Home Blog Page 3240

ಕಾಂಗ್ರೆಸ್‌ನಲ್ಲಿ ಯಾವುದೇ ಬಿರುಕಿಲ್ಲ: ಡಿಸಿಎಂ ಡಿಕೆಶಿ

0

ಬೆಳಗಾವಿ: “ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. ೧೩೬ ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್. ಪಟೇಲರ ಭಾಷಣ ಕೇಳಿಸಿಕೊಳ್ಳಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಬೆಳಗಾವಿಯ ಶಾಸಕರು, ಸಚಿವರು ನಿಮ್ಮನ್ನು ಸ್ವಾಗತಿಸಲು ಬರಲಿಲ್ಲ, ಸತೀಶ್ ಜಾರಕಿಹೊಳಿ ಅವರಿಗೂ ನಿಮಗೂ ಮುನಿಸಿದೆಯೇ ಎನ್ನುವ ಪ್ರಶ್ನೆಗೆ ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.

“ನೆನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜೊತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮಿ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ” ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಹಾಗೂ ನಿಮ್ಮ ನಡುವೆ ಬಿರುಕು ಮೂಡಿದೆಯೇ ಎಂದು ಕೇಳಿದಾಗ “ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನನ್ನನ್ನು ಸ್ವಾಗತಿಸಲು ಬರಲಿಲ್ಲ, ಅದು ಇದು, ಎಂದು ನೀವೇ ಏನೇನೋ ಹೇಳುತ್ತೀರಿ?. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ” ಎಂದರು.
“ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲಾ ಶಾಸಕರು ನಮ್ಮವರೇ. ನಿಮಗೂ ಹಾಗೂ ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತೀರಿ” ಎಂದರು.ಸತೀಶ್ ಅವರು ಶಾಸಕರ ಜೊತೆ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ, ಹೌದು. ಈ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದೆವು” ಎಂದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ “ಜೆ.ಎಚ್. ಪಟೇಲರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ” ಎಂದು ತಿರುಗೇಟು ನೀಡಿದರು.”ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲು, ಈ ಭಾಗದ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲು ಹಾಗೂ ಮುಖ್ಯವಾಗಿ ಹುಕ್ಕೇರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದರು.

ಕೇಂದ್ರದಿಂದ ಹಿಂಗಾರು ಬೆಳೆಗೆ ಬೆಲೆ ಹೆಚ್ಚಳ: ಸಚಿವ ಪ್ರಲ್ಹಾದ್ ಜೋಶಿ

0

ಹುಬ್ಬಳ್ಳಿ :ಕೇಂದ್ರದಿಂದ ಹಿಂಗಾರು ಬೆಳೆಗೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಮುಂಬರುವ 2024-25 ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಗೋಧಿ ಸೇರಿ ಪ್ರಮುಖ ಆರು ಹಿಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಹೆಚ್ಚಳ ಮಾಡಿದೆ. ರೈತರ ಆದಾಯ ವೃದ್ಧಿಸುವ ಜತೆಗೆ ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ ನೀಡಲು ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದು ತಿಳಿಸಿರುವ ಅವರು ಈ ಕುರಿತು ಸಚಿವ ಸಂಪುಟ ಸಭೆ ಅನುಮೋದನೆ ನೀಡಿರುವ ಪ್ರಕಾರ ಚನ್ನಂಗಿ ಬೇಳೆ ಪ್ರತಿ ಕ್ವಿಂಟಾಲ್​ಗೆ 425 ರೂ. ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಟ್ಟು ಒಂದು ಕ್ವಿಂಟಾಲ್​ಗೆ 6,425 ರೂ. ನಿಗದಿ ಮಾಡಲಾಗಿದೆ. ಗೋಧಿಗೆ 150 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 2,275 ರೂ. ನಿಗದಿ ಮಾಡಲಾಗಿದೆ. ಕಡಲೆ 105 ರೂ. ಹೆಚ್ಚಳ ಮಾಡುವುದರ ಮೂಲಕ ಒಟ್ಟು ಒಂದು ಕ್ವಿಂಟಾಲ್​ಗೆ 5,440 ರೂ. ನಿಗದಿ ಮಾಡಲಾಗಿದೆ.

ಬಾರ್ಲಿಗೆ 115 ರೂ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು ಒಂದು ಕ್ವಿಂಟಾಲ್ ಗೆ 1,850 ರೂ. ನಿಗದಿ ಮಾಡಲಾಗಿದೆ. ಸಾಸಿವೆಗೆ 200 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿದ್ದು, ಒಂದು ಕ್ವಿಂಟಾಲ್​ಗೆ 5,650 ರೂ. ನಿಗದಿ ಮಾಡಲಾಗಿದೆ. ಕುಸುಬೆಗೆ 150 ರೂ. ಹೆಚ್ಚಳ ಮಾಡುವುದರೊಂದಿಗೆ ಒಂದು ಕ್ವಿಂಟಾಲ್ ಗೆ 5,800 ರೂ. ನಿಗದಿ ಪಡಿಸಲಾಗಿದೆ. 2013-14ನೇ ಸಾಲಿನ ಬೆಂಬಲ ಬೆಲೆ ಗಮನಿಸಿದರೆ, ಈ ಬಾರಿ ಶೇ. 50 ರಷ್ಟು ಹೆಚ್ಚಳ ಮಾಡಿರುವುದು ಮೋದಿ ಸರ್ಕಾರದ ವಿಶೇಷ ಎಂದು ಸಚಿವ ಜೋಶಿ ಹೇಳಿದ್ದಾರೆ.ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗ ಸೂಚಿಗಳನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ಏಜೆಂಟ್ ನವರಂತೆ ಕಾಂಗ್ರೆಸ್ ವರ್ತನೆ- ಎಸ್ ಮುನಿಸ್ವಾಮಿ

0

ಕೋಲಾರ‌;-ಪಾಕಿಸ್ತಾನದ ಏಜೆಂಟ್ ನವರಂತೆ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಎಸ್ ಮುನಿಸ್ವಾಮಿ ಹೇಳಿದ್ದಾರೆ.ನಗರದ ಹೊಸ ಬಸ್ ನಿಲ್ದಾಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆಯನ್ನು ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 5 ರಾಜ್ಯಗಳಲ್ಲಿ ನಡೆಯುತ್ತಿರುವಂತಹ ಚುನಾವಣೆಗೆ ಹಣ ಕೊಡಡುವುದಕ್ಕೆ ಈ ಕಮಿಷನ್ ಮಾಡಲಾಗುತ್ತಿದೆ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ೧೦೦ ಕೋಟಿ ಹಣ ಸಿಕ್ಕಿದೆ ಇದಕ್ಕೆ ಮಾನ್ಯ ಮುಖ್ಯ ಮಂತ್ರಿಗಳು ಸಿದ್ದರಾಮಯ್ಯ ಡಿಕೆಶಿವಕುಮಾರ್ ರಾಜೀನಾಮೆ ಕೊಟ್ಟು ಈ‌ ರಾಜ್ಯದ ಜನತೆಯನ್ನು ಕ್ಷಮೆ ಕೇಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ‌ ರೈತರನ್ನು ಒಕ್ಕಲೆಬಿಸುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ನವರು ಪಾಕಿಸ್ತಾನ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಈ ಸರ್ಕಾರ ತುಂಬ ದಿನ ಉಳಿಯುವುದಿಲ್ಲ ಸಿದ್ದರಾಮಯ್ಯ ಸರ್ಕಾರ ದಲಿತ ವಿರೋಧಿ ಸರ್ಕಾರ ಕೋಮುಗಲಭೆಗಳನ್ನು ಸೃಷ್ಟಿ ಮಾಡುತ್ತಿರುವ ಸರ್ಕಾರ ಕೂಡಲೇ ಸಿಎಂ‌ ಮತ್ತು ಡಿಕೆಶಿವಕುಮಾರ್ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

Good News; ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಅಭ್ಯರ್ಥಿಗಳ ಕೌನ್ಸೆಲಿಂಗ್ ದಿನಾಂಕ ಪ್ರಕಟ

0

ಬೆಂಗಳೂರು;- ಶಿಕ್ಷಣ ಇಲಾಖೆಯಿಂದ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ  ಗುಡ್ ನ್ಯೂಸ್ ಸಿಕ್ಕಿದೆ. ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ದಿನಾಂಕ  ಪ್ರಕಟವಾಗಿದೆ.ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ  ನೇಮಕಾತಿ-2022ರ ಸಂಬಂಧ 2023ರ ಮಾರ್ಚ್ 9ರಂದು ಪ್ರಕಟಿತ 1:1 ಅನುಪಾತದ ಮುಖ್ಯ ಆಯ್ಕೆ ಪಟ್ಟಿಯಲ್ಲಿನ ಅರ್ಹ ಅಭ್ಯರ್ಥಿಗಳಿಗೆ ಅಕ್ಟೋಬರ್ 21ರಂದು ಕೌನ್ಸೆಲಿಂಗ್ ನಡೆಯಲಿದೆ.

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ, ಬಿಬಿಎಂಪಿ ವ್ಯಾಪ್ತಿಯ ಶೇ.8 ಹುದ್ದೆಗಳಿಗೆ ಸಂಬಂಧಿಸಿದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಶೈಕ್ಷಣಿಕ ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ. ಅ.21ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಕೌನ್ಸೆಲಿಂಗ್ ಆಯೋಜಿಸಲಾಗಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಇಂದು ನೀರು ಪೂರೈಕೆ ಎಲ್ಲೆಲ್ಲಿ….?

0

ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ಟೋಬರ್‌ 19 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ

ವಾರ್ಡ್ ನಂ. 27 ಕಾಶಿ ವಿಶ್ವನಾಥನಗರ, ಮಾರುತಿ ದೇವಸ್ಥಾನದ ಲೈನ್, ಅಸೂಟಿಯವರ ಲೈನ್, ಕಣವಿ ಅವರ ಲೈನ್, ಮಾಳಿಕೋಟಿಯವರ ಸಂದಿ, ವಿ ಆರ್ ಎಲ್ ಆಫೀಸ್ ಲೈನ್, ವಾರ್ಡ್ ನಂ. 30 ಟಿವಿಎಸ್ ಶೋರೂಮ್, ಮುತ್ತಿನಪೆಂಡಿಮಠ ಲೇಔಟ್, ಅಬ್ಬಿಗೇರಿ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಪಾಸಿಯವರ ಲೈನ್, ವಾರ್ಡ್ ನಂ. 22 ದೊಡ್ಡ ಮಸೀದಿ ಹತ್ತಿರ ಹಿಂದಿನ ಭಾಗ ಮುಂದಿನ ಭಾಗ, ಕನ್ನಡ ಶಾಲೆ ಲೈನ್, ಶುದ್ಧ ನೀರಿನ ಘಟಕ ಭಾಗ-1,2,3, ವಾರ್ಡ್ ನಂ. 1 ಎಸ್ ಎಂ ಕೃಷ್ಣ ನಗರ ಕೆಳಗಿನ ಭಾಗ ಮೇಲಿನ ಭಾಗ, ಆದಿಶಕ್ತಿಯ ಗುಡಿಯ ಸುತ್ತಮುತ್ತಲಿನ ಭಾಗಗಳು, ಕ್ರಿಶ್ಚಿಯನ್‌ ಕಾಲೋನಿ, ಆಟೋ ಕಾಲೋನಿಯ ಕೆಲವು ಭಾಗಗಳು.

ವಾರ್ಡ್ ನಂ. 35, 34, 30 ಈಡಬ್ಲ್ಯೂಎಸ್, ಮೂರು ಶಿಳ್ಳಿನ ವಕಾರ, ಹೂಗಾರ ಪ್ಲಾಟ್, ಡಿಪೋ ಹಿಂದಿನ ಭಾಗ, ವಡ್ಡರಗೇರಿ ಮೇಲಿನ ಭಾಗ, 46 ಪ್ಲಾಟ್, ಶಿವಾನಂದ ನಗರ, ಕುಂಚಿ ಕೊರವರ ಓಣಿ, ಬಸವೇಶ್ವರ ಸ್ಕೂಲ್ ಲೈನ್, ವಾರ್ಡ್ ನಂ. 29 ಸಾಯಿ ನಗರ, ಪಂಚಾಕ್ಷರಿ ನಗರ, ಕಲಾಮಂದಿರ ನಗರ, ಮಸೂತಿ ಲೈನ್ ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡೆತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ ನಗರದಲ್ಲಿ ಸಾರ್ವಜನಿಕರ ಎದುರಲ್ಲೇ ಚಾಕು ಇರಿತ; ರಕ್ತದ ಮಡುವಿನಲ್ಲಿ ಒದ್ದಾಡಿದ ಸುನೀಲ್….

ಪೊಲೀಸರ ಭೇಟಿ, ಪರಿಶೀಲನೆ…..

ವಿಜಯಸಾಕ್ಷಿ ಸುದ್ದಿ, ಗದಗ

ಹಾಡಹಗಲೇ ಸಾರ್ವಜನಿಕವಾಗಿ ಗೆಳೆಯರಿಬ್ಬರ ಮಧ್ಯೆ ಉಂಟಾದ ಕಲಹ ವಿಕೋಪಕ್ಕೆ ಹೋಗಿ ಚಾಕು ಇರಿದ ಘಟನೆ ಗದಗ ನಗರದಲ್ಲಿ ಮಧ್ಯಾಹ್ನ ನಡೆದಿದೆ.

ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯ ಎದುರು ಇರುವ ದೀಪಾ ಇಡ್ಲಿ ಸೆಂಟರ್ ಮುಂದೆ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಸುನೀಲ ಹಾಗೂ ದೇವು ಎಂಬ ಗೆಳೆಯರ ಮಧ್ಯೆ ಹಣಕಾಸು ಹಾಗೂ ತಾಯಿಗೆ ನಿಂಧಿಸಿದ ಆರೋಪದ ಹಿನ್ನೆಲೆಯಲ್ಲಿ ಸುನೀಲ್‌ಗೆ ದೇವು ಎಂಬಾತ ಹೊಟ್ಟೆ ಹಾಗೂ ಕಿವಿಗೆ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದಿದ್ದಾನೆ. ಇದರಿಂದಾಗಿ ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ನಂತರ ಸುದ್ದಿ ತಿಳಿದ ಪೊಲೀಸರು ಗಾಯಾಳು ಸುನೀಲ್‌ನನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿ ದೇವು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ನರೇಗಲ್ಲ ಬಳಿ ಭೀಕರ ಅಪಘಾತ; ಬಾಲಕ ಸೇರಿ ಆರು ಜನರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಮಕ್ಕಳು ಸೇರಿ ಹತ್ತಕ್ಕೂ ಹೆಚ್ಚು ಜನರು ಗಾಯ…..

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾಸುಮೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.

ನರೇಗಲ್ಲ ಸಮೀಪದ ನಿಡಗುಂದಿಕೊಪ್ಪದ ಬಳಿ ಈ ದುರ್ಘಟನೆ ಜರುಗಿದ್ದು, ಅಪಘಾತದಲ್ಲಿ ಮೂರು ಜನ ಮಹಿಳೆಯರು, ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ಹಾಗೂ ಅಪ್ಜಲಪೂರ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದು, ನಾಲ್ವರು ಮಕ್ಕಳು ತೀವ್ರ ಗಾಯಗೊಂಡಿದ್ದಾರೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಹ ಸಣ್ಣಪುಟ್ಟ ಗಾಯಗಳು ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಅಪ್ಜಲಪೂರದ  ಸಚಿನ್ ಕತ್ತಿ 31, ದ್ರಾಕ್ಷಾಯಣಿ ಕತ್ತಿ-30 ಹಾಗೂ  ಮಾದನ ಹಿಪ್ಪರಗಿಯ ಶಿವಕುಮಾರ್ ಕಲಶೆಟ್ಟಿ 50, ಚಂದ್ರಕಲಾ 42, ರಾಣಿ-32 ಹಾಗೂ ದಿಂಗಾಲೇಶ್ವರ ಎಂಬ ಐದು ವರ್ಷದ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ಅಲ್ಲಮಪ್ರಭು ಎಂಬ ಬಾಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರು ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ವರ ಮಠ ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದರ್ಶನಕ್ಕೆ ಬರುತ್ತಿದ್ದರು ಎನ್ನಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನರೇಗಲ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ನೆರವಿನೊಂದಿಗೆ ಶವಗಳನ್ನು ಹೊರ ತೆಗೆದು ಶವಾಗಾರಕ್ಕೆ ರವಾನಿಸಿದರು.

ಅಂದರ್-ಬಾಹರ್ ಜೂಜಾಟ; ಸೆಕ್ಯೂರಿಟಿ ಗಾರ್ಡ್, ವರ್ತಕ ಸೇರಿ 10 ಜನರ ಬಂಧನ

ಗ್ರಾಮೀಣ ಪೊಲೀಸರ ಕಾರ್ಯಾಚರಣೆ….

ವಿಜಯಸಾಕ್ಷಿ ಸುದ್ದಿ, ಗದಗ

ದೇವಸ್ಥಾನದ ಮುಂಬಾಗದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಸೆಕ್ಯೂರಿಟಿ ಗಾರ್ಡ್, ವರ್ತಕ, ಪ್ಲಂಬರ್ ಸೇರಿದಂತೆ ಹತ್ತು ಜನರನ್ನು ಬಂಧಿಸಿರುವ ಗ್ರಾಮೀಣ ಪೊಲೀಸರು ಒಂದು ಲಕ್ಷಕ್ಕೂ ಹೆಚ್ಚು ಹಣ ವಶಪಡಿಸಿಕೊಂಡ ಘಟನೆ ಜರುಗಿದೆ.

ಗದಗ ತಾಲೂಕಿನ ದುಂದೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನದ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಉಮೇಶ್ ನಿಂಗಪ್ಪ ಕೌಜಗೇರಿ, ಮಂಜುನಾಥ ಶಂಕ್ರಪ್ಪ ಅಕ್ಕಿ, ರುದ್ರಪ್ಪ ಹನಮಪ್ಪ ತಳವಾರ, ಬಸವರಾಜ್ ಶಿವಪ್ಪ ಚುರ್ಚಿಹಾಳ, ಸುರೇಶ್ ಪಕ್ಕೀರಪ್ಪ ದುಂದೂರು, ಮುತ್ತು ಯಲ್ಲಪ್ಪ ಓಲೇಕಾರ, ಶ್ರೀನಿವಾಸ್ ಭೋಜಪ್ಪಗೌಡ ಮರಿಯಪ್ಪಗೌಡ್ರ, ರಾಮನಗೌಡ ಹನುಮಂತಗೌಡ ಪಾಟೀಲ, ಚಂದ್ರಪ್ಪ ದೇವೇಂದ್ರಪ್ಪ ವಾಲೀಕರ ಹಾಗೂ ಯಲ್ಲಪ್ಪ ಹನಮಪ್ಪ ಯಾವಗಲ್ ಎಂಬುವವರನ್ನು ಗದಗ ಗ್ರಾಮೀಣ ಪೊಲೀಸ್ ಠಾಣೆಯ ಕಿರಣ್‌ಕುಮಾರ್ ಕೆ.ಎಸ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 1 ಲಕ್ಷ 15 ಸಾವಿರ ದ ಇಪ್ಪತ್ತು ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಕಲಂ 87ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 279/2023, ಎನ್.ಸಿ 44/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ್-ಬಾಹರ್ ಜೂಜಾಟ; ಐದು ಜನರ ಬಂಧನ

ಹೊಂಬಳ ಗ್ರಾಮದಲ್ಲಿ ಜೂಜಾಟ……

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕ ಗಣಪತಿ ಮುಂದೆ ರಸ್ತೆಯ ಮೇಲೆ ಅಂದರ್-ಬಾಹರ್ ಜೂಜಾಡುತ್ತಿದ್ದ ಐವರನ್ನು ಗ್ರಾಮೀಣ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಗದಗ ತಾಲೂಕಿನ ಹೊಂಬಳ ಗ್ರಾಮದ ಪ್ಯಾಟಿ ಅವರ ಓಣಿಯಲ್ಲಿ ಪ್ರತಿಷ್ಟಾಪನೆ ಮಾಡಿದ್ದ ಸಿದ್ಧಲಿಂಗೇಶ್ವರ ಸಾರ್ವಜನಿಕ ಗಣಪತಿ ಮುಂಬಾಗ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವೀರಣ್ಣ ತಂದೆ ಮಲ್ಲಪ್ಪ ನವಲಗುಂದ, ಶಂಕ್ರಪ್ಪ ತಂದೆ ಚನ್ನಪ್ಪ ಲದ್ದಿ, ಮಾಬುಸಾಬ ತಂದೆ ದೊಡ್ಡ ಹಸನಸಾಬ ಹಾದಿಮನಿ, ಇಮಾಮಸಾಬ್ ದಾವಲಸಾಬ ದಾಯಮ್ಮನವರ ಹಾಗೂ ಹನುಮಂತಪ್ಪ ತಂದೆ ಫಕ್ಕೀರಪ್ಪ ಮಾಗಳದ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 8400 ರೂ.ಗಳನ್ನು ವಶಪಡಿಸಿಕೊಂಡಿದ್ದು, ಕಲಂ 87,ಕೆ.ಪಿ ಆ‌್ಯಕ್ಟ್ ಕ್ರೈಮ್ ನಂ. 0284/2023, ಎನ್.ಸಿ 46/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ಮೆರವಣಿಗೆ ಬೇಗ ಮುಗಿಸಿ ಅಂದಿದ್ದಕ್ಕೆ ಪೊಲೀಸ್ ಮೇಲೆ ಹಲ್ಲೆ…

0

ಮೂವರಿಂದ ಕರ್ತವ್ಯಕ್ಕೆ ಅಡ್ಡಿ…..

ವಿಜಯಸಾಕ್ಷಿ ಸುದ್ದಿ, ಗದಗ

ಗಣೇಶ ವಿಸರ್ಜನಾ ಮೆರವಣಿಗೆ ಬೇಗ ಮುಗಿಸಿ ಎಂದ ಪೊಲೀಸ್ ಒಬ್ಬರ ಮೇಲೆ ಮೂವರು ಹಲ್ಲೆ ಮಾಡಿದ ಘಟನೆ ಮೊನ್ನೆ ರಾತ್ರಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೊನ್ನೆ ಗದಗ ತಾಲೂಕಿನ ಚಿಂಚಲಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬಂದೋಬಸ್ತ್ ‌ಗೆ ತೆರಳಿದ್ದ ಪೇದೆ ಗಿರೀಶ್ ಕುರಹಟ್ಟಿ, ಮೆರವಣಿಗೆ ಬೇಗ ಮುಗಿಸಿ ಅಂದಿದ್ದೆ ತಡ, ಅದೇ ಗ್ರಾಮದ ದುರ್ಗಾನಗರದ ವಿರೇಂದ್ರ ತಂದೆ ಮಂಜಪ್ಪ ಲಕ್ಷ್ಮೀಗುಡಿ, ರಾಕೇಶ್ ತಂದೆ ಹುಚ್ಚಪ್ಪ ವಡ್ಡರ ಹಾಗೂ ಮುದಕಪ್ಪ ತಂದೆ ಹನಮಂತಪ್ಪ ವಡ್ಡರ ಎಂಬ ಮೂವರು ಆರೋಪಿಗಳು, ಪೇದೆ ಜೊತೆಗೆ ವಾಗ್ವಾದಕ್ಕಿಳಿದರು.

ಏಕವಚನದಲ್ಲಿ ಮಾತನಾಡಿದ ಆರೋಪಿಗಳು, ಪೇದೆಯ ಯುನಿಪಾರ್ಮ್ ಕಾಲರ್ ಹಿಡಿದು ಜಗ್ಗಾಡಿ, ಶರ್ಟ್ ಹರಿದು, ಒಬ್ಬ ಅಡ್ಡಗಟ್ಟಿ ಕಪಾಳಕ್ಕೆ ಹೊಡೆದರೆ, ಮತ್ತೊಬ್ಬ ಎದೆಗೆ ಹಾಗೂ ಹೊಟ್ಟೆಯ ಕೆಳಭಾಗಕ್ಕೆ ಹೊಡೆದು ಒಳಪೆಟ್ಟುಪಡಿಸಿದ್ದಾನೆ. ಅಷ್ಟೇ ಅಲ್ಲದೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ.

ಪೇದೆ ಗಿರೀಶ್ ಕುರಹಟ್ಟಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮುಳಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ 0065/2023, IPC 1860(U/s-341,332,353,504,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!