Home Blog Page 3049

ಕೊಪ್ಪಳದಲ್ಲಿ ಮದುಮಗಳಿಗೆ ಕೊರೋನಾ! ಮದುವೆಗೆ ಹೋದವರಿಗೆ ಆತಂಕ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮದುಮಗಳು ಹಾಗೂ ಆಕೆಯ ತಾಯಿ ಹಾಗೂ ಸಹೋದರಿಯರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಮದುವೆಗೆ ಹೋದವರಿಗೆ ಇದೀಗ ಆತಂಕ ಶುರುವಾಗಿದೆ.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಯುವತಿ ಮದುವೆಗೂ ಮುನ್ನ ಕೊರೋನಾ ಟೆಸ್ಟ್ ಗೆ ಗಂಟಲು ದ್ರವ ನೀಡಿ ಬಂದಿದ್ದರು. ಮದುವೆಯಾದ ಬಳಿಕ ಅಂದರೆ ಭಾನುವಾರ ಯುವತಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ.

ಸದ್ಯ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಿನ್ನಾಳ ಗ್ರಾಮದ 4ನೇ ವಾರ್ಡ್ ನಲ್ಲಿರುವ ಮದುಮಗಳ ಮನೆಯ ಸುತ್ತ ಸ್ಯಾನಿಟೈಸ್ ಮಾಡಲಾಗಿದೆ.

ಸಾರಿಗೆ ಸಂಸ್ಥೆ ಬಸ್ ಡಿಕ್ಕಿ; 8 ವರ್ಷದ ಬಾಲಕಿ ದಾರುಣ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಆಟೋದಿಂದ ಇಳಿದು ರಸ್ತೆ ದಾಟುವಾಗ ಬಸ್ ನಡಿ ಸಿಲುಕಿ 8 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ನಡೆದಿದೆ. ರೇಖಾ ಬಣದಾರಿ ಮೃತ ಬಾಲಕಿ.

ಮುಂಡರಗಿಯಿಂದ ಗದಗ ನಗರಕ್ಕೆ ಬರುತ್ತಿದ್ದ ಕೆಎ 42-ಎಫ್ 634 ಸಂಖ್ಯೆಯ ಸಾರಿಗೆ‌ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ‌ ಮುಗಿಲುಮುಟ್ಟಿದೆ. ಇನ್ನು ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಅಂತ ಸ್ಥಳೀಯರು ಆಕ್ರೋಶ ‌ಹೊರಹಾಕಿದರು. ಚಾಲಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಬೆಟ್ಟಿಂಗ್; ಶ್ರೀನಿವಾಸ, ಪ್ರದೀಪ್, ಸನಾವುಲ್ಲಾ ಸೇರಿದಂತೆ 7 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಭಾನುವಾರ ನಡೆದ ದೆಹಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯಕ್ಕೂ ಮೊದಲು ಇಂತಿಷ್ಟೇ ಸ್ಕೋರ್ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಶಹರ ಠಾಣೆಯ ಪಿಎಸ್ಐ ಪ್ರಕಾಶ್ ಡಿ ಹಾಗೂ ಸಿಬ್ಬಂದಿ ದಾಳಿ ಮಾಡಿ 7 ಜನರನ್ನು ಬಂಧಿಸಿದ್ದಾರೆ.

ಮುಂಡರಗಿ ರಸ್ತೆಯ ಡಾ.ಅಂಬೇಡ್ಕರ್ ಸರ್ಕಲ್ ಬಳಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಶ್ರೀನಿವಾಸ ವಿಶ್ವನಾಥ ಹಬೀಬ್, ವಿನಾಯಕ ರಾಮಚಂದ್ರಸಾ ಬದಿ, ಪ್ರದೀಪ್ ಹನಮಂತಸಾ ಮೇಘರಾಜ್, ಸನಾವುಲ್ಲಾ ಅಬ್ದುಲ್ ಸವಣೂರು, ಮಧು ತುಳಿಸಿನಾಥ್ ಮೇರೆವಾಡೆ, ಪ್ರಸನ್ನ ಕಬಾಡಿ ಹಾಗೂ ಅಮಿತ್ ಪೂಜಾರಿ ಬಂಧಿತ ಆರೋಪಿಗಳು.

ಅವರಿಂದ 10 ಮೊಬೈಲ್ ಹಾಗೂ 14250 ರೂ, ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ; ಮಾಜಿ ಮೇಯರ್ ಮಾಡಿದ ಕೆಲಸ ಎಂತಹದು ನೀವೆ ನೋಡಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು‌ ಹೋಗಿ ಬೈಕ್ ಸವಾರರು ಕಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದವರನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್ ಮಾನವೀಯತೆ ಮೆರೆದ ಘಟನೆ ಭಾನುವಾರ ಜರುಗಿದೆ.

ಉಣಕಲ್ ಕೆರೆಯ ಎದುರಿಗಿರುವ ಪ್ರೆಸಿಡೆಂಟ್ ಹೋಟೆಲ್ ಮುಂಭಾಗದಲ್ಲಿ ಬಂದೋಬಸ್ತಗಾಗಿ ನಿಂತಿದ್ದ ಪೊಲೀಸರಿಂದ ತಪ್ಪಿಸಿಕೊಂಡು,
ಹೋಗಲು ಯತ್ನಿಸಿದ ಬೈಕ್ ಸವಾರರಿಬ್ಬರು ಹುಬ್ಬಳ್ಳಿಯತ್ತ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಆದ್ರೆ ಅದೇ ಮಾರ್ಗವಾಗಿ ಬರುತ್ತಿದ್ದ ಮಾಜಿ ಮೇಯರ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ಪಾಟೀಲ್, ಬೈಕ್ ಸವಾರರಿಬ್ಬರು ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದಾಗ ತಮ್ಮದೇ ವಾಹನದಲ್ಲಿ ಅವರನ್ನ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ತಮ್ಮ ವೈಯಕ್ತಿಕ ಕೆಲಸವನ್ನು ಲೆಕ್ಕಿಸದೆ ಯುವಕರ ಪ್ರಾಣ ಉಳಿಸಲು ಮುಂದಾದ ಅನಿಲಕುಮಾರ ಪಾಟೀಲ ಕಾರ್ಯಕ್ಕೆ ಸಾರ್ವಜನಿಕರು ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಹಿಂದೂ ವ್ಯಕ್ತಿಯ ಅಂತಿಮ ಸಂಸ್ಕಾರವನ್ನು ಮುಸ್ಲಿಂ ಯುವಕರು ನೆರವೇರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ವಿಕಾಸನಗರದ ೮೫ ವರ್ಷದ ವೃದ್ದ ಸಾವನ್ನಪ್ಪಿದ ದುರ್ದೈವಿ. ವಿಠ್ಠಲರಾವ್ ಮಹೇಂದ್ರಕರ್ ಕೆಲದಿನಗಳಿಂದ ಅಸ್ವಸ್ಥರಾಗಿದ್ದರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ನಿನ್ನೆ ಸಾಯಂಕಾಲ ಸಾವನ್ನಪ್ಪಿದ್ದರು. ಅವರ ಮಗ ಗಿಣಗೇರಿಯ ಅಲ್ಟ್ರಾಟೆಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೂ ಕೂಡ ಕೊರೋನಾ ಪಾಸಿಟಿವ್ ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮೃತರ ಅಂತ್ಯಕ್ರಿಯೆ ನೆರವೇರಿಸಲು ಯಾರೂ ಮುಂದೆ ಬಾರದ ಕಾರಣಕ್ಕೆ
ಕೊಪ್ಪಳದ ಜಮಾತೇ ಇಸ್ಲಾಂನ ಸಂಘಟನೆಯ ಹ್ಯುಮಾನೇಟಿರಿಯನ್ ರೀಲಿಪ್ ಸೊಸೈಟಿಯ ಕಾರ್ಯಕರ್ತರು ಅಂತ್ಯಕ್ರಿಯೆ ನೆರವೇರಿಸಿದರು.

ದಾವಣಗೆರೆಯಿಂದ ಬಂದಿದ್ದ ಅವರ ಸಂಬಂಧಿಯ ಸಮ್ಮುಖದಲ್ಲಿ
ಹಿಂದೂ ಪದ್ಧತಿಯಂತೆ ಗವಿಮಠದ ಹಿಂಭಾಗದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ
ಕುಟುಂಬಸ್ಥರ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಅಂಬುಲೆನ್ಸ ಚಾಲಕ ವಿಕಾಸ ನಗರದಿಂದ ಸ್ಮಶಾನಕ್ಕೆ ಮೃತ ದೇಹ ತರಲು ೧೨ ಸಾವಿರ ಬೇಡಿಕೆ ಇಟ್ಟಿದ್ದಾನೆ. ರಾತ್ರಿ ವೇಳೆ ಕೊಡಲು ದುಡ್ಡಿಲ್ಲದ ಕುಟುಂಬಸ್ಥರು ೮ ಸಾವಿರ ಕೊಟ್ಟು ಬೆಳಿಗ್ಗೆ ೪ ಸಾವಿರ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ಒಂದೆಡೆ ಅಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದ್ದರೆ ಮಾನವೀಯತೆ ಮೆರೆದ
ಮುಸ್ಲಿಂ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಇದರಲ್ಲಿ ಜಮಾತ್ ನ ಅಧ್ಯಕ್ಷ ಸಯ್ಯದ್ ಹಿದಯತ್ ಅಲಿ, ಗ್ರೂಪ್ ಲೀಡರ್ ಮಹಮ್ಮದ್ ಖಲೀಲ್, ಅಸ್ಗರ್ ಖಾನ್, ಗೌಸ್ ಪಟೇಲ್, ಸಜೀದ್ ಹುಸೇನ್, ರಹಮತ್ ಹುಸೈನ್, ಮಹಮ್ಮದ್ ಅಖೀಲ್ ಎಸ್ ಐ ಓ ಸದಸ್ಯರು ಭಾಗವಹಿದ್ದರು.

ಭಾರತ್ ಗ್ಯಾಸ್ ಅಂಗಡಿಗೆ ಬೆಂಕಿ; ಸಿಲಿಂಡರ್ ಸ್ಫೋಟ

ವಿಜಯಸಾಕ್ಷಿ ಸುದ್ದಿ, ಗದಗ

ಭಾರತ್ ಗ್ಯಾಸ್ ಅಂಗಡಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲವಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರ ಬ್ಯಾಂಕ್ ರಸ್ತೆಯಲ್ಲಿನ ಜನತಾ ಬಜಾರ್ ಎದುರಿಗೆ ಇರುವ ಭಾರತ್ ಗ್ಯಾಸ್ ಎಜೆನ್ಸಿ ಅಂಗಡಿಗೆ ಬೆಂಕಿ ಬಿದ್ದಿದೆ.

ನಿನ್ನೆಯಿಂದ ಎರಡು ದಿನಗಳ ಕಾಲ ಬಂದ್ ಇದ್ದ ಅಂಗಡಿಯಲ್ಲಿ ಇಂದು ಸಂಜೆ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಇದ್ದಕ್ಕಿದ್ದಂತೆ ಅಂಗಡಿ ಹೊತ್ತಿ ಉರಿದಿದೆ. ಪರಿಣಾಮ ಅಂಗಡಿಯೊಳಗಿನ ಕಂಪ್ಯೂಟರ್ ಗಳು, ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ‌ ನಂದಿಸಿದ್ದಾರೆ.

ಆದ್ರೆ ಜನಸಂದನಿಯೊಳಗಿರುವ ಅಂಗಡಿಯಲ್ಲಿ ಹಲವು ತುಂಬಿದ ಗ್ಯಾಸ್ ಸಿಲಿಂಡರ್ ಗಳಿದ್ದವು, ಅದರಲ್ಲಿ ಕೇವಲ ಒಂದೇ ಸಿಲಿಂಡರ್ ಗೆ ಬೆಂಕಿ ತಗುಲಿ ಸ್ಪೋಟಗೊಂಡಿದೆ. ಪರಿಣಾಮ ಅಂಗಡಿಯೊಳಗಿನ ಗಾಜುಗಳು ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಹಲವಾರು ಸಿಲಿಂಡರ್ ಗಳಿದ್ದು ಅವುಗಳಿಗೆ ಬೆಂಕಿ ತಗುಲಿಲ್ಲ. ಅಕಸ್ಮಾತ್ ಉಳಿದ ಎಲ್ಲಾ ಸಿಲಿಂಡರ್ ಗಳಿಗೆ ಬೆಂಕಿ ತಗುಲಿ ಸ್ಪೋಟಗೊಂಡಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು‌.

ಇನ್ನು ಸಮೀಪದ ವಿದ್ಯುತ್ ಕಂಬದಲ್ಲಿ ಕಂಡ‌ ಬೆಂಕಿ ಕಂಡು ಬಂದ ತಕ್ಷಣವೇ ಹೆಸ್ಕಾಂ ಸಿಬ್ಬಂದಿ ಸರಿಪಡಿಸುವ ವೇಳೆ ಆಗಲೇ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರಾದ ಅನ್ವರ ಶಿರಹಟ್ಟಿ, ಉಮರಫಾರೂಕ್ ಹುಬ್ಬಳ್ಳಿ, ರಫೀಕ ಅಬ್ಬಿಗೇರಿ ಸೇರಿದಂತೆ ಸ್ಥಳೀಯರು ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಶ್ರಮಿಸಿದರು.

ಎಮ್ ಎಸ್ ಭೂಸ್ತ ಎಂಬುವರಿಗೆ ಈ ಅಂಗಡಿ ಸೇರಿದ್ದು, ನಗರ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕೊರೋನಾ;
ಭಾನುವಾರವೂ 76 ಜನರಿಗೆ ಸೋಂಕು; 63 ಜನರು ಬಿಡುಗಡೆ

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 25 ಭಾನುವಾರ ಜಿಲ್ಲೆಯಲ್ಲಿ 76 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಗದಗ ನಗರ ಹಾಗೂ ತಾಲೂಕಿನಲ್ಲಿ 39 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 09, ನರಗುಂದದ 00, ರೋಣ ತಾಲೂಕಿನಲ್ಲಿ-16, ಹಾಗೂ ಶಿರಹಟ್ಟಿ ತಾಲೂಕಿನ-11, ಹೊರಜಿಲ್ಲೆಯ 01 ಜನರಿಗೆ ಸೋಂಕು ತಗುಲಿದೆ.

ಭಾನುವಾರ 76 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 12103 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 63 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11464 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 498 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 228 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 333168 ಮಾದರಿಗಳಲ್ಲಿ 320837 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳ್ಳಂಬೆಳಿಗ್ಗೆ ಮಟನ್ ಶಾಪ್ ಗಳ ಮೇಲೆ ದಾಳಿ; ಆರು ಜನ ವಶಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ಮಾಂಸ ಮಾರಾಟ ಮಾಡದಂತೆ ನೋಟಿಸ್ ನೀಡಿದರೂ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಹಾಗೂ ಪೊಲೀಸರು ದಾಳಿ ಮಾಡಿ 6 ಜನರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಮಹಾವೀರ ಜಯಂತಿ ಇರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಮಾಡದಂತೆ ಎರಡು ದಿನಗಳ ಹಿಂದೆ ಮಾಂಸದ ‌ವ್ಯಾಪಾರಸ್ಥರಿಗೆ ತಿಳಿವಳಿಕೆ ‌ನೀಡಿ ನೋಟಿಸ್ ಕೂಡ ನೀಡಲಾಗಿತ್ತು.

ಆದರೆ ಇಂದು ಬೆಳ್ಳಂಬೆಳಿಗ್ಗೆ ಜವಳಗಲ್ಲಿ ಹಾಗೂ ಸರಾಫ್ ಬಜಾರನಲ್ಲಿ ಮಾಂಸದ ವ್ಯಾಪಾರ ಜೋರಾಗಿತ್ತು. ಇದನ್ನು ಕಂಡ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡಿ ಮಾಂಸ ಹಾಗೂ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ನಿನ್ನೆ ವೀಕೆಂಡ್ ಕರ್ಫ್ಯೂ ಜಾರಿ ಇದ್ರೂ ಮಟನ್ ಪ್ರಿಯರಿಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಆದರೆ ಇವತ್ತು ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸಹಾರ ಮಾರಾಟಕ್ಕೆ ನಗರಸಭೆ ಅಧಿಕಾರಿಗಳು ಬ್ರೇಕ್ ಹಾಕಿದ್ದರು. ಆದರೂ ನೋಟಿಸ್ ಕೇರ್ ಮಾಡದೇ ಮಾರಾಟಕ್ಕೆ ಮುಂದಾದ ವ್ಯಾಪಾರಸ್ಥರಿಗೆ‌ ಈಗ ಬಿಸಿಮುಟ್ಡಿದೆ.

ಶಿರಹಟ್ಟಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಭರ್ಜರಿ ಸಂತೆ

0

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಇದೆ. ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಬೆಳಿಗ್ಗೆ ಆರು ಗಂಟೆಯಿಂದ ನಾಲ್ಕು ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗಿದೆ.

ಕೋವಿಡ್ ನಿಯಮಾವಳಿ ಪಾಲಿಸಿ ವ್ಯಾಪಾರ, ವಹಿವಾಟು ನಡೆಸಬೇಕಿದ್ದ ತರಕಾರಿ ‌ವ್ಯಾಪಾರಿಗಳು, ಹಾಗೂ ಜನರು ಮುಗಿಬಿದ್ದಿದ್ದಾರೆ.

ಜಿಲ್ಲೆಯ ಶಿರಹಟ್ಟಿ ಪಟ್ಟಣದ ಪುರಸಭೆಯ ಕೂಗಳತೆಯಲ್ಲಿ ಇರುವ ಸರಕಾರಿ ಶಾಲೆಯ ಆವರಣದಲ್ಲಿ ಜನಜಾತ್ರೆಯೇ ಸೇರಿದೆ. ಬೆಳ್ಳಂಬೆಳಿಗ್ಗೆ ಆರಂಭಗೊಂಡ ತರಕಾರಿ ವ್ಯಾಪಾರ ಒಂಬತ್ತು ‌ಗಂಟೆಯಾದರೂ ಜೋರಾಗಿತ್ತು. ಸಾಮಾಜಿಕ ಅಂತರ, ಕೆಲ ಜನರು ಮಾಸ್ಕ್ ಹಾಕದೇ‌ ತರಕಾರಿ ಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದರು.

ಆದರೆ ಇದನ್ನೆಲ್ಲಾ ತಡೆಯಬೇಕಾದ ಅಧಿಕಾರಿಗಳು ಮಾತ್ರ ಇತ್ತ ಸುಳಿದಿರಲಿಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಬುಸಾಬ ಲಕ್ಷ್ಮೇಶ್ವರ ಹಾಗೂ ತಾಲೂಕು ಅಧ್ಯಕ್ಷ ಶಬ್ಬೀರ ನಗಾರಿ, ಕಾರ್ಯದರ್ಶಿ ಆನಂದ ಕೋಳಿ, ಉಪಾಧ್ಯಕ್ಷ ಮಹಮ್ಮದ್ ರಫೀಕ ಛಬ್ಬಿ, ಹಿರಿಯರಾದ ನಿಂಗಪ್ಪ ತಳವಾರ ಆರೋಪಿಸಿದ್ದಾರೆ.

ಕೊರೋನಾ; ಶನಿವಾರ 76 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 24 ಶನಿವಾರ ಜಿಲ್ಲೆಯಲ್ಲಿ 76 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಗದಗ ನಗರ ಹಾಗೂ ತಾಲೂಕಿನಲ್ಲಿ 35 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 04, ನರಗುಂದದ 20, ರೋಣ ತಾಲೂಕಿನಲ್ಲಿ-03, ಹಾಗೂ ಶಿರಹಟ್ಟಿ ತಾಲೂಕಿನ-11, ಹೊರಜಿಲ್ಲೆಯ 03 ಜನರಿಗೆ ಸೋಂಕು ತಗುಲಿದೆ.

ಶನಿವಾರ 76 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 12027 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 51 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11401 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಜಿಲ್ಲೆಯಲ್ಲಿ 485 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 423 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 331581 ಮಾದರಿಗಳಲ್ಲಿ 319131 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!