Home Blog Page 3147

ಕನಕಪುರಕ್ಕೆ ಎಸಿ ಕೋರ್ಟ್ ಸ್ಥಳಾಂತರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

0

ರಾಮನಗರ: ಜಿಲ್ಲಾ ಕೇಂದ್ರದಲ್ಲಿಯೇ ಸಿವಿಲ್ ಪ್ರಕರಣಗಳನ್ನು ವಿಚಾರಣೆ ನಡೆಸುವ ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ವರ್ಗಾವಣೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದು ಮಕ್ಕಳಾಟವೇ ಎಂದು ಕಿಡಿಕಾರಿದ್ದಾರೆ.

ಎಸಿ ಕೋರ್ಟ್ ಅನ್ನು ಕನಕಪುರಕ್ಕೆ ಸ್ಥಳಾಂತರ ಮಾಡುವುದನ್ನು ವಿರೋಧಿಸಿ, ರಾಮನಗರದಲ್ಲಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಎಸಿ ಕೋರ್ಟ್ ಅನ್ನು ವಾರದಲ್ಲಿ ಒಂದು ದಿನ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಇದನ್ನು ಇಡೀ ರಾಜ್ಯದ ಪ್ರತಿ ತಾಲೂಕಿನಲ್ಲೂ ಮಾಡಿ, ಪ್ರತಿ ತಾಲೂಕಿಗೆ ಒಂದೊಂದು ಎಸಿ ಕೋರ್ಟ್ ಮಾಡಿ ಎಂದ ಅವರು, ಇದು ಸರ್ವಾಧಿಕಾರಿ ಧೋರಣೆ. ಕೋರ್ಟ್ ಸ್ಥಳಾಂತರಕ್ಕೆ ಅಂತಹ ತರಾತುರಿ ಏನಿದೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹೆದರಿಸಿ, ಬೆದರಿಸಿ ಅಕ್ರಮವಾಗಿ ಬೇಲಿ ಹಾಕಿಕೊಂಡಿರುವ ಎಲ್ಲಾ ಭೂಮಿಗಳ ಪೋಡಿ ಮಾಡಿಸುವುದಕ್ಕೆ, ಲೂಟಿ ಮಾಡುವುದಕ್ಕೆ ಹೀಗೆ ಮಾಡ್ತಿದ್ದಾರೆ. ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಯಾರ ಹೆಸರನ್ನೂ ಹೇಳದೆ ಅವರು ಕಟುವಾಗಿ ಟೀಕಿಸಿದರು.

ಅಕ್ಕಿ ಕಳವು; ಕ್ರಮಕ್ಕೆ ಆಗ್ರಹ

ಚನ್ನಪಟ್ಟಣದಲ್ಲಿ ಅನ್ನಭಾಗ್ಯದ ಅಕ್ಕಿ ಕಳವು ವಿಚಾರದ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು, ಮೊದಲು ಈ ಬಗ್ಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಇದು ಕೇವಲ ಚನ್ನಪಟ್ಟಣದಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ನಡೆಯುತ್ತಿದೆ. ಸರಕಾರ ಜವಾಬ್ದಾರಿಯಿಂದ ಕ್ರಮ ವಹಿಸಲಿ ಎಂದು ಅವರು ಕಿವಿಮಾತು ಹೇಳಿದರು.

ನನ್ನ ಭೇಟಿಗೆ ಬರೋದು ಬೇಡ ಅಂತ ವಿಜಯೇಂದ್ರನಿಗೆ ಹೇಳಿದ್ದೇನೆ: ಯತ್ನಾಳ್

0

ವಿಜಯಪುರ: ಬಿಜೆಪಿಯಲ್ಲಿನ ಆಂತರಿಕ ಬೇಗುದಿ ಮುಂದುವರಿದಿದೆ. ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುನಿಸು ಕಂಟಿನ್ಯೂ ಆಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವಿಜಯೇಂದ್ರ ಬಂದು ನನ್ನ ಭೇಟಿ ಆಗುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ಮೊದಲು ಏನೇನು ನನಗೆ ಅಡೆತಡೆ ಮಾಡದ್ದಾರೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಗೆ ಬಂದ ಅನುದಾನವನ್ನು ವಾಪಸ್ ಪಡೆದರು. ಈಗ ಸರಿ ಮಾಡೋಣ ಅಂದ್ರೆ ಆಗಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ನಿರ್ಧಾರ ಆಗುತ್ತೆ ಎಂದು ಯತ್ನಾಳ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬಿ.ವೈ ವಿಜಯೇಂದ್ರ ಅವನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಕೆಲವು ನಾಯಕರುಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

Olle Huduga Pratham: ವೈವಾಹಿಕ ಜೀವನಕ್ಕೆ ಕಾಲಿಟ್ಟ ಒಳ್ಳೆ ಹುಡ್ಗ ಪ್ರಥಮ್..!

0

ಬಿಗ್ ಬಾಸ್ ವಿನ್ನರ್ ಪ್ರಥಮ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯದ ಭಾನುಶ್ರೀ ಜೊತೆ ಅವರು ಸರಳವಾಗಿ ಮದುವೆಯಾಗಿದ್ದಾರೆ. ಈ ಜೋಡಿಯನ್ನು ಶುಭ ಹಾರೈಸುವುದಕ್ಕಾಗಿ ಲವ್ಲಿ ಸ್ಟಾರ್ ಪ್ರೇಮ್, ಧ್ರುವ ಸರ್ಜಾ, ಗಾಯಕಿ ಇಶಾನಿ, ರಕ್ಷಕ್ ಬುಲೆಟ್ ಸೇರಿದಂತೆ ಹಲವಾರು ತಾರೆಯರು ಆಗಮಿಸಿದ್ದರು. ಎಲ್ಲರನ್ನೂ ಮದುವೆಗೆ ಕರೆಯಲಾರೆ ಎಂದು ಮೊದಲೇ ಪ್ರಥಮ್ ತಿಳಿಸಿದ್ದರು. ಎರಡು ಕುಟುಂಬಗಳ ಸದಸ್ಯರು ಮತ್ತು ಆಪ್ತರ ಮುಂದೆ ಸರಳವಾಗಿ ಮದುವೆ ಆಗುವುದಾಗಿ ಅವರು ತಿಳಿಸಿದ್ದರು.

ಹಾಗೆಯೇ ಪ್ರಥಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರವಷ್ಟೇ ಇವರು ಸೋಷಿಯಲ್ ಮೀಡಿಯಾದಲ್ಲಿ, ‘ಮುಂದಿನ ವಾರ ಮದುವೆ. ಅಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ. ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಗ್ರ್ಯಾಂಡ್ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ. ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರ: ಸಚಿವ ಜಿ ಪರಮೇಶ್ವರ್ ಹೇಳಿದ್ದೇನು..?

0

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಯನ್ನು ಗೃಹ ಸಚಿವ ಜಿ ಪರಮೇಶ್ವರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಅಲ್ಲ.

ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐಗೆ ಕೇಸ್ ಕೊಡಿ ಎಂದು ಸಿಎಸ್‌ಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವಾ? ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅಂದಿನ ಅಡ್ವೊಕೇಟ್ ಜನರಲ್ ಅವರು ಹೇಳಿದ್ರು, ಈಗ ನಮ್ಮ ಎಜಿ ಅವರು ನಮಗೆ ಅದನ್ನು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ.

ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ ರೀತಿ ಆಗುತ್ತೆ. ಸರ್ಕಾರ ಕೇಸ್ ವಾಪಸ್ ಪಡೆದಿದೆ. ಮುಂದೆ ಏನ್ ಆಗುತ್ತೆ ಗೊತ್ತಿಲ್ಲ. ನಾವು ಕೋರ್ಟ್ಗೆ ಕ್ಯಾಬಿನೆಟ್ ನಿರ್ಧಾರ ಸಲ್ಲಿಕೆ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಏನಾಗಿದೆ ಅಂತ ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಕೋರ್ಟ್, ಸಿಬಿಐ ಏನು ಮಾಡುತ್ತೆ ಅವರಿಗೆ ಬಿಟ್ಟ ವಿಚಾರ. ನಾವು ಅದರ ಬಗ್ಗೆ ಮೊದಲೇ ಮಾತಾಡೋದು ಸರಿಯಲ್ಲ ಎಂದರು.

ಮಲಗಿದ್ದ ಕಾರ್ಮಿಕನ ಮೇಲೆ ಹರಿದ ಟಿಪ್ಪರ್: ಕಾರ್ಮಿಕ ಸ್ಥಳದಲ್ಲೇ ಮೃತ್ಯು

0

ಉಡುಪಿ: ಪೆಟ್ರೋಲ್ ಪಂಪ್ ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ (Tipper) ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ. ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು.

ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ ನಡೆದಿದೆ.ಅದೇ ಪೆಟ್ರೋಲ್ ಪಂಪ್‌ಗೆ ಬಂದು ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್, ಅಲ್ಲೇ ಮಲಗಿದ್ದ ಶಿವರಾಜ್ ಹಾಗೂ ಮಹೇಂದ್ರ ಮೇಲೆ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ: ಎ.ನಾರಾಯಣಸ್ವಾಮಿ

0

ತುಮಕೂರುರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಎಂ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ. ಅಂದು ಸಿಬಿಐನವರು ಅನುಮತಿ ಕೇಳಿದ್ದರು.‌ ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ.

ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಖಂಡಿಸುತ್ತೇನೆ ಎಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.

ಡಿಕೆಶಿ ವಿರುದ್ಧದ CBI ತನಿಖೆ ವಾಪಸ್ ವಿಚಾರ – ವಿಪಕ್ಷ ನಾಯಕ ಅಶೋಕ್ ಹೇಳಿದ್ದಿಷ್ಟು !

0

ಬೆಂಗಳೂರು:- ಉಪಮುಖ್ಯಮಂತ್ರಿ ಡಿಕೆಶಿ ವಿರುದ್ಧದ CBI ತನಿಖೆ ವಾಪಸ್ ವಿಚಾರವಾಗಿ ವಿಪಕ್ಷ ನಾಯಕ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ವಾಪಸ್ ಪ್ರಸ್ತಾವನೆ ವಿಚಾರ ‘ಪ್ರಕರಣ ಕೋರ್ಟ್​ನಲ್ಲಿದೆ, ಇದು ಕಾನೂನಿಗೆ ವಿರುದ್ಧವಾದುದು.

‘ಸಿಬಿಐ ತನಿಖೆಗೆ ನೀಡಿರುವುದು ತಪ್ಪು ಎಂದು ಅಪೀಲು ಹೋಗಿದ್ದರು. ಕೋರ್ಟ್​ನಿಂದ ತೀರ್ಪು ಬರುವ ಮೊದಲು ನಿರ್ಧಾರ ಸರಿಯಲ್ಲ. ಸರ್ಕಾರ ಬದಲಾದಾಗ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಡಿಕೆ ಶಿವಕುಮಾರ್ ವಿರುದ್ಧದ​ ಸಿಬಿಐ ಕೇಸ್ ವಾಪಸ್; ಬಿಜೆಪಿ ಬಲವಾಗಿ ವಿರೋಧಿಸುತ್ತದೆ: ಬಿವೈ ವಿಜಯೇಂದ್ರ

0

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಚಿನ್ನದಂತಹ ಅವಕಾಶವಿದೆ. ತಾವು ಸತ್ಯಹರಿಶ್ಚಂದ್ರ ಅಂತ ಸಾಬೀತು ಮಾಡುವ ಅವಕಾಶ ಇದೆ. ನೀವು ತಪ್ಪು ಮಾಡಿಲ್ಲ ಅನ್ನೋದನ್ನು ತನಿಖೆ ಎದುರಿಸಿ ತೋರಿಸಿ.

ಸಚಿವ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಯಾವ ರೀತಿ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿ ನಿರ್ಧಾರ. ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತವಲ್ಲ. ಪ್ರಾಥಮಿಕ ತನಿಖೆ ಮಾಹಿತಿ ಆಧರಿಸಿ ಸಿಬಿಐ ತನಿಖೆಗೆ ಕೊಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಾಹನ ಸವಾರರ ನರಕ ಯಾತನೆ

0

ಹಾಸನ: ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ನಗರದ ಹಲವೆಡೆ ವಾಹನ ಸವಾರರು ಪರಿತಪಿಸುಂವತಾಗಿದೆ. ನಗರದ ಕೆ.ಆರ್. ಪುರಂ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತ ಸಂಭವಿಸುತ್ತಿದ್ದು ಈ ಬಗ್ಗೆ ಅನೇಕ ತಿಂಗಳುಗಳಿಂದ ನಗರಸಭೆ ಆಯುಕ್ತರ ಗಮನಕ್ಕೆ ಹಲವಾರು ಬಾರಿ ತರಲಾಗಿದೆ.

ಪ್ರತಿ ಬಾರಿಯೂ ಇಂದು ನಾಳೆ‌ ಎಂಬ ಭರವಸೆಯಲ್ಲೇ ಆಯುಕ್ತರು ಕಾಲ ಕಳೆಯುತ್ತಿದ್ದು ಇಂದೂ ಕೂಡ ಅಪಘಾತವಾಗಿ ಮೂವರ ಸ್ಥಿತಿ ಚಿಂತಾಜನಕವಾಗುವಂತಾಗಿದೆ.

ಇದಕ್ಕೆಲ್ಲಾ ನಗರಸಭೆ ಅಧಿಕಾರಿಗಳೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಖಾಸಗಿ ಅಂಗಾಂಗಕ್ಕೆ ಆ್ಯಸಿಡ್ ಎರಚಿದ ಪತಿ

0

ಬೆಂಗಳೂರು:- ಪತಿಯೊಬ್ಬ ತನ್ನ ಪತ್ನಿಯ ಖಾಸಗಿ ಅಂಗಗಳ ಮೇಲೆ ಟಾಯ್ಲೆಟ್ ಕ್ಲೀನಿಂಗ್  ಆ‌್ಯಸಿಡ್ ಎರಚಿರುವ ಆಘಾತಕಾರಿ ಘಟನೆ ನಡೆದಿದೆ.

ಆರೋಪಿಯು ಇದೇ ವರ್ಷ ಮೇ 19 ರಂದು 23 ವರ್ಷದ ಸಂತ್ರಸ್ತೆಯನ್ನು ವಿವಾಹವಾಗಿದ್ದ. ಆರೋಪಿಯು ಮದ್ಯವ್ಯಸನಿಯಾಗಿದ್ದು, ಅಪರೂಪಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಎನ್ನಲಾಗಿದೆ.

ಬದಲಾಗಿ ಪತ್ನಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದು, ಪದೇ ಪದೇ ಜಗಳವಾಗುತ್ತಿತ್ತು. ನಿತ್ಯವೂ ಕುಡಿದ ಅಮಲಿನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಆರೋಪಿ ತನ್ನ ಹೆಂಡತಿಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

ಆಗಾಗ ತಲೆಗೂದಲು ಹಿಡಿದು ಎಳೆದಾಡುವ ಮೂಲಕ ಕೊಲೆ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮನೆ ಬಾಡಿಗೆ ಪಾವತಿಸದ ಕಾರಣ, ತಮ್ಮನ್ನು ಅವರ ನಿವಾಸದಿಂದ ಹೊರಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇತ್ತೀಚೆಗಷ್ಟೇ ಆರೋಪಿಯು ಆಕೆಯ ಬೆನ್ನು ಮತ್ತು ಖಾಸಗಿ ಭಾಗಗಳ ಮೇಲೆ ಟಾಯ್ಲೆಟ್ ಕ್ಲೀನಿಂಗ್   ಆ್ಯಸಿಡ್ ಸುರಿದಿದ್ದಾನೆ. ಇದರಿಂದಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ದಾಖಲು ಮಾಡಿದ್ದಾಳೆ.

error: Content is protected !!