯನವರ ಸರಕಾರದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿತ್ತು. ಈಗ ಟ್ಯಾಬ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಆನಲೈನ್ ತರಗತಿಗಳಿಗೆ ಮತ್ತು ಶಿಕ್ಷಣಕ್ಕೆ ಇದು ಸಹಕಾರಿ. ಎಲ್ಲರೂ ಇದರ ಸದುಪಯೋಗ ಮಾಡಿಕೊಳ್ಳಬೇಕು. ಅಪಾಯಕಾರಿ ಕೊರೊನಾವನ್ನು ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಮೂಲಕ ಎದುರಿಸಬೇಕು. ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಪಂ ಉಪಾದ್ಯಕ್ಷೆ ಜರೀನಾಬೇಗಂ, ತಾಲೂಕ ಪಂಚಾಯತ್ ಅದ್ಯಕ್ಷ ಬಾಲಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಸರಿ ಹೊಂದಲ್ಲ: ಬಯ್ಯಾಪುರ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಶಾಸಕ ರಮೇಶ್ ಜಾರಕಿಹೊಳಿಗೆ ಬಿಜೆಪಿಯ ಗರ್ಭಗುಡಿ ಸಂಸ್ಕೃತಿ ಸರಿ ಹೊಂದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಪಕ್ಷ ಸೇರಬಹುದು ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದವರು. ಅವರಿಗೆ ಬಿಜೆಪಿ ಗರ್ಭಗುಡಿ ಸಂಸ್ಕೃತಿ ಒಗ್ಗಲ್ಲ ಅಂತಾ ಅನಸಿದೆ. ಯಾಕಂದ್ರೆ ಅವರು ಹಾಗೂ ಸ್ನೇಹಿತರು ಬಾಂಬೆಗೆ ಹೋಗಿದ್ರು.
ಮುಂದಿನ ದಿನದಲ್ಲಿ ಅವರು ಬೇರೆ ಪಕ್ಷಕ್ಕೆ ಹೋದ್ರೂ ಅಚ್ಚರಿ ಇಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.

ಕಾಂಗ್ರೆಸ್‌ಗೆ ಬರ್ತೀನಿ ಎಂದರೆ ಪರಿಶೀಲನೆ ಮಾಡಲಾಗವುದು. ರಾಜಕಾರಣ ಅಂದರೆ ನಿಂತ ನೀರಲ್ಲ. ಸಮಯ ಬಂದ ಹಾಗೆ ಬದಲಾಗೋದು ಸಹಜ. ಆದ್ರೆ ಇದು ಇತ್ತೀಚಿನ ದಿನಗಳಲ್ಲಿ ಬೇಸರ ತರಿಸಿದೆ ಎಂದರು.

ಇವತ್ತು ಯಾರು ಯಾವ ಪಕ್ಷದಲ್ಲಿ ಇರ್ತಾರೆ ಅನ್ನೋದ ಗಂಭೀರವಾದ ವಿಷಯ ಅಲ್ಲ. ಜಾರಕಿಹೊಳಿನೇ ಯಡಿಯೂರಪ್ಪ ಅವರನ್ನ ಸಿಎಂ ಮಾಡಿದ್ದು. ಅವರು ಯಡಿಯೂರಪ್ಪರನ್ನ ತಗೀತಾರೆ ಅಂತ ನನಗೆ ಅನಿಸಲ್ಲ. ಬಿಜೆಪಿ‌ ಸರ್ಕಾರ ಕರ್ನಾಟಕದದಲ್ಲಿ ಉಳಿಯಬೇಕಾದ್ರೆ ಯಡಿಯೂರಪ್ಪ ಕಾರಣ.
ಕರ್ನಾಟಕದಲ್ಲಿ‌ ಯಡಿಯೂರಪ್ಪ ಇಲ್ಲ ಅಂದ್ರೆ ಬಿಜೆಪಿನೂ ಇಲ್ಲ ಅಂತಾನೇ ಅರ್ಥ ಎಂದು ಬಯ್ಯಾಪುರ ಪುನರುಚ್ಛರಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಯಾರು ಎಂಬ ಬಗ್ಗೆ ವಾರ್ ನಡೆದಿಲ್ಲ. ನಮ್ಮಲ್ಲಿ‌ 8 ರಿಂದ 10 ಜನ ಸಿಎಂ ಆಗೋ ಯೋಗ್ಯತೆ ಇರೋರು ಇದಾರೆ. ಅಭಿಮಾನಿಗಳು ಅವರ ಹೆಸರು ಹೇಳ್ತಾರೆ. ಅದೇನು ಅಪರಾಧ ಅಲ್ಲ. ಅದೇನೇ ಇರಲಿ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ನದ್ದೇ ಅಂತಿಮ ನಿರ್ಧಾರ. ಚುನಾವಣೆ ಇನ್ನೂ ದೂರ ಇದೆ. ನಾವು ಈಗಲೇ ಬಿಜೆಪಿಗೆ ಅಹಾರ ಆಗೋದು ಬೇಡಾ ಎಂದು ಅಮರೇಗೌಡ ತಿಳಿಸಿದರು.

ಕಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ಆಯತಪ್ಪಿ ಚಾಲಕ ಸಾವು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿನಗರ ಗ್ರಾಮದ ಬಳಿ ಕಟ್ಟಿಗೆ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ಆಯತಪ್ಪಿ ಟ್ರಾಲಿಗೆ ಟಿಕ್ಕಿ ಆದ ಪರಿಣಾಮ ಚಾಲಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ ಕೃಷಿ ಭೂಮಿಯಲ್ಲಿ ಸಿಲುಕಿ ಒದ್ದಾಡಿದ ಸಚಿವರು!

ಗಂಗಾವತಿಯ ಉಪ್ಪಿನಮಾಳಿ ಕ್ಯಾಂಪಿನ ನಿವಾಸಿಯಾದ ಬಸಪ್ಪ ಮೃತ ದುರ್ದೈವಿಯಾಗಿದ್ದು, ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!