Home Blog Page 3009

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕಾದಾಟಕ್ಕೆ ಒಂದೇ ದಿನ ಬಾಕಿ!

ವಿಜಯಸಾಕ್ಷಿ ಸುದ್ದಿ, ಸೌಥಾಂಪ್ಟನ್

ಐತಿಹಾಸಿಕ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಾರಂಭವಾಗಲು ಇನ್ನೂ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಹೀಗಾಗಿ ಎಲ್ಲರ ಚಿತ್ತ ನಾಳೆಯ ಪಂದ್ಯದತ್ತ ಎನ್ನುವಂತಾಗಿದೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡ ಎಂದೇ ಬಹುತೇಕರು ಭವಿಷ್ಯ ನುಡಿಯುತ್ತಿದ್ದಾರೆ.

ಸುಮಾರು ದಶಕಗಳ ನಂತರ ಟೆಸ್ಟ್ ಪಂದ್ಯವೊಂದು ತಟಸ್ಥ ಮೈದಾನದಲ್ಲಿ ನಡೆಯುತ್ತಿದೆ. ಉಭಯ ತಂಡಗಳು ತಾಯ್ನೆಲ ತೊರೆದು ಬೇರೊಂದು ದೇಶದ ಮೈದಾನದಲ್ಲಿ ಕಾದಾಡುತ್ತಿವೆ. ನಾಳೆಯಿಂದ ಪಂದ್ಯ ಆರಂಭವಾಗುವ ಹಿನ್ನೆಲೆಯಲ್ಲಿ ಈಗಾಗಲೇ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳು ಕೂಡ ಜೋರಾಗುತ್ತಿವೆ.

ಇದುವರೆಗೂ ಏಳು ಬಾರಿ ತಟಸ್ಥ ಮೈದಾನದಲ್ಲಿ ತಂಡಗಳು ಸೆಣಸಾಟ ನಡೆಸಿವೆ. ಏಳು ಬಾರಿಯೂ ವಿವಿಧ ರಾಷ್ಟ್ರಗಳಲ್ಲಿ ಎರಡೂ ರಾಷ್ಟ್ರಗಳು ಕ್ರಿಕೆಟ್ ಆಡಿವೆ. ಏಳರಲ್ಲಿ ಒಂದೇ ಒಂದು ಬಾರಿ ನ್ಯೂಜಿಲ್ಯಾಂಡ್ ತಂಡ ಸೋತಿದೆ. ಅಷ್ಟರ ಮಟ್ಟಿಗೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಪ್ರಾಬಲ್ಯ ಸಾಧಿಸಿದೆ.

2003 ವಿಶ್ವ ಕಪ್ ಪಂದ್ಯವೊಂದರಲ್ಲಿ ಮಾತ್ರವೇ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಸೋಲಿಸಿದೆ. ಸದ್ಯ 8ನೇ ಬಾರಿ ಬೇರೊಂದು ದೇಶದ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು ಎದುರಿಸುತ್ತಿದೆ. ಅದೂ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಕಾದಾಡುತ್ತಿವೆ.

ನ್ಯೂಜಿಲ್ಯಾಂಡ್ ತಂಡ ಹೀಗೆ ಭಾರತ ತಂಡದ ವಿರುದ್ಧ ಪ್ರಾಬಲ್ಯ ತೋರಿಸಿರುವುದು ಟೆಸ್ಟ್ ನಲ್ಲಿ ಅಲ್ಲ. ಆ ಏಳೂ ಅಂತಾರಾಷ್ಟ್ರೀಯ ಪಂದ್ಯಗಳು ಬೇರೆ ಬೇರೆ ಮಾದರಿಯ ಕ್ರಿಕೆಟ್ ಆಟದ್ದಾಗಿವೆ. ಈ ಬಾರಿಯ ತಟಸ್ಥ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಕುತೂಹಲಕ್ಕೆ ಕಾರಣವಾಗಿದೆ. ಭಾರತ ತಂಡದ ಈಗಿನ ಫಾರಂ ಮತ್ತು ಆಟಗಾರರಲ್ಲಿರುವ ಆತ್ಮವಿಶ್ವಾಸ ನೋಡಿದರೆ ನಮ್ಮ ತಂಡವೇ ಫೇವರೀಟ್ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಏನೇ ಆಗಲಿ ಭಾರತ ಗೆದ್ದು ಬರಲಿ. ಆಲ್ ದಿ ಬೆಸ್ಟ್ ಇಂಡಿಯಾ…

ಕೊರೊನಾ ಸೋಂಕಿಗೆ ಒಳಗಾದರೂ ಜನರ ಈ ಹರಿಕಾರ ಬಿಡುತ್ತಿಲ್ಲ ಮಾನವೀಯ ಸೇವೆ!

ರಾಜು ದಖನಿ, ಹುಬ್ಬಳ್ಳಿ

ಜನಾಶೀರ್ವಾದ ನನ್ನ ಮೇಲಿರುವಾಗ ಯಾವ ಮಹಾಮಾರಿಗೂ ಅಂಜದೆ ಜನ ಸೇವೆಗೆ ಮುಂದಾಗುತ್ತೇನೆ ಎಂದು ಪಾಲಿಕೆಯ ಮಾಜಿ ಮಹಾಪೌರ ಹಾಗೂ ಧಾರವಾಡ ಜಿಲ್ಲಾ ಗ್ರಾಮಿಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಹೇಳಿದ್ದಾರೆ. ಅವರು, ಕೊವೀಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಅವರ ಆರೋಗ್ಯವನ್ನು ಸ್ವಲ್ಪ ಏರು ಪೇರು ಮಾಡಿತ್ತು. ಆದರೆ, ಕಳೆದ ಎರಡು ದಿನಗಳಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಹೊಂ ಐಸೋಲೆಷನ್ ಗೆ ಒಳಗಾಗಿದ್ದಾರೆ.

ವೈದ್ಯರ ಸೂಕ್ತ ಚಿಕಿತ್ಸೆ ಹಾಗೂ ಜನರ ಪ್ರೀತಿ ವಿಶ್ವಾಸವೇ ನನ್ನನ್ನು ಗುಣಮುಖವಾಗುವಂತೆ ಮಾಡಿದೆ. ಜನರ ಆ ಪ್ರೀತಿ ನನ್ನನ್ನು ಬೇಗ ಗುಣಮುಖನಾಗುವಂತೆ ಮಾಡಿದೆ ಎಂದು ಅನಿಲ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವಳಿ ನಗರದ ಸಿಕ್ಸ್ ಪ್ಯಾಕ್ ರಾಜಕಾರಣಿ ಹಾಗೂ ಖ್ಯಾತ ಸಂಗೀತಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಅವರು ಕೆಲ ನಾಯಕರಂತೆ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬದಲಾಗಿ ಜನ ಸೇವೆ ಮಾಡಲು ಪ್ರಾರಂಭಿಸಿದ್ದರು.

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು, ಹಗಲಿರುಳು ಜನ ಸೇವೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಮೆರೆದು ಉಚಿತ ಆಂಬುಲೆನ್ಸ್, ಊಟದ ವ್ಯವಸ್ಥೆ ಹಾಗೂ ಆಹಾರ ಕಿಟ್ ಗಳನ್ನು ಬಡವರಿಗೆ ಹಂಚಿದ್ದಾರೆ. ಕೈಲಾದವರ ಬೆನ್ನಿಗೆ ನಿಂತು ಲಾಕ್ ಡೌನ್ ನಲ್ಲಿ ನಗುಮುಖದ ಬದುಕು ಸಾಗಿಸುವಂತೆ ಮಾಡಿದ್ದಾರೆ.

ಒಬ್ಬ ರಾಜಕಾರಣಿ ಮಾಡಬೇಕಾಗಿದ್ದ ಕಾರ್ಯಕ್ಕಿಂತಲೂ ಹೆಚ್ಚನದನ್ನು ಅವರು ಮಾಡಿದ್ದಾರೆ. ಒಬ್ಬ ನಿಜವಾದ ರಾಜಕಾರಣಿಯಂತೆ ಜನರ ನೋವಿಗೆ ಸ್ಪಂದಿಸಿದ್ದಾರೆ. ನಾನಿದ್ದೇನೆ ನೀವು ಭಯಪಡಬೇಡಿ ಎಂಬ ಅವರ ಮಾತುಗಳು ಹಲವಾರು ಬಡ ಕುಟುಂಬಗಳ ಆತ್ಮವಿಶ್ವಾಸ ಹೆಚ್ಚಿಸಿದೆ.

ಜನರ ಸೇವೆಗೆಗಾಗಿ ಅನಿಲ್ ಕುಮಾರ್, ಆಂಬುಲೆನ್ಸ್ ವಾಹನ ಇಟ್ಟಿದ್ದಾರೆ. ಯಾರೇ ಕರೆ ಮಾಡಲಿ ತತ್ ಕ್ಷಣವೇ ಅಲ್ಲಿಗೆ ಹೋಗಿ ನಿಲ್ಲುತ್ತಾರೆ. ಎಷ್ಟೇ ದೂರವಿರಲಿ, ಯಾವುದೇ ಆಸ್ಪತ್ರೆಯಿರಲಿ ಹಿಂದೆ ನಿಂತು ಅಗತ್ಯ ಸೇವೆ ಒದಿಗಿಸಿದ್ದಾರೆ. ಹೀಗೆ ನೂರಾರು ಜೀವಗಳನ್ನು ಅನಿಲ್ ಕುಮಾರ್ ಅವರ ಮಾನವೀಯ ಕಾರ್ಯ ಉಳಿಸಿದೆ ಎಂದರೆ ತಪ್ಪಾಗಲಾರದು ಎಂದು ಜನರು ಮೆಚ್ಚುಗೆ ಮಾತುಗಳನ್ನು ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಇನ್ನೂ ಎರಡ್ಮೂರು ದಿನ ಅಬ್ಬರಿಸಲಿದ್ದಾನೆ ಮಳೆರಾಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಇನ್ನೂ ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮಲೆನಾಡಿನಲ್ಲಂತೂ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಇದೇ ರೀತಿ ಇನ್ನೂ ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದ್ದು ಜೂ. 17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂ. 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಸಮಯದಲ್ಲಿ ಶಿವಮೊಗ್ಗ , ಕೊಡಗು, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕರ್ನಾಟಕ ಪ್ರದೇಶದಲ್ಲಿ ಕೂಡ ಇಂದು ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನೆರಡು ದಿನ ಮಳೆಯ ಆರ್ಭಟ ಮುಂದುವರೆಯಲಿದೆ. ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

ಕರಾವಳಿ ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇನ್ನೆರಡು ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಯತ್ನ – ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವು!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೊರೊನಾ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಇಲ್ಲಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದ ಘಟನೆ ನಡೆದಿತ್ತು. ಆದರೆ, ಆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿಯ ಜಿಮ್ಸ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಖಾಸಗಿ ಆಂಬುಲೆನ್ಸ್‌ ಚಾಲಕನೊಬ್ಬ ಯುವತಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದನು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ನಗರದ ಫಿಲ್ಟರ್ ಬೆಡ್ ನಿವಾಸಿ ಪ್ರೇಮಕುಮಾರ ಅಲಿಯಾಸ್ ಪಿಂಟು (25) ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ.

ಯುವತಿ ಮಲಗಿರುವ ವೇಳೆ ಪಿಂಟು, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಎಚ್ಚರಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾರೆ. ಆಗ ಸುತ್ತಮುತ್ತಲಿನ ಬೆಡ್‌ ಗಳಲ್ಲಿದ್ದ ರೋಗಿಗಳು ಹಾಗೂ ಸಿಬ್ಬಂದಿ ಆತನನ್ನು ಹಿಡಿಯಲು ಯತ್ನಿಸಿದ್ದರು. ಆದರೆ ಪ್ರೇಮಕುಮಾರ ಪರಾರಾಯಾಗಿದ್ದ. ಬ್ರಹ್ಮಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದಲ್ಲೇ ಮೊದಲ ಪ್ರಯೋಗ; ವ್ಯಾಕ್ಸಿನೇಷನ್ ಬಸ್ ಗೆ ಚಾಲನೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ವ್ಯಾಕ್ಸಿನೇಷನ್‌ ಗೆ ಜಿಲ್ಲಾಡಳಿತ ಮುಂದಾಗಿದೆ.

ಮೊಬೈಲ್ ವ್ಯಾಕ್ಸಿನೇಷನ್‌ ಗಾಗಿಯೇ ಎರಡು ಸಾರಿಗೆ ಬಸ್ ಗಳನ್ನು ಸಿದ್ದಪಡಿಸಿದ್ದು, ವ್ಯಾಕ್ಸಿನ್ ಬಸ್ ಗೆ ಚಾಲನೆ ಸಿಕ್ಕಿದೆ. ಎನ್ ಇಕೆಎಸ್ ಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಈ ವಿಶೇಷ ಮೊವೈಲ್ ವ್ಯಾಕ್ಸಿನ್ ಬಸ್ ಗೆ ಚಾಲನೆ ನೀಡಿದ್ದಾರೆ.

ಬಸ್ ನಲ್ಲಿ ನೋಂದಣಿ, ಲಸಿಕೆ ಹಾಕುವ ಹಾಗೂ ನಿಗಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ವ್ಯಾಕ್ಸಿನ್ ಬಸ್ ನಲ್ಲಿ ಆರು ಜನ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನೇಷನ್‌ ಕರ್ತವ್ಯ ನಿರ್ವಹಿಸಲಿದ್ದಾರೆ.

ಈ ಬಸ್ ಇಂದಿನಿಂದ ಅಫಜಲಪುರ, ಆಳಂದ ತಾಲೂಕಿನ ಹಳ್ಳಿಗಳಲ್ಲಿ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚರಿಸಲಿದೆ. ಈ ವ್ಯಾಕ್ಸಿನ್ ಬಸ್ ಮೂಲಕ ಗ್ರಾಮೀಣ ಭಾಗದಲ್ಲಿ ಲಸಿಕೆ ಆರಂಭವಾಗಲಿದೆ. ಆ ನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚಾರ ಮಾಡಿ ಜನರಿಕೆ ಲಸಿಕೆ ವಿತರಣೆ ಮಾಡಲಿದೆ.

ಈ ಬಸ್ ಮೂಲಕ ಶೇ. 100ರಷ್ಟು ವ್ಯಾಕ್ಸಿನೇಷನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಇದ್ದು ರಾಜ್ಯದಲ್ಲಿಯೇ ಕಲಬುರಗಿಯಲ್ಲಿ ಹೊಸ ಪ್ರಯತ್ನ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋರಿಕೆ ಮೇರೆಗೆ ಆಸ್ಪತ್ರೆ ಮಾದರಿಯಲ್ಲಿಯೇ ವಿಶೇಷ ವಿನ್ಯಾಸದ ಎರಡು ಬಸ್ ಸಿದ್ದಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗ.

ರಾಜ್ಯದಲ್ಲಿ ಬುಧವಾರ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ನಿನ್ನೆಗಿಂತಲೂ ಇಂದು ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ರಾಜ್ಯದಲ್ಲಿ 7,345 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 148 ಜನ ಸಾವನ್ನಪ್ಪಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 1,611 ಪ್ರಕರಣಗಳು ದಾಖಲಾಗಿದ್ದು, 19 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಇಲ್ಲಿಯವರೆಗೂ 27,84,355 ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ 1,611 ಜನಕ್ಕೆ ಸೋಂಕು ತಗುಲಿದ್ದು, 19 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇದುರವರೆಗೂ 15,354 ಜನ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಬೆಂಗಳೂರು ನಗರದಲ್ಲಿ 79,261 ಸಕ್ರಿಯ ಪ್ರಕರಣಗಳಿವೆ.

ಬಾಗಲಕೋಟೆ, ಬೀದರ್, ಚಿತ್ರದುರ್ಗ, ಹಾವೇರಿ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿ ಕೊರೊನಾದಿಂದ ಯಾವೊಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ. ಇಂದು ಬಾಗಲಕೋಟೆ 47, ಬಳ್ಳಾರಿ 183, ಬೆಳಗಾವಿ 254, ಬೆಂಗಳೂರು ಗ್ರಾಮಾಂತರ 275, ಬೆಂಗಳೂರು ನಗರ 1,611, ಬೀದರ್ 14, ಚಾಮರಾಜನಗರ 97, ಚಿಕ್ಕಬಳ್ಳಾಪುರ 145, ಚಿಕ್ಕಮಗಳೂರು 254, ಚಿತ್ರದುರ್ಗ 95, ದಕ್ಷಿಣ ಕನ್ನಡ 790, ದಾವಣಗೆರೆ 207, ಧಾರವಾಡ 112,

ಗದಗ 52, ಹಾಸನ 531, ಹಾವೇರಿ 27, ಕಲಬುರಗಿ 26, ಕೊಡಗು 116, ಕೋಲಾರ 102, ಕೊಪ್ಪಳ 77, ಮಂಡ್ಯ 317, ಮೈಸೂರು 841, ರಾಯಚೂರು 22, ರಾಮನಗರ 58, ಶಿವಮೊಗ್ಗ 262, ತುಮಕೂರು 347, ಉಡುಪಿ 159, ಉತ್ತರ ಕನ್ನಡ 239, ವಿಜಯಪುರ 73 ಮತ್ತು ಯಾದಗಿರಿಯಲ್ಲಿ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕನಸು ಕಟ್ಟಿಕೊಂಡ ಮದುವೆಗೆ 5 ದಿನ ಬಾಕಿ ಇತ್ತು; ಮುಂದೆ ಆಗಿದ್ದೇನು?

ವಿಜಯಸಾಕ್ಷಿ ಸುದ್ದಿ, ಲಕ್ನೋ

ವ್ಯಕ್ತಿಯೊಬ್ಬ ತನ್ನ ಮದುವೆಗೆ ಕೇವಲ 5 ದಿನ ಬಾಕಿ ಇದ್ದಾಗಲೇ ಭಾವಿ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ನಲ್ಲಿ ನಡೆದಿದೆ. ಜಿತಿನ್ ಎಂಬ ವ್ಯಕ್ತಿಯೇ ಕೊಲೆ ಮಾಡಿದಾತ ಎಂದು ತಿಳಿದು ಬಂದಿದೆ.

ಆರೋಪಿತ ಭಾವಿ ಪತ್ನಿ ಟೀನಾ ಎಂಬುವವರನ್ನು ಕೊಲೆ ಮಾಡಿದ್ದಾನೆ. ಸೋಮವಾರ ಟೀನಾಳಿಗೆ ಕರೆ ಮಾಡಿದ ಜಿತಿನ್, ಮದುವೆಗೆ ಕೆಲವೊಂದಿಷ್ಟು ಸೀರೆಗಳನ್ನು ಖರೀದಿಸಲು ಬರುವಂತೆ ಹೇಳಿದ್ದಾನೆ.

ಈ ಮಾತು ನಂಬಿ ಟೀನಾ ಬಂದಿದ್ದಾಳೆ. ಟೀನಾಳ ತಾಯಿ ಬೆಳಿಗ್ಗೆ ಬಸ್ ನಿಲ್ದಾಣದ ಬಳಿ ಬಿಟ್ಟು ಬಂದಿದ್ದಾರೆ ಎಂದು ಸಂಬಂಧಿ ವಿಪಿನ್ ಹೇಳಿದ್ದಾರೆ. ಆದರೆ, ಅಂದೆ ಮಧ್ಯಾಹ್ನ 2.30ರ ಸುಮಾರಿಗೆ ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿದ ಪೊಲೀಸರು ಆಕೆಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ.
ಆಗ ಟೀನಾ ಕುಟುಂಬಸ್ಥರು, ಕೆಲವು ಗಂಟೆಗಳ ಹಿಂದೆಯಷ್ಟೇ ಭಾವಿ ಪತಿಯನ್ನು ಭೇಟಿಯಾಗಲು ತೆರಳಿದ್ದಾಳೆ ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಟೀನಾ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಜಿತಿನ್ ಹಾಗೂ ಟೀನಾ ಲವ್ ಕಂ ಆರೆಂಜ್ ಮದುವೆಯಾಗುವುದರಲ್ಲಿದ್ದರು. ಜಿತಿನ್ ಮಾತ್ರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ. ಈ ಮದುವೆ ನಿಲ್ಲಿಸುವಂತೆ ಟೀನಾಳನ್ನು ಒತ್ತಾಯಿಸುತ್ತಿದ್ದ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗದಗ ಜಿಲ್ಲೆಯ ಗಾಳಿ ಗುಣಮಟ್ಟದಲ್ಲಿ ನಂ. 1; ಕಪ್ಪತಗುಡ್ಡದ ಹಸಿರು ಹೊದ್ದ ನಾಡಿಗೆ ಮತ್ತೊಂದು ಗರಿ

ವಿಜಯಸಾಕ್ಷಿ ಸುದ್ದಿ, ಗದಗ

ಕಪ್ಪತ್ತಗುಡ್ಡದ ಹಸಿರು ಛಾಯೆಯಲ್ಲಿ ಮೈದಳೆದು ನಿಂತ ಗದಗ ನಾಡಿಗೆ ಈಗ ಮತ್ತೊಂದು ಗರಿ ಬಂದಿದೆ.
ಕಪ್ಪತ್ತಗುಡ್ಡ ಸೇರಿದಂತೆ ಹೆಚ್ಚಿನ ಹಸಿರು ಹೊಂದಿರುವ ಜಿಲ್ಲೆಯಲ್ಲಿ ಈಗ ದೇಶದಲ್ಲಿಯೇ ಗುಣಮುಟ್ಟದ ಗಾಳಿ ಇದೆ ಎಂದು ತಿಳಿದು ಬಂದಿದೆ. ಈ ಕೀರ್ತಿಗೆ ಸದ್ಯ ಈ ಜಿಲ್ಲೆ ಪಾತ್ರವಾಗಿದೆ. ಜೂ. 15ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದ ಉತ್ತಮ ಗುಣಮಟ್ಟದ ಗಾಳಿ ಹೊಂದಿರುವ ಜಿಲ್ಲೆಗಳಲ್ಲಿ ಗದಗ ಜಿಲ್ಲೆ ಮೊದಲನೇ ಸ್ಥಾನ ಪಡೆದುಕೊಂಡಿದೆ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಂತೆ ದೇಶದ ಒಟ್ಟು 45 ನಗರಗಳು ಉತ್ತಮ ಗುಣಮಟ್ಟದ ಗಾಳಿ ಹೊಂದಿವೆ. 65 ನಗರಗಳ ಗಾಳಿಯ ಗುಣಮುಟ್ಟ ಸಮಾಧಾನಕರ ಮತ್ತು 21 ನಗರಗಳ ಗಾಳಿಯ ಸ್ಥಿತಿ ಉತ್ತಮವಾಗಿದೆ ಎಂದು ಅಧಿಕೃತವಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಈ ಮಂಡಳಿ ಕಳೆದ 24 ಗಂಟೆಗಳಲ್ಲಿ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಗದಗ ಜಿಲ್ಲೆಗೆ ಮೊದಲನೇ ಸ್ಥಾನ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಳಿತವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜನರು ಮೈಮರೆತು ಪರಿಸರ ವಿರೋಧಿ ಕಾರ್ಯಕ್ಕೆ ಕೈ ಹಾಕಿದರೆ ಗಾಳಿಯನ್ನು ನಾವೇ ಹಾಳು ಮಾಡಿದಂತಾಗುತ್ತದೆ.

ಈಗಾಗಲೇ ಕಪ್ಪತ್ತಗುಡ್ಡ ಹಸಿರು ಉಸಿರಿಗಾಗಿ ಸಾಕಷ್ಟು ಹೆಸರು ಮಾಡಿದೆ. ಏಷ್ಯಾದಲ್ಲಿಯೇ ಈ ಕಪ್ಪತ್ತುಗುಡ್ಡ ಅತೀ ಹೆಚ್ಚು ಗಾಳಿ ಬೀಸುವ ಪ್ರದೇಶವಾಗಿ ಏಷ್ಯಾದಲ್ಲಿಯೇ ಹೆಸರು ಪಡೆದಿದೆ. ಹೀಗಾಗಿಯೇ ನೂರಾರು ಪವನ ವಿದ್ಯುತ್ ಯಂತ್ರಗಳನ್ನು ಗುಡ್ಡದಲ್ಲಿ ಅಳವಡಿಸಲಾಗಿದೆ. ಇಲ್ಲಿನ ಹಸಿರಿನಿಂದಾಗಿ ನಗರ ಮತ್ತಿತರ ಪ್ರದೇಶಗಳಲ್ಲಿ ಉತ್ತಮ ಪ್ರಾಣವಾಯು ಬೀಸುತ್ತಿದೆ. ಈ ನಿಟ್ಟಿನಲ್ಲಿ ಗದಗ ಸ್ವಚ್ಛ ಹಾಗೂ ಉತ್ತಮ ಗಾಳಿ ಹೊಂದಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿರಂತರ ವಾಯುಗುಣಮಟ್ಟದ ಮಾಪನ ಕೇಂದ್ರ ಅಳವಡಿಸಲಾಗಿದೆ. ಇದು ಪ್ರತಿದಿನ ವಾಯು ಗುಣಮಟ್ಟ ತಿಳಿಸುತ್ತದೆ. ಜೂ. 15ರಂದು ಶೇ. 10ರಷ್ಟು ಸೂಚ್ಯಂಕ ಪ್ರದರ್ಶಿಸಿದೆ. ಇದೇ ಡಾಟಾವನ್ನ ಸ್ಥಳೀಯ ಪರಿಸರ ಇಲಾಖೆಯು ಕೇಂದ್ರ ಇಲಾಖೆಗೆ ಕಳುಹಿಸಿತ್ತು. ಇದು ಕೇಂದ್ರ ವಾಯು ನಿಯಂತ್ರಣ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದೆ. ಈ‌ ಭಾಗದಲ್ಲಿ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಅಂತ ಕೀರ್ತಿಗೆ ಪಾತ್ರವಾಗಿದೆ. ಜೊತೆಗೆ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಜಾರಿಗೊಳಿಸಿದಾಗ ನಗರದ ವಾಯು ಗುಣಮಟ್ಟದಲ್ಲಿ ಮಹತ್ತರ ಸುಧಾರಣೆಗಳು ಕಂಡು ಬಂದಿವೆ. ಜಿಲ್ಲೆಯಲ್ಲಿ ವಾರದಿಂದ ನಿರಂತರ ಮಳೆ, ಮೋಡ ಕವಿದ ವಾತಾವರಣದಿಂದಾಗಿ ವಾಯು ಮಾಲಿನ್ಯ ಕಡಿಮೆಯಾಗಿದೆ.

ಶೋಭಾ, ಪರಿಸರ ಇಲಾಖೆ ಅಧಿಕಾರಿ

ಲಾಕ ಡೌನ್ ಕಾರಣವೋ ಅಥವಾ ಹಸಿರು ಸಹ್ಯಾದ್ರಿಯ ಕಪ್ಪತ್ತಗುಡ್ಡದ ಕಾರಣವೋ ಗೊತ್ತಿಲ್ಲ. ಗದಗ ನಗರವು ದೇಶದಲ್ಲಿಯೇ ಉತ್ತಮ‌ ಗಾಳಿ ನೀಡುವದರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದೆ. ಆದರೆ, ಈ‌ ಶುದ್ಧ ಗಾಳಿಯ‌ನ್ನು ನಗರದ ಜ‌ನತೆ ಅಶುದ್ಧ ಮಾಡದ‌ತೆ ಹೀಗೆಯೇ ಕಾಪಾಡಿಕೊಂಡು ಹೋಗಬೇಕು. ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಜಿಲ್ಲೆಗೆ ಉಸಿರಾಗಿರುವ ಹಸಿರನ್ನು ಉಳಿಸಿಕೊಂಡು ಕಾಪಾಡಿಕೊಂಡು ಹೋಗಬೇಕು.

ಸೂರ್ಯಸೇನ್, ಅರಣ್ಯ ಇಲಾಖೆಯ ಅಧಿಕಾರಿ

ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಸರಕಾರ, ಇದು ಮನುಷ್ಯತ್ವದ ಲಕ್ಷಣವಲ್ಲ; ಎಚ್ ಕೆ ಪಾಟೀಲ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸಮಯದಲ್ಲಿ ಜನರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವಾಗಲಿ ಹಾಗೂ ಕೇಂದ್ರ ಸರ್ಕಾರವಾಗಲಿ ಅವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿಲ್ಲ. ಜವಾಬ್ದಾರಿ ಇಲ್ಲದಂತೆ ನಡೆದುಕೊಳ್ಳುತ್ತಿವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಜನರು ಕಣ್ಣೀರಿನೊಳಗೆ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅಂತಹ ಕುಟುಂಬಗಳಿಗೆ ನೆರವು ಕಲ್ಪಿಸುವುದನ್ನು ಬಿಟ್ಟು ಸರ್ಕಾರ ಅಮಾನವೀಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿಯೇ ರಾಷ್ಟ್ರೀಯ ವಿಪತ್ತು ಎಂದು ಈ ಕಾಲವನ್ನು ಘೋಷಿಸಿ ಎಂದು ನಾವು ಮನವಿ ಮಾಡಿದ್ದೆವು. ಆದರೆ, ಜನಪರ ಕಾಳಜಿ ಇಲ್ಲದ ಬಿಜೆಪಿ ಆ ಕಾರ್ಯ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನು ಜಾರಿಗೊಳಿಸಿದ್ದರು. ಅದು ಜನಪರವಾದ ಕಾನೂನಾಗಿತ್ತು. ಈ ಕಾನೂನಿನಲ್ಲಿ ಸಾಕಷ್ಟು ನಿದರ್ಶನವನ್ನು ನೀಡಿದ್ದರು. ಈ ಕಾನೂನಿನ ಅಡಿ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳಿಗೆ 4 ಲಕ್ಷ ರೂ. ಪರಿಹಾರ ನೀಡುವ ಕಾನೂನು ಜಾರಿಗೊಳಿಸಿದ್ದರು.

ಮೊದಲನೆ ಅಲೆಯ ಸಂದರ್ಭದಲ್ಲಿಯೇ ವಿರೋಧ ಪಕ್ಷಗಳು ವಿಪತ್ತು ನಿರ್ವಹಣೆ ಎಂದು ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಆ ಮಹಾನ್ ಕಾರ್ಯ ಮಾಡುವ ಮನಸ್ಸು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು. ಆದರೆ, ಏಪ್ರೀಲ್ ತಿಂಗಳಿನಲ್ಲಿ ಕೊರೊನಾ ಅಲೆಯನ್ನು ವಿಪತ್ತು ಎಂದು ಘೋಷಿಸಿದ್ದಾರೆ. ಆದರೆ, ಪರಿಹಾರ ವಿಷಯವನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಬಡವರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಎಚ್ ಕೆ ಪಾಟೀಲ ಮನವಿ ಮಾಡಿದರು.

ಪರಿಹಾರ ಕೊಡಿ

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಕೊಡಲಾಗುವುದಿಲ್ಲ. ಎಸ್‌ಡಿಆರ್‌ಎಫ್‌ನಿಂದ ಹಣ ಕೊಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಎತ್ತಿ ಹಾಕಿದ್ದಾರೆ. ನೀವು ಎಲ್ಲಿಂದಾದರೂ ಕೊಡಿ, ಕೋವಿಡ್‌ನಿಂದ ಮರಣ ಹೊಂದಿದವರಿಗೆ ರೂ. 5 ಲಕ್ಷ ಹಣವನ್ನು ತಕ್ಷಣವೇ ಪರಿಹಾರವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ 35ರಿಂದ 50 ವರ್ಷದೊಳಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದರೆ, ಅಂತಹ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದರೆ, ಆ ಕುಟುಂಬಕ್ಕೆ ರೂ. 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದಾರೆ. ಆದರೆ, ಇವರು ಪರಿಹಾರ ಮೊತ್ತವನ್ನು ಏಕೆ ಕಡಿಮೆ ಮಾಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ.

3.28 ಲಕ್ಷ ಸಾವು

ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂಕಿ-ಸಂಖ್ಯೆಗಳನ್ನು ಮರೆ ಮಾಚುವ ಕೆಲಸ ಮಾಡುತ್ತಿದೆ. ಎರಡನೇ ಅಲೆಯಲ್ಲಿ ಜೂ. 14ರೊಳಗಾಗಿ ರಾಜ್ಯದಲ್ಲಿ 33,033 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮೊದಲನೇ ಅಲೆಯಲ್ಲಿ 23 ಸಾವಿರದಷ್ಟು ಜನ ಸಾವನ್ನಪ್ಪಿದ್ದರು. ಆದರೆ, ಈ ಅಂಕಿ-ಸಂಖ್ಯೆ ಸುಳ್ಳು. ರಾಜ್ಯದಲ್ಲಿ ಜೂ. 14ರೊಳಗೆ 3,27,988 ಸಾವುಗಳು ಕೊರೊನಾದಿಂದ ಸಂಭವಿಸಿವೆ.

ಕೊರೊನಾದಿಂದ ಸತ್ತವರ ಅಂಕಿ-ಸಂಖ್ಯೆ ಮರೆಮಾಚುವುದು ಮಾನವೀಯತೆ, ಮನುಷ್ಯತ್ವದ ಲಕ್ಷಣವಲ್ಲ. ಯಾವ ಕಾರಣಕ್ಕಾಗಿ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ? ಮರಣದ ಮಾಸಿಕ ವರದಿಗಳನ್ನು ಹಾಗೂ ಮೆಡಿಕಲ್ ಕಾಲ್ ಆಫ್ ಡೆತ್ ಸುದ್ದಿಗಳನ್ನು ಪ್ರಕಟಿಸುವುದನ್ನೇ ಸರ್ಕಾರ ನಿಲ್ಲಿಸಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ ಬುಧವಾರ 52 ಜನರಿಗೆ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಬುಧವಾರ 52 ಜನರಿಗೆ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದಾಗಿ ಇಬ್ಬರು ಮೃತಪಟ್ಟಿದ್ದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ. ಇದರಿಂದಾಗಿ ಮೃತರ ಸಂಖ್ಯೆ 290 ಕ್ಕೇರಿದೆ.

ಗದಗ ತಾಲೂಕಿನ ಕಳಸಾಪೂರ ನಿವಾಸಿ 60 ವರ್ಷದ ವ್ಯಕ್ತಿ ಜೂನ್ 02 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 15 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿ ನಿವಾಸಿ 70 ವರ್ಷದ ಮಹಿಳೆ ಮೇ-30 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಿಮೋನಿಯಾ ಹಾಗೂ ಬಹು ಅಂಗಾಂಗ ವೈಫಲ್ಯ ಕಾಯಿಲೆಯಿಂದ ಜೂನ್ 10 ರಂದು ಮೃತಪಟ್ಟಿದ್ದಾರೆ.

ಇವರಿಬ್ಬರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು 52 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25498 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -20, ಮುಂಡರಗಿ-12, ನರಗುಂದ-04, ರೋಣ-06, ಶಿರಹಟ್ಟಿ-08, ಹೊರಜಿಲ್ಲೆಯ-02 ಸೇರಿದಂತೆ 52 ಪ್ರಕರಣಗಳು ದೃಢಪಟ್ಟಿವೆ.

ಇಂದು 67 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24649 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 559 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 85 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!