Home Blog Page 3119

ಕೊರೊನಾ; ಸ್ನೇಹಿತರಿಗೆ ಬೆಡ್ ಕೊಡಿಸಲು 13 ಗಂಟೆ ಪರದಾಡಿದ ನಟಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಆಕ್ಸಿಜನ್ ಕೊರತೆ ತಾಂಡವಾಡುತ್ತಿದೆ. ಹೀಗಾಗಿ ನಟಿ ಶೃತಿ ಹರಿಹರನ್ ಅವರು ಕೂಡ ಇಂತಹ ತೊಂದರೆ ಅನುಭವಿಸಿ, ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸ್ನೇಹಿತರೊಬ್ಬರಿಗೆ ಬೆಡ್ ಕೊಡಿಸಲು ಶೃತಿ ಬರೋಬ್ಬರಿ 13 ಗಂಟೆಗಳ ಕಾಲ ಪರದಾಡಿದ್ದಾರೆ. ಈ ಕುರಿತು ಅವರೇ ಅವರ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. 

ಈ ಕುರಿತು ಇನ್ ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನ್ನ ಸ್ನೇಹಿತರೊಬ್ಬರು ಕೊನಾದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಐಸಿಯುನಲ್ಲಿ ಬೆಡ್ ಕೊಡಿಸಲು ಸಾಕಷ್ಟು ಕಷ್ಟ ಪಡಬೇಕಾಯಿತು. ಬರೋಬ್ಬರಿ 13 ಗಂಟೆಗಳ ಕಾಲ ಬೆಡ್ ಗಾಗಿ ಪರದಾಡಬೇಕಾಯಿತು. ಆದರೆ, ಸರಿಯಾದ ಸಮಯಕ್ಕೆ ಬೆಡ್ ಸಿಗದ ಕಾರಣಕ್ಕೆ ಅವರು ಅವರು ನಿಧನರಾದರು ಎಂದು ನೋವು ತೋಡಿಕೊಂಡಿದ್ದಾರೆ. 

ಇತ್ತೀಚೆಗೆ ನಟ ಜಗ್ಗೆಶ್ ಅವರು ಕೂಡ ತಮ್ಮ ಸಹೋದರನಿಗೆ ಬೆಡ್ ಕೊಡಿಸುವುದಕ್ಕಾಗಿ ಸಾಕಷ್ಟು ಪರದಾಡಿದ್ದರು. ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂಕಷ್ಟ ತೋಡಿಕೊಂಡಿದ್ದರು. ಕೊರೊನಾಗೆ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಅವರ ಪತಿ ಕೋಟಿ ರಾಮು ಅವರು ಸಹ ಸಾವನ್ನಪ್ಪಿದ್ದಾರೆ. ಹೀಗಾಗಿ ಪರಿಸ್ಥಿತಿ ತುಂಬಾ ಭೀಕರವಾಗಿದೆ.

ಸತತ ಸೋಲಿಗೆ ಕಂಗೆಟ್ಟ ಹೈದರಾಬಾದ್; ಡೇವಿಡ್ ವಾರ್ನರ್ ಗೆ ನಾಯಕತ್ವದಿಂದ ಕೊಕ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಿಂದಲೂ ಕಳಪೆ ಪ್ರದರ್ಶನ ತೋರುತ್ತಿದೆ. ಹೀಗಾಗಿ ತಂಡದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ.

ಸತತ ಸೋಲಿಗೆ ಕಂಗೆಟ್ಟ ತಂಡ, ನಾಯಕತ್ವ ಬದಲಾವಣೆ ಮಾಡಿದೆ. ಸೋಲಿನ ಹೊಣೆ ಹೊರಿಸಿ ನಾಯಕ ಡೇವಿಡ್ ವಾರ್ನರ್ ಅವರನ್ನು ಕೆಳಗಿಳಿಸಲಾಗಿದೆ. ಈ ಕುರಿತು ಅಧಿಕೃತವಾಗಿಯೇ ತಂಡ ಘೋಷಿಸಿದೆ.
ಹೀಗಾಗಿ ಭಾನುವಾರ ನಡೆಯಲಿರುವ ಹೈದರಾಬಾದ್ ತಂಡದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲಾಗಿ ಕೇನ್ ವಿಲಿಯಮ್ಸನ್ ತಂಡದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅಲ್ಲದೇ, ಈ ಐಪಿಎಲ್ ನ ಮುಂಬರುವ ಎಲ್ಲ ಪಂದ್ಯಗಳಲ್ಲಿಯೂ ಕೇನ್ ವಿಲಿಯಮ್ಸನ್ ನಾಯಕರಾಗಿ ಇರಲಿದ್ದಾರೆ ಎಂದು ತಂಡ ಪ್ರಕಟಣೆ ಮೂಲಕ ತಿಳಿಸಿದೆ.

ಭಾನುವಾರ(ಮೇ. 2)ದಂದು ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಅಲ್ಲದೇ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿದೇಶಿ ಆಟಗಾರರ ಸಂಯೋಜನೆಯಲ್ಲಿಯೂ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ತಂಡ ಹೇಳಿದೆ.

ಹೈದರಾಬಾದ್ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಅವರು ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರ ಕೊಡುಗೆಯನ್ನು ಗೌರವ ಪೂರ್ವಕವಾಗಿ ಪರಿಗಣಿಸಲಾಗುತ್ತಿದೆ. ಮುಂದಿನ ಪಂದ್ಯಗಳನ್ನು ಎದುರಿಸುವ ಸಂದರ್ಭದಲ್ಲಿ ಅಂಗಳದಲ್ಲಿ ಹಾಗೂ ಅಂಗಳದಾಚೆಗಿನ ಯಶಸ್ಸಿಗೆ ಡೇವಿಡ್ ವಾರ್ನರ್ ಅವರಿಂದ ಸಂಪೂರ್ಣ ಸಹಕಾರ ದೊರೆಯುವ ಭರವಸೆಯಿದೆ ಎಂದು ತಂಡದ ಮ್ಯಾನೇಜ್ ಮೆಂಟ್ ತಿಳಿಸಿದೆ.

ಕೇವಲ ಒಂದು ಗಂಟೆಯ ಆಕ್ಸಿಜನ್ ವಿಳಂಬಕ್ಕೆ ಎಷ್ಟು ಜನ ಸೋಂಕಿತರು ಬಲಿಯಾಗಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೆಹಲಿಯಲ್ಲಿ ಮತ್ತೆ ಆಮ್ಲಜನಕದ ತೊಂದರೆ ತಲೆ ದೋರಿದೆ. ಒಂದು ಗಂಟೆಯ ಕಾಲ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಕಾರಣ ವೈದ್ಯರೊಬ್ಬರು ಸೇರಿದಂತೆ 8 ಜನ ಮಹಾಮಾರಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಕುರಿತು ದೆಹಲಿಯಲ್ಲಿನ ಬಾತ್ರಾ ಆಸ್ಪತ್ರೆ ಶನಿವಾರ ದೆಹಲಿ ಹೈಕೋರ್ಟ್‌ ಗೆ ಮಾಹಿತಿ ನೀಡಿದೆ.

ಬಾತ್ರಾ ಆಸ್ಪತ್ರೆ, ನಮಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ದೊರೆಯಲಿಲ್ಲ. ಮಧ್ಯಾಹ್ನ 12ರ ಹೊತ್ತಿಗೆ ನಮಗೆ ಆಕ್ಸಿಜನ್ ಪೂರೈಕೆಯ ತೊಂದರೆಯಾಯಿತು. ಆದರೆ, ನಮಗೆ ಮರಳಿ ಆಕ್ಸಿಜನ್ ಸಿಕ್ಕಿದ್ದು, ಅಂದೆ ಮಧ್ಯಾಹ್ನ 1.35ಕ್ಕೆ. ಅಷ್ಟರಲ್ಲಿ ನಮ್ಮ ಒಬ್ಬರು ವೈದ್ಯರು ಸೇರಿದಂತೆ 8 ಜನ ರೋಗಿಗಳು ಸಾವನ್ನಪ್ಪಿದ್ದರು ಎಂದು ಹೈಕೋರ್ಟ್ ಗೆ ತಿಳಿಸಿದೆ.

ಆಮ್ಲಜನಕ ಪೂರೈಕೆಯಿಲ್ಲದೆ ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಬಾತ್ರಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಗುಪ್ತಾ ಹೇಳಿದ್ದಾರೆ.

ಬಾಲಿವುಡ್ ನ ಹಿರಿಯ ನಟ ವಿಕ್ರಂಜಿತ್ ಕೊರೊನಾಕ್ಕೆ ಬಲಿ!

ವಿಜಯಸಾಕ್ಷಿ ಸುದ್ದಿ ಮುಂಬಯಿ
ಬಾಲಿವುಡ್ ನ ಹಿರಿಯ ನಟ ವಿಕ್ರಂಜೀತ್ ಕನ್ವರ್ ಪಾಲ್(52) ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ವಿಕ್ರಂಜೀತ್ ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಸಾವನ್ನಪ್ಪಿದ್ದಾರೆ ಎಂದು ನಟ ಅಶೋಕ್ ಪಂಡಿತ್ ಮಾಹಿತಿ ಹಂಚಿಕೊಂಡಿದ್ದಾರೆ.
ಓರ್ವ ಸೇನಾಧಿಕಾರಿಯಾಗಿದ್ದ ವಿಕ್ರಂಜಿತ್ ಅವರು, ನಿವೃತ್ತಿಯಾದ ನಂತರ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಬೆಳಿಗ್ಗೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ವಿಕ್ರಂಜಿತ್ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಪೋಷಕ ನಟರಾಗಿ ಅಭಿನಯಿಸುತ್ತಿದ್ದರು. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ನಟ ಅಶೋಕ್ ಪಂಡಿತ್, ಸಂತಾಪ ಸೂಚಿಸಿ ಅವರ ಕುಟುಂಬಸ್ಥರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ಕೊರೋನಾ; ಶುಕ್ರವಾರ ಜಿಲ್ಲೆಯಲ್ಲಿ 122 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಏಪ್ರಿಲ್‌ 30 ಶುಕ್ರವಾರ ಜಿಲ್ಲೆಯಲ್ಲಿ ಸತತ ನಾಲ್ಕನೇ ದಿನವೂ ಕೊರೋನಾ ಸೋಂಕು ಶತಕ ದಾಟುತ್ತಾ ಸಾಗಿದೆ. ಇಂದು 122 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಯಥಾಸ್ಥಿತಿ ಮುಂದುವರೆದಿದೆ.

ಇಂದಿನ 122 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12702 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -77, ಮುಂಡರಗಿ-10, ನರಗುಂದ-12, ರೋಣ-05, ಶಿರಹಟ್ಟಿ-10, ಹೊರಜಿಲ್ಲೆಯ-08 ಸೇರಿದಂತೆ 122 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೂ ಜಿಲ್ಲೆಯಲ್ಲಿ
141 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 94 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11838 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 723 ಪ್ರಕರಣಗಳು ಸಕ್ರಿಯವಾಗಿದ್ದು, 599 ಜನರು ಮನೆಯಲ್ಲಿ, 124 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 238 ಜನರ ವರದಿ ಬರಲು ಬಾಕಿ ಇದೆ.

ಪರೀಕ್ಷೆಗಾಗಿ ಸಂಗ್ರಹಿಸಿದ 342597 ಮಾದರಿಗಳಲ್ಲಿ 329657 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಮಾಸ್ಕ್ ಧರಿಸದ, ಕೋವಿಡ್ ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮ; ಎಸ್ಪಿ ಯತೀಶ್

0

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಸೋಂಕು ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಮಾರ್ಗಸೂಚಿಗಳನ್ವಯ ಮೇ 12 ರ ಮುಂಜಾನೆ 06.00 ಗಂಟೆಯವರೆಗೆ ಜನತಾ ಕರ್ಫ್ಯೂ ವಿಧಿಸಿ ಆದೇಶ ಮಾಡಿದ್ದು, ಸರಕಾರದ ನಿರ್ದೇಶನ, ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಎಲ್ಲ ಠಾಣೆ, ವೃತ್ತ, ಉಪ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.

ಸರಕಾರದ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಇದ್ದ ಒಟ್ಟು 5493 ( Not wearing Face mask in public ) ಜನರ ವಿರುದ್ದ ಪ್ರಕರಣಗಳನ್ನು ದಾಖಲಿಸಿ, ರೂ 6,68,000=00 ಗಳನ್ನು ದಂಡ ವಸೂಲಿ ಮಾಡಿ ಸರಕಾರಕ್ಕೆ ಭರಣಾ ಮಾಡಲಾಗಿದೆ. ಹಾಗೂ ಸರಕಾರದ ನಿಯಮಗಳನ್ನು ಪಾಲನೆ ಮಾಡದೇ ಇದ್ದಂತ ಸಾರ್ವಜನಿಕರ ವಿರುದ್ದ Karnataka Epidemic Disease Act 2020ರಡಿ 11 ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನಗಳು/ಮಾರ್ಗಸೂಚಿಗಳನ್ನು ಸಾರ್ವಜನಿಕರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಉಪಯೋಗ ಮಾಡಿ ಕೋವಿಡ್-19 2ನೇ ಅಲೆ ವೈರಾಣು ಹರಡುವುದನ್ನು ತಡೆಗಟ್ಟಲು ಸಹಕಾರ ನೀಡಲು ಕೋರಿದೆ.

ಸಾರ್ವಜನಿಕರು ವಿನಾ:ಕಾರಣ ವಾಹನಗಳನ್ನು ತೆಗೆದುಕೊಂಡು ರಸ್ತೆ ಸಂಚಾರ ಮಾಡುವುದು ಸರಿ ಅಲ್ಲ. ಅಲ್ಲದೇ ಸರಕಾರದ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದವರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್ ಯತೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಗುರುವಾರ 132 ಜನರಿಗೆ ಸೋಂಕು; 87 ಜನ ಗುಣಮುಖ

0

ವಿಜಯಸಾಕ್ಷಿ ಸುದ್ದಿ, ಗದಗ

ಏಪ್ರಿಲ್‌ 29 ಗುರುವಾರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಕೊರೋನಾ ಸೋಂಕು ಸ್ಫೋಟಗೊಂಡಿದೆ. 132 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿನ ತೀವ್ರತೆ ವ್ಯಾಪಕವಾಗತೊಡಗಿದೆ.

ಇಂದಿನ 132 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12580 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -55 , ಮುಂಡರಗಿ-28, ನರಗುಂದ-03, ರೋಣ-32, ಶಿರಹಟ್ಟಿ-08, ಹೊರಜಿಲ್ಲೆಯ-06 ಸೇರಿದಂತೆ 132 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೂ ಜಿಲ್ಲೆಯಲ್ಲಿ
141 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 87 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11744 ಜನರು ‌ಸೋಂಕಿನಿಂದ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 695 ಪ್ರಕರಣಗಳು ಸಕ್ರಿಯವಾಗಿದ್ದು, 576 ಜನರು ಮನೆಯಲ್ಲಿ, 119 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 200 ಜನರ ವರದಿ ಬರಲು ಬಾಕಿ ಇದೆ.

ಪರೀಕ್ಷೆಗಾಗಿ ಸಂಗ್ರಹಿಸಿದ 340710 ಮಾದರಿಗಳಲ್ಲಿ 327930 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಗ್ನಿ ಅವಘಡ ಮೇವಿನ ಬಣವೆ ಭಸ್ಮ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಬಸಪ್ಪ ತಳವಾರ ಅವರಿಗೆ ಸೇರಿದ ಮೇವಿನ ಮತ್ತು ಶೇಂಗಾ ಬಳ್ಳಿಯ 2 ಬಣವೆಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಮೌಲ್ಯದ ಮೇವು ಹಾಗೂ ಶೇಂಗಾ ಬಳ್ಳಿಯ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ವರ್ಷವಿಡೀ ಜಾನುವಾರುಗಳಿಗೆ ಮೇಯಿಸಲು ಇಟ್ಟುಕೊಂಡಿದ್ದ ಮೇವು ಸುಟ್ಟು ಕರಕಲಾಗಿದನ್ನು ಕಂಡು ರೈತನ ಕಣ್ಣೀರಿನ ಗೋಳಾಟ ಎಲ್ಲರ ಮನ ಕಲಕಿತು.

ಬಣವೆಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಗ್ರಾಮಸ್ಥರು, ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವ ಮೂಲಕ ಸಂಭವಿಸಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.

ಅಂದರ್-ಬಾಹರ್ ಜೂಜಾಟ; ಕೇಬಲ್ ಆಪರೇಟರ್ ಸಮೇತ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೇಬಲ್ ಆಪರೇಟರ್ ಸೇರಿ ನಾಲ್ಕು ಜನ ಅಂದರ್-ಬಾಹರ್ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದಿದೆ.

ಗಜೇಂದ್ರಗಡ ಠಾಣೆಯ ಪಿಎಸ್ಐ ಗುರುಶಾಂತ ದಾಸ್ಯಾಳ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದ ಕೇಬಲ್ ಆಪರೇಟರ್ ಬದರಿನಾಥ್ ವೆಂಕಪ್ಪ ರಾಠೋಡ, ನಾಗಪ್ಪ ಈರಪ್ಪ ಮಾಳೋತ್ತರ್, ಮಾಂತೇಶ್ ಶಂಕ್ರಪ್ಪ ರಾಠೋಡ, ರವಿ ಕೃಷ್ಣಪ್ಪ ರಾಠೋಡ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ 3550 ರೂಪಾಯಿ ನಗದು ವಸದಪಡಿಸಿಕೊಂಡಿದ್ದು, ಗಜೇಂದ್ರಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಬೆಟ್ಟಿಂಗ್; ವರ್ತಕರು ಸೇರಿದಂತೆ ಒಂಬತ್ತು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಐಪಿಎಲ್ ಬೆಟ್ಟಿಂಗ್ ದಂದೆ ಜೋರಾಗಿದೆ. ದಿನವೂ ಸಣ್ಣ ಪುಟ್ಟ ಬುಕ್ಕಿಗಳಿಗೆ ಗಾಳ ಹಾಕಿ ಬಂಧಿಸುತ್ತಿದ್ದ ಪೊಲೀಸರು ಈಗ ಭಾರಿ ಕುಳಗಳು ಇರುವ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ್ದು ನಾಲ್ಕು ಜನ ವರ್ತಕರು, ಓರ್ವ ಫೋಟೋಗ್ರಾಫರ್ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ, ಗದಗನ ದೊಡ್ಡ ಬುಕ್ಕಿ ಪರಾರಿಯಾಗಿದ್ದು ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ರಸ್ತೆಯ ಕನ್ನಡ ಸಾಹಿತ್ಯ ಭವನದ ಹತ್ತಿರದ ಪರಿಸರ ಲೇವೋಟ್ ನಲ್ಲಿ ದೊಡ್ಡ ಮಟ್ಟದ ಐಪಿಎಲ್ ಬೆಟ್ಟಿಂಗ್ ದಂದೆ ನಡೆಯುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಬೆಟಗೇರಿಯ ತಿಪ್ಪಣಸಾ ಕಬಾಡಿ ಬಂಧನ

ಬಂಧಿತರು ಬುಧವಾರ ನಡೆದ ಸಿ ಎಸ್ ಕೆ ಹಾಗೂ ಎಸ್ ಆರ್ ಎಚ್ ನಡುವಿನ ಐಪಿಎಲ್ 20-20 ಪಂದ್ಯದಲ್ಲಿ ನೂರಕ್ಕೆ ಎರಡು ನೂರು ರೂಪಾಯಿ ಕೊಡುವುದಾಗಿ ಬೆಟ್ಟಿಂಗ್ ನಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಹುಲಕೋಟಿಯ ಕೆಚ್ ಬಿ ಕಾಲೋನಿಯ ಪ್ರಕಾಶ್ ವಿಶ್ವನಾಥಸಾ ಕಲಬುರ್ಗಿ, ಗದಗ ನಗರದ ಕಲಾಮಂದಿರ ರಸ್ತೆಯ ನಿವಾಸಿ ಶ್ರೀಕಾಂತ್ ಸಿದ್ದಲಿಂಗಪ್ಪ ಪೂಜಾರ, ಅಮರೇಶ್ವರ ನಗರದ ವೆಂಕಟೇಶ್ ದತ್ತೂಸಾ ಸಿದ್ಲಿಂಗ್, ಕುಷ್ಟಗಿ ಚಾಳ್ ನಿವಾಸಿ ಈರಪ್ಪ ಬೂದಪ್ಪ ಹನಮನಹಳ್ಳಿ, ಒಕ್ಕಲಗೇರಿ ಓಣಿಯ ಶಿವಶಂಕರ್ ರಾಜಶೇಖರ ಯಕಲಾಸಪೂರ, ಕೆ ಸಿ ರಾಣಿ ರಸ್ತೆಯ (ಲಿಂಬಣ್ಣವರ ಆಸ್ಪತ್ರೆ ಹತ್ತಿರ) ಬಸವರಾಜ್ ಗುಂಡಪ್ಪ ಕೌಡಿ, ಗಂಗಾಪೂರ ಪೇಟೆಯ ಮಲ್ಲೇಶ್ ಸಿದ್ದಪ್ಪ ಬಾರಕೇರ, ನಿಂಗಪ್ಪ ಭರಮಪ್ಪ ಮಡಿವಾಳರ, ಬೆಟಗೇರಿಯ ಕಬಾಡಿ ರಸ್ತೆಯ ತೆಗ್ಗಿನಪೇಟಿಯ ಪ್ರಮೋದ್ ಪ್ರಕಾಶ್ ಮಾನೇದ ಎಂದು ಗುರುತಿಸಲಾಗಿದೆ.

ಪ್ರಮುಖ ಬುಕ್ಕಿ ಎಸ್ ಎಮ್ ಕೃಷ್ಣಾ ನಗರದ ಅನಿಲ ಪರಸಪ್ಪ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ 24 ಸಾವಿರ ರೂಪಾಯಿ ನಗದು, ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ ಐಪಿಎಲ್ ಬೆಟ್ಟಿಂಗ್; ಶ್ರೀನಿವಾಸ, ಪ್ರದೀಪ್, ಸನಾವುಲ್ಲಾ ಸೇರಿದಂತೆ 7 ಜನರ ಬಂಧನ

ಆದರೆ ಹಲವು ಇಸ್ಪೀಟು ಪ್ರಕರಣಗಳಲ್ಲಿ ಅನಿಲ ಸಿದ್ದಮ್ಮನಹಳ್ಳಿ ಆರೋಪಿಯಾಗಿದ್ದು, ಕಳೆದ ವರ್ಷ ಬಿಂಕದಕಟ್ಟಿ ಬಳಿಯ ಅಂದರ್-ಬಾಹರ್ ಜೂಜಾಟದಲ್ಲಿ, ಮೂರು ತಿಂಗಳ ಹಿಂದೆ ಹೊಂಬಳ ರಸ್ತೆಯಲ್ಲಿ ನಡೆದ ಜೂಜಾಟದಲ್ಲಿ ಎಫ್ ಆಯ್ ಆರ್ ದಾಖಲಾಗಿದ್ವು, ಆದರೆ ಆ ಪ್ರಕರಣಗಳಲ್ಲೂ ಅನಿಲ ಸಿದ್ದಮ್ಮನಹಳ್ಳಿ ಪರಾರಿಯಾಗಿದ್ದ. ಈ ಪ್ರಕರಣದಲ್ಲೂ ಪರಾರಿಯಾಗಿದ್ದಾನೆ ಎಂದರೆ ಪರಾರಿಯಾಗವುದರಲ್ಲಿ ಚಾಣಾಕ್ಷತನ ತೋರುತ್ತಿದ್ದಾನೋ ಅಥವಾ ದಾಳಿ ಮಾಡುವ ಸಂದರ್ಭದಲ್ಲಿ ಕೆಲ ಪೊಲೀಸರೇ ಮಾಹಿತಿ‌ ನೀಡಿ ಆತ ಪರಾರಿಯಾಗಲು ಸಹಾಯ ಮಾಡುತ್ತಿದ್ದಾರೋ ಅನ್ನೋ ಮಾತುಗಳು ಕೇಳಿ ಬಂದಿವಿ.

ಈ ಬೆಟ್ಟಿಂಗ್ ಪ್ರಕರಣದಲ್ಲೂ ಪರಾರಿಯಾಗಿದ್ದು, ಇದರಲ್ಲಿ 10 ನೇ ಆರೋಪಿಯನ್ನಾಗಿ ಮಾಡಿದ್ದು ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆಯ ಪೊಲೀಸರು ಪರಾರಿಯಾದ ಆರೋಪಿ ಅನಿಲ ಸಿದ್ದಮ್ಮನಹಳ್ಳಿ ಬಂಧನಕ್ಕೆ ಜಾಲ ಬೀಸಿದ್ದಾರೆ.

error: Content is protected !!