Home Blog Page 3010

ಅಪಘಾತದಲ್ಲಿ ಒಂದೇ ಕುಟುಂಬದ 10 ಜನ ಸಾವು!

ವಿಜಯಸಾಕ್ಷಿ ಸುದ್ದಿ, ಆನಂದ

ಕಾರ್-ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 10 ಜನರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಸಮೀಪ ನಡೆದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ 10 ಜನರು ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಮಕ್ಕಳೂ ಇದ್ದರು. ವೇಗವಾಗಿ ಬಂದ ಟ್ರಕ್ ಎದುರಿಗೆ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘತಾಕ್ಕೊಳಗಾದ ಕಾರು ವಾಟಾಮನ್ ಗೆ ಹೋಗುತ್ತಿತ್ತು. ಇನ್ನು ಡಿಕ್ಕಿ ಹೊಡೆದ ಈ ಟ್ರಕ್ ವಾಟಾಮನ್ ಕಡೆಯಿಂದ ಬರುತ್ತಿತ್ತು. ಈ ವೇಳೆ ಮುಖಾಮುಖಿಯಾಗಿದ್ದರಿಂದ ಕಾರು ನುಜ್ಜುಗುಜ್ಜಾಗಿದೆ. ಕಾರಿನೊಳಗೆ ಸಿಲುಕಿರುವ ಶವಗಳನ್ನು ಹೊರತೆಗೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದೀಗ ಮೃತರ ಗುರುತು ಪತ್ತೆಹಚ್ಚುವ ಕೆಲಸ ನಡೆದಿದೆ.

ಶಿಕ್ಷಕಿಯರು ಮನೆಯಲ್ಲಿಯೇ ಕುಳಿತು ಕಾರ್ಯ ನಿರ್ವಹಿಸಬೇಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಶಿಕ್ಷಕಿಯರಿಗೆ ಸರ್ಕಾರದಿಂದ ಸಿಹಿ ಸುದ್ದಿಯೊಂದು ಸಿಕ್ಕಿದೆ. ರಾಜ್ಯದಲ್ಲಿ ಕೊರೊನಾ ಹಾವಳಿ ಇರುವ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೆ ಮನೆಯಲ್ಲಿಯೇ ಕುಳಿತು ಕೆಲಸ ನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಸಂಚಾರಕ್ಕೆ ಅನಾನುಕೂಲತೆ ಇರುವ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೆ ಸರ್ಕಾರ ಈ ರೀತಿಯ ಅವಕಾಶ ಮಾಡಿಕೊಟ್ಟಿದೆ.
ಅಲ್ಲದೇ, ಕೊರೊನಾ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಓಡಾಟಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಂತರ್ ಜಿಲ್ಲಾ ಶಿಕ್ಷಕರಿಗೆ ಸಾಲೆಗಳ ಹಾಜರಾತಿಗೆ ಕಾಲಾವಕಾಶ ನೀಡಲಾಗಿದೆ. ಸಂಚಾರಕ್ಕೆ ಅನಾನುಕೂಲತೆ ಇರುವ ಕಾರಣ ಶಿಕ್ಷಕಿಯರಿಗೆ ವಿನಾಯಿತಿ ನೀಡಲಾಗಿದೆ.

ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕಿಯರನ್ನು ಹೊರತು ಪಡಿಸಿ ಸಂಚಾರಕ್ಕ ಅನಾನುಕೂಲತೆ ಇರುವ ಶಿಕ್ಷಕಿಯರು ಜೂ. 21ರ ವರೆಗೆ ಮನೆಯಿಂದಲೇ ಕುಳಿತು ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ತೆರವುಗೊಂಡ ಜಿಲ್ಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕೆಂದು ಸರ್ಕಾರ ಸೂಚಿಸಿದೆ.

ಪೊಲೀಸ್ ಠಾಣೆಯಲ್ಲಿ ಹಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಪೊಲೀಸರು ಆತಂಕಗೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ‌ ನಡೆದಿದೆ.

ಠಾಣೆಯಲ್ಲಿ ಆರೋಪಿಗಳನ್ನು ಇಡುವ ಸೆಲ್ ಬಳಿಯ ಶೌಚಾಲಯದಲ್ಲಿ ಹುರುಪಂಜರ್ ಎಂಬ ವಿಷಕಾರಕ ಹಾವು ಪೇದೆಯೊಬ್ಬರಿಗೆ ಕಾಣಿಸಿಕೊಂಡಿದೆ. ಗಾಬರಿ ಬಿದ್ದ ಪೇದೆ ಎಲ್ಲ ಸಿಬ್ಬಂದಿಗೆ ಹೇಳಿದಾಗ ಕೆಲಕಾಲ‌ ಆತಂಕದ ವಾತಾವರಣ ‌ನಿರ್ಮಾಣವಾಯಿತು.

ತಕ್ಷಣವೇ ಸಮೀಪದಲ್ಲಿ ಇರುವ ಸ್ನೇಕ್ ರಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವು ಹಿಡಿದರು. ಸುಮಾರು ಅರ್ಧ ಗಂಟೆಗಳ ಕಾಲ‌ ಕಾಡಿಸಿದ ಹಾವು ಕೊನೆಗೂ ಸ್ನೇಕ್ ರೆಹಮಾನ್ ಕೈಗೆ ಸಿಕ್ಕಿಬಿತ್ತು. ಹಾವು ಸಿಕ್ಕ ನಂತರ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಸ್ನೇಕ್ ರೆಹಮಾನ್, ಈ ಹಾವು ಸುಮಾರು ದಿನಗಳಿಂದ ಶೌಚಾಲಯದಲ್ಲಿ ನೆಲೆಸಿತ್ತು. ಆದರೆ ಯಾರ ಗಮನಕ್ಕೂ ‌ಬಂದಿಲ್ಲ. ಆದರೆ ಇವತ್ತು ರಾತ್ರಿ ಹೊರಗೆ ಬಿದ್ದಿದ್ದರಿಂದ ಪೊಲೀಸರ ಕಣ್ಣಿಗೆ ಬಿದ್ದಿದೆ. ಕರೆ ಬಂದ ತಕ್ಷಣವೇ ಹಾಜರಾಗಿ‌ ಹಾವು ಹಿಡಿದು ನರೇಗಲ್ ರಸ್ತೆಯ ಎಕ್ಕಿಹಳ್ಳದ ಸರುವಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದರು.

ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಹಾವು ಪ್ರತ್ಯಕ್ಷ; ಬೆಚ್ಚಿಬಿದ್ದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ವಿಷಕಾರಿ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಪೊಲೀಸರು ಆತಂಕಗೊಂಡ ಘಟನೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ‌ ನಡೆದಿದೆ.

ಠಾಣೆಯಲ್ಲಿ ಆರೋಪಿಗಳನ್ನು ಇಡುವ ಸೆಲ್ ಬಳಿಯ ಶೌಚಾಲಯದಲ್ಲಿ ಹುರುಪಂಜರ್ ಎಂಬ ವಿಷಕಾರಕ ಹಾವು ಪೇದೆಯೊಬ್ಬರಿಗೆ ಕಾಣಿಸಿಕೊಂಡಿದೆ. ಗಾಬರಿ ಬಿದ್ದ ಪೇದೆ ಎಲ್ಲ ಸಿಬ್ಬಂದಿಗೆ ಹೇಳಿದಾಗ ಕೆಲಕಾಲ‌ ಆತಂಕದ ವಾತಾವರಣ ‌ನಿರ್ಮಾಣವಾಯಿತು.

ತಕ್ಷಣವೇ ಸಮೀಪದಲ್ಲಿ ಇರುವ ಸ್ನೇಕ್ ರಹಮಾನ್ ಗೆ ಕರೆ ಮಾಡಿದ್ದಾರೆ. ಸ್ನೇಕ್ ರೆಹಮಾನ್ ಹಾಗೂ ಮಗ ತೌಶೀಫ್ ಇಬ್ಬರು ಕಾರ್ಯಚರಣೆ ನಡೆಸಿ ಹಾವು ಹಿಡಿದರು. ಸುಮಾರು ಅರ್ಧ ಗಂಟೆಗಳ ಕಾಲ‌ ಕಾಡಿಸಿದ ಹಾವು ಕೊನೆಗೂ ಸ್ನೇಕ್ ರೆಹಮಾನ್ ಕೈಗೆ ಸಿಕ್ಕಿಬಿತ್ತು. ಹಾವು ಸಿಕ್ಕ ನಂತರ ಸಿಬ್ಬಂದಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಈ ಕುರಿತು ವಿಜಯಸಾಕ್ಷಿ ಗೆ ಮಾಹಿತಿ ‌ನೀಡಿರುವ ಸ್ನೇಕ್ ರೆಹಮಾನ್, ಈ ಹಾವು ಸುಮಾರು ದಿನಗಳಿಂದ ಶೌಚಾಲಯದಲ್ಲಿ ನೆಲೆಸಿತ್ತು. ಆದರೆ ಯಾರ ಗಮನಕ್ಕೂ ‌ಬಂದಿಲ್ಲ. ಆದರೆ ಇವತ್ತು ರಾತ್ರಿ ಹೊರಗೆ ಬಿದ್ದಿದ್ದರಿಂದ ಪೊಲೀಸರ ಕಣ್ಣಿಗೆ ಬಿದ್ದಿದೆ. ಕರೆ ಬಂದ ತಕ್ಷಣವೇ ಹಾಜರಾಗಿ‌ ಹಾವು ಹಿಡಿದು ನರೇಗಲ್ ರಸ್ತೆಯ ಎಕ್ಕಿಹಳ್ಳದ ಸರುವಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದರು.

ಕೊರೊನಾ; ಗದಗ ಜಿಲ್ಲೆಯ ಜನರಿಗೆ ಮಂಗಳವಾರವೂ ಮುಂದುವರಿದ ಶುಭ ಸುದ್ದಿ!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಇಂದು 21 ಜನರಿಗೆ ಸೋಂಕು ತಗುಲಿದೆ. ಇಂದು ಕೂಡ ಕೋವಿಡ್ ನಿಂದ ಯಾವುದೇ ಸಾವಿನ ವರದಿ ಆಗಿಲ್ಲ.

ಇಂದು 21 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25446 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -09, ಮುಂಡರಗಿ-03, ನರಗುಂದ-02, ರೋಣ-02, ಶಿರಹಟ್ಟಿ-05, ಹೊರಜಿಲ್ಲೆಯ-00 ಸೇರಿದಂತೆ 21 ಪ್ರಕರಣಗಳು ದೃಢಪಟ್ಟಿವೆ.

ಇಂದು 88 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24582 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 576 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 80 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಂದರ್-ಬಾಹರ್ ಜೂಜಾಟ; ಸರಕಾರಿ ನೌಕರ, ವರ್ತಕರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಓರ್ವ ಸರಕಾರಿ ನೌಕರ, ನಾಲ್ಕು ಜನ ವರ್ತಕರು ಹಾಗೂ ಖಾಸಗಿ ನೌಕರನೊಬ್ಬ ಸೇರಿದಂತೆ ಒಂಬತ್ತು ಜನರ ತಂಡವೊಂದು ಇಸ್ಪೀಟ್ ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹರದಗಟ್ಟಿ ರಸ್ತೆಯಲ್ಲಿರುವ ಅಗಸ್ಥ್ಯತೀರ್ಥ ಹತ್ತಿರದ ಸಾರ್ವಜನಿಕ ರಸ್ತೆಯ ಮೇಲೆ ಅಂದರ-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಶಿವಕುಮಾರ ಲೋಹಾರ್ ಹಾಗೂ ಸಿಬ್ಬಂಧಿ ದಾಳಿ ಒಂಬತ್ತು ಜನರನ್ನು ಬಂಧಿಸಿ ಅವರಿಂದ 3800 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.

ವರ್ತಕರಾದ ಸಾಗರ ಮಂಜುನಾಥ್ ಹಂಜಗಿ, ಪರಶುರಾಮ ಫಕ್ಕೀರಪ್ಪ ಹಂಜಗಿ, ವಿನಾಯಕ ರವಿ ಬಳ್ಳಾರಿ, ಆಕಾಶ ಭರಮಪ್ಪ ಬಂಡಾರಿ, ಸರಕಾರಿ ನೌಕರ ನವೀನ ಮಂಜುನಾಥ್ ಕಾಂಬಳೆ, ಖಾಸಗಿ ನೌಕರ ರಾಜು ಪರಮೇಶ್ ಸಾತಪೊತೆ, ಸೇಲ್ಸ್‌ಮೆನ್‌ ನಾಗರಾಜ್ ಯಲ್ಲಪ್ಪ ಕಾಂಬಳೆ ಹಾಗೂ ಅಮಿತ ಪರಶುರಾಮ ಮುಳಗುಂದ, ಗದಗ ನಿವಾಸಿ ಕುಂಟಪ್ಪ ದೊಡ್ಡದುರಗಪ್ಪ ವಿಭೂತಿ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಅನ್ ಲಾಕ್ 2.0ಗೆ ಸಿದ್ಧತೆ! ಯಾವುದಕ್ಕೆಲ್ಲ ಸಿಗಲಿದೆ ಅವಕಾಶ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿಯಿಂದಾಗಿ ಲಾಕ್ ಡೌನ್ ಹೇರಲಾಗಿತ್ತು. ಹೀಗಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಈಗಾಗಲೇ ರಾಜ್ಯದ 19 ಜಿಲ್ಲೆಗಳಲ್ಲಿ ಹಲವು ಸಡಿಲಿಕೆಗಳನ್ನು ರಾಜ್ಯ ಸರ್ಕಾರ ಮಾಡಿದೆ. ಇದರೊಂದಿಗೆ ಅನ್ ಲಾಕ್ 2.0ಗೂ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಮಹಾಮಾರಿ ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣವಾಗಿ ನುಂಗಿ ಹಾಕಿದೆ. ಬಡವರ ಪರಿಸ್ಥಿತಿ ಕೂಡ ಇದರಿಂದಾಗಿ ಶೋಚನೀಯವಾಗಿದೆ. ಇನ್ನೊಂದೆಡೆ ಕೊರೊನಾ ಹತೋಟಿಗೆ ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಆರ್ಥಿಕತೆಗೆ ಪುನರ್ ಜೀವ ಕೊಡಲು ಮುಂದಾಗಲಾಗಿದೆ. ಈ ನಿಟ್ಟಿನಲ್ಲಿ ಜೂ. 21ರಿಂದ ರಾಜ್ಯಾದ್ಯಂತ ಅನ್ ಲಾಕ್ 2.0 ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಸಾರಿಗೆ ಸಂಚಾರ, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತದೆ.

ಜೂ. 21ರಿಂದ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದು, ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದರೊಂದಿಗೆ ಶಾಪಿಂಗ್ ಮಾಲ್, ಥಿಯೇಟರ್, ಜಿಮ್, ಚಿನ್ನದ ಅಂಗಡಿ, ಬಟ್ಟೆ ಅಂಗಡಿ ಸೇರಿದಂತೆ ವಾಣಿಜ್ಯ ಮಳಿಗೆ ತೆರೆಯಲು ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ಕುಳಿತುಕೊಂಡು ತಿಂಡಿ ತಿನ್ನಲು ಅನುಮತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆದರೆ, ಮೂರನೇ ಅಲೆಯ ಭಯ ಇರುವುದರಿಂದಾಗಿ ಈ ಎಲ್ಲ ಚಟುವಟಿಕೆಗಳನ್ನು ನಡೆಸಲು ದಿನಕ್ಕೆ ಕೇವಲ 8 ಗಂಟೆಯ ಅವಧಿ ನಿಗದಿಪಡಿಸುವ ಸಾಧ್ಯತೆ ಇದೆ. ಎಲ್ಲ ವ್ಯವಹಾರಗಳು ಕೋವಿಡ್ ನಿಯಮದಂತೆ ನಡೆಸಲು ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸುವ ಸಾಧ್ಯತೆ ಇದೆ.

ನಾವಿಬ್ಬರೂ ಒಳ್ಳೆಯ ಸ್ನೇಹಿತರು ಸಂಸದ ಪ್ರಜ್ವಲ್ ಕಂಬನಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಚಂದನವನದ ಉದಯೋನ್ಮುಖ ನಟ ಸಂಚಾರಿ ವಿಜಯ್ ನಿಧನಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಕಂಬನಿ ಮಿಡಿದಿದ್ದಾರೆ.
ಸಂಚಾರಿ ವಿಜಯ್ ಅವರು ನನ್ನ ಆತ್ಮೀಯ ಸ್ನೇಹಿತರು. ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದೇವು. ನಾನು ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದೇನೆ ಅನ್ನೋ ಒಂದು ಸಣ್ಣ ಅಹಂ ಕೂಡ ವಿಜಯ್ ಅವರಿಗೆ ಇರಲಿಲ್ಲ. ಅವರಿಗೆ ಸಮಾಜದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು ಎಂದಿದ್ದಾರೆ.

ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವಿಜಯ್ ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಊಹಿಸಲೂ ಕಷ್ಟ ಆಗ್ತಾ ಇದೆ. ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಇಂದು ನನ್ನನ್ನಾವರಿಸಿದೆ ಎಂದು ಪ್ರಜ್ವಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಭಿಮಾನಿಗಳಿಗೆ ಕುಟುಂಬ ವರ್ಗದವರಿಗೆ ವಿಜಯ್ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಜ್ವಲ್ ಪ್ರಾರ್ಥಿಸಿದ್ದಾರೆ.

ಲ್ಯಾಂಡಿಂಗ್ ವೇಳೆ ವಿಮಾನದ ಟಯರ್ ಸ್ಪೋಟ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಏರ್ ಪೋರ್ಟ್ ನಲ್ಲಿ ಇಂಡಿಗೋ ವಿಮಾನ ಲ್ಯಾಂಡ್ ಆಗುವ ವೇಳೆಯಲ್ಲಿ ಅದರ ಒಂದು ಟಯರ್ ಸ್ಫೋಟಗೊಂಡು ಆತಂಕಕ್ಕೆ ಕಾರಣವಾಗಿದೆ.

ಇಂಡಿಗೊ ಫ್ಲೈಟ್ 6 ಇ -7979, ಎಟಿಆರ್, ಕಣ್ಣೂರಿನಿಂದ ಹುಬ್ಬಳ್ಳಿಗೆ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ವಿಮಾನ ಹುಬ್ಬಳ್ಳಿಯ ನಿಲ್ದಾಣದಲ್ಲಿ ಇಳಿಯುವಾಗ ಟೈರ್ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. .

ಮದುವೆಗಾಗಿ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಕುಟುಂಬಸ್ಥರು ಬೇಗ ಮದುವೆ ಮಾಡದ ಕಾರಣಕ್ಕೆ ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದ್ದು, ಚಿರಂಜೀವಿ (23) ಈ ರೀತಿ ಆತ್ಮಹತ್ಯೆಗೆ ಯತ್ನಿಸಿರುವ ಯುವಕ ಎನ್ನಲಾಗಿದೆ. ಇತನ ಮದುವೆ ಫಿಕ್ಸ್ ಆಗಿ ತಿಂಗಳಗಳೇ ಕಳೆದಿತ್ತು. ಆದರೆ ಕುಟುಂಬಸ್ಠರು ಮದುವೆ ಮಾಡಲು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ಯುವಕನಿಗೆ ಒಬ್ಬ ಅಣ್ಣನಿದ್ದಾನೆ, ಅವನಿಗೂ ಹುಡುಗಿ ಫಿಕ್ಸ್ ಮಾಡಿಕೊಂಡು ಇಬ್ಬರಿಗೂ ಒಟ್ಟಿಗೆ ಮದುವೆ ಮಾಡುವ ನಿರೀಕ್ಷೆಯಲ್ಲಿ ಕುಟುಂಬವಿತ್ತು. ಆದರೆ, ಅಣ್ಣನಿಗೆ ಬೇಗ ಹುಡುಗಿ ಸಿಗುತ್ತಿಲ್ಲ. ಹೀಗಾಗಿ ಮದುವೆ ತಡ ಆಗುತ್ತಿದೆ. ಆದರೆ, ಚಿರಂಜೀವಿ ಮಾತ್ರ ಮದುವೆಗೆ ಒತ್ತಾಯ ಮಾಡಿದ್ದಾನೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಜೆಸ್ಕಾಂ ಗೆ ಕರೆ ಮಾಡಿ ಟವರ್ ಕಂಬಕ್ಕೆ ಇದ್ದ ವಿದ್ಯುತ್ ಸಂಪರ್ಕ ಕಟ್ ಮಾಡಿಸಿದ್ದಾರೆ. ತದನಂತರ ಹುಡುಗನೊಂದಿಗೆ ಮಾತನಾಡಿ ಮನವೊಲಿಸಿ ಕೆಳಗಿಳಿಸಿದ್ದಾರೆ. ನಾನು ಕೆಳಗೆ ಇಳಿದ ಮೇಲೆ ನನಗೆ ಯಾರೂ ಹೊಡೆಯಬಾರದು. ಬೈಯುವ ಹಾಗಿಲ್ಲ ಎಂಬ ಷರತ್ತಿನೊಂದಿಗೆ ಯುವಕ ಕೆಳಗೆ ಇಳಿದಿದ್ದಾನೆ.

ಘಟನೆಯ ನಂತರ ಕುಟುಂಬಸ್ಥರು, ನಿಮ್ಮ ಅಣ್ಣನಗೆ ವಧು ಸಿಗುವುದು ತಡವಾದರೂ ಪರವಾಗಿಲ್ಲ. ಮೊದಲು ನಿನಗೆ ಮದುವೆ ಮಾಡುತ್ತೇವೆ ಎಂದು ಹೇಳಿದ್ದಾರೆ.

error: Content is protected !!