Home Blog Page 3216

Bengaluru: ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಹಿಜಾಬ್ ವಿವಾದ

0

ಬೆಂಗಳೂರು;- ರಾಜಧಾನಿ ಬೆಂಗಳೂರು ಸೇರಿ ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಮುನ್ನೆಲೆಗೆ ಬಂದಿದೆ. ಮತ್ತೊಂದು ಧರ್ಮ ದಂಗಲಗೆ ಸಾಕ್ಷಿ ಆಗುತ್ತಾ ಕರ್ನಾಟಕ ಎಂಬ ಪ್ರಶ್ನೆ ಮೂಡಿದೆ. ಕಳೆದ ಐದಾರು ತಿಂಗಳಿಂದ ಹಿಜಾಬ್ ವಿಚಾರ ತಣ್ಣಗಾಗಿತ್ತು. ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಿಂದ ಅನುಮತಿ ನೀಡಲಾಗಿತ್ತು.

ಕರ್ನಾಟಕದಲ್ಲಿ ಹಿಜಾಬ್ ಧರಿಸಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಚಾರದಲ್ಲಿ ಈ ಹಿಂದೆ ಸಾಕಷ್ಟು ಗಲಾಟೆಗಳು ನಡೆದಿತ್ತು. ಆದರೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಿದೆ. ಇದೇ ತಿಂಗಳು ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ಪರೀಕ್ಷೆಗಳು ನಡೆಯಲಿದೆ. ಈ ಪರೀಕ್ಷೆಗಳಿಗೆ ಹಿಜಾಬ್ ಧರಿಸಿ ಅಭ್ಯರ್ಥಿಗಳು ಹಾಜರಾಗಬಹುದು ಎಂದು ತಿಳಿಸಿದೆ. ಆದ್ರೆ ಇದಕ್ಕೆ ಕಂಡಿಷನ್ ಒಂದು ಹಾಕಿದೆ,

ಹಿಜಾಬ್ ದರ್ಸಿಕೊಂಡು ಬಂದ್ರೆ ಎರಡು ಗಂಟೆ ಮೊದಲು ಬರಬೇಕೆಂದು ಸೂಚನೆ ನೀಡಲಾಗಿದೆ. ಭದ್ರತೆ ದೃಷ್ಟಿಯಿಂದ ಈ ಒಂದು ಆದೇಶ ಮಾಡಲಾಗಿದೆ. ಹಾಗೆಯೇ ಜೀನ್ಸ್ ಪ್ಯಾಂಟ್ ಹಾಗೂ ಫುಲ್ ತೋಳು ಶರ್ಟ್ ಸಹ ಹಾಕುವಂತಿಲ್ಲ. ಹಾಗೆಯೇ ಇನ್ನು ಹಲವು ಶರತು ಹಾಕಿದೆ.

ಆದ್ರೆ ಇದಕ್ಕೆ ಸಾಕಷ್ಟು ವಿರೋಧ ಸಹ ವ್ಯಕ್ತ ಆಗುತ್ತಿದೆ. ಆದ್ರೆ ಯಾಕೇ ಈ ತಾರತಮ್ಯ ಅಂತಾ ಕೇಳ್ತಿದ್ದಾರೆ ಸಾರ್ವಜನಿಕರು. ಒಟ್ಟಲ್ಲಿ KEA ನಿರ್ಧಾರಕ್ಕೆ ಜನರು ಆಕ್ರೋಶಗೋ0ಡಿದ್ದಾರೆ
ಇನ್ನು ಪರೀಕ್ಷೆ ಗೆ ಸಮಯವಿದೆ ಸರ್ಕಾರ ಇನ್ನಾದರೂ ಈ ಹಿಜಾಬ್ ವಿಚಾರ ಕೈ ಬಿಡುತ್ತಾ? ಅಥವಾ ಹಾಗೇ ಮತ್ತೊಂದು ಧರ್ಮ ದಂಗಲ ನಲ್ಲಿ ಈ ಪರೀಕ್ಷೆ ನಡೆಯುತ್ತಾ? ಎಂಬ ಪ್ರಶ್ನೆ ಮೂಡಿದೆ.

13ನೇ ವರ್ಷಕ್ಕೆ ಕಾಲಿಟ್ಟ ನಮ್ಮ ಮೆಟ್ರೋ! ಬೆಂಗಳೂರಿನಲ್ಲಿ ನಿತ್ಯ 8.5 ಲಕ್ಷ ಪ್ರಯಾಣಿಕರ ಸಂಚಾರ!

0

ಬೆಂಗಳೂರು;- 13ನೇ ವರ್ಷಕ್ಕೆ ನಮ್ಮ ಮೆಟ್ರೋ ಕಾಲಟ್ಟಿದೆ. ಶುಕ್ರವಾರ 13 ನೇ ವರ್ಷಕ್ಕೆ ಮೆಟ್ರೋ ಕಾಲಿಟ್ಟಿದ್ದು, ಇತ್ತೀಚೆಗೆ ಪ್ರಾರಂಭವಾದ ಪೂರ್ಣ ನೇರಳೆ ಮಾರ್ಗದಲ್ಲಿ ನಿತ್ಯ 1 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಂಚರಿಸುತ್ತಿದ್ದಾರೆ. ಅದರ ಒಟ್ಟಾರೆ ನೆಟ್ವರ್ಕ್ 73.81 ಕಿಮೀಗೆ ವಿಸ್ತರಿಸಿದೆ. ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 7 ಲಕ್ಷ ದಾಟುತ್ತಿದೆ. ಅಕ್ಟೋಬರ್ 13 ರಂದು 7.5 ಪ್ರಯಾಣಿಕರು ಸಂಚರಿಸಿದ್ದಾರೆ.

ಈ ಬಗ್ಗೆ ಮೆಟ್ರೋ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್, ಈ ವರ್ಷ ಹಬ್ಬದ ಸೀಸನ್ ಮುಗಿದು, ಎಲ್ಲಾ ಐಟಿ ಕಂಪನಿಗಳು ಕಚೇರಿಯಿಂದ ಕೆಲಸ ಮಾಡಲು ಒತ್ತಾಯಿಸಿದಾಗ ಪ್ರಯಾಣಿಕರ ಸಂಖ್ಯೆ 8.5 ಲಕ್ಷವನ್ನು ಮುಟ್ಟುವ ನಿರೀಕ್ಷೆಯಿದೆ. ಇದು 2024 ಜನವರಿ ಮತ್ತು ಮಾರ್ಚ್ ನಡುವೆ ಯಾವುದೇ ಸಮಯದಲ್ಲಿ ಸಂಭವಿಸಬಹುದು ಎಂದು ಅವರು ಹೇಳಿದರು.

ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್. ಶಂಕರ್ ಕೆಆರ್ ಪುರಕ್ಕೆ ಸಂಪರ್ಕ ಕಲ್ಪಿಸಿದ ನಂತರ 75,000 ಪ್ರಯಾಣಿಕರು ಸಂಚರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಈಗ ಸುಮಾರು 80,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಆರ್ ವಿ ರಸ್ತೆ-ಬೊಮ್ಮಸಂದ್ರ ಕಾರ್ಯಾರಂಭವಾದಗ ಪ್ರಯಾಣಿಕರ ಸಂಖ್ಯೆಯಲ್ಲಿ ಇನ್ನೂ 1.5 ರಿಂದ 2 ಲಕ್ಷ ಹೆಚ್ಚಾಗಲಿದೆ. ಇನ್ನೂ ಕೆಲವೇ ದಿನಗಳಲ್ಲಿ ಇದು 10 ಲಕ್ಷ ದಾಟಲಿದೆ ಎಂದು ತಿಳಿಸಿದರು.

ರಾಜ್ಯದ ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಮತ್ತೊಂದು ಪ್ರಸ್ತಾವನೆ – ಪರಮೇಶ್ವರ್

0

ತುಮಕೂರು;- ಬಿಜೆಪಿ ಮುಖಂಡ ಶಿವಕುಮಾರ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಿಂಚೋಳಿ ತಾಲೂಕಿನಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಪೂಜಾರಿ ಎಂಬುವರು ಸಚಿವ ಡಾ ಜಿ ಪರಮೇಶ್ವರ್ ಹೇಳಿದರು. ಶರಣಪ್ರಕಾಶ್ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ ಎಂದರು.

ಈ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರು ಭಾಗಿಯಾಗಿದ್ದಾರೆ ಎಂದು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಆ ವ್ಯಕ್ತಿ ತಮಗೆ ಗೊತ್ತಿಲ್ಲ ಎಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಮಗ್ರ ತನಿಖೆಯಾಗಲಿ ಎಂಬ ಉದ್ದೇಶದಿಂದ ಸಿಐಡಿಗೆ ಈ ಪ್ರಕರಣವನ್ನು ವಹಿಸಲಾಗುತ್ತಿದೆ ಎಂದು ಹೇಳಿದರು..

ಈ ಪ್ರಕರಣ ಕುರಿತು ತನಿಖೆ ನಡೆದ ವರದಿ ಬಂದ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಈಗ ಮತ್ತೊಂದು ವರದಿಯನ್ನು ಸಿದ್ದಪಡಿಸುತ್ತಿದ್ದು, 25 ತಾಲೂಕುಗಳನ್ನು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ಸದ್ಯದಲ್ಲೇ ಈ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಗುತ್ತಿಗೆದಾರನ ಅಪಹರಣ : ಮಾಜಿ ಕಾರ್ಪೊರೇಟರ್ ಸಿಸಿಬಿ ವಶಕ್ಕೆ

0

ಬೆಂಗಳೂರು;-ಗುತ್ತಿಗೆದಾರ ಚಂದ್ರು ಎಂಬುವರನ್ನು ಅಪಹರಿಸಿ ಮೂರು ಕೋಟಿ ಹಣಕ್ಕೆ ಬೇಡಿಕೆ ಇಟ್ಟು ನಂತರ ಚೆಕ್ ಪಡೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವೆಂಕ ಟೇಶ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ವೆಂಕಟೇಶ್ ಅವರ ವಾರ್ಡ್ ವ್ಯಾಪ್ತಿಯಲ್ಲಿ ಚಂದ್ರು ಅವರು ಗುತ್ತಿಗೆ ಪಡೆದು ಕಾಮಗಾರಿ ಮಾಡಿಸಿದ್ದರು. ನಮ್ಮ ವ್ಯಾಪ್ತಿಯಲ್ಲಿ ಹೇಗೆ ಕಂಟ್ರಾಕ್ಟ ಮಾಡುತ್ತೀಯಾ ಎಂದು ಚಂದ್ರು ಅವರನ್ನು ಅಪಹರಿಸಿ, ಬೆದರಿಕೆವೊಡ್ಡಿ ಮೂರು ಕೋಟಿ ರೂ. ಚೆಕ್ ಪಡೆದು ನಂತರ ಬಿಡುಗಡೆ ಮಾಡಿದ್ದರು.

ಈ ಸಂಬಂಧ ಸಿಸಿಬಿ ಪೊಲೀಸರಿಗೆ ಗುತ್ತಿಗೆದಾರ ಚಂದ್ರು ದೂರು ನೀಡಿದ್ದಾರೆ. ಇದರನ್ವಯ ಸಿಸಿಬಿ ಪೊಲೀಸರು ಇದೀಗ ವೆಂಕಟೇಶ್ ಅವರನ್ನು ವಿಚಾರಣೆಗೊಳಪಡಿಸಿದ್ದು, ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಜೆಪಿ ಮುಖಂಡ ಬಸವರಾಜ್ ಬೊಮ್ಮಾಯಿಗೆ ಇಂದು ಓಪನ್ ಹಾರ್ಟ್ ಸರ್ಜರಿ

0

ಬೆಂಗಳೂರು;- ಕಳೆದ ಸೋಮವಾರ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಓಪನ್ ಹಾರ್ಟ್ ಸರ್ಜರಿಗೊಳಗಾಗಿರುವ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು ಇಂದು ವಾರ್ಡ್ ಗೆ ಶಿಫ್ಟ್ ಆಗಲಿದ್ದಾರೆ. ಕಳೆದ ನಾಲ್ಕು ದಿನದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ಬೊಮ್ಮಾಯಿಯವರಿಗೆ ಲಘು ಶಸ್ತ್ರ ಚಿಕಿತ್ಸೆ ನಡೆದಿದ್ದು, ಇಂದು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಆಗಲಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಬಸವರಾಜ ಬೊಮ್ಮಾಯಿ, ನಾಲ್ಕು ದಿನಗಳ ಬಳಿಕ ಇಂದು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಆಗಲಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆಪ್ತ ಮೂಲಗಳು ಸ್ಪಷ್ಟನೆ ನೀಡಿವೆ.

ಬೆಂಗಳೂರಿಗರೇ ಗಮನಿಸಿ: ಇಂದಿನಿಂದ ಮೂರು ದಿನ ಈ ಏರಿಯಾಗಳಲ್ಲಿ ಪವರ್ ಕಟ್

0

ಬೆಂಗಳೂರು;- ರಾಜಧಾನಿ ಬೆಂಗಳೂರಿನ ಹಲವೆಡೆ ಇಂದಿನಿಂದ ಮೂರು ದಿನಗಳು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳು ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುವ ನಿರೀಕ್ಷೆ ಇದ್ದು ಈ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆಯಿರುವ ಪ್ರದೇಶಗಳ ಪಟ್ಟಿ ಇಲ್ಲಿದೆ.

ಆವಲಹಳ್ಳಿ, ನಂದಿ ಗಾರ್ಡನ್ ಅಪಾರ್ಟ್‌ಮೆಂಟ್, ರಾಯಲ್ ಲೇಕ್ ಫ್ರಂಟ್ ವ್ಯೂ ರೆಸಿಡೆನ್ಸಿ, ಬ್ರೂಕ್ಸ್ ಲೇಔಟ್, ದೀಪಕ್ ಲೇಔಟ್, ಶ್ರೀನಿವಾಸ್ ಬ್ಯಾಂಕ್ ಲೇಔಟ್, ತಲಘಟ್ಟಪುರ, ವಾಜರಹಳ್ಳಿ, ಶೋಭಾ ಅಪಾರ್ಟ್‌ಮೆಂಟ್, ಕೆಎಸ್‌ಐಟಿ ಕಾಲೇಜು, ನಕರಾರ ಕಾಲೋನಿ, ಪುರವಂಕರ ಅಪಾರ್ಟ್‌ಮೆಂಟ್, ವಡ್ಡರಪಾಳ್ಯ, ಅಮೃತನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಕೆಬಟ್ಟಳ್ಳಿ 34 ನೇ, 35 ನೇ ಮತ್ತು 36 ನೇ ಕ್ರಾಸ್, 2 ನೇ ಬ್ಲಾಕ್, ರಾಜಾಜಿನಗರ, 4 ನೇ ಬ್ಲಾಕ್, 53 ಕ್ರಾಸ್ – 54 ಕ್ರಾಸ್, 6 ನೇ ಮುಖ್ಯ, 5 ನೇ ಬ್ಲಾಕ್, ಆರ್ಪಿಸಿ ಲೇಔಟ್, ನೇತಾಜಿ ಲೇಔಟ್, ಅತ್ತಿಗುಪ್ಪೆ, ಎಚ್ ಹಳ್ಳಿ ಮುಖ್ಯ ರಸ್ತೆ,

ಶಿವಾನಂದ ನಗರ, ಮಾರುತಿ ನಗರ, ಮಾರುತಿ ನಗರ ಪಟಾಕಿ ಗೋ ಡೌನ್ ರಸ್ತೆ, ಓಂ ಶಕ್ತಿ ದೇವಸ್ಥಾನ ರಸ್ತೆ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್.ಎಚ್.ಪಾಳ್ಯ, ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ದೊಡ್ಡೂರಹಳ್ಳಿ, ದೊಡ್ಡೂರಹಳ್ಳಿ, ದೊಡ್ಡೂರಹಳ್ಳಿ, ದೊಡ್ಡೂರಹಳ್ಳಿ ರಾಸಂದ್ರ, ಕಲ್ಲಶೆಟ್ಟಿಹಳ್ಳಿ , ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸಿಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್ ಮತ್ತು ಬ್ಯಾಡರಹಳ್ಳಿ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Breaking News: ನೆಲಮಂಗಲದಲ್ಲಿ ಶುರುವಾಯ್ತು ಜಾನುವಾರಗಳ ಕಳ್ಳರ ಹಾವಳಿ

0

ನೆಲಮಂಗಲ;- ತಾಲ್ಲೂಕು ಹೊಟ್ಟಪ್ಪನ ಪಾಳ್ಯದಲ್ಲಿ ತಡರಾತ್ರಿ ಮೂರು ಜನ ಕಳ್ಳರು ಟಿಟಿ ವಾಹನದಲ್ಲಿ ಬಂದು ಗೋವುಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದಾಗ ಗ್ರಾಮಸ್ಥರು ವಾಹನವನ್ನು ಅಡ್ಡಗಟ್ಟುತ್ತಿದ್ದಂತೆ ಎರಡು ಗೋವುಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ.

ಇನ್ನು ಜಾನುವಾರನ್ನು ಕದಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಹಿಂದೆ ಕೂಡ ಸಾಕಷ್ಟು ಗೋವುಗಳು ಕಳ್ಳತನವಾಗಿದ್ದು, ಟಿಟಿವಾಹನದಲ್ಲಿ ಮಾರಕಾಸ್ತ್ರ ಕೂಡ ಪತ್ತೆಯಾಗಿದೆ. ಈ ಜಾನುವಾರಗಳ ಕಳ್ಳತನ ಮತ್ತೆ ಶುರುವಾಗಿರುವುದು ಗ್ರಾಮಸ್ಥರ ನಿದ್ದೆಗೆಡಿಸಿದೆ.

Bengaluru: ರಾಜ್ಯದ ವಿವಿಧ ಜಿಲ್ಲೆಗಳಿಗೂ BMTC ಸಂಚಾರ

0

ಬೆಂಗಳೂರು;- ರಾಜ್ಯದಾದ್ಯಂತ ಪ್ರಯಾಣಿಕರ ಅಗತ್ಯತೆಗಳಿಗೆ ಅನುಸಾರವಾಗಿ ವಿವಿಧ ಊರುಗಳ ನಡುವೆ ಬಿಎಂಟಿಸಿ ವಿಶೇಷ ಬಸ್‌ಗಳನ್ನು ಆರಂಭಿಸುತ್ತಿದೆ. ಈ ದಸರಾಕ್ಕೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ರಾಜ್ಯ ಮತ್ತು ಅಂತಾರಾಜ್ಯ ಗಳಿಗೆ ಬಿಡಲಾಗಿದೆ. ಆದರೂ ಸಹ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೆಎಸ್​ಆರ್​​ಟಿಸಿ ಜೊತೆಗೆ ಬಿಎಂಟಿಸಿ ಬಸ್​ಗಳನ್ನು ಸಹ ರಾಜ್ಯದ ಇತರೆ ಜಿಲ್ಲೆಗಳಿಗೆ ಸಂಚಾರ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಅಕ್ಟೋಬರ್ 23ರಂದು ಆಯುಧ ಪೂಜೆ ಹಾಗೂ ಅ.24 ವಿಜಯದಶಮಿ ಹಿನ್ನಲೆಯಲ್ಲಿ ಜನರು ಬೆಂಗಳೂರಿನಿಂದ ಬೇರೆ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ಅಕ್ಟೋಬರ್ 21, 22 ಮತ್ತು 23ರ ವರಿಗೆ ಪ್ರಯಾಣಿಕರ ಅನುಕೂಲಕ್ಕೆ ವಿವಿಧ ಜಿಲ್ಲೆಗಳಿಗೆ ಬಿಎಂಟಿಸಿ ಬಸ್​ಗಳು ಸಂಚರಿಸಲಿವೆ. ಇದರೊಂದಿಗೆ ಇಷ್ಟು ದಿನ ಬೆಂಗಳೂರಿಗೆ ಸೀಮತವಾಗಿದ್ದ ಬಿಎಂಟಿಸಿ ಬಸ್​ಗಳು ಇದೀಗ ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಗೂ ಹೋಗಲಿವೆ.

ಅಕ್ಟೋಬರ್-10 ರಂದು ಕೆಎಸ್‌ಆರ್ಟಿಸಿಯಲ್ಲಿ ನಡೆದ ಸಭೆ ನಿರ್ಧಾರದಂತೆ ಬಿಎಂಟಿಸಿ ಬಸ್ ಓಡಿಸಲು ಸೂಚನೆ ನೀಡಲಾಗಿದೆ. ಕೆಎಸ್‌ಆರ್ಟಿಸಿ ಮನವಿ ಆಧಾರದ ಮೇಲೆ ಹೊರ ಜಿಲ್ಲೆಗಳಿಗೂ ಬಸ್ ಓಡಿಸಲು ಬಿಎಂಟಿಸಿ ತೀರ್ಮಾನಿಸಿದೆ. ದಾವಣಗೆರೆ, ಶಿವಮೊಗ್ಗ, ಹೊಸದುರ್ಗ,ಬಳ್ಳಾರಿ, ಹಾಸನ, ಮತ್ತು ಧರ್ಮಸ್ಥಳಕ್ಕೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ, ಹಾಗೂ ಈಶಾನ್ಯ ವಲಯದ ಡಿಪೋಗಳಿಂದ ನಿತ್ಯ 100 ಬಸ್​ ಗಳು ಓಡಾಡಲಿವೆ

ಕಾಂಗ್ರೆಸ್ ಸೇರ್ಪಡೆಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಇಲ್ಲ – ಎಂ.ಪಿ.ಕುಮಾರಸ್ವಾಮಿ

0

ಬೆಂಗಳೂರು;- ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೊರರಾಜ್ಯ ಪ್ರವಾಸದಲ್ಲಿದ್ದಾರೆ. ಅವರು ಬಂದಾಕ್ಷಣ ಸೇರ್ಪಡೆ ದಿನಾಂಕ ನಿಗದಿಯಾಗಲಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಮ್ಮ ಕ್ಷೇತ್ರದಲ್ಲಿ ನನ್ನ ಪಕ್ಷ ಸೇರ್ಪಡೆ ಕಾರ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು

ಮೂಡಿಗೆರೆಯ ಕೈ ಶಾಸಕಿ ನಯನಾ ಮೋಟಮ್ಮ, ಸ್ಥಳೀಯ ಕೈ ಮುಖಂಡರು ಕುಮಾರಸ್ವಾಮಿ ಪಕ್ಷ ಸೇರ್ಪಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಪಕ್ಷ ಸೇರ್ಪಡೆ ವಿಳಂಭವಾಗುತ್ತಿದೆ ಎನ್ನಲಾಗುತ್ತಿದೆ.ಮಹಿಷ ದಸರಾ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮೈಸೂರು ಸಂಸದ ಪ್ರತಾಪಸಿಂಹ ವಿಚಾರಧಾರೆಯನ್ನು ಖಂಡಿಸಿದರು. ಮಹಿಷ ನಮ್ಮ ಕುಲದ ನಾಯಕ, ದಲಿತ ಹಿಂದುಳಿದ ಸಮುದಾಯಗಳ ಸ್ವಾಭಿಮಾನದ ಪ್ರತೀಕ. ಇಲ್ಲಿಯವರೆಗೆ ಅವರು ಹೇಳಿದಂತೆ ಅಸ್ಪೃಷ್ಯರಾಗಿಯೇ ದೇವಸ್ಥಾನದ ಹೊರಗೆ ನಿಂತು ಅವರ ನೀತಿ ನಡವಳಿಕೆ ಪಾಲಿಸಿದ್ದೆವು ಎಂದರು.

ಜಮೀನೊಂದರಲ್ಲಿ ಕಬ್ಬಿಣದ ಅದಿರಿನ ಅಕ್ರಮ ಸಂಗ್ರಹ: ತಹಸೀಲ್ದಾರ ನೇತೃತ್ವದಲ್ಲಿ ದಾಳಿ

0

ಗದಗ: ಗದಗ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಂಪದ್ಭರಿತವಾಗಿದೆ. ಪ್ರಾಕೃತಿಕವಾಗಿಯೂ ಬೆಲೆಕಟ್ಟಲಾಗದ ಪಂಚ ಖನಿಜ ಸಂಪತ್ತು ಹೊಂದಿದೆ. ಇಲ್ಲಿನ ಪ್ರಾಕೃತಿಕ ಸಂಪತ್ತಿಗೆ ಬೆಲೆ ಕಟ್ಟಲೂ ಆಗದು. ಇದೇ ಉದ್ದೇಶದಿಂದ ಅಕ್ರಮ ದಂಧೆಕೋರರ ಕಣ್ಣು ಎಂದಿಗೂ ಗದಗ ಜಿಲ್ಲೆಯ ಮೇಲಿದೆ.

ಈ ಹಿಂದೆಯೂ ಗದಗ ತಾಲೂಕಿನ ಹಲವು ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮ ಕಬ್ಬಿಣದ ಅದಿರು ಬಗೆದು ಮಾರಿ, ಅದೆಷ್ಟೋ ಕುಳಗಳು ಕೋಟ್ಯಾಧೀಶರಾಗಿದ್ದಾರೆ. ಅಂದು ದೊಡ್ಡ ದೊಡ್ಡ ಗಣಿ ಕುಳಗಳು ಜೈಲು ಸೇರಿದ ಬಳಿಕ ಸಣ್ಣಪುಟ್ಟ ದಂಧೆಕರೋರರು ಸುಮ್ಮನಾಗಿದ್ದರು. ಆದರೆ, ಈಗ ಮತ್ತೆ ಸದ್ದಿಲ್ಲದೇ ಚಿಗುರತೊಡಗಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ, ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ದೂರಿನ ಆಧಾರದಲ್ಲಿ ಅಕ್ರಮ ಕಬ್ಬಿಣದ ಅದಿರು ಸಂಗ್ರಹ ಅಡ್ಡೆ ಮೇಲೆ ದಾಳಿ ಮಾಡಿದ್ದು, ಅಪಾರ ಪ್ರಮಾಣದ ಕಬ್ಬಿಣದ ಅದಿರು ವಶಕ್ಕೆ ಪಡೆದುಕೊಂಡಿದ್ದಾರೆ.

ಗದಗ ತಾಲೂಕಿನ ದುಂದೂರು ಗ್ರಾಮದ ಸಮೀಪದ ಜಮಿನೊಂದರಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಹಸೀಲ್ದಾರ ನೇತೃತ್ವದಲ್ಲಿ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಅದಿರು ಸಂಪತ್ತನ್ನು ವಶಕ್ಕೆ ಪಡೆದಿದ್ದಾರೆ.

ರಾತ್ರೋರಾತ್ರಿ ಗುಡ್ಡಗಳನ್ನು ಅಗೆದು, ಹೆದ್ದಾರಿಯ ಪಕ್ಕದಲ್ಲಿಯೇ ಇರುವ ರೈತರ ಜಮೀನುಗಳಲ್ಲಿ ಅಕ್ರಮವಾಗಿ ಅದಿರು ಸಂಗ್ರಹ ಮಾಡುತ್ತಿದ್ದಾರೆ ಎನ್ನಲಾಗಿದೆ.ಇಲ್ಲಿಂದಲೇ ಕಬ್ಬಿಣದ ಅದಿರನ್ನು ಗ್ರೇಡಿಂಗ್ ಮಾಡಿ, ಸಾಗಾಟ ಮಾಡಲು ತಯಾರಿ ನಡೆಸಿದ್ದಾರೆ ಎಂಬ ಕುರಿತು ಗದಗ ಜಿಲ್ಲಾಡಳಿತಕ್ಕೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಗದಗ ತಹಸೀಲ್ದಾರ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ದಾಳಿ ಮಾಡಿ, ಅಪಾರ ಪ್ರಮಾಣದಲ್ಲಿ ಸಂಗ್ರಹಿಸಲಾಗಿದ್ದ ಕಬ್ಬಿಣದ ಅದಿರಿನ ಅಕ್ರಮ ಸಂಗ್ರಹವನ್ನು ವಶಕ್ಕೆ ಪಡೆದಿದ್ದಾರೆ.

ದುಂದೂರಿನ ಸರ್ವೇ ನಂ. 35/1+2ಬಿನಲ್ಲಿ ಸುಮಾರು 201 ಕ್ಯೂಬಿಕ್ ಮೀಟರ್‌ನಷ್ಟು ಅಕ್ರಮ ಕಬ್ಬಿಣದ ಅದಿರು ಸಂಗ್ರಹ ಮಾಡಿರುವುದು ಕಂಡುಬಂದಿದ್ದು, ಎಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ಉಮರ ಬಬ್ಲು ಎಂಬ ವ್ಯಕ್ತಿಯೊಬ್ಬರು ಅಕ್ರಮ ಕಬ್ಬಿಣ ಅದಿರು ಸಂಗ್ರಹ ಮಾಡಿದ್ದು ತಿಳಿದು ಬಂದಿದೆ ಎಂದು ತಹಸೀಲ್ದಾರರು ಮಾಹಿತಿ ನೀಡಿದ್ದಾರೆ.ಈ ಜಮೀನಿನಲ್ಲಿ ಸಂಗ್ರಹಿಸಿದ್ದ ಕಬ್ಬಿಣದ ಅದಿರಿನ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಲಾಗಿದ್ದು, ಈ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ ಎನ್ನಲಾಗಿದೆ.

ಕಣ್ಣೆದುರೇ ಇಷ್ಟೆಲ್ಲಾ ನಡೆಯುತ್ತಿದ್ದರೂ ಗಣಿ ಇಲಾಖೆಯ ಅಧಿಕಾರಿಗಳು ಅದ್ಯಾಕೋ ದಂಧೆಕೋರರ ಉಸಾಬರಿಗೆ ಹೋಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಗದಗ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಗುಡ್ಡಗಳಲ್ಲಿ ಕಬ್ಬಿಣದ ಅದಿರು ಯಥೇಚ್ಛವಾಗಿದೆ. ಹೀಗಿರುವಾಗ, ಅಲ್ಲಿಂದಲೂ ರಾತ್ರೋರಾತ್ರಿ ಗಣಿಗಾರಿಕೆ ನಡೆಸಿ, ಇಲ್ಲಿ ತಂದು ಸಂಗ್ರಹಿಸಿ ಗ್ರೇಡಿಂಗ್ ಮಾಡುತ್ತಿದ್ದಾರೆ ಎಂಬ ಅನುಮಾನಗಳೂ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ. ಗಣಿ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಹೆಸರು ಹೇಳಲಿಚ್ಚಿಸದ ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

error: Content is protected !!