Home Blog Page 3215

ಮಾಲೂರಲ್ಲಿ ಮನೆ ದರೋಡೆ: ಸರಣಿ ಕಳ್ಳತನ

0

ಕೋಲಾರ: ಒಂಟಿ ಮನೆಯಲ್ಲಿದ್ದ ಅರ್ಚಕರ ಕುಟುಂಬದ ಮೇಲೆ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ತೊಳಕನಹಳ್ಳಿ ಗ್ರಾಮದ ತೋಟದಲ್ಲಿ ನಡೆದಿದೆ. ಅಷ್ಟೇ ಅಲ್ಲ, ಒಂಟಿ ಮನೆಯಲ್ಲಿದ್ದ ಅರ್ಚಕ ದೊಡ್ಡನರಸಯ್ಯ ಶಾಸ್ತ್ರಿ ಹಾಗೂ ಪತ್ನಿ ಇಬ್ಬರನ್ನು ಮಾರಾಕಾಸ್ತ್ರಗಳಿಂದ ಥಳಿಸಿ, ಮನೆಯಲ್ಲಿದ್ದ ಸಾವಿರಾರು ರೂಪಾಯಿ ನಗ-ನಾಣ್ಯ ದರೋಡೆ ಮಾಡಿದ್ದಾರೆ.ಇನ್ನು 6 ಜನ ದುಷ್ಕರ್ಮಿಗಳಿಂದ ಲಾಂಗು ಮಚ್ಚು ತೋರಿಸಿ ಈ ಕೃತ್ಯ ಎಸಗಲಾಗಿದ್ದು,

ಮಾಲೂರು ಆಸ್ಪತ್ರೆಯಲ್ಲಿ ಅರ್ಚಕ ಕುಟುಂಬ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಾರ್ಗಮದ್ಯೆ ಯಟ್ಟಕೋಡಿ ಗ್ರಾಮದ ಮೂರು ಅಂಗಡಿಗಳನ್ನು ದೋಚಿ ಪರಾರಿಯಾಗಿರುವ ದರೋಡೆಕೋರರು,ಸುಮಾರು 15 ಲಕ್ಷ ಮೌಲ್ಯದಷ್ಟು ಗುಟ್ಕಾ ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಬಾಸ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ಹಾಗೂ ಮಾಲೂರು ಪೊಲೀಸ್ ಠಾಣೆಯಲ್ಲಿ ಸರಣಿ ಕಳ್ಳತನ ಪ್ರಕರಣ ದಾಖಲಾಗಿದೆ.

ಸಿನಿಮಾವಾಗ್ತಿದೆ ‘ಪರ್ವ’ ಕಾದಂಬರಿ…

0

ಕನ್ನಡದ ಖ್ಯಾತ ಲೇಖಕ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳ ಖ್ಯಾತಿಯ ವಿವೇಕ್ ಅಗ್ನಿಹೋತ್ರಿ ‘ಪರ್ವ’ ಕೃತಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿವೇಕ್ ಅಗ್ನಿಹೋತ್ರಿ, ‘ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ’ ಎಂದು ಹೇಳಿದ್ದಾರೆ.

ಪಲ್ಲವಿ ಜೋಷಿ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡುತ್ತಿರುವುದು ಜವಾಬ್ದಾರಿ ಹೆಚ್ಚಿಸಿದೆ. ಈ ವಿಷಯವನ್ನು ನಿರ್ವಹಿಸುವುದು ಅಷ್ಟು ಸುಲಭವಲ್ಲ. ಭೈರಪ್ಪ ಸರ್ ಗುರಿಯನ್ನು ಸಿನಿಮಾ ರೂಪಕ್ಕಿಳಿಸುತ್ತಿರುವುದು ಖುಷಿ ಕೊಟ್ಟಿದೆ. ಪರ್ವ ಸಿನಿಮಾವನ್ನು 3 ಭಾಗದಲ್ಲಿ ಕನ್ನಡ ಹಾಗೂ ಹಿಂದಿ ಎರಡು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಪ್ರಕಾಶ್ ಇಲ್ಲದೇ ಇದು ಆಗುತ್ತಿರಲಿಲ್ಲ’ ಎಂದರು.

ಎಸ್.ಎಲ್. ಭೈರಪ್ಪ ಮಾತನಾಡಿ, ‘ಪರ್ವ ಕಾದಂಬರಿಯನ್ನು ಸಿನಿಮಾ ಮಾಡಲು ಬಂದಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರಿಗೆ ಸಾಕಷ್ಟು ಅನುಭವವಿದೆ. ಇವರು ಮಾಡಿರುವ ಸಿನಿಮಾಗಳು ಸಕ್ಸಸ್ ಆಗಿವೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಸಿನಿಮಾ ಮಾಡಬೇಕು. ನಿಜವಾದ ಮಹಾಭಾರತ ಏನೋ ಅನ್ನೋದನ್ನು ತೋರಿಸಬಹುದು. ಸಿನಿಮಾ ಮಾಡಲು ನನ್ನ ಒಪ್ಪಿಗೆ ಇದೆ. ಹಾರೈಕೆ ಇದೆ’ ಎಂದರು.

ಪರ್ವ ಕಾದಂಬರಿಯ ವಿಷಯ ಏನ್ನು ಅನ್ನುವುದು ಓದಿದವರಿಗೆ ಗೊತ್ತೇ ಇದೆ. ಮಹಾಭಾರತವನ್ನ ಆಯಾ ಪಾತ್ರಗಳ ಮೂಲಕ ಮತ್ತೊಮ್ಮೆ ಹೇಳಿರೋದೇ ಈ ಪರ್ವ ಕಾದಂಬರಿಯ ವಿಶೇಷ. ಅಂತಹ ಈ ಒಂದು ಕಾದಂಬರಿಯನ್ನ ಕ್ಲಾಸಿಕ್ ಕೃತಿ ಅಂತಲೇ ಪರಿಗಣಿಸಲಾಗುತ್ತದೆ. ಇದೀಗ ಈ ಪರ್ವ ಕಾದಂಬರಿಗೆ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಏಳು ಬಾಗಿಲು ಇರಬಾರದೆಂದು ಹೊಸ ಬಾಗಿಲು ಸೃಷ್ಟಿ: ವಾಸ್ತುವಿಗೆ ಶರಣಾದ ಗ್ರಾಮ ಪಂಚಾಯತಿ…!

0

ಲಕ್ಷ್ಮೇಶ್ವರ: ವಾಸ್ತು ಪ್ರಕಾರದ ಹೆಸರಿನಲ್ಲಿ ಪಂಚಾಯಿತಿ ಕಟ್ಟಡದಲ್ಲಿ ಮತ್ತೊಂದು ಹೊಸ ಬಾಗಿಲು ಸೃಷ್ಟಿ ಮಾಡಿರುವ ಸಮೀಪದ ಸೂರಣಗಿ ಗ್ರಾ.ಪಂ, ಇದೀಗ ಇದು ವಾಸ್ತು ವಿಚಾರಕ್ಕೆ ಸಂಬಂದಿಸಿದ್ದಲ್ಲ, ಪಂಚಾಯಿತಿ ಕೆಲಸಕ್ಕೆ ಆಗಮಿಸುವವರಿಗೆ ಅನೂಕೂಲವಾಗಲಿ ಎನ್ನುವ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ ಎನ್ನುವ ಉತ್ತರಗಳನ್ನು ಹೇಳುತ್ತಿರುವುದರಿಂದ, ಇದರಲ್ಲಿ ವಾಸ್ತವ ಯಾವುದು ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುವಂತಾಗಿದೆ.

ಸೂರಣಗಿ ಗ್ರಾ.ಪಂ ಕಟ್ಟಡ 1966ರಲ್ಲಿ ನಿರ್ಮಾಣವಾಗಿದ್ದು, ಇಲ್ಲಿಯವರೆಗೆ ಇಲ್ಲದ ವಾಸ್ತು ವಿಚಾರ ಇದೀಗ ತಲೆ ಎತ್ತಿರುವದು ವಿಚಿತ್ರವಾಗಿದೆ. ಸುಮಾರು 55 ವರ್ಷ ಹಳೆಯದಾದ ಈ ಕಟ್ಟಡ 7 ಬಾಗಿಲುಗಳನ್ನು ಹೊಂದಿತ್ತು. ಈ ಹಿಂದಿನ ಆಡಳಿತ ಮಂಡಳಿಯವರು 7 ಬಾಗಿಲು ಇದೆ ಎಂಬ ಕಾರಣಕ್ಕೆ ಒಂದು ಬಾಗಿಲು ಬೀಗ ಹಾಕಿ, ಬಾಗಿಲ ಹಿಂದೆ ಕಪಾಟು ಮಾಡಿಸಿದ್ದರು.ಪ್ರಸ್ತುತ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಒಂದು ಹೊಸ ಬಾಗಿಲು ಸೃಷ್ಟಿ ಮಾಡಿದ್ದು, ಇದಕ್ಕೆ ಎಲ್ಲಾ ಸದಸ್ಯರ ಒಪ್ಪಿಗೆ ಪಡೆದಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ತಾಲೂಕಿನಲ್ಲಿ ಅನೇಕ ಪಂಚಾಯಿತಿಗಳು ಸ್ವಂತ ಕಟ್ಟಡ ಇಲ್ಲದೇ ಬೇರೆ ಬೇರೆ ಕಟ್ಟಡಗಳಲ್ಲಿ ಆಡಳಿತ ನಿರ್ವಹಣೆ ಮಾಡುತ್ತಿವೆ.ಅದಲ್ಲದೆ ಲಕ್ಷ್ಮೇಶ್ವರ ತಾ.ಪಂ ಸಹ ಸ್ವಂತ ಕಟ್ಟಡ ಹೊಂದಿಲ್ಲ. ಹೀಗಿರುವಾಗ `ವಾಸ್ತು ಪ್ರಕಾರ’ ಎನ್ನುವ ಕಾರಣಕ್ಕೆ ಕಟ್ಟಡದಲ್ಲಿ ಬದಲಾವಣೆ ಏಕೆ ಎನ್ನುವದು ಗ್ರಾಮಸ್ಥರ ಪ್ರಶ್ನೆಯಾಗಿದೆ.99 ಸಾವಿರ ರೂ ಖರ್ಚು ಮಾಡಿಸಲಾಗಿದ್ದು, ಬಾಗಿಲು, ಬಣ್ಣ, ವಿದ್ಯುತ್ ರಿಪೇರಿ, ಸಿ.ಸಿ ಕ್ಯಾಮೆರಾ ಸೇರಿದಂತೆ ಅನೇಕ ಕೆಲಸಕ್ಕೆ ಸಾಮಾನ್ಯ ಸಭೆಯಲ್ಲಿ ಎಲ್ಲರ ನಿರ್ಣಯ ತೆಗೆದುಕೊಂಡು ಮಾಡಲಿದೆ ಎಂದು ಗ್ರಾ.ಪಂ ಸದಸ್ಯ ಪ್ರವೀಣ ಸೂರಣಗಿ ಹೇಳುತ್ತಿದ್ದಾರೆ.

ಕಟ್ಟಡದ ದುರಸ್ತಿ ಹೆಸರಿನಲ್ಲಿ ವಾಸ್ತು ಪ್ರಕಾರ ಕಟ್ಟಡ ಇಲ್ಲ ಎಂದು ಹೊಸ ಬಾಗಿಲು ಸೃಷ್ಟಿ ಮಾಡಲಾಗಿದೆ. ಇದಕ್ಕೆ ಗ್ರಾ.ಪಂ.ನ ಎಲ್ಲಾ ಸದಸ್ಯರ ಒಪ್ಪಿಗೆ ತೆಗೆದುಕೊಳ್ಳದೆ ಅಧ್ಯಕ್ಷರು ಹಾಗೂ ಕೆಲವೇ ಸದಸ್ಯರು ಮಾತ್ರ ದುರಸ್ತಿ ಹೆಸರಿನಲ್ಲಿ ಕಟ್ಟಡ ಹಾಳು ಮಾಡುತ್ತಿದ್ದಾರೆ ಎಂದು ಉಪಾಧ್ಯಕ್ಷ ಶಂಕ್ರಣ್ಣ ಶಿರನಹಳ್ಳಿ ಆರೋಪಿಸಿದ್ದಾರೆ.ಸೂರಣಗಿ ಗ್ರಾಮ ಪಂಚಾಯಿತಿ ಭೇಟಿ ನೀಡಿ ಅಲ್ಲಿನ ಅಧಿಕಾರಿಗಳು ಮಾಹಿತಿ ಪಡೆದು ಪರಿಶೀಲನೆ ಮಾಡಲಾಗುವದು ಎಂದು ಪ್ರಭಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದ್ದಾರೆ.

15ನೇ ಹಣಕಾಸು ಯೋಜನೆಯಲ್ಲಿ ಪಂಚಾಯಿತಿ ಕಟ್ಟಡ ದುರಸ್ತಿ ಕಾಮಗಾರಿ ಮಾಡಲಾಗುತ್ತಿದೆ. ಒಂದು ಮನೆ ನಿರ್ಮಾಣವಾಗಬೇಕಾಗದರೆ ವಾಸ್ತು ನೋಡುತ್ತೇವೆ. ಅದರಂತೆ ಆಡಳಿತ ಮಾಡುವ ನಮಗೆ ಗ್ರಾ.ಪಂ ಕಟ್ಟಡದಲ್ಲಿ ಏಳು ಬಾಗಿಲು ಇರಬಾರದು, ಏಳು-ಬೀಳು ಎನ್ನುವುದು ಆಗಬಾರದು ಎಂದು ಇನ್ನೊಂದು ಬಾಗಿಲು ತೆರೆಯಲಾಗಿದೆ. ಇದಕ್ಕೆ ಸದಸ್ಯರ ಒಪ್ಪಿಗೆ ಇದೆ.
– ಪ್ರವೀಣ ಸೂರಣಗಿ.ಗ್ರಾಮ ಪಂಚಾಯಿತಿ ಸದಸ್ಯ.

ಬೀದಿನಾಯಿಗಳ ಉಪಟಳಕ್ಕೆ ಬೆಚ್ಚಿಬಿದ್ದ ನಾಗರಿಕರು…!

0

ಲಕ್ಷ್ಮೇಶ್ವರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯಿಂದ ಜನತೆ ಬೆಚ್ಚಿ ಬೀಳುವಂತಾಗಿದ್ದು, ಮಕ್ಕಳನ್ನಷ್ಟೇ ಹೊರಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಆಟ ಆಡುತ್ತಿರುವ ಚಿಕ್ಕ ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಇದಕ್ಕೆ ನಿತ್ಯವೂ ಒಂದಿಲ್ಲೊಂದು ಕಡೆ ನಾಯಿ ಕಡಿತದಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಚಿಕಿತ್ಸೆಗೊಳಪಡುವ ಘಟನೆ ನಡೆಯುತ್ತಲೇ ಇದೆ.

ಪೇಪರ್-ಹಾಲು ಹಾಕುವವರಿಗೆ ತಪ್ಪದ ಗೋಳು

ಹಿಂಡು ನಾಯಿಗಳ ಬೀದಿ ಕಡಿದಾಟ, ಕೂಗಾಟ, ಓಟಾಟದ ಭಯದಿಂದ ಪಾಲಕರು ಮಕ್ಕಳನ್ನು ಶಾಲೆಗೆ, ಆಟಕ್ಕೆ, ಸೈಕಲ್ ಓಡಿಸಲು ಬಿಡಲು ಹೆದರುತ್ತಿದ್ದಾರೆ. ಅಲ್ಲದೇ ಹಾಲು, ಪೇಪರ್, ಹೂವು, ಹಣ್ಣು, ತರಕಾರಿ ಮಾರಾಟಗಾರರು ಬೆದರುವಂತಾಗಿದೆ. ರಾತ್ರಿ ಮತ್ತು ನಸುಕಿನ ಜಾವ ಸಂಚಾರದ ವೇಳೆ ಒಂದು ನಾಯಿ ಬೊಗಳಿದರೆ ಆ ಪ್ರದೇಶ ಎಲ್ಲ ನಾಯಿಗಳೂ ಬೊಗಳುತ್ತಾ ಸುತ್ತುವರಿಯುತ್ತವೆ. ಬೈಕ್ ಸವಾರರನ್ನು ಬೆನ್ನಟ್ಟುವ ನಾಯಿಗಳಿಂದ ಪಾರಾಗಲು ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.

ಮಕ್ಕಳು ಏನಾದರೂ ತಿಂಡಿ-ತಿನಿಸುಗಳನ್ನು ತರುತ್ತಿದ್ದರೆ ಅವರ ಮೇಲೆ ಎರಗುತ್ತವೆ. ವಾಯು ವಿಹಾರಿಗಳು, ಮಹಿಳೆಯರು, ಮಕ್ಕಳು, ವಯೋವೃದ್ಧರು ಎಲ್ಲರಲ್ಲೂ ನಾಯಿಗಳ ಭಯ ಕಾಡುತ್ತಿದೆ. ಬೀದಿ ನಾಯಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಾರಣ ಪಟ್ಟಣದ ಬಹುತೇಕ ರಸ್ತೆ ಬದಿಗಳ ಬದಿ, ಜನನಿಬಿಡ ಪ್ರದೇಶ, ಬಸ್-ಅಟೋ ನಿಲ್ದಾಣಗಳ ಪ್ರದೇಶಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಚಿಕನ್-ಎಗ್‌ರೈಸ್ ಸೆಂಟರ್, ಬೇಕರಿ, ಮಾಂಸ ಮಾರಾಟದ ಅಂಗಡಿಗಳು, ಗೂಡಂಗಡಿಗಳು, ಹೋಟೆಲ್-ದಾಬಾಗಳು ಅಷ್ಟೇ ಅಲ್ಲದೇ ಸಾರ್ವಜನಿಕರು ಅಲ್ಲಲ್ಲಿ ಚೆಲ್ಲುವ ಆಹಾರ ಪದಾರ್ಥ ಬೀದಿ ನಾಯಿಗಳಿಗೆ ಯಥೇಚ್ಚ ಆಹಾರ ನೀಡುವ ಮೂಲಗಳಾಗಿವೆ.

ಪ್ರಾಣಿಗಳ ಬೇಟೆಗೆ ನಾಯಿ ದಂಡು ಸನ್ನದ್ಧ!

ಇದೀಗ ಮಾಂಸದ ರುಚಿಗೆ ಬೆನ್ನತ್ತಿರುವ ಬೀದಿ ನಾಯಿಗಳು ಪಟ್ಟಣದಲ್ಲಿ ಸಣ್ಣ ಬೆಕ್ಕು, ಹಂದಿಮರಿ, ಕೋಳಿ ಮರಿಗಳನ್ನು ಹಿಡಿದು ತಿಂದು ಹಾಕುತ್ತಿವೆ. ಹೊರವಲಯದ ರೈತರ ಜಮೀನುಗಳಲ್ಲಿ ನಾಯಿಗಳ ಹಿಂಡು ಬೇಕಾಬಿಟ್ಟಿ ಓಡಾಡಿ ಬೆಳೆ ಹಾನಿ ಮಾಡುತ್ತಿವೆ. ಸಾಲದ್ದಕ್ಕೆ ಜಮೀನಿನಲ್ಲಿ ಬರುವ ಜಿಂಕೆ, ನರಿ, ಮೊಲಗಳಂತಹ ಸಣ್ಣ ಪ್ರಾಣಿಗಳನ್ನು ಬೇಟೆಯಾಡುವ ಬೀದಿ ನಾಯಿಗಳಿಂದ ಜನತೆಯ ನೆಮ್ಮದಿ ಹಾಳಾಗಿರುವುದಂತೂ ಸತ್ಯ. ನಾಯಿಗಳ ಹಾವಳಿಯಿಂದ ಹಂದಿಗಳ ಕಾಟ ಕಡಿಮೆಯಾಗಿದ್ದರೂ, ನಾಯಿ ಚೆಲ್ಲಾಟದಿಂದ ರೈತರಿಗೂ ಪ್ರಾಣ ಸಂಕಟವಾಗಿದೆ.

ನಿಯಂತ್ರಣಕ್ಕೆ ಬೇಕಿದೆ ಇಚ್ಛಾಶಕ್ತಿ

ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆಯ ನಿಯಂತ್ರಣಕ್ಕೆ ಸಂತಾನ ಹರಣ ಚಿಕಿತ್ಸೆಯೂ ಸೇರಿ, ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಸ್ಥಳೀಯ ಪುರಸಭೆ, ಗ್ರಾ.ಪಂನವರು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಅವುಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಈಗ ಇಡೀ ವಾತಾವರಣವನ್ನೆ ಹದಗೆಡಿಸಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಪುರಸಭೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣದ ಜನರ, ಮಕ್ಕಳ ಜೀವದ ದೃಷ್ಟಿಯಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಮಾಡಬೇಕಿದೆ ಎನ್ನುತ್ತಾರೆ ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ.

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಶು ಸಂಗೋಪನಾ ಇಲಾಖೆಯೊಂದಿಗೆ ಚರ್ಚಿಸಿ ಸಂತಾನ ಹರಣ ಶಸ್ತ್ರಚಿಕಿತ್ಸೆ, ಸ್ಥಳಾಂತರ ಸೇರಿ ಇತರೇ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು. ಸಾರ್ವಜನಿಕರು ಸಾಕು ನಾಯಿಗಳ ಕೊರಳಿಗೆ ಬೆಲ್ಟ್ ಕಟ್ಟಿ ದಿನಪೂರ್ತಿ ಮನೆಯಿಂದ ಹೊರಬಿಡದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು, ಹೋಟೆಲ್-ದಾಬಾ, ಬೀದಿಬದಿ ವ್ಯಾಪಾರಸ್ಥರು ಆಹಾರ-ಪದಾರ್ಥಗಳನ್ನು ರಸ್ತೆ ಬದಿ ಚೆಲ್ಲದಂತೆ ಸೂಚಿಸಲಾಗುವುದು.
– ಮಂಜುನಾಥ್ ಮುದಗಲ್.
ಆರೋಗ್ಯ ನಿರೀಕ್ಷಕರು, ಪುರಸಭೆ

ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತಿಂಗಳೊಂದಕ್ಕೆ 70ಕ್ಕೂ ಹೆಚ್ಚು ಬೀದಿನಾಯಿ ಕಡಿತದ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಬಹುತೇಕ ಚಿಕ್ಕ ಮಕ್ಕಳೇ ಇರುತ್ತಾರೆ. ನಾಯಿಕಡಿತಕ್ಕೆ ಅವಶ್ಯಕ ಔಷಧಿ ಲಭ್ಯವಿದೆ.

– ಡಾ.ಶ್ರೀಕಾಂತ ಕಾಟೇವಾಲೆ.
ಲಕ್ಷ್ಮೇಶ್ವರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ.

ರಾಜಾಜಿನಗರ ಪೊಲೀಸರನ್ನು ಖೆಡ್ಡಾ ಕೆಡವಿದ ಲೋಕಾಯುಕ್ತ

0

ಬೆಂಗಳೂರು;- ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ರಾಜಾಜಿನಗರ ಪೊಲೀಸರನ್ನು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ. ಹೆಚ್ ಸಿ ಆಂಜನೇಯ , ಪಿಎಸ್ ಐ ಮಾರುತಿ, ಇನ್ಸ್ಪೆಕ್ಟರ್ , ಲಕ್ಷಣ್ ಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಈ ಹಿನ್ನೆಲೆ ಲೋಕಾಯುಕ್ತ ಪೊಲೀಸ್ರು ರಾಜಾಜಿನಗರ ಪೊಕೀಸ್ರ ಮೇಲೆ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ರಾಜಾಜಿ ನಗರ ಠಾಣೆಯ ಪೊಲೀಸರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಐದು ಸಾವಿರ ಲಂಚದ ಹಣ ಪಡೆಯುವಾಗ ಪ್ರಕರಣದ ಎ೧ ಆರೋಪಿ ಹೆಚ್ ಸಿ ಆಂಜನೇಯ ಲೋಕಾ ಬಲೆಗೆ ಬಿದ್ದಿದ್ದಾರೆ.ಪ್ರಕರಣದಲ್ಲಿ ಪಿಎಸ್ ಐ ಮಾರುತಿ,ಎ2 ಪಿಐ ಲಕ್ಷ್ಮಣ್ ಗೌಡ ಎ3 ಆರೋಪಿಯಾಗಿದ್ದು ಲೋಕಾಯುಕ್ತ ಪೊಲೀಸ್ರ ದಾಳಿ ವೇಳೆ ಎಸ್ಕೇಪ್ ಆಗಿದ್ದಾರೆ. ಪ್ರಕರಣವೊಂದರಲ್ಲಿ ಬಿ ರಿಪೋರ್ಟ್ ಹಕಾಲು 50 ಸಾವಿರ ಹಣಕ್ಕೆ ಪಿಸಿ ಆಂಜನೇಯ ಡಿಮಾಂಡ್ ಮಾಡಿದ್ರಂತೆ. ಈ ಪ್ರಕರಣದಲ್ಲಿ ಐದು ಸಾವಿರ ಹಣ ಪಡೆಯುವಗಾ ಲೋಕಾಯಕ್ತ ಪೊಲೀಸ್ರು ದಾಳಿ ನಡೆಸಿ ಲಾಕ್ ಮಾಡಿದ್ದಾರೆ.

ನಕಲಿ ವೋಟರ್ ಐಡಿ, ಆಧಾರ್ ತಯಾರು ಮಾಡ್ತಿದ್ದ ಸಚಿವರ ಆಪ್ತ ಖಾಕಿ ಬಲೆಗೆ

0

ಬೆಂಗಳೂರು;- MP ಚುನಾವಣೆ ಹೊತ್ತಲ್ಲೇ ದೇಶದ ಸಾರ್ವಭತ್ವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡ್ತಿದ್ದ ದೊಡ್ಡ ಜಾಲವನ್ನ ಸಿಸಿಬಿ ಪೊಲೀಸ್ರು ಪತ್ತೆ ಮಾಡಿದ್ದಾರೆ. ದುಡ್ಡೊಂದು ಕೊಟ್ರೆ ಯಾವೂದೇ ಐಡಿ ಫ್ರೂಫ್ ಇಲ್ಲದೇ ಆಧಾರ್ ಕಾರ್ಡ್. ವೋಟರ್ ಐಡಿ, ಡಿಎಲ್ ಎಲ್ಲಾ ಹೋಲ್ ಸೇಲ್ ರೇಟ್ ನಲ್ಲಿ ಸಿಕ್ತಿತ್ತಂತೆ. ಅದು ಈ ನಕಲಿ ಜಾಲ ನಡೆಸ್ತಿದ್ದು ಕರ್ನಾಟಕ ಸರ್ಕಾರದ ಮಂತ್ರಿ ಜೊತೆಗೆ ಸದಾ ಇರ್ತಿದ್ದ ಸಚಿವ ಭೈರತಿ ಸುರೇಶ್ ಆಪ್ತನಾಗಿರೋ ಮೌನೇಶ್ ಕುಮಾರ್ ನಡೆಸ್ತಿದ್ದ ಎಂಎಸ್ ಎಲ್ ಟೆಕ್ನೋ ಸಲುಶನ್ ಕಚೇರಿಯಲ್ಲಿ. ಹೆಬ್ಬಾಳ ಠಾಣ ವ್ಯಾಪ್ತಿಯ ಕನಕನಗರದಲ್ಲಿರೋ ಇದೇ ಕಚೇರಿ ಮೇಲೆ ನಿನ್ನೆ ಸಿಸಿಬಿ ಅಧಿಕಾಗಳು ದಾಳಿ ನಡೆಸಿ‌ ಸಚಿವ ಸುರೇಶ್ ಜೊತೆಗ ಆಪ್ತ ಅಂತ ಗುರುತಿಸಿಕೊಂಡಿದ್ದ ಮೌನೇಶ್ ಕುಮಾರ್ ಹಾಗೂ ಭಗತ್ ಮತ್ತು ರಾಘವೇಂದ್ರ ಎಂಬುವವರನ್ನ ಬಂಧಿಸಿದ್ದಾರೆ.

ಲೋಕಸಭಾ ಚುನಾವಣಾ ಹೊತ್ತಲ್ಲಿ ಈ ರೀತಿಯ ನಕಲಿ ಆಧಾರ್ ಮತ್ತು ವೋಟರ್ ಐಡಿ ಕ್ರಿಯೇಟ್ ಮಾಡೋ ಜಾಲ ಪತ್ತೆಯಾಗಿರೋದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಮಾಹಿತಿಗಳ ಪ್ರಕರಣ ಮೌನೇಶ್ ಸಂಪರ್ಕ ಮಾಡಿ ಯಾವೂದೇ ಕ್ಷೇತ್ರ ವೋಟರ್ ಐಡಿ ಅಥವಾ ಯಾವೂದೇ ವಿಳಾಸದ ಆಧಾರ್ ಕಾರ್ಡ್ ಕೇಳಿದ್ರೆ ಕ್ಷಣ ಮಾತ್ರದಲ್ಲಿ‌ ಮಾಡಿಕೊಡ್ತಿದ್ರಂತೆ. ಅಷ್ಟೇ ಅಲ್ಲ ಬೇರಡಯವರ ಗುರುತಿನ ಚೀಟಿಗೆ ಇನ್ಯಾರದ್ದೋ ಫೋಟೋ ಹಾಕಿ ಐಡಿ ಕ್ರಿಯೇಟ್ ಮಾಡಿರೋ ಆರೋಪ ಕೇಳಿ ಬಂದಿದೆ. ಸದ್ಯ ಹೆಬ್ಬಾಳ ಪೊಲೀಸ್ರು ಈ ಬಗ್ಗೆ ತನಿಖೆ ನಡೆಸ್ತಿದ್ದು, ಕಂಪ್ಯೂಟರ್ ಗಳು ಕೆಲ ಆಧಾರ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಹಾಗೂ ಕಾರ್ಡ್ ತಯಾರು ಮಾಡುವ ಕಚ್ಚಾ ವಸ್ತುಗಳನ್ನ ಪೊಲೀಸ್ರು ಸೀಜ್ ಮಾಡಿದ್ದಾರೆ. ಇಂತಹ ಕಾನೂನು ಬಾಹಿರ ಕೃತ್ಯ ನಡೆಸಲೇ ಸಚಿವರ ಆಪ್ತ ಅಂತ ಗುರುತಿಸಿಕೊಂಡಿದ್ದಾರ. ಇಲ್ಲ ಇವರ ಹಿಂದೆ ಕಾಣದ ಕೈಗಳು ನಿಂತು ಕೆಲಸ ಮಾಡಿಸ್ತಿದ್ಯಾ ಅನ್ನೋದು ತನಿಖೆಯಿಂದಾಷ್ಟೆ ಗೊತ್ತಾಗಬೇಕಿದೆ.

ಆಯುಧ ಪೂಜೆ: ಬಸ್ ಗಳ ಪೂಜೆಗೆ ಹೆಚ್ಚುವರಿ ಹಣಕ್ಕೆ ಡಿಮ್ಯಾಂಡ್ ಹಾಕಿದ ಸರ್ಕಾರಿ ನೌಕರ

0

ಬೆಂಗಳೂರು;- ಸೋಮವಾರ ಆಯುಧ ಪೂಜೆ ಹಿನ್ನಲೆ, ಸರ್ಕಾರಿ ಬಸ್ ಗಳ ಪೂಜೆಗೆ ಹೆಚ್ಚುವರಿ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಲಾಗಿದೆ. ಬೆಲೆ ಏರಿಕೆ ಹಿನ್ನೆಲೆ ನೌಕರರಿಂದ ಹೆಚ್ಚುವರಿ ಹಣಕ್ಕೆ ಒತ್ತಾಯ ಮಾಡಲಾಗಿದ್ದು, ಪ್ರತಿ ವರ್ಷ ಆಯುಧ ಪೂಜೆಗೆ ಜೀಪ್, ಕಾರ್ ಗೆ 40 ರೂ, ಬಸ್ ಗಳಿಗೆ ತಲಾ 100 ರೂ. ಗಳನ್ನು ನಿಗಮಗಳು ಬಿಡುಗಡೆ ಮಾಡುತ್ತಿದ್ದವು. ಆದ್ರೆ ಈ ಬಾರಿ ಪ್ರತಿ ಬಸ್ ಗೆ 500 ರೂ. ಬಿಡುಗಡೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಆಯುಧ ಪೂಜೆ ಸಂಭ್ರಮದಿಂದ ಆಚರಿಸಲು ಸಾರಿಗೆ ನಿಗಮದ ನೌಕರರ ತೀರ್ಮಾನ ಮಾಡಿದ್ದು, ಒಂದು ಬಸ್ ಗೆ ಸರಳವಾಗಿ ಪೂಜೆ ಮಾಡಲು ಬಾಳೆಕಂದು ತೆಂಗಿನಕಾಯಿ,ಕರ್ಪೂರ ,ಕುಂಕುಮ, ಬೂದು ಕುಂಬಳಕಾಯಿ ವಿಭೂತಿ ಅಗತ್ಯ ಇದೆ. ಪ್ರತಿ‌ಬಾರಿ ಜಿಪುಣತನ ತೋರುತ್ತಿದ್ದ ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ, ಹೀಗಾಗಿ ಈ ಬಾರಿ ಆಯುಧ ಪೂಜೆ ಸಂಭ್ರಮಕ್ಕೆ ಹೆಚ್ಚುವರಿ ಹಣ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ.

Gaganyaan Mission: ಇಸ್ರೋದ ಗಗನಯಾನ ನೌಕೆಯ ಸುರಕ್ಷತಾ ಪ್ರಯೋಗ ಯಶಸ್ವಿ

0

ಬೆಂಗಳೂರು: ಮಾನವಸಹಿತ ಗಗನಯಾನ ಸಿದ್ಧತೆಯ ಭಾಗವಾಗಿ, ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆದಿದ ಮೊದಲ ಪ್ರಾಯೋಗಿಕ ಪರೀಕ್ಷಾರ್ಥ ವಾಹನ ಯಶಸ್ವಿಯಾಗಿ ಉಡಾವಣೆಯಾಗಿದೆ. ತಾಂತ್ರಿಕ ದೋಷ ಸರಿಪಡಿಸಿದ ನಂತರ ಬೆಳಗ್ಗೆ 10 ಗಂಟೆ ವೇಳೆಗೆ ಟಿವಿ-ಡಿ1 ರಾಕೆಟ್ ಉಡಾವಣೆ ಮಾಡಿದ್ದು, ಯಶಸ್ವಿಯಾಗಿ ಹಾರಾಟ ನಡೆಸಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.

ಇಂದು ಬೆಳಗ್ಗೆ 8:45 ಗಂಟೆಗೆ ಮಾನವರಹಿತ ಪರೀಕ್ಷಾರ್ಥ ವಾಹನ ಉಡಾವಣೆಗೆ ಇಸ್ರೋ ಸಜ್ಜಾಗಿತ್ತು. ಅದಕ್ಕೂ ಮುನ್ನ 8:30 ಗಂಟೆಗೆ ಉಡ್ಡಯನಕ್ಕೆ ಇಸ್ರೋ ಸಮಯ ನಿಗದಿಪಡಿಸಿತ್ತು, ಆದ್ರೆ ಹವಾಮಾನ ವೈಪರಿತ್ಯದಿಂದ ಸಮಯ ಬದಲಾವಣೆ ಮಾಡಲಾಗಿತ್ತು. ಕೊನೇ ಕ್ಷಣದಲ್ಲಿ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಹಾರಾಟ ಸ್ಥಗಿತಗೊಳಿಸಲಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಕ್ಕೆ ರಾಕೆಟ್ ಉಡಾವಣೆ ಮಾಡಲಾಯಿತು.

ಈ ಪರೀಕ್ಷೆಗೆ ಟಿವಿ-ಡಿ1′ ಎಂದು ಹೆಸರಿಸಲಾಗಿದೆ. ಇಂತಹ ಉದ್ದೇಶಿತ ಮೂರು ಪರೀಕ್ಷೆಗಳಲ್ಲಿ ಇದು ಮೊದಲನೆಯದ್ದಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಏಕ ಹಂತದ ರಾಕೆಟ್ ʻಟಿವಿ-ಡಿ1ʼ ನಭಕ್ಕೆ ಚಿಮ್ಮಿದ್ದು, ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ಸು ಕಾಣುವ ನಿರೀಕ್ಷೆ ಇಸ್ರೋ ಹೊಂದಿದೆ.

TV-D1 ಪರೀಕ್ಷಾರ್ಥ ಹಾರಾಟವು ಗಗನಯಾನ ಮಿಷನ್ನ ನಿರ್ಣಾಯಕ ಭಾಗವಾಗಿದೆ. ಇದು ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು 3 ದಿನಗಳ ಕಾರ್ಯಾಚರಣೆಗಾಗಿ 400 ಕಿಲೋಮೀಟರ್ ಕಕ್ಷೆಗೆ ಕಳುಹಿಸುವುದು, ಈ ಮೂಲಕ ಹಿಂದೂ ಮಹಾಸಾಗರದ ನೀರಿನಲ್ಲಿ ಸೇಫ್ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮರ್ಥ್ಯ ಪ್ರದರ್ಶಿಸುವ ಗುರಿಯನ್ನು ಹೊಂದಿದೆ.

ಮಹಿಷಾಸುರನ ಪೋಟೋ ಜೊತೆ ಸಿಎಂ ಫೋಟೋ ಮಾರ್ಫ್ – ವ್ಯಕ್ತಿ ವಿರುದ್ಧ FIR

0

ಬೆಂಗಳೂರು ;- ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಮಹಿಷಾಸುರನ ಪೋಟೋ ಜೊತೆ ಮಾರ್ಫ್ ಮಾಡಿದ್ದ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.ಸೀನಾ ಹಿಂದೂಸ್ತಾನಿ ಅನ್ನೋ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ಎಡಿಟ್ ಮಾಡಲಾಗಿದ್ದು, ಮಹಿಷಾಸುರನ ಫೋಟೋಗೆ ಸಿದ್ದರಾಮಯ್ಯ ಮುಖಬಳಸಿ ‘ತೋಲಾಂಡಿಗಳು ಸೇರಿಕೊಂಡು ಮುಂದಿನ ವರ್ಷ “ಸಿದ್ದುಸುರಾ ದಸರಾ ” ಮಾಡಿದರು ಆಶ್ಚರ್ಯ ಪಡಬೇಕಿಲ್ಲ’ ಎಂದು ಪೋಸ್ಟ್ ಮಾಡಿದ್ದರು.

ಇದು ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ವಕೀಲ ಕಾಂಗ್ರೆಸ್ ವಕ್ತಾರ ಸೂರ್ಯಮುಕುಂದರಾಜ್ ಅವರಿಂದ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ. ಸೂರ್ಯ ಮುಕುಂದರಾಜ್ ದೂರಿನ ಮೇರೆಗೆ ಸೀನಾ ಹಿಂದೂಸ್ತಾನಿ ಎಫ್ ಬಿ ಖಾತೆ ಬಳಕೆ ದಾರನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ- ಮೈಸೂರಿನಲ್ಲಿ ಭಗವಾನ್ ವಿರುದ್ಧ FIR

0

ಮೈಸೂರು;- ಒಕ್ಕಲಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ ಪ್ರೊ. ಭಗವಾನ್ ವಿರುದ್ಧ ಕೊನೆಗೂ ಎಫ್​ಐಆರ್​ ದಾಖಲಾಗಿದೆ. ಗಂಗಾಧರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದೆ. ಅ. 13ರಂದು ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ದಸರಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಕೆ.ಎಸ್.ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನರು ಹಾಗೂ ಪ್ರಾಣಿಗಳು ಎಂಬ ಮಾತುಗಳನ್ನಾಡಿ ಸಾರ್ವತ್ರಿಕವಾಗಿ ಅಪಮಾನ ಮಾಡಿದರು.

ಅಲ್ಲದೆ, ಹಿಂದು ಧರ್ಮ ಹಾಗೂ ಶ್ರೀರಾಮ, ಸೀತಾದೇವಿ, ಭಗವದ್ಗೀತೆ ಬಗ್ಗೆ ತೀರಾ ಹಗುರವಾದ ಮಾತನಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.ಕೆ.ಎಸ್.ಭಗವಾನ್ ವಿರುದ್ಧ ಒಕ್ಕಲಿಗರು ಆಕ್ರೋಶ ವ್ಯಕ್ತಪಡಿಸಿ, ಸಾಲು ಸಾಲು ಪ್ರತಿಭಟನೆಗಳನ್ನು ನಡೆಸಿದ್ದರು. ರಾಜ್ಯದ ಅನೇಕ ಪೊಲೀಸ್​ ಠಾಣೆಗಳಲ್ಲಿ ಭಗವಾನ್​ ವಿರುದ್ಧ ಒಕ್ಕಲಿಗ ಸಂಘಟನೆಗಳು ದೂರು ಸಹ ದಾಖಲಿಸಿದ್ದವು. ಅಂತಿಮವಾಗಿ ಮೈಸೂರಿನ ದೇವರಾಜ ಪೊಲೀಸ್​ ಠಾಣೆಯಲ್ಲಿ ಭಗವಾನ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!