Home Blog Page 3153

ಆಹಾರ ಅರಸಿ ಬಂದು ಬಾವಿಗೆ ಬಿದ್ದ ಚಿರತೆಯ ರಕ್ಷಣೆ

0

ತುಮಕೂರು: ಆಹಾರ ಅರಸಿಕೊಂಡು ಬಂದ ಚಿರತೆಯೊಂದು ಬಾವಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ತಿಪಟೂರು ತಾಲ್ಲೂಕು ಮಾರನಗೆರೆಯಲ್ಲಿ ಘಟನೆ ಸಂಭವಿಸಿದ್ದು, ಆಹಾರ ಹುಡುಕಿಕೊಂಡು ಬಂದ ಚಿರತೆಯು‌ ಆಯ ತಪ್ಪಿ ಪಾಳು ಬಾವಿಗೆ ಬಿದ್ದಿದೆ. ಚಿರತೆ ಬಾವಿಗೆ ಬಿದ್ದ ವಿಷಯ ತಿಳಿದು ಜನರು ಚಿರತೆ ನೋಡಲು ಮುಗಿ ಬಿದ್ದಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.  ಕಳೆದ ಹಲವು ದಿನಗಳಿಂದ ಈ ಭಾಗದಲ್ಲಿ ಮೂರು ಚಿರತೆಗಳು ಓಡಾಡಿಕೊಂಡಿರುವುದನ್ನು ಗ್ರಾಮಸ್ಥರು ಗಮನಿಸಿದ್ದರು. ಒಂದು ದಿನದ ಹಿಂದಷ್ಟೇ ಮೇಕೆಯೊಂದನ್ನು ಚಿರತೆ ಬಲಿ ಪಡೆದಿತ್ತು.

ಅಧಿಕಾರದ ಬಗ್ಗೆ ಚರ್ಚೆ ಮಾಡಿದ್ರೆ ಜನರಿಗೆ ಯಾವ ಲಾಭ ಇಲ್ಲ: ಕೃಷ್ಣಭೈರೇಗೌಡ

0

ಬಳ್ಳಾರಿ: ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿಕೆ ವಿಚಾರಕ್ಕೆ ಸಂಭಂಧಿಸಿದಂತೆ ‘ ಯಾವ ಸಮಯಕ್ಕೆ ಯಾರು ಸಿಎಂ ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಬಳ್ಳಾರಿಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಒಳ್ಳೆಯ ಆಡಳಿತ ನಡೆಸಲು ಜನರು ನಮಗೆ ಅಧಿಕಾರ ಕೊಟ್ಟಿದ್ದು, ಆ ಕಡೆ ನಾವು ಹೆಚ್ಚಿನ ಗಮನ ಕೊಡಬೇಕು. ಮುಂದೆ ಯಾರು ಸಿಎಂ ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅಭಿವೃದ್ಧಿ ಕಡೆಗೆ ನಮ್ಮ ಗಮನ ಇದ್ದರೆ ಎಲ್ಲರಿಗೂ ಒಳ್ಳೆಯದು. ಅಧಿಕಾರದ ಬಗ್ಗೆ ಚರ್ಚೆ ಮಾಡಿದ್ರೆ ಜನರಿಗೆ ಯಾವ ಲಾಭ ಇಲ್ಲ ಎಂದರು.

Tumakuru: ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ..!

0

ತುಮಕೂರು: ಭಾರತ್ ಜೋಡೋ ಯಾತ್ರೆ ವೇಳೆ ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿ ದಣಿವಾರಿಸಿದ್ದ ಅಜ್ಜಿಯೊಬ್ಬರು ನಿಧನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕ್ಕನಾಯಕನಹಳ್ಳಿಯ ಶಾರದಮ್ಮ (78) ನಿಧನರಾದ ಅಜ್ಜಿ.

2022ರ ಅಕ್ಟೋಬರ್‌ನಲ್ಲಿ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ ಭಾರತ್ ಜೋಡೋ ಯಾತ್ರೆ ಹೊರಟಿದ್ದ ಸಂದರ್ಭ ರಾಹುಲ್ ಗಾಂಧಿಗೆ ಫುಟ್‌ಪಾತ್ ವ್ಯಾಪಾರಿಯಾಗಿದ್ದ ಈ ಅಜ್ಜಿ ಸೌತೆಕಾಯಿಯನ್ನು ನೀಡಿ ದಣಿವಾರಿಸಿದ್ದರು. ಇಷ್ಟು ಮಾತ್ರವಲ್ಲದೇ ರಾಹುಲ್ ಗಾಂಧಿ ಬಳಿ ಇಂದಿರಾಗಾಂಧಿಯನ್ನು ಶಾರದಮ್ಮ ಹೊಗಳಿದ್ದರು. ಅನಾರೋಗ್ಯದ ಹಿನ್ನೆಲೆ ಶಾರದಮ್ಮ ನಿಧನರಾಗಿದ್ದಾರೆ.

 

ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ: ಸಿದ್ದರಾಮಯ್ಯ ಭರವಸೆ

0

ಬೆಂಗಳೂರು: ಮೀನುಗಾರ ಸಮಯದಾಯ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮೀನುಗಾರರಿಗೆ ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳನ್ನು ವಿತರಿಸಿದ ಬಳಿಕ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮೀನುಗಾರಿಕೆ ವಿಶ್ವ ವಿದ್ಯಾಲಯ ಮಾಡುವ ಬಗ್ಗೆ ಮುಂದಿನ ವರ್ಷ ವಿಚಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ‌ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಅಗತ್ಯ ಎಲ್ಲಾ ನೆರವನ್ನೂ ನೀಡುತ್ತದೆ ಎಂದು ಭರವಸೆ ನೀಡಿದರು.

ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗಿನಿಂದಲೂ ಅಧಿವೇಶನದಲ್ಲಿ ಹೋರಾಟ ನಡೆಸಿದ್ದೆ. ಆದರೂ ಹಿಂದಿನ ಸರ್ಕಾರ ಮತ್ತು ಸರ್ಕಾರದಲ್ಲಿದ್ದ ಸಚಿವರು ಪರಿಹಾರ ಒದಗಿಸಲೇ ಇಲ್ಲ. ರಿಯಾಯ್ತಿ ಡೀಸೆಲ್ ಕೊಡುವಂತೆ ನಾವು ಅಧಿವೇಶನದಲ್ಲಿ ಹೋರಾಟ ಮಾಡಿದರೂ ಸರ್ಕಾರ ಕೊಡಲಿಲ್ಲ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಬಳಿಕ ಬೇಡಿಕೆ ಈಡೇರಿಸಿದ್ದೇವೆ. ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂಪಾಯಿ ಸಹಾಯ ಧನವನ್ನು 3 ಲಕ್ಷಕ್ಕೆ ಏರಿಸಿದ್ದು ನಮ್ಮ ಸರ್ಕಾರ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಕೆಲಸ ಆರಂಭವಾಗುತ್ತದೆ ಎಂದು ವಿವರಿಸಿದರು.

ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿ: ಡಿ.ಕೆ.ಶಿವಕುಮಾರ್

0

ಬೆಂಗಳೂರು: ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದರು. ನಗರದಲ್ಲಿ ಮಾತನಾಡಿದ ಡಿಕೆಶಿ,

ದೊಡ್ಡ ಆಲಹಳ್ಳಿ ಸುತ್ತಮುತ್ತ ಯಾವನಾದರೂ ಒಬ್ಬ ನಾನು ಬ್ಲೂ ಫಿಲಂ ತೋರಿಸಿದ್ದೀನಿ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಕುಮಾರಸ್ವಾಮಿ ಕನಕಪುರಕ್ಕೆ ಬರಲಿ, ಬ್ಲೂ ಫಿಲಂ ಬಗ್ಗೆ ಮಾತಾಡಲಿ. ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗುತ್ತೆ. ವಿಧಾನಸಭೆ ಚುನಾವಣೆಯಲ್ಲಿ ಕನಕಪುರಕ್ಕೆ ಬಂದು ಕುಮಾರಸ್ವಾಮಿ ಪ್ರಚಾರ ಮಾಡಿಲ್ಲ‌‌. ಬಂದು ಬ್ಲೂ ಫಿಲಂ ಬಗ್ಗೆ ಹೇಳಬೇಕಿತ್ತು, ಆಗ ಗೊತ್ತಾಗೋದು ಎಂದು ಟಾಂಗ್‌ ಕೊಟ್ಟರು.

ನನಗೆ ಯಾರ್ ಬ್ರೇಕ್ ಹಾಕ್ತಾರೆ ರೀ, ಪ್ರಕೃತಿ ನಿಯಮ ಇದೆ. ನನಗೆ ಯಾರು ಬ್ರೇಕ್ ಗೀಕ್ ಹಾಕಲ್ಲ. ಕೆಲವರು ಲಿಮಿಟೇಶನ್ ದಾಟುತ್ತಾರೆ ಅಷ್ಟೇ. ಕುಮಾರಸ್ವಾಮಿ ಜೊತೆ ಗುದ್ದಾಟಕ್ಕೆ ನನಗೆ ಟೈಂ ಇಲ್ಲ. ಅಯ್ಯೋ ಪಾಪ ಅವರಿಗೆ ಪ್ರಾಬ್ಲಂ ಇದೆ. ಈಗಲೂ 21 ಥಿಯೇಟರ್ ಇವೆ. ನಮ್ಮದು ಎಲ್ಲಾದ್ರೂ ಉಂಟೇನ್ರಿ. ದೊಡ್ಡ ಆಲಹಳ್ಳಿ, ಕೋಡಹಳ್ಳಿ, ಸಾತನೂರಿನಲ್ಲಿ ಹೋಗಿ ಜನರನ್ನ ಕೇಳಿ. ಒಬ್ಬ ಏನಾದ್ರೂ ಡಿಕೆಶಿ ಬ್ಲೂ ಫಿಲ್ಮ್ ತೋರಿಸ್ತಿದ್ದ ಅಂದ್ರೆ ನಾನು ರಾಜಕೀಯ ನಿವೃತ್ತಿ ತಗೋತೀನಿ ಎಂದು ತಿರುಗೇಟು ಕೊಟ್ಟರು.

 

ಊಟದಲ್ಲಿ ಹುಳುಗಳು ಪತ್ತೆ ಹಿನ್ನೆಲೆ: ಯುನಿವರ್ಸಿಟಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0

ಬೆಂಗಳೂರು: ಹುಳಬಿದ್ದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದ ಹಾಸ್ಟೆಲ್ ನಲ್ಲಿ ನಡೆದಿದೆ.

ನಿನ್ನೆ ರಾತ್ರಿ ವಿದ್ಯಾರ್ಥಿಗಳಿಗೆ ನೀಡಲಾದ ಅಹಾರದಲ್ಲಿ ಹುಳ ಪತ್ತೆಯಾಗಿತ್ತು. ತಕ್ಷಣ ಅದರ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿದ್ಯಾರ್ಥಿಗಳು, ಹಾಸ್ಟೆಲ್ ಮುಂಬಾಗದಲ್ಲಿ ಪ್ರತಿಭಟನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಆರೋಪಗಳೇನು..? 

ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಮೂಲಸೌಕರ್ಯ ಕೊರತೆಯ ಬಗ್ಗೆ ಪ್ರಶ್ನೆ ಮಾಡಿದ್ರೆ ಗೂಂಡಾಗಳ ರೀತಿ ವರ್ತನೆ ತೋರುತ್ತಾರೆ. ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಬೆಡ್‌ ವ್ಯವಸ್ಥೆ ಮಾಡಿಲ್ಲ. ಸೂಕ್ತ ಶೌಚಾಲಯ ಇಲ್ಲ, ಗುಣಮಟ್ಟದ ಊಟ ಕೊಡುತ್ತಿಲ್ಲ. 650 ವಿದ್ಯಾರ್ಥಿಗಳಿರುವ ಹಾಸ್ಟೆಲ್‌‌ನಲ್ಲಿ ಒಂದು ಕೊಠಡಿಯಲ್ಲಿ 8 ಮಂದಿಗೆ ಅವಕಾಶ ಬೇರೆ ಬೇರೆ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿರುವ ಆರೋಪ ಮಾಡಿದ್ಧಾರೆ.

ವಾರ್ಡನ್ ದಬ್ಬಾಳಿಕೆ

ಹುಳಬಿದ್ದ ಆಹಾರವನ್ನೇ ತಿನ್ನುವಂತೆ ವಿದ್ಯಾರ್ಥಿನಿಲಯದ ವಾರ್ಡನ್​ ದಬ್ಬಾಳಿಕೆ ಮಾಡುತ್ತಿದ್ದಾರೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ಹಾಸ್ಟೆಲ್ ವಾರ್ಡನನ್ನು ಕೂಡಲೇ ಅಮಾನತು ಮಾಡಬೇಕು ಎಂದು ವಿದ್ಯಾರ್ಥಿ ಮುಖಂಡರು ವಿಶ್ವವಿದ್ಯಾಲಯದ ಕುಲಪತಿ ಮತ್ತು ರಿಜಿಸ್ಟ್ರಾರ್​ ರನ್ನು ಒತ್ತಾಯಿಸಿದ್ದಾರೆ.

ಕರ್ನಾಟಕದ ರೀತಿ ನಮಗೆ ಬೇರೆ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ; ಸುರ್ಜೇವಾಲ

0

ದೇವನಹಳ್ಳಿಹಲವು ವಿಚಾರಗಳ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಬಂದಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ಸೆಳೆಯಬೇಕಿದೆ. ಹೊಸ ಇತಿಹಾಸ ಸೃಷ್ಟಿಸಲು ಕರ್ನಾಟಕ ರಾಜ್ಯ ಪ್ರಮುಖ ಕೇಂದ್ರ. ರಾಜ್ಯದ ರೀತಿ ನಮಗೆ ಬೇರೆ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಲೋಕಸಭಾ ಸ್ಥಾನಗಳ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ನಾನು ಇಲ್ಲಿವರೆಗೂ ಏನು ಹೇಳಿದ್ದೇನೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ: ಹೆಚ್ ಡಿ ಕುಮಾರಸ್ವಾಮಿ

0

ರಾಮನಗರಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಂಟಿಸಿಕೊಳ್ಳಲಿ ಯಾರು ಬೇಡ ಅಂತಾರೆ, ಏನೂ ಮಾಡಲು ಆಗಲ್ಲ. ನನಗೆ ಯಾರು ಏನೂ ಮಾಡೋಕಾಗಲ್ಲ. ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೆ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು.

ನಾನು ಇಲ್ಲಿವರೆಗೂ ಏನು ಹೇಳಿದ್ದೇನೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಹೆಚ್ ​ಡಿ ಕುಮಾರಸ್ವಾಮಿ ಹೇಳಿದರು. ಇನ್ನೂ ಬರದ ವಿಚಾರವಾಗಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಯಾವುದೇ ಪರಿಹಾರ ಹಣವನ್ನು ಇನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಈ ವರ್ಷದಲ್ಲಿ 33,700 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

ಹಬ್ಬಕ್ಕೆ ತವರು ಮನೆಗೆ ಬರದ ಪತಿಯ ಜೊತೆ ಜಗಳ ಮಾಡಿ ವಿಡಿಯೋ ಕಾಲ್ ನಲ್ಲೇ ಪ್ರಾಣಬಿಟ್ಟ ಹೆಂಡತಿ

0

ಬೆಂಗಳೂರು:-ರಾಜಧಾನಿ ಬೆಂಗಳೂರಿನ ಭಾರತಿನಗರದಲ್ಲಿ ದೀಪಾವಳಿ ಹಬ್ಬಕ್ಕೆ ಗಂಡ ತವರು ಮನೆಗೆ ಬರಲಿಲ್ಲ ಎಂದು ಸಿಟ್ಟಾದ ಪತ್ನಿ, ಪತಿಗೆ ವಿಡಿಯೋ ಕಾಲ್ ಮಾಡಿ ಬೈದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

21 ವರ್ಷದ ಆರ್. ದೇವಿಕಾ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರತಿನಗರ ನಿವಾಸಿ ಎನ್ನಲಾಗಿದೆ. ಈಕೆ ಪತಿಯೊಂದಿಗೆ ವಿಡಿಯೋ ಕಾಲ್ನಲ್ಲಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಉಮೇಶ್ ವಿರುದ್ಧ ಮೃತಳ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ದೀಪಾವಳಿಗೆಂದು ತವರು ಮನೆಗೆ ಬಂದಿದ್ದ ಈಕೆ ಹಬ್ಬಕ್ಕೆ ಪತಿ ಅಲ್ಲಿಗೆ ಬರಲಿಲ್ಲ ಎಂದು ವಿಡಿಯೋ ಕಾಲ್ ಮಾಡಿ ತರಾಟೆಗೆ ತೆಗೆದುಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಆಕೆಯನ್ನು ತಡೆಯುವ ಬದಲು ಆತ್ಮಹತ್ಯೆಯ ಲೈವ್ ವಿಡಿಯೋ ನೋಡಿ ನಿರ್ಲಕ್ಷಿಸಿದ್ದಾರೆ ಎಂದು ದೇವಿಕಾ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

ದೇವಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಗರ್ಭಿಣಿ ಆಗಿದ್ದಳು ಎಂಬುದು ತಿಳಿದುಬಂದಿದೆ. ಇಬ್ಬರದ್ದೂ ಪ್ರೇಮ ವಿವಾಹವಾಗಿದ್ದು, ಇದಕ್ಕೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದೂ ಹೇಳಲಾಗಿದೆ.

ಫೈನಲ್ ಪಂದ್ಯದ ಸೋಲಿನ ನಂತರ, ಕೊಹ್ಲಿಯನ್ನು ಅಪ್ಪಿಕೊಂಡ ಅನುಷ್ಕಾ ಶರ್ಮಾ..!

0

ಅಹಮದಾಬಾದ್: ಭಾರತದ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆದ್ರೆ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲು ಭಾರತೀಯ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲಾರದ ನೋವು ತರಿಸಿದೆ. ಟೀಂ ಇಂಡಿಯಾ (Team India) ಬೆಂಬಲಿಸಲು ಮೈದಾನದಲ್ಲಿ ನೆರೆದಿದ್ದ ಲಕ್ಷಾಂತರ ಮಂದಿ ಕೊನೆಯಲ್ಲಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟಿದ್ದನ್ನು ಮರೆಯುವಂತಿಲ್ಲ. ಈಗಲೂ ಅಭಿಮಾನಿಗಳು ಸೋಲಿನ ಕ್ಷಣಗಳನ್ನು ಮೆಲುಕುಹಾಕುತ್ತಿದ್ದಾರೆ.

ವಿಶ್ವಕಪ್ ಫೈನಲ್‌ನಲ್ಲಿ ಭಾರತ ಆಸೀಸ್ ಎದುರು ಸೋತ ನಂತರ ಟೀಂ ಇಂಡಿಯಾದ ಭಾವುಕ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಚಿತ್ರರಂಗದ ಸೆಲಬ್ರಿಟಿಗಳು ಸೇರಿದಂತೆ ರಾಜಕೀಯ ನಾಯಕರು ಕೂಡ ಟೀಂ ಇಂಡಿಯಾ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲದರ ಮಧ್ಯೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ (Anushka Sharma) ಅವರ ಭಾವುಕ ಫೋಟೋಗಳು ಅಭಿಮಾನಿಗಳನ್ನೂ ಭಾವುಕರಾಗುವಂತೆ ಮಾಡಿವೆ.

ವಿಶ್ವಕಪ್‌ನ ಪ್ರತಿ ಪಂದ್ಯಕ್ಕೂ ಹಾಜರಾಗುತ್ತಿದ್ದ ಅನುಷ್ಕಾ ಶರ್ಮಾ, ಕೊಹ್ಲಿ ಅವರಿಂದ ಸಿಡಿದ ಸಾಲು ಸಾಲು ದಾಖಲೆಗಳನ್ನ ಕಣ್ತುಂಬಿಕೊಂಡಿದ್ದರು. ಸ್ಟೇಡಿಯಂನಲ್ಲೇ ಕುಣಿದು ಕುಪ್ಪಳಿಸುತ್ತಾ ಕೊಹ್ಲಿಯನ್ನ ಉರಿದುಂಬಿಸುತ್ತಿದ್ದರು. ಅನುಷ್ಕಾ ಮತ್ತು ವಿರಾಟ್ (Anushka Virat) ಅವರ ಫೋಟೋ-ವೀಡಿಯೊಗಳು ಸಾಕಷ್ಟು ವೈರಲ್ ಆಗುತ್ತಿತ್ತು. ಆದ್ರೆ ವಿಶ್ವಕಪ್ ಸೋಲಿನಿಂದ ನಿರಾಸೆಯಾಗಿ ಬರುತ್ತಿದ್ದ ಕೊಹ್ಲಿಯನ್ನು ಅಪ್ಪಿಕೊಂಡು ಸಂತೈಸಿರುವ ದೃಶ್ಯ ಅಭಿಮಾನಿಗಳ ಕಣ್ಣಿಗೆ ಕಟ್ಟಿದಂತಾಗಿದೆ.

error: Content is protected !!