Home Blog Page 3212

ಬಿಗ್ ಬಾಸ್ ಮನೆಯಿಂದ ವರ್ತೂರು ಸಂತೋಷ ಅರೆಸ್ಟ್..!

0

ಬೆಂಗಳೂರು: ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿ ಸ್ಪರ್ಧಿಯೊಬ್ಬ ಅರೆಸ್ಟ್ ಆಗಿದ್ದಾನೆ. ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಸ್ಫರ್ಧಿ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ದಾರೆ.

ನಿನ್ನೆ ರಾತ್ರು ಬಿಗ್ ಬಾಸ್ ಮನೆಯಿಂದ ಹೊರ ಕರೆತಂದು ಅರಣ್ಯಾಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳ ಕಷ್ಟಡಿಯಲ್ಲಿರುವ ವರ್ತೂರು ಸಂತೋಷ್ ನ ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆಯುದೆ.

ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದೆ.ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಪೆಂಡೆಂಟ್ ಹಾಕಿಕೊಂಡಿದ್ದರು. ಈ ಕುರಿತು ವ್ಯಕ್ತಿಯಿಬ್ರು ದೂರು ನೀಡಿದ್ರು.

ವ್ಯಕ್ತಿ ದೂರು ನೀಡಿದ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್ ವಿಚಾರಣೆ ನಡೆಸಿದ್ದು ಸಂತೋಷ್ ಧರಿಸಿದ್ದ ಪೆಂಡೆಂಟ್ ಸೀಜ್ ಮಾಡಿಕೊಂಡಿದ್ದಾರೆ ಮೇಲ್ನೋಟಕ್ಕೆ ಪೆಂಡೆಂಟ್ ನಲ್ಲಿ ಬಳಸಿರುವ ವಸ್ತು ಹುಲಿ ಉಗುರು ಎಂಬುದು ಸಾಭೀತಾಗಿದೆ

ಸಿಡಿಮದ್ದು ತಾಲೀಮು ವೇಳೆ ಅವಘಡ: ಕುಶಾಲತೋಪು ಸಿಡಿದು ಸಿಬ್ಬಂದಿಗೆ ಗಾಯ

0

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಬಹಳ ಅದ್ಧೂರಿಯಿಂದ ನಡೆಯುತ್ತಿದ್ದು, ಸಿಡಿಮದ್ದು ತಾಲೀಮು ವೇಳೆ ಅವಘಡವೊಂದು ನಡೆದಿದೆ. ಸಿಡಿಮದ್ದು ಸಿಡಿದು ಸಿಬ್ಬಂದಿಗೆ ಸುಟ್ಟ ಗಾಯಗಳಾದ ಘಟನೆ ಭಾನುವಾರ ಪುಷ್ಪಾರ್ಚನೆ ರಿಹರ್ಸಲ್ ವೇಳೆ ನಡೆದಿದೆ.

ನಿನ್ನೆ ಸಂಜೆ ಅರಮನೆ ಆವರಣದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ರಿಹರ್ಸಲ್ ನಡೆಸಲಾಗಿತ್ತು. ಈ ವೇಳೆ ರಾಷ್ಟ್ರಗೀತೆ ನುಡಿಸಿ 21 ಸುತ್ತು ಕುಶಾಲತೋಪು ಸಿಡಿಸಲಾಗಿತ್ತು. ಈ ಕುಶಾಲತೋಪು ಸಿಡಿದು ಸಿಬ್ಬಂದಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.

ದುರ್ಗಾದೇವಿ ಮೂರ್ತಿಗೆ ರಕ್ತ ಅರ್ಪಿಸಿದ ಶ್ರೀರಾಮ ಸೇನೆ ಕಾರ್ಯಕರ್ತ

0

ಚಿಕ್ಕೋಡಿ: ಶ್ರೀರಾಮಸೇನೆ ಕಾರ್ಯಕರ್ತನೊಬ್ಬ ತಲವಾರನಿಂದ ಕೈ ಬೆರಳು ಕೋಯ್ದು ರಕ್ತದಿಂದ ದುರ್ಗಾದೇವಿಗೆ ತಿಲಕವಿಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

ನವರಾತ್ರಿ ಉತ್ಸವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರೊಬ್ಬರು ತನ್ನ ಬೆರಳನ್ನು ತಲವಾರ್‌ನಿಂದ ಕೊಯ್ದುಕೊಂಡು ದುರ್ಗಾದೇವಿ ಮೂರ್ತಿಗೆ ತಿಲಕವಿಟ್ಟಿದ್ದಾರೆ.

ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನವರಾತ್ರಿಗೆ ಶಕ್ತಿ ಯೋಜನೆ ಫುಲ್ ಸಾಥ್: ಒಂದೇ ಬಸ್‌ಗೆ ಮುಗಿಬಿದ್ದ 300ಕ್ಕೂ ಹೆಚ್ಚು ಜನ…!

0

ಚಿಕ್ಕಮಗಳೂರು:  ನವರಾತ್ರಿಗೆ ಶಕ್ತಿ ಯೋಜನೆ ಫುಲ್ ಸಾಥ್ ನೀಡಿದೆ. ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನ ಟವೆಲ್ ನಂತೆ ತುಂಬಿದ ಪೋಷಕರು, ಬಸ್ ನ ಕಿಟಕಿಯಿಂದ ಮಕ್ಕಳನ್ನು ಹತ್ತಿಸಿ ಸೀಟ್ ರಿಸರ್ವೇಶನ್ ಮಾಡಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು,  ಒಂದೇ ಬಸ್ ಗೆ 300ಕ್ಕೂ ಹೆಚ್ಚು ಜನ ಮುಗಿಬೀಳುತ್ತಿರುವ ದೃಶ್ಯ ಕಂಡು ಬಂತು.

ನವರಾತ್ರಿ ಹಿನ್ನೆಲೆ ಶೃಂಗೇರಿ ದೇವಾಲಯ ತುಂಬಿ ತುಳುಕುತ್ತಿದೆ. ದೇವಾಲಯಗಳಿಗೆ ತೆರಳಲು ಶಕ್ತಿ ಯೋಜನೆಯ ಫ್ರೀ ಬಸ್ ಗೆ ಮಹಿಳಾ ಪ್ರಯಾಣಿಕರು ಮುಗಿ ಬಿದ್ದರು.ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶಕ್ತಿ ಯೋಜನೆ ಎಫೆಕ್ಟ್ ನಿಂದ ಪ್ರವಾಸಿ ಕೇಂದ್ರ ಫುಲ್ ರಶ್,  ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹೈರಾಣಾಗಿದ್ದಾರೆ. ಶೃಂಗೇರಿಯಲ್ಲಿ ಬಸ್ ಹತ್ತಲು ಮುಗಿಬಿದ್ದ ಮಹಿಳೆಯರನ್ನು  ನಿಭಾಯಿಸಲು ಡ್ರೈವರ್, ಕಂಡಕ್ಟರ್ ಹರಸಾಹಸಪಡುವಂತಾಗಿತ್ತು.

ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ಕೋಟಿ ವಂಚನೆ ಪ್ರಕರಣ ಬೆಳಕಿಗೆ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ನಂಬಿಸಿಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ.

ಹಿಂದೂ ಸಂಘಟನೆಗಳಲ್ಲಿ ಗುರಿತಿಸಿಕೊಂಡ ಚೈತ್ರಾ ಸೇರಿದಂತೆ ಹಲವರ ಬಂಧನವಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಮತ್ತೊಂದು ಇದೇ ಮಾದರಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ 2.55 ಕೋಟಿ ರೂಪಾಯಿ ವಂಚನೆ ವಂಚನೆ ಮಾಡಿದ ಪ್ರಕರಣ ಬಯಲಿಗೆ ಬಂದಿದೆ.

ಕೋಲಾರದಲ್ಲಿ ಜಡೆಮುನೇಶ್ವರಸ್ವಾಮಿ ಮೂರ್ತಿಗಳನ್ನ ವಿರೂಪಗೊಳಿಸಿದ ಕಿಡಿಗೇಡಿ

0

ಕೋಲಾರ: ಕೋಲಾರ ನಗರದ ಆರ್​ಟಿಒ ಕಚೇರಿ ಬಳಿ ಇರುವ ಜಡೆಮುನೇಶ್ವರಸ್ವಾಮಿ ದೇಗುಲದ ಮೂರ್ತಿಗಳನ್ನ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಮೂರ್ತಿಗಳನ್ನ ವಿರೂಪಗೊಳಿಸಿರುವ ಕಿಡಿಗೇಡಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೂರ್ತಿಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಿಂದೂಗಳ ಭಾವನೆಗೆ ಘಾಸಿ ಗೊಳಿಸಿರುವ ಹಾಗೂ ಪುರಾತನ ದೇವರ ವಿಗ್ರಹವನ್ನು ನಾಶಪಡಿಸಿರುವ ಈ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕೋಲಾರ ನಗರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲಬಾಧೆ ತಾಳಲಾರದೇ ವಿದ್ಯುತ್ ಕಂಬ ಏರಿ ರೈತ ಆತ್ಮಹತ್ಯೆ..!

0

ಕಲಬುರಗಿ: ಸಾಲಬಾಧೆ ತಾಳದೇ ರೈತನೋರ್ವ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಕಿಣ್ಣಿ ಸುಲ್ತಾನ್ ಗ್ರಾಮದಲ್ಲಿ ನಡೆದಿದೆ. ಕಿಣ್ಣಿ ಸುಲ್ತಾನ್ ಗ್ರಾಮದ ರೈತ ಹಣಮಂತ ಹೌಶೆಟ್ಟಿ (45) ಸೂರ್ಯಕಾಂತ ಎಂಬುವವರ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಜಮೀನಿನಲ್ಲಿ ಬೆಳೆ ಕೈಕೊಟ್ಟಿದ್ದರಿಂದ ಬೇರೆಯವರ ಜಮೀನಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಹಣಮಂತ ಹೌಶೆಟ್ಟಿ, ಹೊಲದಲ್ಲಿರುವ ವಿದ್ಯುತ್ ಕಂಬ ಏರಿ ವಿದ್ಯುತ್‌ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯ ಅಂಗಾಂಗ ಮುಟ್ಟಿ ದೌರ್ಜನ್ಯ: FIR ದಾಖಲು

0

ಬೆಂಗಳೂರು;- ಆಟೊದಲ್ಲಿ ಕುಳಿತಿದ್ದ ಯುವತಿಯ ಅಂಗಾಂಗ ಮುಟ್ಟಿ ದೌರ್ಜನ್ಯ ಎಸೆದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹೇರ್ ಸಲೂನ್‌ವೊಂದರಲ್ಲಿ ವ್ಯವಸ್ಥಾಪಕರಾಗಿರುವ ಯುವತಿ, ಅ. 16ರಂದು ರಾತ್ರಿ ಬ್ರಿಗೇಡ್‌ ರಸ್ತೆಗೆ ಬಂದಿದ್ದರು. ತಡರಾತ್ರಿ ಮನೆಗೆ ವಾಪಸು ಹೋಗಲು ಆಟೊ ಹತ್ತಿ ಕುಳಿತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ಇಬ್ಬರು ಆರೋಪಿಗಳು, ಯುವತಿಯ ಅಂಗಾಂಗಗಳನ್ನು ಮುಟ್ಟಿ ಪರಾರಿಯಾಗಿದ್ದಾರೆ.’

‘ಘಟನೆಯಿಂದ ಹೆದರಿದ್ದ ಯುವತಿ, ಸ್ನೇಹಿತರು ಹಾಗೂ ಪೋಷಕರಿಗೆ ವಿಷಯ ತಿಳಿಸಿದ್ದರು. ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗಾಗಿ, ಘಟನಾ ಸ್ಥಳದಲ್ಲಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’

ಮಹಿಳಾ ಕ್ರೀಡಾಪಟು ಬಾಳಿಗೆ ಬೆಳಕಾದ ಕುಣಿಗಲ್ ಶಾಸಕ

0

ಬೆಂಗಳೂರು;- ಕುಣಿಗಲ್ ಶಾಸಕ ಡಾ ರಂಗನಾಥ್ ಅವರು ಮಂಡಿ ನೋವಿನಿಂದ ಬಳಲುತ್ತಿದ್ದ ಮಹಿಳ ಕ್ರೀಡಾಪಟು ಬಾಳಿಗೆ ಬೆಳಕಾಗಿದ್ದಾರೆ, ಕುದ್ದು ತಾವೇ ಶಸ್ತ್ರಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕುಣಿಗಲ್ ನಿವಾಸಿ ರಗ್ಬಿ ಆಟಗಾರ್ತಿ ಭವ್ಯ ಗೆ ಮಂಡಿ ನೋವಿನ ಚಿಕಿತ್ಸೆ ಪಡೆದಿದ್ದಾರೆ. ಬಡತನ ಹಿನ್ನೆಲೆ ಶಸ್ತ್ರಚಿಕಿತ್ಸೆಗೆ ಹಣ ಇಲ್ಲದೆ ಕುಟುಂಬ ಸಂಕಷ್ಟದಲ್ಲಿತ್ತು. ಮಂಡಿ ನೋವಿನಿಂದ ಬಳಲುತ್ತಿದ್ದ ಭವ್ಯಗೆ ಸ್ಥಿತಿ ಬಗ್ಗೆ ಶಾಸಕರ ಗಮನಕ್ಕೆ ಬಂದ ಹಿನ್ನಲೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಸ್ವತಃ ಶಾಸಕ ಡಾ ರಂಗನಾಥ್ ರಿಂದಲೇ ಶಸ್ತ್ರಚಿಕಿತ್ಸೆ‌ ನಡೆದಿದೆ.

ರಂಗನಾಥ್ ತಂಡದ ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದ್ದು, ಈ ಹಿಂದೆ ತನ್ನ ಕ್ಷೇತ್ರದ ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಿ ರಂಗನಾಥ್ ಅವರು ಸ್ಪೂರ್ತಿ ಆಗಿದ್ದರು. ಶಾಸಕ ಡಾ ರಂಗನಾಥ್ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಬೈಕ್-ಕಾರು ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

0

ತುಮಕೂರು;- ಜಿಲ್ಲೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ. ಘಟನೆಯಲ್ಲಿ ಮತ್ತೋರ್ವನಿಗೆ ಗಾಯವೀಗಿದ್ದು, ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಭರತ್ ಕುಮಾರ್ 25 ಅಭಿಲಾಷ್ 26 ಮೃತ ದುರ್ದೈವಿ ಗಳು. ಒಟ್ಟು ಮೂವರು ಯುವಕರು ಬೈಕ್ ನಲ್ಲಿ ಮಧುಗಿರಿ ಕಡೆ ಬರುತ್ತಿದ್ದರು. ಮಧುಗಿರಿ ಕಡೆಯಿಂದ ಪಾವಗಡ ಕಡೆ ಹೋಗ್ತಿದ್ದ ಕಾರಿಗೆ ಬೈಕ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಮೂವರು ಮಧುಗಿರಿ ತಾಲೂಕಿನ ನಲ್ಲೆಕಾಮನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

error: Content is protected !!