Home Blog Page 3244

ನೀರುಪಾಲಾದ ಬಾಲಕರ ಕುಟುಂಬಗಳಿಗೆ ಎರಡು ಲಕ್ಷ ರೂ. ಪರಿಹಾರ

0

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಣಾಮ…

ವಿಜಯಸಾಕ್ಷಿ ಸುದ್ದಿ, ಗದಗ

ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಮಂಗಳವಾರದಂದು ನಡೆದಿತ್ತು.

ರಹಮತ್ ನಗರದ 12 ವರ್ಷದ ಮಹಮ್ಮದ್ ಅಮನ್ ಹಾಗೂ 14 ವರ್ಷದ ಸಂತೋಷ‌ ಕುಂಬಾರ ಎಂಬ ಬಾಲಕರಿಬ್ಬರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರ ವಿನಂತಿಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ಬಾಲಕರ ಕುಟುಂಬಕ್ಕೆ ಮುಖ್ಯಮಂತ್ರಿಗಳ‌ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಮಂಜೂರು‌ ಮಾಡಲಾಗಿದೆ.

ಇದನ್ನೂ ಓದಿ ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಂಗಳವಾರದಂದು‌ ಮೃತ ಬಾಲಕರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು.

ದ್ವಿಚಕ್ರ ವಾಹನ- ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ರೋಣ

ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ರೋಣ ತಾಲೂಕಿನ ಅಬ್ಬಿಗೇರಿ ರಸ್ತೆಯ ಸಾರಿಗೆ ಸಂಸ್ಥೆಯ ಬಸ್ ಡಿಪೋ ಬಳಿ ನಡೆದ ಅಪಘಾತದಲ್ಲಿ ಮುಂಡರಗಿ ತಾಲೂಕಿನ ಪೇಠಾಲೂರು ಗ್ರಾಮದ ವಸಂತ ಮಲ್ಲಪ್ಪ ಗುಡಿಸಾಗರ (30) ಎಂಬಾತ ಮೃತಪಟ್ಟಿದ್ದಾನೆ.

ಇದನ್ನೂ ಓದಿ ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ವಸಂತ ರೋಣ ತಾಲೂಕಿನ ಇಟಗಿ ಭೀಮಾಂಬಿಕಾ ದೇವಸ್ಥಾನಕ್ಕೆ ಹೋಗಿ ದರ್ಶನ ‌ಮುಗಿಸಿಕೊಂಡು ವಾಪಾಸು ತನ್ನೂರಿಗೆ ಹೊರಟಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೃತ ವಸಂತನ ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು 0144/2023, 279, 304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾತ್ರಿಯಿಡಿ ಕಾರ್ಯಾಚರಣೆ; ನೀರುಪಾಲಾಗಿದ್ದ ಇಬ್ಬರು ಬಾಲಕರು ಶವವಾಗಿ ಪತ್ತೆ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ರಹಮತ್ ನಗರದಲ್ಲಿ ನಿನ್ನೆ ಜಾನುವಾರು ಮೇಯಿಸಲು ಹೋಗಿ ನೀರುಪಾಲಾಗಿದ್ದ ಇಬ್ಬರ ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಇಬ್ಬರ ಬಾಲಕರ ಶವ ಹೊರತಗೆದಿದ್ದಾರೆ. ನಿನ್ನೆ ರಾತ್ರಿ ಒಬ್ಬನ ಶವ ಪತ್ತೆಯಾದರೆ, ಇಂದು ಮುಂಜಾನೆ ಮತ್ತೊಬ್ಬ ಬಾಲಕನ ಶವ ಪತ್ತೆಯಾಗಿದೆ.

ಇದನ್ನೂ ಓದಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ಸಂತೋಷ ಕುಂಬಾರನ ಶವ ನಿನ್ನೆ ರಾತ್ರಿ ಹೊರತಗೆದಿದ್ದರು. ಇಂದು ಮುಂಜಾನೆ ಮಹಮ್ಮದ್ ಅಮನ್ ನ ಶವ ಪತ್ತೆಯಾಗಿದೆ.

ನಿನ್ನೆ ಮಧ್ಯಾಹ್ನ ಜಾನುವಾರು ಮೇಯಿಸಲು ಹೋಗಿದ್ದಾಗ ಮೂವರು ಬಾಲಕರು, ಓರ್ವ ಮಹಿಳೆ ನೀರುಪಾಲಾಗಿದ್ದರು. ಅದರಲ್ಲಿ ಓರ್ವ ಬಾಲಕನನ್ನು ಹಾಗೂ ಮಹಿಳೆಯನ್ನು ರಾಜ್ ಸಿಂಗ್ ಎಂಬುವರು ರಕ್ಷಣೆ ಮಾಡಿದ್ದರು. ಆದರೆ ಇನ್ನಿಬ್ಬರು ಬಾಲಕರು ಹೊಂಡದಲ್ಲಿ ಮುಳಗಿದ್ದರು.

ಬಾಲಕರ ಶವ ಹೊರತಗೆಯುತ್ತಿದ್ದಂತೆಯೇ ಕುಟುಂಬದವರ ಆಕ್ರಂಧನ ಮುಗಿಲ ಮುಟ್ಟಿತ್ತು. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ, ದಾವಣಗೆರೆ ಜಿಲ್ಲೆಯ ಹರಿಹರದ ಮುಳುಗು ತಜ್ಞ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದಾರೆ.

ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು; ಸ್ಥಳಕ್ಕೆ ಉಸ್ತುವಾರಿ ಸಚಿವ ಪಾಟೀಲ ಭೇಟಿ, ಸಾಂತ್ವನ

ವಿಜಯಸಾಕ್ಷಿ ಸುದ್ದಿ, ಗದಗ

ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದರೆ,‌ ಮಹಿಳೆ ಹಾಗೂ ಮತ್ತೊಬ್ಬ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಇಂದು ಮಧ್ಯಾಹ್ನ ಜರುಗಿದೆ.

ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಮಹಿಳೆ ಹಾಗೂ ಮೂವರು ಬಾಲಕರು ನೀರಿನ ಹೊಂಡದ ಬಳಿ ಹೋದಾಗ ಇಬ್ಬರು ಬಾಲಕರು ಕಾಲು ಜಾರಿ ನೀರಲ್ಲಿ ಬಿದ್ದಿದ್ದಾರೆ. ರಕ್ಷಣೆಗೆ ಹೋಗಿದ್ದ ಮಹಿಳೆ ಹಾಗೂ ಮತ್ತೊಬ್ಬ ಬಾಲಕನೂ ನೀರಲ್ಲಿ ಮುಳುಗಿದ್ದಾರೆ. ನೀರಲ್ಲಿ ಮುಳಗುತ್ತಿದ್ದವರ ಚೀರಾಟ- ಕೂಗಾಟ ಕೇಳಿದ ರಾಜ್ ಸಿಂಗ್ ಎಂಬ ವ್ಯಕ್ತಿ ಮಹಿಳೆ ಹಾಗೂ ಓರ್ವ ಬಾಲಕನನ್ನು ರಕ್ಷಣೆ ಮಾಡಿದ್ದಾನೆ. ಆದರೆ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ಮಹಮ್ಮದ್ ಅಮನ್ ಹಾಗೂ ಸಂತೋಷ ಎಂಬ ಬಾಲಕರು ನೀರುಪಾಲಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಬ್ಬ ಬಾಲಕ ಮಹಮ್ಮದ್ ಆದಿಲ್ ಹಾಗೂ ಮಹಿಳೆ ಶಾಹೀನ್ ಎಂಬುವರು ರಾಜ್ ಸಿಂಗ್ ನಿಂದ ಬಚಾವ್ ಆದವರು.

ಸುದ್ದಿ ತಿಳಿದು ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಬಿ ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲಾದ ಇಬ್ಬರ ಬಾಲಕರ ಶೋಧ ಕಾರ್ಯ ನಡೆಸಿದ್ದಾರೆ.

ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿದ್ದು, ಅಕ್ರಮ ಮಣ್ಣು ಗಣಿಗಾರಿಕೆ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ಮಾಹಿತಿ ಪಡೆದ ಅವರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಪಾರ್ಟ್‌ಟೈಮ್ ಜಾಬ್ ಆಫರ್ ನಂಬಿ 39 ಲಕ್ಷ ಹಣ ಕಳೆದುಕೊಂಡ ಇಂಜಿನಿಯರ್..!

 

ಮಿಸ್ ಆನಿಕಾ ಸೇರಿ ಐವರಿಂದ ಚೀಟಿಂಗ್

ವಿಜಯಸಾಕ್ಷಿ ಸುದ್ದಿ, ಗದಗ

ಸೈಬರ್ ಕ್ರೈಮ್ ಪೊಲೀಸರು, ಜಿಲ್ಲಾ ಪೊಲೀಸ್ ಇಲಾಖೆ ಸಾಕಷ್ಟು ಸಲ ಸೈಬರ್ ಅಪರಾಧಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದರೂ ಮತ್ತೆ ಮತ್ತೆ ಜನರು ಮೋಸ ಹೋಗುತ್ತಿರುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅನಕ್ಷರಸ್ಥ ಜನರು ಮೋಸಹೋಗಬಹುದು. ಆದರೆ ಅಕ್ಷರ ಜ್ಞಾನ ಹೊಂದಿದವರೇ ಮೋಸ ಹೋಗುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

ಈಗಿನ ಕಾಲದಲ್ಲಿ ದುಡಿದ ಹಣವೇ ಸರಿಯಾಗಿ ಸಿಗುವುದು ಕಷ್ಟ. ಹೀಗಿದ್ದರೂ ತುರ್ತಾಗಿ ಹಣ ಗಳಿಸುವ ದುರಾಸೆಗೆ ಬಿದ್ದು ಹಣ ಕಳೆದಕೊಳ್ಳವವರ ಸಂಖ್ಯೆಗೇನೂ ಕಡಿಮೆ ಇಲ್ಲ.

ಇಲ್ಲೊಂದು ಪ್ರಕರಣದಲ್ಲಿ ಮಿಸ್ ಆನಿಕಾ ಎಂಬವರು ಕಳುಹಿಸಿದ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ನಂಬಿ ಇಂಜಿನಿಯರ್ ಒಬ್ಬರು ಬರೋಬ್ಬರಿ 39 ಲಕ್ಷದ 15 ಸಾವಿರ ರೂ.ಗಳನ್ನು ಕಳೆದುಕೊಂಡು ಮೋಸಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ ಶಹರ ಪೊಲೀಸರ ಕಾರ್ಯಾಚರಣೆ; ಬೈಕ್ ಕಳ್ಳ, ಎಮ್‌ಟಿಆರ್ ಏಜೆಂಟ್‌ನ ಬಂಧನ

ಗದಗ ಶಹರದ ಹುಡ್ಕೋ ಕಾಲೋನಿಯ ಸಂದೀಪ ತಂದೆ ರಂಗನಗೌಡ ಪಾಟೀಲ ಎಂಬ ಇಂಜಿನಿಯರ್ ಆಗಸ್ಟ್ 4ರಿಂದ 8ರವರೆಗೆ ತಮಗೆ 9593989404 ಈ ನಂಬರ್‌ನಿಂದ ಮಿಸ್ ಆನಿಕಾ ಎಂಬುವರು ವಾಟ್ಸ್‌ಅಪ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಆಫರ್‌ನ ಮೆಸೇಜ್ ಕಳುಹಿಸಿದ್ದಾರೆ.

ನಂತರ ಲಿಯಾ @Lia9913, ಕಿರಣರಾವ್@KiranRao01231311 ನತಾಶಾ@NT13454 ಮತ್ತು ಕಿಶೋರ್ @Kishore55031 ಎಂಬುವರು ವಿವಿಧ ಟಾಸ್ಕ್ ಗಳನ್ನು ಕೊಟ್ಟು 20ಲಕ್ಷ, 24ಸಾವಿರದ, 800ರೂ.ಗಳನ್ನು ಅಕೌಂಟ್‌ನಲ್ಲಿ ಹಾಕಿ ಆಶೆ ಹುಟ್ಟಿಸಿದ್ದಾರೆ.

ಆ ಹಣ ವಿತ್‌ಡ್ರಾ ಮಾಡಲು ಹೋದಾಗ ಅಕೌಂಟ್ ಪ್ರೀಜ್ ಮಾಡಿ ಅನ್ಪ್ರೀಜ್ ಮಾಡಲು ಹಂತ-ಹಂತವಾಗಿ 39ಲಕ್ಷ, 15 ಸಾವಿರಗಳನ್ನು ಹಾಕಿಸಿಕೊಂಡು ಇನ್ನೂ ಐದು ಲಕ್ಷ ಹಾಕಬೇಕು ಎಂದು ಮೆಸೇಜ್ ಕಳುಹಿಸಿ ಮೋಸ ಮಾಡಿದ್ದಾರೆ.

ಈ ಕುರಿತು ಇಂಜಿನಿಯರ್ ಸಂದೀಪ್ ತಂದೆ ರಂಗನಗೌಡ ಪಾಟೀಲ ಸಿಇಎನ್ ಠಾಣೆಗೆ ದೂರು ನೀಡಿದ್ದು, 0061/2023 INFORMATION TECHNOLOGY ACT ೨೦೦೮(U/s-66(D))ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಹರ ಪೊಲೀಸರ ಕಾರ್ಯಾಚರಣೆ; ಬೈಕ್ ಕಳ್ಳ, ಎಮ್‌ಟಿಆರ್ ಏಜೆಂಟ್‌ನ ಬಂಧನ

ಎರಡು ಬೈಕ್ ಜಪ್ತಿ….

ವಿಜಯಸಾಕ್ಷಿ ಸುದ್ದಿ, ಗದಗ

ಮನೆ ಮುಂದೆ ನಿಲ್ಲಿಸಿದ್ದ ಡಿಯೋ ಕಂಪನಿಯ ಸ್ಕೂಟಿ ಹಾಗೂ ಬೈಕ್ ಕದ್ದ ಆರೋಪದಲ್ಲಿ ಎಮ್‌ಟಿಆರ್ ಮಸಾಲಾ ಪದಾರ್ಥಗಳ ಏಜೆನ್ಸಿ ಹೊಂದಿದ ಆರೋಪಿಯೊಬ್ಬನನ್ನು ಶಹರ ಪೊಲೀಸರ ತಂಡ ಬಂಧಿಸಿದೆ. ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಂಧಿತನನ್ನು ಎಸ್.ಎಮ್ ಕೃಷ್ಣ ನಗರದ ಗಣೇಶ ತಂದೆ ಕಾಶಪ್ಪ ಹೊಂಬಳ ಎಂದು ಹೇಳಿದ್ದಾರೆ.

ಇದನ್ನೂ ಓದಿ ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

ಬಂಧಿತನಿಂದ ಕಳಸಾಪೂರ ರಸ್ತೆಯ ಇಂಡೋರ್ ಸ್ಟೇಡಿಯಂ ಬಳಿ ಕದ್ದಿದ್ದ ಡಿಯೋ ಸ್ಕೂಟಿ ಹಾಗೂ ಕೊಪ್ಪಳ ಶಹರದಲ್ಲಿ ಕಳ್ಳತನವಾಗಿದ್ದ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಎಸ್ಪಿ ಬಿ. ಎಸ್ . ನೇಮಗೌಡ, ಡಿವೈಎಸ್ಪಿ ಮಡಿವಾಳಪ್ಪ ಸಂಕದ ಅವರ ಮಾರ್ಗದರ್ಶನದಲ್ಲಿ ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ, ಪಿಎಸ್‌ಐ ಜಿ.ಟಿ ಜಕ್ಕಲಿ, ಎಎಸ್‌ಐ ವಾಯ್. ಬಿ ಪಾಟೀಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಎಸ್ ಮಾವಿನಕಾಯಿ, ಯು.ಎಫ್ ಸುಣಗಾರ, ಕೆ.ಡಿ ಜಮಾದಾರ, ಪಿ.ಬಿ ಮೂಲಿಮನಿ, ಪ್ರವೀಣ ಕಲ್ಲೂರ, ಪಿ.ಎ. ಭರಮಗೌಡರ್ ಹಾಗೂ ವೀರಪ್ಪ ಗೌಡನಾಯ್ಕರ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಕಾರ್ಯಾಚರಣೆಗೆ ಎಸ್ಪಿ ಬಿ.ಎಸ್ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ‌‌ ಬಿಸಿಯೂಟದ ಅಕ್ಕಿ, ತೊಗರಿಬೆಳೆ ಕದ್ದೋಯ್ದ ಖದೀಮರು…

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಬಿಸಿಯೂಟದ ಸಾಮಗ್ರಿಗಳಿಗೆ ಕನ್ನ್ ಹಾಕಿದ ಖದೀಮರು, ಸಾವಿರಾರು ರೂ. ಮೌಲ್ಯದ ಅಕ್ಕಿ ಹಾಗೂ ತೊಗರಿಬೆಳೆ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಶ್ರೀಮತಿ ಎನ್ ವಿ ಅಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಅಡುಗೆ ಕೋಣೆಯ ಕೀಲಿ ಮುರಿದು ಒಳಗೆ ಇದ್ದ 4900 ರೂಪಾಯಿ ಮೌಲ್ಯದ 50 ಕೇಜಿ ತೊಗರಿಬೆಳೆ, 1700ರೂಪಾಯಿ ಮೌಲ್ಯದ ಅಕ್ಕಿ ಹಾಗೂ 7170 ರೂಪಾಯಿ ಮೌಲ್ಯದ ಗ್ಯಾಸ್‌ ತುಂಬಿಸ ಸಿಲಿಂಡರ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಆಗಸ್ಟ್ 3 ರಿಂದ ಆಗಸ್ಟ್ 4ರ ಬೆಳಗಿನ 6.30 ರ ನಡುವಿನ ಅವಧಿಯಲ್ಲಿ ನಡೆದಿದ್ದು, ಶಾಲೆಯ ಹಿರಿಯ ಶಿಕ್ಷಕಿಯಾಗಿರುವ ಶ್ರೀದೇವಿ ರಾಚಯ್ಯ ಹಿರೇಮಠ ಅವರು ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು 0154/2023 IPC 1860(U/u-454,457,380 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಶಹರ ಪೊಲೀಸರ ಕಾರ್ಯಾಚರಣೆ; ಎಸ್.ಎಮ್ ಕೃಷ್ಣ ನಗರದ ಉಸ್ತಾದ್ ಬಂಧನ

ಎರಡು ಪ್ರಕರಣ ಬೇಧಿಸಿದ ಶಹರ ಪೊಲೀಸರು- ಎಸ್ಪಿ ಪ್ರಶಂಸೆ…..

ವಿಜಯಸಾಕ್ಷಿ ಸುದ್ದಿ, ಗದಗ

ಎರಡು ಕಳ್ಳತನ ಪ್ರಕರಣವನ್ನು ಭೇದಿಸಿರುವ ಗದಗ ಶಹರ ಪೊಲೀಸರು, ಎಸ್.ಎಮ್ ಕೃಷ್ಣ ನಗರದ ಯುವಕನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಎಸ್.ಎಮ್. ಕೃಷ್ಣ ನಗರದ ನಿವಾಸಿ, ಗೌಂಡಿ ಕೆಲಸ ಮಾಡುತ್ತಿದ್ದ ಅಲ್ತಾಫ್ ತಂದೆ ಅಬ್ದುಲ್ ಹಮೀದ್ ಉಸ್ತಾದ್ (25) ಎಂದು ಗುರುತಿಸಲಾಗಿದೆ. ಬಂಧಿತನಿಂದ ನಗದು 1ಲಕ್ಷ 90 ಸಾವಿರ ರೂಪಾಯಿ, ನಾಲ್ಕು ಜಿಮ್ ಪ್ಲೇಟ್ ಹಾಗೂ ಎರಡು ಡಂಬೆಲ್ಸ್ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿ ಅಲ್ತಾಫ್, ಸ್ಟೇಷನ್ ರಸ್ತೆಯ ಎಸ್ ಬಿಐ ಬ್ಯಾಂಕ್ ಬಳಿ ನಿಲ್ಲಿಸಿದ್ದ ಸ್ಕೂಟಿ ಒಂದರಲ್ಲಿದ್ದ 2ಲಕ್ಷ 40 ಸಾವಿರ ರೂಪಾಯಿಗಳನ್ನು 20-06-2023 ರಂದು ಕಳ್ಳತನ ಮಾಡಿದ್ದ. ಈ ಕುರಿತು ವ್ಯಾಪಾರಿ ವಾಲ್ಮೀಕಿ ಭವನದ ಹತ್ತಿರದ ಭಾಪಣಾ ಲೇಔಟ್ ನಿವಾಸಿ ಸೈಯದ್ ರಶೀದ್ ಅಬ್ದುಲ್ ಗಣಿ ಮಕಾನದಾರ ಎಂಬವರು ಶಹರ ಠಾಣೆಯಲ್ಲಿ ದೂರು ನೀಡಿದ್ದರು.

ಮತ್ತೊಂದು ಪ್ರಕರಣದಲ್ಲಿ ಹೊಂಬಳ ರಸ್ತೆಯಲ್ಲಿ ಇರುವ ಮುಕ್ತಿದಾಮದ ಕಾರ್ಯಾಲಯದ ಬೀಗ ಮುರಿದು 30 ಸಾವಿರ ರೂ. ಮೌಲ್ಯದ 4 ಜಿಮ್ ಡೆಂಬಲ್ಸ್ ಹಾಗೂ ಜಿಮ್ ವೇಟ್ ಪ್ಲೇಟ್ಸ್, ಟ್ರಝರಿ ಮೀಟಿ ಅದರಲ್ಲಿದ್ದ 75ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದ. ಈ ಕುರಿತು ಕಾರ್ಮಿಕ ನೀಲಕಂಠ ತಂದೆ ನಾಗಪ್ಪ ಕಾಳೆ ಎಂಬುವರು ಶಹರ ಠಾಣೆಗೆ ದೂರು ನೀಡಿದ್ದರು.

ಎರಡೂ ಪ್ರಕರಣಗಳನ್ನು ಭೇದಿಸಲು ಎಸ್ಪಿ ಬಿ. ಎಸ್ . ನೇಮಗೌಡ, ಡಿವೈಎಸ್ಪಿ ಮಡಿವಾಳಪ್ಪ ಸಂಕದ ಅವರ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರದೀಪ್ ಎಸ್ ನೇತೃತ್ವದಲ್ಲಿ ಶಹರ ಠಾಣೆಯ ಪಿಎಸ್ಐ ಜಿ.ಟಿ ಜಕ್ಕಲಿ ಹಾಗೂ ಸಿಬ್ಬಂದಿಗಳಾದ ಎಸ್.ಎಸ್ ಮಾವಿನಕಾಯಿ, ಯು.ಎಫ್ ಸುಣಗಾರ, ಕೆ.ಡಿ ಜಮಾದಾರ, ಅಂದಪ್ಪ ಹಣಜಗಿ, ಪ್ರವೀಣ ಕಲ್ಲೂರ, ಪಿ.ಎ. ಭರಮಗೌಡರ್ ಹಾಗೂ ವೀರಪ್ಪ ಗೌಡನಾಯ್ಕರ್ ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಈ ಎರಡೂ ಪ್ರಕರಣ ಭೇದಿಸಿದ ತಂಡಕ್ಕೆ ಎಸ್ಪಿ ಬಾಬಾಸಾಬ ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಟಕಾ‌ ಜೂಜಾಟ; ಪೇಂಟ್ ವ್ಯಾಪಾರಿಯ ಬಂಧನ

ಮತ್ತೊಬ್ಬ ಮಟಕಾ ಬುಕ್ಕಿಯ ಮೇಲೆ ಕೇಸ್….

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಸಾರ್ವಜನಿಕರಿಂದ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವುದಾಗಿ ಅವರಿಂದ ಹಣ ಪಡೆದು ಅಂಕಿ ಸಂಖ್ಯೆಗಳ ಆಧಾರದ ಮೇಲೆ ಓ.ಸಿ ಜೂಜಾಟ ಆಡಿಸುತ್ತಿದ್ದ ಪೇಂಟ್ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಸಿಂಹಾಸನ ಪ್ಲಾಟ್ ನಿವಾಸಿ ಪೇಂಟ್ ಅಂಗಡಿ ವ್ಯಾಪಾರಿಯಾಗಿರುವ ಕಿಶೋರ್ ತಂದೆ ಗಜಾನನಸಾ ಬದಿ ಬಂಧಿತ ಆರೋಪಿಯಾಗಿದ್ದು, ಈಶ್ವರ ದೇವಸ್ಥಾನದ ಬಳಿ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಸೋಮನಗೌಡ ಗೌಡ್ರ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಕಿಶೋರ್ ನಿಂದ ಓ.ಸಿ ಪಟ್ಟಿ ಪಡೆದುಕೊಳ್ಳುವ ಬುಕ್ಕಿ ಅನಿಲ ಧರ್ಮೇಂದ್ರಸಾ ಜರತಾರಿ ಎಂಬುವರು ಮೇಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಈ ಸಂದರ್ಭದಲ್ಲಿ ನಗದು 850 ರೂಪಾಯಿ ಹಾಗೂ ಓ.ಸಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.

ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ 0132/2023-karnataka police act,1963(U/s-78(3)) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೊಂದು ದಿನ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುತ್ತೆ; ಬಿಜೆಪಿ ಶಾಸಕರ ಹೇಳಿಕೆ ವೈರಲ್

ವಿಜಯಸಾಕ್ಷಿ ಸುದ್ದಿ, ಗದಗ

ಮುಂದೊಂದು ದಿನ ಉತ್ತರ ಕರ್ನಾಟಕ ಬೇರೆ ಆಗೇ ಆಗುತ್ತೆ….ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ತುಂಬಾ ನೆಗ್ಲೆಟ್ ಆಗಿದೆ. ಹೀಗೆ ಹೇಳಿದವರು ಶಿರಹಟ್ಟಿಯ ಬಿಜೆಪಿ ಶಾಸಕರಾದ ಡಾ.ಚಂದ್ರು ಲಮಾಣಿ.

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸರಕಾರಿ ಕಾಲೇಜಿನಲ್ಲಿ ನಡೆದ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದು, ಆ ವಿಡಿಯೋ ಇದೀಗ ವೈರಲ್ ಆಗಿದೆ.

ದಿ. ಉಮೇಶ್ ಕತ್ತಿ ಅವರ ನಂತರ ಮತ್ತೊಬ್ಬ ಶಾಸಕರು ಈ ರೀತಿ ಬಹಿರಂಗ ಹೇಳಿಕೆ ನೀಡಿದ್ದಾರೆ.

ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಬಹಳ ನೆಗ್ಲೆಟ್ ಆಗಿದೆ. ಉತ್ತರ ಕರ್ನಾಟಕದಿಂದ ಹೆಚ್ಚು ಶಾಸಕರು ಆಯ್ಕೆಯಾಗಿದ್ದಾರೆ. ಆದರೂ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ತಮ್ಮ ಡಾ. ಚಂದ್ರು ಲಮಾಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೀಗ ಶಾಸಕರ ಹೇಳಿಕೆ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

error: Content is protected !!