Home Blog Page 2999

ಕೃಷಿ ಭೂಮಿಯಲ್ಲಿ ಸಿಲುಕಿ ಒದ್ದಾಡಿದ ಸಚಿವರು!

ವಿಜಯಸಾಕ್ಷಿ ಸುದ್ದಿ, ಉಡುಪಿ

ಕೃಷಿ ಭೂಮಿಯಲ್ಲಿ ಕಾರು ಸಿಲುಕಿದ ಪರಿಣಾಮ ಕೃಷಿ ಸಚಿವರು ಒದ್ದಾಡಿದ ಘಟನೆ ಜಿಲ್ಲೆಯ ಕಡೆಕಾರ್ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಆಗಮಿಸಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್ ರು ಕೃಷಿ ಭೂಮಿಯ ಸಮೀಪದಲ್ಲಿ ಕಾರು ತೆಗೆದುಕೊಂಡು ಹೋಗಿದ್ದರು.

ಮಳೆ ಹಿನ್ನಲೆಯಲ್ಲಿ ಸಂಪೂರ್ಣ ತೇವವಾಗಿದ್ದ ಜಾಗದಲ್ಲಿ ಕಾರಿನ ಟೈರ್ ಸಿಲುಕಿದ್ದರ ಪರಿಣಾಮ ಕಾರು ಅಲ್ಲಿಯೇ ಸಿಲುಕಿತ್ತು. ಹೀಗಾಗಿ ಅಲ್ಲಿ ನೆರೆದಿದ್ದ ಜನರು ಕೃಷಿ ಸಚಿವರು ಕಾರು ದೂಡಿ ರಸ್ತೆಗೆ ತಂದು ನಿಲ್ಲಿಸಿದ್ದರು. ಉಡುಪಿ ಕಡೆಕಾರು ಬಳಿ ಕೃಷಿ ನಾಟಿಗೆ ಕೃಷಿ ಸಚಿವರು ಚಾಲನೆ ನೀಡಿದ್ದಾರೆ. ಕೇದಾರೋತ್ಥಾನ ಟ್ರಸ್ಟ್ ಮೂಲಕ ಈ ಕೃಷಿ ಆಂದೋಲನ ಆರಂಭಿಸಲಾಗಿತ್ತು.

10 ದಿನಗಳಲ್ಲಿ ನನ್ನ ರಾಜಕೀಯ ಜೀವನ ಘೋಷಣೆ; ರಮೇಶ್ ಜಾರಕಿಹೊಳಿ!

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಮುಂದಿನ 10 ದಿನಗಳಲ್ಲಿಯೇ ನನ್ನ ರಾಜಕೀಯ ಜೀವನದ ನಿರ್ಣಯ ತಿಳಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲೆಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ ಕುರಿತು ಹಿರಿಯರು ಖಾರವಾಗಿ ಹೇಳಿದ್ದಾರೆ. ಹೀಗಾಗಿ ನಾನು ಸದ್ಯ ಯಾವುದೇ ಹೇಳಿಕೆ ನೀಡುವದಿಲ್ಲ. ನನ್ನ ಹೇಳಿಕೆಯ ಹಿಂದೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಸುತ್ತೂರು ಶ್ರೀಗಳ ತಾಯಿ ಸಾವನ್ನಪ್ಪಿದ ಕಾರಣ ಸಾಂತ್ವನ ಹೇಳಲು ಸುತ್ತೂರು ಮಠಕ್ಕೆ ಹೋಗಿದ್ದೆ. ಯಾವುದೇ ರಾಜಕೀಯ ವಿಷಯದ ಕುರಿತು ನಾನು ಹೋಗಿರಲಿಲ್ಲ. ಕೋವಿಡ್ ನಿಂದ ಮೃತಪಟ್ಟ ಆಪ್ತರ ಮನೆಗೆ ಇಂದು ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಅವರ ಆಪ್ತ ಶಾಸಕ ಮಹೇಶ ಕುಮಟಳ್ಳಿ ಸೇರಿದಂತೆ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಮಾನವೀಯತೆಗೆ ಸಾಕ್ಷಿಯಾದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ!

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಅಪಘಾತವಾಗಿ ರಸ್ತೆಯಲ್ಲಿ ನರಳುತ್ತಿದ್ದ ಅಪರಿಚಿತರನ್ನು ಆಸ್ಪತ್ರೆಗೆ ದಾಖಲಾಗುವಂತೆ ಮಾಡಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾನವೀಯತೆ ಮೆರೆದಿದ್ದಾರೆ. ತಾಲೂಕಿನ ಸಿರಿಗೆರೆ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಬೈಕಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಾಳಾಗಿ ರಸ್ತೆ ಮಧ್ಯೆ ನರಳಾಡುತ್ತಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಹೊರಟ್ಟಿ, ರಸ್ತೆಯಲ್ಲಿ ನಡೆದ ಅಪಘಾತ ಗಮನಿಸಿ, ತಕ್ಷಣವೇ ಕಾರು ನಿಲ್ಲಿಸಿ ಗಂಭೀರವಾಗಿ ಗಾಯಗೊಂಡಿದ್ದ ಗಾಯಾಳುಗಳ ಬಳಿಗೆ ಧಾವಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಹಾಗೂ ಪುತ್ರನಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಕೆಲವು ಕಾಲ ಸ್ಥಳದಲ್ಲಿಯೇ ಇದ್ದು, ಗಾಯಾಳುಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಿಂದಾಗಿ ಟಾಲಿವುಡ್ ನಟ ಆಸ್ಪತ್ರೆಗೆ ದಾಖಲು!

ವಿಜಯಸಾಕ್ಷಿ ಸುದ್ದಿ, ಹೈದರಾಬಾದ್

ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲಿಯೇ ಟಾಲಿವುಡ್ ನ ಮತ್ತೊಬ್ಬ ನಟ ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ಕತ್ತಿ ಮಹೇಶ್ ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಚಿತ್ತೂರಿನಿಂದ ಹೈದರಾಬಾದ್ ಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಇನ್ನೊವಾ ಕಾರು ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಟನಾಗಿ ಮಾತ್ರವಲ್ಲದೆ, ವಿಮರ್ಶಕನಾಗಿ ಹಾಗೂ ಬಿಗ್ ಬಾಸ್ ತೆಲುಗು ಸೀಸನ್ -1ರ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು. ನೆಲ್ಲೂರಿನ ಹೊರ ವಲಯದ ಚಂದ್ರಶೇಖರಪುರಂ ಬಳಿ ಮಹೇಶ್ ಚಲಿಸುತ್ತಿದ್ದ ಕಾರು ಶುಕ್ರವಾರ (ಏ.25)ರಂದು ಅಪಘಾತವಾಗಿದೆ.

ಸರಿಯಾದ ಸಮಯಕ್ಕೆ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೆ ಮಾರಣಾಂತಿಕ ಗಾಯಗಳಾಗುವುದು ತಪ್ಪಿದೆ ಎನ್ನಲಾಗಿದೆ. ಆದರೂ ಅವರಿಗೆ ಸದ್ಯಕ್ಕೆ ಪ್ರಜ್ಞೆ ಬಂದಿಲ್ಲ ಎಂದು ವರದಿ ತಿಳಿದು ಬಂದಿದೆ.
ಕಾರು ಜಖಂ ಆಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕಿರುಚಿತ್ರಗಳ ಮೂಲಕ ಮಹೇಶ್ ವೃತ್ತಿ ಜೀವನ ಆರಂಭಿಸಿದ್ದರು. ನೇನೆ ರಾಜು ನೇನೆ ಮಂತ್ರಿ, ಕ್ರ್ಯಾಕ್, ಅಮ್ಮ ರಾಜ್ಯಂ ಲೋ ಕಡಪ ಬಿದ್ದಲು ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಎಸ್ಪಿ ಯತೀಶ್ ನೇತೃತ್ವ; 7 ಲಕ್ಷ ರೂ. ಮೌಲ್ಯದ ಗಾಂಜಾ ನಾಶ!

ವಿಜಯಸಾಕ್ಷಿ ಸುದ್ದಿ, ಗದಗ

ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸುಮಾರು 48 ಕೆ.ಜಿ ಗಾಂಜಾ ನಾಶಮಾಡಲಾಗಿದೆ.

ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಜಪ್ತಿ ಮಾಡಲಾಗಿದ್ದ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಹಾಗೂ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಬೆಟಗೇರಿ ನರಸಾಪುರ ಕೈಗಾರಿಕಾ ಪ್ರದೇಶದ ಗದಗ ಎನ್ವಿರೋಟೆಕ್ ಪ್ರೈವೇಟ್ ಲಿ. ಕೈಗಾರಿಕೆಯಲ್ಲಿ ಸುಮಾರು 48 ಕೆ.ಜಿ ಅಂದರೆ ಅಂದಾಜು ರೂ. 7.18 ಲಕ್ಷ ಮೌಲ್ಯದ ಗಾಂಜಾ ನಾಶ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಯತೀಶ್ ಎನ್, ನರಗುಂದ ಡಿವೈಎಸ್ ಪಿ ಶಂಕರ ರಾಗಿ, ಗದಗ ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟರ್, ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿ ಶಶಿಧರ ಕೋಡಿಹಳ್ಳಿ , ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಇದ್ದರು. ಇವರೆಲ್ಲರ ಸಮ್ಮುಖದಲ್ಲಿಯೇ ಗಾಂಜಾ ನಾಶಪಡಿಸಲಾಯಿತು.

ಮಾಸ್ಕ್ ಹಾಕಿಕೊಂಡು ಬಾರದ ಕಾರಣಕ್ಕೆ ಇಲ್ಲೊಬ್ಬ ವ್ಯಕ್ತಿ ಮಾಡಿದ್ದೇನು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬರೈಲಿ

ಮಾಸ್ಕ್ ಧರಿಸದೆ ಬ್ಯಾಂಕ್ ಗೆ ಗ್ರಾಹಕ ಬಂದಿದ್ದಕ್ಕೆ ಅಲ್ಲಿಯ ಭದ್ರತಾ ಸಿಬ್ಬಂದಿಯು ಗ್ರಾಹಕನ ಮೇಲೆ ಗುಂಡು ಹಾರಿಸಿದ ಘಟನೆಯೊಂದು ಉತ್ತರ ಪ್ರದೇಶದ ಬರೈಲಿಯಲ್ಲಿ ನಡೆದಿದೆ. ಮಾಸ್ಕ್ ಧರಿಸದೆ ಹೊರ ಬಂದರೆ ಫೈನ್ ಹಾಕುವುದನ್ನು ನಾವು ನೋಡಿರುತ್ತೇವೆ. ಬೆತ್ತದಿಂದ ಪೊಲೀಸರು ಹೊಡೆಯುವುದನ್ನೂ ನೋಡಿರುತ್ತೇವೆ. ಆದರೆ, ಬರೋಡಾದ ಸ್ಟೇಷನ್ ರಸ್ತೆಯಲ್ಲಿರುವ ಬರೈಲಿ ಬ್ಯಾಂಕ್ ನಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಗ್ರಾಹಕ ರಾಜೇಶ್ ಕುಮಾರ್ ಕಾಲಿಗೆ ಗುಂಡು ತಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಜೇಶ್ ಕುಮಾರ್, ಶುಕ್ರವಾರ ತಮ್ಮ ಖಾತೆಯಿಂದ ಹಣ ಪಡೆಯಲು ಬ್ಯಾಂಕ್ ಗೆ ತೆರಳಿದ್ದರು. ಅವರು ಮಾಸ್ಕ್ ಧರಿಸದೇ ಹೋಗಿದ್ದರಿಂದ ಅಲ್ಲಿನ ಬ್ಯಾಂಕ್ ಭದ್ರತಾ ಸಿಬ್ಬಂದಿಯಾದ ಕೇಶವ್ ಅವರು ರಾಜೇಶ್ ಅವರನ್ನು ತಡೆದಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದ್ದಕ್ಕಿದ್ದಂತೆ ಭದ್ರತಾ ಸಿಬ್ಬಂದಿ ಕೇಶವ್ ಗ್ರಾಹಕ ರಾಜೇಶ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ರಾಜೇಶ್ ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಪೊಲೀಸರು ಬ್ಯಾಂಕ್ ಗೆ ಬಂದು ಕೇಶವ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊರೊನಾದಿಂದ ಗುಣಮುಖರಾದ ವೈದ್ಯರಲ್ಲಿ ಕಂಡು ಬಂದ ಎರಡು ಫಂಗಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕು ತಗುಲಿ, ಚೇತರಿಸಿಕೊಂಡ ಬಳಿಕ ನಗರದ ವೈದ್ಯರೊಬ್ಬರಲ್ಲಿ ಕಪ್ಪು ಹಾಗೂ ಹಸಿರು ಎರಡೂ ಶಿಲೀಂಧ್ರಗಳ ಸೋಂಕು ಕಾಣಿಸಿಕೊಂಡಿವೆ. ಎರಡು ವಿಧದ ಶಿಲೀಂಧ್ರ ಸೋಂಕು ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡ ದೇಶದ ಮೊದಲ ವ್ಯಕ್ತಿ ಈ ವೈದ್ಯರಾಗಿದ್ದಾರೆ.
ಡಾ. ಕಾರ್ತಿಕೇಯನ್ ಆರ್‌. ಎಂಬುವವರೇ ಈ ಕಪ್ಪು ಮತ್ತು ಹಸಿರು ಶಿಲೀಂಧ್ರ ಸೋಂಕಿಗೆ ತುತ್ತಾದವರಾಗಿದ್ದಾರೆ.

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಈ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕಳೆದ ಎಪ್ರಿಲ್‌ ನಲ್ಲಿ ಈ ವೈದ್ಯರಿಗೆ ಕೋವಿಡ್‌ ಸೋಂಕು ತಗುಲಿತ್ತು, ಆಗ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಮುಖದ ಭಾಗದಲ್ಲಿ ಮರಗಟ್ಟುವಿಕೆ, ನೋವು, ಮೂಗು ಸೋರುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಅವರಿಗೆ ಕಾಣಿಸಿಕೊಂಡಿದ್ದವು. ಆಗ ತಪಾಸಣೆ ನಡೆಸಿದ ವೈದ್ಯರು, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಮೂಲಕ ಪೊಂಗಸ್ ಸೋಂಕು ತಗುಲಿರುವುದು ದೃಢವಾಗಿದೆ.

ಡಾ.ಕಾರ್ತಿಕೇಯನ್ ವೈದ್ಯರಿಗೆ ಚಿಕಿತ್ಸೆ ನೀಡಿದ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್ ಆರ್‌. ರೆಡ್ಡಿ ಅವರು ಈ ಬಗ್ಗೆ ಮಾತನಾಡಿದ್ದು, ‘ಅವರ ಮೂಗಿನಲ್ಲಿ ಹಸಿರು ಮಿಶ್ರಿತ ಕಂದು ಬಣ್ಣದ ಉಪ್ಪಿನ ಹರಳು ಮಾದರಿಯ ವಸ್ತುಗಳು ಗೋಚರಿಸಿದವು. ಇದು ಸಾಮಾನ್ಯ ಕಪ್ಪು ಶಿಲೀಂಧ್ರ ಪ್ರಕರಣದಂತೆ ಕಾಣಲಿಲ್ಲ. ಹೆಚ್ಚಿನ ವಿಶ್ಲೇಷಣೆ ನಡೆಸಿದಾಗ ಎರಡು ಮಾದರಿಯ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿತು. ಹೀಗಾಗಿ, ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ನಿವಾರಕ ಔಷಧವನ್ನು ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಲ್ಲಿ ಕಂಡು ಬಂದ ಹೊಸ ರೋಗ!

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಕೊರೊನಾ ಮಹಾಮಾರಿ ಜನರನ್ನು ಸಾಕಷ್ಟು ಕಾಡಿದೆ. ಇದರ ಮಧ್ಯೆ ಹೊಸ ಹೊಸ ವೈರಸ್ ಗಳು ಪತ್ತೆಯಾಗುತ್ತಿವೆ. ಅಲ್ಲದೇ, 3ನೇ ಅಲೆ ಮಕ್ಕಳಲ್ಲಿ ಹೆಚ್ಚು ವ್ಯಾಪಿಸುತ್ತದೆ ಎಂಬ ಆತಂಕವನ್ನು ತಜ್ಞರು ಹೇಳಿದ್ದಾರೆ. ಇದರ ಮಧ್ಯೆಯೇ ಕೊರೊನಾ ವೈರಸ್ ರೂಪಾಂತರದಿಂದ ಎ-ನೆಕ್ ಎಂಬ ಹೊಸ ರೋಗ ಮಕ್ಕಳಲ್ಲಿ ಕಾಣಿಸಿದೆ.
ದೇಶದಲ್ಲಿಯೇ ಮೊದಲ ಬಾರಿಗೆ ಮಕ್ಕಳಲ್ಲಿ ಕಂಡು ಬಂದಿದೆ. ಅದು ದಾವಣಗೆರೆಯಲ್ಲಿ ಕಂಡು ಬಂದಿದೆ. ಈ ರೋಗದಿಂದ ಸಾವೇ ಹೆಚ್ಚು ಎಂಬ ಆತಂಕ ಕೇಳಿ ಬರುತ್ತಿದ್ದು, ಜನರು ಭಯಭೀತರಾಗುವಂತಾಗಿದೆ.

ಜಿಲ್ಲೆಯಲ್ಲಿ ಶಂಕಿತ ಮಿಸ್ಸಿ ಎನ್ನುವ ರೋಗ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದಿತ್ತು, ಅದಾದ ಬಳಿಕ ಇದೀಗ ದೇಶದಲ್ಲಿಯೇ ಮೊದಲ ಬಾರಿಗೆ ಎ-ನೆಕ್ ಎಂಬ ರೋಗ ಲಕ್ಷಣ ಮಗುವೊಂದರಲ್ಲಿ ಕಂಡು ಬಂದಿದೆ. ಅದನ್ನು ಕಂಡು ಹಿಡಿಯುವಲ್ಲಿ ಎಸ್ ಎಸ್‌ ಹೈಟೆಕ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಮಗುವಿಗೆ ಈ ಎ-ನೆಕ್ ರೋಗ ಲಕ್ಷಣ ಕಂಡು ಬಂದಿದೆ. ದಾವಣಗೆರೆ ನಗರದ ಎಸ್ ಎಸ್ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಲ್ಲಿ ಈ ಪ್ರಕರಣ ಪತ್ತೆಯಾಗಿದೆ.

ಕೊರೊನಾ ಸೋಂಕು ತಗುಲಿ ಗುಣ ಹೊಂದಿದ ಮಕ್ಕಳಲ್ಲಿ ಈ ವೈರಸ್ ಕಂಡು ಬರಲಿದೆ. ಇದು ಗಂಭೀರ ರೋಗದ ಲಕ್ಷಣ ಎಂದು ಹೇಳಲಾಗುತ್ತಿದೆ. ಆದರೆ ಪ್ರಸ್ತುತವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹಳಿ ತಪ್ಪಿದ ದೆಹಲಿಯಿಂದ ಹೊರಟಿದ್ದ ರಾಜಧಾನಿ ಎಕ್ಸಪ್ರೆಸ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ದೆಹಲಿಯಿದ ಗೋವಾಕ್ಕೆ ಹೋಗುತ್ತಿದ್ದ ರಾಜಧಾನಿ ಎಕ್ಸಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ರತ್ನಗಿರಿ ಸುರಂಗದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಈ ರೈಲು ಮಡ್ಗಾಂವ್ ನಿಲ್ದಾಣಕ್ಕೆ ಹೊರಟಿತ್ತು. ಆದರೆ, ಮಾರ್ಗಮಧ್ಯೆ ರಾಜಧಾನಿ ಎಕ್ಸಪ್ರೆಸ್ ರತ್ನಿಗಿರಿ ಸಮೀಪದ ಕಾರ್ಬುಡೆ ಸುರಂಗ ಮಾರ್ಗದಲ್ಲಿ ಹಳಿ ತಪ್ಪಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ರಾಜಧಾನಿ ಎಕ್ಸಪ್ರೆಸ್ ಹಳಿ ತಪ್ಪಿದ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಘಟನೆ ದೆಹಲಿಯಿಂದ 325 ಕಿ.ಮೀ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಸಿಕೆ ಪಡೆಯಲು ಬಂದವನಿಗೆ ಸಿರಿಂಜ್ ಮಾತ್ರ ಚುಚ್ಚಿದ ನರ್ಸ್!

ವಿಜಯಸಾಕ್ಷಿ ಸುದ್ದಿ, ಪಟ್ನಾ

ಲಸಿಕೆ ಹಾಕಿಸಿಕೊಳ್ಳಲು ಬಂದ ವ್ಯಕ್ತಿಗೆ ನಕಲಿ ಚುಚ್ಚುಮದ್ದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಭಾರತ ಸರ್ಕಾರವು ದೇಶದ ಎಲ್ಲ ಜನರಿಗೂ ಲಸಿಕೆ ನೀಡಬೇಕು ಎಂಬ ನಿಟ್ಟಿನಲ್ಲಿ ಅಭಿಯಾನ ಪ್ರಾರಂಭಿಸಿದೆ. ಆದರೆ, ಹಲವೆಡೆ ನಕಲಿ ಲಸಿಕೆ ನೀಡಲಾಗುತ್ತಿದ್ದರೆ, ಇಲ್ಲೊಂದು ಕಡೆ ಲಸಿಕೆ ಪಡೆಯಲು ಬಂದಿದ್ದ ವ್ಯಕ್ತಿಗೆ ನರ್ಸ್‌ ವೊಬ್ಬರು ಖಾಲಿ ಸಿರಿಂಜ್‌ ತೆರೆದು, ಕೊರೊನಾ ಲಸಿಕೆಯ ಸೀಸೆಯಿಂದ ವ್ಯಾಕ್ಸಿನ್‌ ಭರ್ತಿ ಮಾಡಿಕೊಳ್ಳದೆ ನೇರವಾಗಿ ಖಾಲಿ ಸಿರಿಂಜ್‌ ಅನ್ನು ಯುವಕನಿಗೆ ಚುಚ್ಚಿದ್ದಾರೆ.

ಆ ಯುವಕನೊಂದಿಗೆ ಬಂದಿದ್ದ ಗೆಳೆಯ, ಇದನ್ನೆಲ್ಲಾ ತಮಾಷೆಗಾಗಿ ವೀಡಿಯೋ ಮಾಡಿಕೊಂಡಿದ್ದನು. ಆದರೆ ಮನೆಗೆ ಮರಳಿದ ಬಳಿಕ ಆ ವೀಡಿಯೋವನ್ನು ಪರಿಶೀಲಿಸಿದಾಗ, ಖಾಲಿ ಸಿರಿಂಜ್ ಚುಚ್ಚಿ ಕಳುಹಿಸಿದ್ದು ಗೊತ್ತಾಗಿದೆ. ತಕ್ಷಣ ಆ ಯುವಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಬಿಹಾರದಲ್ಲಿ ನರ್ಸ್‌ ವೊಬ್ಬರು ಖಾಲಿ ಸಿರಿಂಜ್‌ ಅನ್ನು ಲಸಿಕೆ ಪಡೆಯಲು ಬಂದ ವ್ಯಕ್ತಿಗೆ ಚುಚ್ಚಿ ಕಳುಹಿಸಿದ ವೀಡಿಯೋ ವೈರಲ್‌ ಆಗಿದೆ. ಲಸಿಕೆ ನೀಡಲು ಕುಳಿತಿದ್ದ ನರ್ಸ್ ವೊಬ್ಬರು, ಸುತ್ತಲಿದ್ದವರ ಜತೆ ಮಾತನಾಡುತ್ತ ಸಿರಿಂಜ್‌ ಪ್ಯಾಕೆಟ್‌ ಒಡೆದು, ಲಸಿಕೆಯಿಲ್ಲದೆ ಚುಚ್ಚಿದ್ದಾರೆ.

error: Content is protected !!