Home Blog Page 3158

Bigg Boss: ಬಿಗ್ ಬಾಸ್ ಸ್ಪರ್ಧಿ ಪ್ರಗ್ನೆಂಟ್..!

0

ನಗೆ ಪಿರಿಯಡ್ಸ್ ಆಗಿಲ್ಲ, ಗರ್ಭಿಣಿಯೇ (Pregnant) ಎಂದು ತಿಳಿದುಕೊಳ್ಳುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿದ್ದೇನೆ. ನಾನು ಪ್ರಗ್ನೆಂಟ್ ಆಗಿದ್ದೇನೆ ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹಿಂದಿ ಬಿಗ್ ಬಾಸ್ (Bigg Boss) ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ (Ankita Lokhande) ಹೇಳಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಸದ್ಯ ಪ್ರಸಾರವಾಗುತ್ತಿರುವ ಸೀಸನ್ ನಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ (Vicky Jain)ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಸುದ್ದಿ ಬಿಗ್ ಬಾಸ್ ಮನೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಬಿಗ್ ಬಾಸ್ ಆಯೋಜಕರು ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ, ಸದ್ಯದಲ್ಲೇ ಸತ್ಯ ಆಚೆ ಬರಲಿದೆ ಎಂದು ಚರ್ಚಿಸಲಾಗುತ್ತಿದೆ.

ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಜೋಡಿಯಿಂದ ಈ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಅಂಕಿತಾ ಲೋಖಂಡೆ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಬಾಲಿವುಡ್ ನಲ್ಲಿ ಹದಿನಾರು ಸೀಸನ್ ಮುಗಿಸಿರುವ ಬಿಗ್ ಬಾಸ್, ಸೆಪ್ಟೆಂಬರ್ 3 ರಿಂದ ತನ್ನ ಪ್ರಸಾರವನ್ನು ಶುರು ಮಾಡಿದೆ. ಸಲ್ಮಾನ್ ಖಾನ್ ಈ ಶೋ ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಾ ಸಾಗಿದೆ ಹಿಂದಿಯ ಬಿಗ್ ಬಾಸ್.

ಮಾಜಿ ಸಿಎಂ ಬೊಮ್ಮಾಯಿ ಆರೋಗ್ಯ ವಿಚಾರಿಸಿದ ನಿರ್ಮಲಾ ಸೀತಾರಾಮನ್

0

ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಅವರ ಆರ್ ಟಿ ನಗರದ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವಿಧಾನಸಭೆ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರ ಸಂಬಂಧ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಆಗಮಿಸಿದ್ದಾರೆ.

ವೀಕ್ಷಕರು ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವಾಗತಿಸಿದರು. ವಿಧಾನಸಭೆ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರ ಸಂಬಂಧ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ವೀಕ್ಷಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಚಾಲಕನ ನಿರ್ಲಕ್ಷ್ಯ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿದ ಥಾರ್ ಜೀಪ್

0

ಬೆಂಗಳೂರು:– ಮಾಗಡಿ ರಸ್ತೆಯ ವಿರೇಶ್ ಥಿಯೇಟರ್ ಮುಂಭಾಗದ ರಸ್ತೆಯಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಡಿವೈಡರ್ ಮೇಲೆ ಥಾರ್ ಜೀಪ್ ಹತ್ತಿದ ಘಟನೆ ಜರುಗಿದೆ.

ಕಾಮಾಕ್ಷಿಪಾಳ್ಯ ಮಾರ್ಗವಾಗಿ ಮಾಗಡಿರೋಡ್ ಗೆ ಥಾರ್ ಜೀಪ್ ಚಾಲಕ ಬರುತ್ತಿದ್ದ. ಈ ವೇಳೆ ರಸ್ತೆ ಡೌನ್ ಇದ್ದು, ಕಾರು ನಿಯಂತ್ರಣಕ್ಕೆ ಸಿಗದಿದ್ದಾಗ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಬೆಳಗ್ಗೆ 7:05 ರ ಸುಮಾರಿ ಘಟನೆ ನಡೆದಿದೆ.

ಸ್ಥಳಕ್ಕೆ ವಿಜಯನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಇಲ್ಲ. ಬೆಳಗ್ಗೆ ಟ್ರಾಫಿಕ್ ಮೂಮೆಂಟ್ ಕಡಿಮೆ ಇದ್ದಿದ್ದರಿಂದ ಯಾವುದೇ ಅಪಘಾತವಾಗಿಲ್ಲ ಎನ್ನಲಾಗಿದೆ.

ಗದಗ ಬಳಿ ಭೀಕರ ಅಪಘಾತ; ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು, ಮತ್ತೊಬ್ಬ ಗಂಭೀರ

0

ಗದಗ: ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯದ ಗೋಡೆಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ದುರ್ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.

ಮೃತರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿದ್ದಯ್ಯ ಪಾಟೀಲ್ ಹಾಗೂ ಬಾಬು ತಾರಿಹಾಳ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಶಶಿ ಪಾಟೀಲ್ ಅನ್ನೋರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮೀಪದ ಕಳಸಾಪೂರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಶೌಚಾಲಯದ ಗೋಡೆಗೆ ಕಾರ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಕಾರ್‌ನಲ್ಲಿರುವ ಏರ್‌ಬ್ಯಾಗ ಬಿಚ್ಚಿದರೂ ಇಬ್ಬರ ಪ್ರಾಣ ಮಾತ್ರ ಉಳಿದಿಲ್ಲ.

ಆಸ್ಪತ್ರೆಗೆ ಗದಗ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಸ್ಕಾಂ ಲೆಕ್ಕಾಚಾರದಲ್ಲಿ ತಪ್ಪು, ಮಹಜರ್ ಕಾಪಿ ಕೇಳಿದ ಕುಮಾರಸ್ವಾಮಿ

0

ಬೆಂಗಳೂರು: ವಿದ್ಯುತ್ ಕಳ್ಳತನ ಆರೋಪ ಸಂಬಂಧ ಬೆಸ್ಕಾಂ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕುಮಾರಸ್ವಾಮಿ, ಬೆಸ್ಕಾಂ ಇಲಾಖೆ ಅಧಿಕಾರಿಗಳು 68,526 ರೂಪಾಯಿ ದಂಡ ವಿಧಿಸಿದ್ದಾರೆ. ದೀಪಾವಳಿ ಸಂಧರ್ಭದಲ್ಲಿ ನಮ್ಮ ಮನೇಲಿ ಆದ ಅಚಾತುರ್ಯದ ಬಗ್ಗೆ ನಾನು ವಿಷಾದ ವ್ಯಕ್ತಪಡಿಸಿದ್ದೇನೆ.

ಕರೆಂಟ್ ಕಳ್ಳ ಅಂತ ನನಗೆ ಲೇಬಲ್ ಬೇರೆ ಕೊಟ್ಟಿದ್ದಾರೆ. ಸಿಎಂ ಡಿಸಿಎಂ ಸೇರಿ ಪಟಾಲಾಂ ಎಲ್ಲರೂ ಹೀಗೆ ಹೇಳುತ್ತಿದ್ದಾರೆ. ಬೆಸ್ಕಾಂ ಬಿಲ್​ನಲ್ಲಿ ಅವರ ಲೆಕ್ಕಾಚಾರದಲ್ಲಿ 2.5 ಕಿಲೋ ವ್ಯಾಟ್ ಉಪಯೋಗ ಅಂತ ಇದೆ. 2526 ರೂಪಾಯಿ ಹಾಕಿದ್ದಾರೆ. ನಮ್ಮ ಮನೆಯಲ್ಲಿ ಇರುವುದು 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೇನೆ. ನಾನು ನಿತ್ಯ ಉಪಯೋಗ ಮಾಡುವ ಕರೆಂಟ್ ಇದು. ಹೀಗಾಗಿ ಮಹಜರ್ ಕಾಪಿ ಕೇಳಿದ್ದೇನೆ ಎಂದರು.

Cheating Case: ಬಳ್ಳಾರಿ ಸಂಸದ ದೇವೆಂದ್ರಪ್ಪ ಮಗನ ವಿರುದ್ಧ ಗಂಭೀರ ಆರೋಪ

0

ಬೆಂಗಳೂರು: ಬಳ್ಳಾರಿಯ ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನಿಂದ ಪ್ರೀತಿ ಹೆಸರಲ್ಲಿ ವಂಚನೆಯ ಆರೋಪ ಕೇಳಿಬಂದಿದೆ. ಎಂಪಿ ದೇವೆಂದ್ರಪ್ಪ ಅವರ ಮಗನ ವಿರುದ್ಧ ಯುವತಿಯೊಬ್ಬಳು ಗಂಭೀರ ಆರೋಪ ಮಾಡಿದ್ದಾಳೆ. ಮೈಸೂರಿನಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಬೆಂಗಳೂರು ಮೂಲದ ಯುವತಿಗೆ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ಸ್ನೇಹಿತರ ಮೂಲಕ 42 ವರ್ಷದ ರಂಗನಾಥ್‌ಗೆ 24 ವರ್ಷದ ಯುವತಿಯ ಪರಿಚಯವಾಗಿತ್ತು.

ನಂತರ ಯುವತಿಯೊಂದಿಗೆ ರಂಗನಾಥ್ ಲವ್ವಿಡವ್ವಿ ಶುರುಮಾಡಿದ್ದರು ಎಂಬ ಆರೋಪ ಬಂದಿದೆ. ಕಳೆದ ಜನವರಿಯಲ್ಲಿ ಮೈಸೂರಿನ ಖಾಸಗಿ ಹೋಟೇಲ್ ಒಂದರಲ್ಲಿ ಇಬ್ಬರೂ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಯುವತಿ ರಂಗನಾಥ್‌ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಆದರೆ ಬಳಿಕ ರಂಗನಾಥ್ ಯುವತಿಯನ್ನು ಕಡೆಗಣಿಸಲು ಪ್ರಾರಂಭಿಸಿದ್ದರು. ನಿನ್ನನ್ನು ಮದುವೆ ಆಗಲ್ಲ, ಏನು ಮಾಡ್ತೀಯೋ ಮಾಡಿಕೋ ಎಂದು ರಂಗನಾಥ್ ಹೇಳಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾಳೆ.

ಇದೆಲ್ಲದರ ಬಳಿಕ ಯುವತಿ ರಂಗನಾಥ್ ವಿಚಾರವನ್ನು ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾಳೆ. ಆದರೆ ಯುವತಿಯ ವಿರುದ್ಧ ಎಂಪಿ ದೇವೇಂದ್ರಪ್ಪ ಗರಂ ಆಗಿದ್ದಾರೆ. ಕೊನೆಗೆ ಬೇರೆ ಯಾವ ದಾರಿಯೂ ಕಾಣದೆ ಸಂತ್ರಸ್ತೆ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಇದೀಗ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 417, 506 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕ್ಯಾಪ್ಟನ್ಸಿಗಾಗಿ ಮತ್ತೆ ಶುರುವಾಯ್ತು ಕಚ್ಚಾಟ!

0

ವೀಕೆಂಡ್ ಬಂತು ಅಂದ್ರೆ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿ ಬಿಗ್‌ಬಾಸ್‌ ಮನೆಯಲ್ಲಿ ಏರಲು ಶುರುವಾಗುತ್ತದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್‌ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು ಇವೆಲ್ಲ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಿದ್ದರು. ಆದರೆ ಈ ಸಲ ಕ್ಯಾಪ್ಟನ್ಸಿ ಟಾಸ್ಕ್‌ಗೆ ಬಿಗ್‌ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂದು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ!

ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಈ ಐವರು ಕ್ಯಾಪ್ಟನ್ಸಿ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್‌ ಬಗ್ಗೆ ಆಕ್ಷೇಪವಿದೆ.‘ಕರೆಕ್ಟಾಗಿ ವೋಟಿಂಗ್ ಆಗಿಲ್ಲ. ನಾವೂ ಭಾಗವಹಿಸಬೇಕು ಎಂದು ನಮಗೆ ಇರುತ್ತದೆ’ ಎಂದು ಅವರು ತಗಾದೆ ತೆಗೆದಿದ್ದಾರೆ. ವಿನಯ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ‘ನೀವು ಆಡಿರುವುದು ಒಂದೇ ಟಾಸ್ಕ್‌’ ಎಂದು ಚುಚ್ಚಿದ್ದಾರೆ. ತುಕಾಲಿ ಅವರು ಇದರಿಂದ ಸಿಟ್ಟಿಗೆದ್ದು, ‘ಒಂದೇ ಟಾಸ್ಕ್‌ನಲ್ಲಿ ನನ್ನ ನಾನು ಪ್ರೂವ್ ಮಾಡಿಕೊಂಡಿದ್ದೀನಿ’ ಎಂದು ಹೇಳಿದ್ದಾರೆ.

ಮಾತಿಗೆ ಮಾತು ಬೆಳೆದು ಮಾತಿನ ಜಟಾಪಟಿಯೂ ನಡೆದಿದೆ. ಹಾಗಾದ್ರೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಡುವ ಸ್ಪರ್ಧಿಗಳ ಲೀಸ್ಟ್ ಬದಲಾಗುತ್ತದೆಯೇ? ತುಕಾಲಿ ಸಂತೋಷ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ನ ಕಣಕ್ಕೆ ಇಳಿಯುತ್ತಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು, JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡವನ್ನು ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ಸಿದ್ದರಾಮಯ್ಯ ಪ್ರವಾಸದ ವೇಳೆ ರೈತರು ಪ್ರತಿಭಟಿಸುವ ಆತಂಕ: ರೈತ ಮುಖಂಡರ ಬಂಧನ

0

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮೈಸೂರಿಗೆ ತೆರಳುವ ಹಿನ್ನೆಲೆಯಲ್ಲಿ ರೈತರಿಂದ ಸಿಎಂ ಘೇರಾವ್ ಹಾಕುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿದ್ದ ಟಿ.ನರಸೀಪುರದ ಅನೇಕ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರು ಪೊಲೀಸರ ನಡೆಯನ್ನ ಖಂಡಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ ಇಲ್ಲ ಜನ ಸಾಮಾನ್ಯರ ಸರ್ಕಾರವೋ ? ವಿವಿಧ ಬೇಡಿಕೆ ಈಡೇರಿಸುವಂತೆ ನಾವು ಹಲವು ತಿಂಗಳಿಂದ  ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದೇವೆ.

ಕಳೆದ ವಾರ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲಿಕ್ಕೆ ಮುಂದಾಗಿದ್ದಾಗಲೂ ಏಕಾಏಕಿ ವಶಕ್ಕೆ ಪಡೆದಿದ್ದರು. ಈಗ ಸಿಎಂ ಬರುತ್ತಾರೆ ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದರಾಮಯ್ಯನವರು ರೈತರನ್ನ ಕರೆಸಿ ಮಾತನಾಡಬಹುದಿತ್ತು. ಅದನ್ನ ಬಿಟ್ಟು ರೈತರನ್ನು ಬಂಧಿಸಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದ ದೊಡ್ಡಬಳ್ಳಾಪುರ- ಹೊಸಕೋಟೆ ಟೋಲ್‌ ಶುಲ್ಕ ವಸೂಲಿ ಆರಂಭ

0

ಬೆಂಗಳೂರು:- ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೂ ನಾಲ್ಕಪಥದ ರಸ್ತೆಗೆ ಇಂದಿನಿಂದ ಟೋಲ್ ಸುಂಕ ವಿಧಿಸಲಾಗುತ್ತಿದೆ. ಈ ಮೂಲಕ ಇಂದಿನಿಂದ ಬೆಂಗಳೂರು ಹೊರವಲಯ ಮತ್ತು ಗ್ರಾಮಾಂತರದ ವಾಹನ ಸವಾರರಿಗೆ ಟೋಲ್ ಬರೆ ಬೀಳಲಿದೆ.

ದೊಡ್ಡಬಳ್ಳಾಪುರದಿಂದ ಹೊಸಕೋಟೆ ವರೆಗೂ ಈಗಾಗಲೇ ಹೆದ್ದಾರಿ ರಸ್ತೆ ಕಾಮಗಾರಿ ಪೂರ್ಣವಾಗಿದೆ. ಸುಮಾರು 43.ಕಿ.ಮೀ. ಹೆದ್ದಾರಿ ರಸ್ತೆ ವಾಹನ ಸವಾರರ ಬಳಕೆಗೆ ಮುಕ್ತವಾಗಲಿದೆ. ಈ ಹಿನ್ನಲೆ ಇಂದಿನಿಂದ ನಲ್ಲೂರು ಬಳಿ ಟೋಲ್ ಆರಂಭವಾಗಲಿದೆ.

ಡಾಬಸ್ ಪೆಟೆಯಿಂದ ಹೊಸಕೋಟೆವರೆಗೂ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೆ ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೂ ರಸ್ತೆ ಕಾಮಗಾರಿ ಮುಕ್ತಾಯ ಆಗಿದೆ. ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇದೀಗ ನಲ್ಲೂರು ಟೋಲ್ ಆರಂಭಕ್ಕೆ ಹೆದ್ದಾರಿ ಪ್ರಾಧಿಕಾರದಿಂದ ನಾಳೆಗೆ ಮುಹೂರ್ತ ಫಿಕ್ಸ್ ಆಗಿದೆ.

ಪ್ರಮುಖವಾಗಿ ಈ ಮಾರ್ಗವು ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹೊಸೂರನ್ನು ತಲುಪಲಿದೆ. ದೊಡ್ಡಬಳ್ಳಾಪುರ ಬೈಪಾಸ್‌ನಿಂದ ನಲ್ಲೂರು ಗ್ರಾಮದವರೆಗಿನ ರಸ್ತೆ ಪೂರ್ಣ ಆಗಿದ್ದು, 34.15 ಕಿ.ಮೀ. ಪ್ರಯಾಣಕ್ಕೆ ವಾಹನ ಸವಾರರು ಶುಲ್ಕ ಪಾವತಿ ಮಾಡಬೇಕಿದೆ.

ಯಾವ್ಯಾವ ವಾಹನಗಳಿಗೆ ಎಷ್ಟು ಶುಲ್ಕ?
1. ಕಾರು, ಜೀಪು, ವ್ಯಾನು, ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 70 ರೂಪಾಯಿ ಹಾಗೂ ಅದೇ ದಿನ ವಾಪಾಸ್‌ ಬಂದರೆ 105 ರೂಪಾಯಿ ಪಾವತಿಸಬೇಕು.

2. ಇದೇ ಒಂದೇ ತಿಂಗಳಲ್ಲಿ 50 ಸಂಚರಿಸುವ ಮಾಸಿಕ ಪಾಸ್‌ಗೆ 2375 ರೂಪಾಯಿ ನಿಗದಿಪಡಿಸಲಾಗಿದೆ. ಜಿಲ್ಲೆಯ ಒಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 35 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ.

3. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 115 ರೂಪಾಯಿ ಹಾಗೂ ಅದೇ ದಿನ ಮರಳಿ ಬಂದರೆ 175 ರೂಪಾಯಿ ಹಾಗೂ ಮಾಸಿಕ ಪಾಸ್‌ ರೂಪದಲ್ಲಿ3835 ರೂಪಾಯಿ ಪಾವತಿಸಬೇಕು. ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾನಹಗಳಿಗಾಗಿ 60 ರೂಪಾಯಿ ಶುಲ್ಕ ಪಾವತಿಸುವಂತೆ ಸೂಚಿಸಲಾಗಿದೆ.

4. ಬಸ್‌ ಅಥವಾ ಟ್ರಕ್‌ಗಳಿಗೆ ಏಕ ಮುಖ ಸಂಚಾರಕ್ಕೆ 240 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ 8,040 ರೂಪಾಯಿ ಪಾವತಿಸಬೇಕಾಗುತ್ತದೆ. ಜಿಲ್ಲೆಯೊಳಗೆ ನೋಂದಣಿ ಮಾಡಿಸಿಕೊಂಡಿರುವ ವಾಣಿಜ್ಯ ವಾಹನಗಳಿಗೆ 120 ರೂಪಾಯಿ ನಿಗದಿ ಮಾಡಲಾಗಿದೆ.

5. ಮೂರು ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರಕ್ಕೆ 265 ರೂಪಾಯಿ, ಅದೇ ದಿನ ಮರಳಿ ಬಂದರೆ 360 ರೂಪಾಯಿ ಪಾವತಿಸಬೇಕು. ಮಾಸಿಕ ಪಾವತಿಗೆ 8770 ರೂಪಾಯಿ, ಜಿಲ್ಲೆಯೊಳಗೆ ನೋಂದಣಿಯಾಗಿರುವ ವಾಣಿಜ್ಯ ವಾಹನಗಳ 130 ರೂಪಾಯಿ ಶುಲ್ಕ ನಿಗದಿ ಮಾಡಿದೆ.

6. ಇನ್ನು ಭಾರೀ ವಾಹನಗಳಿಗೆ ಒಂದು ಬಾರಿ ಸಂಚಾರಕ್ಕೆ 380 ರೂಪಾಯಿ, ಅದೇ ದಿನ ಹಿಂತಿರುಗಿ ಬಂದರೆ 565 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕು. ಮಾಸಿಕ 12605 ರೂಪಾಯಿ ಪಾವತಿ ಮಾಡಬೇಕು. ಮತ್ತು ಜಿಲ್ಲೆಯೊಳಗೆ ನೋಂದಣಿಯಾದ ವಾಹನಗಳಿಗೆ 130 ರೂಪಾಯಿ ನಿಗದಿ ಮಾಡಿದೆ.

ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು

0

ಬೆಂಗಳೂರು:- ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾಳೆ. ನಾಜ್ನಿ ಮೃತ ಮಹಿಳೆ. ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ನಿಧನಳಾಗಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿ, ಆಸ್ಪತ್ರೆ ಮುಂಭಾಗ ಧರಣಿ ಕುಳಿತಿದ್ದಾರೆ. ನಾಜ್ನಿ ಮೂರು ದಿನಗಳ ಹಿಂದೆ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನವಾದರೂ ವೈದರು ಚಿಕಿತ್ಸೆ ನೀಡಿಲ್ಲ. ಮೂರನೇ ದಿನ‌ ಹೊಟ್ಟೆಯಲ್ಲಿ ಗಡ್ಡೆ ಆಗಿದೆ, ಕೂಡಲೇ ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದಾರೆ.

ವೈದ್ಯರು ಗುರುವಾರ ಸಂಜೆಯವರೆಗು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು. ನಂತರ ‌ನರದ ಸಮಸ್ಯೆ ಇದೆ ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ. ಆಂಬುಲೆನ್ಸ್​ನಲ್ಲಿ ಬೇರೆ ಆಸ್ಪತ್ರೆಗೆ ತೆರಳುವ ವೇಳೆ ಮಹಿಳೆ ಮೃತಪಟ್ಟಿದ್ದಾಳೆ.

ಮಹಿಳೆ ಮೊದಲೇ ಮೃತಪಟ್ಟಿದ್ದಾಳೆ, ವೈದ್ಯರು ಸುಮ್ಮನೆ ವೆಂಟಿಲೇಟರ್ ಹಾಕಿ ತಮ್ಮ ಆಸ್ಪತ್ರೆಯಿಂದ ಕಳುಹಿಸಿದ್ದಾರೆಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡದಿರುವುದೇ ಮಹಿಳೆ ಸಾವಿಗೆ ಕಾರಣವೆಂದು ಆರೋಪಿಸಿ, ವೈದ್ಯರ ವಿರುದ್ಧ ಮೃತ ಮಹಿಳೆಯ ಸಂಬಂಧಿಕರು ಪ್ರತಿಭಟನೆ ಮಾಡಿದರು.

error: Content is protected !!