Home Blog Page 3213

ಮಳೆಯಿಲ್ಲದೇ ಕಂಗಾಲು, ಶೇಂಗಾ ಬೆಳೆ ನಾಶಪಡಿಸಿದ ರೈತ

0

ತುಮಕೂರು;- ಮಳೆಯಿಲ್ಲದೇ ಕಂಗಲಾಗಿರುವ ರೈತ, ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಶೇಂಗಾವನ್ನ ಟ್ರಾಕ್ಟರ್ ನಲ್ಲಿ ನಾಶಪಡಿಸಿದ್ದಾನೆ. ಮಳೆಯಿಲ್ಲದೇ ಫಸಲು ಸಮರ್ಪಕವಾಗಿ ಬಾರದ ಹಿನ್ನೆಲೆಯಲ್ಲಿ ಬೆಳೆ ನಾಶ ಮಾಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿಯಲ್ಲಿ ರೈತರು ಇದ್ದು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಲಕ್ಲಿಹಟ್ಟಿ ಗ್ರಾಮದಲ್ಲಿ ಘಟನೆ ಜರುಗಿದೆ.

ಸುಮಾರು ನಾಲ್ಕು ಎಕರೆಯಲ್ಲಿ ಶೇಂಗಾ ಬೆಳೆ ಬೆಳೆಯಲಾಗಿತ್ತು. ಲಕ್ಷಾಂತರ ರೂ ಖರ್ಚು ಮಾಡಿ ಶೇಂಗಾ ಬೆಳೆದಿದ್ದ ರೈತ ನಾಗರಾಜಪ್ಪ,
ಟ್ರಾಕ್ಟರ್ ನಲ್ಲಿ ಉಳುಮೆ ಮಾಡಿ ಬೆಳೆ ನಾಶಪಡಿಸಿದ್ದಾರೆ.

ಸಿಸಿಬಿ ಪೊಲೀಸರು ಅಂತಾ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್

0

ಬೆಂಗಳೂರು;- ರಾಜಧಾನಿ ಬೆಂಗಳೂರಿನಲ್ಲಿ ನಾವು ಸಿಸಿಬಿ ಪೊಲೀಸರು ಅಂತಾ ವ್ಯಕ್ತಿ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ಮಾಡಿರುವ ಘಟನೆ ಜರುಗಿದೆ. ಪೊಲೀಸ್ ಇನ್ಫಾರ್ಮರ್ ಆಗಿದ್ದವನೇ ಪೊಲೀಸರ ಅತಿಥಿ ಆಗಿದ್ದಾನೆ.ತಾನು ಸಿಸಿಬಿ ಆಫೀಸರ್ ಅಂತ ಟೀಮ್ ಕರ್ಕೊಂಡು ಹೋಗಿ ವ್ಯಕ್ತಿಯ ಕಿಡ್ನಾಪ್ ನಡೆದಿದ್ದು, ಅಪಹರಿಸಿ 5 ಲಕ್ಷಕ್ಕೆ ಡಿಮ್ಯಾಂಡ್ ಮಾಡಿ ಬೆದರಿಕೆ ಹಾಕಿದ್ದ. ಮಹಮ್ಮದ್ ಖಾಸಿಮ್ ಮುಜಾಯಿದ್ @ ಸೇಟು ಸಿಸಿಬಿ ಇನ್ಫಾರ್ಮರ್ ಆಗಿದ್ದ. ಇದೇ ಕಾರಣಕ್ಕೆ ಸಿಸಿಬಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಳ್ತಿದ್ದ. ಕಳೆದ ತಿಂಗಳು 27ನೇ ತಾರೀಖು ಕಾಲು ಸಿಂಗ್ ಎಂಬಾತ ಕಾರಿನಲ್ಲಿ ವಿವಿಪುರಂ ಬಳಿ ಬರುತ್ತಿದ್ದರು. ಇದೇ ವೇಳೆ ಸೇಟು ಅಂಡ್ ಟೀಂ ಕಾರು ಅಡ್ಡ ಹಾಕಿದ್ದರು.

ನೀನು ಗಾಂಜಾ ಪೆಡ್ಲರ್ ಎಂದು ಬೆದರಿಸಿದ್ದ ಖತರ್ನಾಕ್ ಗ್ಯಾಂಗ್ ಬೆದರಿಸಿದರು. ನಂತರ ಕಣ್ಣಿಗೆ ಬಟ್ಟೆ ಕಟ್ಟಿ ಸೀದಾ ವಿಲ್ಸನ್ ಗಾರ್ಡನ್ ನ ಒಂದು ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಯಲ್ಲಿ ಕಾಲು ಸಿಂಗ್ ನ ಲಾಕ್ ಮಾಡಿ ಮಾರಾಕಾಸ್ತ್ರ ತೋರಿಸಿ ಬೆದರಿಸಿದ್ದರು. ನಂತರ ಕಾಲು ಸಿಂಗ್ ಮೊಬೈಲ್ ನಿಂದ ಆತನ ಸ್ನೇಹಿತನಿಗೆ ಫೋನ್ ಮಾಡಿದ್ದರು. ನಾವು ಸಿಸಿಬಿ ಅವ್ರು ಕಾಲು‌ಸಿಂಗ್ ನ ಬಿಡಲು ಐದು ಲಕ್ಷ ಕೊಡಬೇಕು ಇಲ್ಲ ಅಂದ್ರೆ ಜೈಲಿಗೆ ಕಳುಸ್ತಿವಿ ಅಂತ ಧಮ್ಕಿ ಹಾಕಿದ್ದಾರೆ.ಈ ಸಂಬಂಧ ಸಿಸಿಬಿಗೆ ಕಾಲು ಸಿಂಗ್ ಮಾಹಿತಿ ನೀಡಿದ್ದರು. ಸದ್ಯ ಮಹ್ಮದ್ ಖಾಸಿಮ್ ಮುಜಾಯಿದ್ @ ಸೇಟು ಮುಕ್ತಿಯಾರ್,ವಸೀಮ್,ಶಬ್ಬೀರ್, ಹಾಗೂ ಶೋಹಿಬ್ ನ ಸಿಸಿಬಿ ಬಂಧಿಸಿದರು. ಘಟನೆ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿದ್ಯುತ್ ಕೃತಕ ಅಭಾವ ನಿಮ್ಮ ಷಡ್ಯಂತ್ರ – ಸಿದ್ದರಾಮಯ್ಯ ಗೆ ಕುಮಾರಸ್ವಾಮಿ ಟಾಂಗ್

0

ಬೆಂಗಳೂರು;- ಸರ್ಕಾರವನ್ನು ವೆಸ್ಟ್​ಎಂಡ್ ಹೋಟೆಲ್​ನಲ್ಲಿ ಕೂತು ನಡೆಸುತ್ತಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ವೆಸ್ಟ್ ಎಂಡ್ ನಲ್ಲಿ ಆಡಳಿತ ನಡೆಸಿಲ್ಲ ಎನ್ನುವ ಗಿಲೀಟು ಗಿರಾಕಿ, ಆವತ್ತು ಮುಖ್ಯಮಂತ್ರಿ ನಿವಾಸವನ್ನೇಕೆ ತೆರವು ಮಾಡಲಿಲ್ಲ? 5 ವರ್ಷ ಸರಕಾರ ಕೊಟ್ಟ ಸಿದ್ದಪುರುಷ ಇನ್ನೊಬ್ಬರ ಹೆಸರಿನಲ್ಲಿ ಭಂಗಲೆ ಪಡೆದು ಸಾಸಿವೆ ಕಾಳಷ್ಟೂ ಸಂಕೋಚವಿಲ್ಲದೆ ಅದೇ ಜಾಗದಲ್ಲಿ ಹೆಗ್ಗಣವಾಗಿ ಮೈತ್ರಿ ಸರಕಾರಕ್ಕೆ ಕನ್ನ ಕೊರೆದಿದ್ದನ್ನು ಕನ್ನಡಿಗರು ಮರೆತಿಲ್ಲ. ಹೇಳಿದ್ದೇ ಹೇಳುವ ಕಿಸುಬಾಯಿ ದಾಸನಿಗೆ ಗೊತ್ತಿರುವುದು ಎರಡೇ; 1.ವೆಸ್ಟ್‌ ಎಂಡ್‌ 2.ಬಿಜೆಪಿ ಬಿ ಟೀಂ.

ಡೋಂಗೀ ಸಮಾಜವಾದಿ, ಪುಲ್ ಟೈಂ ಮೀರುಸಾದಿಕವಾದಿಗೆ ವೆಸ್ಟ್ ಎಂಡ್ ಸೋಂಕು ಮತ್ತೆ ತಗುಲಿದೆ. I.N.D.I.A. ಕೂಟದ ಸಭೆಯನ್ನು ಇದೇ ವೆಸ್ಟ್ ಎಂಡ್ ನಲ್ಲೇ ಬದಲಿಗೆ, ತಮ್ಮ ಸುತ್ತ ಕೆನೆಪದರ, ಒಳಪದರ, ತೆಳುಪದರದಂತೆ ತಲೆ ಎತ್ತಿರುವ ʼಪರ್ಸಂಟೇಜ್ ಪಟಾಲಂʼ ಏಳುಸುತ್ತಿನ ಕೋಟೆಯ ವಠಾರದಲ್ಲಿಯೇ ನಡೆಸಬೇಕಿತ್ತು. ಏಕೆ ನಡೆಸಲಿಲ್ಲ?

ಆಧುನಿಕ ಭಾರತದ ಈಸ್ಟ್‌ ಇಂಡಿಯಾ ಕಂಪನಿ ಕಾಂಗ್ರೆಸ್ ಗೆ ಕರ್ನಾಟಕ ಪೊಗದಸ್ತು ಹುಲ್ಲುಗಾವಲು. ಸಿದ್ದಪುರುಷ @ಶೋಕಿಪುರುಷನೇ ಈ ಹುಲ್ಲುಗಾವಲಿನ ಮೇಟಿ. ವಿದ್ಯುತ್ ಕ್ಷಾಮ ಮತ್ತು ಬರದಲ್ಲಿ ಜನರು ಬೆಯುತ್ತಿದ್ದರೆ ದಿನಪೂರ್ತಿ ಕೂತು ಕ್ರಿಕೆಟ್ ನೋಡುವಷ್ಟು ಶೋಕಿದಾರ! ರೋಮ್ ನಗರ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ!! ಜನ ಸಂಕಷ್ಟದಲ್ಲಿದ್ದರೆ ಕರ್ನಾಟಕದ ನೀರೋ ಕ್ರಿಕೆಟ್‌ ಮ್ಯಾಚ್‌ ನೋಡುತ್ತಿದ್ದ!!!

5 ತಿಂಗಳಿಂದ ವಿದ್ಯುತ್ ಉತ್ಪಾದನೆ ಅಲಕ್ಷಿಸಿದ್ದೇಕೆ? ಹಾಹಾಕಾರ ಎದ್ದ ಮೇಲೆ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದರೆ ಲೋಡ್ ಶೆಡ್ಡಿಂಗ್ ಏಕೆ ಬಂತು? 2013-2018ರಲ್ಲಿ 12,000 ಮೆ.ವ್ಯಾ. ಉತ್ಪಾದಿಸಿದ್ದೇವೆ ಎಂದು ನೀವೇ ಹೇಳಿದ್ದೀರಿ, ಸರಿ. ಈಗ ಮಳೆ ಕಡಿಮೆಯಾಗಿ ಜಲವಿದ್ಯುತ್‌ ಉತ್ಪಾದನೆ ಕುಸಿದಿದೆ, ನನಗೂ ಗೊತ್ತಿದೆ. ಅದರಲ್ಲಿ 3,000 ಮೆ.ವ್ಯಾ. ಇಲ್ಲ ಎಂದರೂ ಸಾರ್ವಜನಿಕ & ಖಾಸಗಿ ವಲಯ ಸೇರಿ ಒಟ್ಟು 29,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆಗಲೇಬೇಕಿತ್ತು. ಆಗಿಲ್ಲವೇಕೆ? ಏಕಾಎಕಿ ಉತ್ಪಾದನೆ ನಿಲ್ಲಿಸಿದ್ದೇಕೆ? ಜಲವಿದ್ಯುತ್‌ ಕೈಕೊಡುತ್ತದೆ ಎಂದು ಗೊತ್ತಿದ್ದರೂ ಕಲ್ಲಿದ್ದಲ ಸಂಗ್ರಹ ಇಟ್ಟುಕೊಳ್ಳಲಿಲ್ಲವಲ್ಲ, ಏಕೆ?

ಜಲ ವಿದ್ಯುತ್‌ ಹೊರತುಪಡಿಸಿ ಇತರೆ ಮೂಲಗಳ ವಿದ್ಯುತ್‌ ಉತ್ಪಾದನೆಗೂ ಖೋತಾ ಬೀಳಲಿಕ್ಕೆ ಪ್ರಕೃತಿ ಕಾರಣವೋ? ಅಥವಾ ನಿಮ್ಮ ʼಕೈ ಚಳಕʼವೇ ಕಾರಣವೋ? ಸತ್ಯ ಹೇಳಿದರೆ ನನ್ನ ಕಡೆಗೇ ಬೊಟ್ಟು ಮಾಡುತ್ತೀರಿ, ನಿಮ್ಮ ಸಚಿವರನ್ನು ….. ….. ಗಳಂತೆ ನನ್ನ ಮೇಲೆ ಛೂ ಬಿಡುತ್ತೀರಿ. ಎಷ್ಟು ದಿನ ನೆಪಗಳ ನಾಜೂಕತನ?

ಮತ್ತೆ ಮತ್ತೆ ನಾನು ಹೇಳುತ್ತೇನೆ, ವಿದ್ಯುತ್ ಕೃತಕ ಅಭಾವ ಸೃಷ್ಟಿ ನಿಮ್ಮದೇ ಷಡ್ಯಂತ್ರ. ಅದು ಉಲ್ಬಣಿಸಿದಷ್ಟೂ ನಿಮಗೆ ಕಲೆಕ್ಷನ್‌ ಹೆಚ್ಚು. ಖಾಸಗಿ ಕಂಪನಿಗಳಿಂದ ಖರೀದಿಸಿ ಕೈ ತುಂಬಾ ಕಮೀಷನ್ ಎತ್ತಲು ಹೊರಟಿದ್ದೀರಿ. ಇಲ್ಲ ಎಂದಾದರೆ ವಿದ್ಯುತ್‌ ಕ್ಷಾಮದ ವಾಸ್ತವತೆ ಬಗ್ಗೆ ‘ಶ್ವೇತಪತ್ರ’ ಹೊರಡಿಸಿ. ಈ ಬಗ್ಗೆ ನಿಮ್ಮ ಮೌನ ಏಕೆ?

ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ ನಂತರ ಇಂ’ಧನ’ ಇಲಾಖೆಯಲ್ಲೂ ನೀವು ನಗದೀಕರಣಕ್ಕೆ ನಾಂದಿ ಹಾಡಿದ್ದೀರಿ. ಖರೀದಿ ಖುಷಿಯಲ್ಲಿ ಪರ್ಸಂಟೇಜ್ ಪಟಾಲಂ ಸಂಭ್ರಮಿಸುತ್ತಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿಯಲ್ಲಿ ಬೇರೆ ಬೇರೆ ಗುಂಪುಗಳಿರುವುದು ಸತ್ಯ – ಸತೀಶ್ ಜಾರಕಿಹೊಳಿ

0

ಬೆಳಗಾವಿ;- ಜಿಲ್ಲೆಯಲ್ಲಿ ಬೇರೆ ಬೇರೆ ಗುಂಪುಗಳಿರುವುದು ಸತ್ಯ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಈಗಲೂ ಬೇರೆ, ಬೇರೆ ಗುಂಪುಗಳಿವೆ, ಇಲ್ಲ ಎನ್ನುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಗುಂಪು ಮತ್ತು ನಮ್ಮ ಗುಂಪು ಬೇರೆ, ಬೇರೆ ಇರಬಹುದು. ಆದರೆ, ಚುನಾವಣೆ ಬಂದಾಗ ನಾವೆಲ್ಲರೂ ಒಂದೇ ಎನ್ನುವ ಮೂಲಕ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇರುವುದನ್ನು ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಬಿಜೆಪಿ, ಜೆಡಿಎಸ್‌ ಗಳಲ್ಲಿ ಗುಂಪಿರುವ ಹಾಗೆ ಸ್ವಾಭಾವಿಕವಾಗಿ ನಮ್ಮಲ್ಲೂ ಗುಂಪಿದೆ. ಇಲ್ಲಾ ಅಂತೇನಿಲ್ಲ. ಜಿಲ್ಲೆಯಲ್ಲಿ ನಮ್ಮದು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರದು ಬೇರೆ, ಬೇರೆ ಗುಂಪು ಇದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ ಎಂದು ಹೇಳಿದರು.ಜಿಲ್ಲೆಯಲ್ಲಿ ಈಗಲೂ ತಾವು ಸ್ಟ್ರಾಂಗಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾವು ಸ್ಟ್ರಾಂಗೂ ಇರಲ್ಲಾ, ವೀಕೂ ಇರಲ್ಲಾ. ಪಕ್ಷ ಅಧಿಕಾರಕ್ಕೆ ಬರಲು ನನ್ನ ಜತೆ ಸಾವಿರಾರು, ಲಕ್ಷಾಂತರ ಕಾರ್ಯಕರ್ತರ ಪಾತ್ರವಿದೆ’ ಎಂದರು.

ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ ಹಣದ ಆಮೀಷ – ಆಯನೂರು ಮಂಜುನಾಥ

0

ಶಿವಮೊಗ್ಗ;- ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿಯಿಂದ ಹಣದ ಆಮೀಷ ತೋರಿಸಲಾಗುತ್ತಿದೆ ಎಂದು ಆಯನೂರು ಮಂಜುನಾಥ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು, ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ. ಆದರೆ ಕೇವಲ 5 ತಿಂಗಳೊಳಗೆ ಬಿಜೆಪಿ ಅಧಿಕಾರವಿಲ್ಲದೇ ಒದ್ದಾಡುತ್ತಿದೆ. ಅದಕ್ಕಾಗಿ ತಲಾ ₹50 ಕೋಟಿ ಹಣದ ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರ ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ. ಸರ್ಕಾರ ಬೀಳಿಸುವ ಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಮಾಜಿ ಸಚಿವ ಈಶ್ವರಪ್ಪ ಸಹ ಸರ್ಕಾರ ಬೀಳಿಸುತ್ತೇವೆ, ಬೀಳಿಸಿದರೆ ತಪ್ಪೇನು ಎಂದಿದ್ದಾರೆ ಎಂದು ಕಿಡಿಕಾರಿದರು.

ಈಶ್ವರಪ್ಪ ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಪ್ರಶ್ನಿಸಿದರು

ಬಿಟ್‌ಕಾಯಿನ್ ಹೆಸರಿನಲ್ಲಿ ವಂಚಿಸಿದ್ದ ತಂದೆ-ಮಗ ಸೇರಿ ಮೂವರ ಬಂಧನ

0

ಬೆಂಗಳೂರು;- ಕ್ರಿಪ್ಟೋ ಕರೆನ್ಸಿ ನೀಡುವುದಾಗಿ ನಂಬಿಸಿ ಸಾವಿರಾರು ಮಂದಿಯಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದ ತಂದೆ-ಮಗ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸತೀಶ್ ಮಾಗಜಿ(೬೦), ಈತನ ಪುತ್ರ ಶ್ರೀಕಾಂತ್ ಮಾಗಾಜಿ(೩೨) ಮತ್ತು ಅವರ ಸಂಸ್ಥೆಯ ಸಿಬ್ಬಂದಿ ದೀಪಕ್(೩೦) ಬಂಧಿತರು.

ಆರೋಪಿಗಳಿಂದ ೨ ಲ್ಯಾಪ್‌ಟಾಪ್, ಆರು ಕಂಪ್ಯೂಟರ್‌ಗಳು, ೪ ಮೊಬೈಲ್‌ಗಳು ಹಾಗೂ ಇತರೆ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಬಿಟ್‌ಕಾಯಿನ್ ನೆಪದಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದು ನಂಬಿಸಿ ಸಾವಿರಾರರು ಮಂದಿಯಿಂದ ೮-೧೦ ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Siddaramaiah: ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ ದಿಟ್ಟ ಕ್ರಮ

0

ಬೆಂಗಳೂರು;- ಸಮರ್ಪಕ ವಿದ್ಯುತ್‌ ಪೂರೈಕೆಗೆ ನಮ್ಮ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ.ಈ ಸಂಬಂಧ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಜಲವಿದ್ಯುತ್ ಉತ್ಪಾದಕ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ಸಮನಾಗಿ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲದಂತಾಗಿದೆ. ಉತ್ಪಾದನೆ ಕಡಿಮೆಯಿದ್ದು, ಬೇಡಿಕೆ ಹೆಚ್ಚಿರುವುದರಿಂದ ಅನಿವಾರ್ಯವಾಗಿ ತಾತ್ಕಾಲಿಕ ಒಡಂಬಡಿಕೆಯ ಮೇರೆಗೆ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಗೆ ನಾವು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರದ ದಿಟ್ಟ ಕ್ರಮಗಳು

ರೈತರಿಗೆ ಮೂರು ಪಾಳಿಯಲ್ಲಿ ನಿರಂತರ 5 ಗಂಟೆಗಳ ವಿದ್ಯುತ್‌ ಪೂರೈಕೆಗೆ ಸೂಚನೆ

ಉತ್ತರ ಪ್ರದೇಶದಿಂದ 300 ಮೆ.ವ್ಯಾ ಮತ್ತು ಪಂಜಾಬ್‌ನಿಂದ 600 ಮೆ.ವ್ಯಾ ವಿದ್ಯುತ್ ಖರೀದಿಗೆ ಸೂಚನೆ

ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿ, ರಾಜ್ಯದ ಎಲ್ಲಾ ವಿದ್ಯುತ್‌ ಉತ್ಪಾದನಾ ಘಟಕಗಳು ಗರಿಷ್ಠ ವಿದ್ಯುತ್ ಉತ್ಪಾದಿಸಿ ರಾಜ್ಯದ ಗ್ರಿಡ್‌ಗೆ ಪೂರೈಸುವಂತೆ ಆದೇಶ

ರಾಜ್ಯದ ಶಾಖೋತ್ಪನ್ನ ವಿದ್ಯುತ್ ಘಟಕಗಳಿಗೆ ಮರುಚಾಲನೆ

ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ 15 ಲಕ್ಷ ಮೆಟ್ರಿಕ್ ಟನ್ ಪಡೆಯಲು ಕ್ರಮ

ಅಲ್ಪಾವಧಿ ಆಧಾರದಲ್ಲಿ 1300 ಮೆ.ವ್ಯಾ ವಿದ್ಯುತ್ ಖರೀದಿಗೆ ಕ್ರಮ

ಕೆಪಿಸಿಎಲ್‌ನ ಅನಿಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಕಾರ್ಯಾಚರಣೆ ಆರಂಭಕ್ಕೆ ಕ್ರಮ

ಪಾವಗಡದಲ್ಲಿ ಹೆಚ್ಚುವರಿಯಾಗಿ 300 ಮೆ.ವ್ಯಾ ಮತ್ತು ಕಲಬುರಗಿಯಲ್ಲಿ 500 ಮೆ.ವ್ಯಾ ಸೋಲಾರ್ ಪಾರ್ಕ್ ಸ್ಥಾಪನೆ

ಛತ್ತೀಸ್ ಗಡದಲ್ಲಿ ಖಾಸಗಿ / ಜಂಟಿ ಹೂಡಿಕೆಯಡಿ ಕ್ಯಾಪ್ಟಿವ್ ಕಲ್ಲಿದ್ದಲು ಗಣಿ ಆರಂಭಕ್ಕೆ ಕ್ರಮ

ಪಕ್ಷಕ್ಕೆ ಧಕ್ಕೆ ಆಗುವ ಹೇಳಿಕೆ ಇನ್ನೂ ನೀಡಲ್ಲ – ಕೆ ಎನ್ ರಾಜಣ್ಣ

0

ಬೆಂಗಳೂರು;- ಪಕ್ಷಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಬೇಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವುದು ಸರಿಯಿದೆ. ಪಕ್ಷಕ್ಕೆ ಧಕ್ಕೆಯಾಗುವಂತಿದ್ದರೆ ನಾನು ಮಾತನಾಡುವುದಿಲ್ಲ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.

ಪಕ್ಷಕ್ಕೆ ಹಾಗೂ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅಗತ್ಯ ಎಂಬುದಾಗಿ ಹೇಳಿದ್ದೆ. ಅದನ್ನು ಹೊರತುಪಡಿಸಿ ಯಾರೋ ಹೇಳಿದರೆಂಬ ಕಾರಣಕ್ಕೆಲ್ಲಾ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.

ಕಾಂಗ್ರೆಸ್‌ನಿಂದ 136 ಶಾಸಕರು ಗೆದ್ದಿದ್ದೇವೆ ಎಂದು ಬೀಗುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆಗೆ ನಿರ್ಲಕ್ಷ್ಯ ತೋರಬಾರದು. ಹಾಗಾಗಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ಬಗ್ಗೆ ಮಾತನಾಡಿದ್ದೇನೆ. ಇದನ್ನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ’ ಎಂದರು.

ಪಕ್ಷಕ್ಕೆ ಮುಜುಗರ, ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷರು, ವರಿಷ್ಠರು ಹೇಳಿದ್ದಾರೆ. ಅದನ್ನು ಬಿಟ್ಟು ಏನೂ ಮಾತಾಡೋಕೆ ಯಾರೂ ಹೋಗಲ್ಲ. ಪಕ್ಷದ ಹಿತದೃಷ್ಟಿಯಿಂದ ನೀಡಿದ ಸಲಹೆಗಳನ್ನು ಸ್ವೀಕರಿಸುವುದು ಅವರಿಗೆ ಬಿಟ್ಟ ವಿಚಾರ’ ಎಂದು ತಿಳಿಸಿದರು.

ನಕಲಿ ಆಧಾರ್ ಪ್ರಕರಣಕ್ಕೆ ಟ್ವಿಸ್ಟ್, ವಿದೇಶಿ ಯುವತಿಯರಿಗೆ ಆಧಾರ್ ಕಾರ್ಡ್ ಮಾಡಿ ಸಚಿವರ ಆಪ್ತ ಲಾಕ್?

0

ಬೆಂಗಳೂರು:ಸಚಿವ ಭೈರತಿ ಸುರೇಶ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮೌನೇಶ್ ಕುಮಾರ್ ನಕಲಿ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಜಾಲದಲ್ಲಿ ಸಿಕ್ಕಿಬಿದ್ದ ಸ್ಟೋರಿಯನ್ನ ಪ್ರಜಾ ಟಿವಿ ಸುದ್ದಿ ಭಿತ್ತರಿಸಿತ್ತು. ಸದ್ಯ ಅದೇ ಕೇಸ್ ಮುಂದುವರಿದ ಭಾಗವಾಗಿ ಎಕ್ಸ್ ಕ್ಲೂಸಿವ್ ಸುದ್ದಿಯನ್ನ ಬ್ರೇಕ್ ಮಾಡ್ತಿದೆ. ಅದೇನಂದ್ರೆ ಹೆಬ್ಬಾಳದ ಕನಕನಗರದ ಎಂಎಸ್ಎಲ್ ಟೆಕ್ನೋ ಸಲೂಶನ್ ಸೆಂಟರ್ ನಲ್ಲಿ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಕೆಲ ದಾಖಲಾತಿ‌ ಮಾಡ್ತಿದ್ದಾರೆ ಅಂತ ಸಿಸಿಬಿ ದಾಳಿ‌ ನಡೆಸಿ ಕೇಸ್ ದಾಖಲಿಸುತ್ತು. ಇದ್ರ ಮೂಲ ಬಾಂಗ್ಲ‌ದೇಶ ಅನ್ನೋದು ಪತ್ತೆಯಾಗಿದೆ. ಸಚಿವ ಭೈರತಿ ಸುರೇಶ್ ಆಪ್ತ ಅಂತ ಗುರುತಿಸಿಕೊಂಡಿದ್ದ ಮೌನೇಶ್ ಈ ಹಿಂದೆ ನಾಲ್ಕು ಬಾಂಗ್ಲ ಯುವತಿಯರಿಗೆ ನಕಲಿ ಆಧಾರ್ ಕಾರ್ಡ್ ಮಾಡಿಕೊಟ್ಟಿದ್ನಂತೆ.

ಸಿಸಿಬಿ ಪೊಲೀಸ್ರು ವಿದ್ಯಾರಣ್ಯಪುರದ ವೈಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿತ್ತು. ಕಮಲ್ ಅನ್ನೋ ವ್ಯಕ್ತಿ ಕಳೆದ ಎಂಟು ವರ್ಷದಿಂಸ ಹೋರ ರಾಜ್ಯ ಹಾಗೂ ಬಾಂಗ್ಲ ಯುವತಿಯರನ್ನ ಅಕ್ರಮವಾಗಿ ಇಟ್ಟುಕೊಂಡು ವೈಶ್ಯವಾಡಿಕೆ‌ ಧಂಧೆ ನಡೆಸ್ತಿದ್ದ.‌ಈವೇಳೆ ಸಿಸಿಬಿ ಪೊಲೀಸ್ರು ದಾಳಿ ನಡೆಸಿ ಕಮಲ್ ಪ್ರದೀಪ್ ಎಂಬುವರನ್ನ ಬಂಧಿಸಿ, ನಾಲ್ವರು ಯುವತಿರನ್ನ ರಕ್ಷಣೆ ಮಾಡಿದ್ದಾರೆ. ತನಿಖೆ ವೇಳೆ ಬಾಂಗ್ಲ ಯುವತಿಯರಿಗೆ ಅಕ್ರಮವಾಗಿ ದೇಶದ ಸಾರ್ವಭೌಮತ್ವ ಸಿಕ್ಕಿರೋದು ಪತ್ತೆಯಾಗಿದೆ. ಇದ್ರ ಬಗ್ಗೆ ತನಿಖೆ ನಡೆಸಿದಾಗ ಕಮಲ್ ಸಚಿವರ ಆಪ್ತನ ಸೈಬರ್ ಸೆಂಟರ್ ತೋರಿಸಿದ್ದು. ಇದೇ ಸೆಂಟರ್ ನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಸಿದ್ದಾಗಿ ಬಾಯಿ ಬಿಟ್ಟಿದ್ದಾಗಿ ಮಾಹಿತಿ ಸಿಕ್ಕಿದೆ.

ಇನ್ನೂ ಅಕ್ರಮವಾಗಿ ಮೌನೇಶ್ ಇನ್ನೂ ಅದೆಷ್ಟು ಆಧಾರ್ ಕಾರ್ಡ್,ವೋಟರ್ ಐಡಿ ಗಳನ್ನ ಅದ್ಯಾವವ ದೇಶದವರಿಗೆ ಮಾಡಿಕೊಟ್ಟಿದ್ದಾನೋ ಇದ್ರಿಂದ ದೇಶಕ್ಕೆ ಅದ್ಯಾವ ಕಂಟಕ‌ಕಾದಿದ್ಯೋ ಅನ್ನೋದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಆದ್ರೆ ದೇಶದ ಸಾರ್ವಭೌಮತ್ವ ನಕಲು‌ ಪ್ರಕರಣದಲ್ಲಿ ಬಂಧಿಯಾದ ಆರೋಪಿಯನ್ನ ಪೊಲೀಸ್ರು ಸ್ಟೇಷನ್ ಬೇಲ್ ಮಾಡಿ ಕಳುಹಿಸಿರೋದು ನೋಡಿದ್ರೆ ಆರೋಪಿ ಮೌನೇಶ್ ಅದೆಸ್ಟು ಪ್ರಭಾವಿ ಅನ್ನೋದನ್ನ ಯೋಚನೆ ಮಾಡಬೇಕು.

ಡಿಕೆಶಿ-ಜಾರಕಿಹೊಳಿ ನಡುವೆ ವೈಯಕ್ತಿಕವಾಗಿ ವೈಮನಸ್ಸಿರಬಹುದು: ಶಿಕ್ಷಣ ಸಚಿವ

0

ಬೆಂಗಳೂರು;- ಡಿಕೆಶಿ-ಜಾರಕಿಹೊಳಿ ನಡುವೆ ವೈಯಕ್ತಿಕವಾಗಿ ವೈಮನಸ್ಸಿರಬಹುದು. ಆದರೆ, ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಹಾಗೂ ಸಚಿವ ಸತೀಶ ಜಾರಕಿಹೊಳಿ ಅವರ ನಡುವೆ ವೈಯಕ್ತಿಕವಾಗಿ ವೈಮನಸ್ಸು ಇರಬಹುದು. ಆದರೆ, ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ ಎಂದರು.

ಇನ್ನೂ ಬೆಳಗಾವಿ ಶಾಸಕರ ಅಸಮಾಧಾನ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಐದು ವರ್ಷದವರೆಗೂ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂಬ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಬಿಜೆಪಿಯವರು ಬಸ್ ನಿಲ್ದಾಣದಲ್ಲಿ ಕುಳಿತು ಭವಿಷ್ಯ ನುಡಿಯುತ್ತಾರೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಎಷ್ಟು ಸ್ಥಾನ ಪಡೆದಿದೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದರು.

error: Content is protected !!