Home Blog Page 3201

ಸ್ವಾತಂತ್ರ್ಯಪೂರ್ವ ಹಿನ್ನೆಲೆಯ ಹಗೆಯ ಹೊಗೆ, ಗೆಳೆತನದ ಧಗೆ

0

ಸಿನಿಮಾ ವಿಮರ್ಶೆ


ಸಿನಿಮಾ: RRR
ಪಾತ್ರವರ್ಗ: ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮುಂತಾದವರು
ನಿರ್ದೇಶನ: ಎಸ್.ಎಸ್. ರಾಜಮೌಳಿ
ಛಾಯಾಗ್ರಹಣ: ಕೆ.ಕೆ.ಸೆಂಥಿಲ್‌ಕುಮಾರ್
ಸಂಗೀತ: ಎಂ.ಎಂ.ಕೀರವಾಣಿ
ನಿರ್ಮಾಣ: ಡಿವಿವಿ ದಾನಯ್ಯ ಪ್ರದರ್ಶನ: ಶ್ರೀ ಶಿವ ಚಿತ್ರಮಂದಿರ, ಕೊಪ್ಪಳ ರೇಟಿಂಗ್: 3.5/5

-ಬಸವರಾಜ ಕರುಗಲ್. ರಾಜಮೌಳಿ ನಿರ್ದೇಶನದ ಸಿನಿಮಾ ಅಂದ್ರೆ ‌ನಿರೀಕ್ಷೆಯ ರೇಂಜೇ ಬೇರೆ. ಅದರಲ್ಲೂ ಅವರ ನಿರ್ದೇಶನದ ಮಲ್ಟಿ ಸ್ಟಾರ್ ಸಿನಿಮಾ ಅಂದ್ರೆ ಕೇಳ್ತಿರಾ? ಇಂಥ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಥೇಟರ್‌ಗೆ ಹೋದರೆ ಕೊಂಚ ನಿರಾಸೆಯಾಗೊದಂತು ಖಚಿತ.

ಅವರ ಹಿಂದಿನ ಸಿನಿಮಾಗಳು, ಮೇಕಿಂಗ್ ಬಗ್ಗೆ ಎಲ್ಲರಿಗೂ ಗೊತ್ತಿರೋದೇ. ಆರ್‌ಆರ್‌ಆರ್ ಬಗ್ಗೆ ಸಹ ಅಂಥದ್ದೇ ಕಲ್ಪನೆ ಮೂಡೋದು ಸಹಜ. ರಾಜಮೌಳಿ ಬೋರ್ ಆಗದಂತೆ ಕಥೆ‌ ಹೆಣೆದಿದ್ದಾರೆ. ದೃಶ್ಯ ವೈಭವ, ಮೇಕಿಂಗ್ ನ ಸೆಳೆಯೋದು ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ.

ಇದೊಂದು ಸ್ವಾತಂತ್ರ್ಯಪೂರ್ವ ಹಿನ್ನೆಲೆಯ ಗೆಳೆತನ ಮತ್ತು ಹಗೆತನದ ಕಥೆ. ನೀರು, ಬೆಂಕಿ ಮತ್ತು ರೌದ್ರದ ಸಾಮ್ಯತೆಯನ್ನು ಸೂಕ್ಷ್ಮವಾಗಿ‌ ತೆರೆದುಕೊಳ್ಳುತ್ತಲೇ ಕಥೆ ಶುರುವಾಗುತ್ತದೆ.

ಕಾಡಿನ ಎಳೆಯ ಹಾಡಿನ ಹಕ್ಕಿಯನ್ನು ಬ್ರಿಟಿಷರು ಎಳೆದೊಯ್ಯುವ ಮೂಲಕ ಲಾಲಾಲಜಪತ್ ರಾಯ್ ಉಲ್ಲೇಖದ ಮುಖಾಂತರ ಇದೊಂದು ಸ್ವಾತಂತ್ರ್ಯ ಸಂಗ್ರಾಮ ಸಮಯದ ಕಥೆ ಎಂದು ಸುಳಿವು ಸಿಗುತ್ತದೆ. ಬ್ರಿಟಿಷರಲ್ಲಿ ಬಂಧಿಯಾದ ಚಿಕ್ಕ ಹುಡುಗಿಯನ್ನು ಬಿಡಿಸಿಕೊಂಡು ಬರಲು‌ ಕಾಡಿನಲ್ಲೇ ಬೆಳೆದ ಕೊಮರಮ್​ ಭೀಮ್ (ಜ್ಯೂ. ಎನ್​​ಟಿಆರ್​) ದೆಹಲಿ ಕಡೆಗೆ ಮುಸ್ಲಿಂ ವೇಷದಲ್ಲಿ ಪಯಣ ಬೆಳೆಸುತ್ತಾನೆ. ಈತನನ್ನೇ ಹಿಡಿಯಲು ಮಾರುವೇಷದಲ್ಲಿ ಬಂದ ಬ್ರಿಡಿಷ್ ಅಧಿಕಾರಿ ಅಲ್ಲುರಿ ಸೀತಾರಾಮ್ (ರಾಮಚರಣ್) ಆತನೊಂದಿಗೇನೇ ಗಾಢವಾದ ಗೆಳೆತನ. ಇಂಟರ್‌ವೆಲ್ ವೇಳೆಗೆ ಇಬ್ಬರ ಅಸಲಿ ವೇಷ ತೆರೆದುಕೊಳ್ಳುತ್ತಲೇ ದುಷ್ಮನ್. ಕ್ಲೈಮ್ಯಾಕ್ಸ್‌ನಲ್ಲಿ ಮತ್ತೇ ದೋಸ್ತಿಯಾಗಿ ಜಂಟೀ ಕಾರ್ಯಾಚರಣೆ ಮೂಲಕ ಬ್ರಿಟಿಷರ ಪಡೆಯನ್ನು ಉಡೀಸ್ ಮಾಡಿ ಸಂಪೂರತಣ ಧ್ವಂಸಗೊಳಿಸುತ್ತಾರೆ.

ಈ ಮಧ್ಯೆ ಬ್ರಿಟಿಷ್ ಅಧಿಕಾರಿಯಾಗಿದ್ದವ ಏಕೆ ಅವರ ವಿರುದ್ದ ತಿರುಗಿ ಬಿದ್ದ, ಇಂಗ್ಲಿಷರ ವಶದಲ್ಲಿ ಕಾಡಿನ ಹಾಡು ಹಕ್ಕಿ (ಚಿಕ್ಕ ಹುಡುಗಿ) ಏನಾದಳು ಎಂಬುದನ್ನ ತೆರೆಯ ಮೇಲೆ ನೋಡೀನೇ ತಿಳಿದುಕೊಳ್ಳಬೇಕು.

ಹಲವು ದೃಶ್ಯಗಳನ್ನು ಸಾಂಕೇತಿಕವಾಗಿ, ಸಾಮ್ಯತಾನುಸಾರ ಮಾಡಿದ್ದಾರೆ ರಾಜಮೌಳಿ. ಅವರ ಬುದ್ಧಿವಂತಿಕೆಗೆ ಭೇಷ್ ಎನ್ನಲೇಬೇಕು.
ಸಿನಿಮಾದ ಕಥೆ ಸ್ವಾತಂತ್ರ್ಯ ಪೂರ್ವದ ಹಿನ್ನೆಲೆ ಹೊಂದಿದ್ದರೂ ಗೆಖೆತನ, ಹಗೆತನದ ಸರಳವಾದ ಕಥೆ. ಇಂಥ ಅನೇಕ ಸಿನಿಮಾಗಳು ಎಲ್ಲ ಭಾಷೆಯಲ್ಲೂ ಬಂದಿವೆ. ಗೆದ್ದದ್ದು ವಿರಳ. ಸ್ವಾತಂತ್ರ್ಯದ ಕಥೆ ಎಂದಾಕ್ಷಣ ಕೆಲವರಿಗೆ ಡಾಕ್ಯುಮೆಂಟರಿ ಎನ್ನುವ ಭಯ. ಆದರೆ ಇದು ಕಾಲ್ಪನಿಕ ಕಥೆ. ಸಿಂಪಲ್ ಕಥೆಯಾದರೂ, ಅದ್ದೂರಿ ದೃಶ್ಯವೈಭವ, ಎಲ್ಲರನ್ನೂ ಮೆಚ್ವಿಸುವ ಗ್ರಾಫಿಕ್ಸ್‌ಗಳ ಸಡಗರ.

ಸಿನಿಮಾ ಮೂರು ಗಂಟೆ ಇರುವುದರಿಂದ ಸಿನಿಮಾ ಪ್ರೇಕ್ಷಕನಿಂದ ಕೊಂಚ ತಾಳ್ಮೆ ಕೇಳಬಹುದು. ಕೆಲವೊಮ್ಮೆ ಸ್ಕ್ರಿಪ್ಟ್​ ಮೀರಿ ಮೇಕಿಂಗ್ ಹೈಲೈಟ್​ ಆಗಿ ಬಿಡುತ್ತದೆ. ಇಡೀ ಚಿತ್ರದಲ್ಲಿ ಹೈಲೈಟ್ ಅಂದ್ರೆ ರಾಮ್‌ಚರಣ್, ಜ್ಯೂ.ಎನ್‌ಟಿಆರ್.

ರಾಮ್​ ಚರಣ್​ ಹಾಗೂ ಜ್ಯೂ. ಎನ್​ಟಿಆರ್​ ನಟನೆ ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಅಲ್ಲುರಿ ಸೀತಾರಾಮ್ ಪಾತ್ರದಲ್ಲಿ ರಾಮ್​ ಚರಣ್​ ಮಿಂಚಿದ್ದಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಅವರು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಒಂದೇ ಮಾತಲ್ಲಿ ಹೇಳೋದಾದರೆ ಬೆಂಕಿಯಂತೆ ಪ್ರಜ್ವಲಿಸಿದ್ದಾರೆ. ಜ್ಯೂ.ಎನ್​ಟಿಆರ್​ ಭೀಮ್ ಆಗಿ ಗಮನ ಸೆಳೆದಿದ್ದಾರೆ. ಕುಟುಂಬದ ವಿಚಾರಕ್ಕೆ ಬಂದರೆ ಎಲ್ಲವನ್ನೂ ನುಂಗಿ ಹಾಕುವ ಸುನಾಮಿಯಾಗಿ ಜ್ಯೂ.ಎನ್​ಟಿಆರ್​ ಗಮನ ಸೆಳೆಯುತ್ತಾರೆ. ರಾಮ್​ ಚರಣ್​ ಪಾತ್ರಕ್ಕೆ ಹೆಚ್ಚು ಆದ್ಯತೆ ಇದೆ.

ಆರಂಭದಲ್ಲಿ ಬರುವ ದೃಶ್ಯದಲ್ಲಿ ರಾಮ್ ಚರಣ್-ಜ್ಯೂ.ಎನ್ಟಿಆರ್ ಕಣ್ಣಿನಲ್ಲೇ ಮಾತನಾಡಿಕೊಳ್ಳುವುದು, ಹುಲಿಯನ್ನು ಎದುರು ಹಾಕಿಕೊಳ್ಳುವುದು ಸೇರಿ ಹಲವು ದೃಶ್ಯಗಳು ಗಮನ ಸೆಳೆಯುತ್ತದೆ. ಇಬ್ಬರೂ ಜತೆಯಾಗಿ ಸ್ಟೆಪ್ ಹಾಕಿರೋ ‘ಹಳ್ಳಿ ನಾಟು..’ ಸಾಂಗ್ ಸಿನಿಮಾದ ಎನರ್ಜಿ ಹೆಚ್ಚಿಸಿದೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಹೆಚ್ಚು ಹೊತ್ತು ತೆರೆಮೇಲೆ ಬರುವುದಿಲ್ಲ. ಆದಾಗ್ಯೂ, ಎರಡೂ ಪಾತ್ರಗಳು ಕಥೆಗೆ ದೊಡ್ಡ ತಿರುವು ನೀಡುತ್ತವೆ. ಬ್ರಿಟಿಷರಾಗಿ ಕಾಣಿಸಿಕೊಂಡ ವಿದೇಶಿ ಕಲಾವಿದರು ಗಮನ ಸೆಳೆಯುತ್ತಾರೆ.

ಕೆ.ಕೆ. ಸೆಂಥಿಲ್​ ಕುಮಾರ್ ಛಾಯಾಗ್ರಹಣ ಚಿತ್ರದ ಮೆರುಗನ್ನು ಹೆಚ್ಚಿಸಿದೆ. ಇಂಟರ್​ವಲ್​​ಗೂ ಮೊದಲು ಬರುವ ಫೈಟ್​ ಸೇರಿ ಬಹುತೇಕ ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಎಂ.ಎಂ. ಕೀರವಾಣಿ ಹಿನ್ನೆಲೆ ಸಂಗೀತ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಾಂಗ್​ ವಿಚಾರದಲ್ಲಿ ಕೀರವಾಣಿ ಡಲ್ಲು. ಸಿನಿಮಾ ಅದ್ದೂರಿಯಾಗಿ ಮೂಡಿಬರೋಕೆ ನಿರ್ಮಾಪಕ ದಾನಯ್ಯ ರಾಜಮೌಳಿ ಮೇಲೆ ಭರವಸೆ ಇಟ್ಟು ಆರ್‌ಆರ್‌ಆರ್‌ಗೆ ಹಣ ಸುರಿದಿದ್ದಾರೆ. ಬಂಡವಾಳಕ್ಕಂತು ಮೋಸ ಇಲ್ಲ ಎನ್ನಬಹುದು.

ಒಟ್ಟಾರೆಯಾಗಿ ಬಾಹುಬಲಿ ಹ್ಯಾಂಗೋವರ್ ಬಿಟ್ಟು ಥೇಟರ್‌ಗೆ ಹೋಗುವುದಾದರೆ ಎಲ್ಲ ವರ್ಗದ ಜನರು ಆರ್‌ಆರ್‌ಆರ್ ಸಿನಿಮಾ ಎಂಜಾಯ್ ಮಾಡಬಹುದು.

ರಟ್ಟೀಹಳ್ಳಿ ಪಟ್ಟಣಕ್ಕೆ ಇಂದು ಮಾಜಿ ಸಿಎಂ ಹೆಚ್ಡಿಕೆ

ವಿಜಯಸಾಕ್ಷಿ ಸುದ್ದಿ, ರಟ್ಟೀಹಳ್ಳಿ:

ಪಟ್ಟಣದ ಹೊರವಲಯದಲ್ಲಿರುವ ಪ್ಯಾಟಿಗೌಡ್ರ ಕಣದಲ್ಲಿ ಆಯೋಜಿಸಲಾಗಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಶುಕ್ರವಾರ ಮಧ್ಯಾಹ್ನ ಮೂರು ಗಂಟೆಗೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ಚಿತ್ರನಟ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ.

ರಟ್ಟೀಹಳ್ಳಿ, ಹಿರೇಕೆರೂರ ತಾಲ್ಲೂಕಿನ ಜೆಡಿಎಸ್ ಅಭಿಮಾನಿಗಳು, ಕಾರ್ಯಕರ್ತರು, ರೈತರು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಜಯಾನಂದ ಜಾವಣ್ಣನವರ್ ( ಜೆ. ಕೆ ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಗೆ ಸ್ವಾಗತ: ಡಿ.ಕೆ.ಶಿ.

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಪಠ್ಯದಲ್ಲಿ ‌ಭಗವದ್ಗೀತೆ ಅಳವಡಿಕೆಯನ್ನ ಕಾಂಗ್ರೆಸ್ ಸ್ವಾಗತಿಸುತ್ತದೆ. ಭಗವದ್ಗೀತೆ ನಮ್ಮ ದೇಶದ ಅಸ್ಮೀತೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಧರ್ಮ ಗ್ರಂಥವನ್ನ ಪಠ್ಯದಲ್ಲಿ ಅಳವಡಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಇಡೀ ದೇಶಕ್ಕೆ ರಾಮಾಯಣ, ಮಹಾಭಾರತ ಪರಿಚಯ ಮಾಡಿಕೊಟ್ಟಿದ್ದೇ ಕಾಂಗ್ರೆಸ್.
ದೂರದರ್ಶನದ ಮೂಲಕ ಭಗವದ್ಗೀತೆಯನ್ನ ಪ್ರಚಾರ ಮಾಡಿದ್ದು ನಮ್ಮ ಪಕ್ಷ. ಇದರ ಜೊತೆಗೆ ‌ದೇಶದ ಎಲ್ಲಾ ಧರ್ಮವನ್ನ ಕಾಂಗ್ರೆಸ್ ಗೌರವಿಸಿತ್ತದೆ ಎಂದು ಡಿಕೆಶಿ ಹೇಳಿದರು.

ನಮ್ಮ ನಿರೀಕ್ಷೆಯಷ್ಟು ಡಿಜಿಟಲ್ ಸದಸ್ಯತ್ವ ಮಾಡಿಸುತ್ತೇವೆ. ಇನ್ನೂ 7 ದಿನ ಸಮಯ ಇದೆ. ನಾವು ನಿರೀಕ್ಷೆ ರೀಚ್ ಮಾಡುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ: ಡಿಕೆಶಿ

0

-ಇನ್ನೊಬ್ಬರನ್ನ ಟೀಕೆ ಮಾಡೊ ಬದಲು ನಮ್ಮನೆ ಸುಭದ್ರವಾಗಿ ಕಟ್ಟೋಣ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ರಾಜ್ಯ, ದೇಶದಲ್ಲಿ ನಿತ್ಯ ಪಿಕ್ ಪಾಕೆಟ್ ನಡೀತಾ ಇದೆ. ಪೆಟ್ರೋಲ್, ಗ್ಯಾಸ್ ಬೆಲೆ ಹೆಚ್ಚಳ ಮಾಡುವ ಮೂಲಕ ಆಡಳಿತದಲ್ಲಿರುವ ಸರಕಾರ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಪ್ರಗತಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೆಸ್ ಸದಸ್ಯತ್ವ ರಾಜ್ಯದಲ್ಲೇ ಹೆಚ್ಚಾಗಿರುವುದು ಸಂತೋಷದ ಸಂಗತಿ.‌ ಅದರಲ್ಲೂ ಗಂಗಾವತಿ ವಿಧಸನಸಭಾ ಕ್ಷೇತ್ರ, ರಾಮನಗರವನ್ನೇ ಮೀರಿಸಿದೆ ಎಂದರೆ ಜನ ಬಿಜೆಪಿ ಆಡಳಿತದಿಂದ ಎಷ್ಟು ರೋಸಿ ಹೋಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಬಿಜೆಪಿಯದ್ದು ಭ್ರಷ್ಟ ಸರಕಾರ. ಎಲ್ಲದರಲ್ಲೂ ಪರ್ಸಂಟೇಜ್. ಜನರಿಗೆ ಕರೆಂಟ್ ಕಟ್. ಜನರ ಜೇಬೂ ಕಟ್. ಈಗ ಪುನೀತ್ ಸಿನಿಮಾ ಜೇಮ್ಸ್ ಕಿತ್ತು ಹಾಕಲು ಹೊರಟಿದ್ದಾರೆ. ಇದು ಕನ್ನಡದ ಸ್ವಾಭಿಮಾನದ ಪ್ರಶ್ನೆ. ಬಿಜೆಪಿ ಬೆಲೆ ತೆರಬೇಕಾಗುತ್ತೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಇವತ್ತಿನವರೆಗೆ ಕೊಪ್ಪಳ ಜಿಲ್ಲೆಯಲ್ಲಿ 1,84,302 ಕಾಂಗ್ರೆಸ್‌ ಡಿಜಿಟಲ್ ಸದಸ್ಯತ್ವ ನೋಂದಣಿಯಾಗಿದೆ. ಅತಿ ಹೆಚ್ಚು ಜನರನ್ನು‌ ನೋಂದಣಿ ಮಾಡಿದವರನ್ನು ಇಲ್ಲೇ ಸನ್ಮಾನ ಮಾಡುವುದು ದೊಡ್ಡ ವಿಷಯವಲ್ಲ, ಇನ್ನೂ 7 ದಿನ ಸಮಯಾವಕಾಶ ಇದೆ. ಈ ಸಮಯವನ್ನು ಕಾಂಗ್ರೆಸ್ ಬಂಧುಗಳು ಸದುಪಯೋಗ ಪಡೆದುಕೊಳ್ಳಬೇಕು. ಅತಿ ಹೆಚ್ಚು ಸದಸ್ಯತ್ವ ನೋಂದಣೊ ಮಾಡಿಸಿದವರನ್ನು ರಾಜಧಾನಿ‌ ಬೆಂಗಳೂರಿಗೆ ಆಹ್ವಾನಿಸಿ ಗೌರವಿಸುವುದಾಗಿ ಭರವಸೆ ನೀಡಿದರು.

ಅವರಿವರನ್ನು ಟೀಕೆ ಮಾಡುವ ಬದಲು ಮೊದಲಿಗೆ ನಮ್ಮ ಮನೆಯನ್ನು ಸುಭದ್ರವಾಗಿ ಕಟ್ಟೋಣ. ಆನಂತರ ಇನ್ನೊಬ್ಬರ ಮನೆ ವಿಚಾರದ ಬಗ್ಗೆ ಮಾತಾಡೋಣ. ಮುಂಬರುವ 7 ದಿನಗಳಲ್ಲಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ 1 ಲಕ್ಷ ಸದಸ್ಯತ್ವ ನೋಂದಣಿಯಾಗಲಿ. ಬಿಜೆಪಿ, ದಳ ಸೇರಿದಂತೆ ಎಲ್ಲ‌ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಕರೆ ತನ್ನಿ. ನಮ್ಮಷ್ಟಕ್ಕೆ ನಾವೇ ಕಾಲು ಎಳೆಯದಿದ್ದರೆ ಜಿಲ್ಲೆಯ 5ಕ್ಕೆ 5 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ ಎಂದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಸದಸ್ಯತ್ವ ನೋಂದಣಿ ಮಾಡಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಖಂಡರು, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಮಾತನಾಡಿ, ಸದಸ್ಯತ್ವ ನೋಂದಣಿಗೆ‌ಂದು ಮನೆ ಮನೆಗೆ‌ ತೆರಳುವ ನಮ್ಮ ಕಾಂಗ್ರೆಸ್ ಮುಖಂಡರಿಗೆ ಜನರಿಂದ ಅದ್ದೂರಿ ಸ್ವಾಗತ ಸಿಗುತ್ತಿದೆ. ಬಿಜೆಪಿಯವರು ಜಾತಿ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಹೇಳಿ ಸಂತೋಷದಿಂದ ಕಾಂಗ್ರೆಸ್ ಸದಸ್ಯತ್ವ ಪಡೆಯುತ್ತಿದ್ದಾರೆ. ಸದಸ್ಯತ್ವ ನೋಂದಣಿಯ ಸಾಧನೆಯಲ್ಲಿ‌ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ಇಟ್ಟಂಗಿ ನಿರೂಪಿಸಿದರು. ಕಾಟನ್ ಪಾಷಾ ವಂದಿಸಿದರು.


ಡಿ.ಕೆ ಬದಲು ಎಚ್.ಡಿ!!
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ‌ ಮಾತನಾಡುವಾಗ ಜಿಲ್ಲಾಧ್ಯಕ್ಷ ತಂಗಡಗಿ ಸಮಯ ಬಹಳ ಇಲ್ಲ ಎಂದು‌ ಕಿವಿಯಲ್ಲಿ ಹೇಳಿದ್ದೇ ತಡ, ಕ್ಷಣ ಅವಕ್ಕಾದ ಅನ್ಸಾರಿ. ಸಹಕಾರ ನೀಡಿದ ಡಿ.ಕೆ.ಯವರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಹೇಳುವಾಗ ಡಿ.ಕೆ. ಬದಲು ಎಚ್.ಡಿ. ಎಂದು ಉಚ್ಛರಿಸಿ, ಆನಂತರ ಸರಿಪಡಿಸಿಕೊಂಡರು.


4 ಗಂಟೆ ಲೇಟ್!:
ಮಧ್ಯಾಹ್ನ 3 ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್ ಕಾರ್ಯಕ್ರಮ ಶುರುವಾಗಿದ್ದು ಬರೋಬ್ಬರಿ 4 ಗಂಟೆ ತಡವಾಗಿ. ಇದಕ್ಕಾಗಿ ಡಿ.ಕೆ.ಶಿವಕುಮಾರ್‌ ಕ್ಷಮಾಪಣೆ ಕೇಳಿದರು.


ಕಾರ್ಯಕರ್ತರಿಂದ ಉದ್ಘಾಟನೆ:
ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳನ್ನು ಪಕ್ಷದ ವರಿಷ್ಠರು ಉದ್ಘಾಟಿಸುತ್ತಾರೆ. ಆದರೆ ಕೊಪ್ಪಳದ ಕಾರ್ಯಕ್ರಮವನ್ನು ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅತಿ ಹೆಚ್ಚು ನೋಂದಣಿ ಮಾಡಿಸಿದ ಜಿಲ್ಲೆಯ 5 ಕ್ಷೇತ್ರಗಳ ಕಾರ್ಯಕರ್ತರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.

ಹಾಫ್ ನಾಲೆಡ್ಜ್ ಇಸ್ ಡೇಂಜರ್: ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಹಾಫ್ ನಾಲೆಡ್ಜ್ ಇಸ್ ಡೇಂಜರ್. ಮಂತ್ರಿಯಾದವರಿಗೆ ಯಾವುದೇ ವಿಷಯದ ಬಗ್ಗೆ ಹಾಫ್ ನಾಲೆಡ್ಜ್ ಇರಬಾರದು. ಅದು ರಾಜ್ಯಕ್ಕಾಗುವ ಅವಮಾನ. ಹಾಲಪ್ಪ ಆಚಾರ್ ಈಗ ಬರೀ ಶಾಸಕ ಅಲ್ಲ, ಮಂತ್ರಿಯಾಗಿದ್ದಾರೆ. ಮಾತನಾಡುವಾಗ ಅರ್ದಂಬರ್ಧ ಮಾತನಾಡಬಾರದು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಲೇವಡಿ ಮಾಡಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಬಿ ಸ್ಕೀಮ್‌ಗೆ ಸಂಬಂಧಿಸಿದಂತೆ 1997-98ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಈಗಲೂ ಅಧಿಕೃತ ದಾಖಲೆಗಳು ನನ್ನ ಬಳಿ ಇವೆ. ಕೊಪ್ಪಳ ಭಾಗಕ್ಕೆ ಬಿ ಸ್ಕೀಂನಡಿ ನೀರಾವರಿ ಮಾಡಲು ಅಡ್ಡಿಯಾಗಿದ್ದೇ ಬಿಜೆಪಿ. ತಮ್ಮ ತಪ್ಪನ್ನು‌ ಮರೆ ಮಾಚಲು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ರಾಯರಡ್ಡಿ ಕಿಡಿ ಕಾರಿದರು.

ಕೃಷ್ಣಾ ನ್ಯಾಯಾಧೀಕರಣದ ನೀರನ್ನು ಈ ಭಾಗಕ್ಕೆ ಹರಿಸಲು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮೊದಲು ಒತ್ತಾಯಿಸಿದ್ದೇ ನಾನು ಎಂದ ಅವರು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಬಗ್ಗೆ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ತೆರಳಲು ಕರೆ ನೀಡಿದರೆ, ವಿರೋಧಿಸಿದ್ದ ಬಿಜೆಪಿ, ಈಗ ಚುನಾವಣೆ ಹತ್ತಿರವಾಗುತ್ತಿದ್ದು, ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಬಿಜೆಪಿ ಸರಕಾರಕ್ಕೆ ಈಗ ಬಂದಿದೆ. ಬಿಜೆಪಿಗೆ ಈಗಲಾದರೂ ಬುದ್ಧಿ ಬಂದಿದೆ. ಆದರೆ ತುಂಬಾ ತಡವಾಗಿ‌ ಬುದ್ಧಿ ಬಂದಿದೆ. ಪರವಾಗಿಲ್ಲ. ಈ ವಿಷಯದಲ್ಲಿ ಬಿಜೆಪಿಯ ನಿಲುವನ್ನು ಸ್ವಾಗತಿಸುವುದಾಗಿ ರಾಯರಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು ಹಾಗೂ ವಕ್ತಾರ ರವಿ ಕುರಗೋಡ ಇದ್ದರು.

ಸಾಮರಸ್ಯ ಕೆಡಿಸೋದೇ ಬಿಜೆಪಿ ಕೆಲಸ: ತಂಗಡಗಿ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಬಿಜೆಪಿಯವರು ಮಾಡಿದ ಒಂದಾದರೂ ಉತ್ತಮ ಕೆಲಸ ಇದೆಯಾ? ರಾಜ್ಯದಲ್ಲಿ ಸಾಮರಸ್ಯ ಕೆಡಿಸೋದು, ಜಾತಿಗಳ ನಡುವೆ ಜಗಳ ಹಚ್ಚೋದೇ ಬಿಜೆಪಿ ಕೆಲಸ ಎಂದು ಮಾಜಿ ಸಚಿವ, ಕಾಂಗ್ರೆಸ್ ಕೊಪ್ಪಳ ಜಿಲ್ಲಾಧ್ಯಕ್ಷ ಶಿವರಾಜ‌ ತಂಗಡಗಿ ಕಿಡಿ‌ಕಾರಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹಿಂದು ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿಷೇಧ ಹೇರಿರುವುದು ಸಮಂಜಸವಲ್ಲ, ಇಷ್ಟು ದಿನ ಇರದ ಕಾನೂನು, ಕ್ರಮ ಈಗೇಕೆ ಎಂದು ಅವರು ಪ್ರಶ್ನಿಸಿದರು.

ಬಿಜೆಪಿ ಅವರಿಗೆ ಅಭಿವೃದ್ಧಿ ಬಗ್ಗೆ‌ ಕಿಂಚಿತ್ತೂ ಕಾಳಜಿ ಇಲ್ಲ. ಇಂಥ ಕಾರ್ಯಗಳ ಮೂಲಕ ಜನರನ್ನು ಒಡೆದು ಆಳುವ ನೀತಿಗೆ ಕೈ ಹಾಕಿರುವ ಬಿಜೆಪಿ, ಮುಂಬರುವ ಚುನಾವಣೆಯಲ್ಲಿ ತಕ್ಕ ಶಾಸ್ತಿ ಅನುಭವಿಸುತ್ತದೆ ಎಂದು ಟೀಕಿಸಿದರು.

ಕರ್ನಾಟಕದ ಹೆಮ್ಮೆಯ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದ್ದರೂ ಥೇಟರ್‌ಗಳಲ್ಲಿ ಜೇಮ್ಸ್ ಸಿನಿಮಾ ತೆಗೆದು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಪ್ರದರ್ಶನಕ್ಕೆ ಸಿಎಂ ಸೇರಿದಂತೆ ಬಿಜೆಪಿಯವರು ಅತ್ಯುತ್ಸಾಹ ತೋರುತ್ತಿದ್ದಾರೆ. ಇದು ದಿವಂಗತ ನಟ ಡಾ.ಪುನೀತ್‌ಗೆ ಮಾಡುವ ಅವಮಾನ. ಈಗಾಗಲೇ ರಾಜ್ಯಾದ್ಯಂತ ಪುನೀತ್ ಅಭಿಮಾನಿಗಳು ಸರಕಾರದ ವಿರುದ್ಧ ಬಂಡೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಲು ಜನ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯತ್ವ ನೋಂದಣಿಯಲ್ಲಿ ರಾಜ್ಯಕ್ಕೆ ಪ್ರಥಮ:
ಕಾಂಗ್ರೆಸ್ ಸದಸ್ಯತ್ವ ನೋಂದಣಿಯಲ್ಲಿ ಕೊಪ್ಪಳ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ತಂಗಡಗಿ ತಿಳಿಸಿದರು.

ಮಾರ್ಚ್ 22ರ ರಾತ್ರಿಯವರೆಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ 22,462, ಕನಕಗಿರಿ ತಾಲೂಕಿನಲ್ಲಿ 49,118, ಗಂಗಾವತಿ ತಾಲ್ಲೂಕಿನಲ್ಲಿ 61,544, ಕೊಪ್ಪಳ ತಾಲೂಕಿನಲ್ಲಿ 19,703 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 20,932 ಸದಸ್ಯತ್ವ ನೋಂದಣಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1,73,459 ಜನ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದಾರೆ ಎಂದು ತಿಳಿಸಿದರು.

ಮಾರ್ಚ್ 24ರಂದು ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ಸದಸ್ಯತ್ವ ನೋಂದಣಿಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಮಾರ್ಚ್ 24ರ ಮಧ್ಯಾಹ್ನ 3 ಗಂಟೆಗೆ ಕೊಪ್ಪಳದ ಶ್ರೀ ಶಿವಶಾಂತ ಮಂಗಲ ಭವನದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಪಕ್ಷದ ವರಿಷ್ಠರು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ವಕ್ತಾರ ರವಿ ಕುರಗೋಡ, ಜಿಪಂ ಮಾಜಿ ಸದಸ್ಯ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು ಇತರರು ಇದ್ದರು.

ಹಾಫ್ ನಾಲೆಡ್ಜ್ ಇಸ್ ಡೇಂಜರ್: ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಹಾಫ್ ನಾಲೆಡ್ಜ್ ಇಸ್ ಡೇಂಜರ್. ಮಂತ್ರಿಯಾದವರಿಗೆ ಯಾವುದೇ ವಿಷಯದ ಬಗ್ಗೆ ಹಾಫ್ ನಾಲೆಡ್ಜ್ ಇರಬಾರದು. ಅದು ರಾಜ್ಯಕ್ಕಾಗುವ ಅವಮಾನ. ಹಾಲಪ್ಪ ಆಚಾರ್ ಈಗ ಬರೀ ಶಾಸಕ ಅಲ್ಲ, ಮಂತ್ರಿಯಾಗಿದ್ದಾರೆ. ಮಾತನಾಡುವಾಗ ಅರ್ದಂಬರ್ಧ ಮಾತನಾಡಬಾರದು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಲೇವಡಿ ಮಾಡಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ಬಿ ಸ್ಕೀಮ್‌ಗೆ ಸಂಬಂಧಿಸಿದಂತೆ 1997-98ರಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇನೆ. ಈಗಲೂ ಅಧಿಕೃತ ದಾಖಲೆಗಳು ನನ್ನ ಬಳಿ ಇವೆ. ಕೊಪ್ಪಳ ಭಾಗಕ್ಕೆ ಬಿ ಸ್ಕೀಂನಡಿ ನೀರಾವರಿ ಮಾಡಲು ಅಡ್ಡಿಯಾಗಿದ್ದೇ ಬಿಜೆಪಿ. ತಮ್ಮ ತಪ್ಪನ್ನು‌ ಮರೆ ಮಾಚಲು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ರಾಯರಡ್ಡಿ ಕಿಡಿ ಕಾರಿದರು.

ಕೃಷ್ಣಾ ನ್ಯಾಯಾಧೀಕರಣದ ನೀರನ್ನು ಈ ಭಾಗಕ್ಕೆ ಹರಿಸಲು ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮೊದಲು ಒತ್ತಾಯಿಸಿದ್ದೇ ನಾನು ಎಂದ ಅವರು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ಬಗ್ಗೆ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ತೆರಳಲು ಕರೆ ನೀಡಿದರೆ, ವಿರೋಧಿಸಿದ್ದ ಬಿಜೆಪಿ, ಈಗ ಚುನಾವಣೆ ಹತ್ತಿರವಾಗುತ್ತಿದ್ದು, ಸರ್ವ ಪಕ್ಷ ನಿಯೋಗ ಕರೆದೊಯ್ಯುವ ಚಿಂತನೆ ಬಿಜೆಪಿ ಸರಕಾರಕ್ಕೆ ಈಗ ಬಂದಿದೆ. ಬಿಜೆಪಿಗೆ ಈಗಲಾದರೂ ಬುದ್ಧಿ ಬಂದಿದೆ. ಆದರೆ ತುಂಬಾ ತಡವಾಗಿ‌ ಬುದ್ಧಿ ಬಂದಿದೆ. ಪರವಾಗಿಲ್ಲ. ಈ ವಿಷಯದಲ್ಲಿ ಬಿಜೆಪಿಯ ನಿಲುವನ್ನು ಸ್ವಾಗತಿಸುವುದಾಗಿ ರಾಯರಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು ಹಾಗೂ ವಕ್ತಾರ ರವಿ ಕುರಗೋಡ ಇದ್ದರು.

ಗದಗ ವಿಧಾನಸಭಾ ಮತಕೇತ್ರದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ?: ಮಾಧ್ಯಮದವರ ಮುಂದೆ ಹೇಳಿದ್ದೇನು?

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ವಿಧಾನಸಭಾ ಮತಕ್ಷೇತ್ರದಿಂದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರದ ಕುರಿತು
ಗದಗ ಜಿಲ್ಲಾ ಬಿಜೆಪಿಯಲ್ಲಿ ತೀವ್ರ ಚರ್ಚೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ಪಷ್ಟನೆ‌ ನೀಡಿದ್ದಾರೆ.

ಬುಧವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು,
224 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಇದ್ದರೆ ನಿಲ್ಲಬಹುದಿತ್ತು. ಉಪಚುನಾವಣೆ ವೇಳೆಯೂ ನನ್ನ ಹೆಸರು ಕೇಳಿ ಬರುತ್ತಿತ್ತು. ಬೇರೆ ಕಡೆ ಹೋದಾಗಲೂ ಈ ಮಾತು ಕೇಳಿ ಬರುತ್ತಿವೆ. ಆದರೆ, ರಾಜ್ಯದ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಸಂಘಟನೆ ಮಾಡುತ್ತಿದ್ದೇನೆ. ಉಳಿದಿರುವ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ಕುರಿತು ನಮ್ಮ ಹಿರಿಯರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕೋರ್ಟ್ ತೀರ್ಪಿನ ವಿರುದ್ಧ ಬಂದ್ ಆಚರಣೆ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಪರೋಕ್ಷವಾಗಿ ಈ ಬೆಳವಣಿಗೆಗೆ ಬೆಂಬಲ ನೀಡಿದ ಅವರು, ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಅಂಗಡಿ ಮುಗ್ಗಟ್ಟುಗಳ ಬಾಗಿಲು ಹಾಕಿದರೂ ಈ ರೀತಿಯ ಪ್ರಕ್ರಿಯೆಗಳಿಂದ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಹೈಕೋರ್ಟ್ ತೀರ್ಪಿನ ವಿರುದ್ಧ ನಡೆದುಕೊಂಡ ರೀತಿಯೇ ಇದಕ್ಕೆಲ್ಲ ಕಾರಣವಾಗಿದೆ. ಹಿಜಾಬ್ ನಂತರ ಆಗುತ್ತಿರುವ ಬೆಳವಣಿಗೆ ಯಾರಿಗೂ ಶೋಭೆ ತರುವಂತದ್ದಲ್ಲ. ಹಿಜಾಬ್ ವಿಚಾರದಲ್ಲಿ ಮಕ್ಕಳ ಶಿಕ್ಷಣ ಹಾಳು ಮಾಡುವ ವ್ಯವಸ್ಥೆ ನಡೆಯಿತು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದವರು ಹತಾಸೆಯಾಗಿದ್ದಾರೆ.
ಒಂದು ತಿಂಗಳಿನಿಂದ ಅಧಿಕಾರಕ್ಕೆ ಬಂದೇ ಬಿಟ್ವಿ ಎನ್ನುವ ಉತ್ಸಾಹದಲ್ಲಿದ್ದರು. ಆದರೆ, ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮುಖಂಡರಿಗೆ ನಿದ್ದೆ ಬರುತ್ತಿಲ್ಲ. ಬೇರೆ ಬೇರೆ ವಿಚಾರದಲ್ಲಿಯೂ ಗೊಂದಲದಲ್ಲಿದ್ದಾರೆ. ಕರ್ನಾಟಕವೂ ಸಹ ಕಾಂಗ್ರೆಸ್ ಮುಕ್ತವಾಗಲು ಬೇರೆ ಯಾರೂ ಬೇಡ ಅವರ ಮುಖಂಡರೇ ಸಾಕು ಎಂದು‌ ಕಿಚಾಯಿಸಿದರು.

ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಎಲ್ಲ ಧರ್ಮದವರು ಶಾಂತಿಯಿಂದ ಇರಬೇಕೆನ್ನುವುದು ಎಲ್ಲರಿಗೂ ಇದೆ. ಆದರೆ, ಹೈಕೋರ್ಟ್ ನಿರ್ಧಾರ ಬಂದ ನಂತರವೂ ಈ ರೀತಿಯ ಚಟುವಟಿಕೆಗಳನ್ನು ಯಾರೂ ಒಪ್ಪುವಂತದ್ದಲ್ಲ.
ಎಲ್ಲರೂ ಸಮಾಧಾನದಿಂದ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಸಚಿವ ಸಿ.ಸಿ ಪಾಟೀಲ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ!

ವಿಜಯಸಾಕ್ಷಿ ಸುದ್ದಿ, ಗದಗ:

ಹಾವು..! ಈ ಪದ ಕಿವಿಗೆ ಬೀಳುತ್ತಲೇ ಮೈ ಝುಮ್ಮೆನಿಸುತ್ತದೆ. ಒಂದು ಕ್ಷಣ ಮೈ ಮೇಲಿನ ರೋಮಗಳು ಎದ್ದು ನಿಲ್ಲುತ್ತವೆ. ಹಾವು ಕಂಡ ಭಯದಲ್ಲೇ ಹೊಡೆದು ಕೊಲ್ಲಬೇಕೆಂದು ಹಪಹಪಿಸುವವರೇ ಹೆಚ್ಚು. ಕಲ್ಲು ನಾಗರನಿಗೆ ಕೈಮುಗಿದು ಹಾಲೆರೆಯುವವರು, ನಿಜ ನಾಗರ ಕಂಡರೆ ಹೊಡೆಯುವವರ ಮಧ್ಯೆ ಹಾವುಗಳ ರಕ್ಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ. ಸರಿಸೃಪಗಳ ಸಂರಕ್ಷಣೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು, ರಾಜ್ಯ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ನರಗುಂದದ ಮನೆಯ ಕಂಪೌಂಡ್ ಒಳಗಡೆ ಸೋಮವಾರ ಹಾವು ಪ್ರತ್ಯಕ್ಷವಾಗಿದ್ದು, ಗೃಹ ರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ನರಗುಂದ ಪಟ್ಟಣದಲ್ಲಿರುವ ಪಿಡಬ್ಲ್ಯೂಡಿ ಸಚಿವರ ಮನೆಯ ಕಂಪೌಂಡ್‌ನಲ್ಲಿ ಕಂಡ ೩-೪ ಅಡಿ ಉದ್ದದ ನಾಗರಹಾವನ್ನು ಹೋಮ್‌ಗಾರ್ಡ್ ಸಿಬ್ಬಂದಿ ಬುಡ್ಡಾ ಸುರೇಬಾನ ಸೆರೆ ಹಿಡಿದು, ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ. ಅದರಂತೆ, ಸ್ನೇಕ್ ಬುಡ್ಡಾ ಅವರು ಕೇರೆ ಹಾವು (ರೆಡ್ ಸ್ನೇಕ್) ಸೇರಿದಂತೆ ಸೋಮವಾರ ಒಂದೇ ದಿನ ವಿವಿಧ ಜಾತಿಯ ಮೂರು ಹಾವುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿರುವ ಬುಡ್ಡಾ ಸುರೇಬಾನ ಅವರ ಸ್ನೇಕ್ ರೆಸ್ಕ್ಯೂ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಾಬಲಕಟ್ಟಿ‌ ಜಾತ್ರಾ ಮಹೋತ್ಸವಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಂದ “ವೆಲ್‌ಕಮ್ ಫ್ಲೆಕ್ಸ್”

0

-ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಾಬಲಕಟ್ಟಿ ಗ್ರಾಮದಲ್ಲಿ ಸನ್ನಿ ಲಿಯೋನ್ ಅಭಿಮಾನಿ ಬಳಗ.

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಾತ್ರಾ ಮಹೋತ್ಸವ ಎಂದ ಮೇಲೆ ಭಕ್ತರು, ಗಣ್ಯರು ತಮ್ಮೂರ ಜಾತ್ರೆಗೆ ಸ್ವಾಗತ ಕೋರುವ ಫ್ಲೆಕ್ಸ್ ಹಾಕೋದು ಕಾಮನ್. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಡಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಹಲವು ಬ್ಯಾನರ್‌ಗಳನ್ನು ಹಾಕಲಾಗಿದೆ. ಗಮನ ಸೆಳೆದ ಬ್ಯಾನರ್ ಎಂದರೆ ಸನ್ನಿ ಲಿಯೊನ್ ಅಭಿಮಾನಿಗಳು ಸ್ವಾಗತ ಕೋರಿದ ಫ್ಲೆಕ್ಸ್!!

ಇಂದು ಹಾಬಲಕಟ್ಟಿ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು.ಜಾತ್ರೆ ಹಾಗೂ ವಿವಾಹಕ್ಕೆ ಬರುವ ಜನರನ್ನು ಸನ್ನಿ ಲಿಯೋನ ಹೆಸರಲ್ಲಿ ಬ್ಯಾನರ್ ಹಾಕಿ ಸ್ವಾಗತ ಕೊರಲಾಗಿದೆ. ನಾಡಿನಲ್ಲಿ ಸನ್ನಿಲಿಯೋನ್ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ ಹಾಬಲಿಕಟ್ಟಿ ಗ್ರಾಮದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.

error: Content is protected !!