Home Blog Page 3014

ಸಂಪುಟ ವಿಸ್ತರಣೆ ವಿಳಂಬ: ಒಂದೇ ವಾಕ್ಯದಲ್ಲಿ ಉತ್ತರಿಸಿದ ಯಡಿಯೂರಪ್ಪ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಂಪುಟ ವಿಸ್ತರಣೆಗೆ ನಾವು ನೀವು ಇಬ್ಬರೂ ಕಾಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಿಂದ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವರು ಮಾಧ್ಯಮದವರ ಅಮಿತ್ ಶಾ ಅವರು ಭರವಸೆ ಕೊಟ್ಟ ಬಳಿಕವೂ ಸಂಪುಟ ವಿಳಂಬವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಮಾಧ್ಯಮಗಳಿಗೆ ಉತ್ತರಿಸಿ ತೆರಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ಗೊಂದಲದ ಗೂಡಾಗಿದೆ. ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಕಳುಹಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಮೊನ್ನೆಯಷ್ಟೇ ಹೇಳಿದ್ದರು.

ಅವರು ಹೇಳಿ ಮೂರು ದಿನಗಳು ಕಳೆದಿದ್ದರೂ, ಹೈಕಮಾಂಡ್ ನಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಡಿಯೂರಪ್ಪ ಅವರಿಗೆ ಇನ್ನೂವರೆಗೂ ಯಾವುದೇ ಸೂಚನೆಗಳು ಬಂದಿಲ್ಲ.

ಶಿರಾ ಮತ್ತು ರಾಜರಾಜೇಶ್ವರ ನಗರ ಉಪ ಚುನಾವಣೆಯ ಗೆಲವಿನ ನಂತರವೂ ಬಳಿಕವೂ ಬಿಎಸ್ವೈಗೆ ಪೂರಕವಾದ ವಾತಾವರಣ ಸೃಷ್ಠಿಯಾಗುತ್ತಿಲ್ಲ.

ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡದಿರುವುದು ನಿಗೂಢತೆಗೆ ಕಾರಣವಾಗಿರುವುದೆ. ರಾಜಕೀಯ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಿಸಿರುವುದು ಸಿಎಂ ನೆಮ್ಮದಿ ಕೆಡಿಸಿವೆ ಎಂದು ಹೇಳಲಾಗಿದ್ದು, ಹೈಕಮಾಂಡ್ ನ ಸಚಿವ ಸಂಪುಟದ ವಿಳಂಬ ಧೋರಣೆ ಬಿಜೆಪಿಯಲ್ಲಿ ಸಹಜವಾಗಿ ಗೊಂದಲ ಸೃಷ್ಟಿಸಿದೆ.

ಬಿಜೆಪಿಯಲ್ಲೀಗ ಮನೆಯೊಂದು ಮೂರು ಬಾಗಿಲು!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ದಿನ ಕಳೆದಂತೆ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಹುಟ್ಟಿಕೊಳ್ಳುತ್ತಿದ್ದು, ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಾಜಪದಲ್ಲೀಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಸಚಿವ ಸಂಪುಟ ಪುನಾರಚನೆ ಗೊಂದಲವುಂಟಾಗಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದರಿಂದ ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಸಂಪುಟದಿಂದ ಕೈ ಬಿಡಬೇಕು ಎಂಬುವುದು ಬಿಜೆಪಿ ಹೈಕಮಾಂಡ್ ಗೆ ತಲೆಬಿಸಿ ತಂದಿದೆ.

ಕ್ಯಾಬಿನೆಟ್ ಸಭೆಯ ನೆಪದಲ್ಲಿ ಸಚಿವಾಕಾಂಕ್ಷಿಗಳು ಸಾಲು ಸಾಲು ಸಭೆ ನಡೆಸುತ್ತಿದ್ದು, ಯಡಿಯೂರಪ್ಪ ಅವರಿಗೆ ಕಣ್ಣು ತೆರೆಯುತ್ತಿಲ್ಲ. ಬದಲಾಗಿ ಮಂತ್ರಿ ಸ್ಥಾನ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ವಲಸಿಗ ಮತ್ತು ಮೂಲ ಬಿಜೆಪಿಗರು ಎಂಬ ಚರ್ಚೆ ಶುರುವಾಗಿದೆ.

ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರಿಗೆ ಆದ್ಯತೆ ನೀಡಬೇಕು ಎಂಬ ಮಾತುಗಳು ಹರಿದಾಡುತ್ತಿವೆ. ಇತ್ತ ಸರ್ಕಾರ ರಚನೆಗೆ ಕಾರಣವಾಗಿರುವ ವಲಸಿಗ ಬಿಜೆಪಿಗರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಮಂತ್ರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಒತ್ತಡ ಹೇರುತ್ತಿದ್ದಾರೆ.

ಅಲ್ಲದೇ, ಯಡಿಯೂರಪ್ಪಗೆ ವಿಪಕ್ಷಗಳಿಗಿಂತ ಸಿಎಂ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೇ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಆಂತರಿಕ ಕಿತ್ತಾಟವೇ ಹೆಚ್ಚಾಗಿದೆ. ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಆಡಳಿತ ಪಾತಾಳಕ್ಕೆ ಕುಸಿಯುತ್ತಿದ್ದು, ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.

2008 ರಲ್ಲೂ ಆಂತರಿಕ ಕಚ್ಚಾಟದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ‌ ಸರ್ಕಾರ ಪತನಗೊಂಡಿತ್ತು. ಬಿಎಸ್ ವೈ ಸರ್ಕಾರ ಮತ್ತೆ ಅದೇ ಹಾದಿ ತುಳಿಯುತ್ತಿದೆಯಾ ಎಂಬುದೇ ಸದ್ಯದ ಕುತೂಹಲವಾಗಿದ್ದು ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕು.

ಹಣ ಕೊಡು, ಇಲ್ಲವೇ ಆಸ್ತಿ ಬಿಡು! ಚಕ್ರಬಡ್ಡಿ, ಮೀಟರ್ ಬಡ್ಡಿ ಭಾರಕ್ಕೆ ನಲುಗುತ್ತಿದೆ ಬಡವರ ಬದುಕು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

‘ಚಕ್ರ ಬಡ್ಡಿ, ಮೀಟರ್ ಬಡ್ಡಿ ಪ್ರಕರಣಗಳು ಬೆಳಕಿಗೆ ಬಂದಾಗ ಎಫ್‌ಐಆರ್ ದಾಖಲಿಸದೆ ರಾಜಿ ಸಂಧಾನ ಮಾಡಿ ಕಳುಹಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ಬೃಹತ್ ಮಟ್ಟದಲ್ಲಿ ಬೆಳೆದಿದ್ದು, ಬಡ್ಡಿ ವ್ಯವಹಾರಗಾರರೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ ಎಂಬ ಆಪಾದನೆಯನ್ನು ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಬಡ್ಡಿ ವ್ಯವಹಾರ ಭರ್ಜರಿಯಾಗಿ ನಡೆಯುತ್ತಿದೆ. ಸರ್ಕಾರದ ಪರವಾನಗಿ ಪಡೆಯದೆ ಅನಧಿಕೃತವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವವರ ಸಂಖ್ಯೆ ಇತ್ತೀಚೆಗೆ ದ್ವಿಗುಣಗೊಳ್ಳುತ್ತಿದೆ. ಕಷ್ಟ ಕಾಲದಲ್ಲಿ ಕೈಗಡ ಪಡೆದವರ ಗತಿ ಹರೋಹರ ಆಗುತ್ತಿದೆ. ಚಕ್ರ ಬಡ್ಡಿ, ಮೀಟರ್ ಬಡ್ಡಿ ದಂಧೆಕೋರರು ಹಣ ಕೊಡು, ಇಲ್ಲದಿದ್ದರೆ ಆಸ್ತಿ ಬಿಡು ಎಂದು ಪೀಡಿಸುವ ಕಾರಣಕ್ಕೆ ಮನನೊಂದು ಜನರು ಸಾವಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ.

ಗ್ರಾ.ಪಂ. ಮಾಜಿ ಅಧ್ಯಕ್ಷೆಯೇ ಬಲಿ

ಅಂತಹದ್ದೇ ಒಂದು ಘಟನೆ ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ನಡೆದಿತ್ತು. ತಾಲೂಕಿನ ಅಡವಿಸೋಮಾಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮೀಟರ್ ಬಡ್ಡಿ ವ್ಯವಹಾರದಿಂದ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಬ್ಯಾಂಕ್ ಗಳಿಂದ ಸಾಲ ದೊರೆಯದಿರುವುದರಿಂದ ಖಾಸಗಿ ವ್ಯಕ್ತಿಗಳ ಅನಧಿಕೃತ ಫೈನಾನ್ಸ್ ಗಳಲ್ಲಿ ಜಿಲ್ಲೆಯ ಬಡ ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳು, ರೈತರು ಹೆಚ್ಚಾಗಿ ಸಾಲ ಪಡೆದು ಬಡ್ಡಿ ವ್ಯವಹಾರಕ್ಕೆ ಬಲಿಯಾಗುತ್ತಿದ್ದಾರೆ. ಕಿತ್ತು ತಿನ್ನುವ ಬಡತನದಿಂದಾಗಿ ದುಬಾರಿ ದುನಿಯಾದಲ್ಲಿ ಕುಟುಂಬ ನಿರ್ವಹಣೆ ಮಾಡಲಾಗದೆ, ಖಾಸಗಿ ವ್ಯಕ್ತಿಗಳಿಂದ ಕೈಗಡ ಪಡೆದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವ ಜನರನ್ನು ಪೊಲೀಸರು  ರಕ್ಷಿಸಬೇಕಿದೆ.


ಹೊಸ ಹೊಸ ಷರತ್ತುಗಳು

ಬಡ್ಡಿ ವ್ಯವಹಾರಗಾರರು ಸಾಲ ಕೊಡುವ ಮುನ್ನ ಮನೆ, ನಿವೇಶನದಂತಹ ಆಸ್ತಿ ಪತ್ರ ನೀಡಿದರೆ ಸಾಕು, ಅರ್ಧರಾತ್ರಿಯಲ್ಲಿಯೂ ಕಂತೆ ಕಂತೆ ನೋಟು ಕೊಡುತ್ತಾರೆ. ಆದರೆ, ಸಾಲ ನೀಡುವಾಗ ಇಲ್ಲದ ಷರತ್ತುಗಳನ್ನು ಬಳಿಕ ಒಂದಾದೊಂದಾಗಿ ಸೇರಿಸಿ ,ಬಡವರ ಬದುಕನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾರೆ. ಬಡ್ಡಿ ಕಟ್ಟಲಾಗದಿದ್ದರೆ, ಮಾತಿಗೆ ಬಗ್ಗದಿದ್ದರೆ ರೌಡಿಶೀಟರ್ ಗಳಿಂದ ಬೆದರಿಕೆ ಹಾಕಿಸಿ ಸಾಲಗಾರರ ಆಸ್ತಿ ಕಬಳಿಸುತ್ತಿದ್ದು, ಮೀಟರ್ ಬಡ್ಡಿ ವ್ಯವಸ್ಥೆ ವಿರುದ್ಧ ಜಿಲ್ಲೆಯ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕುದುರೆಗಿಂತ ವೇಗವಾಗಿ ಓಡುತ್ತಿರುವ ತರಹವೇವಾರಿ ಬಡ್ಡಿ ವ್ಯವಹಾರಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂಬುವುದು ಜಿಲ್ಲೆಯ ಜನರ ಆಶಯ.

ಬಡ್ಡಿ ದಂಧೆಕೋರರು ಬಡವರಿಗೆ, ಬೀದಿ ವ್ಯಾಪಾರಿಗಳಿಗೆ, ರೈತರಿಗೆ ಕೊಟ್ಟ ಸಾಲದ ದಾಖಲೆಗಳು, ಅವರಿಂದ ಬರೆಸಿಕೊಂಡ ಪತ್ರಗಳನ್ನು ಮಾತ್ರ ಜೋಪಾನವಾಗಿ ಇರಿಸುತ್ತಾರೆ. ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸುವುದಿಲ್ಲ. ಹೀಗಾಗಿ, ಸರ್ಕಾರಕ್ಕೆ ನಯಾಪೈಸೆ ತೆರಿಗೆಯನ್ನೂ ಪಾವತಿಸುವುದಿಲ್ಲ. ಒಬ್ಬ ಬಡವನಿಂದ ವಸೂಲಿ ಮಾಡಿದ ಹಣವನ್ನು ತನ್ನ ಅಸಲನ್ನಾಗಿ ಮಾಡಿಕೊಂಡು, ಮತ್ತೊಬ್ಬ ಬಡವನಿಗೆ ಸಾಲ ಕೊಡುತ್ತಾರೆ. ಈ ಮೂಲಕ ತಾವು ಶ್ರೀಮಂತರಾಗಿ ಕೊಬ್ಬಿ ಮೆರೆಯುತ್ತಾರೆ. ಮೋಜು-ಮಸ್ತಿಯಲ್ಲಿ ತೊಡಗುತ್ತಾರೆ. ಅಂಥವರಿಗೆ ಬಡವರ ಕಣ್ಣೀರು ಕಾಣುವುದೇ ಇಲ್ಲ.

ವ್ಯವಹಾರ ಏಕೆ? ಹೇಗೆ?

ಖಾಸಗಿ ಲೇವಾದೇವಿ ವ್ಯವಹಾರಕ್ಕೆ ಬಡವರು, ಅನಕ್ಷರಸ್ಥರೇ ಬಲಿಯಾಗುವುದು ಹೆಚ್ಚು. ಬ್ಯಾಂಕುಗಳಲ್ಲಿ ಸಾಲ ಕೇಳಲು ಹೋದರೆ ಅಡಮಾನ ಇಡಲು ಆಸ್ತಿ ಕೇಳುತ್ತಾರೆ. ಜಾಮೀನಿಗೆ ಯಾರನ್ನಾದರೂ ಕರೆದುಕೊಂಡು ಬನ್ನಿ ಎನ್ನುತ್ತಾರೆ. ಹತ್ತಾರು ದಾಖಲೆಗಳನ್ನು ತರುವಂತೆ ಹೇಳಿ ನೂರಾರು ಬಾರಿ ಅಡ್ಡಾಡಿಸಿ ಹೈರಾಣು ಮಾಡುತ್ತಾರೆ. ಮಗಳ ಮದುವೆ. ಮನೆಯಲ್ಲಿ ಯಾರಿಗೋ ಹುಷಾರಿಲ್ಲ ಚಿಕಿತ್ಸೆ ಕೊಡಿಸಬೇಕು, ಹಬ್ಬಕ್ಕೆ ಏನೋ ವಸ್ತು ಖರೀದಿಸಬೇಕು, ಮನೆ ರಿಪೇರಿ ಮಾಡಿಸಬೇಕು- ಇತ್ಯಾದಿಗಳಿಗೆ ಬಡವರ ಬಳಿ ಹಣ ಇರುವುದಿಲ್ಲ, ಬ್ಯಾಂಕುಗಳು ಸಾಲ ಕೊಡುವುದಿಲ್ಲ. ಹೀಗಾಗಿ, ಅನಿವಾರ್ಯವಾಗಿ ಬಡ್ಡಿ ಕುಳಗಳ ಬಳಿ ಕೈಯೊಡ್ಡುತ್ತಾರೆ. ಮೊದಲ ತಿಂಗಳ ಬಡ್ಡಿಯನ್ನು ಹಣ ಕೊಡುವಾಗಲೇ ಮುರಿದುಕೊಳ್ಳುವ ಈ ಕುಳಗಳು, ಅದಕ್ಕೂ ಸೇರಿಸಿ ಬಡ್ಡಿ ಲೆಕ್ಕ ಹಾಕಲು ಆರಂಭಿಸುತ್ತಾರೆ. ಐದು ಪರ್ಸೆಂಟ್ ಲೆಕ್ಕದವರೆಗೂ ಬಡ್ಡಿ ವ್ಯವಹಾರ ನಡೆಯುತ್ತಿದೆ.

ಬೀದಿ ವ್ಯಾಪಾರಸ್ಥರು ಇಂತಹ ಕುಳಗಳಿಂದ ಹಣ ಪಡೆದು, ದಿನವಿಡೀ ಬಿಸಿಲಲ್ಲಿ ನಿಂತು ವ್ಯಾಪಾರ ಮಾಡಿ ಗಳಿಸಿದ ಹಣವೆಲ್ಲ ಸಂಜೆ ಅನಾಯಾಸವಾಗಿ ಬಡ್ಡಿ ರೂಪದಲ್ಲಿ ಇಂಥ ದಂಧೆಕೋರರ ಜೇಬು ಸೇರುತ್ತದೆ. ಬೆಳಗ್ಗೆ ಮಾಲು ಹಾಕಲು ಮತ್ತೆ ಇವರ ಬಳಿಯೇ ಹಣ ಕೇಳುವ ಪರಿಸ್ಥಿತಿ. ಇಂತಹ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಳ್ಳುವ ಬಡ್ಡಿ ದಂಧೆಕೋರರು, ಬಡವರ ರಕ್ತ ಹೀರುತ್ತಿದ್ದಾರೆ.

ಕನ್ನಡದ ಮತ್ತೊಬ್ಬ ಸಂಜನಾಳ ಬೆತ್ತಲೆ ಬೆನ್ನು!, ಪೂಜಾ ಆಯ್ತು, ಈಗ ಸಂಜನಾ ಸರದಿ

-ಬಸವರಾಜ ಕರುಗಲ್
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಕನ್ನಡದ ಮತ್ತೊಬ್ಬ ನಟಿ ಕ್ಯಾಮೆರಾಗೆ ಬೆತ್ತಲೆ ಬೆನ್ನು ತೋರಿದ ಹಾಟ್ ಹಾಟ್ ಎಕ್ಸಕ್ಲೂಸೀವ್ ಫೋಟೊಗಳು ನಮ್ಮ ತಂಡಕ್ಕೆ ಲಭ್ಯವಾಗಿವೆ.
ರವಿ ಶ್ರೀವತ್ಸ ನಿರ್ದೇಶನದ ಗಂಡ-ಹೆಂಡತಿ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಸಂಜನಾ ಗರ್ಲಾನಿ ಪಡ್ಡೆಗಳ ನಿದ್ದೆ ಕದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಆನಂತರ ಬಂದ ಶ್ರೀನಿವಾಸರಾಜು ನಿರ್ದೇಶನದ ದಂಡುಪಾಳ್ಯ-1 ಸಿನಿಮಾದಲ್ಲಿ ಮಳೆ ಹುಡುಗಿ ನಟಿ ಸಂಜನಾ ಗಾಂಧಿ (ಪೂಜಾ ಗಾಂಧಿಯ ಮೊದಲ ಹೆಸರು) ಬೆತ್ತಲೆ ಬೆನ್ನು ತೋರಿದ್ದು ಸಂಚಲನ ಮೂಡಿಸಿತ್ತು. ಈಗ ಮತ್ತೇ ಸಂಜನಾ ಬೆತ್ತಲೆ ಬೆನ್ನು ಪ್ರದರ್ಶಿಸಿದ್ದಾರೆ. ಆದರೆ ಈ ಸಂಜನಾ ಬೇರೆ.

ದೇವದಾಸಿಯರು ಎಂಬ ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸಂಜನಾ ನಾಯ್ಡು ದೃಶ್ಯವೊಂದರಲ್ಲಿ ಬೆತ್ತಲೆ ಬೆನ್ನು ತೋರಿಸಿದ್ದಾರೆ.
ಗಂಡ-ಹೆಂಡತಿಯಲ್ಲಿ ಶೃಂಗಾರದ ಕಾರಣಕ್ಕಾಗಿ ಹಸಿ-ಬಿಸಿ ದೃಶ್ಯಗಳ ಫೋಟೋಗಳು ಪಡ್ಡೆಗಳನ್ನು ಸೆಳೆದಿದ್ದವು. ದಂಡುಪಾಳ್ಯದಲ್ಲಿ ಪೊಲೀಸರ ಕ್ರೌರ್ಯದ ಸಂಕೇತವಾಗಿದ್ದ ಬೆತ್ತಲೆ ಬೆನ್ನು ಜನರನ್ನು ಥೇಟರ್‌ನತ್ತ ಬರುವಂತೆ ಮಾಡಿತ್ತು. ಈಗ ದೇವದಾಸಿಯರು ಸಿನಿಮಾದಲ್ಲಿ ಮತ್ತೇ ಶೃಂಗಾರದ ಸಂಕೇತವಾಗಿರುವ ಬೆತ್ತಲೆ ಬೆನ್ನು ಕಿಚ್ಚು ಹಚ್ಚಿರುವುದಂತೂ ಸತ್ಯ. ಆದರೆ ಜನರನ್ನ ಥೇಟರ್‌ನತ್ತ ಸೆಳೆಯುತ್ತಾ? ಎಂಬ ಪ್ರಶ್ನೆಗೆ ಡಿಸೆಂಬರ್ ಕೊನೆಗೆ ಇಲ್ಲವೇ 2021ರ ಜನೇವರಿ ಮೊದಲೆರಡು ವಾರದ ಬಳಿಕ ಉತ್ತರ ಸಿಗುತ್ತೆ. ಯಾಕೆಂದರೆ ಸ್ವಾತಿ ಅಂಬರೀಶ್ ನಿರ್ದೇಶನದ ದೇವದಾಸಿಯರು ಬಿಡುಗಡೆ ಆಗೋದು ಆ ಟೈಮ್‌ನಲ್ಲೇ.

ಗಂಡ-ಹೆಂಡತಿ, ದಂಡುಪಾಳ್ಯ ಹಾಗೂ ದೇವದಾಸಿಯರು-ಈ ಮೂರು ಸಿನಿಮಾದ ವಿಶೇಷತೆ ಅಂದ್ರೆ ಸೆನ್ಸಾರ್ ಮಂಡಳಿ ಇವುಗಳಿಗೆ ಎ ಸರ್ಟಿಫಿಕೇಟ್ ನೀಡಿರೋದು. ಮೊದಲು ಎ ಸರ್ಟಿಫಿಕೇಟ್ ಸಿಕ್ಕರೆ ಅಶ್ಲೀಲ ಎಂಬ ಭಾವ ಇರುತ್ತಿತ್ತು. ಈಗ ಕ್ರೌರ್ಯದ ಅಂಶಗಳು ಹೆಚ್ಚಿರುವ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ನೀಡಲಾಗುತ್ತೆ. ಶಿವಣ್ಣ ಅಭಿನಯದ ಹೊಡಿ ಮಗಾ ಸಿನಿಮಾಕ್ಕೇನೇ ಎ ಸರ್ಟಿಫಿಕೇಟ್ ಸಿಕ್ಕಿತ್ತು ಅನ್ನೋ ಸಮಾಧಾನ ದೇವದಾಸಿಯರು ಚಿತ್ರತಂಡದ್ದು. ಅಂದಹಾಗೆ ಸ್ವಾತಿ ಅಂಬರೀಶ್ ದೇವದಾಸಿಯರು ಸಿನಿಮಾ ಪೂರ್ಣಗೊಳಿಸಿ, ಈಗ ತಮಸ್ ಎಂಬ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

ಒಟ್ಟಾರೆ ದೇವದಾಸಿಯರು ಸಿನಿಮಾದ ಮತ್ತೊಬ್ಬ ಸಂಜನಾಳ ಬೆತ್ತಲೆ ಬೆನ್ನನ್ನ ಹದಿಹರೆಯದ ಹುಡುಗರು ಕದ್ದು ಮುಚ್ಚಿ ನೋಡ್ತಿದಾರೆ. ಸಿನಿಮಾನ ಎಷ್ಟು ಜನ ನೋಡ್ತಾರೆ ಅನ್ನೋದನ್ನ ಕಾದು ನೋಡಬೇಕು..

ಜನವರಿ ಅಂತ್ಯಕ್ಕೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೋವಿಡ್ -19 ಸೋಂಕಿನ ಹಾವಳಿಯಿಂದಾಗಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಒ) ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ನ್ನು 2021 ಜನವರಿ ಅಂತ್ಯಕ್ಕೆ ಮುಂದೂಡಿದೆ.

ಕೋವಿಡ್ ಉಂಟು ಮಾಡಿರುವ ಸದ್ಯದ ಪರಿಸ್ಥಿತಿಯಲ್ಲಿ ಚಾಂಪಿಯನ್‌ಶಿಪ್ ನಡೆಸುವುದು ಕಷ್ಟ. ಹಾಗಾಗಿ ಒಂದು ತಿಂಗಳು ಮುಂದೂಡಬೇಕಾಯಿತು ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ನುಡಿದಿದ್ದಾರೆ.

ಉತ್ತರ ಪ್ರದೇಶದ ಗೊಂಡಾದಲ್ಲಿ ಡಿ.18 ರಿಂದ 20 ರವರೆಗೆ ಈ ಬಾರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಆಯೋಜಿಸಲು ನಿರ್ಧರಿಸಲಾಗಿತ್ತು. ಟೂರ್ನಿ ಆಯೋಜನೆಗೆ ಇನ್ನಷ್ಟು ರಾಜ್ಯಗಳು ಬಯಸಿದರೆ, ಸ್ಥಳ ಬದಲಾಗಬಹುದು ಎಂದು ವಿನೋದ್ ತೋಮರ್ ಹೇಳಿದ್ದಾರೆ.

ಸರ್ಬಿಯಾದ ಬಿಲ್ ಗ್ರೇಡ್ ನಲ್ಲಿ ಡಿ.12 ರಿಂದ 18 ರವರೆಗೆ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕಳುಹಿಸಿ ಕೊಡಲಾಗುವುದು ಎಂದು ಡಬ್ಲ್ಯುಎಫ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್ ಗೆ ಆಯ್ಕೆ ಟ್ರಯಲ್ಸ್ ನಡೆಸದಿರಲು ತೀರ್ಮಾನಿಸಲಾಗಿದೆ.ಅದೇ ತಂಡವನ್ನು ಬೆಲ್ ಗ್ರೇಡ್ ಗೆ ಕಳುಹಿಸಲಾಗುವುದು.

ಬಜರಂಗ್ ಪುನಿಯಾ(65 ಕೆಜಿ ವಿಭಾಗ), ವಿನೇಶ್ ಪೋಗಟ್ (ಮಹಿಳೆಯರ 53 ಕೆಜಿ ವಿಭಾಗ), ಜೀತೆಂದರ್ ಕುಮಾರ್ (74 ಕೆಜಿ ವಿಭಾಗ) ಹಾಗೂ ಸೋಮವೀರ್ ರಾಠೆ (92 ಕೆಜಿ ವಿಭಾಗ) ಅವರು ಟೂರ್ನಿಯಲ್ಲಿ ಭಾಗವಹಿಸದಿರಲು ಅನುಮತಿ ಕೇಳಿದ್ದು, ಒಪ್ಪಿಗೆ ನೀಡಲಾಗಿದೆ ಎಂದು ಡಬ್ಲ್ಯುಎಫ್ಐನ ಅಧಿಕಾರಿ ಹೇಳಿದ್ದಾರೆ.

ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ವಿಡಿಯೋ ಕಾರಣ!; ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಕಾರವಾರ

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಆತ್ಮಹತ್ಯೆ ಯತ್ನಕ್ಕೆ ವೈಯಕ್ತಿಕ ರಹಸ್ಯ ವಿಡಿಯೋ ಕಾರಣವಿರಬಹದು. ಅದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಮತ್ತು ಎಂಎಲ್ ಸಿಗೆ ಯಾವುದೋ ಒಂದು ವೈಯಕ್ತಿಕ ರಹಸ್ಯ ವಿಡಿಯೋ ಕೊಟ್ಟ ಮಾಹಿತಿ ಎರಡು ತಿಂಗಳ ಹಿಂದಿತ್ತು. ಇವರಿಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಅವರು ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಕೇಳಿದ್ದೆ. ಆದರೆ, ಇದರ ಸತ್ಯಾಂಶ ಗೊತ್ತಿಲ್ಲ. ಅದೇ ವಿಚಾರವಾಗಿ ಬೇಸರಗೊಂಡು ಸಂತೋಷ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಏನೋ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು. ಕಟೀಲ್ ಗೆ ಅಲ್ಪಸ್ವಲ್ಪ ಜ್ಞಾನವಿದೆ ಎಂದುಕೊಂಡಿದ್ದೆ. ಅವರು ಜವಾಬ್ದಾರಿ ಸ್ಥಾನದಲ್ಲಿದ್ದು, ಆ ಸ್ಥಾನಕ್ಕೆ ಕಳಂಕ ತರುವ ಹೇಳಿಕೆ ನೀಡದೆ ಗೌರವದಿಂದ ನಡೆದುಕೊಳ್ಳಬೇಕು ಎಂದರು.

ನಾನು ಕೂಡಾ ಸಿದ್ದರಾಮಯ್ಯ ಸರ್ಕಾರಲ್ಲಿದ್ದೆ. ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದಾರೆ ಎಂದಾದರೆ ಎಫ್ಐಆರ್ ಏಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಮಾದಕ ದ್ರವ್ಯದಿಂದ ಸರ್ಕಾರ ನಡೆಸುತ್ತಿದ್ದರು ಎಂಬ ನಳೀನ್ ಕುಮಾರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಲು ಸಹಕರಿಸಿ: ಸುರಳ್ಕರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕ್ರೀಡೆ ಎಂದರೆ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಆಟಗಳನ್ನು ಸಮಾನ ದೃಷ್ಟಿಯಿಂದ ಕಾಣಬೇಕು. ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ತಂಡಗಳನ್ನು ರಚಿಸಿ ಪ್ರತಿಭಾಶೋಧದ ಜೊತೆಗೆ ವೇದಿಕೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರದಿಂದ ಆರಂಭಗೊಂಡ ಕೆಡಬ್ಲ್ಯೂಎಸ್‌ಸಿ ಆಯೋಜಿಸಿದ ಎರಡು ದಿನಗಳ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತದಿಂದಲೂ ಕ್ರೀಡಾ ತಂಡಗಳನ್ನು ರಚಿಸಲಾಗುತ್ತಿದ್ದು, ಕೊರೋನಾದ ಈ ದಿನಗಳಲ್ಲಿ ಬಹಳಷ್ಟು ನೌಕರರು ಮನೆ, ಕಚೇರಿಗೆ ಮಾತ್ರ ಸೀಮಿತವಾಗಿದ್ದಾರೆ. ಒತ್ತೆ ನಿವಾರಣೆಗೆ, ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಮಾತನಾಡಿ, ಕಡಬ್ಲ್ಯೂಎಸ್‌ಸಿ ಕೇವಲ ಕ್ರೀಡೆಗೆ ಸೀಮಿತವೆಂದು ಭಾವಿಸಿದ್ದೆ. ಆದರೆ ಈ ಕ್ಲಬ್ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ಶ್ಲಾಘನೀಯ ಕಾರ್ಯ. ಇಂಥ ಸಂಘಟನೆಗಳು ಹೆಚ್ಚಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗಲಿ ಎಂದು ಆಶಿಸಿದರು.

ಕ್ಲಬ್‌ನ ಮುಖಂಡ ಗಿರೀಶ್ ಮುಂಡಾದ ಮಾತನಾಡಿ, ಜಿಲ್ಲಾ ಕ್ರೀಡಾಂಗಣದ ಸ್ಥಿತಿ-ಗತಿ ವಿವರಿಸಿ ಇಲ್ಲಿ ಶೌಚಾಲಯದ ಅಗತ್ಯವಿದೆ ಎಂದು ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಸೋಮವಾರದಿಂದಲೇ ಶೌಚಾಲಯ ನಿರ್ಮಾಣ ಕಾರ್ಯ ಶುರುವಾಗಲಿದೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಬಸವರಾಜ ಕರುಗಲ್ ಮಾತನಾಡಿ, ನಿತ್ಯ ಬೆಳಗ್ಗೆ ಈ ಕ್ರೀಡಾಂಗಣದಲ್ಲಿ ವಿವಿಧ ಹುದ್ದೆಗಳಲ್ಲಿರುವ ಅಧಿಕಾರಿಗಳು, ವೈದ್ಯರು, ಪೊಲೀಸರು, ಪತ್ರಕರ್ತರು, ವ್ಯಾಪಾರಸ್ಥರು ವಯೋಮಾನ ಮರೆತು ಏಕತೆಯಿಂದ ಆಟವಾಡುತ್ತಾರೆ. ಈ ಒಗ್ಗಟ್ಟಿನ ಸಂಕೇತವಾಗಿ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ ಎಂದರು.

ಸಮಾರಂಭದಲ್ಲಿ ಪೊಲೀಸ್ ಅಧಿಕಾರಿಗಳಾದ ರವಿ ವಕ್ಕುಂದ, ಅಮರೇಶ ಹುಬ್ಬಳ್ಳಿ, ಮೌನೇಶ್, ವಿಶ್ವನಾಥ ಹಿರೇಗೌಡರ್, ಆಂಜನೇಯ ಮತ್ತಿತರರು ಇದ್ದರು.

ಚಂದ್ರು, ಸೂರಿ, ವಿನೋದ್, ಸಿದ್ದು, ಪ್ರವೀಣ್, ಗವಿ, ಗಂಗಾಧರ, ಶ್ರೀನಿವಾಸ, ಮೌನೇಶ್, ನಾಗರಾಜ, ಮಂಜುನಾಥ ಇನ್ನಿತರರು ಪಾಲ್ಗೊಂಡಿದ್ದರು.

ಈರಣ್ಣ ಕಾರ್ಯಕ್ರಮ ನಿರ್ವಹಿಸಿದರು.

ಗಂಗಾವತಿಯಲ್ಲಿ ಹೆಚ್‍ಐವಿ ಸೋಂಕು ತಡೆ ಜಾಗೃತಿ ಕಾಯಕ್ರಮ: ಲಿಂಗರಾಜು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಜಿಲ್ಲೆಯ ಗಂಗಾವತಿ ನಗರದಲ್ಲಿ ಡಿ.01 ರಂದು ಆರೋಗ್ಯ ಇಲಾಖೆ, ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನದ ಪ್ರಯುಕ್ತ ಹೆಚ್‍ಐವಿ ಸೋಂಕು ನಿಯಂತ್ರಣದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಎಚ್‍ಒ ಡಾ. ಲಿಂಗರಾಜು ಅವರು ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‍ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏಡ್ಸ್ ತಡೆಗಟ್ಟುವಿಕೆಗೆ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೇ, ಜನರಲ್ಲೂ ಜಾಗೃತಿ ಮೂಡಿಸುವ ಕಾರ್ಯವೂ ನಡೆದಿವೆ. ಜನರಲ್ಲಿ ಈ ಬಗ್ಗೆ ಜಾಗೃತಿ‌ ಮೂಡಿದ್ದು ಎಚ್ಐವಿ ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಇಳಿಮುಖವಾಗಿದೆ ಎಂದರು.

ಡಾ. ಮಹೇಶ ಮಾತನಾಡಿ, ಜಿಲ್ಲೆಯಲ್ಲಿ 2002 ರಿಂದ 2020ರ ಅಕ್ಟೋಬರ್ ವರೆಗೂ 4,31,054 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಈ ಪೈಕಿ 15173 ಜನರಲ್ಲಿ ಹೆಚ್‍ಐವಿ ಸೋಂಕು ಇರುವುದು ಪತ್ತೆಯಾಗಿದೆ. ಇವರಲ್ಲಿ 850 ಗರ್ಭಿಣಿಯರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ವರ್ಷ ಏಪ್ರಿಲ್‍ನಿಂದ ಅಕ್ಟೋಬರ್ ವರೆಗೂ 14514 ಜನರ ರಕ್ತ ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ 131 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ ಎಂದರು.

ಸೋಂಕಿತರ ಪೈಕಿ 35-49 ವರ್ಷದೊಳಗಿನ ವ್ಯಕ್ತಿಗಳಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದು ಪರೀಕ್ಷೆ ವೇಳೆ ಬೆಳಕಿದೆ ಬಂದಿದೆ ಎಂದರಲ್ಲದೇ, ಜಿಲ್ಲೆಯಲ್ಲಿ ಎಆರ್‍ಟಿ ಆರಂಭ ಪೂರ್ವ 12492 ಜನರು ನೊಂದಣಿ ಮಾಡಿಸಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಎಆರ್‍ಟಿ ಆರಂಭವಾದ ಬಳಿಕ 10622 ಜನರು ನೊಂದಣಿಯಾಗಿದ್ದಾರೆ. ಇವರಲ್ಲಿ 5556 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, 3627 ಜನರು ಸಾವನ್ನಪ್ಪಿದ್ದಾರೆ. ಉಳಿದವರು ಅನ್ಯ ಜಿಲ್ಲೆ ಹಾಗೂ ಅನ್ಯ ರಾಜ್ಯದವರೂ ಆಗಿದ್ದಾರೆ. ಟ್ರಕ್ ಸಂಚಾರಿಗಳೂ ಆಗಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ ವೇಳೆ ಸೋಂಕು ಇರುವುದು ಪತ್ತೆಯಾಗಿದೆ. ಅಂತವರ ವಿಳಾಸ ಪತ್ತೆ ಮಾಡಿ ಅವರು ಇರುವ ಜಿಲ್ಲೆಗೆ ಚಿಕಿತ್ಸೆ ಪಡೆಯಲು ಕಳುಹಿಸಿಕೊಡಲಾಗಿದೆ ಎಂದರು.

ರಾಜ್ಯದಲ್ಲಿ ಹೆಚ್‍ಐವಿ ಸೋಂಕಿತರ ಪ್ರಮಾಣ 5ನೇ ಸ್ಥಾನದಲ್ಲಿದೆ. ಈ ಹಿಂದಿನ ಅಂಕಿ-ಅಂಶ ಹೋಲಿಕೆ ಮಾಡಿದರೆ ಸ್ವಲ್ಪ ಕಡಿಮೆಯಾಗುತ್ತಿದೆ. ಅಲ್ಲದೇ, ಕಳೆದ ವರ್ಷ ಕುಷ್ಟಗಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಮಾಡಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತ್ತು. ಈ ವರ್ಷ ಗಂಗಾವತಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಹಾಗಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಗಂಗಾವತಿಯಲ್ಲಿಯೇ ನಡೆಯಲಿದೆ. ಮ್ಯಾರಥಾನ್ ಸೇರಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.

ಡಿಸೆಂಬರ್‌ ಕೊನೆಗೆ ತೆರೆಗೆ ಬರ್ತಾರೆ ದೇವದಾಸಿಯರು

-ನಿರ್ದೇಶಕ ಸ್ವಾತಿ ಅಂಬರೀಶ್ ಅವರ ಮೂರನೇ ಸಿನಿಮಾ

-ಕಾಸ್ಟಿಂಗ್ ಕೌಚ್ ಅವರ ವರ್ತನೆ ಮೇಲೆ ಅವಲಂಬನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ವಿಜಯಲಕ್ಷ್ಮಿ ಮಂಜುನಾಥರಡ್ಡಿ ಅವರು ಬರೆದ ದೇವದಾಸಿಯರು ಕೃತಿಯನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಡಿಸೆಂಬರ್‌ ಕೊನೆ ವೇಳೆಗೆ ತೆರೆಗೆ ತರಲು ಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಸ್ವಾತಿ ಅಂಬರೀಶ್ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು ಮಾರ್ಚ್-ಏಪ್ರಿಲ್ ವೇಳೆಗೆ ತೆರೆಗೆ ತರಬೇಕೆನ್ನುವಷ್ಟರಲ್ಲಿ ಕೊರೋನಾದಿಂದ ಲಾಕ್‌ಡೌನ್ ಶುರುವಾಗಿ ಬಿಡುಗಡೆಗೆ ತೊಂದರೆ ಆಯಿತು ಎಂದರು.

ಕೊಪ್ಪಳ ಸುತ್ತಮುತ್ತ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಲಾಗಿತ್ತು. ಪರವಾನಗಿ ಸಿಗಲಿಲ್ಲವಾದ್ದರಿಂದ ಜಿಲ್ಲೆಯ ಹುಲಗಿ ಮತ್ತಿತರೆಡೆ ಚಿತ್ರೀಕರಣ ಮಾಡಲಾಗಲಿಲ್ಲ. ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರೂ ಸಹ ಅಭಿನಯಿಸಿದ್ದು ಈ ಭಾಗದ ಜನರು ನಮ್ಮ ತಂಡವನ್ನು ಹರಸಿ, ಆಶೀರ್ವದಿಸಬೇಕು ಎಂದು ಕೋರಿದರು.

ನಮ್ಮ ಈ ಸಿನಿಮಾದಲ್ಲಿ ಮೂರು ಹಾಡುಗಳಿದ್ದು ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾದ ಇಡೀ ತಿರುಳು ಮಧ್ಯಂತರದ ನಂತರ ಇದೆ. ಮೊದಲಾರ್ಧ ಕಥೆಯ ಹಿನ್ನೆಲೆಗೆ ಸೀಮಿತವಾಗಿರುತ್ತೆ. ಡಿಸೆಂಬರ್ ಕೊನೆಗೆ ರಾಜ್ಯದ ಸುಮಾರು 80 ಥೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ ಎಂದು ಅವರು ತಿಳಿಸಿದರು.

ಚಿತ್ರದ ನಾಯಕಿ ಸಂಜನಾ ನಾಯ್ಡು ಮಾತನಾಡಿ, ಚಿತ್ರದಲ್ಲಿ ಸಮಾಜಕ್ಕೆ‌ ಒಂದೊಳ್ಳೆ ಸಂದೇಶ ಇದೆ. ಚಿತ್ರದಲ್ಲಿ ನನ್ನದು ದೇವದಾಸಿ ಪಾತ್ರ. ದೇವದಾಸಿಯರ ಸಮಸ್ಯೆ, ಬದುಕು-ಸಂಕಷ್ಟ‌ ಕುರಿತು ಅನೇಕ ಸಿನಿಮಾಗಳು ಬಂದಿದ್ದು, ಅವುಗಳಿಗಿಂತ ನಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ತಿಳಿಸಿದರು.

ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಕುರಿತು ಚರ್ಚೆಯಾಗುತ್ತಿದೆ. ಯಾರೊ ಒಂದಿಬ್ಬರು ಅದರಲ್ಲಿ ಭಾಗಿಯಾಗಿದ್ದಾರೆ ಎಂದ ಮಾತ್ರಕ್ಕೆ ಎಲ್ಲರನ್ನೂ ಅನುಮಾನದಿಂದ ನೋಡಬಾರದು. ಕಾಸ್ಟಿಂಗ್ ಕೌಚ್ ಅವರವರ ವರ್ತನೆ ಮೇಲೆ ಅವಲಂಬನೆ ಆಗಿರುತ್ತೆ. ಇಷ್ಟು ವರ್ಷದ ಚಿತ್ರ ಬದುಕಿನಲ್ಲಿ ನನಗೆ ಅಂಥ ಅನುಭವ ಆಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಹೇಮಾ ಇದ್ದರು.

ಜಾರಕಿಹೊಳಿ ದೆಹಲಿಯಿಂದ ವಾಪಾಸ್; ಸಿಎಂ ಜೊತೆ ಚರ್ಚೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಜೆಪಿ ವರಿಷ್ಠರ ಭೇಟಿಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಸಿಎಂ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಯಡಿಯೂರಪ್ಪ ಅವರೊಂದಿಗೆ ದೆಹಲಿ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.

ಸ್ನೇಹಿತ ಸಿಪಿ ಯೋಗೇಶ್ವರ್ ಅವರಿಗೆ ಸ್ಥಾನ ಕೊಡಿಸಲು ಸಾಹುಕಾರ್ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.

ನಿನ್ನೆಯಷ್ಟೇ ಸಭೆ ನಡೆಸಿದ್ದ ಮಿತ್ರ ಮಂಡಳಿ ‘ನಮ್ಮ‌ಜೊತೆ ಪಕ್ಷ ಬಿಟ್ಟು ಬಂದವರಿಗೂ ನಿಗಮ-ಮಂಡಳಿ ಕೊಡಿ. ಕ್ಷೇತ್ರ ಭೇಟಿ ಹೋದಾಗ ಕಾರ್ಯಕರ್ತರಿಗೆ ಉತ್ತರಿಸೋಕೆ ಆಗುತ್ತಿಲ್ಲ ಎಂದು ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರೊಂದಿಗೆ ಚರ್ಚಿಸಿ ಬೇಡಿಕೆ ಇಡೇರಿಸುವಂತೆ ಪಟ್ಟು ಹಿಡಿದಿದ್ದಾರೆ’ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ‘ಇಂತಹ ಸಭೆಗಳನ್ನು ಸಿಎಂ ಕಚೇರಿ, ಪಕ್ಷದ ಕಚೇರಿ ಮಾತ್ರ ನಡೆಸಬೇಕು. ನಾನು ನಾಯಕ ಅಂತಾ ಎಲ್ಲೂ ಹೇಳಿಲ್ಲ. ನಮ್ಮದು ಸಾಮೂಹಿಕ ನಾಯಕತ್ವ’ ಎಂದು ಮಿತ್ರ ಮಂಡಳಿಗೆ ಟಾಂಗ್ ಕೊಟ್ಟಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ರಮೇಶ ಜಾರಕಿಹೊಳಿ
ವಾಪಾಸ್ ಆಗುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸೇರಿದಂತೆ ಹಲವು ನಾಯಕರು ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

error: Content is protected !!