Home Blog Page 3152

ಅಡುಗೆ ಅನಿಲ ಸಿಲಿಂಡರ್ ಸ್ಫೋಟ: ಐದು ಮಂದಿಗೆ ಗಾಯ

0

ಬೆಂಗಳೂರು:- ಎಲ್​ಪಿಜಿ ಸಿಲಿಂಡರ್ ಸ್ಫೋಟಗೊಂಡು ಐದು ಮಂದಿ ಗಾಯಗೊಂಡಿರವ ಘಟನೆ ನಗರದ ವೀವರ್ಸ್ ಕಾಲೋನಿ ಸಮೀಪದ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್(32) ನಾಜಿಯಾ(22) ಇರ್ಫಾನ್ (21)ಗುಲಾಬ್(18) ಶಹಜಾದ್(9) ಗಾಯಗೊಂಡವರು. ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕುಟುಂಬ ವಾಸವಾಗಿತ್ತು.

ಆಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದೆ ಇಂದು ಮುಂಜಾನೆ 5:30 ರ ಸುಮಾರಿಗೆ ಲೈಟ್​ನ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್​ ಸ್ಫೋಟಗೊಂಡಿದೆ.

ಸ್ಪೋಟದ ತೀವ್ರತೆಗೆ ಮನೆಯ ಕಿಡಕಿ ಬಾಗಿಲುಗಳು ಛಿದ್ರಗೊಂಡಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಕೋಣನಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂದು ರಿಲೀಸ್ ಆಗಲಿದೆ ‘ಡಂಕಿ’ ರೋಮ್ಯಾಂಟಿಕ್ ನಂಬರ್..ತಾಪ್ಸಿ ಜೊತೆ ಶಾರುಖ್ ಖಾನ್ ರೋಮ್ಯಾನ್ಸ್

0

‘ಡಂಕಿ’ ಸಿನಿಮಾ ಮೂಲಕ ಶಾರುಖ್ ಖಾನ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ‘ಡಂಕಿ’ ಡ್ರಾಪ್ 1 ಝಲಕ್ ಕಿಕ್ ಕೊಟ್ಟಿದೆ. ಮೊದಲ ಹಾಡನ್ನು ಡ್ರಾಪ್ 2 ಎಂದು ಚಿತ್ರತಂಡ ರಿಲೀಸ್ ಮಾಡಲು ಹೊರಟಿದೆ..

‘ಡಂಕಿ’ ಸಿನಿಮಾದ ಮೊದಲ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೊಂದು ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಶಾರುಖ್ ಖಾನ್ ಅಭಿಮಾನಿಗಳ ಕಣ್ಣು ಅರಳಿದೆ. ಕಳೆದ ಎರಡು ಸಿನಿಮಾಗಳಲ್ಲಿ ಶಾರುಖ್ ಖಾನ್ ಅನ್ನು ಹೆಚ್ಚಾಗಿ ಆಕ್ಷನ್ ಅವತಾರದಲ್ಲಿಯೇ ನೋಡಿದ್ದರು. ಹೀಗಾಗಿ ರೊಮ್ಯಾಂಟಿಕ್ ಲುಕ್‌ನಲ್ಲಿ ನೋಡುವುದಕ್ಕೆ ಕಾತುರರಾಗಿದ್ದಾರೆ.

‘ಡಂಕಿ’ ಸಿನಿಮಾದ ಈ ರೊಮ್ಯಾಂಟಿಕ್ ಸಾಂಗ್ ನಾಳೆ ರಿಲೀಸ್ ಆಗಲಿದೆ. “ಲುಪ್ ಪುಟ್ ಗಯಾ..” ಅನ್ನೋ ಈ ಮೇಲೋಡಿ ಹಾಡನ್ನು ಕೇಳುವುದಕ್ಕೆ ಸಂಗೀತ ಆಸಕ್ತರು ಕಾದು ಕೂತಿದ್ದಾರೆ. ಬಾಲಿವುಡ್‌ನ ಜನಪ್ರಿಯರ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಈ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. ಶಾರುಖ್ ಖಾನ್ ಹಾಗೂ ತಾಪ್ಸಿ ಪನ್ನು ರೊಮ್ಯಾಂಟಿಕ್ ಸಾಂಗ್ ಗೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ ಮತ್ತು ಕನಿಕಾ ಧಿಲ್ಲೋನ್ ಡಂಕಿಗೆ ಕಥೆ ಬರೆದರೆ, ರಾಜ್ ಕುಮಾರ್ ಹಿರಾನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಾರ್ಡಿ ಪಾತ್ರದಲ್ಲಿ ಶಾರುಖ್ , ಮನು ಪಾತ್ರದಲ್ಲಿ ತಾಪ್ಸಿ, ರಾಜಕುಮಾರ್ ಹಿರಾನಿ ಫೇವರಿಟ್ ಆ್ಯಕ್ಟರ್ ಬೊಮನ್ ಇರಾನಿ ಇಲ್ಲಿ ಗುಲಾಟಿ ಅನ್ನುವ ಪಾತ್ರ ಮಾಡಿದ್ದಾರೆ. ಹೀಗೆ ಹೆಸರಾಂತ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಜಕುಮಾರ್ ಹಿರಾನಿ ಕಾನೂನು ಬಾಹಿರವಾಗಿ ಕೆನಡಾ ಮತ್ತು ಅಮೆರಿಕಕ್ಕೆ ಹೋಗುವ ಜನರ ಕಥೆಯನ್ನೆ ಡಂಕಿ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಡಂಕಿ ಚಿತ್ರವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಈ ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಡಂಕಿ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ, ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಇನ್ನೇನು ಡಿಸೆಂಬರ್‌ ಕೊನೇ ವಾರದಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಬೆಂಗಳೂರು ಕಂಬಳ: ಇಂದು ಕುದಿ ಕಂಬಳಕ್ಕೆ ಚಾಲನೆ

0

ಬೆಂಗಳೂರು:- ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳ -ನಮ್ಮ ಕಂಬಳದ ಪೂರ್ವಭಾವಿಯಾಗಿ ಬುಧವಾರ ಕುದಿ ಕಂಬಳಕ್ಕೆ ಚಾಲನೆ ಸಿಗಲಿದೆ. ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರು ಬೆಳಗ್ಗೆ 10ಕ್ಕೆ ಅರಮನೆ ಮೈದಾನದ 5ನೇ ಗೇಟ್‌ನಲ್ಲಿ ನಿರ್ಮಿಸಲಾದ ಕಣದಲ್ಲಿ ಕುದಿ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ.

ಅರಮನೆ ಮೈದಾನದಲ್ಲಿ ಕಂಬಳದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ವೇದಿಕೆ, ಆಸನ, ಪಾರ್ಕಿಂಗ್‌ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಹಗಲಿರುಳು ಶ್ರಮಿಸುತ್ತಿದೆ. ಜತೆಗೆ ಸ್ಟಾಲ್‌ಗ‌ಳ ನೋಂದಣಿ ಕೆಲಸವು ಭರದಿಂದ ನಡೆಯುತ್ತಿದೆ.

ಕಂಬಳ ಸ್ಪರ್ಧಾಕೂಟ ಸಮೀಪಿಸುತ್ತಿದ್ದಂತೆ ಕುದಿ ಕಂಬಳ ಆಯೋಜಿಸಲಾಗುತ್ತದೆ. ಕರಾವಳಿಯಲ್ಲಿ ಸ್ಪರ್ಧೆ ನಡೆಯುವ ಒಂದು ತಿಂಗಳ ಮೊದಲು ಕುದಿ ಕಂಬಳ ಎಂಬ ಕೋಣಗಳ ಓಟದ ರಿಹರ್ಸಲ್‌ ಅಥವಾ ಓಟದ ತಾಲೀಮು ಮಾಡಲಾಗುತ್ತದೆ. ಈ ವೇಳೆ ಕೋಣಗಳಿಗೆ ಹುರಿದುಂಬಿಸುವ ಕೆಲಸವಾಗುತ್ತದೆ. ಅಂತೆಯೇ ಬೆಂಗಳೂರು ಕಂಬಳದ ಪೂರ್ವಭಾವಿಯಾಗಿ ಬುಧವಾರ ಮಂಗಳೂರಿನಿಂದ ಆಗಮಿಸಿದ ಎರಡು ಜೋಡಿ ಕೋಣಗಳು ಕುದಿ ಕಂಬಳದ ಟ್ರಯಲ್‌ಗೆ ಇಳಿಯಲಿದೆ.

ಬೆಂಗಳೂರಿನಲ್ಲಿ ವಿಚಿತ್ರ ಕಳ್ಳ; ಎಳನೀರು ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ!

0

ಬೆಂಗಳೂರು:- ಸಾಮಾನ್ಯವಾಗಿ ಎಲ್ಲರೂ ನಗನಾಣ್ಯ ಕಳ್ಳತನ ಮಾಡಿದ್ರೆ, ಈ ಕಳ್ಳನ ಟಾರ್ಗೆಟ್ ಮಾತ್ರ ಎಳನೀರು ಮಾತ್ರ.

ಹೌದು, ನಗರದಲ್ಲಿ ಎಳನೀರು ಕಳ್ಳತನ ಮಾಡುತ್ತಿದ್ದ ಅಸಾಮಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ಮೋಹನ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಕಳೆದ ಮೂರು ತಿಂಗಳಿಂದ ಮೋಹನ್ ಎಳನೀರು ಕಳ್ಳತನ ಮಾಡುತ್ತಿದ್ದ. ಎಳನೀರು ಕದಿಯಲೆಂದೆ ಕಾರಿನಲ್ಲಿ ಅರಾಮಿನ ಬರುತ್ತಿದ್ದ.

ರಾತ್ರಿ ವೇಳೆ ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ. ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ಇತ್ತೀಚಿಗೆ ಎಳನೀರು ಕಳ್ಳತನ ಮಾಡಿದ್ದ.

ರಾಜಣ್ಣ ಎಂಬುವರು 1150 ಎಳನೀರು ಆರೋಪಿ ಮೋಹನ್ ಕದ್ದಿದ್ದ. ಈ ಸಂಬಂಧ ಎಳನೀರು ವ್ಯಾಪಾರಿ ರಾಜಣ್ಣ ಗಿರಿನಗರ ಠಾಣೆಗೆ ದೂರು ನೀಡಿದ್ದ. ಸಿಸಿಟಿವಿಗಳ ಪರಿಶೀಲನೆ ನಡೆಸಿ ಪೊಲೀಸರು ಮೋಹನ್ ನನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ತನಿಖೆ ವೇಳೆ ಎಳನೀರು ಕಳ್ಳನ ಜೂಜಾಟ ಬೆಳಕಿಗೆ ‌ಬಂದಿದೆ. ಆನ್‌ಲೈನ್ ನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಆರೋಪಿಯು, ಸಾಲ ಜಾಸ್ತಿ ಆಗಿದ್ದರಿಂದ ಎಳನೀರು ಕಳ್ಳತನಕ್ಕೆ ಪ್ಲಾನ್ ಮಾಡಿದ್ದ. ಪ್ರತಿದಿನ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಆರೋಪಿ ಬರುತ್ತಿದ್ದ.

ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್‌ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ನಂತರ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ. ನಂತರ ಟ್ಯಾಕ್ಸಿ ಬಿಟ್ಟು ರಾತ್ರಿ ವೇಳೆ ಎಳನೀರು ಕಳ್ಳತನಕ್ಕೆ ಇಳಿದಿದ್ದ.

ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದ ಅಸಾಮಿ, ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ.

ಡೈಲಿ 100-150 ಎಳನೀರು ಕದ್ದು ಮಾರಾಟ ಮಾಡುತ್ತಿದ್ದರು. ತಮಿಳುನಾಡು ಮೂಲದ ಆರೋಪಿ ಮೋಹನ್ ಎನ್ನಲಾಗಿದೆ. ಮಡಿವಾಳದಲ್ಲಿ ವಾಸವಾಗಿದ್ದ ಮೋಹನ್ ನನ್ನು ಸಧ್ಯ ಅರೆಸ್ಟ್ ಮಾಡಿರುವ ಪೊಲೀಸ್ ತನಿಖೆ ಕೈಗೊಂಡಿದ್ದಾರೆ.

ರಾಜ್ಯದ ಹಲವೆಡೆ ಇಂದಿನಿಂದ 2 ದಿನಗಳ ಕಾಲ ಮಳೆ ಸಾಧ್ಯತೆ

0

ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದಿನಿಂದ 2 ದಿನಗಳ ಕಾಲ ಮಳೆ ಆಗಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.

ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 24ರಂದು ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Namma Metro: ಯುವತಿಗೆ ಲೈಂಗಿಕ ಕಿರುಕುಳ – ಕಿರುಚಿದರೂ ನೆರವಿಗೆ ಬಾರದ ಪ್ರಯಾಣಿಕರು

0

ಬೆಂಗಳೂರು:- ಯುವತಿಯೋರ್ವಳಿಗೆ ನಮ್ಮ ಮೆಟ್ರೋದಲ್ಲಿ ಸಾರ್ವಜನಿಕವಾಗಿ ಕಿರುಕುಳ ನೀಡಲಾಗಿದೆ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಿರುಕುಳ ಎಸಗಿದ ವ್ಯಕ್ತಿ ಗುಂಪಿನಲ್ಲಿ ಸಲೀಸಾಗಿ ಕಣ್ಮರೆಯಾಗಿದ್ದಾನೆ. ಸಂತ್ರಸ್ತೆಯ ಸ್ನೇಹಿತರು ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಈ ಘಟನೆಯನ್ನು ಹಂಚಿಕೊಂಡಿರುವ ಆಕೆಯ ಸ್ನೇಹಿತರು, ಕಾಲೇಜಿಗೆ ಹೋಗಲು ಬಸ್ ಬಳಸಲಾಗುತ್ತಿತ್ತು. ಆದರೆ ಸೋಮವಾರ ಮೆಟ್ರೋದಲ್ಲಿ ಪ್ರಯಾಣಿಸಲಾಯಿತು. ಮೆಜೆಸ್ಟಿಕ್‌ನಲ್ಲಿ ಬೆಳಗ್ಗೆ 8.50ರ ಸುಮಾರಿಗೆ ಮೆಟ್ರೋದಲ್ಲಿ ಸಾಕಷ್ಟು ಜನಸಂದಣಿ ಇತ್ತು. ಅಲ್ಲಿ ತಳ್ಳಾಟ, ನೂಕಾಟ ನಡೆಯುತ್ತಿತ್ತು.

ಜನಸಂದಣಿ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಮಹಿಳೆ ಹೆಚ್ಚಿನ ಸಂಖ್ಯೆಯ ಜನರನ್ನು ರೈಲಿಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು ‘ಸ್ವಲ್ಪ ಸಮಯದ ನಂತರ, ಸ್ನೇಹಿತೆಗೆ ತುಂಬಾ ಅನಾನುಕೂಲವಾಯಿತು. ಕೆಂಪು ಅಂಗಿಯ ವ್ಯಕ್ತಿಯೊಬ್ಬನು ತನ್ನ ಹಿಂದೆ ನಿಂತಿದ್ದಾನೆ ಎಂದು ಅವಳು ಅರಿತುಕೊಂಡಳು. ಅವನು ಅವಳನ್ನು ಮುಟ್ಟುತ್ತಿದ್ದನು. ಅವನ ಉಗುರುಗಳು ಅವಳನ್ನು ಚುಚ್ಚುತ್ತಿದ್ದವು. ಆರಂಭದಲ್ಲಿ ಏನಾಗುತ್ತಿದೆ ಎಂದು ಆಕೆಗೆ ತಿಳಿದಿರಲಿಲ್ಲ, ಅವಳು ತಿರುಗಿ ನೋಡಿದಾಗ, ಒಬ್ಬ ವ್ಯಕ್ತಿ ತನ್ನ ಹಿಂದೆ ನಿಂತಿದ್ದನು. ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಳು. ಆದರೆ ಜನರು ಅವಳಿಗೆ ಸಹಾಯ ಮಾಡಲಿಲ್ಲ, ಇದರ ಲಾಭ ಪಡೆದ ವ್ಯಕ್ತಿ ಆ ಗುಂಪಿನಲ್ಲಿ ಮಾಯವಾದನು.

ಈ ವಿಷಯದಲ್ಲಿ ಹೇಗೆ ದೂರು ನೀಡಬೇಕೆಂದು ಯಾರಾದರೂ ನನಗೆ ಹೇಳಬಹುದೇ? ಸಿಸಿಟಿವಿ ಕ್ಯಾಮೆರಾಗಳಿವೆಯೇ ? ನಾನು ದೃಶ್ಯವನ್ನು ಎಲ್ಲಿ ನೋಡಬಹುದು? ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಯುವತಿಯ ಸ್ನೇಹಿತರು ಪ್ರಶ್ನಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಜಗಳ, ಗಂಭೀರ ಗಾಯಗೊಂಡ ವೃದ್ಧ ಸಾವು

0

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಯಲ್ಲಿ ನಡೆದ‌ ಗಲಾಟೆಯಲ್ಲಿ ವೃದ್ಧ ಸಾವನ್ನಪ್ಪಿದ ಘಟನೆ ನಡೆದಿದೆ. 77 ವರ್ಷದ ಕೃಷ್ಣಪ್ಪ ಮೃತ ವೃದ್ಧ.. ನವೆಂಬರ್ 16 ರಂದು ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಮೆಡಿಸಿನ್ ತರಲು ವೃದ್ಧ ಹೋಗುತ್ತಿದ್ದ. ಆಗ ಕೃಷ್ಣಪ್ಪನ ಬೈಕ್ ಗೆ ಸರ್ಫರಾಜ್ ಖಾನ್ ಡಿಕ್ಕಿ ಹೊಡಿದಿದ್ದ. ನಂತರ ಕೃಷ್ಣಪ್ಪ ಖಾನ್ ಮೇಲೆ ಕೂಗಾಡಿದ್ದರು, ಸರಿಯಾಗಿ ಬೈಕ್ ಓಡಿಸುವಂತೆ ಹೇಳಿದ್ದರು. ಆಗ ಕೃಷ್ಣನ ಮೇಲೆ ಖಾನ್ ಕಲ್ಲಿನಿಂದ ಹಲ್ಲೆ ಮಾಡಿದ್ದ. ನಂತರ ಅಲ್ಲಿಂದ ಪರಾರಿಯಾಗಿದ್ದ.

ಸ್ಥಳಿಯರ ಸಹಾಯದಿಂದ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.. ನಂತರ ಕೃಷ್ಣಪ್ಪ ಮೃತ ಪಟ್ಟಿದ್ದರು. ನವೆಂಬರ್ 17 ರಂದು ಕೃಷ್ಣಪ್ಪನವರ ಮಗ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದ್ರು. ಆಗ ಕೃಷ್ಣಪ್ಪ ನವರ ಮೇಲೆ ಹಲ್ಲೆ ಆಗಿರೋದು ಗೊತ್ತಾಗಿತ್ತು. ಕೃಷ್ಣಪ್ಪನ ಮಗ ಸತೀಶ್ ಆಗ ವಯಾಲಿಕಾವಲ್‌ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಯಾಲಿಕಾವಲ್ ಪೊಲೀಸರಿಂದ ಖಾನ್ ಬಂಧನ ಮತ್ತು ಖಾನ್ ಮೇಲೆ ರೌಡಿಶೀಟರ್ ಓಪನ್ ಆಗಿದೆ. ವಯಾಲಿಕಾವಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಮದುವೆಗೆ ಪೀಡಿಸುತ್ತಿದ್ದ ಪ್ರಿಯಕರ: ರಾಡ್‌ನಿಂದ ಹೊಡೆದು ಕೊಂದ ಯುವತಿ ತಂದೆ..!

0

ಬೆಂಗಳೂರುನಗರದ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್​ ಬಳಿ ಮಗಳ ಪ್ರಿಯಕರನನ್ನು ತಂದೆಯೇ ಕೊಂದು ಹಾಕಿರುವ ಘಟನೆ ನಡೆದಿದೆ.

ಡೇವಿಡ್​ ಕೊಲೆಯಾದ ಯುವಕ. ಯುವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ ನಡೆದಿದೆ. ಆಟೋ ಡ್ರೈವರ್ ಆಗಿದ್ದ ಡೇವಿಡ್, ಮಂಜುನಾಥ್​ ಎಂಬಾತನ ಮಗಳನ್ನ ಪ್ರೀತಿಸ್ತಿದ್ದ. ಮದುವೆ ಮಾಡಿಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ನಿಮ್ಮ ಮಗಳೊಂದಿಗಿನ ಫೋಟೋಗಳನ್ನ ವೈರಲ್​​ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಫೋಟೋ ಮತ್ತು ವಿಡಿಯೋ ಇದೆ ಅಂತ ಹೆದರಿಸ್ತಿದ್ದ. ಇದರಿಂದ ಮಗಳ ಮರ್ಯಾದೆ ಹಾಳಾಗುತ್ತೆ ಎಂಬ ನಿರ್ಧಾರಕ್ಕೆ ಬಂದ ತಂದೆ ಮಾತನಾಡುವ ನೆಪದಲ್ಲಿ ಡೇವಿಡ್​​ನನ್ನು ಕರೆದು ರಾಡ್​ನಿಂದ ಹೊಡೆದು, ಚಾಕುವಿನಿಂದ ಇರಿದಿದ್ದಾನೆ. ನಂತರ ಹಾಲೋಬ್ರಿಕ್ಸ್ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ.

ಸದ್ಯ ಆರೋಪಿ ಮಂಜುನಾಥ್​​ನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆಡಿದ್ದಾರೆ.

ಗರ್ಲ್ ಫ್ರೆಂಡ್ ಜೊತೆ ಕೆಸಿನೋ ಆಡುವಾಗ ಸಿಕ್ಕಿಬಿದ್ದ ಮನೆ ಕಳವು ಮಾಡ್ತಿದ್ದ ಆರೋಪಿ

0

ಬೆಂಗಳೂರು: ದೊಡ್ಡ ದೊಡ್ಡ ಬಂಗಲೆಗಳನ್ನೇ ಟಾರ್ಗೆಟ್ ಮಾಡಿ ಕೆಜಿ ಕೆಜಿ ಚಿನ್ನ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಗೋವಿಂದರಾಜನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಬೆಂಗಳೂರಿನ ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಅರೆಸ್ಟ್ ಆಗಿದ್ದಾನೆ. ಆರೋಪಿ ಬಳಿಯಿಂದ ಬರೋಬ್ಬರಿ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ವಿರುದ್ಧ ಬೆಂಗಳೂರಿನಲ್ಲಿ 83 ಕ್ಕೂ ಹೆಚ್ಚು ಮನೆಗಳ್ಳತನ ಕೇಸ್‌ಗಳಿವೆ. ನಗರ ಮಾತ್ರವಲ್ಲದೆ ಕರ್ನಾಟಕದ ಬೇರೆ ಭಾಗಗಳಲ್ಲಿಯೂ ಕಳ್ಳತನದ ಆರೋಪವಿದೆ.

ಕೊಳಚೆ ಪ್ರದೇಶದಲ್ಲಿ ಬಚ್ಚಿಟ್ಟಿದ್ದ ಚಿನ್ನ

ಎಸ್ಕೇಪ್ ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕೆಸಿನೋಗೆ ಹೊರಟಿದ್ದ. ಆದರೆ ರೈಲು ತಡವಾಗಿದ್ದರಿಂದ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೇ ಖತರ್ನಾಕ್ ಪ್ಲ್ಯಾನ್ ಮಾಡಿ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಎಸ್ಕೇಪ್ ಆಗಿದ್ದ.

ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆಂದು ಹೋಗಿದ್ದ ಕಾರ್ತಿಕ್ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನವನ್ನು ಹೂತಿಟ್ಟಿದ್ದ. ಗುಂಡಿ ತೆಗೆದ ಜಾಗದಲ್ಲಿ ಗುರುತಿಗೆ ಮೇಲೆ ಕಲ್ಲೊಂದನ್ನು ಇಟ್ಟಿದ್ದ. ಬಳಿಕ ಗರ್ಲ್‌ಫ್ರೆಂಡ್ ಜೊತೆ ಗೋವಾಕ್ಕೆ ಹೋಗಿದ್ದ.

ಕೆಲ ದಿನಗಳ ಹಿಂದೆ ಗೋವಾದ ಕೆಸಿನೋದಲ್ಲಿ  ಗೆಳತಿಯ ಜೊತೆ ಸಿಕ್ಕಿಬಿದ್ದಿದ್ದ ಆರೋಪಿ ಕದ್ದ ಚಿನ್ನ ಎಲ್ಲಿಟ್ಟಿದ್ದ ಎಂಬುದನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

ಚಿನ್ನವನ್ನು ಹೂತಿಟ್ಟಿದ್ದ ಜಾಗ ಕಂಡು ಪೊಲೀಸರೇ ದಂಗಾಗಿದ್ದಾರೆ. ಮುಕ್ಕಾಲು ಕೆಜಿ ಚಿನ್ನವನ್ನು ಮಣ್ಣಿನಿಂದ ಕಾರ್ತಿಕ್ ಹೊರಗೆ ತೆಗೆದು ಗೋವಿಂದರಾಜನಗರ ಪೊಲೀಸರ ಕೈಗೆ ಕೊಟ್ಟಿದ್ದಾನೆ.

ಅವಳಿ ಕರುಗಳಿಗೆ ಜನ್ಮ ನೀಡಿದ ಹಸು: ಅಪರೂಪದ ಘಟನೆಗೆ ಬೆರಗಾದ ಜನ

0

ಹಾಸನ: ಹಸುವೊಂದು ಅವಳಿ ಕರುಗಳಿಗೆ ಜನ್ಮ‌ ನೀಡಿದೆ. ಹೌದು ಹಾಸನದ ಹೊರವಲಯದ ಬುಸ್ತೇನಹಳ್ಳಿ ಗ್ರಾಮದಲ್ಲಿ ಹಸು ಅವಳಿ ಕರುವಿಗೆ ಜನ್ಮ ನೀಡಿದ್ದನ್ನು ಕಂಡು ಸ್ಥಳೀಯರು ಬೆರಗಾಗಿದ್ದಾರೆ.

ಬುಸ್ತೇನಹಳ್ಳಿ ಗ್ರಾಮದ ಶಾರದ ವೆಂಕಟೇಶ್ ಅವರು ಸಾಕಿರುವ ಪ್ರೀತಿಯ ಹಸು ಅವಳಿ ಕರುಗಳಿಗೆ ಜನ್ಮ ನೀಡಿದೆ. ಅವಳಿ ಕರು ಕಂಡು ಹಸು ಮಾಲೀಕರ ಮನೆಯಲ್ಲಿ ಸಂಭ್ರಮ ಹೆಚ್ಚಾಗಿದೆ.

ಆರೋಗ್ಯವಾಗಿರುವ ಎರಡೂ ಕರುಗಳನ್ನು ಆರೈಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹಸುಗಳು ಒಂದೇ ಕರುವಿಗೆ ಜನ್ಮ ನೀಡುತ್ತವೆ. ಆದರೆ  ಹಾಸನದ ಬುಸ್ತೇನಹಳ್ಳಿ ಗ್ರಾಮದಲ್ಲಿ ಅಪರೂಪಕ್ಕೆ ಎಂಬಂತೆ ಎರಡು ಕರುಗಳಿಗೆ ಹಸು ಜನ್ಮ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

error: Content is protected !!