Home Blog Page 3053

ಬೆಟಗೇರಿಯಲ್ಲಿ ಅಂದರ್-ಬಾಹರ್ ಜೂಜಾಟ; ಖಾಸಗಿ ನೌಕರರು ಸೇರಿದಂತೆ ಐವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಎಲೆಕ್ರ್ಟೇಶಿಯನ್, ಅಟೋ ಡ್ರೈವರ್, ಖಾಸಗಿ ಕಂಪನಿಯ ಇಬ್ಬರು ನೌಕರರು ಸೇರಿದಂತೆ ಐದು ಜನರು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬೆಟಗೇರಿಯ ಕುರಹಟ್ಟಿಪೇಟಿಯ ರೈಲ್ವೆ ಹಳಿಯ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ಶ್ರೀಧರ್ ಅಲಿಯಾಸ್ ಮಂಜುನಾಥ್ ನಾಗಪ್ಪ ಮೆಣಸಗಿ, ವಿರೇಶ್ ಮರಿಯಪ್ಪ ಸೊಲಗಿ, ಕೃಷ್ಣಪ್ಪ ರಾಮಪ್ಪ ಚಲವಾದಿ, ಕಿರಣಕುಮಾರ್ ಈರಣ್ಣ ಗಂಜಿ, ಮನೋಹರ ಯಲ್ಲಪ್ಪ ಪಾಂಚಾಳ ಎಂಬುವವರನ್ನು ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ ನಗದು 12 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಎಸ್ ಪಾಟೀಲ್ ನಗರದ ಬಳಿ ಇಸ್ಪೀಟು ಜೂಜಾಟ; 7 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಏಳು ಜನರ ತಂಡವೊಂದು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಅವರಿಂದ ನಗದು ಹಣ ವಶಪಡಿಸಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಎಸ್ ಎಸ್ ಪಾಟೀಲ್ ನಗರದ ಬಳಿ ಅಶೋಕ ಫಕ್ಕೀರಪ್ಪ ಹಳ್ಳಿ, ಈರಣ್ಣ ಶಂಕ್ರಪ್ಪ ಇನಾಮಾದಾರ್, ನಾಗಾರಾಜ್ ಹೆಗ್ಗಪ್ಪ ಕೌಜಗೇರಿ, ಕನಕರಾಜ್ ವೆಂಕಪ್ಪ ಕಟ್ಟಿಮನಿ, ನಿಂಗಪ್ಪ ಬಸನಗೌಡ್ ಕದ್ರಳ್ಳಿ, ವೆಂಕಟೇಶ್ ಹನಮಂತಪ್ಪ ಶಿಂದೋಗಿ ಹಾಗೂ ಈರಪ್ಪ ಕಾಳಪ್ಪ ಹಮ್ಮಗಿ ಎಂಬುವವರು ಇಸ್ಪೀಟು ಜೂಜಾಟದಲ್ಲಿ ತೊಡಗಿದ ಖಚಿತ ಮಾಹಿತಿ ಮೇರೆಗೆ ಮುಂಡರಗಿ ಠಾಣೆಯ ಇನ್ಸ್‌ಪೆಕ್ಟರ್ ಸುಧೀರ್ ಕುಮಾರ್ ಬೆಂಕಿ ಅವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಬಂಧಿಸಿ, ಅವರಿಂದ‌ ನಗದು 1520 ರೂ, ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತಂತೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಡೀ ಭಾರತದಿಂದ ಕೊರೋನಾ ತೊಲಗಲಿ; ಯುಗಾದಿ ಶುಭಾಶಯ ತಿಳಿಸಿದ ಮಹಾಮಂಡಳ ರಾಜ್ಯಾಧ್ಯಕ್ಷ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಡೀ ಭಾರತದಿಂದ ಕೊರೋನಾ ಮುಕ್ತಿ ಪಡೆದು ಎಲ್ಲರೂ ಕ್ಷೇಮ ಹಾಗೂ ಆರೋಗ್ಯವಾಗಿರಲಿ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಅವರು ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಶುಭಕೋರಿದ ಅವರು, ತಂದೆ ತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದಮನೋವಾಂಛ ಫಲಗಳನ್ನು ಈಡೇರಿಸಿ ನಮ್ಮನ್ನು ಕಾಡುತ್ತಿರುವ ಕೊರೋನಾ ಭಾರತದಿಂದ ತೊಲಗಿ, ಹೊಸ ಕಾಲದ ಆದಿಯೇ,
ಲೋಕದ ಜನರ ಕಷ್ಟಗಳ ನೀಗುತ್ತಾ ಬಾ…
ಆರೋಗ್ಯದ ಭಾಗ್ಯವನ್ನು ಕರುಣಿಸು ಬಾ…
ಎಲ್ಲರ ಬಾಳಲ್ಲಿ ಹೊಸ ವರ್ಷದ ಉತ್ಸಾಹ ತುಂಬುತ್ತಾ ಬಾ.

ಈ ಹೊಸತನ, ನಿರೀಕ್ಷೆ, ಭರವಸೆಗಳನ್ನು ಹೊತ್ತು ಕಳೆದ ವರ್ಷದ ತೊಡಕುಗಳು ಈ ಹೊಸ ವರ್ಷ ನೀಗಲಿ. ಬೇವು-ಬೆಲ್ಲದ ಅನುಭವಗಳು ಈ ವರ್ಷ ಸಮನಾಗಿರಲಿ ಎಂದರು.

ಈ ಶುಭ ವರ್ಷ ಎಲ್ಲರಿಗೂ ಒಳಿತು ತರಲೆಂದು ಭಗವಂತನಲ್ಲಿ ನಾನು ಕೋರುತ್ತೇನೆ ಎಂದು ನಾಡಿನ ಸಮಸ್ತರಿಗೂ ಯುಗಾದಿ-ಹೊಸ ವರ್ಷದ ಶುಭಾಶಯಗಳನ್ನು ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ತಿಳಿಸಿದ್ದಾರೆ

ಕೊರೋನಾ ಎರಡನೇ ಅಲೆ ಹೊಡೆತ; ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಕೊರೋನಾ ಎರಡನೆ ಅಲೆ ವೇಗವಾಗಿ ಹರಡುತ್ತಿದ್ದು, ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಗದಗ ನಗರ ಹಾಗೂ ತಾಲೂಕಿನ ಒಟ್ಟು 21 ಜನರಿಗೆ ಸೋಂಕು ವ್ಯಾಪಿಸಿದೆ. ಅದೇ ರೀತಿ ಮುಂಡರಗಿಯ 03, ನರಗುಂದದ 01, ರೋಣ ತಾಲೂಕಿನಲ್ಲಿ 04 ಜನರಿಗೆ ಕೊರೊನಾ ವ್ಯಾಪಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಒಂದೇ ದಿನ 29 ಜನರಿಗೆ ಸೋಂಕು ವ್ಯಾಪಿಸುವ ಮೂಲಕ ಈವರೆಗೆ ಒಟ್ಟುಸೋಂಕಿತರ ಸಂಖ್ಯೆ 11381ಕ್ಕೆ ಏರಿಕೆಯಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇದುವರೆಗೂ 11117 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 123 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 96 ಜನರ ವರದಿ ಬರಲು ಬಾಕಿ ಇದೆ. ಇದುವರೆಗೂ ಸೋಂಕಿನಿ ಪರೀಕ್ಷೆಗಾಗಿ ಸಂಗ್ರಹಿಸಿದ 310123 ಮಾದರಿಗಳಲ್ಲಿ 298646 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗದಗನಿಂದ 20 ಬಸ್ ಗಳ ಸಂಚಾರ ಆರಂಭ; ಗ್ರಾಮೀಣ ಭಾಗಕ್ಕಿನ್ನೂ ಇಲ್ಲ ಸರ್ಕಾರಿ ಬಸ್

0

ವಿಜಯಸಾಕ್ಷಿ ಸುದ್ದಿ, ಗದಗ: ಸಾರಿಗೆ ನೌಕರರ ಸತತ 6 ದಿನದ ಮುಷ್ಕರದ ನಡುವೆ ಇಂದು ಗದಗನಿಂದ ಕೆಲ ಬಸ್ ಗಳ ಸಂಚಾರ ಆರಂಭವಾಗಿದೆ. ಗದಗನ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದಿಂದ 20 ಬಸ್ ಗಳ ಸಂಚಾರ ಆರಂಭಗೊಂಡಿದೆ.

ಗದಗ- ಹುಬ್ಬಳ್ಳಿ ಹಾಗೂ ಗದಗ- ಮುಂಡರಗಿ ಮಾರ್ಗವಾಗಿ ಮಾತ್ರ ಈ ಬಸ್ ಗಳು ಸಂಚಾರ ಆರಂಭಿಸಿದ್ದು, ಗ್ರಾಮೀಣ ಭಾಗಕ್ಕಿನ್ನೂ ಬಸ್ ವ್ಯವಸ್ಥೆ ಆಗಿಲ್ಲ. ಹೀಗಾಗಿ ಗದಗ ಜಿಲ್ಲಾ ಕೇಂದ್ರದಿಂದ ಗ್ರಾಮೀಣ ಭಾಗಕ್ಕೆ ಹೋಗಲು ಪ್ರಯಾಣಿಕರು ಪರದಾಡುತ್ತಿದ್ದಾರೆ.

ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕವೇ ಪ್ರಯಾಣ ಮಾಡುತ್ತಿದ್ದು, ಗ್ರಾಮೀಣ ಭಾಗಕ್ಕೂ ಸಹ ಬಸ್ ಸಂಚಾರ ಆರಂಭವಾಗಲಿ ಎಂದು ಒತ್ತಾಯಿಸುತ್ತಿದ್ದಾರೆ.

ಕೊರೊನಾ ಇದ್ದರೂ ಜನರಿಂದ ಡೋಂಟ್ ಕೇರ್; ಮಾಸ್ಕ್, ಸಾಮಾಜಿಕ ಅಂತರ ಮರೆತು ವಸ್ತುಗಳ ಖರೀದಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಬ್ಬರ ಮುಂದುವರೆಸಿರುವ ಈ ಸಂದರ್ಭದಲ್ಲಿ ಜನ ಮೈಮರೆತು ಹಬ್ಬದ ಶಾಪಿಂಗ್ ಮೂಡ್ ನಲ್ಲಿರುವ ದೃಶ್ಯಗಳು ಕಂಡುಬಂದಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿ ಜನ ಕೊರೊನಾ ಇರುವುದನ್ನೂ ಮರೆತು, ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಗುಂಪು ಗುಂಪಾಗಿ ಸೇರಿ ತರಕಾರಿ, ಹಣ್ಣು, ಹೂವು ಖರೀದಿ ಮಾಡಿದ್ದಾರೆ. ಹೀಗಾಗಿ ಗ್ರೇನ್ ಮಾರುಕಟ್ಟೆಯಲ್ಲಿ ಜನಜಂಗುಳಿ ಉಂಟಾಗಿದ್ದು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆಯನ್ನೂ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ.

ಕೆಲವರು ಮಾಸ್ಕ್ ಹಾಕಿದ್ರೆ ಇನ್ನು ಕೆಲವರು ಮಾಸ್ಕ್ ಹಾಕಬೇಕೆನ್ನುವ ಗೋಜಿಗೆ ಹೋಗದ ದೃಶ್ಯಗಳು ಕಂಡುಬಂತು. ಜಿಲ್ಲಾಡಳಿತ ಕೊರೊನಾ ಕುರಿತು ಜಾಗೃತರಾಗಿರುವಂತೆ ಮನವಿ ಮಾಡಿದ್ರೂ, ಜಿಲ್ಲಾಡಳಿತದ ಮನವಿಗೂ ಜನ್ರು ಡೋಂಟ್ ಕೇರ್ ಎಂದಿದ್ದಾರೆ.

ಅನೈತಿಕ ಸಂಬಂಧ ; ಮಾರಾಕಾಸ್ತ್ರದಿಂದ ಯುವಕನ ಕೊಲೆ‌

ವಿಜಯಸಾಕ್ಷಿ ಸುದ್ದಿ, ಗದಗ

ಮಾರಾಕಾಸ್ತ್ರದಿಂದ ಯುವಕನೊಬ್ಬನನ್ನು ಕೊಲೆ ಮಾಡಿ ಜಮೀನಿನಲ್ಲಿ ಎಸೆದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಮರಿಯಪ್ಪ ತಳಗೇರಿ (೩೦) ಎಂಬಾತನೇ ಕೊಲೆಯಾದ ಯುವಕನಾಗಿದ್ದು, ಮದ್ಯರಾತ್ರಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಎಸ್.ಪಿ ಯತೀಶ್ ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೀಡಾದ ಯುವಕನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಕುಟುಂಬ ಕಲಹದಿಂದಾಗಿ ಈ ಕೊಲೆ‌ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆ ಪ್ರಕರಣದಿಂದ ಸೂರಣಗಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಶಯಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಆದೇಶ ಪ್ರತಿತುಂಗಭದ್ರಾ ಎಡದಂಡೆ ನಾಲೆಗೆ ಏಪ್ರಿಲ್ 11 ರಿಂದ ಏಪ್ರಿಲ್ 20 ರವರೆಗೆ ಜನ ಜಾನುವಾರುಗಳಿಗೆ ಕುಡಿಯುವ ಸುಮಾರು 2 ಟಿಎಂಸಿ ನೀರನ್ನು ಹರಿಸಬೇಕಾಗಿರುವ ಹಿನ್ನೆಲೆಯಲ್ಲಿ ನೀರು ನಿರ್ವಹಣೆಯ ಉದ್ದೇಶದಿಂದ ನಾಲೆಯ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಕಲುಬುರಗಿ ವಿಭಾಗದ ಪ್ರದೇಶಿಕ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿನ ತುಂಗಭದ್ರಾ ಎಡದಂಡೆ ನಾಲೆ 0 ಮೈಲ್‍ನಿಂದ 47 ನೇ ಮೈಲ್ ವರೆಗೆ ಎಡ ಮತ್ತು ಬಲ ದಡಗಳ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಎಡದಂಡೆ ನಾಲೆಯ ಮೇಲ್ಕಾಣಿಸಿದ ಪ್ರದೇಶದ 100 ಮೀಟರ್ ಅಂತರದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಓಡಾಡುವಂತಿಲ್ಲ, ಹಾಗೂ ಮಾರಕಾಸ್ತ್ರ ಹಿಡಿದು ಓಡಾಡುವಂತಿಲ್ಲ.

ಈ ಆದೇಶವು ಮದುವೆ ಮತ್ತು ಶವ ಸಂಸ್ಕಾರ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ದ್ಯಾಮವ್ವನ ಗುಡಿ ಬಳಿ ಇಸ್ಪೀಟು ಜೂಜಾಟ: ಎಂಟು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಸಮೀಪದ ನೀಲಗುಂದ ಗ್ರಾಮದ ದ್ಯಾಮವ್ವನ ದೇವಸ್ಥಾನದ ಮುಂದಿರುವ ಸಾರ್ವಜನಿಕ ಬಯಲು ಜಾಗೆಯಲ್ಲಿ ಇಸ್ಟೀಟು ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಮುಳಗುಂದ ಠಾಣೆಯ ಪೊಲೀಸರು ದಾಳಿ ನಡೆಸಿ, 4,200 ರೂ. ನಗದು ಸೇರಿದಂತೆ ಎಂಟು ಜನರನ್ನು ಬಂಧಸಿ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ  ಸರ್ಕಾರಿ ಕಟ್ಟಡದಲ್ಲಿ ಫಂಡ್ ರೀತಿಯಲ್ಲಿ ಜೂಜಾಟ: ಬ್ಯಾಂಕ್ ನೌಕರ, ಉದ್ಯಮಿಗಳು ಸೇರಿದಂತೆ ಒಂಬತ್ತು ಜನರ ಬಂಧನ

ನೀಲಗುಂದ ಗ್ರಾಮದ ಬಸಪ್ಪ ಚನ್ನಪ್ಪ ಅರಳಿ, ಶಿವಾನಂದ ಶಿವಪ್ಪ ನಾಯ್ಕರ, ರಾಮಪ್ಪ ಯಲ್ಲಪ್ಪ ಗೋಕಾವಿ, ಸೋಮರೆಡ್ಡಿ ಮಲ್ಲಪ್ಪ ರಾಮರೆಡ್ಡಿ, ರಮೇಶಪ್ಪ ಹನಮಪ್ಪ ಕಮ್ಮಾರ, ದ್ಯಾಮಣ್ಣ ಪಕ್ಕೀರೇಶ ಚಿಕ್ಕಗಸಿ, ಬಸಪ್ಪ ಸೋಮಪ್ಪ ತಿರ್ಲಾಪೂರ ಹಾಗೂ ಈರಣ್ಣ ರಾಚಪ್ಪ ಅಂಗಡಿ ಎಂಬ ಎಂಟು ಜನರ ಮೇಲೆ ದೂರು ದಾಖಲಿಸಿಕೊಂಡಿರುವ
ಮುಳಗುಂದ ಠಾಣೆಯ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

ಇನ್ಸ್‌ಪೆಕ್ಟರ್ ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್ಪಿಯಾಗಿ ಬಡ್ತಿ

0

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗದಗನ ಹೆಸ್ಕಾಂ ಜಾಗೃತದಳದಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ದಲ್ಲಿದ್ದ ಸಿದ್ದಲಿಂಗಪ್ಪಗೌಡ ಪಾಟೀಲ್ ಅವರು ಡಿವೈಎಸ್ಪಿ ಆಗಿ ಬಡ್ತಿ ಹೊಂದಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯ ಸಿಪಿ(ಸಿವಿಲ್) ವೃಂದದ ಅಧಿಕಾರಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವೇತನ ಡಿವೈಎಸ್ಪಿ ವೃಂದಕ್ಕೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಧಾರವಾಡ ಜಿಲ್ಲಾ ಸಿಇಎನ್ ವಿಭಾಗದಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವಿಜಯ ಬಿರಾದರ್ ಅವರಿಗೂ ಡಿವೈಎಸ್ಪಿ ಹುದ್ದೆಗೆ ಬಡ್ತಿ ಆಗಿದೆ. ಇವರಲ್ಲದೇ ಇನ್ನೂ 27 ಜನ ಇನ್ಸ್‌ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ಡಿವೈಎಸ್ಪಿ ಹುದ್ದೆಗೆ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಸದ್ಯ ಡಿಜಿ ಹಾಗೂ ಐಜಿಪಿ ಅವರಲ್ಲಿ ವರದಿ ಮಾಡಿಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.

ಡಿವೈಎಸ್ಪಿಯಾಗಿ ಬಡ್ತಿ ಹೊಂದಿದ ಸಿದ್ದಲಿಂಗಪ್ಪಗೌಡ ಪಾಟೀಲ್ ಹಾಗೂ ವಿಜಯ ಬಿರಾದಾರ ಅವರನ್ನು ಸಿಬ್ಬಂದಿ ವರ್ಗ, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದಿಸಿದ್ದಾರೆ.

error: Content is protected !!