Home Blog Page 3225

ಭಾರತದಲ್ಲಿ 7,579 ಹೊಸ ಕೊರೊನಾ ಪ್ರಕರಣಗಳು ದೃಢ

0

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,579 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 543 ದಿನಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಇದಲ್ಲದೆ, ಕಳೆದ 24 ಗಂಟೆಗಳಲ್ಲಿ 236 ಜನರು ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ 24 ಗಂಟೆಗಳಲ್ಲಿ ಕರೋನಾ ಸ್ಥಿತಿಯ ಕುರಿತು ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ವಿವರಗಳು ಈ ಕೆಳಗಿನಂತಿವೆ:
ಕಳೆದ 24 ಗಂಟೆಗಳಲ್ಲಿ ಸೋಂಕಿತರು : 7,579. (ಕೇರಳದಲ್ಲಿ ಸಂಖ್ಯೆ 3,698)
ಇದುವರೆಗೆ ಕರೋನಾ ಸೋಂಕಿತರ ಸಂಖ್ಯೆ : 3,45,26,480.
ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡವರು : 12,202.
ಇಲ್ಲಿಯವರೆಗೆ ಗುಣಮುಖರಾದವರು : 3,39,46,749.
ರೋಗದಿಂದ ಚೇತರಿಸಿಕೊಳ್ಳುವ ಜನರ ಶೇಕಡಾವಾರು ಪ್ರಮಾಣವು 98.32% ಆಗಿದೆ. ಇದು ಮಾರ್ಚ್ 2020 ರಿಂದ ಅತಿ ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಮೃತಪಟ್ಟವರು : 236 ಕೇರಳ ಒಂದರಲ್ಲೇ 75 ಮಂದಿ ಸಾವನ್ನಪ್ಪಿದ್ದಾರೆ.
ಕೊರೊನಾದ ಒಟ್ಟು ಸಾವುನೋವುಗಳು: 4,66,147. .
ಚಿಕಿತ್ಸೆಯಲ್ಲಿರುವ ಒಳರೋಗಿಗಳ ಸಂಖ್ಯೆ: 1,13,584. ಇದು ಕಳೆದ 536 ದಿನಗಳಲ್ಲೇ ಅತ್ಯಂತ ಕಡಿಮೆ ಮಟ್ಟವಾಗಿದೆ.
ಸಾಪ್ತಾಹಿಕ ಸಕಾರಾತ್ಮಕತೆಯ ದರವು 0.93% ಆಗಿದೆ . ಕಳೆದ 59 ದಿನಗಳಿಂದ ಇದು 2% ಕ್ಕಿಂತ ಕಡಿಮೆಯಾಗಿದೆ.
ದೈನಂದಿನ ಧನಾತ್ಮಕತೆಯ ದರವು 1.08% ಆಗಿದೆ . ಕಳೆದ 49 ದಿನಗಳಿಂದ ಇದು 2% ಕ್ಕಿಂತ ಕಡಿಮೆಯಾಗಿದೆ.
ಧನಾತ್ಮಕ ದರವು 100 ಜನರಿಗೆ ಎಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ದೃಢೀಕರಿಸುವ ಲೆಕ್ಕಾಚಾರವಾಗಿದೆ.
ಕರೋನಾ ಲಸಿಕೆ ಪಡೆದವರು ಇಲ್ಲಿಯವರೆಗೆ: 1,17,63,73,499 ( 117.63) ಕೋಟಿ ಎಂದು ಆರೋಗ್ಯ ಸಚಿವಾಲಯದ ತಿಳಿಸಿದೆ.

ಶ್ರೀರಾಮಸೇನೆ ಕಾರ್ಯಕರ್ತನಿಂದ ಮೂತ್ರ ವಿಸರ್ಜನೆ; ಕಾನೂನು ಕ್ರಮಕ್ಕೆ ಆಗ್ರಹಿಸಿ ಎಸ್‌ಪಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆಯಂತಹ ವಿನೂತನ ಪ್ರತಿಭಟನೆ ನಡೆಸಿದ್ದರು.

ಅದರಲ್ಲಿ ಓರ್ವ ಶ್ರೀರಾಮಸೇನೆ ಕಾರ್ಯಕರ್ತನೊಬ್ಬ ನಗರಸಭೆ ಕಾರಿಡಾರ್ ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ. ಇದರ ಬೆನ್ನಲ್ಲೇ ಈಗ ದಲಿತ ಸಂಘಟನೆಗಳ ಒಕ್ಕೂಟವು ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲೆಯ ಶ್ರೀರಾಮ ಸಂಘಟನೆ ವತಿಯಿಂದ ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರ ಕಛೇರಿ ಮುಂದೆ ಮೂತ್ರ ವಿಸರ್ಜನೆ ಮಾಡಿರುವುದು ಖಂಡನಾರ್ಹವಾಗಿದ್ದು, ಘಟನೆಯಿಂದ ನಗರಸಭೆ ತಲೆ ತಗ್ಗಿಸುವಂತಾಗಿದೆ. ಈ ಘಟನೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಹಾಗೂ ದಲಿತ ಸಮುದಾಯವನ್ನು ಅವಮಾನಿಸಿದಂತಾಗಿದೆ.

ಇದನ್ನೂ ಓದಿ ಶೇಮ್ ಶೇಮ್ : ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತ

ನಗರಸಭೆ ಕಚೇರಿಯನ್ನು ಸ್ವಚ್ಛಗೊಳಿಸುವವರು ಇಲ್ಲಿನ ಪೌರಕಾರ್ಮಿಕರೇ ವಿನಃ ಅಧಿಕಾರಿ ವರ್ಗವಲ್ಲ. ಈ ರೀತಿ ಉದ್ಧಟನ ತೋರಿದ ಶ್ರೀರಾಮಸೇನೆ ಸಂಘಟನೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆ ಅನುಸಾರವಾಗಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೇ, ಸರ್ಕಾರಿ ಕಛೇರಿಗಳಲ್ಲಿ ಈ ರೀತಿ ಮೂತ್ರ ವಿಸರ್ಜನೆಗೆ ಯಾವುದೇ ಅವಕಾಶವಿಲ್ಲ. ಹೀಗಾಗಿ ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಮನವಿಯಲ್ಲಿ ಉಲ್ಲೇಖಿಸಿದೆ.

ಈ ಸಂದಂರ್ಭದಲ್ಲಿ ಶರೀಫ ಬಿಳೆಯಲಿ, ಮುತ್ತು ಬಿಳೆಯಲಿ, ಆನಂದ ಸಿಂಗಾಡಿ, ಯಲ್ಲಪ್ಪ ರಾಮಗಿರಿ, ರಮೇಶ ಕೋಳೂರ, ಶಿವಾನಂದ ತಮ್ಮಣ್ಣವರ, ಅನೀಲ ಕಾಳೆ, ಪರಶು ಕಾಳೆ, ಬಸೂ ಬಿಳೆಯಲಿ, ಮಂಜು ದೊಡ್ಡಮನಿ ಸೇರಿದಂತೆ ಇನ್ನಿತರರು ಇದ್ದರು.

ಶೇಮ್ ಶೇಮ್ : ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ಶ್ರೀರಾಮಸೇನೆ ಕಾರ್ಯಕರ್ತ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಗದಗ ನಗರಸಭೆ ಅಧಿಕಾರಿಗಳ ಕ್ರಮ ಖಂಡಿಸಿ ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು ಮಂಗಳವಾರ ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ನಗರದಲ್ಲಿನ ಶೌಚಾಲಾಯಗಳನ್ನು ಒಡೆದು ಹಾಕಿ ಡಯಾಲಿಸಿಸ್ ಕೇಂದ್ರಗಳಿಗೆ ಹಾಗೂ ಬಯಲು ಶೌಚಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಗದಗ ನಗರಸಭೆ ಅಧಿಕಾರಿಗಳು ಕಳೆದ ಎರಡು ವರ್ಷಗಳ ಹಿಂದೆ ಅವಳಿ ನಗರದಲ್ಲಿನ ಎಲ್ಲ ಮೂತ್ರಾಲಯಗಳನ್ನು ಕೆಡವಿ ಹಾಕಿದ್ದಾರೆ. ಈ ಮೂತ್ರಾಲಯಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಅವಳಿ ನಗರದಲ್ಲಿನ ನಾಗರಿಕರು ತೀವ್ರವಾಗಿ ಪರಿತಪಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ಕಿಡಿಕಾರಿದರು.

ಕನಕದಾಸ ಮಹಾನ್ ಹರಿಭಕ್ತ ; ಮುತ್ತು ರಾಯರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮದ ಕನಕದಾಸ ವೃತ್ತದಲ್ಲಿರುವ ಕನಕದಾಸರ ಪುತ್ಥಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ಕನಕದಾಸರು ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಪಿಡುಗುಗಳ ಕುರಿತು ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಿದರು. ಅಲ್ಲದೇ, ಬಾಗಿಲನು ತೆರೆದು ಸೇವೆಯನು ಕೊಡುವ ಹರಿಯನ್ನೇ ಒಲಿಸಿಕೊಂಡ ಮಹಾನ್ ಹರಿಭಕ್ತರಾಗಿದ್ದರು’ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ‌.ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪುಗೌಡ ಹಿರೇಗೌಡ್ರ, ಉಣ್ಣೆ ನಿಗಮದ ಅಧ್ಯಕ್ಷ ಪಡಿಯಪ್ಪ ಮರಿಯಣ್ಣವರ, ಎಸ್ ಡಿಎಂಸಿ ಅಧ್ಯಕ್ಷ ಬಸವರಾಜ ಗುಂಜಲ್, ಹಿರಿಯರಾದ ಮಲ್ಲನಗೌಡ ಸರ್ವಮಾನೇದ, ಬಸನಗೌಡ ಮುದಿಗೌಡ್ರ, ಅಡಿವೆಪ್ಪ ಮರಿಯಣ್ಣವರ, ಚನ್ನಪ್ಪ ಬ್ಯಾಳಿ, ಹನಮಂತ ಚಾವಡಿ ಸೇರಿದಂತೆ ಅನೇಕರು ಇದ್ದರು.

ಶೌಚಾಲಯ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಶ್ರೀರಾಮಸೇನೆಯಿಂದ ನಾಳೆ ಪೌರಾಯುಕ್ತರ ಕಚೇರಿಗೆ ಮೂತ್ರ ವಿಸರ್ಜನೆ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ಅವಳಿ ನಗರದಲ್ಲಿನ ಮೂತ್ರಾಲಯಗಳ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಗದಗ ನಗರಸಭೆಯ ಕ್ರಮ ಖಂಡಿಸಿ ಶ್ರೀರಾಮಸೇನೆಯ ಕಾರ್ಯಕರ್ತರು ಮಂಗಳವಾರ (ನ. ೨೩) ನಗರಸಭೆ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಿದ್ದಾರೆ.

ಈ ಬಗ್ಗೆ ಪ್ರತಿಕಾ ಪ್ರಕಟಣೆ ನೀಡಿರುವ ಅವರು, ‘ಗದಗ ನಗರಸಭೆ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ಅವಳಿ ನಗರದ ಎಲ್ಲ ಮೂತ್ರಾಲಯಗಳನ್ನು ಕೆಡವಿ ಹಾಕಿದ್ದಾರೆ. ಈ ಮೂತ್ರಾಲಯಗಳನ್ನು ಪುನರ್ ನಿರ್ಮಾಣ ಮಾಡುವುದಾಗಿ ನಗರಸಭೆ ಅಧಿಕಾರಿಗಳು ಹೇಳುತ್ತಾ ಕಾಲಕ್ಷೇಪ ಮಾಡುತ್ತಿದ್ದಾರೆ. ಅಧಿಕಾರಿಗಳ ದುರ್ವರ್ತನೆಯಿಂದ ಅವಳಿ ನಗರದ ನಾಗರಿಕರು ತೀವ್ರವಾಗಿ ಪರಿತಪಿಸುತ್ತಿದ್ದಾರೆ.

ಮಂಗಳವಾರ ಬೆಳಗ್ಗೆ 10.30ಕ್ಕೆ ಶ್ರೀರಾಮಸೇನೆಯ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಗದಗ ನಗರಸಭೆಯ ಪೌರಾಯುಕ್ತರ ಕಚೇರಿಯಲ್ಲಿ ಮೂತ್ರ ವಿಸರ್ಜನೆ ಮಾಡಲಿದ್ದಾರೆ ಎಂದು ಶ್ರೀರಾಮಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ತಿಳಿಸಿದ್ದಾರೆ.

ಹಾಲಕೆರೆ ಅನ್ನದಾನೇಶ್ವರ ಸ್ವಾಮೀಜಿ ಲಿಂಗೈಕ್ಯೆ : ಶೋಕದಲ್ಲಿ ಭಕ್ತರು

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ:

ತಾಲೂಕಿನ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಕಾಯಕಯೋಗಿ,‌ ತ್ರಿವಿಧ ದಾಸೋಹಿ ಡಾ.ಸಂಗನಬಸವ (ಅಭಿನವ ಅನ್ನದಾನೇಶ್ವರ) ಸ್ವಾಮೀಜಿ (85) ಅವರು ಇಂದು ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ.

ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅಪಾರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದೆ. ಇನ್ನು ಶ್ರೀಗಳ ಅಗಲಿಕೆಗೆ ಲೋಕಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಾನಗಲ್ ಶಿವಯೋಗಿ ಮಂದಿರದ ಅಧ್ಯಕ್ಷರಾಗಿದ್ದ ಶ್ರೀ ಗಳು ಉತ್ತರ ಕರ್ನಾಟಕ ಭಾಗದ ಬಡ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹದ ಮೂಲಕ ಬೆಳಕಾಗಿ ಶ್ರೀಗಳು ಶ್ರೀಮಠದಲ್ಲಿ ಇತ್ತೀಚೆಗೆ ‌ನಡೆದ ನ.8, 9 ಮತ್ತು 10 ರಂದು ಮೂರು ದಿನಗಳ ಕಾಲ ಅನ್ನದಾನೇಶ್ವರ ಶ್ರೀಗಳ ಗುರುವಂದನಾ ಹಾಗೂ ಮುಪ್ಪಿನ ಬಸವಲಿಂಗ ಸ್ವಾಮೀಜಿ‌ ಅವರ ಚರಪಟ್ಟಾಧಿಕಾರ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಹಾಲಕೆರೆಯ ಡಾ.ಅಭಿನವ ಅನ್ನದಾನ ಸ್ವಾಮೀಜಿಗಳು ಲಿಂಗೈಕ್ಯರಾದ ಹಿನ್ನಲೆಯಲ್ಲಿ ನರೇಗಲ್ ಪಟ್ಟಣದ ವರ್ತಕರ ಸಂಘದಿಂದ ಸೋಮವಾರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಗೌರವ ಸೂಚಿಸುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ 2 ಗಂಟೆಗೆ ವಿಧಿವಿಯ ಮೂಲಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಠದ ಭಕ್ತರು ತಿಳಿಸಿದ್ದಾರೆ.

ವಿವೇಕಾನಂದಗೌಡ ಪಾಟೀಲ್ ಬೆಂಬಲಿಗರಿಂದ ಸಂಭ್ರಮಾಚರಣೆ; 565 ಮತಗಳ ಅಂತರದಿಂದ ಜಯಭೇರಿ

0

ಕಸಾಪ ಜಿಲ್ಲಾಧ್ಯಕ್ಷರಾಗಿ ವಿವೇಕಾನಂದಗೌಡ ಪಾಟೀಲ್ ಆಯ್ಕೆ: ಅಭ್ಯರ್ಥಿಗಳ ಮತಗಳ ವಿವರ

ವಿಜಯಸಾಕ್ಷಿ ಸುದ್ದಿ, ಗದಗ;

ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಂದು (ಭಾನುವಾರ) ಶಾಂತಿಯುತ ಮತದಾನ ನಡೆದಿದ್ದು, ಒಟ್ಟು 2231 ಮತಗಳನ್ನು ಪಡೆಯುವ ಮೂಲಕ ವಿವೇಕಾನಂದಗೌಡ ಪಾಟೀಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕಿಶನ್ ಕಲಾಲ್ ಅವರು ಘೋಷಿಸಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಡಾ.ಶರಣು ಗೋಗೇರಿ, ಸಂಗಮೇಶ ತಮ್ಮನಗೌಡರ , ಐ.ಕೆ.ಕಮ್ಮಾರ ಅವರು ಸೋಲಿನ ಕಹಿ ಅನುಭವಿಸಿದ್ದು, ಜಿಲ್ಲೆಯಾದ್ಯಂತ ಅಬ್ಬರದ ಪ್ರಚಾರ ನಡೆಸಿದ್ದ ವಿವೇಕಾನಂದಗೌಡ ಪಾಟೀಲ್ ಹಾಗೂ ಶರಣು ಗೋಗೇರಿ ಅವರ ಮಧ್ಯೆ ನೇರ ಹಣಾಹಣಿ‌ ನಡೆಯಿತು.

ಒಟ್ಟು ಜಿಲ್ಲೆಯ 10 ಮತಗಟ್ಟೆಗಳಲ್ಲಿ 4052 ಮತಗಳು ಚಲಾವಣೆ ಆಗಿದ್ದು, ಅದರಲ್ಲಿ 28 ಮತಗಳು ತಿರಸ್ಕೃತಗೊಂಡಿವೆ. ಶೇ.67ರಷ್ಟು ಮತದಾನ ನಡೆದಿತ್ತು.

ಗೆಲುವು ಸಾಧಿಸಿರುವ ವಿವೇಕಾನಂದಗೌಡ ಪಾಟೀಲ್ 2231, ಡಾ.ಶರಣು ಗೋಗೇರಿ 1666, ಡಾ.ಸಂಗಮೇಶ ತಮ್ಮನಗೌಡರ 67 ಹಾಗೂ ಐ.ಕೆ.ಕಮ್ಮಾರ ಅವರು 60 ಮತಗಳನ್ನು ಪಡರದಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ಇದೇ ಮೊದಲ ಬಾರಿಗೆ ಕಸಾಪ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿವೇಕಾನಂದಗೌಡ ಪಾಟೀಲ್ ಅವರು ಗದಗ ತಾಲ್ಲೂಕು ಒಂದರಲ್ಲೇ 415 ಮತಗಳ ಮುನ್ನಡೆ ಸಾಧಿಸಿದ್ದು, ನರಗುಂದ, ನರೇಗಲ್ , ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ಮುಂಡರಗಿಯಲ್ಲಿ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಪಾಟೀಲ್ ಅವರು, ಹೊಳೆಆಲೂರ, ಶಿರಹಟ್ಟಿಯಲ್ಲಿ ಅಲ್ಪ ಹಿನ್ನಡೆ ಅನುಭವಿಸಿದ್ದಾರೆ.

ಜಿಲ್ಲೆಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಮತ ಎಣಿಕೆ ಕಾರ್ಯ ನಡೆಯಿತು.

ವಿವೇಕಾನಂದ ಪಾಟೀಲ ಅವರು ಗೆಲುವು ಸಾಧಿಸುತ್ತಿದ್ದಂತೆಯೇ ಬೆಂಬಲಿಗರು ಸಂಭ್ರಮ ಪಟ್ಟರು.

ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶರಣೇಗೌಡ ಆಯ್ಕೆ

0

-334 ಮತಗಳ ಅಂತರದ ಗೆಲುವು

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕಳೆದ ಕೆಲ ದಿನಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿದ್ದ ಶರಣೇಗೌಡ ಪೊಲೀಸ್‌ಪಾಟೀಲ‌ ಹೇರೂರು 334 ಮತಗಳ ಅಂತರದಿಂದ ಗೆಲುವಯ ಸಾಧಿಸಿದ್ದಾರೆ.

ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 8,925 ಮತಗಳ ಪೈಕಿ 5,779 ಮತಗಳು ಚಲಾವಣೆಯಾಗಿದ್ದು ಕಣದಲ್ಲಿ ಉಳಿದಿದ್ದ ಶರಣೇಗೌಡ ಪೊಲೀಸ್‌ಪಾಟೀಲ ಹೇರೂರು ಅವರು 2,816 ಮತಗಳು, ವೀರಪ್ಪ ಮಲ್ಲಪ್ಪ ನಿಂಗೋಜಿ 2,482 ಮತಗಳು ಹನುಮಂತಪ್ಪ ಅಂಡಗಿ 375 ಹಾಗೂ ಹನುಮಂತಪ್ಪ ವಡ್ಡರ್ 25 ಮತಗಳನ್ನು ಪಡೆದಿದ್ದಾರೆ. 81 ಮತಗಳು ತಿರಸ್ಕೃತಗೊಂಡಿವೆ.

ಟ್ರಾಕ್ಟರ್ ಗೆ ಕಾರು ಡಿಕ್ಕಿ; ಬಾಲಕಿ ಸೇರಿ ಮೂವರು ಸಾವು, ಮಹಿಳೆ ಗಂಭೀರ

ವಿಜಯಸಾಕ್ಷಿ ಸುದ್ದಿ, ಡಂಬಳ;

ಮೆಕ್ಕೆಜೋಳ ತುಂಬಿಕೊಂಡು ಡಂಬಳ‌ ಗ್ರಾಮಕ್ಕೆ ಹೊರಟಿದ್ದ ಟ್ರಾಕ್ಟರ್ ಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಮೇತ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.

ಸಮೀಪದ ಮುಂಡರಗಿ -ಮೇವುಂಡಿ ಮಧ್ಯ ಈ ದುರ್ಘಟನೆ ನಡೆದಿದೆ.

ಶಿವಾನಂದಯ್ಯ ಶಿವಲಿಂಗಯ್ಯ ಹಿರೇಮಠ, ತಾಯಿ ಅನಸೂಯಾ ಶಿವಲಿಂಗಯ್ಯ ಹಿರೇಮಠ (65) ಶಿವಾನಂದಯ್ಯ ನ ಪುತ್ರಿ 6 ವರ್ಷದ ನಮಸ್ವಿ ಮೃತ ದುರ್ಧೈವಿಗಳು. ಪತ್ನಿ ಗಿರಿಜಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಹುಬ್ಬಳ್ಳಿಗೆ ಹೊರಟಿತ್ತು ಎನ್ನಲಾಗಿದೆ. ಹುಬ್ಬಳ್ಳಿಯಿಂದ ಮುಂಡರಗಿ ತಾಲೂಕಿನ ಸಿಂಗಟಾಲೂರು ವೀರಭದ್ರೇಶ್ವರ ದೇವರು ದರ್ಶನ ಪಡೆದು ವಾಪಾಸು ಹೋಗುವಾಗ ಈ ದುರಂತ ಸಂಭವಿಸಿದೆ.

KA -25-AB 2702 ನಂಬರ್ ಇರೋ ಕಾರಿನಲ್ಲಿ ಇದ್ದವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮುಂಡರಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಬ್ಬಳ್ಳಿಯ ಅಮರಗೋಳ ಬಳಿಯ ಕೆಎಚ್ ಬಿ ಕಾಲೋನಿಯ ನಿವಾಸಿಗಳು ಎನ್ನಲಾಗಿದೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಸಾಪ ಚುನಾವಣೆ: ನಾಲ್ವರಲ್ಲಿ ಯಾರಿಗೆ ಅದೃಷ್ಟ?

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ-2021
10 ಮತಗಟ್ಟೆ; 5,999 ಸದಸ್ಯರಿಗೆ ಮತದಾನದ ಹಕ್ಕು

ವಿಜಯಸಾಕ್ಷಿ ಸುದ್ದಿ, ಗದಗ:

ಮೈಸೂರು ಮಹಾರಾಜರು ಸ್ಥಾಪಿಸಿದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಕಸಾಪದ ನೂತನ ಕಾರ್ಯಕಾರಿ ಸಮಿತಿ ಆಯ್ಕೆಗಾಗಿ ಭಾನುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳು ಶತಮಾನ ಕಂಡ ಸಂಸ್ಥೆಗೆ ಗೆಲುವು ಸಾಧಿಸುವ ಮೂಲಕ ಹೊಸ ಭರವಸೆ ಮೂಡಿಸುವ ತವಕದಲ್ಲಿದ್ದಾರೆ.

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಗೆಲುವಿಗಾಗಿ ಜಿಲ್ಲೆಯಾದ್ಯಂತ ಸಂಚರಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ರಾಜಕೀಯ ಪಕ್ಷಗಳು, ನಾಯಕರು ನಾಚುವಂತಹ ರೀತಿಯಲ್ಲಿ ಪ್ರಚಾರ ನಡೆಸಿರುವ ಕಸಾಪ ಅಭ್ಯರ್ಥಿಗಳು ಸದ್ಯ ಕೊನೆಯ ಕ್ಷಣದ ಕಸರತ್ತು ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಒಟ್ಟು 5,999 ಆಜೀವ ಸದಸ್ಯರಿದ್ದು, ಶೇ. 70 ಪಾಲು ಸರ್ಕಾರಿ ನೌಕರರೇ ಇದ್ದಾರೆ. ಗದಗ- 1,901, ಶಿರಹಟ್ಟಿ- 298, ಲಕ್ಷ್ಮೇಶ್ವರ- 613, ನರೇಗಲ್- 196, ಹೊಳೆಆಲೂರ- 300, ರೋಣ- 453, ನರಗುಂದ- 662, ಮುಂಡರಗಿ- 782 ಹಾಗೂ ಗಜೇಂದ್ರಗಡ 794 ಮತದಾರರಿದ್ದಾರೆ. 10 ಮತಗಟ್ಟೆಗಳನ್ನು ತೆರೆಯಲಾಗಿದೆ.

ತಮ್ಮನಗೌಡರ, ಕಮ್ಮಾರ ಏಕಾಂಗಿ ಹೋರಾಟ:

ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಡಾ| ಶರಣು ಗೋಗೇರಿ ಹಾಗೂ ವಿವೇಕಾನಂದಗೌಡ ಪಾಟೀಲ್ ಬಿರುಸಿನ ಪ್ರಚಾರ ನಡೆಸಿದ್ದು, ಇಬ್ಬರ ನಡುವೆ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಕಳೆದ ಬಾರಿ ಪರಾಜಿತಗೊಂಡ ಸಂಗಮೇಶ ತಮ್ಮನಗೌಡರ ಹಾಗೂ ಐ.ಕೆ. ಕಮ್ಮಾರ ಏಕಾಂಗಿ ಹೋರಾಟ ನಡೆಸಿದ್ದಾರೆ. ಅಬ್ಬರವಿಲ್ಲದೆ ಜಿಲ್ಲಾದ್ಯಂತ ಓಡಾಡಿ, ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಮತ ನೀಡುವಂತೆ ಮನವಿ ಮಾಡಿದ್ದಾರೆ. ಮತದಾರರ ಒಲವು ಯಾರಿಗೆ ಎಂಬುದು ಫಲಿತಾಂಶದಿಂದಲೇ ತಿಳಿಯಬೇಕಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಲ್ಲಿ ನನ್ನ ಬಗ್ಗೆ ಒಳ್ಳೆಯ ವಾತಾವರಣವಿದ್ದು, ಬದಲಾವಣೆ ಆಗಬೇಕೆಂದು ಬಯಸಿದ್ದಾರೆ. ಐದು ವರ್ಷಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸಗಳು ಆಗಿಲ್ಲ. ಸಾಹಿತ್ಯಿಕ ಚಟುವಟಿಕೆಗಳೂ ನಡೆಯದೆ ಕಸಾಪದಿಂದ ಸಾಹಿತಿಗಳು ದೂರ ಸರಿದಿದ್ದಾರೆ. ಬದಲಾವಣೆ ಆಗಬೇಕೆಂಬುವುದು ಎಲ್ಲರ ಅಭಿಪ್ರಾಯ ಆಗಿದ್ದು, ಗೆಲ್ಲುತ್ತೇನೆಂಬ ನಂಬಿಕೆ ಇದೆ.

ವಿವೇಕಾನಂದಗೌಡ ಪಾಟೀಲ್, ಅಭ್ಯರ್ಥಿ

ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ರಾಜಕಾರಣ, ಗುಂಪುಗಾರಿಕೆ ಮಾಡದೆ ಒಂದು ಸಿದ್ಧಾಂತದ ಮೇಲೆ ಸರಳ ರೂಪದಲ್ಲಿ ಚುನಾವಣೆ ಮಾಡುತ್ತಿದ್ದೇನೆ. ಸೋಲು ಗೆಲುವು ಮುಖ್ಯವಲ್ಲ. ಆದರೆ, ಚುನಾವಣೆ ಹೀಗೆ ಇರಬೇಕೆಂದು ರಾಜ್ಯಕ್ಕೆ ತೋರಿಸುತ್ತಿದ್ದೇನೆ. ಜಿಲ್ಲೆಯಾದ್ಯಂತ ಸಾಕಷ್ಟು ಅಡ್ಡಾಡಿ ಪ್ರಚಾರ ಮಾಡಿದ್ದೇನೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದೆ. ಈ ಬಾರಿ ಗೆಲ್ಲುವ ಆಶಾವಾದವಿದೆ.

ಸಂಗಮೇಶ ತಮ್ಮನಗೌಡರ, ಅಭ್ಯರ್ಥಿ

ಜಿಲ್ಲೆಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಗೆಲ್ಲುವುದು ಬಹುತೇಕ ಖಚಿತ. ರಾಜ್ಯದಲ್ಲಿಯೇ ಹೆಚ್ಚು ಮತಗಳನ್ನು ಪಡೆಯುವ ಮೂಲಕ ದಾಖಲೆಯ ಅಂತರದಲ್ಲಿ ಗೆಲ್ಲಬೇಕೆಂದು ಪ್ರಯತ್ನಿಸುತ್ತಿದ್ದೇನೆ.

ಡಾ| ಶರಣು ಗೋಗೇರಿ, ಕಸಾಪ ನಿಕಟಪೂರ್ವ ಅಧ್ಯಕ್ಷ

ನನ್ನ ಮತ್ತು ನನ್ನ ಸಾಹಿತ್ಯಿಕ ಸಾಧನೆಯನ್ನು ಗದುಗಿನ ಜನ ಬಹಳ ಹತ್ತಿರದಿಂದ ನೋಡಿದ್ದಾರೆ. ಸರ್ಕಾರಿ ನೌಕರರಿಗೆ ವಿದ್ಯಾರ್ಥಿಗಳ ಸೇವೆ ಮಾಡುವುದೇ ಕಷ್ಟ, ಇನ್ನು ಕಸಾಪಕ್ಕೆ ಪೂರ್ಣಾವಧಿಯ ಸೇವೆ ಒದಗಿಸಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳ ಅವಧಿ ಆಜೀವ ಸದಸ್ಯರಿಗೆ ತೃಪ್ತಿದಾಯಕ ಆಗಿರದ ಕಾರಣ ಜನರು ನನಗೆ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ. ಜಯ ನನ್ನದೇ.

ಐ.ಕೆ. ಕಮ್ಮಾರ, ಅಭ್ಯರ್ಥಿ

ಕಳೆದ ಬಾರಿಯ ಫಲಿತಾಂಶ

ಕಳೆದ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿದ್ದ ಆರು ಜನ ಅಭ್ಯರ್ಥಿಗಳ ಪೈಕಿ ಡಾ| ಶರಣು ಗೋಗೇರಿ ಹಾಗೂ ಸಂಗಮೇಶ ತಮ್ಮನಗೌಡರ ಪುನಃ ಅಖಾಡಕ್ಕಿಳಿದ್ದಾರೆ. ಕಳೆದ ಬಾರಿ ಒಟ್ಟು 2,500 ಮತಗಳು ಚಲಾವಣೆಯಾಗಿದ್ದವು. ಡಾ| ಶರಣು ಗೋಗೇರಿ 1,250 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಡಾ| ಶಿವಪ್ಪ ಕುರಿ 650 ಮತ ಪಡೆದು ಠೇವಣಿ ಉಳಿಸಿಕೊಂಡಿದ್ದರು. ಸಂಗಮೇಶ ತಮ್ಮನಗೌಡರ 238 ಮತ ಗಳಿಸಲಷ್ಟೇ ಶಕ್ತರಾಗಿದ್ದರು. ಎಸ್.ಬಿ.ಕುಷ್ಠಗಿ 377 ಮತ ಪಡೆದಿದ್ದರೆ, ಮಂಜುನಾಥ ಡೋಣಿ ಹಾಗೂ ಮಹಿಳಾ ಅಭ್ಯರ್ಥಿ ಪಾಟೀಲ್ ಸೋಲಿನ ಕಹಿಯುಂಡಿದ್ದರು.

error: Content is protected !!