Home Blog Page 3157

ಕಸ್ಟಮ್ಸ್​​ ಅಧಿಕಾರಿಗಳಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ

0

ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಸಾಗಿಸಲು ಯತ್ನಿಸಿದ ಸುಮಾರು 1.ಕೆ.ಜಿ. ಚಿನ್ನ ವಶ 58.39.805 ಬೆಲೆಯ ಚಿನ್ನ ವಶ ಬ್ಯಾಂಕಾಕ್ ನಿಂದ ಬರ್ತಿದ್ದ ಮೂರು ಜನ ಗಂಡಸರು, ಚಿನ್ನದ ಚೈನ್ ಕಟ್ ಪೀಸಸ್ ನ ಒಳ ಉಡುಪುಗಳಲ್ಲಿ‌ ಬಚ್ಚಿಟ್ಟು ಸಾಗಿಸಲು ಯತ್ನಿಸಿದ ಖದೀಮರು ಕೊಲಂಬೋ ದಿಂದ ಬಂದ

ಇಬ್ಬರು ಹೆಂಗಸರ ಪರಿಶೀಲನೆ ವೇಳೆ ಅಕ್ರಮ ಚಿನ್ನ ಸಾಗಾಟ ಪತ್ತೆ 16-11-23ರಂದು ಕಾರ್ಯಾಚರಣೆ ನಡೆಸಿ ಅಕ್ರಮ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು.. ಕಸ್ಟಮ್ಸ್ ಅಧಿಕಾರಿಗಳು ಮಸ್ಕಟ್ ನಿಂದ ಬಂದ ಚಿನ್ನದ ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ ಈತ ಸಹ 1.113 ಗ್ರಾಂ ಚಿನ್ನದ ಕಳ್ಳಸಾಗಾಟಕ್ಕೆ ಯತ್ನಿಸಿದ್ದ ಈತ ಎದೆ ಬಟ್ಟೆಯ ಪೌಚ್ ಮೂಲಕ ಚಿನ್ನದ ಕಳ್ಳಸಾಗಾಟಕ್ಕೆ‌‌ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ 68 ಲಕ್ಷ 18ಸಾವಿರ ಬೆಲೆಯ ಚಿನ್ನ ವಶಕ್ಕೆ ಪಡೆದಿದ್ದಾರೆ.

ಆರ್​ ಅಶೋಕ್ʼ​ಗೆ ಒಲಿದ ವಿಪಕ್ಷ ನಾಯಕನ ಪಟ್ಟ

0

ಬೆಂಗಳೂರು: ಅಳೆದು ತೂಗಿ ಕೊನೆಗೂ ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕನನ್ನು  ಆಯ್ಕೆ ಮಾಡಿದೆ. ಆರ್ ಅಶೋಕ್ ಅವರು ವಿಪಕ್ಷ ನಾಯಕನ ಸ್ಥಾನವನ್ನು ಅಲಂಕರಿಸಲಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್.ಅಶೋಕ್ ಹೆಸರು ಘೋಷಣೆ ಮಾಡಲಾಗಿದೆ. ಅಶೋಕ್ ಹೆಸರಿಗೆ  ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ‌ ಕೊಟ್ಟರೆ,

ಶಾಸಕ ಸುನಿಲ್‌ ಕುಮಾರ್‌ ಅನುಮೋದನೆ ನೀಡಿದರು. ಬಿಜೆಪಿ ನಾಯಕರ ಸಭೆಯಲ್ಲಿ ಎಲ್ಲರೂ ಅಭಿಪ್ರಾಯ ಹೇಳಿದ್ದಾರೆ. ಯತ್ನಾಳ್ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ವೀಕ್ಷಕರ ಮುಂದೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆಯ್ಕೆಗೂ ಮುನ್ನ ಆರ್ ಅಶೋಕ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ಗದಗ: ತಂದೆಯ ಕುಡಿತದ ಚಟಕ್ಕೆ ಹಸುಗೂಸಿನ ಪ್ರಾಣಕ್ಕೆ ಕುತ್ತು..! ಮಾನವೀಯತೆ ಮೆರೆದ ಪೊಲೀಸರು

0

ದಗ: ಕುಡಿದ ಮತ್ತಿನಲ್ಲಿ ತಂದೆಯೇ ಹಸುಗೂಸನ್ನು ಹೊತ್ತು ತಂದು ಅಮಾನವೀಯವಾಗಿ ವರ್ತಿಸಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದೆ ಗದುಗಿನ ಖಾಸಗಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಮಗುವಿನ ತಾಯಿ ಗದಗ ತಾಲೂಕಿನ ಡಂಬಳ ಗ್ರಾಮ ಮತ್ತು ತಂದೆ ಸವಣೂರ ತಾಲೂಕಿನ ಕೃಷ್ಣಾಪುರದವರಾಗಿದ್ದು ಇಬ್ಬರೂ ಪ್ರೇಮ ವಿವಾಹವಾಗಿದ್ದು.

ಯಾವುದೋ ಕಾರಣಕ್ಕೆ ಗಂಡ ಹೆಂಡತಿಯ ನಡುವೆ ಮನಸ್ಥಾಪ ಆಗಿ ಗಂಡ ಹಸುಗೂಸನ್ನು ಎತ್ತಿಕೊಂಡು ಗದಗದಿಂದ ತನ್ನೂರಿಗೆ ಹೋಗುವಾಗ ಲಕ್ಷೇಶ್ವರ ಪಟ್ಟಣಕ್ಕೆ ಬಂದಿದ್ದಾನೆ. ಲಕ್ಷೇಶ್ವರ ಬಸ್ ನಿಲ್ದಾಣದಲ್ಲಿ ವೃದ್ಧೆಯೋರ್ವರ ಕೈಯಲ್ಲಿ ಕೂಸನ್ನು ಕೊಟ್ಟು ಮದ್ಯ ಕುಡಿಯಲು ಹೋಗಿದ್ದನಂತೆ. ಈ ವೇಳೆ ತಾನು ಹೋಗುವ ಬಸ್ ಬಂದ ಹಿನ್ನಲೆ ವೃದ್ಧೆ ಕೂಸನ್ನು ಅಲ್ಲಿಯೇ ಬಿಟ್ಟು ಬಸ್ ಹತ್ತಿದ್ದಾಳೆ. ವಾಪಸ್ ಬಂದ ಪಾಪಿ ತಂದೆ ಕೂಸನ್ನು ಎತ್ತಿಕೊಂಡು ಹಸುಗೂಸಿನ ಪ್ರಜ್ಞೆಯೂ ಇಲ್ಲದೇ ರಸ್ತೆಯುದ್ದಕ್ಕೂ ಜೋತಾಡಿಸಿದ್ದಾನೆ.

ತಾಯಿಯಿಂದ ಬೇರ್ಪಟ್ಟ ಕೂಸು ಹಸಿವು, ನೋವಿನಿಂದ ಕಿರಚಾಡಿದೆ. ಇದನ್ನು ಕಂಡು ಮಕ್ಕಳ ಕಳ್ಳನೆಂದು ಭಾವಿಸಿದ ಸಾರ್ವಜನಿಕರು ಕೂಸು ಸಹಿತ ವ್ಯಕ್ತಿಯನ್ನು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್, ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು ಕೂಸಿನ ಪ್ರಾಣಾಪಾಯದಿಂದ ಪಾರು ಮಾಡಿ ಕರ್ತವ್ಯಪ್ರಜ್ಞೆ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.

ಪರಿಶೀಲನೆ ನಡೆಸಲಾಗಿ ಈತ ಹಸುಗೂಸಿನ ತಂದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪಿಎಸ್‌ಐ ಯೂಸೂಫ್ ಜಮಾಲಾ, ಪೊಲೀಸ್ ಸಿಬ್ಬಂದಿಗಳು, ಡಾ. ಶ್ರೀಕಾಂತ ಕಾಟೇವಾಲೆ, ಡಾ. ಅಬ್ದುಲ್ ಮಳಗಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ ಹಾಗೂ ದತ್ತು ಕೆಂದ್ರದ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

KEA ಪರೀಕ್ಷಾ ಅಕ್ರಮ ಪ್ರಕರಣ: ಇಂಜಿನಿಯರ್ ರುದ್ರಗೌಡ ಬಳಿ 17 ಹಾಲ್ಟಿಕೇಟ್ ಪತ್ತೆ

0

ಕಲುಬುರಗಿ: KEA ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತನಾಗಿರುವ ಇಂಜಿನಿಯರ್ ರುದ್ರಗೌಡನ 17 ಹಾಲ್ಟಿಕೇಟ್ ಗಿರಾಕಿಗಳಿಗೆ ಕಾದಿದ್ಯಾ ಸಂಕಷ್ಟ ಅನ್ನೋ ವಿಷ್ಯ ಹರಿದಾಡ್ತಿದೆ..ಅಕ್ರಮ ಪ್ರಕರಣದ ತನಿಖೆ ಮಾಡ್ತಿರೋ CID ಇಂತಹ ಮೂಲವನ್ನೇ ಇದೀಗ ಕೆದಕುತ್ತಿದೆ..

ಅಥಣಿಯಲ್ಲಿ ನೀರಾವರಿ ಇಂಜಿನಿಯರ್ ಆಗಿರೋ ಜೇವರ್ಗಿ ಮೂಲದ ರುದ್ರಗೌಡನ ಬಂಧನದ ನಂತ್ರ ಆರೋಪಿ ಬಳಿ 17 ಹಾಲ್ಟಿಕೇಟ್ ಪತ್ತೆ ಮಾಡಿತ್ತು..ಪತ್ತೆಯಾದ ಆ 17 ಗಿರಾಕಿಗಳಿಗೂ ರುದ್ರಗೌಡನಿಗೂ ಏನ್ ವ್ಯವಹಾರ ಎಷ್ಟರ ವ್ಯವಹಾರ ಅನ್ನೋ ಮಾಹಿತಿ ಹೊರಹಾಕಲು ಮುಂದಾಗಿದೆ CID ಟೀಂ. ಹೀಗಾಗಿ ರುದ್ರಗೌಡ ಬಾಯ್ಬಿಡೋ ಅಂಶಗಳ ಮೇಲೆ ಆ 17 ಗಿರಾಕಿಗಳ ಇತಿಹಾಸ ಗೊತ್ತಾಗಲಿದೆ ಅಂತ ಹೇಳಲಾಗ್ತಿದೆ..

ಭೀಕರ ಅಪಘಾತ ಪ್ರಕರಣ; ಮೂರಕ್ಕೇರಿದ ಸಾವಿನ ಸಂಖ್ಯೆ, ತಂದೆ-ಮಗನ ಸಾವು- ಕುಟುಂಬಸ್ಥರ ಆಕ್ರಂಧನ

ಗದಗ/ಸವದತ್ತಿ: ವೇಗವಾಗಿ ಹೊರಟಿದ್ದ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯದ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.

ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಗದಗ ಸಮೀಪದ ಕಳಸಾಪೂರ ಕ್ರಾಸ್ ಬಳಿ ಈ ಅಪಘಾತ ಜರುಗಿದೆ.

ಮೃತರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಶಿಶಿರಕುಮಾರ್ ಸಿದ್ದಯ್ಯ ಪಾಟೀಲ್(34) ಸಿದ್ದಯ್ಯ ಪತ್ರಯ್ಯ ಪಾಟೀಲ್ (58) ಹಾಗೂ ಬಾಬು ಅಲಿಯಾಸ್ ಹೇಮಚಂದ್ರ ತಂದೆ ಬಸಪ್ಪ ತಾರಿಯಾಳ (62) ಎಂಬುವರೇ ಮೃತಪಟ್ಟ ದುರ್ಧೈವಿಗಳು.

ಇದನ್ನೂ ಓದಿ ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು: ಬಸನಗೌಡ ಪಾಟೀಲ್ ಯತ್ನಾಳ್

ಅಪಘಾತದಲ್ಲಿ ಶಿಶಿರಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸಿದ್ದಯ್ಯ ಪತ್ರಯ್ಯ ಪಾಟೀಲ‌ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಅಸುನೀಗಿದರು. ಮತ್ತೊಬ್ಬ ಗಾಯಾಳು ಹೇಮಚಂದ್ರ ಅಲಿಯಾಸ್ ಬಾಬು ತಾರಿಹಾಳ ಎಂಬುವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯ ಮೃತಪಟ್ಟಿದ್ದಾರೆ.

ಹೆದ್ದಾರಿ ಪಕ್ಕದ ಶೌಚಾಲಯದ ಗೋಡೆಗೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್‌ನಲ್ಲಿರುವ ಏರ್‌ಬ್ಯಾಗ ಬಿಚ್ಚಿದರೂ ಮೂವರ ಪ್ರಾಣ ಮಾತ್ರ ಉಳಿಯದೇ ಇರುವುದು ಆಘಾತಕಾರಿ ವಿಷಯವಾಗಿದೆ.

ಅಪಘಾತದ ಸುದ್ದಿ ತಿಳಿದ ಗದಗ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ-ಮಗನ ಸಾವಿನ ಸುದ್ದಿ ತಿಳಿದ ಸವದತ್ತಿ ಪಟ್ಟಣದಲ್ಲಿನ ಪಾಟೀಲ ಅವರ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿತ್ತು.

ಅಮಿತ್ ಶಾ ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ: ಸಚಿವ ಕೆ.ಎನ್.ರಾಜಣ್ಣ

0

ಮಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರು ಒಂದು ಹಳ್ಳಿಯ ಸೊಸೈಟಿ ಅಧ್ಯಕ್ಷರು. ಅಹಮದಾಬಾದ್​ ಜಿಲ್ಲಾ ಬ್ಯಾಂಕ್, ಗುಜರಾತ್ ಅಫೆಕ್ಸ್ ಬ್ಯಾಂಕ್​ ನಿರ್ದೇಶಕರು. ಸಹಕಾರ ಇಲಾಖೆಯ ಎಲ್ಲಾ ವಿಚಾರಗಳು ಸಹ ಅಮಿತ್​ ಶಾಗೆ ಗೊತ್ತಿದೆ. ಅಂಥವರು ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಅಮಿತ್ ಶಾರನ್ನು ಸಚಿವ ಕೆ.ಎನ್.ರಾಜಣ್ಣ ಹಾಡಿಹೊಗಳಿದ್ದಾರೆ.

ನಗರದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಸಹಕಾರ ಸಚಿವರಾದ ಮೊದಲ ದಿನವೇ ನಾನು ಸ್ವಾಗತಿಸಿದ್ದೇನೆ. ಪಕ್ಷದ ದೃಷ್ಟಿಯಲ್ಲಿ ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ನಾನೊಬ್ಬ ಸಹಕಾರ ಇಲಾಖೆ ಸಚಿವನಾಗಿ ಸ್ವಾಗತಿಸಿದ್ದೇನೆ ಎಂದು ಹೇಳಿದ್ದಾರೆ.

 

 

ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ವೀಕ್ಷಕರು ಬಂದಿದ್ದಾರೆ: ಬಿ.ಎಸ್. ಯಡಿಯೂರಪ್ಪ

0

ಬೆಂಗಳೂರು : ವಿಪಕ್ಷ ನಾಯಕರ ಆಯ್ಕೆ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾವ ಸಮುದಾಯಕ್ಕೆ ವಿಪಕ್ಷ ನಾಯಕನ ಸ್ಥಾನ ಕೊಡಬೇಕು ಅಂತ ಹೈಕಮಾಂಡ್ ಮನಸಲ್ಲಿದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇಂದು ಸಂಜೆ ಶಾಸಕಾಂಗ ಪಕ್ಷದ ಸಭೆ ಇದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ವೀಕ್ಷಕರು ಬಂದಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು, ಯಾರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇವತ್ತೇ ಘೋಷಣೆ ಮಾಡಬಹುದು ಅಥವಾ ದೆಹಲಿಗೆ ಹೋಗಿ ಘೋಷಣೆ ಮಾಡಬಹುದು ಎಂದು ತಿಳಿಸಿದ್ದಾರೆ.

ಎಲುಬಿಲ್ಲದೇ ನಾಲಿಗೆಯಂತೆ ಏನೇನೋ ಮಾತನಾಡೋದಲ್ಲ: ಜಮೀರ್ ವಿರುದ್ಧ ರೇಣುಕಾಚಾರ್ಯ ಕಿಡಿ

0

ಬೆಂಗಳೂರು : ಮುಸ್ಲಿಂ ಸ್ಪೀಕರ್ಗೆ ಬಿಜೆಪಿಯವರೂ ನಮಸ್ಕರಿಸುತ್ತಾರೆ ಎಂಬ ಸಚಿವ ಬಿ.ಝಡ್​. ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಂದು ಧರ್ಮಕ್ಕೆ ತಲೆಬಾಗಬೇಕು ಅಂದರೆ ಮುಸ್ಲಿಂರಿಗೆ ತಲೆಬಾಗಬೇಕಾ? ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಹುಚ್ಚು ಹಾಗೂ ವಿಕೃತ ಹೇಳಿಕೆ ಎಂದು ಕುಟುಕಿದ್ದಾರೆ.

ಹಿಂದೂ ಹಾಗೂ ಮುಸ್ಲಿಮರು ಸೌಹಾರ್ದಯುತವಾಗಿ ಬದುಕಬೇಕು. ನಿಮ್ಮ ಬಾಯಲ್ಲಿ ಬರುವ ಮಾತಿಂದ ಕೋಮು ಘರ್ಷಣೆಗಳು ಆಗ್ತಿವೆ. ಎಲುಬಿಲ್ಲದೇ ನಾಲಿಗೆಯಂತೆ ಏನೇನೋ ಮಾತನಾಡೋದಲ್ಲ. ಯು.ಟಿ. ಖಾದರ್ ಅವರಿಗೆ ನಾವು ತಲೆಬಾಗಲ್ಲ, ಯು.ಟಿ. ಖಾದರ್ ಇದನ್ನು ಖಂಡಿಸಬೇಕು. ಸಚಿವ ಜಮೀರ್ ಅಹ್ಮದ್ ಖಾನ್ ನಾಡಿನ ಜನರಲ್ಲಿ ಕ್ಷಮಾಪಣೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಹಾಸನ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಹಸೀಲ್ದಾರ್‌ಗಳ ವಿರುದ್ಧ ಸಚಿವ ಕೃಷ್ಣಭೈರೇಗೌಡ ಗರಂ

0

ಹಾಸನ:  ಜಿಲ್ಲಾ ಪಂಚಾಯತ್​ ಹೊಯ್ಸಳ ಸಭಾಂಗಣದಲ್ಲಿ ಇಂದು(ನ.17) ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿದ್ದು, ಕಂದಾಯ ಸಚಿವ ಕಷ್ಣ ಭೈರೇಗೌಡ ನೇತೃತ್ವದಲ್ಲಿ ನಡೆಯುತ್ತಿದೆ.

ಫಾರಂ ನಂ.53 ಅರ್ಜಿಗಳು ವಿಲೇವಾರಿ ಮಾಡದ ಅರಕಲಗೂಡು ತಹಸೀಲ್ದಾರ್ ಬಸವರಾಜು ಹಾಗೂ ಬೇಲೂರು ತಹಸೀಲ್ದಾರ್ ಮಮತಾ ವಿರುದ್ದ ಸಚಿವ ಕೃಷ್ಣ ಭೈರೇಗೌಡ ಗರಂ ಆದರು.

ಇಷ್ಟೊಂದು ಅರ್ಜಿಗಳು ಪೆಂಡಿಂಗ್ ಇರಲು ಕಾರಣ ಏನು ಎಂದು ಸಭೆಯಲ್ಲಿ ತಹಸೀಲ್ದಾರಗೆ ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ ನಿದ್ರೆಯಿಂದ ಎದ್ದು ರೈತರನ್ನು ನೋಡ್ಬೇಕು: ಬಂಡೆಪ್ಪ ಖಾಶೆಂಪುರ್

0

ಬೀದರ್ (ನ.17): ರಾಜ್ಯ ಸರ್ಕಾರ ನಿದ್ರಾ ಸ್ಥಿತಿಯಲ್ಲಿದೆ. ಕೂಡಲೇ ನಿದ್ರೆಯಿಂದ ಎದ್ದು ರಾಜ್ಯದ ರೈತರ ಬೆನ್ನಿಗೆ ನಿಲ್ಲುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಜೆಡಿಎಸ್ ಕೋರ್ ಕಮಿಟಿಯ ಸದಸ್ಯರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಮಾಡಲಾಗಿದ್ದ ಸೋಯಾ ಬೆಳೆ ಶೇಕಡಾ 10% ರಷ್ಟು ಕೂಡ ಫಲ ಕೊಟ್ಟಿಲ್ಲ. ತೊಗರಿ ಬೆಳೆ ಕೂಡ ಅರ್ಧಕ್ಕೆ ನಿಂತಿದೆ. ಮಳೆಯ ಕೊರತೆಯಿಂದ ತೇವಾಂಶವಿಲ್ಲದೆ ಅನೇಕ ಬೆಳೆಗಳು ಹಾಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬೀದರ್ ಜಿಲ್ಲೆಯಲ್ಲಿ 2,68,949 ಹೆಕ್ಟೇರ್ ಬೆಳೆ ಹಾನಿಯಾಗಿದೆ. 330 ಕೋಟಿ ಹತ್ತು ಲಕ್ಷ ರೂ. ಪರಿಹಾರ ಬೇಕು ಅಂತ ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಹಿಂದೆ ಯಾವತ್ತು ಇಲ್ಲದ ಬರಗಾಲ ಈ ಬಾರಿ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರೈತರ ಉಳಿವಿಗಾಗಿ, ಅವರ ಆತ್ಮಸ್ಥೈರ್ಯಕ್ಕಾಗಿ ನೀವು ಯಾವ ಕಾರ್ಯಕ್ರಮ ನೀಡಿದ್ದಿರಿ ಎಂಬುದನ್ನು ರೈತರ ಮುಂದಿಡಿ.

ಬೀದರ್ ಜಿಲ್ಲೆಯ ಬರ ಪರಿಹಾರಕ್ಕಾಗಿ ನಾಲ್ಕು ಕೋಟಿ ರೂ. ಕೊಟ್ಟರೆ ಸಾಕಾಗುತ್ತಾ.? ಬರಗಾಲ ಘೋಷಣೆಯಾದ ನಂತರ ಮೇವು, ನೀರು, ಉದ್ಯೋಗ ಖಾತ್ರಿ ಕೆಲಸಕ್ಕೆ ಮಹತ್ವ ನೀಡಬೇಕಾಗಿತ್ತು. ಆದರೇ ಸರ್ಕಾರ ಆ ಕೆಲಸ ಮಾಡಲಿಲ್ಲ. ಬೀದರ್ ನಲ್ಲಿ ಉದ್ಯೋಗ ಖಾತ್ರಿ ಅವಶ್ಯಕತೆಯಿದೆ. ಮಾನವ ದಿನಗಳನ್ನು 150ಕ್ಕೆ ಹೆಚ್ಚಿಸುವ ಕೆಲಸ ಮಾಡಬೇಕು ಅದು ಆಗಿಲ್ಲ. ಮೇವು ಬ್ಯಾಂಕ್ ಗಳು ಎಲ್ಲಿಯೂ ಒಪನ್ ಆಗಿಲ್ಲ. ಕುಡಿಯುವ ನೀರಿಲ್ಲ.

ರಾಜ್ಯ ಸರ್ಕಾರದವ್ರು ನಿದ್ರೆಯಿಂದ ಎದ್ದೇಳಬೇಕು. ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿಯೊಂದು ವಿಷಯದಲ್ಲೂ ಕೂಡ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸುವುದನ್ನು ಬೀಡಬೇಕು. ರೈತಾಪಿ ಜನರನ್ನು ಉಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ರೈತರ ಸಾಲಕ್ಕೆ ಕನಿಷ್ಠ ಮೂರು ವರ್ಷವಾದರು ಬಡ್ಡಿ ಮನ್ನಾ ಮಾಡಬೇಕು. ಸಾಲ ವಸೂಲಿಯನ್ನು ಮೂರು ವರ್ಷವಾದರು ನಿಲ್ಲಿಸಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

error: Content is protected !!