Home Blog Page 3043

ಕೊರೋನಾ; ಮಂಗಳವಾರವೂ 191 ಜನರಿಗೆ ಸೋಂಕು, ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 04 ಮಂಗಳವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ‌ಅಟ್ಟಹಾಸ ಮುಂದುವೃಸಿದೆ. ಸತತ ಎರಡನೇ ದಿನವೂ 191 ಜನರಿಗೆ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 191 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13407 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -139 , ಮುಂಡರಗಿ-15, ನರಗುಂದ-03, ರೋಣ-23, ಶಿರಹಟ್ಟಿ-01 ಹೊರಜಿಲ್ಲೆಯ-10 ಸೇರಿದಂತೆ 191 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಗದಗನ ವಿರೇಶ್ವರ ನಗರದ 54 ವರ್ಷದ ಮಹಿಳೆ, ಹಾಗೂ ಹುಡ್ಕೋ ಕಾಲೋನಿಯ 54 ವರ್ಷದ ಮಹಿಳೆ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
144 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 160 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12398 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 865 ಪ್ರಕರಣಗಳು ಸಕ್ರಿಯವಾಗಿದ್ದು, 544 ಜನರು ಮನೆಯಲ್ಲಿ, 321 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 211 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ನಟಿ ಕಂಗನಾ ಟ್ವೀಟರ್ ಖಾತೆ ಅಮಾನತು!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ನಟಿ ಕಂಗನಾ ರಣಾವತ್ ಹಲವು ವಿಷಯಗಳ ಕುರಿತು ವಿವಾದಾತ್ಮಕ ಟ್ವೀಟ್‌ ಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಟ್ವೀಟ್ ಖಾತೆಯನ್ನು ಅಮಾನತು ಮಾಡಲಾಗಿದೆ. ಇತ್ತೀಚೆಗೆ ನಟ ಸೋನು ಸೂದ್ ಅವರ ಕುರಿತು ಟ್ವೀಟ್ ಮಾಡಿ ನಟಿ ರಣಾವತ್ ಅಣುಕಿಸಿದ್ದರು.

ಮೈಕ್ರೋ ಬ್ಲಾಗಿಂಗ್ ಸೈಟ್ ನಿಯಮಗಳಿಗೆ ವಿರುದ್ಧವಾಗಿ ಪದಗಳನ್ನು ಬಳಸುತ್ತಿದ್ದರು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಟ್ವಿಟರ್, ಅವರ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡುವ ಕಠಿಣ ಕ್ರಮ ಕೈಗೊಂಡಿದೆ. ಈ ಕುರಿತು ಟ್ವೀಟರ್ ವಕ್ತಾರರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಚುನಾವಣಾ ಸಂದರ್ಭದಲ್ಲಿಯೂ ಸಿಎಂ ಮಮತಾ ಬ್ಯಾನರ್ಜಿ ಅವರ ಕುರಿತು ಕಂಗನಾ ಮನಸೋ ಇಚ್ಛೆ ಸರಣಿ ಟ್ವೀಟ್ ಮಾಡಿದ್ದರು. ಚುನಾವಣಾ ಫಲಿತಾಂಶದ ನಂತರವೂ ಮಮತಾ ಬ್ಯಾನರ್ಜಿ ಅವರನ್ನು ಟೀಕಿಸಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಗೆದ್ದ ಬಳಿಕ ಹಿಂಸಾಚಾರ ಜಾಸ್ತಿ ಆಗಿದೆ. ಅಧ್ಯಕ್ಷೀಯ ಆಡಳಿತ ತರಬೇಕು’ ಎಂದು ಕಂಗನಾ ಟ್ವೀಟ್ ಮಾಡಿದ್ದರು. ಈ ಎಲ್ಲ ಅಂಶಗಳನ್ನು ಗಮನಿಸಿರುವ ಟ್ವೀಟರ್ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ಮಹಾಮಾರಿಗೆ ಮತ್ತೊಬ್ಬ ಶಿಕ್ಷಕ ಬಲಿ – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಮಹಾಮಾರಿಗೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಬಲಿಯಾಗಿದ್ದು, ಆಸ್ಪತ್ರೆಯ ಎದುರೇ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು.

ಚಿಂತಾಮಣಿ ನಗರದ 48 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ ವೆಂಕಟೇಶಪ್ಪ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರು ಶುಕ್ರವಾರ ಉಸಿರಾಟದ ಸಮಸ್ಯೆಯಿಂದ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ,ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಸಾವಿಗೆ ಆಸ್ಪತ್ರೆ ವೈದ್ಯರೇ ನೇರ ಕಾರಣ ಎಂದು ಕುಟುಂಬಸ್ಥರು ಆರೋಪಿಸಿ ಆಸ್ಪತ್ರೆಯ ಎದುರೇ ಕಣ್ಣೀರು ಹಾಕಿದ್ದಾರೆ. ಸಮರ್ಪಕ ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಮಗ ವಂಶಿಕೃಷ್ಣ ಆರೋಪಿಸಿದ್ದಾರೆ. ವೆಂಕಟೇಶಪ್ಪ ಸಾವಿನಿಂದ ತಾಯಿ- ಮಗನ ಕಣ್ಣೀರು ಹಾಗೂ ಗೋಳಾಟ ಅಲ್ಲಿದ್ದ ಜನರ ಕಣ್ಣಲ್ಲಿ ನೀರು ಬರುವಂತೆ ಮಾಡಿತ್ತು.

ಐಪಿಎಲ್ ಬೆಟ್ಟಿಂಗ್; ಮೂವರು ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಸೋಮವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಸನ್ ರೈಜರ್ಸ್ ಹೈದರಾಬಾದ್ (SRH) ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಸ್ಕೋರ್ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬೆಟಗೇರಿಯ ಮೈಲಾರಲಿಂಗ ದೇವಸ್ಥಾನದ ಮುಂದೆ ಮ್ಯಾಚ್ ಆರಂಭಗೊಳ್ಳುವದಕ್ಕೂ ಮೊದಲು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬೆಟಗೇರಿಯ ಹುಚ್ಚನಗೌಡ್ರ ಓಣಿಯ ನಿವಾಸಿ, ಟೇಲರಿಂಗ್ ವೃತ್ತಿಯ ಸಾಗರ್ ರಾಜಾರಾಮ್ ಗುಜ್ಜರ, ಗದಗನ ಶಹಾಪೂರಪೇಟೆಯ ಎಲೆಕ್ಟ್ತೇಶಿಯನ್ ಗಳಾದ ವೀರೇಂದ್ರ ಈರಣ್ಣ ಬಾಳಿಗೇರಿ, ಶ್ರೀಕಾಂತ ಹನಮಂತಪ್ಪ ಗಣಪಾ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 35 ಸಾವಿರ ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿಯ ಪಿಎಸ್ಐ ರಾಜೇಶ್ ಬಟಗುರ್ಕಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಂದರ್-ಬಾಹರ್ ಜೂಜಾಟ; ಬಸ್ ಕಂಡಕ್ಟರ್, ವರ್ತಕರು ಸೇರಿ 8 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಬಸ್ ಕಂಡಕ್ಟರ್, ಇಬ್ಬರು ವರ್ತಕರು ಸೇರಿದಂತೆ ಎಂಟು ಜನರ ತಂಡವೊಂದು ಗದ್ದಿಹಳ್ಳದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಇದನ್ನೂ ಓದಿ  ಐಪಿಎಲ್ ಬೆಟ್ಟಿಂಗ್; ಮೂವರು ಬಂಧನ

ಸಮೀಪದ ಗದ್ದಿಹಳ್ಳದ ದಂಡೆಯಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದ ಹಿರೇಕೊಪ್ಪದ ಸುರೇಶ್ ತುಕ್ಕಪ್ಪ ಗಿಡ್ಡಮಲ್ಲಣ್ಣವರ, ಕಿರಟಗೇರಿಯ ಅಪ್ಪಾಸಾಬ್ ಫಕ್ಕೀರಸಾಬ್ ನದಾಫ್, ಹುಡ್ಕೋ ಕಾಲೋನಿಯ ಪಾನ್ ಶಾಪ ಉದ್ಯೋಗಿ ಭಾಸ್ಕರ್ ದೇವೇಂದ್ರಸಾ ಮೆರೆವಾಡೆ, ಇಡ್ಲಿ ವ್ಯಾಪಾರಿ ವಿನೋದ ಪ್ರಕಾಶ್ ಬಾಕಳೆ, ಬಸ್ ಕಂಡಕ್ಟರ್ ಕಮ್ ವ್ಯಾಪಾರಿ, ಸಪ್ತಗಿರಿ ಬಾರ್ ಹತ್ತಿರದ ನಿವಾಸಿ ಬಸವರಾಜ್ ಪ್ರಭಯ್ಯ ಗಿರಿಮಠ, ನರಸಾಪೂರದ ರಮೇಶ್ ಬಸಪ್ಪ ತಾಳಿಕೋಟಿ, ಶಿವಾನಂದ ವೀರಪ್ಪ ಕರಿಗೌಡ್ರ, ಬೆಟಗೇರಿಯ ಹೊಸಪೇಟೆ ಚೆಕ್ ನ ಖಾಸಗಿ ಉದ್ಯೋಗಿ ಅಜರುದ್ದೀನ್ ಮಾಬುಸಾಬ್ ಮಕಾನದಾರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 30 ಸಾವಿರ ರೂ,ಗಳನ್ನು ವಶಪಡಿಸಿಕೊಂಡಿರುವ ಪಿಎಸ್ಐ ರಾಜೇಶ್ ಬಟಗುರ್ಕಿ ತನಿಖೆ ಕೈಗೊಂಡಿದ್ದಾರೆ.

ದಾಳಿಯ ವೇಳೆ ಬೆಟಗೇರಿ ಭಾಗದ ಉದ್ಯಮಿಯೊಬ್ಬ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆದರೆ ಕೆಲ ಮೂಲಗಳು ಬೇರೆ ಬೇರೆ ಕತೆ ಹೇಳುತ್ತಿದ್ದಾರೆ. ಈ ಜೂಜಾಟಕ್ಕೆ ಆತನೇ ಫೈನಾನ್ಸ್ ಮಾಡುತ್ತಿದ್ದ. ಆದರೆ ಆತ ಪರಾರಿಯಾಗಲು ಹೇಗೆ ಸಾಧ್ಯ ಎಂದು ಮೂಲಗಳು ತಿಳಿಸಿವೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಪಾಸ್; ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಿಕೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ವಿಪರೀತವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ.

ಇದೇ ತಿಂಗಳ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದ ಮುಂದೂಡಲಾಗಿದೆ. ಈ ಕುರಿತು ಅಧಕೃತವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಅಲ್ಲದೆ ಪ್ರಥಮ ಪಿಯು ಪರೀಕ್ಷೆಗಳನ್ನು ಕೂಡ ರದ್ದು ಮಾಡಲಾಗಿದ್ದು ಪ್ರಥಮ ಪಿಯು ವಿದ್ಯಾರ್ಥಿಗಳೆಲ್ಲರನ್ನೂ ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ನಂತರ ಮಾತನಾಡಿದ ಅವರು, ಪಿಯುಸಿ ಪರೀಕ್ಷೆ ಪ್ರಾರಂಭಿಸುವ 20 ದಿನಗಳೊಳಗಿ ದಿನಾಂಕ ಪ್ರಕಟಿಸುತ್ತೇವೆ. ವಿದ್ಯಾರ್ಥಿಗಳು ಯಾವ ಕಾರಣಕ್ಕೂ ವಿಚಲಿತರಾಗದೆ ಅಭ್ಯಾಸ ಮುಂದುವರಿಸಬೇಕು ಎಂದು ಹೇಳಿದ್ದಾರೆ.

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮುನ್ನ ಬ್ರಿಡ್ಜ್ ಕೋರ್ಸ್ ನಡೆಸಲಾಗುತ್ತದೆ. ಇದರೊಂದಿಗೆ ಇಲಾಖೆಯ ಯೂಟ್ಯೂಬ್ ಚಾನಲ್ ಮೂಲಕ ಬ್ರಿಡ್ಜ್ ಕೋರ್ಸ್ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪರೀಕ್ಷೆ ಮುಂದೂಡಿದ ಕಾರಣದಿಂದ ವಿದ್ಯಾರ್ಥಿಗಳೊಡನೆ ಸತತ ಸಂಪರ್ಕದಲ್ಲಿದ್ದು, ಉಪನ್ಯಾಸಕರು ವರ್ಕ್ ಫ್ರಮ್ ಹೋಮ್ ಮಾಡಬೇಕೆಂದು ಸಚಿವರು ಸೂಚಿಸಿದ್ದಾರೆ.

ಲಾಕ್ ಡೌನ್ ಮಾಡುವುದೊಂದೆ ಪರಿಹಾರ ಎಂದ ರಾಹುಲ್ ಗಾಂಧಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೊರೊನಾ ತಡೆಗಟ್ಟಲು ಲಾಕ್ ಡೌನ್ ಒಂದೇ ಪರಿಹಾರ ಎಂದು ಹೇಳಿದ್ದಾರೆ.

ಈ ಹಿಂದೆ ಲಾಕ್ ಡೌನ್ ನಿಂದ ದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಆದರೆ, ಸದ್ಯ ಕೊರೊನಾ ವಿರುದ್ಧ ಹೋರಾಡಲು ಲಾಕ್‍ ಡೌನ್ ಮಾಡುವುದೇ ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ದೇಶದಲ್ಲಿನ ಕೊರೊನಾ ಹಾವಳಿ ಗಮನಿಸಿದರೆ ಲಾಕ್ ಡೌನ್ ಒಂದೇ ಅಸ್ತ್ರವಾಗಿ ಕಾಣುತ್ತಿದೆ. ನ್ಯಾಯ ಯೋಜನೆಗಳ ಜೊತೆಗೆ ಲಾಕ್ ಡೌನ್ ಜಾರಿ ಮಾಡಬೇಕಿದೆ. ಸರ್ಕಾರದ ನಿಷ್ಕ್ರೀಯತೆಯಿಂದ ಅಮಾಯಕರು ಸಾವನ್ನಪ್ಪುತ್ತಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ದೆಶದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದಾಗಿ ಕೇಂದ್ರ ಸರ್ಕಾರ ಈ ಹಿಂದೆ ಲಾಕ್ ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್, ಯೋಜಿತವಲ್ಲದ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ವಲಸಿಗರು ಸಂಕಷ್ಟ ಅನುಭವಿಸಿದ್ದಾರೆ ಎಂದು ವಾಗ್ದಾಳಿ ನಡೆಸಿತ್ತು. ಸದ್ಯ ದೇಶದಲ್ಲಿ ಪ್ರತಿ ದಿನ ಮೂರರಿಂದ ನಾಲ್ಕು ಲಕ್ಷದ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಲಾಕ್ ಡೌನ್ ಒಂದೇ ಸದ್ಯದ ಅಸ್ತ್ರ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಎರಡು ತಿಂಗಳು ಉಚಿತ ಪಡಿತರ, ಆಟೋ – ಟ್ಯಾಕ್ಸಿ ಚಾಲಕರಿಗೆ ಸಹಾಯ ಧನ ಘೋಷಣೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೆಹಲಿಯಲ್ಲಿ ಮುಂದಿನ ಎರಡು ತಿಂಗಳುಗಳ ಕಾಲ ಉಚಿತ ಪಡಿತರ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ, ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರೂ. 5 ಸಾವಿರ ನಗದು ಸಹಾಯ ಧನ ನೀಡಲಾಗುವುದು ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

ಸದ್ಯ ದೆಹಲಿಯಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅಲ್ಲದೇ, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಜನರ ನೆರವಿಗೆ ಧಾವಿಸಿದೆ. ದೆಹಲಿಯಲ್ಲಿ 72 ಲಕ್ಷ ಪಡಿತರ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ರೇಷನ್ ವಿತರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಅಲ್ಲದೇ, ಎಲ್ಲ ಆಟೋ, ಟ್ಯಾಕ್ಸಿ ಚಾಲಕರಿಗೆ ರೂ. 5 ಸಾವಿರ ಆರ್ಥಿಕ ಸಹಾಯ ದೊರೆಯುತ್ತಿದೆ. ಈ ಸಹಾಯ ಸುಮಾರು 1.5 ಲಕ್ಷ ಜನರಿಗೆ ಸಿಗಲಿದೆ. ಹಿಂದಿನ ವಾರವೂ ದೆಹಲಿ ಸರ್ಕಾರ ಕಾರ್ಮಿಕ ವರ್ಗಕ್ಕೆ ನೆರವು ನೀಡಿದ್ದರು.

ಈ ವಿಷಯವಾಗಿ ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಬಡವರಿಗೆ ಎರಡು ತಿಂಗಳ ಪಡಿತರ ನೀಡುತ್ತಿರುವುದರಿಂದ ಅಷ್ಟು ದಿನ ಲಾಕ್ ಡೌನ್ ಮಾಡುತ್ತೇವೆ ಎಂದಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ಸಡಿಲಿಕೆ ಮಾಡುತ್ತೇವೆ. ಸದ್ಯದಲ್ಲಿಯೇ ಲಾಕ್ ಡೌನ್ ತೆರವುಗೊಳ್ಳಲಿದೆ. ಕೊರೊನಾ ವಿಷಯದಲ್ಲಿ ದೆಹಲಿ ಸಂಕಷ್ಟದಲ್ಲಿದೆ. ಆರ್ಥಿಕವಾಗಿ ಸದೃಢರಾಗಿರುವ ಸಶಕ್ತರು ಸಹಾಯಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.

ಕೊರೊನಾ ಹಾವಳಿ; ಐಪಿಎಲ್ ಪಂದ್ಯಾವಳಿಗೆ ಬ್ರೇಕ್

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿಯನ್ನು ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸದ್ಯ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಅಲ್ಲದೇ, ದಿನದಿಂದ ದಿನಕ್ಕೆ ಆಟಗಾರರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ವಿವಿಧ ತಂಡಗಳ ಆಟಗಾರರು ಸೇರಿದಂತೆ 7 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ನಿನ್ನೆ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಬೆಂಗಳೂರು ತಂಡದ ಪಂದ್ಯವನ್ನು ಕೂಡ ಕೊರೊನಾ ಆಹುತಿ ಮಾಡಿಕೊಂಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರು ತಂಡದ ನಡುವೆ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಇಂದು ಹೈದ್ರಾಬಾದ್ ತಂಡ ಹಾಗೂ ಮುಂಬಯಿ ತಂಡದ ನಡುವೆ ಪಂದ್ಯಗಳು ನಡೆಯಬೇಕಿತ್ತು. ಆದರೆ, ಬಿಸಿಸಿಐ ಪಂದ್ಯವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದೆ.

ಐಪಿಎಲ್ ಬೆಟ್ಟಿಂಗ್; ಪಟ್ಟಣ ಪಂಚಾಯತಿ ಸದಸ್ಯ ಪರಾರಿ, ಮೂವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಬೆಟ್ಟಿಂಗ್ ಭೂತ ಯಾರನ್ನು ಬಿಟ್ಟಿಲ್ಲ. ಬೆಟ್ಟಿಂಗ್ ಅನ್ನೋ ಮಾಫಿಯಾ ಎಲ್ಲರನ್ನು ತನ್ನ ಕಬಂಧಬಾಹುದಲ್ಲಿ ಇಟ್ಟುಕೊಂಡಿದೆ.

ಅದರಲ್ಲೂ ಈ ಐಪಿಎಲ್ 20-20 ಮ್ಯಾಚ್ ಎಲ್ಲರನ್ನೂ ಅಪೋಶನ್ ತಗೊಂಡಿದೆ.

ಧಿಡರನೇ ಶ್ರೀಮಂತ ರಾಗಬೇಕು ಅನ್ನೋ ಹುಚ್ಚೋ ಅಥವಾ ಅದೊಂದು ಫ್ಯಾಷನ್ ಆಗಿದೆಯೋ ಗೊತ್ತಿಲ್ಲ.

ಇಂತಹ ಹುಚ್ಚಗೆ ಬಿದ್ದ ಪಟ್ಟಣ ಪಂಚಾಯತಿ ಸದಸ್ಯನೊಬ್ಬ ಬೆಟ್ಟಿಂಗ್ ನಲ್ಲಿ ತೊಡಗಿ ಪೊಲೀಸರ ದಾಳಿಯಿಂದ ಸ್ವಲ್ಪದರಲ್ಲೆಯೇ ಪಾರಾಗಿದ್ದಾನೆ.

ಹೌದು ಭಾನುವಾರ ನಡೆದ ದೆಹಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಒಂದಕ್ಕೆ ಎರಡು ಪಟ್ಟು ನೀಡುವದಾಗಿ ಮುಳಗುಂದ ಪಟ್ಟಣದ ಶ್ರೀ ಬಾಲಲೀಲಾ ಕಲ್ಯಾಣ ಮಂಟಪದ ಮುಂದೆ ನಿಂತು ಪಟ್ಟಣ ಪಂಚಾಯತಿ ಸದಸ್ಯ ಬಸವರಾಜ್ ಶಿವನೆಪ್ಪ ಹಾರೋಗೇರಿ, ಶರಣಪ್ಪ ನೀಲಪ್ಪ ಮಳ್ಳಿ, ಪ್ರದೀಪ್ ಬಸವರಾಜ್ ಭಜಂತ್ರಿ, ನಜೀರ್ ಅಹ್ಮದ್ ಅಬ್ದುಲ್ ಕರೀಮ್ ಸಾಬ್ ಡಾಲಾಯತ್ ಎಂಬುವವರು ಬೆಟ್ಟಿಂಗ್ ನಲ್ಲಿ ತೊಡಗಿದ್ದರು.

ಖಚಿತ ಮಾಹಿತಿ ಪಡೆದ ಮುಳಗುಂದ ಠಾಣೆಯ ಪಿಎಸ್ಐ ಸಚಿನ್ ಅಲಮೇಲಕರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು. ದಾಳಿ ಕಾಲಕ್ಕೆ ಪಟ್ಟಣ ಪಂಚಾಯತಿ ಸದಸ್ಯ ಬಸವರಾಜ್ ಶಿವನೆಪ್ಪ ಹಾರೋಗೇರಿ ಪರಾರಿಯಾಗಿದ್ದು, ಉಳಿದ ಮೂವರು ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಬಂಧಿತರಿಂದ ಮೂರು ಮೊಬೈಲ್ ಹಾಗೂ 10 ಸಾವಿರಕ್ಕೂ ಹೆಚ್ಚು ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!