Home Blog Page 3210

ಕಾಂಗ್ರೆಸ್‌ನಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ; ಸದಾನಂದಗೌಡ

0

ಬೆಂಗಳೂರು;- ಕಾಂಗ್ರೆಸ್ ನಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಮಾಜಿ ಸಿಎಂ ಡಿವಿ ಸದಾನಂದಗೌಡ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಇದೆ. ಸರ್ಕಾರವು ರೈತರಿಗೆ ಸಹಕಾರ ಕೊಡುತ್ತಿಲ್ಲ, ದ್ವೇಷದ ರಾಜಕಾರಣ ಮಾಡುತ್ತಿದೆ. ತಮ್ಮ ವಿರೋಧಿಗಳನ್ನು ಯಾವ ರೀತಿಯಲ್ಲಿ ಬೇಕಾದರೂ ತೆಗೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಆಂತರಿಕ ಕಚ್ಚಾಟ ಶುರುವಾಗಿದೆ.

ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದ ಆಂತರಿಕ ಕಚ್ಚಾಟ ಉಂಟಾಗಿದೆ. ಆಡಳಿತಕ್ಕೆ ಬಂದ ಇಷ್ಟು ದಿನದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ.

ಅವರ ಏಜೆಂಟ್ ಮೂಲಕ ಕಲೆಕ್ಷನ್ ಸೆಂಟರ್ ಮಾಡಿಕೊಂಡಿದೆ. ಇದೆಲ್ಲವನ್ನೂ ರಾಷ್ಟ್ರೀಯ ನಾಯಕರ ಗಮನಕ್ಕೆ ತರಬೇಕಿದೆ. ಜನರಿಗೆ ತಿಳಿಸಲು ಇದು ಅತ್ಯಂತ ಸಕಾಲ. ಈ ಸಂಬಂಧ ದೆಹಲಿಗೆ ಹೋಗಲಿದ್ದೇನೆ ಎಂದರು.

ಕಾಂಗ್ರೆಸ್ ನಾಯಕರ ಹಣೆ ಬರಹ ಇಷ್ಟೇ. ಕಾಂಗ್ರೆಸ್ ಮುಕ್ತ ಭಾರತ ಆಗಬೇಕು. ಲೂಟಿ ಹೊಡೆಯುವ ಕೆಲಸ ಮಾಡಲಾಗ್ತಿದೆ. ಅದೆಲ್ಲವನ್ನು ಜನರಿಗೆ ಮುಟ್ಟಿಸುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.

ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಬೊಮ್ಮಾಯಿ ಆಸ್ಪತ್ರೆಯಿಂದ ರಿಲೀಸ್

0

ಬೆಂಗಳೂರು;- ಸಿಎಬಿಜಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೇತರಿಸಿಕೊಂಡಿದ್ದು ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದು, ಇನ್ನಷ್ಟು ಸಮಯದ ನಂತರವೇ ರಾಜಕೀಯ ಚಟುವಟಿಕೆಗೆ ಮರಳಲಿದ್ದಾರೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪರಿಧಮನಿಯ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬೊಮ್ಮಾಯಿ ಗುಣಮುಖರಾಗಿದ್ದಾರೆ. ಅಕ್ಟೋಬರ್ 15 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಒಂದು ವಾರದ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಆರ್.ಟಿ.ನಗರದಲ್ಲಿರುವ ನಿವಾಸಕ್ಕೆ ಮರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರ್.ಟಿ ನಗರದಲ್ಲಿರುವ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಮೈಸೂರು ದಸರಾ; ಇಂದು ಜಂಬೂ ಸವಾರಿಗೆ ಚಾಲನೆ

0

ಮೈಸೂರು: ನವರಾತ್ರಿಯ ಕೊನೆಯ ದಿನ ವಿಜಯದಶಮಿ ಅಥವಾ ದಸರಾ. ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ಇಂದು (ಅ.24) ಜಂಬೂ ಸವಾರಿ ನಡೆಯಲಿದೆ. ಸಂಜೆ 4.40ರಿಂದ 5 ಗಂಟೆ ನಡುವೆ ದಸರಾ ಜಂಬೂಸವಾರಿಗೆ ಚಾಲನೆ ನೀಡಲಾಗುತ್ತದೆ. ಚಾಮುಂಡಿಮೂರ್ತಿಗೆ ಪುಷ್ಪಾರ್ಚನೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಅಭಿಮನ್ಯು ಸತತ ನಾಲ್ಕನೇ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿದ್ದಾನೆ. ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಲಿವೆ. ಜಂಬೂಸವಾರಿ ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿದೆ. ದಸರಾ ಜಂಬೂಸವಾರಿಗೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.

ಹುಲಿ ಉಗುರು ಧರಿಸಿದ ಪ್ರಕರಣ: 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ವರ್ತೂರು ಸಂತೋಷ್

0

ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಜೈಲು ಪಾಲಾಗಿದ್ದಾರೆ. ಹುಲಿ ಉಗುರು ಧರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಅರಣ್ಯ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಂತೋಷ್ ಅವರನ್ನು ಹಾಜರು ಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ನೆನ್ನೆ ರಾತ್ರಿಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ತನ್ನಲ್ಲಿರುವ ಹುಲಿ ಉಗುರು ಬಂದಿದ್ದು ಹೇಗೆ? ಯಾರು ಕೊಟ್ಟರು? ಎಲ್ಲಿಂದ ಖರೀದಿ ಮಾಡಿದಿದ್ದೀರಿ? ಮಾರಿದವರು ಈಗ ಎಲ್ಲಿದ್ದಾರೆ? ಎಷ್ಟು ಮಂದಿಗೆ ಈ ರೀತಿ ಉಗುರು ಮಾರಲಾಗಿದೆ ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಅರಣ್ಯಾಧಿಕಾರಿಗಳು ಸಂತೋಷ್ ಮುಂದೆ ಇಟ್ಟಿದ್ದರು. ಅದಕ್ಕೆ ಸಂತೋಷ್ ಕೂಡ ಉತ್ತರ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.

ಅಪರಿಚಿತರು ಹುಲಿ ಉಗುರನ್ನು ಮಾರಕ್ಕೆ ತಂದಿದ್ದರು. ಅವರು ಎಲ್ಲಿಂದ ಬಂದಿದ್ದರು, ಯಾರು ಎನ್ನುವುದು ನನಗೆ ಗೊತ್ತಿಲ್ಲ. ಮಾರಾಟ ಮಾಡುತ್ತಿರುವ ವಿಷಯ ಗೆಳೆಯರಿಂದ ತಿಳಿಯಿತು. ಹಣ ಕೊಟ್ಟು ಇದನ್ನು ಖರೀದಿ ಮಾಡಿದ್ದೇನೆ ಎಂದು ಅಧಿಕಾರಿಗಳ ಮುಂದೆ ಸಂತೋಷ್ ಹೇಳಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಅನ್ನು ಅವರು ಹಾಕಿಕೊಂಡಿದ್ದರು. ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಲಾಗಿತ್ತು.

ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ: ಓರ್ವ ಸಾವು, 7 ಮಂದಿಗೆ ಗಂಭೀರ ಗಾಯ

0

ಬೆಂಗಳೂರು;- ಉತ್ತರ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿರುವ ಘಟನೆ ಜರುಗಿದೆ

ನಿನ್ನೆ ಬೆಳಿಗ್ಗೆ 8.15 ರ ಸುಮಾರಿಗೆ ಬಿಳಿ ಮತ್ತು ಮರೂನ್ ಕಾರುಗಳ ನಡುವೆ ರೈತರ ಸಂತೆ ಬಳಿಯ ಮೇಲ್ಸೇತುವೆಯ ಮೇಲೆ ಅಪಘಾತ ಸಂಭವಿಸಿದೆ.

ಬಿಳಿ ಕಾರನ್ನು ಮೊಹಿದ್ ಓಡಿಸುತ್ತಿದ್ದ ಮತ್ತು 20-25 ವರ್ಷದೊಳಗಿನ ಮೂವರು ಈ ಕಾರಿನಲ್ಲಿದ್ದರು. ಎಲ್ಲರೂ ದೇವನಹಳ್ಳಿಯಿಂದ ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಮೋಹಿದ್ ಅವರು ಅತಿ ವೇಗದಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಅದರ ಮೇಲೆ ಹಾರಿ ಮತ್ತೊಂದು ಲೇನ್‌ನಲ್ಲಿದ್ದ ಮೆರೂನ್ ಕಾರಿಗೆ ಡಿಕ್ಕಿ ಹೊಡೆದಿದೆ.

“ಮೊಹಿದ್ ಕಳೆದ ರಾತ್ರಿ ನಡೆದ ಪಾರ್ಟಿಯಿಂದ ಹಿಂತಿರುಗುತ್ತಿದ್ದರು. ಚಾಲಕನು ತನ್ನ ಕಾರಿನ ನಿಯಂತ್ರಣವನ್ನು ಕಳೆದುಕೊಂಡು ಮೀಡಿಯನ್‌ಗೆ ಡಿಕ್ಕಿ ಹೊಡೆದಿದ್ದು, ದುರದೃಷ್ಟವಶಾತ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ” ಎಂದು ಪೊಲೀಸರು ಹೇಳಿದ್ದಾರೆ.

ಇಂದಿನ ರಾಜಕೀಯ ಕಲುಷಿತವಾಗಿದೆ – ಬಸವರಾಜ್ ಹೊರಟ್ಟಿ

0

ಹುಬ್ಬಳ್ಳಿ:- ರಾಜಕಾರಣದ ಬಗ್ಗೆ ಇವತ್ತಿನ ದಿನದಲ್ಲಿ ಮಾತನಾಡದಿರುವುದೇ ಒಳ್ಳೇದು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಈ ಸಂಬಂಧ ಮಾತನಾಡಿದ ಅವರು,ಇವತ್ತು ಕಮಿಟ್​ಮೆಂಟ್ ಅನ್ನೋದೆ ಇಲ್ಲ. ಜನರೂ ಕೂಡ ಯಾರು ಕೆಲಸ ಮಾಡುತ್ತಾರೆ, ಯಾರಿಗೆ ವೋಟ್ ಹಾಕಬೇಕು ಎನ್ನುವ ಯೋಚನೆಯೂ ಇಲ್ಲ. ದಿನೇ ದಿನೇ ಕಮಿಟ್​ಮೆಂಟ್ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬರ, ಅತಿವೃಷ್ಟಿ ಇದ್ದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ದಿನೇ ದಿನೆ ಅವರನ್ನ,ಇವರನ್ನ ಬೈಯ್ಯೋದೇ ಆಗಿದೆ. ನಾವು ಕಠಿಣ ಸಂದರ್ಭದಲ್ಲಿ ಇದ್ದೇವೆ, ಆಳುವ ಪಕ್ಷ, ವಿರೋಧ ಪಕ್ಷ ಯಾರೇ ಮಾಡಿದರೂ ಸರಿ ಅಲ್ಲ. ರಾಜಕೀಯ ಕಲುಷಿತವಾಗಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಎಲ್ಲರ ಯೋಗಕ್ಷೇಮ ನೋಡಬೇಕು. ಇದೀಗ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ನಾನು ಪತ್ರ ಬರೆದಿದ್ದೇನೆ. ನಾಲ್ಕೈದು ಕೋಟಿ ಖರ್ಚು ಮಾಡಿ ಅದನ್ನು ಭೂತ ಬಂಗಲೇ ಮಾಡುವುದು ಸರಿ ಅಲ್ಲ, ಸುವರ್ಣ ಸೌಧ ಕಟ್ಟಿದ ಮೇಲೆ ಇಲ್ಲಿನ ಜನರ ಸಮಸ್ಯೆ ಆಲಿಸಬೇಕು ಎಂದರು.

ಎರಡು ಪ್ರತ್ಯೇಕ ಪ್ರಕರಣ: ಮನೆ ಕಳವು ಮತ್ತು ದ್ವಿಚಕ್ರ ವಾಹನ ಕಳವು ಮಾಡ್ತಿದ್ದ ನಾಲ್ವರು ಅರೆಸ್ಟ್

0

ಬೆಂಗಳೂರು;-;ಎರಡು ಪ್ರತ್ಯಕ ಪ್ರಕರಣಗಳಲ್ಲಿ ಮನೆ ಕಳವು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪಶ್ಚಿಮ ವಿಭಾಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮಹಮ್ಮದ್ ಹಫೀಜ್ (21) ಬಂಧಿತ ಆರೋಪಿ. ಈತನಿಂದ 8,22 ಲಕ್ಷ ರೂಪಾಯಿ ಮೌಲ್ಯದ 137 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಈತ ಸುಂಕದಕಟ್ಟೆಯ ಮುತ್ತುರಾಯಸ್ವಾಮಿ ಲೇಔಟ್ ನಿವಾಸಿ ಶಿವಕುಮಾರ್ ಎಂಬವರ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದನು. ಘಟನೆಗೆ ಸಂಬಂಧಿಸಿದ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.

ಆರೋಪಿ ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ರಾಮಮೂರ್ತಿನಗರ ಸೇರಿ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮನೆಗಳವು ಪ್ರಕರಣದಲ್ಲಿ ಭಾಗಿಯಾಗಿದ್ದನು. ಕೆಲವು ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಜೈಲು ಸೇರಿದ್ದಾನೆ. ಬಳಿಕ ಜಾಮೀನು ಪಡೆದು ಹೊರಬಂದು ಹಳೆ ಚಾಳಿ ಮುಂದುವರೆಸುತ್ತಿದ್ದ. ಈತನ ಬಂಧನದಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಮೂರು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ.

ಇನೂ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಮೊಹಮ್ಮದ್ ಆಸೀಪ್‌ (27), ಮೊಹಮ್ಮದ್ ವಾಸೀಂ(22), ಸೈಯದ್ ಆಸೀಫ್(25) ಬಂಧಿತ ಆರೋಪಿಗಳು. ಇವರಿಂದ 22.30 ಲಕ್ಷ ರೂ. ಮೌಲ್ಯದ 31 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲಿನಿಂದ ಬಸ್‌ನಲ್ಲಿ ಬೆಂಗಳೂರಿಗೆ ಬಂದು, ಮೆಜೆಸ್ಟಿಕ್, ಕಾಟನ್‌ಪೇಟೆ, ಕಲಾಸಿಪಾಳ್ಯ, ಸಿಟಿ ಮಾರುಕಟ್ಟೆ, ಚಾಮರಾಜಪೇಟೆ, ಹೆಬ್ಬಾಳ ಹಾಗೂ ಇತರೆ ಪ್ರದೇಶಗಳಲ್ಲಿ ನಿಲುಗಡೆ ಮಾಡುತ್ತಿದ್ದ ಬೈಕ್‌ಗಳ ಹ್ಯಾಂಡಲ್ ಲಾಕ್ ಮುರಿದು ಆರೋಪಿಗಳು ಕಳವು ಮಾಡುತ್ತಿದ್ದರು. ಬಳಿಕ ಬೈಕ್‌ಗಳನ್ನು ಕೋಲಾರಕ್ಕೆ ಕದ್ದೊಯ್ದು ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು  ಎನ್ನಲಾಗಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ !?

0

ಬೆಂಗಳೂರು;- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಮ್ಮನ್ನು ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್​ಗೆ ಮನವಿ ಮಾಡಿದ್ದರು. ಹೊಸ ನೇಮಕಾತಿಗೆ ವರಿಷ್ಠರು ಮನಸ್ಸು ಮಾಡಿರಲಿಲ್ಲ. ಜೊತೆಗೆ ವಿಪಕ್ಷ ನಾಯಕ ಹುದ್ದೆಯ್ನೂ ಖಾಲಿ ಇರಿಸಿಕೊಂಡಿದೆ. ಆದ್ರೆ, ಇದೀಗ ಅಲರ್ಟ್​ ಆಗಿರುವ ಹೈಕಮಾಂಡ್​​​, ದಸರಾ ಮುಗಿಯುವುದರೊಳಗೆ ರಾಜ್ಯ ಬಿಜೆಪಿಗೆ ನೂತನ ಸಾರಥಿ ನೇಮಿಸಲಿದೆ ಎಂದು ಹೇಳಲಾಗುತ್ತಿದೆ. ಆದರಲ್ಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಮುನ್ನೆಲೆಯಲ್ಲಿರುವುದು ಅಚ್ಚರಿಕೆ ಕಾರಣವಾಗಿದೆ.

2 ದಿನಗಳೊಳಗಾಗಿ ನೇಮಕಾತಿ ಆಗಬಹುದು ಎಂಬ ನಿರೀಕ್ಷೆಯನ್ನು ರಾಜ್ಯ ಬಿಜೆಪಿ ನಾಯಕರು ರಾಜ್ಯ ನಾಯಕರು ಹೊಂದಿದ್ದಾರೆ. ಶೀಘ್ರವೇ ಘೋಷಣೆ ಆಗಬಹುದು ಎಂಬ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಮುನ್ನೆಲೆಯಲ್ಲಿದ್ರೂ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತ್ರ, ಆ ಬಗ್ಗೆ ಗೊತ್ತೇ ಇಲ್ಲ ಎಂದೇ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಇನ್ನು ನೇರವಾಗಿ ದೆಹಲಿಯಿಂದಲೇ ಅಧ್ಯಕ್ಷರ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಲಿದೆ. ಆದ್ರೆ, ರಾಜ್ಯ ಬಿಜೆಪಿ ನಾಯಕರಿಗೆ ಈ ನೇಮಕಾತಿ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಷ್ಟು, ವರಿಷ್ಠರು ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಶೋಭಾ ಕರಂದ್ಲಾಜೆ‌ ಹೆಸರು ಮುಂಚೂಣಿಗೆ ಬರುತ್ತಿದ್ದಂತೆಯೇ ಒಕ್ಕಲಿಗ ಕೋಟಾವೇ ಮಾನದಂಡವಾದರೆ ನಾವ್ಯಾಕೆ ಆಗಬಾರದು ಎಂಬ ಪ್ರಶ್ನೆಯನ್ನು ಪಕ್ಷದ ಒಕ್ಕಲಿಗ ನಾಯಕರು ಹೊಂದಿದ್ದಾರೆ. ಅಷ್ಟಕ್ಕೂ ಬಿಜೆಪಿ ವರಿಷ್ಠರು ಶೋಭಾ ಕರಂದ್ಲಾಜೆಗೇ ಮಣೆಯಾಕುತ್ತಿರುವುದು ಯಾಕೆ ಎನ್ನುವುದನ್ನು ನೋಡೋದಾದ್ರೆ

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಹಲವು ನಾಯಕರ ಕಣ್ಣು ಹಾಕಿದ್ದರು. ರಾಜ್ಯಾಧ್ಯಕ್ಷ ರೇಸ್​​ನಲ್ಲಿ ಸಿ.ಟಿ.ರವಿ, ಬಿ.ವೈ.ವಿಜಯೇಂದ್ರ, ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥ್​ ನಾರಾಯಣ್​​​, ವಿ.ಸೋಮಣ್ಣದಿಂದಲೂ ಸರ್ವಪ್ರಯತ್ನ ನಡೆದಿದೆ. ಈ ಈ ಹಿನ್ನಲೆಯಲ್ಲಿ ನಾಯಕರ ನಡುವೆ ಪಕ್ಷದ ಅಧ್ಯಕ್ಷಗಿರಿಗಾಗಿ ತೀವ್ರ ಪೈಪೋಟಿ ನಡೆದಿದ್ದು, ನಾಯಕರ ಮಧ್ಯೆ ಬಣ ನಿರ್ಮಾಣವಾಗಿದೆ. ಹೀಗಾಗಿ ಮಹಿಳಾ ಅಧ್ಯಕ್ಷೆ ಮೂಲಕ ಬಣ ಬಡಿದಾಟಕ್ಕೆ ಬ್ರೇಕ್​​​​ ಹಾಕಲು ಬಿಜೆಪಿ ಹೈಕಮಾಂಡ್​​ ಪ್ಲ್ಯಾನ್ ರೂಪಿಸಿದೆ. ಇನ್ನೂ ಬಹುಮುಖ್ಯವಾಗಿ ಶೋಭಾ ​​​​ಕರಂದ್ಲಾಜೆ ಹೆಸರಿಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧಿಸಲ್ಲ ಎನ್ನುವುದು ವರಿಷ್ಠರ ತಂತ್ರವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಅಗ್ನಿ ದುರಂತ: 74 ಪಬ್ ಬಾರ್ ರೆಸ್ಟೋರೆಂಟ್ ಗಳಿಗೆ ನೋಟಿಸ್

0

ಬೆಂಗಳೂರು;- ಕೋರಮಂಗಲದಲ್ಲಿ ಮಡ್ ಕೆಫೆ ಬಾರ್‌ನಲ್ಲಿ ಅಗ್ನಿ ದುರಂತ ನಡೆದಿತ್ತು. ಈ ಘಟನೆ ಬಹಳಷ್ಟು ಚರ್ಚೆ ಆಗಿತ್ತು. ಅದರ ಬೆನ್ನಲ್ಲೆ ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳುವ ಜೊತೆಗೆ ನಿಯಮ ಮೀರಿದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ಪರಿಶೀಲನೆ ನೋಟಿಸ್ ಜಾರಿ ಮಾಡಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಅಕ್ಟೊಬರ್ 22ರಂದು ತಪಾಸಣೆ ನಡೆಸಲಾಗಿದೆ. ನ್ಯೂನ್ಯತೆಗಳು ಕಂಡು ಬಂದಿರುವಂತಹ ಉದ್ದಿಮೆಗಳಿಗೆ ನೋಟಿಸ್ ಜಾರಿಮಾಡಲಾಗಿದೆ. ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 157 ಉದ್ದಿಮೆಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ 74 ಉದ್ದಿಮೆಗಳಿಗೆ ನೋಟಿಸ್ ಜಾರಿಗೊಳಿಸಿ 10 ಉದ್ದಿಮೆಗಳನ್ನು ಮುಚ್ಚಲಾಗಿರುತ್ತದೆ. ನೋಟಿಸ್ ಜಾರಿ ಮಾಡಿದ್ದರ ಕುರಿತು ಪೂರ್ಣ ವಿವರ ಇಲ್ಲಿದೆ.

ಒಟ್ಟು ಎಂಟು ವಲಯಗಳ ಪೈಕಿ ಬೊಮ್ಮನಹಳ್ಳಿಯಲ್ಲಿ ನಾಲ್ಕು ನೋಟಿಸ್ ಜಾರಿ ಮಾಡಲಾಗಿದೆ. ದಾಸರಹಳ್ಳಿಯಲ್ಲಿ ಒಟ್ಟು 22 ಬಾರ್, ಪಬ್ ರಸ್ಟೋರೆಂಟ್ ಗಳ ಮೇಲೆ ಪರಿಶೀಲಿಸಲಾಯಿತು. ಅದರಲ್ಲಿ ಹತ್ತು ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಇನ್ನೂ ಬೆಂಗಳೂರು ಪೂರ್ವ ವಲಯದಲ್ಲಿ ಒಟ್ಟು 36 ಮಳಿಗೆಗಳ ಪರಿಶೀಲನೆ ನಡೆಸಲಾಗಿದೆ. ಒಟ್ಟು 24 ನೋಟಿಸ್ ಜಾರಿ ಮಾಡಲಾಗಿದೆ. ಇದರಲ್ಲಿ ಪಬ್ ಬಾರ್ ರೆಸ್ಟೋರೆಂಟ್‌ ಸೇರಿ ಒಟ್ಟು ಏಳು ಬಂದ್ ಮಾಡಿಸಲಾಗಿದೆ. ಮಹಾದೇವಪುರದಲ್ಲಿ ಆರು ಮಳಿಗೆಗಳಿಗೆ ನೋಟಿಸ್ ನೀಡಲಾಗಿದೆ.ಆರ್‌ಆರ್‌ ನಗರ ವಲಯದಲ್ಲಿ 3, ದಕ್ಷಿಣ ವಲಯದಲ್ಲಿ 08, ಪಶ್ಚಿಮ ವಲಯದಲ್ಲಿ 02 ಹಾಗೂ ಯಲಹಂಕ ವ್ಯಾಪ್ತಿಯಲ್ಲಿ 17 ನೋಟಿಸ್ ಜಾರಿ ಮಾಡಲಾಗಿದ

ಆಯುಧ ಪೂಜೆ-ವಿಜಯದಶಮಿ ಹಿನ್ನೆಲೆ: ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು

0

ಬೆಂಗಳೂರು;- ಆಯುಧ ಪೂಜೆ-ವಿಜಯದಶಮಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಕೆ.ಆರ್.ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರ, ಬನಶಂಕರಿ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಜನಸಾಗರವೇ ನೆರೆದಿತ್ತು. ಹೂವು, ಹಣ್ಣುಮತ್ತು ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

ಸೇವಂತಿಗೆ ಕೆಜಿಗೆ 150 ರೂ, ಉತ್ತಮ ಗುಲಾಬಿಗೆ 350 ರೂ, ಚೆಂಡು ಹೂ 60 ರಿಂದ 70 ರೂ, ಕನಕಾಂಬರ 1,200 ರೂ, ಮಲ್ಲಿಗೆ ಹೂವು 2,000 ರೂ.ಗೆ. ಸುಗಂಧರಾಜ 300 ರೂ, ಸಂಪಿಗೆ 250 ರೂಗೆ ಮಾರಾಟವಾಗುತ್ತಿದೆ.

ಮೂಸಂಬಿ ಹಣ್ಣು ಸುಮಾರು 60 ರೂ, ದಾಳಿಂಬೆ ಹಣ್ಣು 60 ರಿಂದ 80 ರೂ, ಬಾಳೆಹಣ್ಣು ಕೆಜಿಗೆ 70 ರೂ, ಸೇಬು 100 ರೂ, ಸಪೋಟ 70 ರಿಂದ 80 ರೂ, ಸೀತಾಫಲ ಸುಮಾರು 170 ರೂ, ದ್ರಾಕ್ಷಿ ಹಣ್ಣು 250 ರೂ. ಗೆ ವ್ಯಾಪಾರವಾಗುತ್ತಿದೆ.

ತರಕಾರಿಗಳ ದರಗಳ ಪೈಕಿ ಟೊಮೆಟೊ ಮಾತ್ರ ಕಡಿಮೆ ಬೆಲೆ 15 ರೂ. ಗೆ ಮಾರಾಟವಾಗುತ್ತಿದೆ. ಉಳಿದಂತೆ ಬದನೆ 50 ರೂ, ಕ್ಯಾರೆಟ್ 50 ರೂ, ಬೀನ್ಸ್ 100 ರೂ, ಬೀಟ್‌ರೂಟ್ 50 ರೂ, ಉತ್ತಮ ಗುಣಮಟ್ಟದ ಆಲೂಗಡ್ಡೆ 30 ರೂ. ಬೆಲೆ ಇದೆ.

error: Content is protected !!