Home Blog Page 3008

ಕೊರೊನಾ ಇಳಿಮುಖ – ಕೋವಿಡ್ ಕೇಂದ್ರಗಳು ಬಂದ್!

ವಿಜಯಸಾಕ್ಷಿ ಸುದ್ದಿ, ಧಾರವಾಡ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್ ಗಳ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆತಂಕ ಮೂಡಿಸಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೂ ಸೋಂಕು ಪಸರಿಸಿತ್ತು. ಹೀಗಾಗಿ ಎಲ್ಲೆಡೆ ಭಯ ವ್ಯಕ್ತವಾಗಿತ್ತು.

ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಹತೋಟಿಗೆ ಬಂದಿತ್ತು. ಲಾಕ್ ಡೌನ್ ನಿಂದಾಗಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಲು ಪ್ರಾರಂಭಿಸಿತು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿಗೆ ಬಂದು ನಿಂತಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲಾಗಿತ್ತು. ಸದ್ಯ ಸೋಂಕು ಹತೋಟಿಗೆ ಬಂದ ಕಾರಣಕ್ಕೆ ಕೋವಿಡ್ ಕೇರ್ ಸೆಂಟರ್ ಗಳ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 10, ಹುಬ್ಬಳ್ಳಿ ಗ್ರಾಮೀಣ 14, ಕಲಘಟಗಿ 12, ಅಣ್ಣಿಗೇರಿ 8, ಕುಂದಗೋಳ 16, ನವಲಗುಂದ 8, ಅಳ್ನಾವರ 5 ಸೇರಿದಂತ ಜಿಲ್ಲೆಯಲ್ಲಿ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಮ್ ಐಸೋಲೇಷನ್‍ ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಕೊರೊನಾ ಸೋಂಕಿತರೊಂದಿಗೆ ಅವರ ಕುಟುಂಬಸ್ಥರಿಗೂ ಕೂಡ ಇರಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2,011 ಸೋಂಕಿತರು ಕೋವಿಡ್ ಕೇರ್ ಸೆಟಂರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಇಷ್ಟೊಂದು ಜನ ರೋಗಿಗಳ ಪೈಕಿ 1,940 ಜನರು ಗುಣಮುಖರಾಗಿ ಮನೆಗೆ ಮರಳಿದ್ದರು. ಸದ್ಯ ಕೇವಲ 71 ಜನ ಮಾತ್ರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿರುವ 20 ಕೋವಿಡ್ ಕೇರ್ ಸೆಟಂರ್ ಬಿಟ್ಟು, 64 ಕೇಂದ್ರಗಳನ್ನು ಮುಚ್ಚಲಾಗಿದೆ.

ಕೊರೊನಾ ಲಸಿಕೆ ಪಡೆದ ಅರ್ಧ ಗಂಟೆಯಲ್ಲಿಯೇ ವ್ಯಕ್ತಿ ಸಾವು!

ವಿಜಯಸಾಕ್ಷಿ ಸುದ್ದಿ, ಕಾರವಾರ

ಕೋವಿಡ್ ಲಸಿಕೆ ಪಡೆದು ಅರ್ಧ ಗಂಟೆ ವಿಶ್ರಾಂತಿ ಪಡೆದಿದ್ದ ವ್ಯಕ್ತಿಯೊಬ್ಬ ಹೃದಯಾಘಾತಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಂಕೋಲಾದಲ್ಲಿ ಲಸಿಕೆ ಪಡೆದ ಬಳಿಕ ಮಾತ್ರೆ ಪಡೆದುಕೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿದ್ದರು. ಆ ನಂತರ ವಿಶ್ರಾಂತ ಪಡೆಯುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂತ್ರಿ ಗ್ರಾಮದ ನಿವಾಸಿ ಮಾದೇವ್ ಪುಟ್ಟು ನಾಯ್ಕ್ (67) ಮೃತ ದುರ್ದೈವಿ. ನಿನ್ನೆ ಬೆಳಿಗ್ಗೆ ಈ ವ್ಯಕ್ತಿ ಪತ್ನಿಯೊಂದಿಗೆ ತೆರಳಿ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಆ ನಂತರ ವಿಶ್ರಾಂತಿ ಪಡೆದು ಮಾತ್ರೆ ತರಲು ಹೊರಟಿದ್ದರು.
ಮಾತ್ರೆ ತೆಗೆದುಕೊಳ್ಳಲು ತಾಲೂಕಾಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು.

ಹೃದಯಾಘಾತಕ್ಕೊಳಗಾಗಿದ್ದ ಮಾದೇವ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ವ್ಯಕ್ತಿ ಮಾತ್ರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಹೃದಯಾಘಾತದಿಂದ ಸಾವಿಗೀಡಾಗಿರುವ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ನಿತಿನ್ ಹೊಸ್ಮೇಳಕರ್ ಹೇಳಿದ್ದಾರೆ.

ಮಾದೇವ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ವೈದ್ಯರು, ಪೊಲೀಸ್ ನೀರಿಕ್ಷಕ ಕೃಷ್ಣಾನಂದ ನಾಯ್ಕ್, ಪಿಎಸ್ ಐ ಪ್ರೇಮನಗೌಡ ಪಾಟೀಲ್ ಮತ್ತು ಕುಟುಂಬಸ್ಥರು ಚರ್ಚಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತ್ತು.
ಸಾವನ್ನಪ್ಪಿದ್ದ ವ್ಯಕ್ತಿ ಈ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದರು. ಮೃತ ಮಾದೇವ ಅವರೊಂದಿಗೆ ಲಸಿಕೆ ಪಡೆದಿದ್ದ 9 ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಇವಳು ಪ್ರೀತಿಸಿ ಮದುವೆಯಾಗಿದ್ದು ಅವನನ್ನಲ್ಲ, ಅವಳನ್ನು!

ವಿಜಯಸಾಕ್ಷಿ ಸುದ್ದಿ, ಲಂಡನ್

ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಆದರೆ, ಪತ್ನಿಗೆ ಹನಿಮೂನ್ ಗೆ ತೆರಳಿದ್ದಾಗ ಗೊತ್ತಾಯ್ತು ಪತಿರಾಯ ಅವನಲ್ಲ! ಅವಳು! ಎನ್ನುವುದು. ಇಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ನಂತರ ಪತ್ನಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತ್ರ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.

ಬ್ರಿಟನ್ ನ ಗ್ರಾಫಿಕ್ ಡಿಸೈನರ್ ಜೆಕ್ ಮತ್ತು ಅಮೆರಿಕದ ಹಾರ್ವಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆ ನಂತರ ಇಬ್ಬರೂ ಹನಿಮೂನ್ ಗೆ ಸುಂದರ ದ್ವೀಪಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಹಾರ್ವಿಗೆ ತನ್ನ ಪತಿ ಪುರುಷನೇ ಅಲ್ಲ ಎಂಬುವುದು ತಿಳಿದಿದೆ. ಈ ಸಂದರ್ಭದಲ್ಲಿ ತನ್ನ ತಪ್ಪು ಒಪ್ಪಿಕೊಂಡ ಪತಿರಾಯ, ನಾನು ಕೂಡ ಮಹಿಳೆಯಂತೆಯೇ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ. ಆದರೆ, ಎಲ್ಲರಂತೆ ಪತಿಯನ್ನು ನಿಂದಿಸದ ಹಾರ್ವಿ, ಅವನ ಇಷ್ಟದಂತೆ ಇರಲು ಅನುಮತಿ ನೀಡಿದ್ದಾರೆ.

ಪತಿಯ ನಿಜವಾದ ಸಂಗತಿ ತಿಳಿದ ನಂತರ ಪತ್ನಿ ಹಾರ್ವಿ, ತನ್ನ ಉಳಿತಾಯದ ಹಣದಿಂದ ಅಂದರೆ ರೂ. 45 ಸಾವಿರ ಪೌಂಡ್ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಹಾರ್ವಿ ಮತ್ತು ಜೆಕ್ ಮತ್ತೊಮ್ಮೆ ಮದುವೆಯಾಗಲು ನಿರ್ಧರಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಜೆಕ್ ತನ್ನ ಹೆಸರನ್ನು ರಾಯನಾ ಎಂದು ಬದಲಿಸಿಕೊಂಡಿದ್ದಾನೆ. ಸದ್ಯ ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಪಂಚಮಸಾಲಿಗರಿಗೆ ಸಿಎಂ ಸ್ಥಾನ ನೀಡುವಂತೆ ಸ್ವಾಮೀಜಿ ಮನವಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿದ್ದು, ಸಿಎಂ ಬದಲಾವಣೆ ಮಾಡದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪರ ನೂರಾರು ಮಠಾಧೀಶರು ಒತ್ತಾಯಿಸಿದ್ದರೆ. ಇನ್ನೊಂದು ಕಡೆ ಪಂಚಮಸಾಲಿ ಶ್ರೀಗಳು ಮಾತ್ರ ಸಿಎಂ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಕ್ಕೆ ಭೇಟಿ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಳೆದ ಮೂರು ದಿನಗಳಿಂದ ಸರಣಿ ಸಭೆ ನಡೆಸಿ ಸಚಿವರು, ಶಾಸಕರು, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಗುರುವಾರ ರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆನ್ನಲಾಗಿದೆ.

ಸದ್ಯ ಆಡಳಿತದಲ್ಲಿರುವವರಿಂದ ದುರುಪಯೋಗ ಆಗುತ್ತಿದೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡಬೇಕು. ಈಗಾಗಲೇ ಯಡಿಯೂರಪ್ಪ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಈ ಸಮಾಜ ಮಾಡಿದೆ ಆದರೂ ಅವರು ಸಮಾಜದ ಋಣ ತೀರಿಸದೇ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ‌.

ಸಮಾಜದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದವರು, ಒಡಕು ಮೂಡಿಸುವ ಕೆಲಸ ಮಾಡಿದ್ದು, ಅವರನ್ನು ಬದಲಾವಣೆ ಮಾಡಬೇಕು. ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಶ್ರೀಗಳು ಅರುಣ್ ಸಿಂಗ್ ಅವರಿಗೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.

ಅರುಣ್ ಸಿಂಗ್ ಭೇಟಿ ಮಾಡಲಿರುವ ಶಾಸಕ ಪಟ್ಟಿ ಬಿಡುಗಡೆ ಮಾಡಿದ ಯತ್ನಾಳ್

ವಿಜಯಸಾಕ್ಷಿ ಸುದ್ದಿ, ವಿಜಯಪುರ

ರಾಜ್ಯ ಬಿಜೆಪಿಯಲ್ಲಿ ಸಿಎಂ ಬದಲಾವಣೆಯ ಕೂಗು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅವರು ಸಿಎಂ ಬದಲಾವಣೆಯ ಮಾತೇ ಇಲ್ಲ ಎಂದು ಹೇಳಿಕೆ ನೀಡಿದ್ದರೂ ಆ ವಿಷಯ ಇನ್ನೂ ಜೀವಂತಿಕೆ ಪಡೆದುಕೊಂಡಿದೆ. ಇಲ್ಲಿಯವರೆಗೂ ಸಿಎಂ ವಿರೋಧ ಮಾತುಗಳನ್ನು ಹೇಳುತ್ತಿದ್ದ ಯತ್ನಾಳ್ ಈಗ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ಈ ಕುರಿತು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಯತ್ನಾಳ್, ನಾನು ಅರುಣ್ ಸಿಂಗ್ ಅವರನ್ನು ಭೇಟಿ ಮಾಡುವುದಕ್ಕಾಗಿ ಸಮಯ ಕೇಳಿಲ್ಲ. ಆದರೆ, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ ಎಂದಿರುವ ಅವರು, ಅರುಣ್ ಸಿಂಗ್ ಭೇಟಿ ಮಾಡುವವರ ಲಿಸ್ಟ್ ನ್ನು ಹಂಚಿಕೊಂಡಿದ್ದಾರೆ.

ಈ ಮೂಲಕ ಯಡಿಯೂರಪ್ಪ ವಿರುದ್ಧ ತಿರುಗಿ ಬಿದ್ದಿರುವ ಶಾಸಕರು ಯಾರ ಎಂಬುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯತ್ನಾಳ್ ಹಂಚಿಕೊಂಡಿದ್ದ ಫೋಟೋದಲ್ಲಿ ಸಚಿವ ಶ್ರೀರಾಮುಲು, ಆರ್. ಅಶೋಕ್, ರಾಜಕುಮಾರ್ ಪಾಟೀಲ್ ಸೇಡಂ, ಕೆ.ಜಿ. ಬೋಪಯ್ಯ, ನೆಹರು ಓಲೇಕಾರ್, ಅಪ್ಪಚ್ಚು ರಂಜನ್, ಅಭಯ್ ಪಾಟೀಲ್, ಅರವಿಂದ್ ಬೆಲ್ಲದ್, ಪ್ರೀತಂ ಗೌಡ, ಬೆಳ್ಳಿ ಪ್ರಕಾಶ್, ಉದಯ್ ಗರುಡಾಚಾರ್, ಹರತಾಳು ಹಾಲಪ್ಪ, ಸೋಮಶೇಖರ್ ರೆಡ್ಡಿ, ಶಂಕರ್ ಗೌಡ ಪಾಟೀಲ್, ಸಿದ್ದು ಸವದಿ, ಜ್ಯೋತಿ ಗಣೇಶ್, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಪ್ರದೀಪ್ ಶೆಟ್ಟರ್, ಮಹೇಶ್ ಕುಮಟಳ್ಳಿ, ಮಸಾಲಾ ಜಯರಾಂ, ರಾಜೇಶ್ ಗೌಡ, ಬಸವರಾಜ್ ದಡೆಸಗೂರ್, ನಂದೀಶ್ ರೆಡ್ಡಿ, ರಘುಪತಿ ಭಟ್, ಅಭಯ್ ಪಾಟೀಲ್, ಎಚ್.ವಿಶ್ವನಾಥ್, ವೈ.ಎ. ನಾರಾಯಣಸ್ವಾಮಿ, ಸುನಿಲ್ ಕುಮಾರ್ ಕಾರ್ಕಳ, ರೂಪಾಲಿ ನಾಯಕ್ ಸೇರಿದಂತೆ ಅನೇಕರ ಹೆಸರಿವೆ.

ಈ ಫೋಟೋ ಬಿಡುಗಡೆ ಮಾಡಿದ ನಂತರ ಮತ್ತೆ ಡಿಲಿಟ್ ಮಾಡಿದ್ದಾರೆ.

ಅಬ್ಬರಿಸಿದ ಮಳೆರಾಯ – ಜನರಲ್ಲಿ ಮನೆ ಮಾಡಿದ ನಿರಾಳತೆ!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಸ್ವಲ್ಪ ನಿರಾಳತೆ ನೀಡಿದ್ದಾನೆ.
ಮುದ್ರಣ ಕಾಶಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಸಿಂಚನ ಆರಂಭವಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮೋಡ ಕವಿದ‌ ವಾತಾವರಣವಿತ್ತು. ನಂತರದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರಂತರ ಮಳೆ ಆರಂಭವಾಗಿದೆ. ಹೀಗಾಗಿ ಬಿಸಿಲಿನಿಂದ ತತ್ತರಿಸಿದ್ದ ಉತ್ತರ‌ ಕರ್ನಾಟಕ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

ಬೆಳ್ಳಂ ಬೆಳಿಗ್ಗೆಯೇ ಸುರಿಯುತ್ತಿರುವ ಮಳೆಗೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಲಾಕ್ ಡೌನ್ ಸಡಿಲಿಕೆ ನಿಯಮದಂತೆ ದಿನ ನಿತ್ಯದ ವಸ್ತುಗಳನ್ನು ಖರೀದಿಸಲು ಸರ್ಕಾರ ಮಧ್ಯಾಹ್ನ 2ರ ವರೆಗೆ ಅವಕಾಶ ನೀಡಿದೆ. ಹೀಗಾಗಿ ಅಷ್ಟರೊಳಗೆ ಎಲ್ಲ ಕೆಲಸ, ಕಾರ್ಯಗಳನ್ನು ಪೂರ್ಣಗೊಳಿಸಬೇಕೆನ್ನುವ ತವಕದಲ್ಲಿ ಸವಾರರು ಮಳೆಯ ನಡುವೆಯೇ ಬೈಕ್ ಸಂಚಾರ ಆರಂಭಿಸಿದ್ದ ದೃಶ್ಯ ಜಿಲ್ಲೆಯಲ್ಲಿ ಸಾಮಾನ್ಯವಾಗಿತ್ತು.

ಹೀಗಾಗಿ ರೈತರು ತುಂಬಾ ಸಂತಸದಲ್ಲಿದ್ದಾರೆ. ತಮ್ಮ ಭೂಮಿಗಳನ್ನೆಲ್ಲ ಹದ ಮಾಡಿಕೊಂಡು ಬಿತ್ತಿದ್ದ ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಹಲೆವೆಡ ರೈತರು ಬಿತ್ತನೆ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಹೆಸರು, ಶೇಂಗಾ, ಹತ್ತಿ, ಗೋವಿನಜೋಳ, ಈರುಳ್ಳಿ ಬೆಳೆಗಳ ಬಿತ್ತನೆ ಕಾರ್ಯ ಜೋರಾಗಿದೆ. ‌ಸದ್ಯ‌ ಜಿಲ್ಲೆಯಲ್ಲಿ ಈಗಾಗಲೇ ಶೇ.30 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಒಂದೆಡೆ ಜಿಟಿಜಟಿ ಮಳೆರಾಯ ನಗರದ ಜನತೆಗೆ ಕಿರಿಕಿರಿ ಉಂಟು ಮಾಡಿದೆ. ಹಲವೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಭಾರತ ತಂಡ ಪ್ರಕಟ!

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ನಾಳೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ. ಹೀಗಾಗಿ ಕಣಕ್ಕೆ ಇಳಿಯುವ 11 ಜನ ಆಟಗಾರರನ್ನು ಭಾರತ ತಂಡ ಪ್ರಕಟಿಸಿದೆ.

ಜೂ. 18ರ ಬೆಳಿಗ್ಗೆ ಸೌತಾಂಪ್ಟನ್‌ ನಲ್ಲಿ ಉಭಯ ತಂಡಗಳು ಕಾದಾಟ ಪ್ರಾರಂಭಿಸಲಿವೆ. ಭಾರತ ತಂಡವು ಮೂವರು ವೇಗದ ಬೌಲರ್ ಹಾಗೂ ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ. ಇದರೊಂದಿಗೆ 6 ಜನ ಬ್ಯಾಟ್ಸಮನ್ ಗಳು ತಂಡದಲ್ಲಿ ಇರಲಿದ್ದಾರೆ. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಇರಲಿದ್ದಾರೆ. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ಕಣಕ್ಕೆ ಇಳಿಯಲಿದ್ದಾರೆ.

ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರೊಂದಗೆ 6 ಬ್ಯಾಟ್ಸಮನ್ ಗಳು ಕಣದಲ್ಲಿ ಇರಲಿದ್ದಾರೆ. ಈ ಐದು ಬೌಲರ್ ಗಳು ಕಳೆದ ಕೆಲವು ವರ್ಷಗಳಿಂದಲೂ ಭಾರತೀಯ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ.
ಸೌತಾಂಪ್ಟನ್ ಪಿಚ್ ಸ್ಪಿನ್ ಬೌಲಿಂಗ್ ಗೆ ಸಹಾಯ ಮಾಡುವ ಸಾಧ್ಯತೆಯಿಂದಾಗಿ ಭಾರತವು ಅಶ್ವಿನ್ ಮತ್ತು ಜಡೇಜಾ ಇಬ್ಬರಿಗೂ ಅವಕಾಶ ನೀಡಿದೆ. ಭಾರತವು ಈ ಮೈದಾನದಲ್ಲಿ ಇದುವರೆಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಿ, ಎರಡು ಬಾರಿಯೂ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.

ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯಾ ರಹಾನೆ(ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ರಿಷಭ್ ಪಂತ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ನಾಳೆ ಕಣಕ್ಕೆ ಇಳಿಯಲಿದ್ದಾರೆ. ಭಾರತ ತಂಡ ಫೈನಲ್ ಪಂದ್ಯಕ್ಕಾಗಿ ಅಂತಿಮ 15 ಆಟಗಾರರನ್ನು ಘೋಷಣೆ ಮಾಡಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್ ಪಂದ್ಯವು ಜೂ. 18ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ. ಟಾಸ್ ಸಮಯದಲ್ಲಿ ಕಿವಿ ತಂಡವು ತನ್ನ ಆಡುವ ಇಲೆವೆನ್ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಪಂದ್ಯ ಗೆಲ್ಲುವ ತಂಡವು ಟೆಸ್ಟ್ ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡವಾಗಲಿದೆ. ಅಲ್ಲದೇ, ಐಸಿಸಿ ಟೆಸ್ಟ್ ಮೇಸ್ ಅನ್ನು ಟ್ರೋಫಿಯಾಗಿ ಪಡೆಯಲಿದೆ.

6 ಸಾವಿರದ ಗಡಿಗೆ ಬಂದು ನಿಂತ ಸೋಂಕು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು ರಾಜ್ಯದಲ್ಲಿ 5,983 ಜನರಿಗೆ ಸೋಂಕು ತಗುಲಿದ್ದು, 138 ಜನ ಬಲಿಯಾಗಿದ್ದಾರೆ.
ಸದ್ಯ ರಾಜ್ಯದಲ್ಲಿ 1,46,726 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ ರಾಜ್ಯದಲ್ಲಿ 33,434 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ ಕೂಡ ಇಂದು ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ನಗರದಲ್ಲಿ 1,209 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 17 ಜನ ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರ, ದಕ್ಷಿಣ ಕನ್ನಡ, ದಾವಣಗೆರೆ, ಮೈಸೂರು ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಂಕಿಯಲ್ಲಿದೆ. ಬಾಗಲಕೋಟೆ, ಬೀದರ್, ಚಿತ್ರದುರ್ಗ, ಗದಗ, ಕೊಡಗು ಮತ್ತು ಯಾದಗಿರಿಯಲ್ಲಿ ಯಾವುದೇ ಮರಣ ಸಂಭವಿಸಿಲ್ಲ.

ಇಂದು ಬಾಗಲಕೋಟೆ 22, ಬಳ್ಳಾರಿ 128, ಬೆಳಗಾವಿ 172, ಬೆಂಗಳೂರು ಗ್ರಾಮಾಂತರ 226, ಬೆಂಗಳೂರು ನಗರ 1,209, ಬೀದರ್ 8, ಚಾಮರಾಜನಗರ 98, ಚಿಕ್ಕಬಳ್ಳಾಪುರ 118, ಚಿಕ್ಕಮಗಳೂರು 198, ಚಿತ್ರದುರ್ಗ 110, ದಕ್ಷಿಣ ಕನ್ನಡ 679, ದಾವಣಗೆರೆ 153, ಧಾರವಾಡ 86, ಗದಗ 34,

ಹಾಸನ 424, ಹಾವೇರಿ 42, ಕಲಬುರಗಿ 25, ಕೊಡಗು 152, ಕೋಲಾರ 145, ಕೊಪ್ಪಳ 48, ಮಂಡ್ಯ 309, ಮೈಸೂರು 596, ರಾಯಚೂರು 16, ರಾಮನಗರ 37, ಶಿವಮೊಗ್ಗ 229, ತುಮಕೂರು 289, ಉಡುಪಿ 166, ಉತ್ತರ ಕನ್ನಡ 169, ವಿಜಯಪುರ83 ಮತ್ತು ಯಾದಗಿರಿಯಲ್ಲಿ 11 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ ಸೋಂಕು ಮುಕ್ತದತ್ತ ಗದಗ ಹೆಜ್ಜೆ!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಗುರುವಾರ 34 ಜನರಿಗೆ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದಾಗಿ ಮೃತಪಟ್ಟಿದ್ದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವರದಿ ಬಂದಿಲ್ಲ. ಇದುವರೆಗೂ ಕೋವಿಡ್ ನಿಂದಾಗಿ 290 ಜನ ಮೃತಪಟ್ಟಿದ್ದಾರೆ.

ಇಂದು 34 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25532 ಏರಿಕೆ ಕಂಡಿದೆ. ಜಿಲ್ಲೆ ಸೋಂಕು ‌ಮುಕ್ತದತ್ತ ಸಾಗುತ್ತಿದ್ದು, ಆಶಾದಾಯಕ ವಾತಾವರಣ ನಿರ್ಮಾಣವಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -12, ಮುಂಡರಗಿ-06, ನರಗುಂದ-02, ರೋಣ-04, ಶಿರಹಟ್ಟಿ-10, ಹೊರಜಿಲ್ಲೆಯ-00 ಸೇರಿದಂತೆ 34 ಪ್ರಕರಣಗಳು ದೃಢಪಟ್ಟಿವೆ.

ಇಂದು 83 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24731 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 511 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 82 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಿಎಂ ಯಡಿಯೂರಪ್ಪ ಪರ ಬ್ಯಾಟ್ ಬೀಸಿದ ರೆಡ್ಡಿ ಬ್ರದರ್ಸ್!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ಯ ಜೋರಾಗಿದೆ. ಹಲವರು ಸಿಎಂ ಪರ ಮಾತನಾಡುತ್ತಿದ್ದರೆ ಇನ್ನೂ ಹಲವರು ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ.
ಸದ್ಯ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ನಾಯಕತ್ವ ಬದಲಾವಣೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವುದು ಒಳ್ಳೆಯ ಬದಲಾವಣೆ ಅಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೇಕಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸದ್ಯ ರಾಜ್ಯದ ಜನತೆ ಕೊರೊನಾ ಕಾಲದಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ರಾಜ್ಯದ ಅಭಿವೃದ್ಧಿ ಕಡೆ ಗಮನ ನೀಡಬೇಕು. ನನಗೂ ಬಳ್ಳಾರಿಯಲ್ಲಿ ಬಹಳ ಕೆಲಸ ಇವೆ. ಹೀಗಾಗಿ ನಾನು ಅರುಣ್ ಸಿಂಗ್ ಅವರ ಸಭೆಗೆ ಹೋಗುವುದಿಲ್ಲ. ನಾನು ಮೊದಲಿನಿಂದಲೂ ಯಡಿಯೂರಪ್ಪನವರ ಬೆಂಬಲಕ್ಕೆ ಇದ್ದೇನೆ. ನಾನು ಯಾವುದೇ ಸಚಿವ ಆಕಾಂಕ್ಷಿಯಲ್ಲ. ದೇವರು ಹಣೆ ಬರಹದಲ್ಲಿ ಬರೆದಿರುವುದೇ ನಡೆಯುತ್ತದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕಿದೆ. ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಜೊತೆಗೆ ಡಿಸಿಎಂ ಮಾಡಬೇಕು. ಬಳ್ಳಾರಿ ವಿಭಜನೆಯಿಂದ ಜಿಲ್ಲೆಯ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜಿಲ್ಲಾ ವಿಭಜನೆಯೇ ಕಾರಣ ಎಂದು ಹೇಳಿದ್ದಾರೆ.

error: Content is protected !!