Home Blog Page 3245

ಅಂದರ್-ಬಾಹರ್ ಜೂಜಾಟ; ಗ್ರಾಮೀಣ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 11ಜನರ ಬಂಧನ

ಕಳಸಾಪೂರ, ಅಡವಿಸೋಮಾಪೂರ ಬಳಿ ಕಾರ್ಯಾಚರಣೆ…….

ವಿಜಯಸಾಕ್ಷಿ ಸುದ್ದಿ, ಗದಗ

ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಎರಡು ತಂಡಗಳ ಮೇಲೆ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಹನ್ನೊಂದು ಜನರನ್ನು ಬಂಧಿಸಿದ್ದಾರೆ.

ಗದಗ ತಾಲೂಕಿನ ಕಳಸಾಪೂರ ಹಾಗೂ ಅಡವಿಸೋಮಾಪೂರ ಗ್ರಾಮದ ಬಳಿ ಪ್ರತ್ಯೇಕವಾಗಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಗದಗ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ.

ಅಡವಿಸೋಮಾಪೂರ ಗ್ರಾಮದ ಬಳಿಯ ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಕೆಳಗೆ ಪುರದಹಳ್ಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಅಡವಿಸೋಮಾಪೂರ ಗ್ರಾಮದ ರಮಜಾನಸಾಬ ತಂದೆ ಮೌಲಾಸಾಬ ಅಗಸಿಮನಿ, ಯಲ್ಲಪ್ಪ ತಂದೆ ಭೀಮಪ್ಪ ಹೊಂಬಳ, ಇಮಾಮಸಾಬ ತಂದೆ ಅಲಿಸಾಬ ನದಾಫ್, ದೇವಪ್ಪ ತಂದೆ ಪಕೀರಪ್ಪ ಕೊಟೆಣ್ಣವರ, ಮಂಜುನಾಥ್ ತಂದೆ ಮಲ್ಲಪ್ಪ ಮವರಿ ಹಾಗೂ ರಾಮಪ್ಪ ತಂದೆ ಬೀಮಪ್ಪ ಹೊಂಬಳ ಇವರನ್ನು ಬಂಧಿಸಲಾಗಿದೆ.

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಗ್ರಾಮೀಣ ಪೊಲೀಸರು, ಬಂಧಿತ ಆರೋಪಿಗಳಿಂದ 4010 ರೂಪಾಯಿಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 231/2023 Karnataka police act, 1963(U/s-87)ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಐದು ಜನರನ್ನು ಬಂಧಿಸಲಾಗಿದೆ.

ಗದಗ ತಾಲೂಕಿನ ಕಳಸಾಪೂರ ಗ್ರಾಮದ ಬಳಿ ಇರುವ ಬೆಕ್ಕಿನ ಹಳ್ಳದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಐವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಗದಗ ತಾಲೂಕಿನ ಕಳಸಾಪೂರ ಗ್ರಾಮದ ಬಳಿ ಇರುವ ಬೆಕ್ಕಿನ ಹಳ್ಳದಲ್ಲಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗದಗನ ಚನ್ನಮ್ಮ ಸರ್ಕಲ್ ಹತ್ತಿರದ ನಿವಾಸಿ ಕಿರಣ ತಂದೆ ಆನಂದ ಮುಳಗುಂದ, ಹುಡ್ಕೋ ಕಾಲೋನಿಯ ವಿಶಾಲರಡ್ಡಿ ತಂದೆ ರಂಗಪ್ಪ ಕೋಣಿ, ವಡ್ಡರಗೇರಿಯ ಸಂಜಯ ತಂದೆ ಹನಮಂತಪ್ಪ ದಾಸರ, ಉಡಚಮ್ಮನ ಗುಡಿ ಬಳಿಯ ನಿವಾಸಿ ಶರಣಪ್ಪ ತಂದೆ ಬಾಲಚಂದ್ರ ಬಾರಕೇರ ಹಾಗೂ ಮಹಮ್ಮದ್ ಮುಕ್ತಾರ ತಂದೆ ಜಿನ್ನಾಸಾಬ ತಹಸೀಲ್ದಾರ ಇವರನ್ನು ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರಿಂದ 2120 ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯ ಶಿವಾನಂದ ಪಾಟೀಲ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ 0232/2023 Karnataka police act, 1963(U/s-87) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಸ್ಪೆಂಡ್ ಆದ ಅಧಿಕಾರಿಗೆ ಸರ್ಕಾರ ಬಡ್ತಿ ಗಿಫ್ಟ್; ಹದಿನೈದು ದಿನಗಳಲ್ಲಿ ಆದೇಶ

ಕರ್ತವ್ಯ ಲೋಪ, ಬೇಜವಬ್ದಾರಿ ಆರೋಪದ ಹಿನ್ನೆಲೆಯಲ್ಲಿ ಸಸ್ಪೆಂಡ್ ಆಗಿದ್ದ ಕಂದಾಯ ಅಧಿಕಾರಿ….

ವಿಜಯಸಾಕ್ಷಿ ಸುದ್ದಿ, ಗದಗ

ಸಸ್ಪೆಂಡ್ ಆಗಿ ಹದಿನೈದು ದಿನಗಳಲ್ಲಿ ಸರಕಾರ ಬಡ್ತಿ ಗಿಫ್ಟ್ ನೀಡಿದ ಅಪರೂಪದ ಘಟನೆ ನಡೆದಿದೆ.

ಗದಗ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿದ್ದ ಮಹೇಶ್ ಹಡಪದ ಸಸ್ಪೆಂಡ್ ಆಗಿ ಹದಿನೈದು ದಿನಗಳಲ್ಲಿಯೇ ಮುಖ್ಯಾಧಿಕಾರಿ ಹುದ್ದೆಗೆ ಬಡ್ತಿ ಹೊಂದಿದ ಅಧಿಕಾರಿಯಾಗಿದ್ದಾರೆ.

ಗದಗ ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ್ ಹಡಪದ ಅವರನ್ನು ಕರ್ತವ್ಯ ಲೋಪ ಹಾಗೂ ಬೇಜವಬ್ದಾರಿತನ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜುಲೈ 25 ರಂದು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ ಫಾರ್ಮ್ ನಂ.3 ವಿತರಣೆಯಲ್ಲಿ ಕರ್ತವ್ಯಲೋಪ; ನಗರಸಭೆ ಕಂದಾಯ ಅಧಿಕಾರಿ ಸಸ್ಪೆಂಡ್ ಮಾಡಿ ಡಿಸಿ ಆದೇಶ

ಸಾರ್ವಜನಿಕರಿಗೆ ಫಾರ್ಮ್ ನಂ.3 ವಿತರಣೆಯಲ್ಲಿ ವಿಳಂಬ ಹಾಗೂ ನಿವೇಶನಗಳಿಗೆ ನಿರಪೇಕ್ಷಣಾ ಪತ್ರ ಪಡೆಯದೇ ಫಾರ್ಮ್ ನಂ.3 ವಿತರಣೆ ಮಾಡಿದ ಆರೋಪ ಮಹೇಶ್ ಹಡಪದ ಅವರ ಮೇಲಿತ್ತು.

ನಿಯಮ ಬಾಹಿರವಾಗಿ ‌ 1063 ನಿವೇಶನಗಳಿಗೆ ಫಾರ್ಮ್ ನಂ.3 ವಿತರಿಸಿ ಕರ್ತವ್ಯ ಲೋಪವೆಸಗಿದ್ದರು. ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ ಹಾಗೂ ಲಕ್ಷ್ಮಿ ಅನಿಲಕುಮಾರ್ ಸಿದ್ಷಮ್ಮನಹಳ್ಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಅವರು ತನಿಖೆ ಮಾಡಿ ಡಿಸಿ ಅವರಿಗೆ ವರದಿ ಸಲ್ಲಿಸಿದ್ದರು.

ಅಪರ ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದರು.

ಸಸ್ಪೆಂಡ್ ಆಗಿದ್ದ ಹದಿನೈದು ದಿನಗಳಲ್ಲಿ ಸರಕಾರ ಇದೀಗ
ಬಾಗಲಕೋಟೆ ಜಿಲ್ಲೆಯ ಕೆರೂರ ಪಟ್ಟಣ ಪಂಚಾಯತಿಗೆ ಮಹೇಶ್ ಹಡಪದ ಅವರನ್ನು ಮುಖ್ಯಾಧಿಕಾರಿಯಾಗಿ ಬಡ್ತಿ ನೀಡಿ ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.

ಹುಲಕೋಟಿಯಲ್ಲಿ ಭಾರಿ ಮಳೆ; ವಾಹನ ಸವಾರರ ಪರದಾಟ

0

ಉಕ್ಕಿ ಹರಿದ ಹಳ್ಳ-ಕೊಳ್ಳಗಳು….

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದ ಘಟನೆ ಜರುಗಿದೆ.

ಗದಗ, ಹುಲಕೋಟಿ,‌ ನಾಗಾವಿ ಹಾಗೂ ಅಸುಂಡಿ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿದವು.

ಹುಲಕೋಟಿಯಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಬೈಕ್ ಗಳು ನೀರಿನಲ್ಲಿ ನಿಲ್ಲುವಂತಾಯಿತು. ಶಾಲಾ ಮಕ್ಕಳು, ಸಾರ್ವಜನಿಕರು ಪರದಾಡಿದರು. ಕುರ್ತಕೋಟಿ ರಸ್ತೆಯ ಹಳ್ಳಗಳು ತುಂಬಿ ಹರಿದವು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬುಧವಾರದಂದು ನೀರು ಪೂರೈಕೆ ಎಲ್ಲೆಲ್ಲಿ?

ನಗರಸಭೆ ಪೌರಾಯುಕ್ತರ ಪ್ರಕಟಣೆ…

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಆಗಸ್ಟ್ 9 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಸ್ಥಳಗಳ ವಿವರ:

ವಾರ್ಡ್- ನಂ. 22ರ ಅಮರೇಶ್ವರ ನಗರ, ವಾರ್ಡ್- ನಂ. 03ರ ಜಮಾದಾರ ಲೈನ್, ಬಾಳಿಕಾಯಿ ಲೈನ್, ಮಸೀದಿ ಲೈನ್, ಬಾರಕೇರ ಲೈನ್, ವಾರ್ಡ್- ನಂ. 28ರ 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, 6ನೇ ಕ್ರಾಸ್ ಪಂಚಾಕ್ಷರಿ ನಗರ, ನಾಗರಕಟ್ಟಿಯವರ ಲೈನ್, ಅಕ್ಕಿಯವರ ಲೈನ್, ದೇವಗಿರಿ ಮಾಸ್ತರ್ ಲೈನ್, ಪಂಪ ಹೌಸ್, ಕಿರಾಣಿ ಲೈನ್, ಎಸ್.ಎಸ್. ಪಾಟೀಲ, ಕಾಗದಗಾರ ಲೈನ್,

ವಾರ್ಡ್- ನಂ. 21, 22, 23, ರಲ್ಲಿ ಗಣಪತಿ ಲೈನ್, ಗೆಳೆಯರ ಬಳಗ, ಅಕ್ಕಿಯವರ ಲೈನ್, ಜಂತ್ಲಿ ಹಳೆಲೈನ್, ಹೊಸ ಲೈನ್, ಕಣಗಿನಹಾಳ ಹಾರೂಗೇರಿ ಭಾಗ-1, ಭಾಗ-2 ಹೊನ್ನತ್ತೆಮ್ಮನ ಗುಡಿ ಭಾಗ-1, ಭಾಗ-2 ಸೋಮನಗೌಡ್ರ ಹೆಬಸೂರ ಲೈನ್, ಬನ್ನಿಕಾಳಮ್ಮ, ಕಮತರ ಲೈನ್,

ವಾರ್ಡ್- ನಂ. 27 ಫಾರಂ ಓಣಿ, ಕಾಶಿ ವಿಶ್ವನಾಥ ನಗರ, ಸಂಭಾಪೂರ ರೋಡ್, ವಾರ್ಡ್- ನಂ. 30ರ ಟಿ.ವಿ.ಎಸ್ ಶೋ ರೂಮ್, ಅಬ್ಬಿಗೇರಿ ಲೇಔಟ್, ಮುತ್ತಿನಪೆಂಡಿಯವರ ಲೈನ್, ಕಾಶಿಯವರ ಲೈನ್, ವಾರ್ಡ್- ನಂ. 6, 7 ಮಳಲಿಯವರ ಲೈನ್, ಪೂಜಾರ ಲೈನ್, ತಟ್ಟಿಯವರ ಲೈನ್, ಪಂಚರತ್ನ ಬಡಾವಣೆ

ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ನೀರು ಪೂರೈಕೆಯ ಸ್ಥಳಗಳು

ನಗರಸಭೆ ಆಯುಕ್ತರ ಪ್ರಕಟಣೆ…..

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಆಗಸ್ಟ್ 8ರ ಮಂಗಳವಾರ ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ಪಾದಚಾರಿಗಳಿಗೆ ಕಾರ್ ಡಿಕ್ಕಿ; ಇಬ್ಬರು ಸ್ಥಳದಲ್ಲಿಯೇ ಸಾವು, ಪರಾರಿಯಾಗಿದ್ದ ಕಾರ್ ಚಾಲಕ ಅರ್ಧಗಂಟೆಯಲ್ಲಿ ಸೆರೆ…!

ಸ್ಥಳಗಳ ವಿವರ

ವಾರ್ಡ್-ನಂ. 14ರ ವಕೀಲರ ಚಾಳ ಭಾಗ-1, 2 ಸ್ಟೇಷನ್ ರಸ್ತೆ, ಗೋಮ್ಸ್ ಬಿಲ್ಡಿಂಗ್, ಸ್ಟೇಡಿಯಂ, ಮುಲ್ಲಾ ಚಾಳ, ಕಾತರಕಿ ಚಾಳ, ಪಂಚಾಕ್ಷರಿನಗರ ಭಾಗ-1, ಭಾಗ-2, ಭಾಗ-3

ವಾರ್ಡ್-ನಂ. 26 ಕೃಷ್ಣಾ ಟಾಕೀಜ್, ಕಲಾಮಂದಿರ ರಸ್ತೆ, ಅಕ್ಕನಬಳಗ, ಜೆ.ಟಿ.ಮಠ ರಸ್ತೆ, ಅಂಗಡಿಯವರ ಲೈನ್, ಗೊಡಚಿಯವರ ಲೈನ್, ಗವಳಿಯವರ ಲೈನ್, ಜನತಾ ಕಿರಾಣಿ ಲೈನ್, ಸೋಡಾ ಅಂಗಡಿ ಲೈನ್, ಬಂಗಾರ ಶೆಟ್ಟರ ಲೈನ್, ಚಳ್ಳಮರದ ಅವರ ಲೈನ್, ಲಕ್ಷ್ಮೀ ಚಾಳ, ವಾರ್ಡ್-ನಂ 12, 28, ತೋಪಿಯವರ ಲೈನ್, ಮಾಸ್ತರ್ ಲೈನ್, ಉಪ್ಪಿನವರ ಲೈನ್, ಪಟ್ಟಣಶೆಟ್ಟಿ ಅವರ ಲೈನ್, ಗುಳಬಾಳ ಡಾ|| ಲೈನ್, ಶಿವನಗುತ್ತಿ ಲೈನ್,

ವಾರ್ಡ್- ನಂ. 27ರ ಮೇರವಾಡೆ ಮಾಸ್ತರ್ ಲೈನ್, ಬುರಬುರೆ ಲೈನ್, ಉದ್ದಾರ ಮಾಸ್ತರ್ ಲೈನ್, ವಾರ್ಡ್- ನಂ.16ರಲ್ಲಿ ಡೋರಗಲ್ಲಿ, ಡಿ.ಸಿ.ಮಿಲ್ ರಸ್ತೆ, ಡೋರಗಲ್ಲಿ ಭಾಗ-1, ಭಾಗ-2, ವಾರ್ಡ್- ನಂ. 22 ದಖನಿ ಲೈನ್, ಈಶ್ವರ್ ಗುಡಿಲೈನ್, ಗಿರಣಿ ಲೈನ್, ಧಾರವಾಡದವರ ಲೈನ್, ವಾರ್ಡ್- ನಂ. 35ರಲಿ ಆದರ್ಶನಗರ ಜೋಶಿಯವರ ಲೈನ್, ದೊಡ್ಡ ಸರ್ ಮನೆಯವರ ಲೈನ್, 1ನೇ ಕ್ರಾಸ್,

ವಾರ್ಡ್- ನಂ. 20 ಅಂಗನವಾಡಿ ಲೈನ, ಶೌಚಾಲಯ ಲೈನ್, ನಾಗಲಿಂಗ ನಗರ ಭಾಗ-1, ಭಾಗ-2 ಲ, ವಾರ್ಡ್- ನಂ.23 ಮಡಿವಾಳರ ಲೈನ್, ಲಕ್ಕುಂಡಿ ಅವರ ಲೈನ್, ಮಾನ್ವಿಯವರ ಲೈನ್, ಬಾಳಿಕಾಯಿ ಅವರ ಲೈನ್, ಗಣಪತಿ ಗುಡಿ ಲೈನ್, ಜಕ್ಕಲಿಯವರ ಲೈನ್,

ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ಪ್ರಕಟಣೆ ತಿಳಿಸಿದೆ.

ಬಸವೇಶ್ವರ ದೇವಸ್ಥಾನದಲ್ಲಿ ಬೃಹತ್ ನಾಗರಹಾವು ಪ್ರತ್ಯಕ್ಷ

0

ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಉರಗತಜ್ಞ ಸುರೇಶ್…..

ವಿಜಯಸಾಕ್ಷಿ ಸುದ್ದಿ, ಗದಗ

ಇವತ್ತು ಸೋಮವಾರ ಬಸವಣ್ಣನ ದರ್ಶನಕ್ಕೆ ಹೋಗಿದ್ದ ಭಕ್ತರಿಗೆ ನಾಗರಹಾವು ಕಂಡು ಕೆಲಕಾಲ ಗಾಬರಿಬಿದ್ದ ಘಟನೆ ನಡೆದಿದೆ.

ಇದನ್ನೂ ಓದಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಂಗಳವಾರ ನೀರು ಪೂರೈಕೆಯ ಸ್ಥಳಗಳು

ಗದಗ ತಾಲೂಕಿನ ಚಿಂಚಲಿ ಗ್ರಾಮದ ಗುಡ್ಡದಲ್ಲಿ ಇರುವ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದ ಭಕ್ತರಿಗೆ ಬೃಹತ್ ಆಕಾರದ ನಾಗರಹಾವು ಕಂಡಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಕೆಲಕಾಲ ತೀವ್ರ ಆತಂಕಗೊಂಡರು.

ಗೋಡೆ ಏರಲು ನಾಗರಹಾವು ಪ್ರಯತ್ನ ಮಾಡುತ್ತಲೇ ಇದ್ದರೆ, ಕೆಲ ಯುವಕರು ಅದರ ವಿಡಿಯೋ ಮಾಡುತ್ತಿದ್ದರು. ಅದರಲ್ಲಿ ಒಬ್ಬರು ಪಕ್ಕದ ಕಳಸಾಪೂರ ತಾಂಡಾದ ಉರಗ ತಜ್ಞ ಸುರೇಶನಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ.

ಸುರೇಶ್ ಸ್ಥಳಕ್ಕೆ ಬಂದು ಬಸವಣ್ಣನ ಗರ್ಭಗುಡಿಯಲ್ಲಿ ಇದ್ದ ಬೃಹತ್ ನಾಗರಹಾವನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ಕಾರ್ ಡಿಕ್ಕಿ; ಇಬ್ಬರು ಸ್ಥಳದಲ್ಲಿಯೇ ಸಾವು, ಪರಾರಿಯಾಗಿದ್ದ ಕಾರ್ ಚಾಲಕ ಅರ್ಧಗಂಟೆಯಲ್ಲಿ ಸೆರೆ…!

ಅಪಘಾತದ ಸುದ್ದಿ ತಿಳಿದು ಸ್ಥಳೀಯರಿಂದ ಪ್ರತಿಭಟನೆ, ಆಕ್ರೋಶ…

ವಿಜಯಸಾಕ್ಷಿ ಸುದ್ದಿ, ಹಾವೇರಿ

ರಸ್ತೆ ಪಕ್ಕದಲ್ಲಿ ನಿಂತವರ ಮೇಲೆ ಕಾರ್ ಹರಿದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಜರುಗಿದೆ.

ಇದನ್ನೂ ಓದಿ ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್ ನ ಡೋರ್ ಬೈಕ್ ಗೆ ತಾಗಿ ಅಪಘಾತ; ಸ್ಥಳದಲ್ಲಿಯೇ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಾಪೂರ ಕ್ರಾಸ್ ಬಳಿ ನಡೆದ ಈ ದುರ್ಘಟನೆಯಲ್ಲಿ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ಚಿದಾನಂದ ಹಾಗೂ ವಿರೂಪಾಕ್ಷಪ್ಪ ಎಂಬುವರು ಮೃತಪಟ್ಟಿದ್ದಾರೆ.

ಶಿಗ್ಗಾವಿ ಪಟ್ಟಣಕ್ಕೆ ಹೋಗಲು ವಾಹನಕ್ಕೆ ಕಾಯುತ್ತಿದ್ದಾಗ ಏಕಾಏಕಿ ಹಾವೇರಿ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಅಪಘಾತ ಪಡಿಸಿದ ಕಾರ್ ಪರಾರಿಯಾಗಿತ್ತು.  ಮಿಂಚಿನ ಕಾರ್ಯಾಚರಣೆ ನಡೆಸಿದ ಶಿಗ್ಗಾವಿ ಪೊಲೀಸರು ಚಾಲಕನನ್ನು ಅರ್ಧ ಗಂಟೆಯಲ್ಲಿಯೇ ಬಂಧಿಸಿದ್ದಾರೆ.

ಇದನ್ನೂ ಓದಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಯತ್ನ; ಸಿಕ್ಕಿಬಿದ್ದ ಎಂಟು ಜನರ ಗ್ಯಾಂಗ್ …! ಆರು ಜನರ ಬಂಧನ- ಎಸ್ಪಿ

ಕಾರು ಬೆಳಗಾವಿ ಮೂಲದ್ದು ಎಂದು ಪೊಲೀಸರು ತಿಳಿಸಿದ್ದು, ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಜಮಾವಣೆಗೊಂಡು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ  ಓದಿ  ಹಣಕಾಸಿನ‌ ವಿಚಾರ; ಮಾರಕಾಸ್ತ್ರಗಳಿಂದ ಹೊಡೆದಾಟ; ಏಳು ಜನರಿಗೆ ಗಾಯ, ಹೊಡೆದಾಟದ ವಿಡಿಯೋ ವೈರಲ್…!

ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ನೀರು ಪೂರೈಕೆ ಮಾಡುವ ಸ್ಥಳಗಳು….

ನಗರಸಭೆ ಪೌರಾಯುಕ್ತರಿಂದ ಮಾಹಿತಿ…..

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಬೆಟಗೇರಿ ಅವಳಿ ನಗರದಲ್ಲಿ ಸೋಮವಾರ ದಿ.07-08-23 ರಂದು ಈ ಕೆಳಗಿನ ಸ್ಥಳಗಳಲ್ಲಿ ನೀರು ಪೂರೈಕೆ ಮಾಡಲಾಗುವುದು. ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳಗಳ ವಿವರ

ವಾರ್ಡ್ ನಂ 16, 17, 18ರಲ್ಲಿ ನಮಾಜಿ ಲೈನ್, ಮಣ್ಣಮ್ಮನವರ ಲೈನ್, ಕೋನೇರಿ ಹೊಂಡ ಲೈನ್, ಮೀನದ ಮಾರ್ಕೆಟ್‌ ಲೈನ್, ಚವ್ಹಾಣದವರ ಲೈನ್, ಬಜಾರ್ ಲೈನ್,

ವಾರ್ಡ್ ನಂ 5, ಮತ್ತು 6ರಲ್ಲಿ ಎಸ್.ಬಿ.ನಗರ, ಬಾಳಿಕಾಯಿ ಅವರ ಲೈನ್, ಹೊನ್ನಪ್ಪನವರ ಲೈನ್, ಪಾಟೀಲರ ಲೈನ್, ಕೊಟಗಿ ಮಾಸ್ತರ್ ಲೈನ್, ಚನ್ನಪ್ಪಗೌಡ್ರ ಲೈನ್, ಹಳ್ಳಿಕೇರಿ ಪ್ಲಾಟ್, ಗಣೇಶನಗರ ಭಾಗ-1, 2, 3, 4, ಶಿವನಾಗನಗರ ಭಾಗ-1, 2, 3, 4,

ವಾರ್ಡ್: ನಂ 21, 22, 23ರಲ್ಲಿ ಕಮತರ ಪ್ಲಾಟ್, ಅಕ್ಕಿಯವರ ಪ್ಲಾಟ್, ಮುನವಳ್ಳಿ ಅವರ ಲೈನ್, ಶರಣಪ್ಪರ ಲೈನ್, ಪಾಟೀಲರ ಲೈನ್, ನಾಗಪ್ಪನ ಕಟ್ಟಿ ಲೈನ್, ರಾಚೋಟೇಶ್ವರ ದೇವಸ್ಥಾನದ ಲೈನ್ ಮಡಿವಾಳರ ಲೈನ್, ಜಕ್ಕಲಿಯವರ ಲೈನ್,

ವಾರ್ಡ್ ನಂ 29ರಲ್ಲಿ ಸಾಯಿ ನಗರ, ಪಠಾಣಗಲ್ಲಿ, ವಾರ್ಡ್ ನಂ 33, 35ರಲ್ಲಿ ರಾಮನಗರ, ರಾಧಾಕೃಷ್ಣನಗರ, ವಾರ್ಡ್ ನಂ 35ರಲ್ಲಿ ದೋಭಿಘಾಟ್, 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, ಇ.ಡಬ್ಲ್ಯೂ.ಎಸ್.

(ತಾಂತ್ರಿಕವಾಗಿ ನೀರು ಪೂರೈಕೆಯಲ್ಲಿ ಒಂದು ವೇಳೆ ಅಡತಡೆಯಾದಲ್ಲಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಲು ನಗರಸಭೆ ಪ್ರಕಟಣೆಯಲ್ಲಿ ಕೋರಲಾಗಿದೆ.)

ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್ ನ ಡೋರ್ ಬೈಕ್ ಗೆ ತಾಗಿ ಅಪಘಾತ; ಸ್ಥಳದಲ್ಲಿಯೇ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ….

ವಿಜಯಸಾಕ್ಷಿ ಸುದ್ದಿ, ರೋಣ

ಖಾಸಗಿ ಬಸ್ ಚಾಲಕನ ಅಜಾಗರೂಕತೆಯಿಂದ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರು ಗಾಯಗೊಂಡ ಘಟನೆ ಬಾದಾಮಿ ರಸ್ತೆಯಲ್ಲಿ ಭಾನುವಾರ ರಾತ್ರಿ ಜರುಗಿದೆ.

ರೋಣ ಪಟ್ಟಣದ ಬಾದಾಮಿ ರಸ್ತೆಯ ಸಾಧು ಅಜ್ಜನ ಮಠದ ಹತ್ತಿರ ಈ ಘಟನೆ ಜರುಗಿದ್ದು, ರೋಣ ಪಟ್ಟಣದ ಶಾಹಿದ್ ಎಂಬ 18 ವರ್ಷದ ವಿದ್ಯಾರ್ಥಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸುಮಯ್ಯಬಾನು ಎಂಬ ಯುವತಿ ಗಾಯಗೊಂಡಿದ್ದಾಳೆ.

ಇದನ್ನೂ ಓದಿ ಚಾಲಾಕಿ ಕಳ್ಳರ ಕರಾಮತ್ತು; ಹಿಂಬಾಗಿಲು ಮೂಲಕ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣಗಳು ಲೂಟಿ….!

ಸುಗಮಾ ಖಾಸಗಿ ಬಸ್ಸಿನ ಲಗೇಜ್ ಬಾಕ್ಸ್‌ ನ ಡೋರ್ ಲಾಕ್ ಆಗದೇ ಕ್ರಾಸ್ ನಲ್ಲಿ ಬಸ್ ಟರ್ನ್ ಮಾಡುವಾಗ ಡೋರ್ ಬೈಕ್ ಗೆ ಬಡಿದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟಕ್ಕೆ ಯತ್ನ; ಸಿಕ್ಕಿಬಿದ್ದ ಎಂಟು ಜನರ ಗ್ಯಾಂಗ್ …! ಆರು ಜನರ ಬಂಧನ- ಎಸ್ಪಿ

ಸುದ್ದಿ ತಿಳಿದ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚಾಲಾಕಿ ಕಳ್ಳರ ಕರಾಮತ್ತು; ಹಿಂಬಾಗಿಲು ಮೂಲಕ ಕಳ್ಳತನ, ಲಕ್ಷಾಂತರ ರೂ. ಮೌಲ್ಯದ ಚಿನ್ನದ ಆಭರಣಗಳು ಲೂಟಿ….!

ಗದಗನಲ್ಲಿ ಮತ್ತೊಂದು ಭಾರಿ ಮನೆಕಳ್ಳತನ ಪ್ರಕರಣ ಬೆಳಕಿಗೆ…..

ವಿಜಯಸಾಕ್ಷಿ ಸುದ್ದಿ, ಗದಗ

ಹಿಂಬಾಗಿಲಿನ ಬೀಗ ತೆಗೆದು ಒಳಹೊಕ್ಕು ಕಳ್ಳರು, ಬೆಡ್ ರೂಮ್ ನಲ್ಲಿದ್ದ ವಾರ್ಡ್ರೋಬ್ ಡ್ರಾದಲ್ಲಿ ಇಟ್ಟಿದ್ದ ಟ್ರಝರಿಯ ಕೀ ತೆಗೆದುಕೊಂಡು ಕಬ್ಬಿಣದ ಟ್ರಝರಿಯ ಬಾಗಿಲು ತಗೆದು 12 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.

ಇಲ್ಲಿನ ಕೇಶವ ನಗರದ ಮೂರನೇ ಕ್ರಾಸ್ ನಲ್ಲಿ ಇರುವ ಶ್ರೀಮತಿ ಪ್ರೇಮಾ ಕೋ ಪರ್ವತಗೌಡ ಗೌಡರ ಎಂಬುವವರ ಮನೆಯೇ ಕಳ್ಳತನವಾಗಿದ್ದು, ಚಾಲಾಕಿ ಕಳ್ಳರು, ಮನೆಯ ಹಿಂಬಾಗಿಲಿನ ಮೂಲಕ ಎಂಟ್ರಿ ಹೊಡೆದು ಈ ದುಷ್ಕೃತ್ಯ ನಡೆಸಿದ್ದಾರೆ.

ಗುರುವಾರ ಮಧ್ಯರಾತ್ರಿ 2 ಗಂಟೆಯಿಂದ 6;30. ನಡುವಿನ ಅವಧಿಯಲ್ಲಿ ಈ ಕೃತ್ಯ ಎಸೆಗಿರುವ ಕಳ್ಳರು, ಹಿತ್ತಲು ಬಾಗಿಲಿಗೆ ಹಾಕಿದ ಕೀಲಿಯನ್ನು ಕಿಟಕಿಯ ಬಾಜು ಇಟ್ಟ ಕೀ ಎತ್ತಿ ಬೀಗ ತಗೆದು ಒಳಹೊಕ್ಕಿದ್ದಾರೆ.

ಬೆಡರೂಮ್ ನಲ್ಲಿನ ಟ್ರಝರಿಯ ಬಾಗಿಲು ತಗೆದು ಅದರಲ್ಲಿದ್ದ ಎರಡು ಲಕ್ಷ ರೂ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಪಾಟ್ಲಿ, ತಲಾ ಒಂದು ಲಕ್ಷ ಎಂಬತ್ತು ಸಾವಿರ ರೂ. ಮೌಲ್ಯದ ಎರಡು- 40 ಗ್ರಾಂ ತೂಕದ ಕಂಗನ್ ಹಾಗೂ ತಾಳಿ ಸರ, ತಲಾ ಒಂದು ಲಕ್ಷ. ಇಪ್ಪತ್ತು ಸಾವಿರ ರೂ. ಮೌಲ್ಯದ ಮೂವತ್ತು ಗ್ರಾಂ ತೂಕದ ಎರಡು ತಾಳಿ ಸರ, ಎಂಬತ್ತು ಸಾವಿರ ರೂ. ಮೌಲ್ಯದ ಇಪ್ಪತ್ತು ಗ್ರಾಂ ತೂಕದ ಎರಡು ಬಂಗಾರದ ನೆಕ್ಲೆಸ್, ಮತ್ತೊಂದು ಒಂದು ಲಕ್ಷ, ಇಪ್ಪತ್ತು ಸಾವಿರ ರೂ. ಮೌಲ್ಯದ ಮೂವತ್ತು ಗ್ರಾಂ ತೂಕದ ನೆಕ್ಲೆಸ್, ನಲವತ್ತು ಸಾವಿರ ರೂ. ಮೌಲ್ಯದ ಹತ್ತು ಗ್ರಾಂ ತೂಕದ ಬಂಗಾರದ ಹವಳದ ಸರ, ಎಂಬತ್ತು ಸಾವಿರ ರೂ. ಮೌಲ್ಯದ ಇಪ್ಪತ್ತು ಗ್ರಾಂ ತೂಕದ ಬಂಗಾರದ ಏಳು ಜೊತೆ ಕಿವಿಯ ರಿಂಗ್, ಇಪ್ಪತ್ತು ಸಾವಿರ ರೂ. ಮೌಲ್ಯದ ಐದು ಗ್ರಾಂ ತೂಕದ ಬಂಗಾರದ ಉಂಗುರಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

ಒಟ್ಟು 12 ಲಕ್ಷ, 60 ಸಾವಿರ ರೂ.ಗಳ ಮೌಲ್ಯದ 305 ಗ್ರಾಂ ತೂಕದ ಬಂಗಾರದ ಆಭರಣಗಳು ಕಳ್ಳತನವಾಗಿವೆ ಎಂದು ಶ್ರೀಮತಿ ಪ್ರೇಮಾ ಕೋ ಪರ್ವತಗೌಡ ಗೌಡರ ಎಂಬುವರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ 0108/2023-IPC1860( U/s-457, 380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!