ಕೇಂದ್ರ ಸರ್ಕಾರ ಶೀಘ್ರದಲ್ಲೇ ಸಾಮಾನ್ಯ ಜನರಿಗೆ ಒಳ್ಳೆಯ ಸುದ್ದಿಯನ್ನು ನೀಡಲಿದೆ. ಔಷಧ ಬೆಲೆಗಳ ಹೊರೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಂಡಿದೆ. ವಿಶೇಷವಾಗಿ ಕ್ಯಾನ್ಸರ್, ಕ್ಷಯ ಮತ್ತು ಮಧುಮೇಹವನ್ನು ತಡೆಗಟ್ಟಲು ಬಳಸಲಾಗುವ 39 ವಿಧದ ಔಷಧಗಳು ಮತ್ತು ಲಸಿಕೆಗಳ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಲಿವೆ. ಇದಕ್ಕೆ ಅನುಗುಣವಾಗಿ, ಕೇಂದ್ರ ಆರೋಗ್ಯ ಸಚಿವಾಲಯವು ರಾಷ್ಟ್ರೀಯ ತುರ್ತು ಔಷಧಿಗಳ ಪಟ್ಟಿಯನ್ನು (NLEM) ಪರಿಷ್ಕರಿಸಿದೆ. ಈ ಪಟ್ಟಿಯಲ್ಲಿ ಸೇರಿಸಲಾದ ಔಷಧಿಗಳ ಬೆಲೆಯನ್ನು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ನಿರ್ಧರಿಸುತ್ತದೆ.
ರಾಷ್ಟ್ರೀಯ ತುರ್ತು ಔಷಧಿಗಳ ಪಟ್ಟಿಗೆ 39 ಔಷಧಿಗಳನ್ನು ಸೇರಿಸುವ ಜೊತೆಗೆ, ಕೇಂದ್ರವು ಇನ್ನೂ 16 ಔಷಧಿಗಳನ್ನು ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸುತ್ತದೆ. ಬ್ಯಾಕ್ಟೀರಿಯಾದ ಸೋಂಕನ್ನು ಕಡಿಮೆ ಮಾಡಲು ಬಳಸುವ ಔಷಧಿಗಳು ಪಟ್ಟಿಯಲ್ಲಿವೆ ಎಂಬ ಮಾಹಿತಿ. ವಿವಿಧ ಕಾರಣಗಳಿಗಾಗಿ ಇವುಗಳನ್ನು NLEM ನಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.
ಔಷಧಿ ಬೆಲೆಗಳ ಹೊರೆ ಕಡಿಮೆ, ಕೇಂದ್ರದಿಂದ ಒಳ್ಳೆಯ ಸುದ್ದಿ
ಮೊಬೈಲ್ ಕಳ್ಳನಿಗೆ ಮಹಿಳೆಯಿಂದ ಧರ್ಮದೇಟು!
ವಿಜಯಸಾಕ್ಷಿ ಸುದ್ದಿ, ಗದಗ
ನಗರದ ವಿಜಯ ಕಲಾ ಮಂದಿರ ರಸ್ತೆಯಲ್ಲಿ ಮೊಬೈಲ್ ಕಳ್ಳನಿಗೆ ಮಹಿಳೆಯೊಬ್ಬರು
ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ
ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಮಹಿಳೆ ಬಂದಿದ್ದಾಗ ಆ ಮಹಿಳೆ ಬಳಿ ಬಂದ ಯುವಕ ಅರ್ಜೆಂಟಾಗಿ ಕಾಲ್ ಮಾಡುವುದಿದೆ ಎಂದು ಹೇಳಿ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದ.
ಭಾನುವಾರ ಬಜಾರ್ ನ ಮೊಬೈಲ್ ಅಂಗಡಿ ಬಳಿ ದಿಢೀರ್ ಪ್ರತ್ಯಕ್ಷನಾದ ಕಳ್ಳನ ಗುರುತು ಹಿಡಿದ ಮಹಿಳೆ ಅಂಗಿಯ ಕಾಲರ್ ಹಿಡಿದು
ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಜನರು ಸೇರಿ ಕಳ್ಳನಿಗೆ ಒಂದೆರಡು ಏಟು ಬಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳ ಮೊಬೈಲ್ ಅಷ್ಟೆ ಅಲ್ಲದೆ ಬೈಕ್ ಗಳ ನ್ನೂ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.
ಮೊಬೈಲ್ ಕಳ್ಳನಿಗೆ ಮಹಿಳೆಯಿಂದ ಧರ್ಮದೇಟು
ವಿಜಯಸಾಕ್ಷಿ ಸುದ್ದಿ, ಗದಗ
ನಗರದ ವಿಜಯ ಕಲಾ ಮಂದಿರ ರಸ್ತೆಯಲ್ಲಿ ಮೊಬೈಲ್ ಕಳ್ಳನಿಗೆ ಮಹಿಳೆಯೊಬ್ಬರು
ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ
ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಮಹಿಳೆ ಬಂದಿದ್ದಾಗ ಆ ಮಹಿಳೆ ಬಳಿ ಬಂದ ಯುವಕ ಅರ್ಜೆಂಟಾಗಿ ಕಾಲ್ ಮಾಡುವುದಿದೆ ಎಂದು ಹೇಳಿ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದ.
ಭಾನುವಾರ ಬಜಾರ್ ನ ಮೊಬೈಲ್ ಅಂಗಡಿ ಬಳಿ ದಿಢೀರ್ ಪ್ರತ್ಯಕ್ಷನಾದ ಕಳ್ಳನ ಗುರುತು ಹಿಡಿದ ಮಹಿಳೆ ಅಂಗಿಯ ಕಾಲರ್ ಹಿಡಿದು
ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಜನರು ಸೇರಿ ಕಳ್ಳನಿಗೆ ಒಂದೆರಡು ಏಟು ಬಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳ ಮೊಮೈಲ್ ಅಷ್ಟೆ ಅಲ್ಲದೆ ಬೈಕ್ ಗಳ ನ್ನೂ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.
ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ; 5 ದಿನಗಳ ಉತ್ಸವಕ್ಕೆ ಮಾತ್ರ ಅವಕಾಶ
ಕೊರೊನಾ ಪಾಸಿಟಿವಿಟಿ ದರ ಶೆ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಅವಕಾಶ ಇಲ್ಲ.
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಸಾರ್ವಜನಿಕರ ಒತ್ತಡಕ್ಕೆ ಮಣಿದ ಸರ್ಕಾರ ಕೊನೆಗೂ ಸಾರ್ವಜನಿಕ ಗಣೇಶೋತ್ಸವಕ್ಕೆ ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ.
ಸಿಎಂ ನೇತೃತ್ವದಲ್ಲಿ ಗಣೇಶ ಉತ್ಸವದ ಬಗ್ಗೆ ಇಂದು ನಡೆದ ಸಭೆಯ ಬಳಿಕ ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಆರ್. ಅಶೋಕ್, ಕಳೆದ ಬಾರಿಯ ಪರಿಸ್ಥಿತಿ ನೋಡಿದಾಗ ಈ ಬಾರಿ ಸ್ವಲ್ಪಮಟ್ಟಿಗೆ ಪರವಾಗಿಲ್ಲ. ಕೊರೊನಾ ಕಡಿಮೆಯಾಗಿದ್ದರೂ ಸಂಪೂರ್ಣ ಹೋಗಿಲ್ಲ. ತಜ್ಞರು ಈ ತಿಂಗಳಲ್ಲಿ ಮೂರನೇ ಅಲೆಯ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎಚ್ಚರಿಕೆ ಹೆಜ್ಜೆ ಇಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದರು.
ಐದು ದಿನಗಳ ಗಣೇಶೋತ್ಸವಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ವಾರ್ಡ್ ಗೆ ಒಂದು, ಹಳ್ಳಿಗಳಲ್ಲಿ ಒಂದು ಇಲ್ಲವೆ, ಸ್ಥಳೀಯ ಆಡಳಿತ ಅನುಮತಿಯೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು.
ಸಾರ್ವಜನಿಕ ಮೂರ್ತಿ ಪ್ರತಿಷ್ಠಾಪನೆಗೆ ಪೊಲೀಸರ ಅನುಮತಿ ಕಡ್ಡಾಯವಾಗಿದೆ. ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂರ್ಪಣೆ ನಡೆಸಲು ಅವಕಾಶ ಇರೋದಿಲ್ಲ. 50×50 ಅಡಿ ಅಳತೆಯ ಪೆಂಡಾಲ್ ಹಾಕಲು ಅವಕಾಶ ನೀಡಲಾಗಿದೆ.
ಅಪಾರ್ಟ್ಮೆಂಟ್‌ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಲಾಗಿದ್ದು, ಆದರೆ 20ಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಲಾಗಿದೆ. ಡಿಜೆ ಅಥವಾ ಇತರ ಯಾವುದೇ ವಾದ್ಯಗಳನ್ನು ಬಳಸಲು ಅವಕಾಶ ಇಲ್ಲ.
ಗಣೇಶ ಮೂರ್ತಿ ಪ್ರತಿಷ್ಠಾನೆ ಮಂಡಳಿ ಸದಸ್ಯರಿಗೆ ಕೋವಿಡ್
ವ್ಯಾಕ್ಸಿನ್ ಕಡ್ಡಾಯವಾಗಿದೆ. ಆಯಾ ಸ್ಥಳೀಯ ಆಡಳಿತಗಳು ವ್ಯಾಕ್ಸಿನ್ ಹಾಕಲು ವ್ಯವಸ್ಥೆ ಮಾಡಬೇಕು. ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲಾಗಿದ್ದು, ಆದರೆ, 20ಕ್ಕಿಂತ ಹೆಚ್ಚು ಜನರು ಮಾತ್ರ ಸೇರುವಂತಿಲ್ಲ.
ಗಡಿಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.2ರಷ್ಟು ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಉತ್ಸವಕ್ಕೆ ಅವಕಾಶ ನೀಡಲಾಗಿದ್ದು, ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಆಚರಣೆಗೆ ಅವಕಾಶ ಇಲ್ಲ. ಶಾಲಾ ಕಾಲೇಜುಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಿಷೇಧಿಸಲಾಗಿದೆ. ನಗರಗಳಲ್ಲಿ ನಿಗದಿತ ಸ್ಥಳಗಳಲ್ಲಿ, ಗ್ರಾಮೀಣ ಭಾಗದಲ್ಲಿ ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಅವಕಾಶ ನೀಡಲಾಗಿದೆ.
ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೂ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಪರಿಸರ ಪ್ರೇಮಿ ಗಣೇಶ ಮೂರ್ತಿ ಮಾತ್ರ ಕೂರಿಸಬೇಕು. ಇನ್ನುಳಿದಂತೆ ಪರಿಸರ ಪ್ರೇಮಿ ಮೂರ್ತಿಗಳ ಪ್ರತಿಷ್ಠಾಪನೆ, ಸಾರ್ವಜನಿಕ ಮೂರ್ತಿಗಳು 4 ಅಡಿ ಎತ್ತರ ಮೀರುವಂತಿಲ್ಲ ಮುಂತಾದ ಹಿಂದಿನ ನಿಯಮಗಳೂ ಅನ್ವಯವಾಗಲಿವೆ ಎಂದು ಹೇಳಿದ ಅವರು, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಮೊಬೈಲ್ ಕಳ್ಳನಿಗೆ ಮಹಿಳೆಯಿಂದ ಧರ್ಮದೇಟು
ವಿಜಯಸಾಕ್ಷಿ ಸುದ್ದಿ, ಗದಗ
ನಗರದ ವಿಜಯ ಕಲಾ ಮಂದಿರ ರಸ್ತೆಯಲ್ಲಿ ಮೊಬೈಲ್ ಕಳ್ಳನಿಗೆ ಮಹಿಳೆಯೊಬ್ಬರು
ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಮಹಿಳೆ ಬಂದಿದ್ದಾಗ ಆ ಮಹಿಳೆ ಬಳಿ ಬಂದ ಯುವಕ ಅರ್ಜೆಂಟಾಗಿ ಕಾಲ್ ಮಾಡುವುದಿದೆ ಎಂದು ಹೇಳಿ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದ ಈತ.
ಭಾನುವಾರ ಬಜಾರ್ ನ ಮೊಬೈಲ್ ಅಂಗಡಿ ಬಳಿ ದಿಢೀರ್ ಪ್ರತ್ಯಕ್ಷನಾದ ಕಳ್ಳನ ಗುರುತು ಹಿಡಿದ ಮಹಿಳೆ ಅಂಗಿಯ ಕಾಲರ್ ಹಿಡಿದು
ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಜನರು ಸೇರಿ ಕಳ್ಳನಿಗೆ ಒಂದೆರಡು ಏಟು ಬಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳ ಮೊಮೈಲ್ ಅಷ್ಟೆ ಅಲ್ಲದೆ ಬೈಕ್ ಗಳ ನ್ನೂ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.
11 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಕೌಟುಂಬಿಕ ಕಲಹದಿಂದ ಮನನೊಂದು 11 ತಿಂಗಳ ಮಗುವಿನೊಂದಿಗೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಮಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಕಲ್ಪನಾ ಮೋಹನ್ ಗುಡಾಜಿ (21), ಭೂಮಿಕಾ (11 ತಿಂಗಳ) ಮೃತರು. ಎರಡು ವರ್ಷದ ಹಿಂದಷ್ಟೆ ಬಿರನೋಳಿ ಗ್ರಾಮದ ಕಲ್ಪನಾಳನ್ನು ಮಣ್ಣಿಕೇರಿಯ ಮೋಹನ್ ಎಂಬಾತನೊoದಿಗೆ ವಿವಾಹ ಮಾಡಿಕೊಡಲಾಗಿತ್ತು.
ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಹಿಳೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಪತಿಯ ಜೊತೆಗೆ ವೈಮನಸ್ಸು ಹೊಂದಿದ್ದಳು. ಈ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ಸಹಾಯದೊಂದಿಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮಂಗನ ಕಪಿಚೇಷ್ಟೆ ಕಂಡು ದಂಗಾದ ರೋಗಿಗಳು!
- ಚಿಕ್ಕಮಕ್ಕಳು, ಬಾಣಂತಿಯರು ಇರುವ ವಾರ್ಡ್ ಗೆ ನುಗ್ಗಿದ ಕೋತಿ
ವಿಜಯಸಾಕ್ಷಿ ಸುದ್ದಿ, ಗದಗ
ನಗರದ ಕೆಸಿ ರಾಣಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೊಳಗೆ ನುಗ್ಗಿದ ಮಂಗ ಬೆಡ್ ಗಳ ಮೇಲೆ ಓಡಾಡಿ ರೋಗಿಗಳಲ್ಲಿ ಭಯ ಹುಟ್ಟಿಸಿದ ಘಟನೆ ಭಾನುವಾರ ನಡೆದಿದೆ.
ಚಿಕ್ಕಮಕ್ಕಳು ಹಾಗೂ ಬಾಣಂತಿಯರಿರುವ ವಾರ್ಡ್ ಗೆ ಕೆಂಪು ಕೋತಿಯೊಂದು ಒಳಬಂದು ಬೆಡ್ ಗಳ ಮೇಲೆ ಓಡಾಡಿದೆ. ಕೋತಿ ಕಂಡು ಮಕ್ಕಳು, ಮಹಿಳೆಯರು ಭಯಗೊಂಡಿದ್ದರು.
ಕೋತಿ ಆಸ್ಪತ್ರೆಯಲ್ಲಿ ಕೆಲವು ಕ್ಷಣ ಭಯದ ವಾತಾವರಣ ನಿರ್ಮಿಸಿತ್ತು. ಇಷ್ಟೆಲ್ಲ ಆದರೂ ಕೋತಿಗಳನ್ನು ಓಡಿಸಲು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಇಲ್ಲದಿರುವುದು ರೋಗಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಈ ಕೋತಿಗಳ ದಂಡು ಹಲವಾರು ದಿವಸಗಳಿಂದ ಆಸ್ಪತ್ರೆ ಆವರಣದಲ್ಲೇ ಬಿಟ್ಟಿದೆ. ಆಗಾಗ ಆಸ್ಪತ್ರೆ ಒಳಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಹೋಗುವುದು, ಹಸುಗೂಸುಗಳು ಇದ್ದಲ್ಲಿಗೆ ಬಂದು ಕಪಿಚೇಷ್ಟೆ ಮಾಡುವುದು, ರೋಗಿಗಳ
ಬೆಡ್ ಗಳ ಮೇಲೆ ಓಡಾಟ ನಡೆಸುತ್ತಿವೆ.
ಇಷ್ಟಾದರೂ ಮಂಗಗಳ ಕಪಿಚೇಷ್ಟೆ ತಡೆಯಲು ಆಸ್ಪತ್ರೆ ವೈದ್ಯರು ಯಾವುದೇ ಪ್ರಯತ್ನ ಮಾಡದಿರುವುದಕ್ಕೆ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸಮುಜಾಯಿಸಿ ನೀಡಿದೆ.
ವಿಜಯಪುರದಲ್ಲಿ ಕೋವಿಡ್‌ಗೆ ಮೊದಲ ಮಗು ಸಾವು
ವಿಜಯಸಾಕ್ಷಿ ಸುದ್ದಿ, ವಿಜಯಪುರ
ಕೊರೋನಾ ಸೋಂಕಿಗೆ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ 2 ವರ್ಷದ ಮಗುವೊಂದು ಸಾವನ್ನಪ್ಪಿರುವ ವರದಿಯಾಗಿದೆ.
ನಗರದ ಶಹ್ಪೇಟ್‌ನಲ್ಲಿ 2 ವರ್ಷದ ಮಗು ತೀವ್ರ ಜ್ವರದಿಂದ ಕೆಲ ದಿನಗಳ ಹಿಂದಷ್ಟೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕಳೆದ ವಾರ ಮೃತಪಟ್ಟಿತ್ತು ಎಂದು ಹೇಳಲಾಗಿದೆ.
ಆಗಸ್ಟ್ 14 ರಂದು ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸೂಕ್ತ ಪ್ರತಿಕ್ರಿಯೆ ಸಿಗದೆ ಆಗಸ್ಟ್ 24 ರಂದು ಮಗು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಜಯಪುರದಲ್ಲಿ ಈ ವರೆಗೆ ಸಾಕಷ್ಟು ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಆದರೆ, ಮಗುವೊಂದು ಸೋಂಕಿಗೆ ಬಲಿಯಾಗಿರುವುದು ಇದೇ ಮೊದಲಾಗಿದೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಚಿನ್ನದಂಥ ಸಾಧನೆ
ವಿಜಯಸಾಕ್ಷಿ ಸುದ್ದಿ, ನವದೆಹಲಿ
ಭಾರತದ ಕ್ರೀಡಾಕ್ಷೇತ್ರದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆಯುವ ದಿನ. ಏಕೆಂದರೆ ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 5 ಚಿನ್ನ, 8 ಬೆಳ್ಳಿ ಹಾಗೂ 6 ಕಂಚು ಸೇರಿ ಒಟ್ಟು 19 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಕ್ರೀಡಾಕೂಟದ ಕೊನೆಯ ದಿನವಾದ ಭಾನುವಾರ ಒಂದು ಚಿನ್ನ, ಒಂದು ಬೆಳ್ಳಿ ಪದಕ ಗೆದ್ದುಕೊಂಡಿರುವ ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿತು.
ಕ್ರೀಡಾಕೂಟದ ಕೊನೆಯ ದಿನವಾದ ಇಂದು ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಚ್6 ವಿಭಾಗದಲ್ಲಿ ಹಾಂಗ್‌ಕಾoಗ್ ಚು ಮಾನ್ ಕೈ ಅವರನ್ನು ಸೋಲಿಸಿದ ಭಾರತದ ಕೃಷ್ಣನಗರ್ ಚಿನ್ನದ ಪದಕ ಬಾಚಿಕೊಂಡರು.
ನಿನ್ನೆ ಫೈನಲ್ಸ್ ತಲುಪಿ ಪದಕದ ಭರವಸೆ ನೀಡಿದ್ದ ಕೃಷ್ಣನಗರ್ ಇಂದು ಬೆಳಿಗ್ಗೆ ನಡೆದ ಪಂದ್ಯದಲ್ಲಿ ಹಾಂಗ್‌ಕಾoಗ್ ಆಟಗಾರನ ವಿರುದ್ಧ ಅಧಿಕಾರಯುತ ಆಟವಾಡಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದಕ್ಕೂ ಮುಂಚೆ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮೂಲತಃ ಹಾಸನ ಜಿಲ್ಲೆಯ ಲಾಳನಕೇರಿಯವರಾದ ಸುಹಾಸ ಯತಿರಾಜ್ ಸಧ್ಯ ಉತ್ತರ ಪ್ರದೇಶದ ನೋಯ್ಡಾ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ಯಾರಾಲಿಂಪಿಕ್ಸ್ ಇದು ಭಾರತದ ಅದ್ವಿತೀಯ ಸಾಧನೆಯಾಗಿದೆ. ಇಲ್ಲಿಯವರೆಗೆ ನಡೆದ ಎಲ್ಲ ಪ್ಯಾರಾಲಿಂಪಿಕ್ಸ್ ಪದಕಗಳನ್ನು ಸೇರಿಸಿದರೆ ಭಾರತದ ಖಾತೆಯಲ್ಲಿ 12 ಪದಕಗಳಿದ್ದವು. ಆದರೆ, ಈ ಬಾರಿಯ ಒಂದೇ ಕ್ರೀಡಾಕೂಟದಲ್ಲಿ 5 ಚಿನ್ನ ಸೇರಿ 19 ಪದಕ ಗೆಲ್ಲುವ ಮೂಲಕ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ.
ಗೂಡ್ಸ್ ವಾಹನ ಡಿಕ್ಕಿ; ಇಂಜಿನಿಯರಿಂಗ್ ಕಾಲೇಜಿನ ನೌಕರ ಸ್ಥಳದಲ್ಲೇ ಸಾವು
ವಿಜಯಸಾಕ್ಷಿ ಸುದ್ದಿ, ಗದಗ
ಕರ್ತವ್ಯಕ್ಕೆ ತೆರಳುತ್ತಿದ್ದ ಇಂಜಿನಿಯರಿಂಗ್ ಕಾಲೇಜಿನ ನೌಕರನ ಬೈಕ್ ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಶನಿವಾರ ರಾತ್ರಿ ನಡೆದಿದೆ.
ತಾಲೂಕಿನ ಹುಲಕೋಟಿ ಬಳಿ ನಡೆದ ಈ ದುರ್ಘಟನೆಯಲ್ಲಿ ರೂರಲ್ ಇಂಜನಿಯರಿಂಗ್ ಕಾಲೇಜಿನ ಅಡುಗೆ ಸಿಬ್ಬಂದಿ ರಾಘವೇಂದ್ರ ಜಂತ್ಲಿ (32) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿ.
ಕಳೆದ ಮೂರು ತಿಂಗಳ ಹಿಂದೆ ಹುಲಕೋಟಿ ರೂರಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಡುಗೆ ಸಿಬ್ಬಂದಿಯಾಗಿ ರಾಘವೇಂದ್ರ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.

ಸಮೀಪದ ಚಿಕ್ಕಹಂದಿಗೋಳ ಗ್ರಾಮದ ನಿವಾಸಿ ಆಗಿದ್ದ ರಾಘವೇಂದ್ರನಿಗೆ ಪತ್ನಿ, ಮಗು ಹಾಗೂ ಅಪಾರ ಬಂಧುಗಳಿದ್ದಾರೆ.
ಹುಲಕೋಟಿಯಿಂದ ಬೈಕ್ ಮೇಲೆ ಕಾಲೇಜಿಗೆ ಹೊರಟಾಗ ಎದುರಿಗೆ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡಿದಿದೆ.
ಘಟನೆಯ ಸುದ್ದಿ ತಿಳಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರವಿ ಕಪ್ಪತನವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

